Health Tips: ನಕಲಿ ಪನೀರ್ ಗುರುತಿಸುವುದು ಹೇಗೆ? ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ – Kannada News | Pure vs. Fake Paneer: How to Identify Authentic Paneer for Your Health

ಪನೀರ್ ಭಾರತೀಯ ಅಡುಗೆಮನೆಯ ಅವಿಭಾಜ್ಯ ಅಂಗ. ಪಾಲಕ್ ಪನೀರ್ ಇರಲಿ ಅಥವಾ ಪನೀರ್ ಬಟರ್ ಮಸಾಲಾ ಇರಲಿ, ಹಬ್ಬದೂಟಗಳಲ್ಲಿ ಪನೀರ್ ಇಲ್ಲದಿದ್ದರೆ ಅದು ಅಪೂರ್ಣವೆನಿಸುತ್ತದೆ. ಆದರೆ ಇಂದಿನ ಮಾರುಕಟ್ಟೆಯಲ್ಲಿ ಹಾಲಿನಿಂದ ತಯಾರಿಸಿದ ಅಧಿಕೃತ ಪನೀರ್ ಜೊತೆಗೆ ತರಕಾರಿ ಎಣ್ಣೆ ಮತ್ತು ರಾಸಾಯನಿಕ ಬಳಸಿ ತಯಾರಿಸಿದ ನಕಲಿ ಪನೀರ್ ಕೂಡ ಲಭ್ಯವಿದೆ. ಇವೆರಡೂ ನೋಡಲು ಒಂದೇ ರೀತಿ ಕಂಡರೂ, ಗುಣಮಟ್ಟ ಮತ್ತು ಆರೋಗ್ಯದ ದೃಷ್ಟಿಯಿಂದ ಇವುಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ.

ಸಾಂಪ್ರದಾಯಿಕ ಪನೀರ್:

ಸಾಂಪ್ರದಾಯಿಕ ಪನೀರ್ ತಯಾರಿಸುವ ವಿಧಾನ ಅತ್ಯಂತ ಸರಳ ಮತ್ತು ನೈಸರ್ಗಿಕವಾದುದು. ತಾಜಾ ಹಾಲನ್ನು ಕುದಿಸಿ, ಅದಕ್ಕೆ ನಿಂಬೆ ರಸ ಅಥವಾ ವಿನೆಗರ್ ಸೇರಿಸಿ ಹಾಲನ್ನು ಒಡೆಯಲಾಗುತ್ತದೆ. ನಂತರ ಸೋಸಿದ ಘನ ಭಾಗವನ್ನು ಒತ್ತಿ ಗಟ್ಟಿಯಾಗಿಸಿದಾಗ ನಮಗೆ ನಿಜವಾದ ಪನೀರ್ ದೊರೆಯುತ್ತದೆ. ಇಂತಹ ಪನೀರ್ ಮೃದುವಾದ ಮತ್ತು ಕ್ರೀಮಿ ವಿನ್ಯಾಸವನ್ನು ಹೊಂದಿದ್ದು, ತಾಜಾ ಹಾಲಿನ ಸುವಾಸನೆಯಿಂದ ಕೂಡಿರುತ್ತದೆ. ಪೌಷ್ಟಿಕಾಂಶದ ದೃಷ್ಟಿಯಿಂದಲೂ ಇದು ಅತ್ಯುತ್ತಮವಾಗಿದ್ದು, ಇದರಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳು ಸಮೃದ್ಧವಾಗಿರುತ್ತವೆ. 100 ಗ್ರಾಂ ಶುದ್ಧ ಪನೀರ್‌ನಲ್ಲಿ ಸುಮಾರು ೧೮–೨೦ ಗ್ರಾಂ ಪ್ರೊಟೀನ್ ದೊರೆಯುತ್ತದೆ.

ನಕಲಿ ಪನೀರ್:

ಮಾರುಕಟ್ಟೆಯಲ್ಲಿ “ಡೈರಿ ಅನಾಲಾಗ್” ಎಂದು ಕರೆಯಲ್ಪಡುವ ನಕಲಿ ಪನೀರ್ ವ್ಯಾಪಕವಾಗಿ ಸಿಗುತ್ತಿದೆ. ಇದನ್ನು ಹಾಲಿನ ಪುಡಿ, ಪಾಮ್ ಆಯಿಲ್ ಅಥವಾ ಸೋಯಾಬೀನ್ ಎಣ್ಣೆ, ಹೈಡ್ರೋಜನೇಟೆಡ್ ಕೊಬ್ಬು ಮತ್ತು ಸ್ಟ್ಯಾಬಿಲೈಸರ್‌ಗಳನ್ನು ಬಳಸಿ ತಯಾರಿಸಲಾಗುತ್ತದೆ. ಈ ಪನೀರ್ ಸಾಮಾನ್ಯವಾಗಿ ರಬ್ಬರ್‌ನಂತೆ ಗಡಸಾಗಿರುತ್ತದೆ ಮತ್ತು ಇದರಲ್ಲಿ ಹಾಲಿನ ನೈಸರ್ಗಿಕ ರುಚಿಯ ಕೊರತೆ ಇರುತ್ತದೆ. ಪೌಷ್ಟಿಕಾಂಶವಿಲ್ಲದ ಈ ಉತ್ಪನ್ನದಲ್ಲಿ ಟ್ರಾನ್ಸ್ ಫ್ಯಾಟ್ ಇರುವ ಸಾಧ್ಯತೆ ಹೆಚ್ಚಿರುವುದರಿಂದ, ಇದು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಪನೀರ್‌ನ ಶುದ್ಧತೆ ಪರೀಕ್ಷಿಸಲು ಸರಳ ವಿಧಾನಗಳು:

ನೀವು ಖರೀದಿಸಿದ ಪನೀರ್ ಅಸಲಿಯೋ ಅಥವಾ ನಕಲಿಯೋ ಎಂದು ಮನೆಯಲ್ಲೇ ಪರೀಕ್ಷಿಸಲು ಕೆಲವು ಸುಲಭ ಹಾದಿಗಳಿವೆ. ಮೊದಲನೆಯದಾಗಿ, ನೀರಿನ ಪರೀಕ್ಷೆ; ನಿಜವಾದ ಪನೀರ್ ನೀರಿನಲ್ಲಿ ಮುಳುಗಿದರೆ, ನಕಲಿ ಪನೀರ್ ತೇಲುವ ಸಾಧ್ಯತೆ ಇರುತ್ತದೆ. ಎರಡನೆಯದಾಗಿ, ಬಿಸಿ ಮಾಡಿದಾಗ ನಿಜವಾದ ಪನೀರ್ ಮೃದುವಾಗುತ್ತದೆ, ಆದರೆ ನಕಲಿ ಪನೀರ್ ಗಡಸಾಗುತ್ತದೆ. ಮೂರನೆಯದಾಗಿ, ಕೈಯಿಂದ ಒತ್ತಿದಾಗ ನಿಜವಾದ ಪನೀರ್ ಪುಡಿಪುಡಿಯಾದರೆ, ನಕಲಿ ಪನೀರ್ ಜಿಗುಟಾಗಿ ಎಳೆಯುವಂತೆ ಇರುತ್ತದೆ. ಇನ್ನು ಅಯೋಡಿನ್ ಪರೀಕ್ಷೆ ಮಾಡಿದಾಗ ಪನೀರ್ ನೀಲಿ ಅಥವಾ ಕಪ್ಪು ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಪಿಷ್ಟ (Starch) ಕಲಬೆರಕೆಯಾಗಿದೆ ಎಂದು ಅರ್ಥೈಸಬಹುದು.

ಇದನ್ನೂ ಓದಿ: ಪದೇ ಪದೇ ಹಸಿವಾಗುವುದು ಮಧುಮೇಹದ ಆರಂಭಿಕ ಲಕ್ಷಣವೇ? ಇಲ್ಲಿದೆ ತಜ್ಞರ ಉತ್ತರ

ಕಾನೂನು ಕ್ರಮ ಮತ್ತು ಜಾಗರೂಕತೆ:

ಭಾರತದ ಆಹಾರ ಸುರಕ್ಷತಾ ನಿಯಮಗಳ ಪ್ರಕಾರ, ತರಕಾರಿ ಎಣ್ಣೆಯಿಂದ ತಯಾರಿಸಿದ ಉತ್ಪನ್ನವನ್ನು “ಪನೀರ್” ಎಂದು ಮಾರಾಟ ಮಾಡುವುದು ಅಪರಾಧವಾಗಿದೆ. ಅಂತಹ ಉತ್ಪನ್ನಗಳನ್ನು “ಡೈರಿ ಅನಾಲಾಗ್” ಎಂದು ಲೇಬಲ್ ಮಾಡುವುದು ಕಡ್ಡಾಯ. ಆದರೂ ಲಾಭದ ಉದ್ದೇಶದಿಂದ ಕಲಬೆರಕೆ ನಡೆಯುತ್ತಲೇ ಇರುತ್ತದೆ. ಆದ್ದರಿಂದ ಪ್ಯಾಕ್ ಮಾಡಿದ ಪನೀರ್ ಕೊಳ್ಳುವಾಗ ಲೇಬಲ್ ಮೇಲೆ “100% Pure Milk” ಎಂದು ಬರೆದಿರುವುದನ್ನು ಖಚಿತಪಡಿಸಿಕೊಳ್ಳಿ. ಅತಿಯಾದ ಕಡಿಮೆ ಬೆಲೆಗೆ ಪನೀರ್ ಸಿಗುತ್ತಿದೆ ಎಂದರೆ ಅದು ನಕಲಿ ಇರುವ ಸಾಧ್ಯತೆ ಹೆಚ್ಚು ಎಂಬ ಎಚ್ಚರವಿರಲಿ.

ಆರೋಗ್ಯವೇ ಮಹಾಭಾಗ್ಯ:

ಆರೋಗ್ಯಕ್ಕಿಂತ ದೊಡ್ಡದಾದ ಉಳಿತಾಯ ಇನ್ನೊಂದಿಲ್ಲ. ಸ್ವಲ್ಪ ಹಣ ಉಳಿಸಲು ಹೋಗಿ ನಕಲಿ ಪನೀರ್ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳುವ ಬದಲು, ಮನೆಯಲ್ಲೇ ತಯಾರಿಸಿದ ಪನೀರ್ ಬಳಸುವುದು ಅತ್ಯಂತ ಶ್ರೇಷ್ಠ. ಮಾರುಕಟ್ಟೆಯಿಂದ ಕೊಳ್ಳುವಾಗಲೂ ಸ್ವಲ್ಪ ಹೆಚ್ಚಿನ ಬೆಲೆಯಾದರೂ ಗುಣಮಟ್ಟದ ಶುದ್ಧ ಪನೀರ್ ಆಯ್ಕೆ ಮಾಡುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ದೀರ್ಘಕಾಲದ ಆರೋಗ್ಯಕ್ಕೆ ಒಳಿತು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:28 pm, Wed, 22 April 26

Source link

‘ನನಗೆ ಆ ರೀತಿ ಮೀಸೆ ಬರಲ್ಲ’: ನೇರವಾಗಿ ಒಪ್ಪಿಕೊಂಡು ಜನರ ಕ್ಷಮೆ ಕೇಳಿದ ಅಕ್ಷಯ್ ಕುಮಾರ್ – Kannada News | Akshay Kumar reacts to Samrat Prithviraj fake moustache backlash apology

ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. 2022ರಲ್ಲಿ ತೆರೆಕಂಡ, ಐತಿಹಾಸಿಕ ಕಥಾಹಂದರದ ‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಆ ಸಮಯದಲ್ಲಿ ಚಿತ್ರಕ್ಕಿಂತ ಹೆಚ್ಚಾಗಿ ಅಕ್ಷಯ್ ಕುಮಾರ್ ಧರಿಸಿದ್ದ ನಕಲಿ ಮೀಸೆ ಭಾರಿ ಟೀಕೆಗೆ ಗುರಿಯಾಗಿತ್ತು. ಈಗ ಸುಮಾರು 4 ವರ್ಷಗಳ ನಂತರ ಅಕ್ಷಯ್ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅಕ್ಷಯ್, ನಕಲಿ ಮೀಸೆ ಬಳಸಲು ಇದ್ದ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಸಿನಿಮಾಕ್ಕಾಗಿ ಅಕ್ಷಯ್ ಕುಮಾರ್ ಹೆಚ್ಚು ಸಮಯ ಮೀಸಲಿಡುವುದಿಲ್ಲ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಏಕಕಾಲಕ್ಕೆ ಹಲವು ಸಿನಿಮಾಗಳಲ್ಲಿ, ಹಲವು ಲುಕ್‌ಗಳಲ್ಲಿ ಕೆಲಸ ಮಾಡುತ್ತಿರುತ್ತೇನೆ. ಉದಾಹರಣೆಗೆ, ಈಗ ನಾನು ಗಡ್ಡ ಬಿಟ್ಟಿದ್ದೇನೆ. ಇದನ್ನು ಬೆಳೆಸಲು ನನಗೆ ಆರು ವಾರಗಳು ಬೇಕಾಯಿತು ಮತ್ತು ಆ ಸಮಯದಲ್ಲಿ ನಾನು ಯಾವುದೇ ಕೆಲಸ ಮಾಡಲಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಮುಂದುವರಿದು ಮಾತನಾಡಿದ ಅವರು, ‘ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ಕಥೆಗೆ ಒಂದು ವಿಶಿಷ್ಟವಾದ ಮೀಸೆಯ ಅವಶ್ಯಕತೆಯಿತ್ತು. ಆದರೆ ಅಂತಹ ಮೀಸೆ ನನ್ನ ಮುಖದ ಮೇಲೆ ಸಹಜವಾಗಿ ಬೆಳೆಯಲು ಸಾಧ್ಯವಿರಲಿಲ್ಲ. ಹಾಗಾಗಿ ನಕಲಿ ಮೀಸೆ ಬಳಸಬೇಕಾಯಿತು. ಅದು ನೋಡಲು ಚೆನ್ನಾಗಿರಲಿಲ್ಲ ಅಥವಾ ಜನರಿಗೆ ಇಷ್ಟವಾಗಿಲ್ಲದಿರಬಹುದು. ಆದರೆ ಅಂತಿಮವಾಗಿ ಇದು ಕೇವಲ ಅಭಿನಯವಷ್ಟೇ’ ಎಂದಿದ್ದಾರೆ.

ಚಿತ್ರದ ಲುಕ್ ಬಗ್ಗೆ ಅಸಮಾಧಾನಗೊಂಡಿದ್ದ ಅಭಿಮಾನಿಗಳ ಬಗ್ಗೆ ಅಕ್ಷಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು. ‘ಒಂದೊಮ್ಮೆ ಜನರಿಗೆ ಆ ಲುಕ್ ಇಷ್ಟವಾಗದಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಕೆಲವು ಬಾರಿ ಅಂತಹ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಆದರೆ ಅದು ವಿಫಲವಾದರೆ ನಾವೇ ಜವಾಬ್ದಾರರು’ ಎಂದು ಅವರು ನೇರವಾಗಿ ಹೇಳಿದ್ದಾರೆ. ನಕಲಿ ಮೀಸೆಯ ಕಾರಣಕ್ಕೆ ಅವರು ಜನರಲ್ಲಿ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ 2022ರ ಜೂನ್ 3ರಂದು ಬಿಡುಗಡೆ ಆಗಿತ್ತು. ಚಂದ್ರಪ್ರಕಾಶ್ ದ್ವಿವೇದಿ ಅವರು ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಅಂದಾಜು 175 ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ನಿರ್ಮಾಣ ಮಾಡಿತ್ತು. ಆದರೆ ವಿಶ್ವಾದ್ಯಂತ ಆ ಸಿನಿಮಾ ಗಳಿಸಿದ್ದು ಕೇವಲ 90 ಕೋಟಿ ರೂಪಾಯಿ ಮಾತ್ರ. ಆ ಸಿನಿಮಾದಲ್ಲಿ ಮಾನುಷಿ ಚಿಲ್ಲರ್, ಸಂಜಯ್ ದತ್ ಮತ್ತು ಸೋನು ಸೂದ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ – Kannada News | Hubballi Horror Accident: Man’s Severed Head Found in Car Engine

ಹುಬ್ಬಳ್ಳಿ, ಏಪ್ರಿಲ್​ 22: ಭೀಕರ ರಸ್ತೆ ಅಪಘಾತದಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ರುಂಡವೇ ಬೇರ್ಪಟ್ಟ ಭಯಾನಕ ಘಟನೆ ಜಿಲ್ಲೆಯ ಕುಂದಗೋಳ ರಸ್ತೆಯ ಶೆರೆವಾಡ ಗ್ರಾಮದ ಬಳಿ ನಿನ್ನೆ ಸಂಜೆ ನಡೆದಿದೆ. ಶೆರೆವಾಡ ಗ್ರಾಮದ ನಿವಾಸಿ ಸದಾನಂದ ಕಟೇಗಾರ (32) ಮೃತ ವ್ಯಕ್ತಿ. ತಾಂತ್ರಿಕ ದೋಷದಿಂದಾಗಿ ಜೆಸಿಬಿ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿತ್ತು. ಸದಾನಂದ ಕೆಳಗೆ ಬಾಗಿ ಜೆಸಿಬಿಯನ್ನು ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ನೇರವಾಗಿ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ರುಂಡವು ದೇಹದಿಂದ ಸಂಪೂರ್ಣವಾಗಿ ಕತ್ತರಿಸಿ, ಕಾರಿನ ಮುಂಭಾಗದ ಇಂಜಿನ್ ಒಳಗೆ ಹೋಗಿ ಸಿಲುಕಿತ್ತು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಜಾಗತಿಕ ಆಘಾತಗಳಿಗೆ ಭಾರತದ 3 ಆರ್ಥಿಕ ರಕ್ಷಾ ಕವಚಗಳು: ಫಿಚ್ ಬಿಎಂಐ ವಿಶ್ಲೇಷಣೆ – Kannada News | India’s Economy Resilient Amidst Geopolitical Tensions: Fitch BMI Highlights 3 Buffers

ನವದೆಹಲಿ, ಏಪ್ರಿಲ್ 22: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ (Geopolitical Tensions) ಜಾಗತಿಕ ಆರ್ಥಿಕತೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಆದರೆ, ಫಿಚ್ (Fitch) ಸಮೂಹದ ವಿಶ್ಲೇಷಣಾ ಘಟಕವಾದ ಬಿಎಂಐ (BMI) ವರದಿಯ ಪ್ರಕಾರ, ಭಾರತವು ಇಂತಹ ಆರ್ಥಿಕ ಬಿರುಗಾಳಿಯನ್ನು ಎದುರಿಸಲು ಮೂರು ಪ್ರಮುಖ ‘ಬಫರ್’ಗಳನ್ನು (ರಕ್ಷಣಾತ್ಮಕ ಅಂಶಗಳನ್ನು) ಹೊಂದಿದೆ.

1. ಅನಿಲ ಅವಲಂಬನೆಗಿಂತ ತೈಲದ ಮೇಲಿನ ನಿಯಂತ್ರಣ

ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಒಂದು ದೊಡ್ಡ ಅನುಕೂಲವಿದೆ. ಪ್ರಸ್ತುತ ಸಂಘರ್ಷದಿಂದ ನೈಸರ್ಗಿಕ ಅನಿಲ (Natural Gas) ಪೂರೈಕೆಗೆ ಹೆಚ್ಚಿನ ಹೊಡೆತ ಬಿದ್ದಿದೆ. ಆದರೆ ಭಾರತವು ಕಚ್ಚಾ ತೈಲ ಮತ್ತು ಡೀಸೆಲ್ ರಫ್ತಿನಲ್ಲಿ ಬಲಿಷ್ಠ ಸ್ಥಾನದಲ್ಲಿದೆ. ಭಾರತವು ವಿಶ್ವದ ದೊಡ್ಡ ಸಂಸ್ಕರಣಾಗಾರಗಳನ್ನು (Refineries) ಹೊಂದಿರುವುದರಿಂದ, ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಇದು ದೇಶದ ಸಾರಿಗೆ ಮತ್ತು ಇಂಧನ ವ್ಯವಸ್ಥೆಯನ್ನು ತಕ್ಷಣದ ಆಘಾತದಿಂದ ರಕ್ಷಿಸುತ್ತದೆ.

2. ವಿದೇಶಿ ವಿನಿಮಯ ಮೀಸಲು (Forex Reserves)

ಭಾರತದ ಬಳಿ ಇರುವ ಬಲಿಷ್ಠ ವಿದೇಶಿ ವಿನಿಮಯ ಮೀಸಲು ನಿಧಿಯು ರೂಪಾಯಿ ಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿಯದಂತೆ ತಡೆಯಲು ಸಹಾಯ ಮಾಡುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಸ್ಥಿರವಾಗಿರಲು ಈ ನಿಧಿ ಒಂದು ದೊಡ್ಡ ಶ್ರೀರಕ್ಷೆಯಾಗಿದೆ.

ಇದನ್ನೂ ಓದಿ: ಈ ವರ್ಷದ ಪ್ರಮುಖ ಸೆಕ್ಟರ್ ಇದು; ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್​ಗಳಿವು

3. ಮಾರುಕಟ್ಟೆ ವೈವಿಧ್ಯತೆ ಮತ್ತು ದೇಶೀಯ ಬೇಡಿಕೆ

ಭಾರತದ ಆರ್ಥಿಕತೆಯು ಕೇವಲ ರಫ್ತಿನ ಮೇಲೆ ಅವಲಂಬಿತವಾಗಿಲ್ಲ. ನಮ್ಮ ದೇಶದ ಒಳಗಿನ ಬಲವಾದ ಬೇಡಿಕೆ (Domestic Demand) ಜಾಗತಿಕ ಕುಸಿತದ ಸಮಯದಲ್ಲಿ ಆರ್ಥಿಕತೆಗೆ ಆಧಾರ ನೀಡುತ್ತದೆ. ಇರಾನ್ ಅಥವಾ ಮಧ್ಯಪ್ರಾಚ್ಯದಲ್ಲಿ ತೊಂದರೆಯಾದಾಗ, ಭಾರತವು ಬೇರೆ ದೇಶಗಳಿಂದ (ಉದಾಹರಣೆಗೆ ರಷ್ಯಾ ಅಥವಾ ಆಫ್ರಿಕಾ ರಾಷ್ಟ್ರಗಳು) ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ತನ್ನ ಪೂರೈಕೆ ವ್ಯವಸ್ಥೆಯನ್ನು ವೈವಿಧ್ಯಮಯಗೊಳಿಸಿದೆ.

ಸವಾಲುಗಳು ಏನು?

ವರದಿಯ ಪ್ರಕಾರ ಎಲ್ಲವೂ ಸುಗಮವಾಗಿದೆ ಎಂದರ್ಥವಲ್ಲ. ಕೆಲವು ಸವಾಲುಗಳೂ ಇವೆ. ಅಡುಗೆ ಅನಿಲದ ಆಮದು ವೆಚ್ಚ ಹೆಚ್ಚಾಗಬಹುದು. ಸಮುದ್ರ ಮಾರ್ಗಗಳಲ್ಲಿ (Strait of Hormuz) ಸಂಘರ್ಷ ಇರುವುದರಿಂದ ವಿಮೆ ಮತ್ತು ಹಡಗು ಬಾಡಿಗೆ ದರಗಳು ಏರಿಕೆಯಾಗುತ್ತಿವೆ. ಕೃಷಿಗೆ ಬೇಕಾದ ರಾಸಾಯನಿಕ ಗೊಬ್ಬರಗಳ ಆಮದಿನ ಮೇಲೆ ಪರಿಣಾಮ ಬೀರಬಹುದು.

ಜಾಗತಿಕವಾಗಿ ತೈಲ ಬೆಲೆ ಏರಿದರೂ, ಭಾರತದ ಬಳಿ ಇರುವ ಈ ಮೂರು ‘ರಕ್ಷಣಾ ಕವಚಗಳು’ ನಮ್ಮ ಆರ್ಥಿಕತೆಯು ಅತಿ ದೊಡ್ಡ ಕುಸಿತ ಕಾಣದಂತೆ ತಡೆಯಬಲ್ಲವು ಎಂದು ಫಿಚ್ ಬಿಎಂಐ ವಿಶ್ಲೇಷಿಸಿದೆ.

ಹಾಗೆಯೇ, ಆರ್ಥಿಕತೆಯ ಪ್ರಮುಖ ವಲಯಗಳಿಗೆ ಇಂಧನ ಮತ್ತಿತರ ಅಗತ್ಯ ವಸ್ತುಗಲ ಪೂರೈಕೆ ನಿಲ್ಲದಂತೆ ಕ್ರಮ ತೆಗೆದುಕೊಳ್ಳಲು ಸರ್ಕಾರ ಆದ್ಯತೆ ಕೊಡಬಹುದು ಎಂದು ಫಿಚ್ ನಿರೀಕ್ಷಿಸಿದೆ. ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್​ಗೆ ಬಹಳ ಬೇಕಾಗಿರುವ ಹೀಲಿಯಂ, ಸಲ್ಫರ್​ನಂತಹ ವಿರಳ ಕಚ್ಚಾ ವಸ್ತುಗಳ ರಫ್ತಿಗೆ ಸರ್ಕಾರ ನಿರ್ಬಂಧ ಹಾಕಬಹುದು.

ಇದನ್ನೂ ಓದಿ: ಆರ್​ಬಿಐನಿಂದ ಹೊಸ ಇ-ಮ್ಯಾಂಡೇಟ್ ಫ್ರೇಮ್​ವರ್ಕ್; 15,000 ರೂವರೆಗಿನ ರಿಕರಿಂಗ್ ಪೇಮೆಂಟ್ಸ್​ಗೆ ಒಟಿಪಿ ಬೇಕಿಲ್ಲ

ಸರ್ಕಾರದಿಂದ ಫಿಚ್ ನಿರೀಕ್ಷಿಸಿರುವ ಎರಡನೇ ಹಂತದ ಕ್ರಮಗಳೆಂದರೆ, ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನಿಂದ ಬಾಧಿತವಾಗಿರುವ ಬ್ಯುಸಿನೆಸ್​ಗಳಿಗೆ ವೆಚ್ಚ ಏರಿಕೆಯನ್ನು ತಡೆಯುವುದು ಇತ್ಯಾದಿ ಒಳಗೊಂಡಿವೆ. ಎಕನಾಮಿಕ್ ಸ್ಟೆಬಿಲೈಸೇಶನ್ ಫಂಡ್ ಇತ್ಯಾದಿ ಯೋಜನೆ ಇದರಲ್ಲಿದೆ.

ಉದ್ದಿಮೆಗಳಿಗೆ ತೆರಿಗೆ ರಿಯಾಯಿತಿ, ಹಣಕಾಸು ನೆರವಿನ ಪ್ಯಾಕೇಜ್, ಸಾಲ ಖಾತ್ರಿ ಸ್ಕೀಮ್ ಇತ್ಯಾದಿ ಕ್ರಮಗಳನ್ನೂ ಸರ್ಕಾರ ತೆಗೆದುಕೊಳ್ಳುತ್ತಿದೆ. ಫಿಚ್​ನ ಬಿಎಂಐ ವರದಿಯಲ್ಲಿ ಈ ಎಲ್ಲವನ್ನೂ ಉಲ್ಲೇಖಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

NCL Recruitment 2026: ಕೇಂದ್ರ ಸರ್ಕಾರಿ ಉದ್ಯೋಗಾವಕಾಶ; ನಾರ್ದರ್ನ್ ಕೋಲ್‌ಫೀಲ್ಡ್ಸ್ ನಲ್ಲಿ 577 ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | NCL Recruitment 2026: 577 Posts for HEMM Operator, Paramedical and Overseer! Apply Now

ಕೇಂದ್ರ ಸರ್ಕಾರಿ ಉದ್ಯೋಗಾವಕಾಶImage Credit source: gemini ai

ಕೇಂದ್ರ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆಯಾದ ನಾರ್ದರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (NCL), 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯಡಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ಯಾರಾಮೆಡಿಕಲ್, ಓವರ್‌ಸೀರ್ ಮತ್ತು HEMM ಆಪರೇಟರ್ ಸೇರಿದಂತೆ ಒಟ್ಟು 577 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರಿ ವಲಯದಲ್ಲಿ ಸ್ಥಿರವಾದ ವೃತ್ತಿಜೀವನವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹುದ್ದೆಗಳ ವಿವರ ಮತ್ತು ಅರ್ಹತೆಗಳು:

ಈ ನೇಮಕಾತಿಯಲ್ಲಿ ಅತಿ ಹೆಚ್ಚು ಅಂದರೆ 472 ಹುದ್ದೆಗಳು HEMM ಆಪರೇಟರ್ (ಡಂಪರ್, ಡೋಜರ್, ಗ್ರೇಡರ್ ಮುಂತಾದವು) ವಿಭಾಗದಲ್ಲಿವೆ. ಈ ಹುದ್ದೆಗೆ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು ಮತ್ತು ಮಾನ್ಯತೆ ಪಡೆದ ಭಾರಿ ವಾಹನ ಚಾಲನಾ ಪರವಾನಗಿ (HMV) ಹೊಂದಿರಬೇಕು. ಇನ್ನುಳಿದಂತೆ 75 ಪ್ಯಾರಾಮೆಡಿಕಲ್ ಸಿಬ್ಬಂದಿ (ದಾದಿಯರು, ಔಷಧಿಕಾರರು) ಮತ್ತು 30 ಓವರ್‌ಸೀರ್ (ಸಿವಿಲ್) ಹುದ್ದೆಗಳಿದ್ದು, ಇವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಸಿವಿಲ್ ಓವರ್‌ಸೀರ್ ಹುದ್ದೆಗೆ ಮೂರು ವರ್ಷಗಳ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಕಡ್ಡಾಯವಾಗಿದೆ.

ವಯೋಮಿತಿ ಮತ್ತು ಶುಲ್ಕದ ವಿವರ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷಗಳ ನಡುವೆ ಇರಬೇಕು. ನಿಯಮದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅರ್ಜಿ ಶುಲ್ಕದ ವಿಷಯಕ್ಕೆ ಬಂದರೆ, ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು 1,180 ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಅಭ್ಯರ್ಥಿಗಳು ಮೇ 1 ರೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಯ್ಕೆ ಪ್ರಕ್ರಿಯೆ ಮತ್ತು ಆಕರ್ಷಕ ವೇತನ:

ಅಭ್ಯರ್ಥಿಗಳ ಅಂತಿಮ ಆಯ್ಕೆಯು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಮೂಲ ದಾಖಲೆಗಳ ಪರಿಶೀಲನೆಯನ್ನು ಆಧರಿಸಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. HEMM ಆಪರೇಟರ್‌ಗಳಿಗೆ ದಿನಕ್ಕೆ 1,502 ರೂಪಾಯಿ ವೇತನ ಸಿಗಲಿದ್ದರೆ, ಪ್ಯಾರಾಮೆಡಿಕಲ್ ಮತ್ತು ಓವರ್‌ಸೀರ್ ಹುದ್ದೆಗಳಿಗೆ ತಿಂಗಳಿಗೆ ಸುಮಾರು 47,330 ರೂಪಾಯಿಗಳವರೆಗೆ ವೇತನ ದೊರೆಯಲಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮದಂತೆ ಇತರ ಭತ್ಯೆಗಳು ಮತ್ತು ಸೌಲಭ್ಯಗಳು ಸಹ ಲಭ್ಯವಿರುತ್ತವೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಬಗ್ಗೆ ಆಕ್ಷೇಪಾರ್ಹವಾಗಿ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ – Kannada News | VP C.P. Radhakrishnan Takes a Dig at Mallikarjun Kharge Over Remarks on PM Modi

ಬೀದರ್​, ಏಪ್ರಿಲ್​​ 22: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ನಮ್ಮ ಮತ್ತು ಖರ್ಗೆ ಅವರ ದೃಷ್ಟಿಕೋನದಲ್ಲಿ ಸಣ್ಣ ಬದಲಾವಣೆ ಇದೆ ಅನಿಸುತ್ತೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಬಿಳಿ ಹಾಗೂ ಕಪ್ಪು ನಡುವಿನ ವ್ಯತ್ಯಾಸ ಇಲ್ಲ. ಅದೇ ರೀತಿ ಭಯೋತ್ಪಾದಕರು ಹಾಗೂ ಭಯೋತ್ಪಾದಕರಿಗೆ ಭಯ ಹುಟ್ಟಿಸುವವರ ಮಧ್ಯೆ ವ್ಯತ್ಯಾಸವಿಲ್ಲದಂತೆ ಕಾಣುತ್ತೆ. ಅದನ್ನು ಬಿಟ್ಟರೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ರಾಧಾಕೃಷ್ಣನ್ ಹೇಳಿದ್ದಾರೆ. ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದಲ್ಲಿ ನಡೆದ ಡಾ.ಬಸವಲಿಂಗ ಪಟ್ಟದೇವರ 75ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪರಾಷ್ಟ್ರಿಪತಿಗಳು ಈ ರೀತಿ ಹೇಳಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು – Kannada News | Lover Kills her Boy friend In Bengaluru: Kiran Father Reacts about Incident

ಬೆಂಗಳೂರು, (ಏಪ್ರಿಲ್ 22): ಬೆಂಗಳೂರಿನಲ್ಲಿ ಪ್ರೇಯಸಿಯೊಬ್ಬಳು, ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಬಾ ಎಂದು ತನ್ನ ಪ್ರಿಯಕರನನ್ನ ಮನೆಗೆ ಕರೆಯಿಸಿಕೊಂಡಿದ್ದು, ಬಳಿಕ ಪ್ರಿಯಕರನ ಕೈಕಾಲು ಕಟ್ಟಿ, ಬಟ್ಟೆ ಬಿಚ್ಚಿದ್ದಾಳೆ. ಬಳಿಕ ಪ್ರಪೋಸ್ ಮಾಡ್ತಾಳೆ ಅಂತಾ ಅಂದ್ಕೊಂಡಿದ್ದ ಯುವಕನ ಮೇಲೆ ಪ್ರೇಯಸಿಯೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಸದ್ಯ ಪ್ರಕರಣ ಸಂಬಂಧ ಪ್ರೇಯಿಸಿ ಪ್ರೇಮಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇನ್ನೊಂದೆಡೆ ಇದ್ದ ಒಬ್ಬನೇ ಮಗ ಕಿರಣ್​​​ನನ್ನು ಕಳೆದುಕೊಂಡ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಅವಳಿಗೂ ಕಠಿಣ ಶಿಕ್ಷೆಯಾಗಬೇಕೆಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ನೋಡಿ: ಫಾರಿನ್ ಸ್ಟೈಲಲ್ಲಿ ಪ್ರಪೋಸ್‌ ಮಾಡ್ತೀನಿ ಅಂತ ಕರೆದು ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ

Source link

ಆದಾಯ ತೆರಿಗೆ​ ಅಧಿಕಾರಿ ಜಿಮ್​ನಲ್ಲಿದ್ದಾಗ ಮನೆಯಲ್ಲಿ ಮಗಳ ಬರ್ಬರ ಹತ್ಯೆ – Kannada News | IRS officer’s 22 year old daughter murdered at Delhi home

ನವದೆಹಲಿ, ಏಪ್ರಿಲ್ 22: ದೆಹಲಿಯ ಆದಾಯ ತೆರಿಗೆ ಇಲಾಖೆಯ (ಐಆರ್​ಎಸ್​) ಹಿರಿಯ ಅಧಿಕಾರಿಯೊಬ್ಬರ 22 ವರ್ಷದ ಮಗಳನ್ನು ಅವರ ಮನೆಯಲ್ಲಿಯೇ ಬರ್ಬರವಾಗಿ ಕೊಲೆ (Girl Killed) ಮಾಡಲಾಗಿದೆ. ಇಂದು ಬೆಳಿಗ್ಗೆ ದೆಹಲಿಯ ಅಮರ್ ಕಾಲೋನಿ ಪ್ರದೇಶದ ತನ್ನ ಮನೆಯಲ್ಲಿ ಆ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಈ ವೇಳೆ ಐಆರ್​ಎಸ್​ ಅಧಿಕಾರಿ ಇದು ಪೊಲೀಸ್ ತನಿಖೆಗೆ ಕಾರಣವಾಗಿದೆ. ಪ್ರಾಥಮಿಕ ತನಿಖೆಗಳು ಪ್ರಕಾರ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಮೊಬೈಲ್ ಫೋನ್ ಚಾರ್ಜಿಂಗ್ ಕೇಬಲ್ ಬಳಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.

ಪೊಲೀಸರ ಪ್ರಕಾರ, ಘಟನೆ ನಡೆದಾಗ ಆ ಯುವತಿ ಮನೆಯಲ್ಲಿ ಒಬ್ಬಳೇ ಇದ್ದಳು. ಆಕೆಯ ಪೋಷಕರು ಜಿಮ್‌ಗೆ ಹೋಗಿದ್ದರು. ತನಿಖಾಧಿಕಾರಿಗಳು ಸುಮಾರು 6 ವಾರಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿದ್ದ ಮಾಜಿ ಕೆಲಸಗಾರ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಶಂಕಿಸಿದ್ದಾರೆ.

ಆಗ್ನೇಯ ದೆಹಲಿಯ ಐಷಾರಾಮಿ ಪ್ರದೇಶವಾದ ಅಮರ್ ಕಾಲೋನಿಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ರಾಜಧಾನಿ ದೆಹಲಿಯ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೃತ ಯುವತಿ 1997ರ ಬ್ಯಾಚ್‌ನ ಹಿರಿಯ ಐಆಅರ್​ಎಸ್ ಅಧಿಕಾರಿಯ ಮಗಳು. ಎಂಜಿನಿಯರಿಂಗ್ ಓದಿದ್ದ ಆಕೆ ಅಪ್ಪನಂತೆ ಆಫೀಸರ್ ಆಗಬೇಕೆಂಬ ಆಸೆಯಿಂದ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಐಆರ್​ಎಸ್​ ಅಧಿಕಾರಿಯಾಗಿದ್ದರಿಂದ ಅವರ ಮನೆಗೆ ಭದ್ರತೆಯಿತ್ತು. ಆದರೂ ಆಕೆಯ ಮನೆಯೊಳಗೇ ನಡೆದಿರುವ ಈ ಅತ್ಯಾಚಾರ ಮತ್ತು ಕೊಲೆ ದೆಹಲಿಯನ್ನು ಬೆಚ್ಚಿಬೀಳಿಸಿದೆ.

ಇದನ್ನೂ ಓದಿ: ಮದ್ವೆ ಒಂದು ದಿನ ಇರುವಾಗಲೇ ಹತ್ಯೆ: ಆ ವಿಷಯ ಹೇಳಿದ್ದಕ್ಕೆ ಸ್ನೇಹಿತನಿಂದಲೇ ಕೊಲೆಯಾದ ಡಾಕ್ಟರ್

ಕೊಲೆಗಾರ ಆ ಯುವತಿಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ ಎಂಬ ಅಂಶದಿಂದಲೇ ಅಪರಾಧದ ಕ್ರೌರ್ಯ ಎಷ್ಟಿತ್ತು ಎಂಬುದನ್ನು ಊಹಿಸಬಹುದು. ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ಕೊಲೆಯಾಗುವ ಮೊದಲು ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆ ಹೆಚ್ಚಾಗಿದೆ. ನಂತರ ಕೊಲೆಗಾರ ಮೊಬೈಲ್ ಫೋನ್ ಚಾರ್ಜರ್ ವೈರ್​​ನಿಂದ ಆಕೆಯ ಕುತ್ತಿಗೆ ಹಿಸುಕಿ ಕೊಂದಿದ್ದಾನೆ.

ಪ್ರಾಥಮಿಕ ತನಿಖೆಯಲ್ಲಿ ರಾಜಸ್ಥಾನದ ನಿವಾಸಿ ರಾಹುಲ್ ಎಂಬ ಮಾಜಿ ಕೆಲಸದಾಳು ಮೇಲೆ ಶಂಕೆ ವ್ಯಕ್ತವಾಗಿದೆ. ಸುಮಾರು 2 ತಿಂಗಳ ಹಿಂದೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಪೊಲೀಸರು ತನಿಖೆ ಆರಂಭಿಸಿ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ರಾಹುಲ್ ಬೆಳಿಗ್ಗೆ 6ರ ಸುಮಾರಿಗೆ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದ. ರಾಹುಲ್ 8 ತಿಂಗಳಿನಿಂದ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಸುಮಾರು 2 ತಿಂಗಳ ಹಿಂದೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.

ಇದನ್ನೂ ಓದಿ: ಗಾಜಿಯಾಬಾದ್‌ನಲ್ಲಿ 4 ವರ್ಷದ ಮಗುವನ್ನು ಕೊಂದಿದ್ದ ಆರೋಪಿಯ ಎನ್​ಕೌಂಟರ್; ಶವ ಬೇಡವೆಂದ ಕುಟುಂಬಸ್ಥರು

ರಾಹುಲ್ ಗೃಹೋಪಯೋಗಿ ವಸ್ತುಗಳನ್ನು ಆರ್ಡರ್ ಮಾಡಲು ಬಳಸುವ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಕಾರಣಕ್ಕೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಪೊಲೀಸರ ಪ್ರಕಾರ, ಬೆಳಿಗ್ಗೆ 6.30ರಿಂದ 7.30ರ ನಡುವೆ ಈ ಕೊಲೆ ನಡೆದಿದೆ. ದಿನವೂ ಈ ಸಮಯದಲ್ಲಿ ಐಆರ್‌ಎಸ್ ಅಧಿಕಾರಿ ತನ್ನ ಹೆಂಡತಿಯೊಂದಿಗೆ ಜಿಮ್‌ಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಅವರ ಮಗಳು ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ಇದು ರಾಹುಲ್‌ಗೆ ತಿಳಿದಿತ್ತು. ಮನೆಗೆ ಕೆಲಸದವರು ಬರುವ ಸಮಯ ಕೂಡ ಆತನಿಗೆ ತಿಳಿದಿತ್ತು. ಹೀಗಾಗಿ, ಅವನು ಪ್ಲಾನ್ ಮಾಡಿಯೇ ಅದೇ ಸಮಯಕ್ಕೆ ಬಂದು ಕೊಲೆ ಮಾಡಿದ್ದಾನೆ ಎಂಬ ಅನುಮಾನ ಪೊಲೀಸರದ್ದು. ಆ ವ್ಯಕ್ತಿ ಮನೆಯಿಂದ ಏನನ್ನಾದರೂ ಕದ್ದು ಪರಾರಿಯಾಗಿದ್ದಾನೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆತನಿಗಾಗಿ ಹುಡುಕಾಟ ಮುಂದುವರೆದಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಆಗ್ನೇಯ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಆಗಮಿಸಿದವು. ಅತ್ಯಾಚಾರವನ್ನು ದೃಢೀಕರಿಸಲು ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿಯನ್ನು ಬಂಧಿಸಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮರ್ಮಾಂಗ ಚಿಕಿತ್ಸೆ ಮಾಡಿ ಅದನ್ನು ಸರಿಯಾಗಿ ಮುಚ್ಚಿಲ್ಲ: ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು? – Kannada News | Victoria Hospital Under Scrutiny: Superintendent Addresses Medical Negligence Allegations

ಬೆಂಗಳೂರು, ಏ.22: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ವರ್ಷದ ಶಾ ನವಾಜ್ ಅವರ ಸಾವಿನ ಕುರಿತು ಕುಟುಂಬದವರು ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಮರ್ಮಾಂಗದಲ್ಲಿ ಕಾಣಿಸಿಕೊಂಡಿದ್ದ ಫೋರ್ನಿಯರ್ಸ್ ಗ್ಯಾಂಗ್ರೀನ್ ಸೋಂಕಿನಿಂದ ಬಳಲುತ್ತಿದ್ದ ಶಾ ನವಾಜ್ ಅವರನ್ನು ಸಮರ್ಪಕವಾಗಿ ಚಿಕಿತ್ಸೆ ನೀಡದೆ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್, ಶಾ ನವಾಜ್ ಫೆಬ್ರವರಿ 19 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಫೋರ್ನಿಯರ್ಸ್ ಗ್ಯಾಂಗ್ರೀನ್ ಗಾಯಗಳು ಪ್ಲಾಸ್ಟಿಕ್ ಸರ್ಜರಿಗೆ ಮೊದಲು ಸಂಪೂರ್ಣವಾಗಿ ಸೋಂಕು ಮುಕ್ತವಾಗಬೇಕು. ಇದರಿಂದ ಕೆಲವೊಮ್ಮೆ ರೋಗಿಗಳಿಗೆ ಮನೆಯಲ್ಲಿ ಡ್ರೆಸ್ಸಿಂಗ್ ಮಾಡಿಕೊಂಡು ನಿಯಮಿತ ತಪಾಸಣೆಗೆ ಬರುವಂತೆ ಸೂಚಿಸಲಾಗುತ್ತದೆ ಎಂದರು. ಕುಟುಂಬದವರು ಏಪ್ರಿಲ್ 15 ರಂದು ದೂರು ನೀಡಿದ ನಂತರ, ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ವೈದ್ಯಕೀಯ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ವರದಿ ಬಂದ ನಂತರವೇ ವೈದ್ಯಕೀಯ ನಿರ್ಲಕ್ಷ್ಯವಾಗಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಲಿದೆ ಎಂದು ಡಾ. ದೀಪಕ್ ತಿಳಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಪರ್ಸ್‌ನಲ್ಲಿ ಹಣ ನಿಲ್ಲುತ್ತಿಲ್ಲವೇ? ಲಕ್ಷ್ಮಿಯ ಕೃಪೆಗಾಗಿ ಈ ಸರಳ ವಾಸ್ತು ನಿಯಮ ಅನುಸರಿಸಿ – Kannada News | Vastu Tips for Wallet: Attract Wealth and Stop Money Loss with These Simple Purse Changes

ಪರ್ಸ್‌ನಲ್ಲಿ ಹಣ ನಿಲ್ಲುತ್ತಿಲ್ಲವೇ?Image Credit source: Pinterest

ಎಷ್ಟೇ ಸಂಪಾದಿಸಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲ, ಅನಗತ್ಯ ಖರ್ಚುಗಳು ಹೆಚ್ಚಾಗುತ್ತಿವೆ ಎಂಬುದು ಇಂದಿನ ಕಾಲದ ಅನೇಕರ ದೊಡ್ಡ ಸಮಸ್ಯೆ. ವಾಸ್ತು ಶಾಸ್ತ್ರದ ಪ್ರಕಾರ, ನಾವು ಹಣ ಇಡುವ ಪರ್ಸ್ ಅಥವಾ ಕೈಚೀಲದಲ್ಲಿರುವ ‘ನಕಾರಾತ್ಮಕ ಶಕ್ತಿ’ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ನಿಮ್ಮ ಪರ್ಸ್ ಅನ್ನು ಅದೃಷ್ಟದ ಕೇಂದ್ರವನ್ನಾಗಿ ಮಾಡಲು ಈ ಕೆಳಗಿನ ಸರಳ ಬದಲಾವಣೆಗಳನ್ನು ಮಾಡಿಕೊಳ್ಳಿ:

ಸಂಪತ್ತು ಹೆಚ್ಚಿಸಲು ಪರ್ಸ್‌ನಲ್ಲಿ ಇರಬೇಕಾದ ವಸ್ತುಗಳು:

ಅರಿಶಿನ ಮಿಶ್ರಿತ ಅಕ್ಕಿ:

ವಾಸ್ತು ಪ್ರಕಾರ ಅಕ್ಕಿ ಧಾನ್ಯಗಳು ಸಮೃದ್ಧಿಯನ್ನು ಪ್ರತಿನಿಧಿಸುತ್ತವೆ. ಕೆಲವು ಅಕ್ಕಿ ಕಾಳುಗಳಿಗೆ ಸ್ವಲ್ಪ ಅರಿಶಿನ ಹಚ್ಚಿ, ಅದನ್ನು ಒಂದು ಚಿಕ್ಕ ಕಾಗದದಲ್ಲಿ ಕಟ್ಟಿ ಪರ್ಸ್‌ನಲ್ಲಿ ಇರಿಸಿ. ಇದು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಆರ್ಥಿಕ ಸ್ಥಿರತೆಯನ್ನು ತರುತ್ತದೆ. (ಗಮನಿಸಿ: ಅಕ್ಕಿ ಕಾಳುಗಳು ಪುಡಿಯಾಗಿದ್ದರೆ ತಕ್ಷಣ ಬದಲಿಸಿ).

ಲಕ್ಷ್ಮಿ ದೇವಿಯ ಚಿತ್ರ:

ಹಣದ ದೇವತೆಯಾದ ಲಕ್ಷ್ಮಿ ದೇವಿಯ ಸಣ್ಣ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಶುಭ. ಇದು ಆದಾಯದ ಹೊಸ ಮೂಲಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಆದರೆ, ಫೋಟೋ ಹಳೆಯದಾಗಿ ಅಥವಾ ಹರಿದು ಹೋಗಿದ್ದರೆ ಅದನ್ನು ತಕ್ಷಣವೇ ಗೌರವಯುತವಾಗಿ ಬದಲಾಯಿಸಿ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಹಸಿರು ಏಲಕ್ಕಿ:

ಏಲಕ್ಕಿಗಳು ಕೇವಲ ಸುವಾಸನೆಗೆ ಮಾತ್ರವಲ್ಲ, ಅವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿ ಹೊಂದಿವೆ. ಒಂದು ಅಥವಾ ಎರಡು ಹಸಿರು ಏಲಕ್ಕಿಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಂಡು ಅದೃಷ್ಟ ಒಲಿಯುತ್ತದೆ.

ಇವುಗಳನ್ನು ನಿಮ್ಮ ಪರ್ಸ್‌ನಿಂದ ತಕ್ಷಣ ಹೊರಹಾಕಿ:

ಪರ್ಸ್ ಅನ್ನು ಎಂದಿಗೂ ಕಸದ ರಾಶಿಯಂತೆ ಬಳಸಬಾರದು. ಈ ವಸ್ತುಗಳು ಲಕ್ಷ್ಮಿ ದೇವಿಯ ಕೆಂಗಣ್ಣಿಗೆ ಕಾರಣವಾಗಬಹುದು. ಹೋಟೆಲ್ ಬಿಲ್‌ಗಳು ಅಥವಾ ಹಳೆಯ ಗ್ಯಾಸ್ ರಶೀದಿಗಳನ್ನು ಪರ್ಸ್‌ನಲ್ಲಿ ಇಡುವುದರಿಂದ ‘ರಾಹು ದೋಷ’ ಉಂಟಾಗಿ ಹಣದ ಹರಿವು ನಿಲ್ಲಬಹುದು. ಇದಲ್ಲದೇ ಹಳೆಯ ಮತ್ತು ಹರಿದ ನೋಟುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಬಡತನವನ್ನು ಆಹ್ವಾನಿಸಿದಂತೆ. ನೋಟುಗಳನ್ನು ಕಂಡ ಕಂಡಂತೆ ಮಡಚಿ ಇಡಬೇಡಿ. ಬದಲಾಗಿ, ಅವುಗಳನ್ನು ಕ್ರಮಬದ್ಧವಾಗಿ ಜೋಡಿಸಿ ಇಡುವುದು ಹಣದ ಮೇಲಿರುವ ನಿಮ್ಮ ಗೌರವವನ್ನು ತೋರಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:23 pm, Wed, 22 April 26

Source link

Exit mobile version