‘ಸಿಟಾಡೆಲ್’ ಮೂಲಕ ಮತ್ತೆ ಬಂದ ಪ್ರಿಯಾಂಕಾ ಚೋಪ್ರಾ: ಹೇಗಿದೆ ಟ್ರೈಲರ್? – Kannada News | Priyanka Chopra starrer Citadel season 2 trailer released

ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್​​ನಲ್ಲಿ ಮಿಂಚುತ್ತಿರುವ ಭಾರತದ ನಟಿ. ಹಲವು ವರ್ಷಗಳ ಬಳಿಕ ರಾಜಮೌಳಿಯವರ ‘ವಾರಣಾಸಿ’ ಸಿನಿಮಾಕ್ಕಾಗಿ ಭಾರತ ಚಿತ್ರರಂಗಕ್ಕೆ ಮರಳಿದ್ದಾರಾದರೂ ಈಗಲೂ ಅವರು ಹಾಲಿವುಡ್​ನ ಕೆಲವಾರು ಪ್ರಾಜೆಕ್ಟ್​​ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಲಿವುಡ್​ನ ಸಿನಿಮಾಗಳು ಮಾತ್ರವಲ್ಲದೆ ಟಿವಿ ಸರಣಿ ಅಥವಾ ವೆಬ್ ಸರಣಿಗಳಲ್ಲಿಯೂ ಸಹ ಪ್ರಿಯಾಂಕಾ ಚೋಪ್ರಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2023ರಲ್ಲಿ ‘ಸಿಟಾಡೆಲ್’ ಹೆಸರಿನ ಆಕ್ಷನ್ ಭರಿತ ವೆಬ್ ಸರಣಿಯಲ್ಲಿ ಪ್ರಿಯಾಂಕಾ ನಟಿಸಿದ್ದರು. ಇದೀಗ ಅದೇ ಸರಣಿಯ ಎರಡನೇ ಸೀಸನ್ ಬರುತ್ತಿದ್ದು, ಹೊಸ ಸೀಸನ್​​ನ ಟ್ರೈಲರ್ ಬಿಡುಗಡೆ ಆಗಿದೆ.

ಪ್ರಿಯಾಂಕಾ ಚೋಪ್ರಾ ಜೊನಾಸ್ ಮತ್ತು ರಿಚರ್ಡ್ ಮ್ಯಾಡೆನ್ ನಟನೆಯ ‘ಸಿಟಾಡೆಲ್’ ಸೀಸನ್ 2 ರ ಟ್ರೈಲರ್ ಮೊದಲ ಸೀಸನ್‌ಗಿಂತಲೂ ಹೆಚ್ಚು ಸ್ಫೋಟಕವಾಗಿ ಮತ್ತು ರೋಚಕವಾಗಿ ಮೂಡಿಬಂದಿದೆ. ಮೊದಲ ಸೀಸನ್‌ನಲ್ಲಿ ಮರವಿನ ಖಾಯಿಲೆಗೆ ಒಳಗಾಗಿದ್ದ ಸ್ಪೈ ನಾಡಿಯಾ ಸಿನ್ಹ್ (ಪ್ರಿಯಾಂಕಾ ಚೋಪ್ರಾ) ಮತ್ತು ಮೇಸನ್ ಕೇನ್ (ರಿಚರ್ಡ್ ಮ್ಯಾಡೆನ್) ಈಗ ತಮ್ಮ ಹಳೆಯ ಮತ್ತೆ ಒಂದಾಗಿದ್ದು, ಅವರಿಗೆ ಹಳೆಯ ನೆನಪುಗಳೆಲ್ಲ ಮರಳಿ ಬಂದಿದೆ. ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಹೈ-ಸ್ಪೀಡ್ ಚೇಸಿಂಗ್, ಅತ್ಯಾಧುನಿಕ ಆಯುಧಗಳ ಯುದ್ಧ ಮತ್ತು ಅಂತರಾಷ್ಟ್ರೀಯ ಮಟ್ಟದ ಪಿತೂರಿಗಳನ್ನು ಕಾಣಬಹುದಾಗಿದೆ.

‘ಸಿಟಾಡೆಲ್ ಸೀಸನ್ 2’ ಇದೇ ಮೇ 2 ರಿಂದ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ. ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಮುಖ್ಯ ಪಾತ್ರಗಳಲ್ಲಿ ಮುಂದುವರಿಯಲಿದ್ದು, ಇವರೊಂದಿಗೆ ಖ್ಯಾತ ಹಾಲಿವುಡ್ ನಟಿ ಎಮಿಲಿ ಬ್ಲಂಟ್ ಮತ್ತು ಇನ್ನಿತರೆ ಅಂತರಾಷ್ಟ್ರೀಯ ತಾರೆಯರು ಈ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾಗತಿಕ ಗೂಢಚಾರಿ ಸಂಸ್ಥೆಯಾದ ‘ಸಿಟಾಡೆಲ್’ ಅನ್ನು ನಾಶಪಡಿಸಲು ಸಂಚು ಹೂಡಿರುವ ‘ಮ್ಯಾಂಟಿಕೋರ್’ ಸಂಘಟನೆಯ ವಿರುದ್ಧದ ಹೋರಾಟದ ಕತೆಯನ್ನು ಎರಡನೇ ಸೀಸನ್ ಹೊಂದಿರಲಿದೆ. ಕೇವಲ ಆಕ್ಷನ್ ಮಾತ್ರವೇ ಅಲ್ಲದೆ, ರೊಮ್ಯಾನ್ಸ್, ಡ್ರಾಮಾ, ಹಾಸ್ಯವನ್ನೂ ಸಹ ಈ ಸರಣಿ ಒಳಗೊಂಡಿರಲಿದೆ.

‘ಕ್ಯಾಪ್ಟನ್ ಅಮೆರಿಕ’, ‘ಅವೇಂಜರ್ಸ್’ ಇನ್ನಿತರೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ರುಸ್ಸೋ ಬ್ರದರ್ಸ್ ಈ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ. ‘ಸಿಟಾಡೆಲ್’ ಮೊದಲ ಸರಣಿ ಬಿಡುಗಡೆ ಆದ ಬಳಿಕ ಅದನ್ನು ಭಾರತದಲ್ಲಿ ರೀಮೇಕ್ ಮಾಡಲಾಗಿತ್ತು. ಭಾರತದಲ್ಲಿ ನಟಿ ಸಮಂತಾ ಮತ್ತು ವರುಣ್ ಧವನ್ ಅವರುಗಳು ಒಟ್ಟಿಗೆ ನಟಿಸಿದ್ದರು. ಈಗ ಸೀಸನ್ 2 ಬರುತ್ತಿದ್ದು, ಅದನ್ನೂ ಸಹ ಸಮಂತಾ ರೀಮೇಕ್ ಮಾಡುತ್ತಾರೆಯೇ ಕಾದು ನೋಡಬೇಕಿದೆ. ಮೇ 2 ರಂದು ‘ಸಿಟಾಡೆಲ್ 2’ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *