ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯ ಭೀಕರ ಕೊಲೆ: ಸಂಬಂಧಿಕರಿಂದಲೇ ನಡೀತು ಭೀಭತ್ಸ ಕೃತ್ಯ – Kannada News | Tumakuru Murder: Drunk Man Killed by Relatives in Huliyurdurga, 3 Arrested

ಕೊಲೆಯಾದ ವ್ಯಕ್ತಿ ಮತ್ತು ಆರೋಪಿಗಳುImage Credit source: Tv9 Kannada

ತುಮಕೂರು, ಏಪ್ರಿಲ್​​ 22: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಸಂತೆಮಾವತ್ತೂರಿನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ಏ.17ರಂದು ಸಂತೆಮಾವತ್ತೂರಿನಲ್ಲಿ ಹೈಡ್ರಾಮಾವೊಂದು ನಡೆದಿತ್ತು. ಕುಡಿದ ಮತ್ತಿನಲ್ಲಿ ಬಂದ ಮಂಜುನಾಥ ಎಂಬಾತ ಗ್ರಾಮದ ಜನರಿಗೆ ಕಿರಿಕಿರಿ ಮಾಡಿದ್ದ. ಜೊತೆಗೆ ಗ್ರಾಮದ ಮಹಿಳೆ ಕಾಳಮ್ಮ ಎಂಬಾಕೆ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಕೋಪಗೊಂಡ ಜನ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ನಾಪತ್ತೆಯಾಗಿದ್ದ ಆತ, ಮರುದಿನ ಹೆಣವಾಗಿ ಸಿಕ್ಕಿದ್ದ. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಸಾವಿನ ಹಿಂದಿನ ಸತ್ಯ ರಿವೀಲ್​​ ಮಾಡಿದ್ದು, ಸಂಬಂಧಿಕರಿಂದಲೇ ಮಂಜುನಾಥನ ಹತ್ಯೆಯಾಗಿರೋದು ಬಯಲಾಗಿದೆ.

ಶವವಾಗಿ ಪತ್ತೆಯಾಗಿದ್ದ ಮಂಜುನಾಥನ ತಲೆಗೆ ಗಂಭೀರ ಗಾಯವಾಗಿರೋದು ಕಂಡುಬಂದ ಹಿನ್ನೆಲೆ ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಹೀಗಾಗಿ ಇದು ಕೊಲೆಯಾಗಿರಬಹುದು ಎಂಬ ಸಂಶಯದಲ್ಲಿ ತನಿಖೆ ಕೈಗೊಂಡಿದ್ದ ಹುಲಿಯೂರುದುರ್ಗ ಪೊಲೀಸರು ಮಂಜುನಾಥನ ಸಹೋದರ ಉಮೇಶ ಮತ್ತು ಸೋದರ ಸಂಬಂಧಿಗಳಾದ ಕುಮಾರ ಮತ್ತು ರಂಗಸ್ವಾಮಿಯೇ ಬರ್ಬರವಾಗಿ ಹತ್ಯೆ ನಡೆಸಿರೋದನ್ನು ಬೆಳಕಿಗೆ ತಂದಿದ್ದಾರೆ. ಅಸಲಿಗೆ ಅಂದು ಕುಡಿದ ಮತ್ತಿನಲ್ಲಿ ಮಂಜುನಾಥ ಕಾಳಮ್ಮ ಎಂಬಾಕೆಗೆ ಹಲ್ಲೆ ಮಾಡಿದ್ದ ಕಾರಣಕ ಆಕೆಯ ಮಕ್ಕಳಾದ ರಂಗಸ್ವಾಮಿ ಹಾಗೂ ಕುಮಾರ ಕೋಪಗೊಂಡಿದ್ದರು.. ಮಂಜುನಾಥನಿಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಮಧ್ಯರಾತ್ರಿ ಮನೆ ಬಳಿ ಬಂದಿದ್ದ ಮಂಜುನಾಥನ ಮೇಲೆ ಇಬ್ಬರೂ ದಾಳಿ ಮಾಡಿದ್ದರು. ಇವರ ಜೊತೆಗೆ ಮಂಜುನಾಥ್ ಸಹೋದರ ಉಮೇಶ ಕೂಡ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮನೆಲಿ ನೈಟಿ ಹಾಕಿಕೊಳ್ತಿದ್ಲು ಎಂದು ಹೆಂಡತಿಯನ್ನೇ ಸುಟ್ಟ ಪತಿ! ಪತ್ನಿಯ ಸ್ಥಿತಿ ಗಂಭೀರ

ಆರೋಪಿ ಉಮೇಶ ಕೆಲ ದಿನಗಳ ಹಿಂದೆಯಷ್ಟೇ ಅನಾರೋಗ್ಯ ಹಿನ್ನಲೆ ಮಗಳನ್ನು ಕಳೆದುಕೊಂಡಿದ್ದ. ಆಕೆಯ ಸಾವಿಗೆ ಮಂಜುನಾಥನೇ ಕಾರಣ ಎಂಬ ಆರೋಪ ಇತ್ತು. ಹೀಗಾಗಿ ಇವರೆಲ್ಲ ಸೇರಿಕೊಂಡು ಮಾಡಿರುವ ಹಲ್ಲೆಗೆ ಮದ್ಯದ ಅಮಲಿನಲ್ಲಿದ್ದ ಮಂಜುನಾಥ ಉಸಿರು ಚೆಲ್ಲಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹುಲಿಯೂರುದುರ್ಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಕಾರಣ ಕ್ಷುಲ್ಲಕ ವಿಚಾರ ಎಂದು ಹೇಳಲಾಗುತ್ತಿದೆಯಾದರೂ, ಮತ್ತೇನಾದರೂ ಬಲವಾದ ವಿಷಯ ಮರ್ಡರ್​​ ಹಿಂದೆ ಇತ್ತಾ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:19 pm, Wed, 22 April 26

Source link

Leave a Reply

Your email address will not be published. Required fields are marked *