Headlines

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗನ್ನು ವಶಪಡಿಸಿಕೊಂಡ ಇರಾನ್ – Kannada News | Iran Seizes India bound ship among 2 vessels In strait of Hormuz

ಟೆಹ್ರಾನ್, ಏಪ್ರಿಲ್ 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ ಕದನ ವಿರಾಮ ವಿಸ್ತರಣೆಯ ಹೊರತಾಗಿಯೂ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಉದ್ವಿಗ್ನತೆ ಮುಂದುವರಿದಿದೆ. ಹಾರ್ಮುಜ್ ಜಲಸಂಧಿಯಲ್ಲಿ 2 ಹಡಗುಗಳನ್ನು ವಶಪಡಿಸಿಕೊಂಡಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ. ಆ 2 ಹಡಗುಗಳಲ್ಲಿ ಒಂದು ಭಾರತದ ಗುಜರಾತ್​​ನತ್ತ ಬರುತ್ತಿತ್ತು. “ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾ ಪಡೆ ಇಂದು ಬೆಳಿಗ್ಗೆ ಹಾರ್ಮುಜ್ ಜಲಸಂಧಿಯಲ್ಲಿ ಎರಡು ಹಡಗುಗಳು ನಿಯಮ ಉಲ್ಲಂಘನೆ ಮಾಡಿದ್ದನ್ನು…

Read More

ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ, ವಿಡಿಯೋ ವೈರಲ್ – Kannada News | Bike Rider Ties Soppu on Head instead of helmet In Chamarajanagar for temperature heatwave, video Goes viral

ಚಾಮರಾಜನಗರ, (ಏಪ್ರಿಲ್ 22): ಕರ್ನಾಟಕದಲ್ಲಿ ಬೇಸಿಗೆಯ ತಾಪಮಾನ (temperature) ದಾಖಲೆ ಮಟ್ಟಕ್ಕೆ ಏರಿದ್ದು, ಹಲವು ಜಿಲ್ಲೆಗಳಲ್ಲಿ ತೀವ್ರ ಬಿಸಿಲು ಜನರ ನೆತ್ತಿ ಸುಡುತ್ತಿದೆ. ಹೀಗಾಗಿ ಚಾಮರಾಜನಗರದಲ್ಲೊಬ್ಬ (Chamarajanagar) ಬಿಸಿಲಿಗೆ ಕಂಗೆಟ್ಟು ಹೆಲ್ಮೆಟ್ ಬದಲು ತಲೆಗೆ ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಬಾಗಲಕೋಟೆ ನಗರದ ಭುವನೇಶ್ವರಿ ವೃತ್ತದ‌ ಸಿಗ್ನಲ್ ನಲ್ಲಿ ಹೆಲ್ಮೆಟ್ ಸೊಪ್ಪು ಕಟ್ಟಿಕೊಂಡು ಬಂದಿದ್ದ ಬೈಜ್ ಸವಾರನ ದೃಶ್ಯ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ. ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ…

Read More

ವಚನಾನಂದ ಸ್ವಾಮೀಜಿ, ಮಠದ ಟ್ರಸ್ಟ್​​ ನಡುವೆ ಹೊಸ ಸಂಘರ್ಷ: ಡಿಸಿ, ಎಸ್ಪಿಗೆ ದೂರು – Kannada News | Vachananda Swamiji vs Math Trust: Basava Jayanti Conflict Intensifies, Complaint to DC and SP

ವಚನಾನಂದ ಸ್ವಾಮೀಜಿ, ಮಠದ ಟ್ರಸ್ಟ್​​ ನಡುವೆ ಹೊಸ ಸಂಘರ್ಷImage Credit source: Tv9 Kannada ದಾವಣಗೆರೆ, ಏಪ್ರಿಲ್​​ 22: ಹರಿಹರ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್ ಹಾಗೂ ವಚನಾನಂದ ಸ್ವಾಮೀಜಿ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದೆ. ಉಚ್ಛಾಟನೆ ಮಾಡಲಾಗಿದ್ದರೂ ಪಂಚಮಸಾಲಿ ಪೀಠದಲ್ಲಿ ಬಸವ ಜಯಂತಿ ಆಚರಣೆಗೆ ನಿರ್ಧಾರ ಹಿನ್ನೆಲೆ ಈ ಬಗ್ಗೆ ದಾವಣಗೆರೆ ಡಿಸಿ, ಎಸ್​ಪಿಗೆ ಮಠದ ಟ್ರಸ್ಟ್​​ನಿಂದ ಲಿಖಿತ ದೂರು ನೀಡಲಾಗಿದೆ. ಏ.13ರಂದು ಮಠದಿಂದ ವಚನಾನಂದಶ್ರೀ ಉಚ್ಚಾಟನೆ ಮಾಡಲಾಗಿದೆಯಾದರೂ ಅವರು ಮಠದಲ್ಲಿಯೇ ಇದ್ದಾರೆ. ಅಲ್ಲದೇ ಏ.24ರಂದು…

Read More

ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ – Kannada News | Vijyalakshmi Darshan visits Parappana Agrahara to see Darshan second time in a week

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮತ್ತು ಕೆಲವು ಕುಟುಂಬದ ಆಪ್ತರು, ಆತ್ಮೀಯರು ಆಗಾಗ್ಗೆ ಜೈಲಿಗೆ ಹೋಗಿ ಬರುತ್ತಿರುತ್ತಾರೆ. ಇದೀಗ ಪತ್ನಿ ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ. ಇದು ಈ ವಾರದಲ್ಲಿ ಅವರ ಎರಡನೇ ಭೇಟಿ ಆಗಿದೆ. ವಿಜಯಲಕ್ಷ್ಮಿ ಅವರು ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಆಗಿ…

Read More

Health Tips: ನಕಲಿ ಪನೀರ್ ಗುರುತಿಸುವುದು ಹೇಗೆ? ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ – Kannada News | Pure vs. Fake Paneer: How to Identify Authentic Paneer for Your Health

ಪನೀರ್ ಭಾರತೀಯ ಅಡುಗೆಮನೆಯ ಅವಿಭಾಜ್ಯ ಅಂಗ. ಪಾಲಕ್ ಪನೀರ್ ಇರಲಿ ಅಥವಾ ಪನೀರ್ ಬಟರ್ ಮಸಾಲಾ ಇರಲಿ, ಹಬ್ಬದೂಟಗಳಲ್ಲಿ ಪನೀರ್ ಇಲ್ಲದಿದ್ದರೆ ಅದು ಅಪೂರ್ಣವೆನಿಸುತ್ತದೆ. ಆದರೆ ಇಂದಿನ ಮಾರುಕಟ್ಟೆಯಲ್ಲಿ ಹಾಲಿನಿಂದ ತಯಾರಿಸಿದ ಅಧಿಕೃತ ಪನೀರ್ ಜೊತೆಗೆ ತರಕಾರಿ ಎಣ್ಣೆ ಮತ್ತು ರಾಸಾಯನಿಕ ಬಳಸಿ ತಯಾರಿಸಿದ ನಕಲಿ ಪನೀರ್ ಕೂಡ ಲಭ್ಯವಿದೆ. ಇವೆರಡೂ ನೋಡಲು ಒಂದೇ ರೀತಿ ಕಂಡರೂ, ಗುಣಮಟ್ಟ ಮತ್ತು ಆರೋಗ್ಯದ ದೃಷ್ಟಿಯಿಂದ ಇವುಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಸಾಂಪ್ರದಾಯಿಕ ಪನೀರ್: ಸಾಂಪ್ರದಾಯಿಕ ಪನೀರ್ ತಯಾರಿಸುವ ವಿಧಾನ…

Read More

‘ನನಗೆ ಆ ರೀತಿ ಮೀಸೆ ಬರಲ್ಲ’: ನೇರವಾಗಿ ಒಪ್ಪಿಕೊಂಡು ಜನರ ಕ್ಷಮೆ ಕೇಳಿದ ಅಕ್ಷಯ್ ಕುಮಾರ್ – Kannada News | Akshay Kumar reacts to Samrat Prithviraj fake moustache backlash apology

ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. 2022ರಲ್ಲಿ ತೆರೆಕಂಡ, ಐತಿಹಾಸಿಕ ಕಥಾಹಂದರದ ‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಆ ಸಮಯದಲ್ಲಿ ಚಿತ್ರಕ್ಕಿಂತ ಹೆಚ್ಚಾಗಿ ಅಕ್ಷಯ್ ಕುಮಾರ್ ಧರಿಸಿದ್ದ ನಕಲಿ ಮೀಸೆ ಭಾರಿ ಟೀಕೆಗೆ ಗುರಿಯಾಗಿತ್ತು. ಈಗ ಸುಮಾರು 4 ವರ್ಷಗಳ ನಂತರ ಅಕ್ಷಯ್ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ…

Read More

ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ – Kannada News | Hubballi Horror Accident: Man’s Severed Head Found in Car Engine

ಹುಬ್ಬಳ್ಳಿ, ಏಪ್ರಿಲ್​ 22: ಭೀಕರ ರಸ್ತೆ ಅಪಘಾತದಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ರುಂಡವೇ ಬೇರ್ಪಟ್ಟ ಭಯಾನಕ ಘಟನೆ ಜಿಲ್ಲೆಯ ಕುಂದಗೋಳ ರಸ್ತೆಯ ಶೆರೆವಾಡ ಗ್ರಾಮದ ಬಳಿ ನಿನ್ನೆ ಸಂಜೆ ನಡೆದಿದೆ. ಶೆರೆವಾಡ ಗ್ರಾಮದ ನಿವಾಸಿ ಸದಾನಂದ ಕಟೇಗಾರ (32) ಮೃತ ವ್ಯಕ್ತಿ. ತಾಂತ್ರಿಕ ದೋಷದಿಂದಾಗಿ ಜೆಸಿಬಿ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿತ್ತು. ಸದಾನಂದ ಕೆಳಗೆ ಬಾಗಿ ಜೆಸಿಬಿಯನ್ನು ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ನೇರವಾಗಿ ಅವರಿಗೆ ಡಿಕ್ಕಿ ಹೊಡೆದಿದೆ….

Read More

ಜಾಗತಿಕ ಆಘಾತಗಳಿಗೆ ಭಾರತದ 3 ಆರ್ಥಿಕ ರಕ್ಷಾ ಕವಚಗಳು: ಫಿಚ್ ಬಿಎಂಐ ವಿಶ್ಲೇಷಣೆ – Kannada News | India’s Economy Resilient Amidst Geopolitical Tensions: Fitch BMI Highlights 3 Buffers

ನವದೆಹಲಿ, ಏಪ್ರಿಲ್ 22: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ (Geopolitical Tensions) ಜಾಗತಿಕ ಆರ್ಥಿಕತೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಆದರೆ, ಫಿಚ್ (Fitch) ಸಮೂಹದ ವಿಶ್ಲೇಷಣಾ ಘಟಕವಾದ ಬಿಎಂಐ (BMI) ವರದಿಯ ಪ್ರಕಾರ, ಭಾರತವು ಇಂತಹ ಆರ್ಥಿಕ ಬಿರುಗಾಳಿಯನ್ನು ಎದುರಿಸಲು ಮೂರು ಪ್ರಮುಖ ‘ಬಫರ್’ಗಳನ್ನು (ರಕ್ಷಣಾತ್ಮಕ ಅಂಶಗಳನ್ನು) ಹೊಂದಿದೆ. 1. ಅನಿಲ ಅವಲಂಬನೆಗಿಂತ ತೈಲದ ಮೇಲಿನ ನಿಯಂತ್ರಣ ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಒಂದು ದೊಡ್ಡ ಅನುಕೂಲವಿದೆ. ಪ್ರಸ್ತುತ ಸಂಘರ್ಷದಿಂದ ನೈಸರ್ಗಿಕ…

Read More

NCL Recruitment 2026: ಕೇಂದ್ರ ಸರ್ಕಾರಿ ಉದ್ಯೋಗಾವಕಾಶ; ನಾರ್ದರ್ನ್ ಕೋಲ್‌ಫೀಲ್ಡ್ಸ್ ನಲ್ಲಿ 577 ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | NCL Recruitment 2026: 577 Posts for HEMM Operator, Paramedical and Overseer! Apply Now

ಕೇಂದ್ರ ಸರ್ಕಾರಿ ಉದ್ಯೋಗಾವಕಾಶImage Credit source: gemini ai ಕೇಂದ್ರ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆಯಾದ ನಾರ್ದರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (NCL), 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯಡಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ಯಾರಾಮೆಡಿಕಲ್, ಓವರ್‌ಸೀರ್ ಮತ್ತು HEMM ಆಪರೇಟರ್ ಸೇರಿದಂತೆ ಒಟ್ಟು 577 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರಿ ವಲಯದಲ್ಲಿ ಸ್ಥಿರವಾದ ವೃತ್ತಿಜೀವನವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ…

Read More

ಮೋದಿ ಬಗ್ಗೆ ಆಕ್ಷೇಪಾರ್ಹವಾಗಿ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ – Kannada News | VP C.P. Radhakrishnan Takes a Dig at Mallikarjun Kharge Over Remarks on PM Modi

ಬೀದರ್​, ಏಪ್ರಿಲ್​​ 22: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ನಮ್ಮ ಮತ್ತು ಖರ್ಗೆ ಅವರ ದೃಷ್ಟಿಕೋನದಲ್ಲಿ ಸಣ್ಣ ಬದಲಾವಣೆ ಇದೆ ಅನಿಸುತ್ತೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಬಿಳಿ ಹಾಗೂ ಕಪ್ಪು ನಡುವಿನ ವ್ಯತ್ಯಾಸ ಇಲ್ಲ. ಅದೇ ರೀತಿ ಭಯೋತ್ಪಾದಕರು ಹಾಗೂ ಭಯೋತ್ಪಾದಕರಿಗೆ ಭಯ ಹುಟ್ಟಿಸುವವರ ಮಧ್ಯೆ ವ್ಯತ್ಯಾಸವಿಲ್ಲದಂತೆ ಕಾಣುತ್ತೆ. ಅದನ್ನು ಬಿಟ್ಟರೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ರಾಧಾಕೃಷ್ಣನ್ ಹೇಳಿದ್ದಾರೆ….

Read More