Video: ಮದುವೆ ಒಂದು ವಾರವಿರುವಾಗ ಪ್ರೇಮಿಯೊಂದಿಗೆ ಓಡಿ ಹೋಗಲು ಯುವತಿ ಯತ್ನ, ಹಿಗ್ಗಾಮುಗ್ಗ ಥಳಿಸಿದ ತಂದೆ – Kannada News | Banda Incident: Man Assaulted daughter After Alleged Elopement Attempt

ಬಂದಾ, ಏಪ್ರಿಲ್ 23: ಮದುವೆ ಒಂದು ವಾರವಿರುವಾಗ ಯುವತಿ ಪ್ರೇಮಿಯೊಂದಿಗೆ ಓಡಿ ಹೋಗಲು ಯತ್ನಿಸಿರುವ ಘಟನೆ ಬಂದಾದಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಕುಟುಂಬವು ಆಕೆಯನ್ನು ಹಿಡಿದಿತ್ತು. ಆಕೆಯ ಸಹೋದರ ಹಾಗೂ ತಂದೆ ಇಬ್ಬರು ಸೇರಿ ಆಕೆಯನ್ನು ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂದಿನ ವಾರ ಮದುವೆ, ಮಗಳು ಇಂಥಾ ಕೆಲಸ ಮಾಡಿ ತನ್ನ ಮರ್ಯಾದೆ ತೆಗೆಯಲು ಹೊರಟಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ರಸ್ತೆಯಲ್ಲೇ ಥಳಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

CET ಪರೀಕ್ಷೆ: ಆಭರಣ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಶಾಕ್​​ ಕೊಟ್ಟ ಸಿಬ್ಬಂದಿ – Kannada News | Karnataka CET: Student Forced to Remove Jewellery Before Exam Amid Strict Dress Code

ಬೆಂಗಳೂರು, ಏಪ್ರಿಲ್​​ 23: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಸಿಇಟಿ ಪರೀಕ್ಷೆಯು ಇಂದಿನಿಂದ ಆರಂಭವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವತಿಯಿಂದ ಈ ಪ್ರಮುಖ ಪರೀಕ್ಷೆಯನ್ನು ಎರಡು ದಿನಗಳ ಕಾಲ ನಡೆಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಅಭ್ಯರ್ಥಿಗಳು ಯಾವುದೇ ಆಭರಣಗಳನ್ನು ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸದಂತೆ ಸೂಚನೆ ನೀಡಲಾಗಿದೆ. ಮೊಬೈಲ್ ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳಿಗೂ ಕೂಡ ಪರೀಕ್ಷಾ ಕೇಂದ್ರದೊಳಗೆ ಅನುಮತಿ ಇರುವುದಿಲ್ಲ. ಈ ನಡುವೆಯೂ ಕಿವಿಯೋಲೆ, ಬಳೆ, ಚೈನ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಂದ ಅವನ್ನು ತೆಗೆಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟ ಪ್ರಸಂಗ ಕೆಲವೆಡೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Char Dham Yatra 2026: ಬದರಿನಾಥ ಧಾಮದ ಬಾಗಿಲು ಮುಕ್ತ; ಚಾರ್‌ಧಾಮ ಯಾತ್ರೆಗೆ ಭವ್ಯ ಚಾಲನೆ! – Kannada News | Badrinath temple opens char dham yatra 2026 begins journey to earths vaikunth

ಬದರಿನಾಥ ಧಾಮದ ಬಾಗಿಲು ಮುಕ್ತImage Credit source: gemini ai

ಉತ್ತರಾಖಂಡದ ಪವಿತ್ರ ಕಣಿವೆಗಳಲ್ಲಿ ಮತ್ತೊಮ್ಮೆ ಭಕ್ತಿ ಮತ್ತು ನಂಬಿಕೆಯ ಅಲೆ ಎದ್ದಿದೆ. ವಿಶ್ವವಿಖ್ಯಾತ ಬದರಿನಾಥ ಧಾಮದ ಬಾಗಿಲುಗಳು ಅದ್ಧೂರಿಯಾಗಿ ತೆರೆಯಲ್ಪಡುವುದರೊಂದಿಗೆ, 2026ರ ಚಾರ್‌ಧಾಮ ಯಾತ್ರೆ ಈಗ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಇದಕ್ಕೂ ಮೊದಲು, ಅಕ್ಷಯ ತೃತೀಯದ ಶುಭ ದಿನದಂದು ಯಮುನೋತ್ರಿ ಮತ್ತು ಗಂಗೋತ್ರಿ ಧಾಮಗಳ ಬಾಗಿಲುಗಳನ್ನು ತೆರೆಯಲಾಗಿತ್ತು. ಏಪ್ರಿಲ್ 22 ರಂದು ಕೇದಾರನಾಥ ಧಾಮದ ಬಾಗಿಲುಗಳು ತೆರೆದಾಗ ಭಕ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ಈಗ ಬದರಿನಾಥದ ಪ್ರವೇಶದೊಂದಿಗೆ, ಲಕ್ಷಾಂತರ ಭಕ್ತರ ಆರಾಧ್ಯ ದೈವಗಳ ದರ್ಶನಕ್ಕೆ ಹಾದಿ ಸುಗಮವಾಗಿದೆ.

ಹೂವಿನ ಅಲಂಕಾರದಲ್ಲಿ ಮಿನುಗಿದ ಬದ್ರಿವಿಶಾಲ್:

ಬದರಿನಾಥ ದೇವಾಲಯದ ಬಾಗಿಲು ತೆರೆಯುವ ಸುಸಂದರ್ಭಕ್ಕಾಗಿ ಇಡೀ ಆವರಣವನ್ನು ಸುಮಾರು 25 ಕ್ವಿಂಟಾಲ್ ವೈವಿಧ್ಯಮಯ ಹೂವುಗಳಿಂದ ಕಂಗೊಳಿಸುವಂತೆ ಅಲಂಕರಿಸಲಾಗಿತ್ತು. ಚೆಂಡುಮಲ್ಲಿಗೆ ಸೇರಿದಂತೆ ದೇಶ-ವಿದೇಶಗಳ ಅಪರೂಪದ ಹೂವುಗಳ ಸುವಾಸನೆಯ ನಡುವೆ, ವೈದಿಕ ಮಂತ್ರಘೋಷಗಳೊಂದಿಗೆ ಬಾಗಿಲು ತೆರೆಯುವ ಪ್ರಕ್ರಿಯೆ ಸಂಪೂರ್ಣಗೊಂಡಿತು. ಇಂದಿನಿಂದ ಮುಂದಿನ ಆರು ತಿಂಗಳ ಕಾಲ ದೇಶ-ವಿದೇಶಗಳ ಭಕ್ತರು ವಿಷ್ಣುವಿನ ಈ ಪವಿತ್ರ ರೂಪವನ್ನು ಕಣ್ತುಂಬಿಕೊಳ್ಳಲು ಅವಕಾಶವಿರುತ್ತದೆ.

ಭೂಮಿಯ ವೈಕುಂಠ ಎಂಬ ಹೆಗ್ಗಳಿಕೆ:

ಬದರಿನಾಥ ಧಾಮವನ್ನು ‘ಭೂಮಿಯ ವೈಕುಂಠ’ ಎಂದು ಕರೆಯುವುದು ಕೇವಲ ವಾಡಿಕೆಯಲ್ಲ, ಅದು ಪುರಾಣಗಳಲ್ಲಿ ಬೇರೂರಿರುವ ದೃಢವಾದ ನಂಬಿಕೆ. ಸತ್ಯಯುಗದಲ್ಲಿ ಮಹಾವಿಷ್ಣುವು ಇಲ್ಲಿ ಕಠಿಣ ತಪಸ್ಸು ಮಾಡಿದ್ದನೆಂದು ಧರ್ಮಗ್ರಂಥಗಳು ಹೇಳುತ್ತವೆ. “ಆಕಾಶ, ಭೂಮಿ ಅಥವಾ ಪಾತಾಳ ಲೋಕದಲ್ಲಿ ಎಲ್ಲಿ ಹುಡುಕಿದರೂ ಬದರಿನಾಥಕ್ಕೆ ಸಮನಾದ ತೀರ್ಥಕ್ಷೇತ್ರ ಮತ್ತೊಂದಿಲ್ಲ ಮತ್ತು ಮುಂದೆಯೂ ಇರುವುದಿಲ್ಲ” ಎಂಬುದು ಭಕ್ತರ ಅಚಲ ವಿಶ್ವಾಸ. ಈ ಪುಣ್ಯಕ್ಷೇತ್ರದ ದರ್ಶನದಿಂದ ಮನುಷ್ಯನು ಜನನ-ಮರಣದ ಚಕ್ರದಿಂದ ಮುಕ್ತನಾಗಿ ಮೋಕ್ಷ ಪಡೆಯುತ್ತಾನೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಹೆಸರಿನ ಹಿಂದಿನ ರೋಚಕ ಇತಿಹಾಸ:

ಬದರಿನಾಥ ಎಂಬ ಹೆಸರು ಬರಲು ಒಂದು ಸುಂದರ ದಂತಕಥೆಯಿದೆ. ಭಗವಾನ್ ವಿಷ್ಣುವು ಇಲ್ಲಿ ತಪಸ್ಸು ಮಾಡುತ್ತಿದ್ದಾಗ, ಅವನನ್ನು ಕಡುಬಿಸಿಲು ಮತ್ತು ಮಳೆಯಿಂದ ರಕ್ಷಿಸಲು ಲಕ್ಷ್ಮಿ ದೇವಿಯು ‘ಬದರಿ’ (ಬೋರೆ ಹಣ್ಣಿನ) ಮರದ ರೂಪವನ್ನು ಧರಿಸಿ ನೆರಳನ್ನು ನೀಡಿದಳು. ದೇವಿಯ ಈ ನಿಸ್ವಾರ್ಥ ಭಕ್ತಿ ಮತ್ತು ಪ್ರೇಮಕ್ಕೆ ಮೆಚ್ಚಿದ ವಿಷ್ಣುವು, ಈ ಸ್ಥಳವನ್ನು ‘ಬದರಿನಾಥ’ ಎಂದು ಕರೆದನು. ಅಂದಿನಿಂದ ಈ ಕ್ಷೇತ್ರವು ಲಕ್ಷ್ಮಿ-ನಾರಾಯಣರ ದಿವ್ಯ ಸಾನ್ನಿಧ್ಯವಾಗಿ ಪ್ರಸಿದ್ಧಿಯಾಗಿದೆ.

ಆಧ್ಯಾತ್ಮಿಕ ಮಹತ್ವ ಮತ್ತು ಪರಂಪರೆ:

ಅಲಕನಂದಾ ನದಿಯ ತೀರದಲ್ಲಿ, ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ ಬದರಿನಾಥವು 108 ವೈಷ್ಣವ ದಿವ್ಯ ದೇವಾಲಯಗಳಲ್ಲಿ ಒಂದಾಗಿದೆ. ಆದಿ ಶಂಕರಾಚಾರ್ಯರು ಈ ಧಾಮವನ್ನು ಪುನರುಜ್ಜೀವನಗೊಳಿಸಿ, ಇದನ್ನು ಪ್ರಮುಖ ಯಾತ್ರಾ ಕೇಂದ್ರವಾಗಿ ಸ್ಥಾಪಿಸಿದರು. ಇಲ್ಲಿನ ಆಧ್ಯಾತ್ಮಿಕ ಶಾಂತಿ ಮತ್ತು ಪ್ರಾಕೃತಿಕ ಸೌಂದರ್ಯವು ಪ್ರತಿಯೊಬ್ಬ ಯಾತ್ರಿಕನಿಗೂ ಅನನ್ಯ ಅನುಭವವನ್ನು ನೀಡುತ್ತದೆ. ಚಾರ್‌ಧಾಮಗಳಲ್ಲಿ ಅತ್ಯಂತ ಪ್ರಮುಖವೆಂದು ಪರಿಗಣಿಸಲಾದ ಈ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಪಾಪಗಳು ಪರಿಹಾರವಾಗಿ ಬದುಕು ಪಾವನವಾಗುತ್ತದೆ ಎಂಬುದು ಹಿಂದೂ ಧರ್ಮದ ನಂಬಿಕೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLCಯಲ್ಲಿ 623 ಅಂಕ ಪಡೆದ ಕೃತಿಗೆ ಇಸ್ರೋದಲ್ಲಿ ಕೆಲಸ ಮಾಡುವ ಆಸೆ – Kannada News | Shivamoggas Kruthi Achieves 623 Marks in SSLC, Aims to Be an ISRO Scientist

ಶಿವಮೊಗ್ಗ, ಏ.23:  ಕೃತಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಗಳಿಸುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಶಿವಮೊಗ್ಗದ ಪ್ರಿಯದರ್ಶಿನಿ ಶಾಲೆ ವಿದ್ಯಾರ್ಥಿನಿಯಾದ ಕೃತಿ ತನ್ನ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾಳೆ. ಆಕೆಯ ಮುಂದಿನ ಹೆಜ್ಜೆಗಳು ಮತ್ತು ಭವಿಷ್ಯದ ಕನಸುಗಳ ಕುರಿತು ಮಾತನಾಡಿದ್ದಾಳೆ. ಕೃತಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಜೆಇಇ ಪರೀಕ್ಷೆ ಬರೆದು ಇಂಜಿನಿಯರಿಂಗ್ ಸೇರಲು ಆಸಕ್ತಿ ಹೊಂದಿದ್ದಾಳೆ. ಇಂಜಿನಿಯರಿಂಗ್ ಶಿಕ್ಷಣದ ನಂತರ ಖಗೋಳ ವಿಜ್ಞಾನ (Astronomy) ಕ್ಷೇತ್ರದಲ್ಲಿ ಮುಂದುವರಿಯುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾಳೆ. ಬೆಂಗಳೂರಿನಲ್ಲಿರುವ ಇಸ್ರೊ ಕೇಂದ್ರದಲ್ಲಿ ಕೆಲಸ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವ ಗುರಿ ಆಕೆಯದಾಗಿದೆ. ಒಬ್ಬ ಸೈಂಟಿಸ್ಟ್ ಆಗಿ ಸಂಶೋಧನೆ ಅಥವಾ ಆಸ್ಟ್ರೋನಾಟ್ ಆಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಕನಸು ಕೃತಿಗಿದೆ. ಹಿಂದಿ ಭಾಷೆಯ ಅಂಕಗಳ ಕುರಿತ ಗೊಂದಲ ನಿವಾರಣೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾಳೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka SSLC Result 2026 Live: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ನೇರಪ್ರಸಾರ ಇಲ್ಲಿದೆ – Kannada News | Karnataka SSLC Result 2026 Declared; Minister Madhu Bangarappa Press Meet Live Streaming Online

ಬೆಂಗಳೂರು, ಏ.23: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಗೊಂಡಿದೆ. ಈ ಬಾರಿಯ ಮೌಲ್ಯಮಾಪನ ಪ್ರಕ್ರಿಯೆಯ ನಂತರ ಹೊರಬರುತ್ತಿರುವ ಮಾಹಿತಿ ಅನ್ವಯ, ರಾಜ್ಯದಲ್ಲಿ ದಾಖಲೆ ಮಟ್ಟದ ಫಲಿತಾಂಶ ಬರುವ ಸಾಧ್ಯತೆ ದಟ್ಟವಾಗಿದೆ. ಈ ವರ್ಷದ ಒಟ್ಟಾರೆ ತೇರ್ಗಡೆ ಪ್ರಮಾಣ (Pass Percentage) ಶೇ. 85ಕ್ಕಿಂತ ಹೆಚ್ಚು ಇರಲಿದೆ. ಇದು ಕಳೆದ ಕೆಲವು ವರ್ಷಗಳ ಫಲಿತಾಂಶಕ್ಕೆ ಹೋಲಿಸಿದರೆ ಅತ್ಯುತ್ತಮ ಎನ್ನಲಾಗಿದೆ. ಇದೀಗ ಈ ಬಗ್ಗೆ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಈ ಬಗ್ಗೆ ಲೈವ್​ ವಿಡಿಯೋ ಇಲ್ಲಿದೆ ನೋಡಿ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಉದ್ಯಮಿ ಜತೆ ಡೇಟಿಂಗ್, ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಆರೋಪ: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ದೂರು – Kannada News | Bengaluru Influencer Sadhana Shetty Accused of Blackmailing Businessmen for Rs 1.5 Crore; Case Filed Jayanagr

ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ದೂರುImage Credit source: tv9

ಬೆಂಗಳೂರು, ಏಪ್ರಿಲ್ 23: ವ್ಯವಹಾರದ ಪ್ರಚಾರಕ್ಕಾಗಿ ಸೋಷಿಯಲ್ ಮೀಡಿಯಾ ಸ್ಟಾರ್ ಮೊರೆ ಹೋದ ಉದ್ಯಮಿಯೊಬ್ಬರು ಈಗ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುವಂತಾಗಿದೆ. ‘ಹೆಚ್‌ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕ ಕಾರ್ತಿಕ್ ಎಂಬುವವರಿಗೆ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ಎಂಬಾಕೆ ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಮೋಷನ್ ಹೆಸರಲ್ಲಿ ಶುರುವಾಗಿತ್ತು ಸ್ನೇಹ

ಕ್ಲಿನಿಕ್ ಪ್ರಚಾರದ ವಿಚಾರವಾಗಿ ಕಾರ್ತಿಕ್ ಅವರಿಗೆ ಸಾಧನಾ ಶೆಟ್ಟಿ ಪರಿಚಯವಾಗಿದ್ದರು. ಪ್ರಮೋಷನ್ ನೆಪದಲ್ಲಿ ಬೆಳೆದ ಸ್ನೇಹ ನಂತರ ಡೇಟಿಂಗ್ ಮಾಡುವ ಮಟ್ಟಕ್ಕೆ ಹೋಗಿತ್ತು. ಆರೋಪದ ಪ್ರಕಾರ, ಇಬ್ಬರೂ ಜೊತೆಗಿದ್ದಾಗ ಸಾಧನಾ ಶೆಟ್ಟಿ ಅವರು ಕಾರ್ತಿಕ್ ಅವರ ಕೆಲವು ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರಿಸಿಕೊಂಡಿದ್ದರು ಎನ್ನಲಾಗಿದೆ.

ಕೋಟಿ ರೂ. ಹಣಕ್ಕೆ ಬೇಡಿಕೆ

ಈ ವಿಡಿಯೋಗಳನ್ನು ಇಟ್ಟುಕೊಂಡೇ ಸಾಧನಾ ಶೆಟ್ಟಿ ಬ್ಲ್ಯಾಕ್‌ಮೇಲ್ ತಂತ್ರ ಆರಂಭಿಸಿದ್ದರು. ಆರಂಭದಲ್ಲಿ ಬೆದರಿಕೆ ಹಾಕಿ 5 ಲಕ್ಷ ರೂಪಾಯಿ ಆನ್‌ಲೈನ್ ಮೂಲಕ ಹಾಗೂ 5 ಲಕ್ಷ ರೂಪಾಯಿ ನಗದನ್ನು ಪಡೆದಿದ್ದರು. ಅಷ್ಟೇ ಅಲ್ಲದೆ, 30 ಸಾವಿರ ಮೌಲ್ಯದ ಚಿನ್ನದ ಉಂಗುರ, 70 ಸಾವಿರದ ಚಿನ್ನದ ಚೈನ್ ಹಾಗೂ 1.5 ಲಕ್ಷ ರೂಪಾಯಿ ಬೆಲೆಯ ಐಫೋನ್ ಕೂಡ ಕೊಡಿಸಿಕೊಂಡಿದ್ದರು. ಇಷ್ಟೆಲ್ಲಾ ಕೊಟ್ಟರೂ ದಾಹ ತೀರದ ಸಾಧನಾ ಶೆಟ್ಟಿ, ನಂತರ 1.5 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.


ಸಂಸಾರದಲ್ಲಿ ಬಿರುಗಾಳಿ

ಕಾರ್ತಿಕ್ ಹಣ ನೀಡಲು ನಿರಾಕರಿಸಿದಾಗ, ಸಾಧನಾ ಶೆಟ್ಟಿ ಆ ಖಾಸಗಿ ವಿಡಿಯೋಗಳನ್ನು ಕಾರ್ತಿಕ್ ಪತ್ನಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಇದರಿಂದ ಕಾರ್ತಿಕ್ ಅವರ ಕುಟುಂಬದಲ್ಲಿ ತೀವ್ರ ಜಗಳವಾಗಿದ್ದು, ಸಂಸಾರದ ಮೇಲೂ ಪರಿಣಾಮ ಬೀರಿತ್ತು. ಬೇರೆ ದಾರಿ ಕಾಣದೆ ಕಾರ್ತಿಕ್ ಈಗ ಜಯನಗರ ಪೊಲೀಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಮಗನ ಚಿನ್ನದ ಪದಕದ ಸಂಭ್ರಮ ನೋಡಲು ಬರುವಾಗಲೇ ಅಪಘಾತದಲ್ಲಿ ತಂದೆ ಸಾವು: ಘಟಿಕೋತ್ಸವ ದಿನವೇ ಭೀಕರ ದುರಂತ

ದೂರಿನ ಆಧಾರದ ಮೇಲೆ ಪೊಲೀಸರು ಸಾಧನಾ ಶೆಟ್ಟಿಗೆ ನೋಟಿಸ್ ನೀಡಿ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಸಾಧನಾ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ ಎನ್ನಲಾಗಿದೆ. ಆದರೆ, ತನಿಖೆ ಮುಂದುವರಿದಿದ್ದು, ಪೊಲೀಸರು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:21 pm, Thu, 23 April 26

Source link

Karnataka SSLC Result 2026: 625ಕ್ಕೆ 625 ಅಂಕ ಪಡೆದ ಟಾಪರ್ಸ್ ಯಾರು? ಇಲ್ಲಿದೆ ಮಾಹಿತಿಇಲ್ಲಿದೆ – Kannada News | Karnataka SSLC Results 2025 26: Record 94.1 percent Pass Rate, 7 Students Score out of out marks

ಪ್ರಾರ್ಥನಾ, ಪ್ರೀತಂ ಮತ್ತು ಸೌಜನ್ಯಾImage Credit source: Tv9 Kannada

ಬೆಂಗಳೂರು, ಏಪ್ರಿಲ್​​ 23: 2025-26ನೇ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಮೂಲಕ ಎಸ್​​ಎಸ್​​ಎಲ್​​ಸಿಯಲ್ಲಿ ಶೇ.94.1 ಫಲಿತಾಂಶದ ಮೂಲಕ ಕರ್ನಾಟಕ ಈ ಸಲ ಹೊಸ ದಾಖಲೆ ಬರೆದಿದೆ. ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ.85.06 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇನ್ನು ಒಂದೆರಡಲ್ಲ ಬರೋಬ್ಬರಿ 7 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ.

ಹಳ್ಳಿ ಹೈದನ ಸಾಧನೆ

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಣವೆಬಿಳಚಿ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಕಾನ್ವೆಂಟ್ ಸ್ಕೂಲ್ ವಿದ್ಯಾರ್ಥಿ ಭರತ್‌ 625ಕ್ಕೆ 625 ಅಂಕ ಪಡೆದಿದ್ದಾರೆ. ಇವರು ಬಿಲ್ಡಿಂಗ್ ಕಾಂಟ್ರ್ಯಾಕ್ಟರ್ ಆಗಿರುವ ಗಿರೀಶ್‌ರಾವ್ ಮತ್ತು ಶಿಲ್ಪಾ ದಂಪತಿಯ ಪುತ್ರ,

ವಿಜಯಪುರಕ್ಕೆ ಕೀರ್ತಿ ತಂದ ಸೌಜನ್ಯಾ

ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸ್​​ಫರ್ಡ್​ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸೌಜನ್ಯಾ ಕೂಡ 625ಕ್ಕೆ 625 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಆಡಳಿತ ಅಧಿಕಾರಿ ದರ್ಶನಗೌಡ ಪಾಟೀಲ್, ಮುಖ್ಯೋಪಾಧ್ಯಾಯ ಇಸ್ಮಾಯಿಲ್ ಮಣಿಯಾರ, ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕ ಮಂಜುನಾಥ ಮಂಕಣಿ ಹಾಗೂ ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದೆ.

ಇದನ್ನೂ ಓದಿ: ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಪರೀಕ್ಷೆ ಬರೆದಿದ್ದ ಕುಸುಮಾ ಉತ್ತಮ ಸಾಧನೆ

ಉಡುಪಿಯ ಪ್ರೀತಂಗೂ ರ್ಯಾಂಕ್​

ಕುಂದಾಪುರ ತಾಲೂಕಿನ ಶಂಕರ್ ನಾರಾಯಣದ ಮದರ್ ತೆರೇಸಾ ಮೆಮೊರೇಬಲ್ ಶಂಕರ್ ನಾರಾಯಣ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಂ ಜಿ. ಪೂಜಾರಿ ಕೂಡ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ರ್ಯಾಂಕ್​​ ಪಡೆದಿದ್ದಾರೆ.

ಸರ್ಕಾರಿ ಶಾಲೆ ವಿದ್ಯಾರ್ಥಿನಿಯ ಸಾಧನೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಶಾಲೆಯ ಪ್ರಾರ್ಥನಾ ಬಿರಾದಾರ ಕೂಡ 625ಕ್ಕೆ 625ಅಂಕ ಪಡೆದು ನಾವು ಯಾರಿಗೂ ಕಮ್ಮಿ ಇಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ. ಪ್ರಾರ್ಥನಾಳ ಈ ಸಾಧನೆಗೆ ಕುಟುಂಬ ಮತ್ತು ಶಾಲೆ ಸಂತಸ ವ್ಯಕ್ತಪಡಿಸಿವೆ.

ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರ ಧನುಷ್​ ಮತ್ತು ರಾಯಚೂರಿನ ವಿದ್ಯಾರ್ಥಿ ಸುಖದೇವ್​​ ಕೂಡ 625ಕ್ಕೆ 625 ಅಂಕ ಪಡೆಯುವ ಮೂಲಕ ಎಸ್​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್​​ ಪಡೆದು ಕುಟುಂಬ ಮತ್ತು ಶಾಲೆ ಸೇರಿದಂತೆ ಊರಿಗೆ ಕೀರ್ತಿ ತಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರೇಮ್, ಇಂಗ್ಲೀಷ್ ಮಾತು ಕೇಳಿ ನಕ್ಕ ಧ್ರುವ ಸರ್ಜಾ: ವಿಡಿಯೋ ನೋಡಿ – Kannada News | Prem speech at KD Movie trailer event: watch video

ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಧ್ರುವ ಸರ್ಜಾ, ಪ್ರೇಮ್, ಕೆವಿಎನ್ ಮಾಲೀಕ, ರಕ್ಷಿತಾ, ರೀಷ್ಮಾ, ಅರ್ಜುನ್ ಸರ್ಜಾ ಇನ್ನೂ ಹಲವರು ನಿನ್ನೆಯ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಹಲವರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಪ್ರೇಮ್ ಅವರು ಸಹ ಮಾತನಾಡಿ, ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಕೊಂಡಾಡಿದ್ದಾರೆ. ಈ ವೇಳೆ ಪ್ರೇಮ್ ಅವರು ಹೇಳಿದ ಕೆಲವು ಇಂಗ್ಲೀಷ್ ಆತುಗಳು ಕೇಳಿ ನಟ ಧ್ರುವ ಸರ್ಜಾ ನಕ್ಕಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka SSLC Result 2026: ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಪರೀಕ್ಷೆ ಬರೆದಿದ್ದ ಕುಸುಮಾ ಉತ್ತಮ ಸಾಧನೆ – Kannada News | Karnataka SSLC Result 2026: Kusuma, who came in an ambulance and wrote the exam lying on a stretcher, scored 374.

ಕೋಲಾರ, ಏ.23: ಸಂಕಷ್ಟಗಳು ಎದುರಾದಾಗ ಎದೆಗುಂದದೆ ಹೋರಾಡಿದರೆ ಯಶಸ್ಸು ಖಂಡಿತ ಎಂಬ ಮಾತನ್ನು ಕೋಲಾರ ಜಿಲ್ಲೆಯ ಕುಸುಮಾ ನಿಜವಾಗಿಸಿದ್ದಾರೆ. ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಈ ಪ್ರತಿಭಾವಂತ ವಿದ್ಯಾರ್ಥಿನಿ ಇಂದು ಪ್ರಕಟವಾದ ಫಲಿತಾಂಶದಲ್ಲಿ ಉತ್ತಮ ಫಲಿತಾಂಶದಿಂದ ತೇರ್ಗಡೆಯಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಿನ್ನನಾಗಹಳ್ಳಿ ನಿವಾಸಿಯಾಗಿರುವ ಕುಸುಮಾ, ಪರೀಕ್ಷೆಯ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ ಪರೀಕ್ಷೆ ತಪ್ಪಿಸಿಕೊಳ್ಳಬಾರದು ಎಂಬ ದೃಢ ಸಂಕಲ್ಪ ಮಾಡಿದ ಆಕೆ, ಆಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದರು. ಎದ್ದುನಿಲ್ಲಲು ಸಾಧ್ಯವಾಗದ ಸ್ಥಿತಿಯಲ್ಲೂ ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದಿದ್ದರು.

ಇಂದು ಹೊರಬಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕುಸುಮಾ 625 ಅಂಕಗಳಿಗೆ 374 ಅಂಕಗಳನ್ನು ಗಳಿಸಿದ್ದಾರೆ. ದೈಹಿಕ ಯಾತನೆಯ ನಡುವೆಯೂ ಆಕೆ ಗಳಿಸಿರುವ ಈ ಅಂಕಗಳು ಆಕೆಯ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿವೆ. ಸದ್ಯ ಕುಸುಮಾ ಬೆಂಗಳೂರಿನ ವೈಟ್ ಫೀಲ್ಡ್‌ನ ಹಾಸ್ಟರ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: SSLC District Wise Result: ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ

ಕುಸುಮಾಳ ಈ ಅಸಾಧಾರಣ ಛಲಕ್ಕೆ ಕೋಲಾರದ ಶಿಕ್ಷಣ ಇಲಾಖೆ, ಸ್ಥಳೀಯ ಶಾಸಕಿ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಿದ್ದವು. ವಿಶೇಷವಾಗಿ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಕುಸುಮಾಳ ಬೆಂಬಲಕ್ಕೆ ನಿಂತು, ಆಕೆಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:12 pm, Thu, 23 April 26

Source link

ತಮಿಳುನಾಡು ಚುನಾವಣೆಯಲ್ಲಿ ಮತ ಹಾಕಿದ ಸೆಲೆಬ್ರಿಟಿಸ್; ಇಲ್ಲಿವೆ ಫೋಟೋಸ್ – Kannada News | Kollywood Stars Vote: Ajith, Rajinikanth, Vijay and More Cast Ballots in Tamil Nadu Polls

ಕಾಲಿವುಡ್ ನಟ ಅಜಿತ್ ಅವರು ಮುಂಜಾನೆಯೇ ಬಂದು ಮತ ಹಾಕಿದ್ದಾರೆ. ಈ ಮೊದಲು ಅವರು ರೇ್ ಕಾರಣಕ್ಕೆ ವಿದೇಶಕ್ಕೆ ತೆರಳಿದ್ದರು. ಅವರು ಮತ ಹಾಕಲು ಚೆನ್ನೈಗೆ ಬಂದಿದ್ದರು ಎನ್ನಲಾಗಿದೆ.

Source link

Exit mobile version