ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯ ಭೀಕರ ಕೊಲೆ: ಸಂಬಂಧಿಕರಿಂದಲೇ ನಡೀತು ಭೀಭತ್ಸ ಕೃತ್ಯ – Kannada News | Tumakuru Murder: Drunk Man Killed by Relatives in Huliyurdurga, 3 Arrested

ಕೊಲೆಯಾದ ವ್ಯಕ್ತಿ ಮತ್ತು ಆರೋಪಿಗಳುImage Credit source: Tv9 Kannada

ತುಮಕೂರು, ಏಪ್ರಿಲ್​​ 22: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಸಂತೆಮಾವತ್ತೂರಿನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ಏ.17ರಂದು ಸಂತೆಮಾವತ್ತೂರಿನಲ್ಲಿ ಹೈಡ್ರಾಮಾವೊಂದು ನಡೆದಿತ್ತು. ಕುಡಿದ ಮತ್ತಿನಲ್ಲಿ ಬಂದ ಮಂಜುನಾಥ ಎಂಬಾತ ಗ್ರಾಮದ ಜನರಿಗೆ ಕಿರಿಕಿರಿ ಮಾಡಿದ್ದ. ಜೊತೆಗೆ ಗ್ರಾಮದ ಮಹಿಳೆ ಕಾಳಮ್ಮ ಎಂಬಾಕೆ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಕೋಪಗೊಂಡ ಜನ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ನಾಪತ್ತೆಯಾಗಿದ್ದ ಆತ, ಮರುದಿನ ಹೆಣವಾಗಿ ಸಿಕ್ಕಿದ್ದ. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಸಾವಿನ ಹಿಂದಿನ ಸತ್ಯ ರಿವೀಲ್​​ ಮಾಡಿದ್ದು, ಸಂಬಂಧಿಕರಿಂದಲೇ ಮಂಜುನಾಥನ ಹತ್ಯೆಯಾಗಿರೋದು ಬಯಲಾಗಿದೆ.

ಶವವಾಗಿ ಪತ್ತೆಯಾಗಿದ್ದ ಮಂಜುನಾಥನ ತಲೆಗೆ ಗಂಭೀರ ಗಾಯವಾಗಿರೋದು ಕಂಡುಬಂದ ಹಿನ್ನೆಲೆ ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಹೀಗಾಗಿ ಇದು ಕೊಲೆಯಾಗಿರಬಹುದು ಎಂಬ ಸಂಶಯದಲ್ಲಿ ತನಿಖೆ ಕೈಗೊಂಡಿದ್ದ ಹುಲಿಯೂರುದುರ್ಗ ಪೊಲೀಸರು ಮಂಜುನಾಥನ ಸಹೋದರ ಉಮೇಶ ಮತ್ತು ಸೋದರ ಸಂಬಂಧಿಗಳಾದ ಕುಮಾರ ಮತ್ತು ರಂಗಸ್ವಾಮಿಯೇ ಬರ್ಬರವಾಗಿ ಹತ್ಯೆ ನಡೆಸಿರೋದನ್ನು ಬೆಳಕಿಗೆ ತಂದಿದ್ದಾರೆ. ಅಸಲಿಗೆ ಅಂದು ಕುಡಿದ ಮತ್ತಿನಲ್ಲಿ ಮಂಜುನಾಥ ಕಾಳಮ್ಮ ಎಂಬಾಕೆಗೆ ಹಲ್ಲೆ ಮಾಡಿದ್ದ ಕಾರಣಕ ಆಕೆಯ ಮಕ್ಕಳಾದ ರಂಗಸ್ವಾಮಿ ಹಾಗೂ ಕುಮಾರ ಕೋಪಗೊಂಡಿದ್ದರು.. ಮಂಜುನಾಥನಿಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಮಧ್ಯರಾತ್ರಿ ಮನೆ ಬಳಿ ಬಂದಿದ್ದ ಮಂಜುನಾಥನ ಮೇಲೆ ಇಬ್ಬರೂ ದಾಳಿ ಮಾಡಿದ್ದರು. ಇವರ ಜೊತೆಗೆ ಮಂಜುನಾಥ್ ಸಹೋದರ ಉಮೇಶ ಕೂಡ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮನೆಲಿ ನೈಟಿ ಹಾಕಿಕೊಳ್ತಿದ್ಲು ಎಂದು ಹೆಂಡತಿಯನ್ನೇ ಸುಟ್ಟ ಪತಿ! ಪತ್ನಿಯ ಸ್ಥಿತಿ ಗಂಭೀರ

ಆರೋಪಿ ಉಮೇಶ ಕೆಲ ದಿನಗಳ ಹಿಂದೆಯಷ್ಟೇ ಅನಾರೋಗ್ಯ ಹಿನ್ನಲೆ ಮಗಳನ್ನು ಕಳೆದುಕೊಂಡಿದ್ದ. ಆಕೆಯ ಸಾವಿಗೆ ಮಂಜುನಾಥನೇ ಕಾರಣ ಎಂಬ ಆರೋಪ ಇತ್ತು. ಹೀಗಾಗಿ ಇವರೆಲ್ಲ ಸೇರಿಕೊಂಡು ಮಾಡಿರುವ ಹಲ್ಲೆಗೆ ಮದ್ಯದ ಅಮಲಿನಲ್ಲಿದ್ದ ಮಂಜುನಾಥ ಉಸಿರು ಚೆಲ್ಲಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹುಲಿಯೂರುದುರ್ಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಕಾರಣ ಕ್ಷುಲ್ಲಕ ವಿಚಾರ ಎಂದು ಹೇಳಲಾಗುತ್ತಿದೆಯಾದರೂ, ಮತ್ತೇನಾದರೂ ಬಲವಾದ ವಿಷಯ ಮರ್ಡರ್​​ ಹಿಂದೆ ಇತ್ತಾ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:19 pm, Wed, 22 April 26

Source link

ಕಂಡೋರ ಕಾಸಲ್ಲಿ ಶೋಕಿ ಮಾಡ್ತಿದ್ದ ಶ್ರೀಕಿ: ಬೇನಾಮಿಯಾಗಿ ಶ್ರೀಕೃಷ್ಣ ಸಂಪಾದಿಸಿದ್ದ ಕೋಟಿ ಕೋಟಿ ಆಸ್ತಿ – Kannada News | Bitcoin Scam Kingpin Sriki’s Benami Empire: ED Uncovers Lavish Life

ಬೆಂಗಳೂರು, ಏಪ್ರಿಲ್​​ 22: ಬಿಟ್ ಕಾಯಿನ್ ಕಿಂಗ್ ಶ್ರೀಕಿ (Sriki) ಲೈಫ್ ಸ್ಟೈಲ್ ಯಾವ ಕುಬೇರನಿಗೂ ಕಡಿಮೆ ಇರಲಿಲ್ಲ. ಸ್ವಂತ ಅಂತ ಏನಿಲ್ಲ ಅಂದರೂ ಬೇರೆಯವರ ದುಡ್ಡಲ್ಲಿ ಈತ ಶೋಕಿ ಮಾಡುತ್ತಿದ್ದ. ಇಡಿ ದಾಳಿ ಬೆನ್ನಲ್ಲೆ ಶ್ರೀಕಿಯ ಒಂದೊಂದೆ ಲೀಲೆಗಳು ಹೊರಬರುತ್ತಿವೆ. ಬೇನಾಮಿಯಾಗಿ ಶ್ರೀಕಿ ಕೋಟಿ ಕೋಟಿ ಆಸ್ತಿ (Property) ಸಂಪಾದಿಸಿದ್ದ.

ಶ್ರೀಕಿ ಪರಿಚಯವೇ ನಲಪಾಡ್​ಗೂ ಸಂಕಷ್ಟ

ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ, ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್. ನಿನ್ನೆಯಷ್ಟೆ ಇ.ಡಿ ಅಧಿಕಾರಿಗಳು ದಾಳಿ ಮಾಡಿ ಈತನ‌ ಮನೆಯಿಂದ ಒಂದಷ್ಟು ದಾಖಲೆಗಳನ್ನ ವಶಕ್ಕೆ ಪಡೆದಿದ್ದರು. ಜಯನಗರದಲ್ಲಿ ಅಪ್ಪ ಮಾಡಿಟ್ಟ ಮನೆಯಲ್ಲಿ ಶ್ರೀಕಿ ಶೋಕಿ ಜೀವನ ನಡೆಸುತ್ತಿದ್ದ. ಇದೇ ಶ್ರೀಕಿ ಪರಿಚಯವೇ ನಲಪಾಡ್​ಗೂ ಸಂಕಷ್ಟ ತಂದೊಡ್ಡಿದೆ. ಮೊಹಮ್ಮದ್ ನಲಪಾಡ್ ಸೋದರ ಉಮರ್ ಮೂಲಕ ಶ್ರೀಕಿ ಪರಿಚಯವಾಗುತ್ತದೆ. ಆ ಬಳಿಕ ಮೊಹಮ್ಮದ್ ನಲಾಪಾಡ್ ಮತ್ತು ಸೋದರ ಉಮರ್​ಗೆ ಶ್ರೀಕಿ ಕಾಮನ್ ಫ್ರೆಂಡ್ ಆಗಿದ್ದರು. ಉಮರ್ ಸಹಪಾಠಿಯಾಗಿದ್ದ ಶ್ರೀಕಿ ಅಲಿಯಾಸ್ ಶ್ರೀ ಕೃಷ್ಣ ನಂಟಿನಿಂದಲೇ ಇಡಿ ದಾಳಿಗೆ ಮಹಮ್ಮದ್ ನಲಪಾಡ್ ಮತ್ತು ಹಕೀಬ್ ಒಳಗಾಗಿದ್ದರು.

ಇದನ್ನೂ ಓದಿ: ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನ ನಲಪಾಡ್​ಗೆ ಕುತ್ತು ತಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ

ತನಿಖಾ ಏಜೆನ್ಸಿಗಳಿಗೂ ಈ ಶ್ರೀಕಿ ಸವಾಲಾಗಿದ್ದ. ಸ್ವಂತ ಮೊಬೈಲ್ ಬಳಸಲ್ಲ, ತನ್ನದೇ ಲ್ಯಾಪ್ ಟಾಪ್ ಕೂಡ ಹೊಂದಿಲ್ಲ. ಸ್ವಂತಕ್ಕೆ ಬ್ಯಾಂಕ್ ಅಕೌಂಟ್, ಕ್ರೆಡಿಟ್ ಕಾರ್ಡ್ ಕೂಡ ಇಲ್ಲದೇ ಬಿಂದಾಸ್ ಜೀವನ ನಡೆಸುತ್ತಿದ್ದ. ಕೋಟಿ ಕೋಟಿ ಬಿಟ್ ಕಾಯಿನ್ ಡೀಲ್ ಮಾಡುವ ಶ್ರೀಕಿಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಚಾರ್ಟರ್ಡ್ ಫ್ಲೈಟ್, ಹೈಫೈ ಫ್ಲಾಟ್, ರೆಸಾರ್ಟ್​ಗಳಲ್ಲಿ ಸ್ಟೇ ಮಾಡುವ ಶ್ರೀಕಿ ಡ್ರಗ್ ಅಡಿಕ್ಟ್ ಆಗಿದ್ದ. ಇನ್ನು ಸುತ್ತಾಡುವುದಕ್ಕೆ ಆತನ ಬಳಗ ಐಶಾರಾಮಿ ಕಾರುಗಳ ವ್ಯವಸ್ಥೆ ಮಾಡುತ್ತಿತ್ತು.

ಶ್ರೀಕಿಗಾಗಿ ಪೈಪೋಟಿ 

ಹ್ಯಾಕರ್ಸ್ ಶ್ರೀಕೃಷ್ಣನನ್ನ ಬಳಸಿಕೊಂಡು, ಸರ್ಕಾರದ ವೆಬ್ ಸೈಟ್ ಹ್ಯಾಕ್ ಮಾಡುವುದು, ಪೋಕರ್ ಗೇಮ್ ಹ್ಯಾಕ್ ಮಾಡಿ ಕೋಟಿ ಕೋಟಿ ಮೌಲ್ಯದ ಬಿಟ್ ಕಾಯಿನ್ ಖದೀಸಲಾಗುತ್ತಿತ್ತು. ಬಿಟ್ ಕಾಯಿನ್ ವರ್ಗಾವಣೆ, ಕಂಪನಿಗಳ ಡಾಟಾಗೆ ಖನ್ನಾ ಹಾಕುವ ಹ್ಯಾಕರ್ ಶ್ರೀಕಿ ಜೊತೆಗಿದ್ದರೆ ಹ್ಯಾಕಿಂಗ್ ಕೆಲಸಕ್ಕೂ ಸಹಕಾರಿ ಅಂತಾ ಜೊತೆಗಿಟ್ಟುಕೊಳ್ಳಲು ಪೈಪೋಟಿ ಕೂಡ ಶುರುವಾಗಿತ್ತು. ಅಲ್ಲದೇ ಹ್ಯಾಕರ್ ಶ್ರೀಕಿಗೆ ಪೊಲೀಸ್ ಕೇಸ್, ಅರೆಸ್ಟ್ ಕಾಮನ್ ಆಗಿತ್ತು.

ತನ್ನ ಅಕೌಂಟ್​ನಲ್ಲಿ ಹಣದ ವ್ಯವಹಾರ ನಡೆಸದೇ, ತನ್ನ ಡಿವೈಸ್​ಗಳನ್ನ ಬಳಸದ ಶ್ರೀಕಿ, ಯೂರೋಪ್​ನಲ್ಲಿ ವಿದ್ಯಾಭ್ಯಾಸದ ವೇಳೆ ಇಂಟರ್ ನ್ಯಾಷನಲ್ ಹ್ಯಾಕರ್ಸ್ ಪರಿಚಯ ಮಾಡಿಕೊಂಡಿದ್ದ. ಇದೇ ಪರಿಚಯದಿಂದ ಹ್ಯಾಕರ್ಸ್ ಸಖ್ಯ ಬೆಳೆಸಿ ಹ್ಯಾಕರ್ಸ್ ಆದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಪೊಲೀಸರ ತನಿಖೆ ವೇಳೆ ಹಲವು ವಿಚಾರ ಹಂಚಿಕೊಂಡಿದ್ದಾನೆ.

ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ

ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿರುವ ಶ್ರೀಕಿ, ಕನಕಪುರ ರಸ್ತೆಯ ಕೋಲಗೊಂಡನಹಳ್ಳಿಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾನೆ. ಶ್ರೀಧರ್ ಮತ್ತು ಮನೋಹರ್ ಎಂಬ ಇಬ್ಬರ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಆಸ್ತಿ ಸಂಪಾದನೆ ಮಾಡಿದ್ದಾನೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್‌ ಕುಟುಂಬಕ್ಕೆ ಇ.ಡಿ ಶಾಕ್: ನಲಪಾಡ್​ಗೆ ಉರುಳಾಯ್ತಾ ಬಿಟ್ ಕಾಯಿನ್ ಹಗರಣ!

ಒಟ್ಟಾರೆ ಹ್ಯಾಕರ್ ಶ್ರೀಕಿಯನ್ನ ಬಳಸಿಕೊಂಡು ಕೋಟಿ ಕೋಟಿ ಹಣ ಬಾಚಿಕೊಂಡಿರುವವರ ಸಂಖ್ಯೆ ಜಾಸ್ತಿನೇ ಇದೆ. ಕಂಡೋರ ಅಕೌಂಟ್​ಗೆ ಖನ್ನಾ ಹಾಕುವ ಶ್ರೀಕಿ ಮಾತ್ರ ಹೈಫೈ ಲೈಫ್ ಲೀಡ್ ಮಾಡುತ್ತಾ ತನಿಖಾ ಸಂಸ್ಥೆಗಳ‌ ತಲೆ ನೋವಿಗೆ ಕಾರಣವಾಗಿದ್ದಾನೆ.

ವರದಿ: ವಿಕಾಸ್ Tv9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚುನಾವಣಾ ಆಯೋಗದಿಂದ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ 1,000 ಕೋಟಿಗೂ ಹೆಚ್ಚು ಹಣ ವಶಕ್ಕೆ – Kannada News | Election Commission reports over 1000 crore Rs Poll seizures in Tamil Nadu and West Bengal

ನವದೆಹಲಿ, ಏಪ್ರಿಲ್ 22: ಪಶ್ಚಿಮ ಬಂಗಾಳ (West Bengal Assembly Elections) ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ (Tamil Nadu Assembly Elections) ನಡೆಯಲಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮತದಾರರನ್ನು ಆಕರ್ಷಿಸಲು ಉದ್ದೇಶಿಸಲಾದ ನಗದು, ಮಾದಕ ದ್ರವ್ಯಗಳು ಮತ್ತು ಮದ್ಯ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಶಪಡಿಸಿಕೊಳ್ಳುವಿಕೆಗಳು 1000 ಕೋಟಿ ರೂ.ಗಳನ್ನು ದಾಟಿವೆ ಎಂದು ಚುನಾವಣಾ ಆಯೋಗ (Election Commission) ಇಂದು ತಿಳಿಸಿದೆ.

ಈ ವರ್ಷದ ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹಣ, ಆಲ್ಕೋಹಾಲ್, ಡ್ರಗ್ಸ್, ಅಮೂಲ್ಯವಾದ ಲೋಹಗಳು ಮತ್ತು ಉಚಿತ ವಸ್ತುಗಳು ಸೇರಿದಂತೆ 472 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಾಗೇ, ತಮಿಳುನಾಡಿನಲ್ಲಿ 599 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ 5 ಸಾವಿರಕ್ಕೂ ಹೆಚ್ಚು ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಮತ್ತು 5 ಸಾವಿರಕ್ಕೂ ಹೆಚ್ಚು ಸ್ಟ್ಯಾಟಿಕ್ ಸರ್ವೈಲೆನ್ಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ನಿರ್ದಿಷ್ಟ ಸಮುದಾಯದಲ್ಲಿ 4 ಮದುವೆ ನಿಷೇಧಿಸುತ್ತೇವೆ; ಅಮಿತ್ ಶಾ ಪ್ರತಿಜ್ಞೆ

ಪಶ್ಚಿಮ ಬಂಗಾಳದಲ್ಲಿ ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. ಏಪ್ರಿಲ್ 29ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ನಾಳೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿದಿನ ಕಿತ್ತಳೆ ತಿಂದರೆ ಫ್ಯಾಟಿ ಲಿವರ್ ಕಡಿಮೆಯಾಗುತ್ತದೆಯೇ? ಅಧ್ಯಯನ ಏನು ಹೇಳುತ್ತದೆ? – Kannada News | Can Oranges Reduce Fatty Liver? Research and Diet Tips

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಅಧಿಕವಾಗಿ ಕಂಡುಬರುತ್ತಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಈ ದೊಡ್ಡ ಸಮಸ್ಯೆಯನ್ನು ಕೇವಲ ಒಂದು ಹಣ್ಣನ್ನು ಸೇವನೆ ಮಾಡುವುದರಿಂದ ತಡೆಗಟ್ಟಬಹುದು ಎಂದರೆ ನಮಬುತ್ತೀರಾ… ಹೌದು, ಪ್ರತಿದಿನ ಕಿತ್ತಳೆ ಹಣ್ಣು ತಿನ್ನುವುದರಿಂದ ಫ್ಯಾಟಿ ಲಿವರ್ ನಿಯಂತ್ರಣ ಸಾಧ್ಯವೆಂಬ ಹೊಸ ಅಧ್ಯಯನ ಎಲ್ಲರ ಗಮನ ಸೆಳೆದಿದೆ. ಹಾಗಾದರೆ ಅಧ್ಯಯನದಲ್ಲಿ ಹೇಳಿರುವುದೇನು, ಕಿತ್ತಳೆ ನಿಜವಾಗಿಯೂ ಲಿವರ್‌ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಅಧ್ಯಯನದಲ್ಲಿ ಹೇಳಿರುವುದೇನು?

‘ನ್ಯೂಟ್ರಿಯಂಟ್ಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 30ರಿಂದ 65 ವರ್ಷದ 60 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು. ಇವರಲ್ಲಿ ಅರ್ಧ ಮಂದಿಗೆ ನಾಲ್ಕು ವಾರಗಳ ಕಾಲ ಪ್ರತಿದಿನ ಸುಮಾರು 400 ಗ್ರಾಂ ಬೀಜವಿಲ್ಲದ ಕಿತ್ತಳೆ ಹಣ್ಣುಗಳನ್ನು ನೀಡಲಾಗಿದೆ. ಈ ಗುಂಪಿನಲ್ಲಿ ಲಿವರ್‌ಗೆ ಸಂಬಂಧಿಸಿದ ಹಲವಾರು ಆರೋಗ್ಯ ಸೂಚಕಗಳಲ್ಲಿ ಸುಧಾರಣೆ ಕಂಡುಬಂದಿದ್ದು, ಲಿವರ್‌ನಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುವುದು ಗಮನಿಸಲಾಗಿದೆ.

ಬೀಜವಿಲ್ಲದ ಕಿತ್ತಳೆ ಎಂದರೇನು?

ಸಾಮಾನ್ಯವಾಗಿ ಬೀಜವಿಲ್ಲದ ಕಿತ್ತಳೆ ಹಣ್ಣುಗಳನ್ನು ನವೇಳಿನಾ ಕಿತ್ತಳೆ ಎಂದು ಕರೆಯಲಾಗುತ್ತದೆ. ಇದು ಬೀಜರಹಿತ ತಳಿಯ ಕಿತ್ತಳೆ. ಇದರ ಮೂಲ ಉತ್ಪಾದನೆ ಸ್ಪೇನ್ ದೇಶದಲ್ಲಿ ನಡೆಯುತ್ತದೆ. ಇದು ಸಿಹಿ ರುಚಿಯುಳ್ಳದಾಗಿದ್ದು, ವಿಟಮಿನ್ C ಮತ್ತು ಪಾಲಿಫೀನಾಲ್‌ಗಳ ಸಮೃದ್ಧ ಮೂಲವಾಗಿದೆ. ಈ ಪೋಷಕಾಂಶಗಳು ಮೆಟಾಬಾಲಿಸಂ ಸುಧಾರಿಸಲು ಮತ್ತು ಲಿವರ್ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಕಿತ್ತಳೆಯಲ್ಲಿರುವ ಆಂಟಿಆಕ್ಸಿಡೆಂಟ್ಸ್ ಮತ್ತು ಫೈಬರ್ ದೇಹದ ಡಿಟಾಕ್ಸಿಫಿಕೇಶನ್ ಪ್ರಕ್ರಿಯೆಗೆ ನೆರವಾಗುತ್ತವೆ. ಇದು ಲಿವರ್ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ. ಆದರೆ, ಕಿತ್ತಳೆ ಮಾತ್ರದಿಂದಲೇ ಫ್ಯಾಟಿ ಲಿವರ್ ಸಂಪೂರ್ಣವಾಗಿ ಗುಣವಾಗುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಈ ಆಹಾರಗಳನ್ನು ಸೇವನೆ ಮಾಡ್ತೀರಾ? ಹಾಗಿದ್ರೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ ಹುಷಾರ್!

ಈ ಕಿತ್ತಳೆ ಭಾರತದಲ್ಲಿಯೂ ಲಭ್ಯವಿದೆ. ಆದ್ದರಿಂದ, ವೈದ್ಯರ ಸಲಹೆಯೊಂದಿಗೆ ಇದನ್ನು ಆಹಾರದಲ್ಲಿ ಸೇರಿಸಬಹುದು. ವಿಶೇಷವಾಗಿ ಫ್ಯಾಟಿ ಲಿವರ್ ಇರುವವರಿಗೆ ಇದು ಸಹಾಯಕವಾಗಬಹುದು. ಆದರೆ ಜ್ಯೂಸ್ ರೂಪದಲ್ಲಿ ಅಲ್ಲ, ಹಣ್ಣನ್ನೇ ತಿನ್ನುವುದು ಉತ್ತಮ. ಇನ್ನು, ಮಧುಮೇಹ ಇರುವವರು ಕಿತ್ತಳೆ ಸೇವನೆಯನ್ನು ಮಿತವಾಗಿ ಮಾಡಬೇಕು. ಯಾವುದೇ ಹೊಸ ಆಹಾರ ಪದ್ಧತಿ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯೊಂದಿಗೆ ಕಿತ್ತಳೆ ಸೇವನೆ ಮಾಡಿದರೆ ಲಿವರ್ ಆರೋಗ್ಯವನ್ನು ಸುಧಾರಿಸಲು ಸಹಕಾರಿ ಆಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್ – Kannada News | Atal Pension Yojana, investment amount, period, pension and other details

ಕೇಂದ್ರ ಸರ್ಕಾರದಿಂದ ನಡೆಸಲಾಗುವ ಅಟಲ್ ಪೆನ್ಷನ್ ಯೋಜನೆಗೆ (APY- Atal Pension Yojana) ನೊಂದಾಯಿತರಾದವರ ಸಂಖ್ಯೆ ಏಪ್ರಿಲ್ 21ಕ್ಕೆ 9 ಕೋಟಿ ಗಡಿ ದಾಟಿದೆ. ಅದರಲ್ಲೂ ಒಂದೇ ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಸಬ್​ಸ್ಕ್ರೈಬರ್​ಗಳು ಬಂದಿದ್ದಾರೆ. 2025-26ರ ಹಣಕಾಸು ವರ್ಷದಲ್ಲಿ ಎಪಿವೈ ಸ್ಕೀಮ್​ಗೆ ನೊಂದಾಯಿಸಿಕೊಂಡವರ ಸಂಖ್ಯೆ ಬರೋಬ್ಬರಿ 1.35 ಕೋಟಿ. 2015ರಲ್ಲಿ ಆರಂಭಗೊಂಡ ಈ ಸ್ಕೀಮ್​ನಲ್ಲಿ ಯಾವುದೇ ವರ್ಷದಲ್ಲಿ ಅತಿಹೆಚ್ಚು ಸಬ್​ಸ್ಕ್ರೈಬರ್​ಗಳು ಸಿಕ್ಕಿದ್ದು ಇದೇ ಮೊದಲು.

ಏನಿದು ಅಟಲ್ ಪೆನ್ಷನ್ ಯೋಜನಾ?

ಅಟಲ್ ಪೆನ್ಷನ್ ಯೋಜನೆಯು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು, ಬಡವರು ಮೊದಲಾದ ದುರ್ಬಲ ಮಂದಿಯನ್ನು ಗುರಿಯಾಗಿಸಿ ರೂಪಿಸಲಾಗಿರುವ ಪಿಂಚಣಿ ಸ್ಕೀಮ್. ಇದರಲ್ಲಿ ವೃದ್ಧಾಪ್ಯದಲ್ಲಿ 5,000 ರೂವರೆಗೆ ಪಿಂಚಣಿ ದೊರಕುವ ಅವಕಾಶ ಇದೆ. ಬಹಳ ಕಡಿಮೆ ಪ್ರೀಮಿಯಮ್ ಹಣ ಕಟ್ಟಿದರೆ ಸಾಕು.

18 ವರ್ಷದಿಂದ 40 ವರ್ಷದವರೆಗಿನ ವಯೋಮಾನದವರು ಎಪಿಐ ಪೆನ್ಷನ್ ಸ್ಕೀಮ್​ಗೆ ಸಬ್​ಸ್ಕ್ರೈಬ್ ಆಗಬಹುದು. ಆದರೆ, ಫಲಾನುಭವಿಗಳು ಆದಾಯ ತೆರಿಗೆ ಪಾವತಿದಾರರಾಗಿರುವಂತಿಲ್ಲ.

ಇದನ್ನೂ ಓದಿ: ಮಾಸಿಕ 20,500 ರೂ ಆದಾಯ ತರಬಲ್ಲ ಪೋಸ್ಟ್ ಆಫೀಸ್​ನ ಎಸ್​ಸಿಎಸ್​ಎಸ್ ಸ್ಕೀಮ್

5,000 ರೂ ಪಿಂಚಣಿ ಪಡೆಯಲು ಎಷ್ಟು ಹೂಡಿಕೆ ಬೇಕು?

ಈ ಯೋಜನೆಯಲ್ಲಿ 60 ವರ್ಷ ವಯಸ್ಸಿನವರೆಗೂ ಹೂಡಿಕೆ ಮಾಡಬಹುದು. ಕನಿಷ್ಠ ಖಾತ್ರಿ ಪಿಂಚಣಿ 1,000 ರೂನಿಂದ 5,000 ರೂವರೆಗೆ ಇದೆ. ಅದಕ್ಕೆ ಅನುಗುಣವಾಗಿ ಪ್ರೀಮಿಯಮ್ ಇರುತ್ತದೆ.

18ನೇ ವಯಸ್ಸಿನಲ್ಲಿ ಸಬ್​ಸ್ಕ್ರೈಬ್ ಆದರೆ 42 ವರ್ಷ ಕಾಲ ಹೂಡಿಕೆ ಮಾಡಬಹುದು. ತಿಂಗಳಿಗೆ 42 ರೂನಂತೆ 42 ವರ್ಷ ಹೂಡಿಕೆ ಮಾಡಬಹುದು. 60ರ ವಯಸ್ಸಿನ ನಂತರ 1,000 ರೂಗಳ ಮಾಸಿಕ ಪಿಂಚಣಿ ಸಿಗುತ್ತದೆ. ಈ ಅವಧಿಯಲ್ಲಿ ನೀವು ಕಟ್ಟುವ ಪ್ರೀಮಿಯಮ್ ಹಣದ ಒಟ್ಟು ಮೊತ್ತ ಕೇವಲ 21,000 ರೂಗಿಂತ ತುಸು ಹೆಚ್ಚು.

5,000 ರೂ ಪಿಂಚಣಿ ಬೇಕೆಂದರೆ ತಿಂಗಳಿಗೆ 210 ರೂ ಅನ್ನು 42 ವರ್ಷ ಹೂಡಿಕೆ ಮಾಡಬೇಕು. ಈ 42 ವರ್ಷದಲ್ಲಿ ನೀವು ಕಟ್ಟುವ ಪ್ರೀಮಿಯಮ್ 1,05,840 ರೂ ಮಾತ್ರ.

ನೀವು ಹೆಚ್ಚು ವಯಸ್ಸಿನಲ್ಲಿ ಸಬ್​ಸ್ಕ್ರೈಬ್ ಆದರೆ, ಉದಾಹರಣೆಗೆ, 40ನೇ ವಯಸ್ಸಿನಲ್ಲಿ ಎಪಿವೈ ಸ್ಕೀಮ್ ಪಡೆದರೆ ಹೂಡಿಕೆ ಅವಧಿ 20 ವರ್ಷ ಮಾತ್ರವೇ ಇರುತ್ತದೆ. ನಿಮಗೆ 5,000 ರೂ ಪಿಂಚಣಿ ಗುರಿ ಇದ್ದರೆ ನೀವು ತಿಂಗಳಿಗೆ 1,454 ರೂ ಹಣ ಕಟ್ಟುತ್ತಾ ಹೋಗಬೇಕಾಗುತ್ತದೆ.

ಇದನ್ನೂ ಓದಿ: ಹತ್ತು ಕೋಟಿ ರೂ ಹಣ ಸೇರಿಸಲು ಎಷ್ಟು ಸಮಯ ಮತ್ತು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

ಹೂಡಿಕೆ ಅವಧಿಯಲ್ಲಿ ಮೃತಪಟ್ಟರೆ?

ಎಪಿವೈ ಚಂದಾದಾರರು 60ರ ವಯಸ್ಸು ತಲುಪುವ ಮುನ್ನವೇ ಅಕಸ್ಮಾತ್ ಆಗಿ ಮೃತಪಟ್ಟರೆ, ಆ ಸ್ಕೀಮ್​ನ ಹಕ್ಕು ಅವರ ಸಂಗಾತಿಗೆ ಹೋಗುತ್ತದೆ. ಅವರು ಹೂಡಿಕೆ ಮುಂದುವರಿಸಬಹುದು. ಮೃತರ ವಯಸ್ಸು 60 ವರ್ಷ ದಾಟುವವರೆಗೂ ಹೂಡಿಕೆ ಮಾಡಬಹುದು. ಇಲ್ಲದಿದ್ದರೆ ಲಂಪ್ಸಮ್ ಹಣ ಹಿಂಪಡೆಯಬಹುದು. ಹೂಡಿಕೆ ಮುಂದುವರಿಸಿ ನಂತರ ಪಿಂಚಣಿ ಸೌಲಭ್ಯ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೊರಗೆ ಬಂದು ಮಾತಾಡ್ಲಿ: ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು – Kannada News | Women Stops Minister Shivaraj tangadagi car And demanding drinking Water at koppal

ಕೊಪ್ಪಳ, (ಏಪ್ರಿಲ್ 22): ಕರ್ನಾಟಕದಲ್ಲಿ ತೀವ್ರ ಬಿಸಿಲ ಜೊತೆಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ಹಲವು ಜಿಲ್ಲೆಗಳಲ್ಲಿ ಜನರಿಗೆ ಒಂದೆಡೆ ಬಿಸಿಲು ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ನೀರು ಸಿಗುತ್ತಿಲ್ಲ. ಇದರಿಂದ ಜನ ಕಂಗಾಲಾಗಿದ್ದಾರೆ. ಅದರಂತೆ ಕೊಪ್ಪಳದಲ್ಲೂ ನೀರಿನ ಕೊರತೆ ಎದುರಾಗಿದ್ದು, ಇದರಿಂದ ರೊಚ್ಚಿಗೆದ್ದ ಮಹಿಳೆಯರು ಜಿಲ್ಲಾ ಉಸ್ತುವಾರಿ ಕಾರಿಗೆ ಅಡ್ಡಿಹಾಕಿ ಆಕ್ರೋಶ ಹೊರಹಾಕಿದ್ದಾರೆ. ಹೌದು…ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ತೆರಳುತ್ತಿದ್ದ ವೇಳೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ಮಹಿಳೆಯರು ಖಾಲಿ ಕೊಡದೊಂದಿಗೆ ಸಚಿವ ಶಿವರಾಜ್ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಸಭೆಯಲ್ಲಿ ಸಚಿವರ ಪುತ್ರನಿಗೆ ರಾಜ ಮರ್ಯಾದೆ: ಕೈಕಟ್ಟಿ ನಿಂತ ಅಧಿಕಾರಿಗಳು

Source link

ಮುಂಬೈನಲ್ಲಿ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ತಿಂಗಳ ಬಾಡಿಗೆ ಎಷ್ಟು ಗೊತ್ತೆ? – Kannada News | Allu Arjun rented a luxurious house in Mumbai

‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್ (Allu Arjun) ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಪ್ರತಿ ಸಿನಿಮಾಕ್ಕೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟ ಆಗಿದ್ದ ಅಲ್ಲು ಅರ್ಜುನ್, ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ತೆಲುಗು ಮಾತ್ರವಲ್ಲದೆ ಬಾಲಿವುಡ್​​ನಿಂದಲೂ ಅವರಿಗೆ ಅವಕಾಶಗಳು ಬರುತ್ತಿವೆ. ಹಲವಾರು ಜಾಹೀರಾತುಗಳಲ್ಲಿ ಸಹ ನಟಿಸುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ಅಲ್ಲು ಅರ್ಜುನ್ ಅವರು ಮುಂಬೈನಲ್ಲಿ ಐಶಾರಾಮಿ ಮನೆಯೊಂದನ್ನು ಬಾಡಿಗೆ ಪಡೆದಿದ್ದಾರೆ.

ಅಲ್ಲು ಅರ್ಜುನ್ ಮುಂಬೈನ ಪ್ರತಿಷ್ಠಿತ ಏರಿಯಾನಲ್ಲಿ ಸೀ ಫೇಸ್ ಅಪಾರ್ಟ್​​ಮೆಂಟ್​​ನಲ್ಲಿ ಫ್ಲ್ಯಾಟ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಹೈ-ಎಂಡ್ ಅಪಾರ್ಟ್‌ಮೆಂಟ್‌ಗಾಗಿ ಪ್ರತಿ ತಿಂಗಳು ಬರೋಬ್ಬರಿ 16 ಲಕ್ಷ ರೂಪಾಯಿ ಬಾಡಿಗೆ ಪಾವತಿಸಲಿದ್ದಾರೆ. ಕಳೆದ ಕೆಲವು ಸಮಯದಿಂದ ಅಲ್ಲು ಅರ್ಜುನ್ ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆಗಳು ಮತ್ತು ನಿರ್ದೇಶಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಕೆಲಸಗಳಿಗಾಗಿ ಪದೇ ಪದೇ ಮುಂಬೈಗೆ ಪ್ರಯಾಣಿಸಬೇಕಿರುವುದರಿಂದ, ಹೋಟೆಲ್‌ನಲ್ಲಿ ಉಳಿಯುವ ಬದಲು ಸ್ವಂತದೊಂದು ನೆಲೆ ಇರಲಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್ ಅವರು ಹೊಸ ಉದ್ಯಮವನ್ನು ಸಹ ಪ್ರಾರಂಭ ಮಾಡಲಿದ್ದು, ಇದರಿಂದಾಗಿ ಮುಂಬೈಗೆ ಬಂದು ಹೋಗುವುದು ಹೆಚ್ಚಾಗಲಿದೆ. ಇದೇ ಕಾರಣಕ್ಕೆ ಈ ಐಶಾರಾಮಿ ಅಪಾರ್ಟ್​​ಮೆಂಟ್ ಅನ್ನು ಅವರು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ಅವರು ಮನೆ ಬಾಡಿಗೆಗೆ ಪಡೆಯುವ ಸುದ್ದಿ ಹೊರಬರುತ್ತಿದ್ದಂತೆ, ಅಲ್ಲು ಅರ್ಜುನ್, ಹೈದರಾಬಾದ್ ಬಿಟ್ಟು ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತು. ಆದರೆ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್, ಅದನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದು, ಅಲ್ಲು ಅರ್ಜುನ್ ಮತ್ತು ಕುಟುಂಬ ಮುಂಬೈನಲ್ಲೇ ನೆಲೆಸಲಿದೆ ಎಂದಿದ್ದಾರೆ.

ಇದನ್ನೂ ಓದಿ:ದೀಪಿಕಾಗಾಗಿ ಶೂಟಿಂಗ್ ಶೆಡ್ಯೂಲ್ ಬದಲಿಸಲಿರುವ ಅಲ್ಲು ಅರ್ಜುನ್, ಶಾರುಖ್ ಖಾನ್

ಅಲ್ಲು ಅರ್ಜುನ್ ಅವರು ಪ್ರಸ್ತುತ ಅಟ್ಲಿ ನಿರ್ದೇಶಿಸುತ್ತಿರುವ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಮಲಯಾಳಂ ಸ್ಟಾರ್ ನಟ ಬಾಸಿಲ್ ಜೋಸೆಫ್ ನಿರ್ದೇಶನದ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಲೋಕೇಶ್ ಕನಗರಾಜ್ ಅವರ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಇವುಗಳ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಲಿರುವ ಆಕ್ಷನ್ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಪ್ರಶಾಂತ್ ನೀಲ್ ಸಹ ಅಲ್ಲು ಅರ್ಜುನ್​​ಗಾಗಿ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೀ5 ಒಟಿಟಿಯಲ್ಲಿ ಏ.24ರಿಂದ ಪ್ರಸಾರ ಆಗಲಿದೆ ‘ಜೆರಾಕ್ಸ್’ ವೆಬ್ ಸರಣಿ; ಏನಿದರ ಕಥೆ? – Kannada News | Zee5 to air Jerox web series from April 24 ft Nagabhushana Payal Chengappa

‘ಬ್ಲಿಂಕ್‌’ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರು ‘ಜೆರಾಕ್ಸ್‌’ (Jerox) ವೆಬ್ ಸರಣಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದರಲ್ಲಿ ನಾಗಭೂಷಣ (Nagabhushana), ಪಾಯಲ್‌ ಚೆಂಗಪ್ಪ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಮಂಜು ಪಾವಗಡ, ಓಂ ಪ್ರಕಾಶ್‌ ರಾವ್‌, ಯಶವಂತ್‌ ಶೆಟ್ಟಿ, ಶ್ರೀವತ್ಸ, ವಿಜಯ್‌ ಪ್ರಸಾದ್‌, ಜಗ್ಗಪ್ಪ, ತುಕಾಲಿ ಸಂತು, ಸಿದ್ದು ಮಂಡ್ಯ, ಸುಧಾಕರ್‌ ಗೌಡ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಜೀ5 (zee5) ಒಟಿಟಿ ಮೂಲಕ ಏಪ್ರಿಲ್‌ 24ರಿಂದ ಈ ವೆಬ್‌ ಸರಣಿಯು ವೀಕ್ಷಣೆಗೆ ಲಭ್ಯವಾಗಲಿದೆ.

ಒಂದುವೇಳೆ ಜೆರಾಕ್ಸ್ ಕಾಪಿಗಳಿಗೆ ಜೀವ ಬಂದುಬಿಟ್ಟರೆ ಏನಾಗುತ್ತೆ? ಇಂಥ ಒಂದು ಕಥೆಯ ಎಳೆಯನ್ನೇ ಇಟ್ಟುಕೊಂಡು ‘ಜೆರಾಕ್ಸ್’ ವೆಬ್ ಸರಣಿ ಸಿದ್ಧವಾಗಿದೆ. ಇದರಲ್ಲಿ ಹಾಸ್ಯಭರಿತ ಕಹಾನಿ ಇದೆ. ಡಾರ್ಕ್ ಕಾಮಿಡಿ, ಥ್ರಿಲ್ಲರ್ ಮತ್ತು ಫ್ಯಾಂಟಸಿ ಅಂಶಗಳು ಇದರಲ್ಲಿ ಇವೆ. ‘ಡಾಲಿ ಪಿಕ್ಚರ್ಸ್‌’ ಮೂಲಕ ಈ ವೆಬ್ ಸಿರೀಸ್ ಮೂಡಿಬಂದಿದೆ. ಇತ್ತೀಚೆಗೆ ತಂಡದವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಕಥೆಯ ಬಗ್ಗೆ ಟ್ರೇಲರ್ ಸುಳಿವು ನೀಡಿದೆ.

‘ಜೆರಾಕ್ಸ್ ವೆಬ್ ಸಿರೀಸ್ ಟ್ರೇಲರ್:

ನಿರ್ಮಾಪಕ ಡಾಲಿ ಧನಂಜಯ್ ಮಾತನಾಡಿ, ‘ಜೆರಾಕ್ಸ್ ವೆಬ್ ಸಿರೀಸ್ ಭಾಗವಾಗಿರುವುದು ನನಗೆ ಖುಷಿ ಕೊಟ್ಟಿದೆ. ಇದರಲ್ಲಿ ಒಳ್ಳೊಳ್ಳೆ‌ಯ ಕಲಾವಿದರು ಕೆಲಸ ಮಾಡಿದ್ದಾರೆ. ಹೊಸ ಪ್ರತಿಭೆಗಳ ಜೊತೆ ಅನುಭವಿ ಪ್ರತಿಭೆಗಳು ಇದ್ದಾರೆ. ಇದರ ಬರವಣಿಗೆ ಹಾಗೂ ಎಕ್ಸಿಕ್ಯೂಷನ್ ಚೆನ್ನಾಗಿದೆ. ಬಹಳ ಖುಷಿಯಿಂದ ಇದನ್ನು ಪ್ರೆಸೆಂಟ್ ಮಾಡುತ್ತಿದ್ದೇವೆ. ಜೀ5 ಮೂಲಕ ಒಳ್ಳೊಳ್ಳೆಯ ಪ್ರತಿಭೆಗಳಿಗೆ ವೇದಿಕೆ ಸಿಗುತ್ತಿದೆ. ಇದು ಮತ್ತಷ್ಟು ದೊಡ್ಡದಾಗಲಿ’ ಎಂದು ಶುಭ ಕೋರಿದರು.

ಇದೇ ವೇಳೆ ಜೀ5 ಕನ್ನಡದ ಬಿಸ್ನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿದರು. ‘ಜೀ5 ಕನ್ನಡದಲ್ಲಿ ವೆಬ್ ಸರಣಿಯನ್ನು ಆರಂಭಿಸಿ 1 ವರ್ಷವಾಗಿದೆ. ಇದೊಂದು ಮಹತ್ವದ ಮೈಲಿಗಲ್ಲಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನಾವು ‘ಅಯ್ಯನ ಮನೆ’ ಪ್ರಾರಂಭಿಸಿದ್ದೆವು. ಈ ಒಂದು ವರ್ಷದ ಮೈಲಿಗಲ್ಲಿಗೆ ಸರಿಯಾಗಿ, ನಾವು ಈಗ ಏಪ್ರಿಲ್ 24ರಂದು ಜೆರಾಕ್ಸ್ ವೆಬ್ ಸರಣಿಯನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಿನಿಮಾಗೆ ಮಾತ್ರವಲ್ಲ, ನನ್ನ ಜೀವನಕ್ಕೂ ಡಾಲಿ ಕೊಡುಗೆ ಜಾಸ್ತಿ ಇದೆ: ನಾಗಭೂಷಣ

ಸುದ್ದಿಗೋಷ್ಠಿಯಲ್ಲಿ ನಟ ನಾಗಭೂಷಣ ಮಾತನಾಡಿದರು. ‘ವೆಬ್ ಸಿರೀಸ್ ನನಗೆ ಹೊಸದೇನೂ ಅಲ್ಲ. ಹನಿಮೂನ್ ವೆಬ್ ಸರಣಿಯಲ್ಲಿ ನಟಿಸಿದ್ದೆ. ಅದರ ನಿರ್ಮಾತೃ ಆರ್ ಜೆ ಪ್ರದೀಪ್. ಇಷ್ಟು ವರ್ಷದ ಬಳಿಕ ಮತ್ತೆ ವೆಬ್ ಸಿರೀಸ್​ನಲ್ಲಿ ನಟಿಸುತ್ತಿದ್ದೇನೆ. ಕನ್ನಡದ ಸಿನಿಮಾಗಳನ್ನು ತೆಗೆದುಕೊಳ್ಳಲು ಬಹಳಷ್ಟು ಒಟಿಟಿಗಳು ಹಿಂದೇಟು ಹಾಕುತ್ತಿವೆ. ಕನ್ನಡದಲ್ಲಿ ವೀಕ್ಷಕರ ಸಂಖ್ಯೆ ಕಡಿಮೆ ಎಂದು ನೆಪ ಹೇಳುತ್ತಾರೆ. ಆದರೆ ಇಂತಹ ಸಮಯದಲ್ಲಿ ಕನ್ನಡದಲ್ಲಿ ವೀಕ್ಷಕರು ಇದ್ದಾರೆ ಎಂಬುದನ್ನು ಜೀ5 ತೋರಿಸಿಕೊಟ್ಟಿದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

LSG vs RR IPL 2026 Live Score: ಸೂಪರ್ ಜೈಂಟ್ಸ್​​ಗೆ ರಾಯಲ್ಸ್ ಸವಾಲು

ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಎರಡೂ ತಂಡಗಳು ಕಳೆದ ಎರಡು ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಮೊದಲಾರ್ಧವನ್ನು ಗೆಲುವಿನೊಂದಿಗೆ ಕೊನೆಗೊಳಿಸುವ ಇರಾದೆಯಲ್ಲಿದೆ.

ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ 6 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎಲ್​ಎಸ್​ಜಿ ತಂಡ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಇನ್ನುಳಿದ 4 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವು ದಾಖಲಿಸಿದೆ. ಪ್ರಸ್ತುತ ತಂಡಗಳನ್ನು ಗಮನಿಸಿದರೆ ಉಭಯ ತಂಡಗಳು ಸಮಬಲದಿಂದ ಕೂಡಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಉತ್ತಮ ಪೈಪೋಟಿ ನಿರೀಕ್ಷಿಸಬಹುದು.

ರಾಜಸ್ಥಾನ್ ರಾಯಲ್ಸ್ ತಂಡ: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್​, ಕುಲದೀಪ್ ಸೇನ್.

ಲಕ್ನೋ ಸೂಪರ್ ಜೈಂಟ್ಸ್ ತಂಡ: ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬದೋನಿ, ಐಡೆನ್ ಮರ್ಕ್ರಾಮ್, ಮ್ಯಾಥ್ಯೂ ಬ್ರೀಟ್ಝ್ಕ್​, ಹಿಮ್ಮತ್ ಸಿಂಗ್,  ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಶಹಬಾಝ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಮಯಾಂಕ್ ಯಾದವ್, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್, ಆಕಾಶ್ ಸಿಂಗ್, ಮೊಹಮ್ಮದ್ ಶಮಿ, ಅರ್ಜುನ್ ತೆಂಡೂಲ್ಕರ್, ಅನ್ರಿಕ್ ನೋಕಿಯ, ಮುಕುಲ್ ಚೌಧರಿ, ನಮನ್ ತಿವಾರಿ, ಅಕ್ಷತ್ ರಘುವಂಶಿ, ಜೋಶ್ ಇಂಗ್ಲಿಸ್.

Source link

ಬಾಡಿಗೆ ಕಟ್ಟಲಾಗದೇ ಕೊಹ್ಲಿ ಒಡೆತನದಲ್ಲಿದ್ದ ಬ್ರ್ಯಾಂಡ್ ರೆಸ್ಟೋರೆಂಟ್​ ಬಂದ್​! – Kannada News | Bengaluru’s One8 Commune Closes Doors After Kohli Cuts Ties

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಸ್ತೂರ್​ಬಾ ರಸ್ತೆಯಲ್ಲಿದ್ದ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅವರ ಒಡೆತನದ (ಹಿಂದಿನ ಪಾಲುದಾರಿಕೆ) ‘ಒನ್8 ಕಮ್ಯೂನ್’ (One8 Commune) ರೆಸ್ಟೋರೆಂಟ್ ಅನ್ನು ಮುಚ್ಚಲಾಗಿದೆ. ಸುಮಾರು ₹2 ಕೋಟಿಗೂ ಅಧಿಕ ಬಾಡಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಮೇರೆಗೆ ಈ ಜನಪ್ರಿಯ ಹ್ಯಾಂಗೌಟ್ ತಾಣಕ್ಕೆ ಈಗ ಬೀಗ ಬಿದ್ದಿದೆ.

ಬಾಡಿಗೆ ಬಾಕಿ ಮತ್ತು ಕೋರ್ಟ್ ಆದೇಶ:

ಕಸ್ತೂರ್​ಬಾ ರಸ್ತೆ ರಸ್ತೆಯಲ್ಲಿರುವ ರತ್ನಂ ಕಾಂಪ್ಲೆಕ್ಸ್‌ನಲ್ಲಿ ಈ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿತ್ತು. ಆದರೆ, ರೆಸ್ಟೋರೆಂಟ್ ನಡೆಸುತ್ತಿದ್ದ ‘ಟ್ರಿಯೊ ಹಿಲ್ಸ್ ಹಾಸ್ಪಿಟಾಲಿಟಿ’ ಸಂಸ್ಥೆಯು ಕಳೆದ ಸುಮಾರು ಆರು ತಿಂಗಳಿನಿಂದ ಕಟ್ಟಡದ ಮಾಲೀಕರಿಗೆ ಬಾಡಿಗೆ ಪಾವತಿಸಿರಲಿಲ್ಲ. ಈ ಬಾಕಿ ಮೊತ್ತ ಸುಮಾರು ₹2 ಕೋಟಿಗೂ ಹೆಚ್ಚು ದಾಟಿತ್ತು ಎನ್ನಲಾಗಿದೆ. ಮಾಲೀಕರು ಸಿವಿಲ್ ಕೋರ್ಟ್ ಮೊರೆ ಹೋದ ನಂತರ, ನ್ಯಾಯಾಲಯವು ರೆಸ್ಟೋರೆಂಟ್ ಅನ್ನು ತೆರವುಗೊಳಿಸುವಂತೆ ಆದೇಶ ನೀಡಿತು.

ವಿರಾಟ್ ಕೊಹ್ಲಿ ಸಂಬಂಧ ಕಡಿದುಕೊಂಡಿದ್ದೇಕೆ?

ಈ ಔಟ್‌ಲೆಟ್ ಆರಂಭದಲ್ಲಿ ವಿರಾಟ್ ಕೊಹ್ಲಿ ಅವರ ‘One8’ ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಈ ರೆಸ್ಟೋರೆಂಟ್ ಹಲವು ವಿವಾದಗಳಿಗೆ ಸಿಲುಕಿತ್ತು. ಮೂಲಗಳ ಪ್ರಕಾರ, ರೆಸ್ಟೋರೆಂಟ್ ನಿರ್ವಹಣೆಯಲ್ಲಿನ ಲೋಪದೋಷಗಳು ಮತ್ತು ಸತತವಾಗಿ ಬರುತ್ತಿದ್ದ ನೋಟಿಸ್‌ಗಳಿಂದ ಬೇಸತ್ತ ಕೊಹ್ಲಿ, ಈ ನಿರ್ದಿಷ್ಟ ಔಟ್‌ಲೆಟ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡು ಪಾಲುದಾರಿಕೆಯನ್ನು ಕಡಿದುಕೊಂಡಿದ್ದರು.

ಇತರೆ ಕಾನೂನು ಸಮಸ್ಯೆಗಳು!

ಬಾಡಿಗೆ ಬಾಕಿ ಮಾತ್ರವಲ್ಲದೆ, ಈ ರೆಸ್ಟೋರೆಂಟ್ ಬಿಬಿಎಂಪಿ (BBMP) ಮತ್ತು ಅಗ್ನಿಶಾಮಕ ದಳದಿಂದಲೂ ತೀವ್ರ ವಿರೋಧ ಎದುರಿಸುತ್ತಿತ್ತು:

  • ಅಗ್ನಿಶಾಮಕ ಎನ್‌ಒಸಿ ಇಲ್ಲದಿರುವುದು: ಕಟ್ಟಡದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳಿಲ್ಲದ ಕಾರಣ ಅಗ್ನಿಶಾಮಕ ಇಲಾಖೆ ಎನ್‌ಒಸಿ (NOC) ನೀಡಿರಲಿಲ್ಲ.
  • ಸಮಯ ಮೀರಿದ ವಹಿವಾಟು: ನಿಗದಿಗಿಂತ ಹೆಚ್ಚು ಸಮಯದವರೆಗೆ ರೆಸ್ಟೋರೆಂಟ್ ತೆರೆದಿಡಲಾಗುತ್ತಿತ್ತು ಎಂಬ ದೂರಿನ ಮೇರೆಗೆ ಪೊಲೀಸರು ಈ ಹಿಂದೆ ಪ್ರಕರಣ ದಾಖಲಿಸಿದ್ದರು.
  • ಧೂಮಪಾನ ವಲಯ: ಸರಿಯಾದ ಧೂಮಪಾನ ವಲಯ (Smoking Zone) ಇಲ್ಲದಿದ್ದರೂ ನಿಯಮ ಉಲ್ಲಂಘಿಸುತ್ತಿದ್ದ ಆರೋಪವಿತ್ತು.

ಬೆಂಗಳೂರಿನ ಪ್ರತಿಷ್ಠಿತ ಪ್ರದೇಶದಲ್ಲಿದ್ದ ಈ ರೆಸ್ಟೋರೆಂಟ್ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ತಾಣವಾಗಿತ್ತು. ಆದರೆ ವಿರಾಟ್ ಕೊಹ್ಲಿ ಬ್ರ್ಯಾಂಡ್‌ನಿಂದ ಹೊರಬಂದ ನಂತರ ಮತ್ತು ಬಾಡಿಗೆ ಸಮಸ್ಯೆಯಿಂದಾಗಿ ಗ್ರಾಹಕರ ಸಂಖ್ಯೆಯೂ ಕ್ಷೀಣಿಸಿತ್ತು.

ಪ್ರಸ್ತುತ, ಕೋರ್ಟ್ ಆದೇಶದಂತೆ ರೆಸ್ಟೋರೆಂಟ್‌ನಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ಎಲ್ಲಾ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ: RCB ವಿರುದ್ಧ ಹೀರೋ SRH ವಿರುದ್ಧ ಝೀರೋ!

ಬೆಂಗಳೂರಿನ ಈ ಒಂದು ಶಾಖೆ ಮುಚ್ಚಿದ್ದರೂ, ದೆಹಲಿ, ಕೋಲ್ಕತ್ತಾ ಮತ್ತು ಮುಂಬೈನಂತಹ ನಗರಗಳಲ್ಲಿ ‘ಒನ್8 ಕಮ್ಯೂನ್’ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

Source link

Exit mobile version