ಮುಂಬೈನಲ್ಲಿ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ತಿಂಗಳ ಬಾಡಿಗೆ ಎಷ್ಟು ಗೊತ್ತೆ? – Kannada News | Allu Arjun rented a luxurious house in Mumbai

‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್ (Allu Arjun) ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಪ್ರತಿ ಸಿನಿಮಾಕ್ಕೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟ ಆಗಿದ್ದ ಅಲ್ಲು ಅರ್ಜುನ್, ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ತೆಲುಗು ಮಾತ್ರವಲ್ಲದೆ ಬಾಲಿವುಡ್​​ನಿಂದಲೂ ಅವರಿಗೆ ಅವಕಾಶಗಳು ಬರುತ್ತಿವೆ. ಹಲವಾರು ಜಾಹೀರಾತುಗಳಲ್ಲಿ ಸಹ ನಟಿಸುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ಅಲ್ಲು ಅರ್ಜುನ್ ಅವರು ಮುಂಬೈನಲ್ಲಿ ಐಶಾರಾಮಿ ಮನೆಯೊಂದನ್ನು ಬಾಡಿಗೆ ಪಡೆದಿದ್ದಾರೆ.

ಅಲ್ಲು ಅರ್ಜುನ್ ಮುಂಬೈನ ಪ್ರತಿಷ್ಠಿತ ಏರಿಯಾನಲ್ಲಿ ಸೀ ಫೇಸ್ ಅಪಾರ್ಟ್​​ಮೆಂಟ್​​ನಲ್ಲಿ ಫ್ಲ್ಯಾಟ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಹೈ-ಎಂಡ್ ಅಪಾರ್ಟ್‌ಮೆಂಟ್‌ಗಾಗಿ ಪ್ರತಿ ತಿಂಗಳು ಬರೋಬ್ಬರಿ 16 ಲಕ್ಷ ರೂಪಾಯಿ ಬಾಡಿಗೆ ಪಾವತಿಸಲಿದ್ದಾರೆ. ಕಳೆದ ಕೆಲವು ಸಮಯದಿಂದ ಅಲ್ಲು ಅರ್ಜುನ್ ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆಗಳು ಮತ್ತು ನಿರ್ದೇಶಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಕೆಲಸಗಳಿಗಾಗಿ ಪದೇ ಪದೇ ಮುಂಬೈಗೆ ಪ್ರಯಾಣಿಸಬೇಕಿರುವುದರಿಂದ, ಹೋಟೆಲ್‌ನಲ್ಲಿ ಉಳಿಯುವ ಬದಲು ಸ್ವಂತದೊಂದು ನೆಲೆ ಇರಲಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್ ಅವರು ಹೊಸ ಉದ್ಯಮವನ್ನು ಸಹ ಪ್ರಾರಂಭ ಮಾಡಲಿದ್ದು, ಇದರಿಂದಾಗಿ ಮುಂಬೈಗೆ ಬಂದು ಹೋಗುವುದು ಹೆಚ್ಚಾಗಲಿದೆ. ಇದೇ ಕಾರಣಕ್ಕೆ ಈ ಐಶಾರಾಮಿ ಅಪಾರ್ಟ್​​ಮೆಂಟ್ ಅನ್ನು ಅವರು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ಅವರು ಮನೆ ಬಾಡಿಗೆಗೆ ಪಡೆಯುವ ಸುದ್ದಿ ಹೊರಬರುತ್ತಿದ್ದಂತೆ, ಅಲ್ಲು ಅರ್ಜುನ್, ಹೈದರಾಬಾದ್ ಬಿಟ್ಟು ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತು. ಆದರೆ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್, ಅದನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದು, ಅಲ್ಲು ಅರ್ಜುನ್ ಮತ್ತು ಕುಟುಂಬ ಮುಂಬೈನಲ್ಲೇ ನೆಲೆಸಲಿದೆ ಎಂದಿದ್ದಾರೆ.

ಇದನ್ನೂ ಓದಿ:ದೀಪಿಕಾಗಾಗಿ ಶೂಟಿಂಗ್ ಶೆಡ್ಯೂಲ್ ಬದಲಿಸಲಿರುವ ಅಲ್ಲು ಅರ್ಜುನ್, ಶಾರುಖ್ ಖಾನ್

ಅಲ್ಲು ಅರ್ಜುನ್ ಅವರು ಪ್ರಸ್ತುತ ಅಟ್ಲಿ ನಿರ್ದೇಶಿಸುತ್ತಿರುವ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಮಲಯಾಳಂ ಸ್ಟಾರ್ ನಟ ಬಾಸಿಲ್ ಜೋಸೆಫ್ ನಿರ್ದೇಶನದ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಲೋಕೇಶ್ ಕನಗರಾಜ್ ಅವರ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಇವುಗಳ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಲಿರುವ ಆಕ್ಷನ್ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಪ್ರಶಾಂತ್ ನೀಲ್ ಸಹ ಅಲ್ಲು ಅರ್ಜುನ್​​ಗಾಗಿ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೀ5 ಒಟಿಟಿಯಲ್ಲಿ ಏ.24ರಿಂದ ಪ್ರಸಾರ ಆಗಲಿದೆ ‘ಜೆರಾಕ್ಸ್’ ವೆಬ್ ಸರಣಿ; ಏನಿದರ ಕಥೆ? – Kannada News | Zee5 to air Jerox web series from April 24 ft Nagabhushana Payal Chengappa

‘ಬ್ಲಿಂಕ್‌’ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರು ‘ಜೆರಾಕ್ಸ್‌’ (Jerox) ವೆಬ್ ಸರಣಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದರಲ್ಲಿ ನಾಗಭೂಷಣ (Nagabhushana), ಪಾಯಲ್‌ ಚೆಂಗಪ್ಪ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಮಂಜು ಪಾವಗಡ, ಓಂ ಪ್ರಕಾಶ್‌ ರಾವ್‌, ಯಶವಂತ್‌ ಶೆಟ್ಟಿ, ಶ್ರೀವತ್ಸ, ವಿಜಯ್‌ ಪ್ರಸಾದ್‌, ಜಗ್ಗಪ್ಪ, ತುಕಾಲಿ ಸಂತು, ಸಿದ್ದು ಮಂಡ್ಯ, ಸುಧಾಕರ್‌ ಗೌಡ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಜೀ5 (zee5) ಒಟಿಟಿ ಮೂಲಕ ಏಪ್ರಿಲ್‌ 24ರಿಂದ ಈ ವೆಬ್‌ ಸರಣಿಯು ವೀಕ್ಷಣೆಗೆ ಲಭ್ಯವಾಗಲಿದೆ.

ಒಂದುವೇಳೆ ಜೆರಾಕ್ಸ್ ಕಾಪಿಗಳಿಗೆ ಜೀವ ಬಂದುಬಿಟ್ಟರೆ ಏನಾಗುತ್ತೆ? ಇಂಥ ಒಂದು ಕಥೆಯ ಎಳೆಯನ್ನೇ ಇಟ್ಟುಕೊಂಡು ‘ಜೆರಾಕ್ಸ್’ ವೆಬ್ ಸರಣಿ ಸಿದ್ಧವಾಗಿದೆ. ಇದರಲ್ಲಿ ಹಾಸ್ಯಭರಿತ ಕಹಾನಿ ಇದೆ. ಡಾರ್ಕ್ ಕಾಮಿಡಿ, ಥ್ರಿಲ್ಲರ್ ಮತ್ತು ಫ್ಯಾಂಟಸಿ ಅಂಶಗಳು ಇದರಲ್ಲಿ ಇವೆ. ‘ಡಾಲಿ ಪಿಕ್ಚರ್ಸ್‌’ ಮೂಲಕ ಈ ವೆಬ್ ಸಿರೀಸ್ ಮೂಡಿಬಂದಿದೆ. ಇತ್ತೀಚೆಗೆ ತಂಡದವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಕಥೆಯ ಬಗ್ಗೆ ಟ್ರೇಲರ್ ಸುಳಿವು ನೀಡಿದೆ.

‘ಜೆರಾಕ್ಸ್ ವೆಬ್ ಸಿರೀಸ್ ಟ್ರೇಲರ್:

ನಿರ್ಮಾಪಕ ಡಾಲಿ ಧನಂಜಯ್ ಮಾತನಾಡಿ, ‘ಜೆರಾಕ್ಸ್ ವೆಬ್ ಸಿರೀಸ್ ಭಾಗವಾಗಿರುವುದು ನನಗೆ ಖುಷಿ ಕೊಟ್ಟಿದೆ. ಇದರಲ್ಲಿ ಒಳ್ಳೊಳ್ಳೆ‌ಯ ಕಲಾವಿದರು ಕೆಲಸ ಮಾಡಿದ್ದಾರೆ. ಹೊಸ ಪ್ರತಿಭೆಗಳ ಜೊತೆ ಅನುಭವಿ ಪ್ರತಿಭೆಗಳು ಇದ್ದಾರೆ. ಇದರ ಬರವಣಿಗೆ ಹಾಗೂ ಎಕ್ಸಿಕ್ಯೂಷನ್ ಚೆನ್ನಾಗಿದೆ. ಬಹಳ ಖುಷಿಯಿಂದ ಇದನ್ನು ಪ್ರೆಸೆಂಟ್ ಮಾಡುತ್ತಿದ್ದೇವೆ. ಜೀ5 ಮೂಲಕ ಒಳ್ಳೊಳ್ಳೆಯ ಪ್ರತಿಭೆಗಳಿಗೆ ವೇದಿಕೆ ಸಿಗುತ್ತಿದೆ. ಇದು ಮತ್ತಷ್ಟು ದೊಡ್ಡದಾಗಲಿ’ ಎಂದು ಶುಭ ಕೋರಿದರು.

ಇದೇ ವೇಳೆ ಜೀ5 ಕನ್ನಡದ ಬಿಸ್ನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿದರು. ‘ಜೀ5 ಕನ್ನಡದಲ್ಲಿ ವೆಬ್ ಸರಣಿಯನ್ನು ಆರಂಭಿಸಿ 1 ವರ್ಷವಾಗಿದೆ. ಇದೊಂದು ಮಹತ್ವದ ಮೈಲಿಗಲ್ಲಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನಾವು ‘ಅಯ್ಯನ ಮನೆ’ ಪ್ರಾರಂಭಿಸಿದ್ದೆವು. ಈ ಒಂದು ವರ್ಷದ ಮೈಲಿಗಲ್ಲಿಗೆ ಸರಿಯಾಗಿ, ನಾವು ಈಗ ಏಪ್ರಿಲ್ 24ರಂದು ಜೆರಾಕ್ಸ್ ವೆಬ್ ಸರಣಿಯನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಿನಿಮಾಗೆ ಮಾತ್ರವಲ್ಲ, ನನ್ನ ಜೀವನಕ್ಕೂ ಡಾಲಿ ಕೊಡುಗೆ ಜಾಸ್ತಿ ಇದೆ: ನಾಗಭೂಷಣ

ಸುದ್ದಿಗೋಷ್ಠಿಯಲ್ಲಿ ನಟ ನಾಗಭೂಷಣ ಮಾತನಾಡಿದರು. ‘ವೆಬ್ ಸಿರೀಸ್ ನನಗೆ ಹೊಸದೇನೂ ಅಲ್ಲ. ಹನಿಮೂನ್ ವೆಬ್ ಸರಣಿಯಲ್ಲಿ ನಟಿಸಿದ್ದೆ. ಅದರ ನಿರ್ಮಾತೃ ಆರ್ ಜೆ ಪ್ರದೀಪ್. ಇಷ್ಟು ವರ್ಷದ ಬಳಿಕ ಮತ್ತೆ ವೆಬ್ ಸಿರೀಸ್​ನಲ್ಲಿ ನಟಿಸುತ್ತಿದ್ದೇನೆ. ಕನ್ನಡದ ಸಿನಿಮಾಗಳನ್ನು ತೆಗೆದುಕೊಳ್ಳಲು ಬಹಳಷ್ಟು ಒಟಿಟಿಗಳು ಹಿಂದೇಟು ಹಾಕುತ್ತಿವೆ. ಕನ್ನಡದಲ್ಲಿ ವೀಕ್ಷಕರ ಸಂಖ್ಯೆ ಕಡಿಮೆ ಎಂದು ನೆಪ ಹೇಳುತ್ತಾರೆ. ಆದರೆ ಇಂತಹ ಸಮಯದಲ್ಲಿ ಕನ್ನಡದಲ್ಲಿ ವೀಕ್ಷಕರು ಇದ್ದಾರೆ ಎಂಬುದನ್ನು ಜೀ5 ತೋರಿಸಿಕೊಟ್ಟಿದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

LSG vs RR IPL 2026 Live Score: ಸೂಪರ್ ಜೈಂಟ್ಸ್​​ಗೆ ರಾಯಲ್ಸ್ ಸವಾಲು

ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಎರಡೂ ತಂಡಗಳು ಕಳೆದ ಎರಡು ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಮೊದಲಾರ್ಧವನ್ನು ಗೆಲುವಿನೊಂದಿಗೆ ಕೊನೆಗೊಳಿಸುವ ಇರಾದೆಯಲ್ಲಿದೆ.

ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ 6 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎಲ್​ಎಸ್​ಜಿ ತಂಡ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಇನ್ನುಳಿದ 4 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವು ದಾಖಲಿಸಿದೆ. ಪ್ರಸ್ತುತ ತಂಡಗಳನ್ನು ಗಮನಿಸಿದರೆ ಉಭಯ ತಂಡಗಳು ಸಮಬಲದಿಂದ ಕೂಡಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಉತ್ತಮ ಪೈಪೋಟಿ ನಿರೀಕ್ಷಿಸಬಹುದು.

ರಾಜಸ್ಥಾನ್ ರಾಯಲ್ಸ್ ತಂಡ: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್​, ಕುಲದೀಪ್ ಸೇನ್.

ಲಕ್ನೋ ಸೂಪರ್ ಜೈಂಟ್ಸ್ ತಂಡ: ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬದೋನಿ, ಐಡೆನ್ ಮರ್ಕ್ರಾಮ್, ಮ್ಯಾಥ್ಯೂ ಬ್ರೀಟ್ಝ್ಕ್​, ಹಿಮ್ಮತ್ ಸಿಂಗ್,  ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಶಹಬಾಝ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಮಯಾಂಕ್ ಯಾದವ್, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್, ಆಕಾಶ್ ಸಿಂಗ್, ಮೊಹಮ್ಮದ್ ಶಮಿ, ಅರ್ಜುನ್ ತೆಂಡೂಲ್ಕರ್, ಅನ್ರಿಕ್ ನೋಕಿಯ, ಮುಕುಲ್ ಚೌಧರಿ, ನಮನ್ ತಿವಾರಿ, ಅಕ್ಷತ್ ರಘುವಂಶಿ, ಜೋಶ್ ಇಂಗ್ಲಿಸ್.

Source link

ಬಾಡಿಗೆ ಕಟ್ಟಲಾಗದೇ ಕೊಹ್ಲಿ ಒಡೆತನದಲ್ಲಿದ್ದ ಬ್ರ್ಯಾಂಡ್ ರೆಸ್ಟೋರೆಂಟ್​ ಬಂದ್​! – Kannada News | Bengaluru’s One8 Commune Closes Doors After Kohli Cuts Ties

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಸ್ತೂರ್​ಬಾ ರಸ್ತೆಯಲ್ಲಿದ್ದ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅವರ ಒಡೆತನದ (ಹಿಂದಿನ ಪಾಲುದಾರಿಕೆ) ‘ಒನ್8 ಕಮ್ಯೂನ್’ (One8 Commune) ರೆಸ್ಟೋರೆಂಟ್ ಅನ್ನು ಮುಚ್ಚಲಾಗಿದೆ. ಸುಮಾರು ₹2 ಕೋಟಿಗೂ ಅಧಿಕ ಬಾಡಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಮೇರೆಗೆ ಈ ಜನಪ್ರಿಯ ಹ್ಯಾಂಗೌಟ್ ತಾಣಕ್ಕೆ ಈಗ ಬೀಗ ಬಿದ್ದಿದೆ.

ಬಾಡಿಗೆ ಬಾಕಿ ಮತ್ತು ಕೋರ್ಟ್ ಆದೇಶ:

ಕಸ್ತೂರ್​ಬಾ ರಸ್ತೆ ರಸ್ತೆಯಲ್ಲಿರುವ ರತ್ನಂ ಕಾಂಪ್ಲೆಕ್ಸ್‌ನಲ್ಲಿ ಈ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿತ್ತು. ಆದರೆ, ರೆಸ್ಟೋರೆಂಟ್ ನಡೆಸುತ್ತಿದ್ದ ‘ಟ್ರಿಯೊ ಹಿಲ್ಸ್ ಹಾಸ್ಪಿಟಾಲಿಟಿ’ ಸಂಸ್ಥೆಯು ಕಳೆದ ಸುಮಾರು ಆರು ತಿಂಗಳಿನಿಂದ ಕಟ್ಟಡದ ಮಾಲೀಕರಿಗೆ ಬಾಡಿಗೆ ಪಾವತಿಸಿರಲಿಲ್ಲ. ಈ ಬಾಕಿ ಮೊತ್ತ ಸುಮಾರು ₹2 ಕೋಟಿಗೂ ಹೆಚ್ಚು ದಾಟಿತ್ತು ಎನ್ನಲಾಗಿದೆ. ಮಾಲೀಕರು ಸಿವಿಲ್ ಕೋರ್ಟ್ ಮೊರೆ ಹೋದ ನಂತರ, ನ್ಯಾಯಾಲಯವು ರೆಸ್ಟೋರೆಂಟ್ ಅನ್ನು ತೆರವುಗೊಳಿಸುವಂತೆ ಆದೇಶ ನೀಡಿತು.

ವಿರಾಟ್ ಕೊಹ್ಲಿ ಸಂಬಂಧ ಕಡಿದುಕೊಂಡಿದ್ದೇಕೆ?

ಈ ಔಟ್‌ಲೆಟ್ ಆರಂಭದಲ್ಲಿ ವಿರಾಟ್ ಕೊಹ್ಲಿ ಅವರ ‘One8’ ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಈ ರೆಸ್ಟೋರೆಂಟ್ ಹಲವು ವಿವಾದಗಳಿಗೆ ಸಿಲುಕಿತ್ತು. ಮೂಲಗಳ ಪ್ರಕಾರ, ರೆಸ್ಟೋರೆಂಟ್ ನಿರ್ವಹಣೆಯಲ್ಲಿನ ಲೋಪದೋಷಗಳು ಮತ್ತು ಸತತವಾಗಿ ಬರುತ್ತಿದ್ದ ನೋಟಿಸ್‌ಗಳಿಂದ ಬೇಸತ್ತ ಕೊಹ್ಲಿ, ಈ ನಿರ್ದಿಷ್ಟ ಔಟ್‌ಲೆಟ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡು ಪಾಲುದಾರಿಕೆಯನ್ನು ಕಡಿದುಕೊಂಡಿದ್ದರು.

ಇತರೆ ಕಾನೂನು ಸಮಸ್ಯೆಗಳು!

ಬಾಡಿಗೆ ಬಾಕಿ ಮಾತ್ರವಲ್ಲದೆ, ಈ ರೆಸ್ಟೋರೆಂಟ್ ಬಿಬಿಎಂಪಿ (BBMP) ಮತ್ತು ಅಗ್ನಿಶಾಮಕ ದಳದಿಂದಲೂ ತೀವ್ರ ವಿರೋಧ ಎದುರಿಸುತ್ತಿತ್ತು:

  • ಅಗ್ನಿಶಾಮಕ ಎನ್‌ಒಸಿ ಇಲ್ಲದಿರುವುದು: ಕಟ್ಟಡದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳಿಲ್ಲದ ಕಾರಣ ಅಗ್ನಿಶಾಮಕ ಇಲಾಖೆ ಎನ್‌ಒಸಿ (NOC) ನೀಡಿರಲಿಲ್ಲ.
  • ಸಮಯ ಮೀರಿದ ವಹಿವಾಟು: ನಿಗದಿಗಿಂತ ಹೆಚ್ಚು ಸಮಯದವರೆಗೆ ರೆಸ್ಟೋರೆಂಟ್ ತೆರೆದಿಡಲಾಗುತ್ತಿತ್ತು ಎಂಬ ದೂರಿನ ಮೇರೆಗೆ ಪೊಲೀಸರು ಈ ಹಿಂದೆ ಪ್ರಕರಣ ದಾಖಲಿಸಿದ್ದರು.
  • ಧೂಮಪಾನ ವಲಯ: ಸರಿಯಾದ ಧೂಮಪಾನ ವಲಯ (Smoking Zone) ಇಲ್ಲದಿದ್ದರೂ ನಿಯಮ ಉಲ್ಲಂಘಿಸುತ್ತಿದ್ದ ಆರೋಪವಿತ್ತು.

ಬೆಂಗಳೂರಿನ ಪ್ರತಿಷ್ಠಿತ ಪ್ರದೇಶದಲ್ಲಿದ್ದ ಈ ರೆಸ್ಟೋರೆಂಟ್ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ತಾಣವಾಗಿತ್ತು. ಆದರೆ ವಿರಾಟ್ ಕೊಹ್ಲಿ ಬ್ರ್ಯಾಂಡ್‌ನಿಂದ ಹೊರಬಂದ ನಂತರ ಮತ್ತು ಬಾಡಿಗೆ ಸಮಸ್ಯೆಯಿಂದಾಗಿ ಗ್ರಾಹಕರ ಸಂಖ್ಯೆಯೂ ಕ್ಷೀಣಿಸಿತ್ತು.

ಪ್ರಸ್ತುತ, ಕೋರ್ಟ್ ಆದೇಶದಂತೆ ರೆಸ್ಟೋರೆಂಟ್‌ನಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ಎಲ್ಲಾ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ: RCB ವಿರುದ್ಧ ಹೀರೋ SRH ವಿರುದ್ಧ ಝೀರೋ!

ಬೆಂಗಳೂರಿನ ಈ ಒಂದು ಶಾಖೆ ಮುಚ್ಚಿದ್ದರೂ, ದೆಹಲಿ, ಕೋಲ್ಕತ್ತಾ ಮತ್ತು ಮುಂಬೈನಂತಹ ನಗರಗಳಲ್ಲಿ ‘ಒನ್8 ಕಮ್ಯೂನ್’ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

Source link

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗನ್ನು ವಶಪಡಿಸಿಕೊಂಡ ಇರಾನ್ – Kannada News | Iran Seizes India bound ship among 2 vessels In strait of Hormuz

ಟೆಹ್ರಾನ್, ಏಪ್ರಿಲ್ 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ ಕದನ ವಿರಾಮ ವಿಸ್ತರಣೆಯ ಹೊರತಾಗಿಯೂ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಉದ್ವಿಗ್ನತೆ ಮುಂದುವರಿದಿದೆ. ಹಾರ್ಮುಜ್ ಜಲಸಂಧಿಯಲ್ಲಿ 2 ಹಡಗುಗಳನ್ನು ವಶಪಡಿಸಿಕೊಂಡಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ. ಆ 2 ಹಡಗುಗಳಲ್ಲಿ ಒಂದು ಭಾರತದ ಗುಜರಾತ್​​ನತ್ತ ಬರುತ್ತಿತ್ತು.

“ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾ ಪಡೆ ಇಂದು ಬೆಳಿಗ್ಗೆ ಹಾರ್ಮುಜ್ ಜಲಸಂಧಿಯಲ್ಲಿ ಎರಡು ಹಡಗುಗಳು ನಿಯಮ ಉಲ್ಲಂಘನೆ ಮಾಡಿದ್ದನ್ನು ಗುರುತಿಸಿ ನಿಲ್ಲಿಸಿದೆ. ಅವುಗಳನ್ನು ಇರಾನ್​ನ ಕರಾವಳಿಯತ್ತ ತೆಗೆದುಕೊಂಡು ಹೋಗಲಾಗಿದೆ. ವಶಪಡಿಸಿಕೊಂಡ ಹಡಗುಗಳನ್ನು ಎಂಎಸ್‌ಸಿ-ಫ್ರಾನ್ಸೆಸ್ಕಾ ಮತ್ತು ಇಪಾಮಿನೊಂಡಾಸ್ ಎಂದು ಗುರುತಿಸಲಾಗಿದೆ” ಎಂದು ಇರಾನ್ ಹೇಳಿಕೆಯಲ್ಲಿ ತಿಳಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಇದನ್ನೂ ಓದಿ: ಹಾರ್ಮುಜ್​ನಲ್ಲಿ ಭಾರತದ ಹಡಗುಗಳ ಮೇಲೆ ಇರಾನ್ ದಾಳಿ, ಇರಾನ್ ರಾಯಭಾರಿ ಬಳಿ ವಿವರಣೆ ಕೇಳಿದ ಭಾರತ

ಲೈಬೀರಿಯಾ ಧ್ವಜದ ಅಡಿಯಲ್ಲಿ ಪ್ರಯಾಣಿಸುತ್ತಿದ್ದ ಕಂಟೇನರ್ ಹಡಗು ಇಪಾಮಿನೊಂಡಾಸ್ ದುಬೈನ ಜೆಬೆಲ್ ಅಲಿಯಿಂದ ಗುಜರಾತ್‌ಗೆ ಹೋಗುತ್ತಿತ್ತು. ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ವಿಸ್ತರಿಸಿದ್ದಾರೆ. ಅದರ ಬೆನ್ನಲ್ಲೇ ಇರಾನ್ ಹಾರ್ಮುಜ್​ನಲ್ಲಿ ಹಡಗುಗಳನ್ನು ವಶಕ್ಕೆ ಪಡೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ, ವಿಡಿಯೋ ವೈರಲ್ – Kannada News | Bike Rider Ties Soppu on Head instead of helmet In Chamarajanagar for temperature heatwave, video Goes viral

ಚಾಮರಾಜನಗರ, (ಏಪ್ರಿಲ್ 22): ಕರ್ನಾಟಕದಲ್ಲಿ ಬೇಸಿಗೆಯ ತಾಪಮಾನ (temperature) ದಾಖಲೆ ಮಟ್ಟಕ್ಕೆ ಏರಿದ್ದು, ಹಲವು ಜಿಲ್ಲೆಗಳಲ್ಲಿ ತೀವ್ರ ಬಿಸಿಲು ಜನರ ನೆತ್ತಿ ಸುಡುತ್ತಿದೆ. ಹೀಗಾಗಿ ಚಾಮರಾಜನಗರದಲ್ಲೊಬ್ಬ (Chamarajanagar) ಬಿಸಿಲಿಗೆ ಕಂಗೆಟ್ಟು ಹೆಲ್ಮೆಟ್ ಬದಲು ತಲೆಗೆ ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಬಾಗಲಕೋಟೆ ನಗರದ ಭುವನೇಶ್ವರಿ ವೃತ್ತದ‌ ಸಿಗ್ನಲ್ ನಲ್ಲಿ ಹೆಲ್ಮೆಟ್ ಸೊಪ್ಪು ಕಟ್ಟಿಕೊಂಡು ಬಂದಿದ್ದ ಬೈಜ್ ಸವಾರನ ದೃಶ್ಯ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಚನಾನಂದ ಸ್ವಾಮೀಜಿ, ಮಠದ ಟ್ರಸ್ಟ್​​ ನಡುವೆ ಹೊಸ ಸಂಘರ್ಷ: ಡಿಸಿ, ಎಸ್ಪಿಗೆ ದೂರು – Kannada News | Vachananda Swamiji vs Math Trust: Basava Jayanti Conflict Intensifies, Complaint to DC and SP

ವಚನಾನಂದ ಸ್ವಾಮೀಜಿ, ಮಠದ ಟ್ರಸ್ಟ್​​ ನಡುವೆ ಹೊಸ ಸಂಘರ್ಷImage Credit source: Tv9 Kannada

ದಾವಣಗೆರೆ, ಏಪ್ರಿಲ್​​ 22: ಹರಿಹರ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್ ಹಾಗೂ ವಚನಾನಂದ ಸ್ವಾಮೀಜಿ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದೆ. ಉಚ್ಛಾಟನೆ ಮಾಡಲಾಗಿದ್ದರೂ ಪಂಚಮಸಾಲಿ ಪೀಠದಲ್ಲಿ ಬಸವ ಜಯಂತಿ ಆಚರಣೆಗೆ ನಿರ್ಧಾರ ಹಿನ್ನೆಲೆ ಈ ಬಗ್ಗೆ ದಾವಣಗೆರೆ ಡಿಸಿ, ಎಸ್​ಪಿಗೆ ಮಠದ ಟ್ರಸ್ಟ್​​ನಿಂದ ಲಿಖಿತ ದೂರು ನೀಡಲಾಗಿದೆ. ಏ.13ರಂದು ಮಠದಿಂದ ವಚನಾನಂದಶ್ರೀ ಉಚ್ಚಾಟನೆ ಮಾಡಲಾಗಿದೆಯಾದರೂ ಅವರು ಮಠದಲ್ಲಿಯೇ ಇದ್ದಾರೆ. ಅಲ್ಲದೇ ಏ.24ರಂದು ಬಸವ ಜಯಂತಿ ಆಚರಿಸಲು ಮುಂದಾಗಿದ್ದಾರೆ. ಬಸವ ಜಯಂತಿ ಮಾಡುವ ನೈತಿಕತೆ ವಚನಾನಂದ ಸ್ವಾಮೀಜಿಗೆ ಇಲ್ಲ ಎಂದು ಆರೋಪಿಸಲಾಗಿದೆ.

ಮಠದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಉಸ್ತುವಾರಿ ಡಾ.ರಾಜಕುಮಾರ ಮತ್ತು ಲೆಕ್ಕ ಕೊಡಿ ಅಭಿಯಾನದ ಅಧ್ಯಕ್ಷ ಸಿರಿಗೆರೆ ಪರಮೇಶ್ವರ ಗೌಡ ಕಾರಣ. ಹೀಗಾಗಿ ಮಠದಲ್ಲಿ ಬಸವ ಜಯಂತಿ ಆಚರಣೆಗೆ ಅವಕಾಶ ನೀಡದಂತೆ ಆಗ್ರಹಿಸಿ ಪಂಚಮಸಾಲಿ ಗುರುಪೀಠದ ಟ್ರಸ್ಟ್​ನ ಪ್ರಧಾನ ಧರ್ಮದರ್ಶಿ ಉಮಾಪತಿ,ಕಾರ್ಯದರ್ಶಿ ಜ್ಯೋತಿ ಪ್ರಕಾಶ್​ರಿಂದ ಡಿಸಿ ಮತ್ತು ಎಸ್​ಪಿಗೆ ದೂರು ನೀಡಲಾಗಿದೆ. ಮತ್ತೊಂದೆಡೆ ಪೀಠದಿಂದ ಉಚ್ಛಾಟಿತ ವಚನಾನಂದ ಶ್ರೀಗಳಿಗೂ ಟ್ರಸ್ಟ್​​ ಈ ಬಗ್ಗೆ ಪತ್ರ ಮುಖೇನ ಎಚ್ಚರಿಸಿದೆ.

ಇದನ್ನೂ ಓದಿ: ಉಚ್ಛಾಟಿತ ವಚನಾನಂದ ಶ್ರೀಗೆ ಮತ್ತೊಂದು ಸಂಕಷ್ಟ, ಧ್ಯಾನದ ಮೊರೆ ಹೋದ ಸ್ವಾಮೀಜಿ

ಶ್ರೀಗಳಿಗೆ ಟ್ರಸ್ಟ್​​ ಬರೆದ ಪತ್ರದಲ್ಲೇನಿದೆ?

ಏಪ್ರಿಲ್​​ 24ರಂದು ಶ್ರೀಪೀಠದಲ್ಲಿ ಶ್ರೀ ಬಸವ ಜಯಂತಿಯನ್ನು ಮತ್ತು ಬೃಹತ್ ರಾಜ್ಯ ಸಮಾವೇಶ ಅದ್ದೂರಿಯಲ್ಲಿ ಆಚರಣೆ ಮಾಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಕಟಿಸಿರುವುದನ್ನ ಗಮನಿಸಿದ್ದೇವೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕರೆ ನೀಡುತ್ತಿರುವುದು ಕೂಡ ಕಂಡುಬಂದಿದೆ. ಆದರೆ ಈಗಾಗಲೇ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ದಿಂದ ಪದಚ್ಯುತಿ (ಉಚ್ಛಾಟನೆ) ಮಾಡಲಾಗಿರುತ್ತದೆ. ಗೌರವಪೂರ್ವಕವಾಗಿ ಮಠವನ್ನ ತ್ಯಜಿಸಲು ಹೇಳಿದ್ದೇವೆ ಆದರೆ ತಾವು ಇಲ್ಲಿವರೆಗೂ ನಮ್ಮ ವಿರುದ್ಧವೇ ಬಾಯಿಗೆ ಬಂದಂತೆ ಮಾತನಾಡುತ್ತಾ ಚಾರಿತ್ರವಧೆ ಮಾಡುತ್ತಾ ಬಂದಿದ್ದೀರಿ. ಉಚ್ಛಾಟನೆಗೊಂಡಿರುವ ತಾವು ಕಾರ್ಯಕ್ರಮಗಳನ್ನು ಶ್ರೀಪೀಠದಲ್ಲಿ ಮಾಡಲು ಯಾವುದೇ ನೈತಿಕ ಹಕ್ಕು ಇರುವುದಿಲ್ಲ. ಆದ ಕಾರಣ ಯಾವುದೇ ಸಭೆ ಸಮಾರಂಭ ಪತ್ರಿಕಾಗೋಷ್ಠಿ ಮಾಡಬಾರದೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ, ಶ್ರೀಪೀಠದಲ್ಲಿ ಯಾವುದೇ ಅಹಿತಕರ ಘಟನೆ, ಗಲಾಟೆ, ಶ್ರೀಪೀಠದ ಆಸ್ತಿಗೆ ಹಾನಿಯದಲ್ಲಿ ತಾವುಗಳು, ಶ್ರೀಪೀಠದ ಅನಮಾತುನಲ್ಲಿರುವ ಆಡಳಿತಾಧಿಕಾರಿ ಡಾ.ರಾಜ್ ಕುಮಾರ್ ಮತ್ತು ಜಿ. ಪರಮೇಶ್ ಗೌಡ್ರು ಹೊಳೆಸಿರಿಗೆರಿ ನೇರವಾಗಿ ಹೊಣೆಯಾಗಿರುತ್ತೀರಿ ಎಂದು ತಮಗೆ ತಿಳಿಯಬಯಸುತ್ತೇವೆ ಎಂದು ಟ್ರಸ್ಟ್​​ ಹೇಳಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ – Kannada News | Vijyalakshmi Darshan visits Parappana Agrahara to see Darshan second time in a week

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮತ್ತು ಕೆಲವು ಕುಟುಂಬದ ಆಪ್ತರು, ಆತ್ಮೀಯರು ಆಗಾಗ್ಗೆ ಜೈಲಿಗೆ ಹೋಗಿ ಬರುತ್ತಿರುತ್ತಾರೆ. ಇದೀಗ ಪತ್ನಿ ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ. ಇದು ಈ ವಾರದಲ್ಲಿ ಅವರ ಎರಡನೇ ಭೇಟಿ ಆಗಿದೆ. ವಿಜಯಲಕ್ಷ್ಮಿ ಅವರು ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಆಗಿ ಬರುತ್ತಿರುವಾಗಿನ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Health Tips: ನಕಲಿ ಪನೀರ್ ಗುರುತಿಸುವುದು ಹೇಗೆ? ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ – Kannada News | Pure vs. Fake Paneer: How to Identify Authentic Paneer for Your Health

ಪನೀರ್ ಭಾರತೀಯ ಅಡುಗೆಮನೆಯ ಅವಿಭಾಜ್ಯ ಅಂಗ. ಪಾಲಕ್ ಪನೀರ್ ಇರಲಿ ಅಥವಾ ಪನೀರ್ ಬಟರ್ ಮಸಾಲಾ ಇರಲಿ, ಹಬ್ಬದೂಟಗಳಲ್ಲಿ ಪನೀರ್ ಇಲ್ಲದಿದ್ದರೆ ಅದು ಅಪೂರ್ಣವೆನಿಸುತ್ತದೆ. ಆದರೆ ಇಂದಿನ ಮಾರುಕಟ್ಟೆಯಲ್ಲಿ ಹಾಲಿನಿಂದ ತಯಾರಿಸಿದ ಅಧಿಕೃತ ಪನೀರ್ ಜೊತೆಗೆ ತರಕಾರಿ ಎಣ್ಣೆ ಮತ್ತು ರಾಸಾಯನಿಕ ಬಳಸಿ ತಯಾರಿಸಿದ ನಕಲಿ ಪನೀರ್ ಕೂಡ ಲಭ್ಯವಿದೆ. ಇವೆರಡೂ ನೋಡಲು ಒಂದೇ ರೀತಿ ಕಂಡರೂ, ಗುಣಮಟ್ಟ ಮತ್ತು ಆರೋಗ್ಯದ ದೃಷ್ಟಿಯಿಂದ ಇವುಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ.

ಸಾಂಪ್ರದಾಯಿಕ ಪನೀರ್:

ಸಾಂಪ್ರದಾಯಿಕ ಪನೀರ್ ತಯಾರಿಸುವ ವಿಧಾನ ಅತ್ಯಂತ ಸರಳ ಮತ್ತು ನೈಸರ್ಗಿಕವಾದುದು. ತಾಜಾ ಹಾಲನ್ನು ಕುದಿಸಿ, ಅದಕ್ಕೆ ನಿಂಬೆ ರಸ ಅಥವಾ ವಿನೆಗರ್ ಸೇರಿಸಿ ಹಾಲನ್ನು ಒಡೆಯಲಾಗುತ್ತದೆ. ನಂತರ ಸೋಸಿದ ಘನ ಭಾಗವನ್ನು ಒತ್ತಿ ಗಟ್ಟಿಯಾಗಿಸಿದಾಗ ನಮಗೆ ನಿಜವಾದ ಪನೀರ್ ದೊರೆಯುತ್ತದೆ. ಇಂತಹ ಪನೀರ್ ಮೃದುವಾದ ಮತ್ತು ಕ್ರೀಮಿ ವಿನ್ಯಾಸವನ್ನು ಹೊಂದಿದ್ದು, ತಾಜಾ ಹಾಲಿನ ಸುವಾಸನೆಯಿಂದ ಕೂಡಿರುತ್ತದೆ. ಪೌಷ್ಟಿಕಾಂಶದ ದೃಷ್ಟಿಯಿಂದಲೂ ಇದು ಅತ್ಯುತ್ತಮವಾಗಿದ್ದು, ಇದರಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳು ಸಮೃದ್ಧವಾಗಿರುತ್ತವೆ. 100 ಗ್ರಾಂ ಶುದ್ಧ ಪನೀರ್‌ನಲ್ಲಿ ಸುಮಾರು ೧೮–೨೦ ಗ್ರಾಂ ಪ್ರೊಟೀನ್ ದೊರೆಯುತ್ತದೆ.

ನಕಲಿ ಪನೀರ್:

ಮಾರುಕಟ್ಟೆಯಲ್ಲಿ “ಡೈರಿ ಅನಾಲಾಗ್” ಎಂದು ಕರೆಯಲ್ಪಡುವ ನಕಲಿ ಪನೀರ್ ವ್ಯಾಪಕವಾಗಿ ಸಿಗುತ್ತಿದೆ. ಇದನ್ನು ಹಾಲಿನ ಪುಡಿ, ಪಾಮ್ ಆಯಿಲ್ ಅಥವಾ ಸೋಯಾಬೀನ್ ಎಣ್ಣೆ, ಹೈಡ್ರೋಜನೇಟೆಡ್ ಕೊಬ್ಬು ಮತ್ತು ಸ್ಟ್ಯಾಬಿಲೈಸರ್‌ಗಳನ್ನು ಬಳಸಿ ತಯಾರಿಸಲಾಗುತ್ತದೆ. ಈ ಪನೀರ್ ಸಾಮಾನ್ಯವಾಗಿ ರಬ್ಬರ್‌ನಂತೆ ಗಡಸಾಗಿರುತ್ತದೆ ಮತ್ತು ಇದರಲ್ಲಿ ಹಾಲಿನ ನೈಸರ್ಗಿಕ ರುಚಿಯ ಕೊರತೆ ಇರುತ್ತದೆ. ಪೌಷ್ಟಿಕಾಂಶವಿಲ್ಲದ ಈ ಉತ್ಪನ್ನದಲ್ಲಿ ಟ್ರಾನ್ಸ್ ಫ್ಯಾಟ್ ಇರುವ ಸಾಧ್ಯತೆ ಹೆಚ್ಚಿರುವುದರಿಂದ, ಇದು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಪನೀರ್‌ನ ಶುದ್ಧತೆ ಪರೀಕ್ಷಿಸಲು ಸರಳ ವಿಧಾನಗಳು:

ನೀವು ಖರೀದಿಸಿದ ಪನೀರ್ ಅಸಲಿಯೋ ಅಥವಾ ನಕಲಿಯೋ ಎಂದು ಮನೆಯಲ್ಲೇ ಪರೀಕ್ಷಿಸಲು ಕೆಲವು ಸುಲಭ ಹಾದಿಗಳಿವೆ. ಮೊದಲನೆಯದಾಗಿ, ನೀರಿನ ಪರೀಕ್ಷೆ; ನಿಜವಾದ ಪನೀರ್ ನೀರಿನಲ್ಲಿ ಮುಳುಗಿದರೆ, ನಕಲಿ ಪನೀರ್ ತೇಲುವ ಸಾಧ್ಯತೆ ಇರುತ್ತದೆ. ಎರಡನೆಯದಾಗಿ, ಬಿಸಿ ಮಾಡಿದಾಗ ನಿಜವಾದ ಪನೀರ್ ಮೃದುವಾಗುತ್ತದೆ, ಆದರೆ ನಕಲಿ ಪನೀರ್ ಗಡಸಾಗುತ್ತದೆ. ಮೂರನೆಯದಾಗಿ, ಕೈಯಿಂದ ಒತ್ತಿದಾಗ ನಿಜವಾದ ಪನೀರ್ ಪುಡಿಪುಡಿಯಾದರೆ, ನಕಲಿ ಪನೀರ್ ಜಿಗುಟಾಗಿ ಎಳೆಯುವಂತೆ ಇರುತ್ತದೆ. ಇನ್ನು ಅಯೋಡಿನ್ ಪರೀಕ್ಷೆ ಮಾಡಿದಾಗ ಪನೀರ್ ನೀಲಿ ಅಥವಾ ಕಪ್ಪು ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಪಿಷ್ಟ (Starch) ಕಲಬೆರಕೆಯಾಗಿದೆ ಎಂದು ಅರ್ಥೈಸಬಹುದು.

ಇದನ್ನೂ ಓದಿ: ಪದೇ ಪದೇ ಹಸಿವಾಗುವುದು ಮಧುಮೇಹದ ಆರಂಭಿಕ ಲಕ್ಷಣವೇ? ಇಲ್ಲಿದೆ ತಜ್ಞರ ಉತ್ತರ

ಕಾನೂನು ಕ್ರಮ ಮತ್ತು ಜಾಗರೂಕತೆ:

ಭಾರತದ ಆಹಾರ ಸುರಕ್ಷತಾ ನಿಯಮಗಳ ಪ್ರಕಾರ, ತರಕಾರಿ ಎಣ್ಣೆಯಿಂದ ತಯಾರಿಸಿದ ಉತ್ಪನ್ನವನ್ನು “ಪನೀರ್” ಎಂದು ಮಾರಾಟ ಮಾಡುವುದು ಅಪರಾಧವಾಗಿದೆ. ಅಂತಹ ಉತ್ಪನ್ನಗಳನ್ನು “ಡೈರಿ ಅನಾಲಾಗ್” ಎಂದು ಲೇಬಲ್ ಮಾಡುವುದು ಕಡ್ಡಾಯ. ಆದರೂ ಲಾಭದ ಉದ್ದೇಶದಿಂದ ಕಲಬೆರಕೆ ನಡೆಯುತ್ತಲೇ ಇರುತ್ತದೆ. ಆದ್ದರಿಂದ ಪ್ಯಾಕ್ ಮಾಡಿದ ಪನೀರ್ ಕೊಳ್ಳುವಾಗ ಲೇಬಲ್ ಮೇಲೆ “100% Pure Milk” ಎಂದು ಬರೆದಿರುವುದನ್ನು ಖಚಿತಪಡಿಸಿಕೊಳ್ಳಿ. ಅತಿಯಾದ ಕಡಿಮೆ ಬೆಲೆಗೆ ಪನೀರ್ ಸಿಗುತ್ತಿದೆ ಎಂದರೆ ಅದು ನಕಲಿ ಇರುವ ಸಾಧ್ಯತೆ ಹೆಚ್ಚು ಎಂಬ ಎಚ್ಚರವಿರಲಿ.

ಆರೋಗ್ಯವೇ ಮಹಾಭಾಗ್ಯ:

ಆರೋಗ್ಯಕ್ಕಿಂತ ದೊಡ್ಡದಾದ ಉಳಿತಾಯ ಇನ್ನೊಂದಿಲ್ಲ. ಸ್ವಲ್ಪ ಹಣ ಉಳಿಸಲು ಹೋಗಿ ನಕಲಿ ಪನೀರ್ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳುವ ಬದಲು, ಮನೆಯಲ್ಲೇ ತಯಾರಿಸಿದ ಪನೀರ್ ಬಳಸುವುದು ಅತ್ಯಂತ ಶ್ರೇಷ್ಠ. ಮಾರುಕಟ್ಟೆಯಿಂದ ಕೊಳ್ಳುವಾಗಲೂ ಸ್ವಲ್ಪ ಹೆಚ್ಚಿನ ಬೆಲೆಯಾದರೂ ಗುಣಮಟ್ಟದ ಶುದ್ಧ ಪನೀರ್ ಆಯ್ಕೆ ಮಾಡುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ದೀರ್ಘಕಾಲದ ಆರೋಗ್ಯಕ್ಕೆ ಒಳಿತು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:28 pm, Wed, 22 April 26

Source link

‘ನನಗೆ ಆ ರೀತಿ ಮೀಸೆ ಬರಲ್ಲ’: ನೇರವಾಗಿ ಒಪ್ಪಿಕೊಂಡು ಜನರ ಕ್ಷಮೆ ಕೇಳಿದ ಅಕ್ಷಯ್ ಕುಮಾರ್ – Kannada News | Akshay Kumar reacts to Samrat Prithviraj fake moustache backlash apology

ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. 2022ರಲ್ಲಿ ತೆರೆಕಂಡ, ಐತಿಹಾಸಿಕ ಕಥಾಹಂದರದ ‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಆ ಸಮಯದಲ್ಲಿ ಚಿತ್ರಕ್ಕಿಂತ ಹೆಚ್ಚಾಗಿ ಅಕ್ಷಯ್ ಕುಮಾರ್ ಧರಿಸಿದ್ದ ನಕಲಿ ಮೀಸೆ ಭಾರಿ ಟೀಕೆಗೆ ಗುರಿಯಾಗಿತ್ತು. ಈಗ ಸುಮಾರು 4 ವರ್ಷಗಳ ನಂತರ ಅಕ್ಷಯ್ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅಕ್ಷಯ್, ನಕಲಿ ಮೀಸೆ ಬಳಸಲು ಇದ್ದ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಸಿನಿಮಾಕ್ಕಾಗಿ ಅಕ್ಷಯ್ ಕುಮಾರ್ ಹೆಚ್ಚು ಸಮಯ ಮೀಸಲಿಡುವುದಿಲ್ಲ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಏಕಕಾಲಕ್ಕೆ ಹಲವು ಸಿನಿಮಾಗಳಲ್ಲಿ, ಹಲವು ಲುಕ್‌ಗಳಲ್ಲಿ ಕೆಲಸ ಮಾಡುತ್ತಿರುತ್ತೇನೆ. ಉದಾಹರಣೆಗೆ, ಈಗ ನಾನು ಗಡ್ಡ ಬಿಟ್ಟಿದ್ದೇನೆ. ಇದನ್ನು ಬೆಳೆಸಲು ನನಗೆ ಆರು ವಾರಗಳು ಬೇಕಾಯಿತು ಮತ್ತು ಆ ಸಮಯದಲ್ಲಿ ನಾನು ಯಾವುದೇ ಕೆಲಸ ಮಾಡಲಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಮುಂದುವರಿದು ಮಾತನಾಡಿದ ಅವರು, ‘ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ಕಥೆಗೆ ಒಂದು ವಿಶಿಷ್ಟವಾದ ಮೀಸೆಯ ಅವಶ್ಯಕತೆಯಿತ್ತು. ಆದರೆ ಅಂತಹ ಮೀಸೆ ನನ್ನ ಮುಖದ ಮೇಲೆ ಸಹಜವಾಗಿ ಬೆಳೆಯಲು ಸಾಧ್ಯವಿರಲಿಲ್ಲ. ಹಾಗಾಗಿ ನಕಲಿ ಮೀಸೆ ಬಳಸಬೇಕಾಯಿತು. ಅದು ನೋಡಲು ಚೆನ್ನಾಗಿರಲಿಲ್ಲ ಅಥವಾ ಜನರಿಗೆ ಇಷ್ಟವಾಗಿಲ್ಲದಿರಬಹುದು. ಆದರೆ ಅಂತಿಮವಾಗಿ ಇದು ಕೇವಲ ಅಭಿನಯವಷ್ಟೇ’ ಎಂದಿದ್ದಾರೆ.

ಚಿತ್ರದ ಲುಕ್ ಬಗ್ಗೆ ಅಸಮಾಧಾನಗೊಂಡಿದ್ದ ಅಭಿಮಾನಿಗಳ ಬಗ್ಗೆ ಅಕ್ಷಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು. ‘ಒಂದೊಮ್ಮೆ ಜನರಿಗೆ ಆ ಲುಕ್ ಇಷ್ಟವಾಗದಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಕೆಲವು ಬಾರಿ ಅಂತಹ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಆದರೆ ಅದು ವಿಫಲವಾದರೆ ನಾವೇ ಜವಾಬ್ದಾರರು’ ಎಂದು ಅವರು ನೇರವಾಗಿ ಹೇಳಿದ್ದಾರೆ. ನಕಲಿ ಮೀಸೆಯ ಕಾರಣಕ್ಕೆ ಅವರು ಜನರಲ್ಲಿ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ 2022ರ ಜೂನ್ 3ರಂದು ಬಿಡುಗಡೆ ಆಗಿತ್ತು. ಚಂದ್ರಪ್ರಕಾಶ್ ದ್ವಿವೇದಿ ಅವರು ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಅಂದಾಜು 175 ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ನಿರ್ಮಾಣ ಮಾಡಿತ್ತು. ಆದರೆ ವಿಶ್ವಾದ್ಯಂತ ಆ ಸಿನಿಮಾ ಗಳಿಸಿದ್ದು ಕೇವಲ 90 ಕೋಟಿ ರೂಪಾಯಿ ಮಾತ್ರ. ಆ ಸಿನಿಮಾದಲ್ಲಿ ಮಾನುಷಿ ಚಿಲ್ಲರ್, ಸಂಜಯ್ ದತ್ ಮತ್ತು ಸೋನು ಸೂದ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version