Vasthu Tips: ಪರ್ಸ್‌ನಲ್ಲಿ ಹಣ ನಿಲ್ಲುತ್ತಿಲ್ಲವೇ? ಲಕ್ಷ್ಮಿಯ ಕೃಪೆಗಾಗಿ ಈ ಸರಳ ವಾಸ್ತು ನಿಯಮ ಅನುಸರಿಸಿ – Kannada News | Vastu Tips for Wallet: Attract Wealth and Stop Money Loss with These Simple Purse Changes

ಪರ್ಸ್‌ನಲ್ಲಿ ಹಣ ನಿಲ್ಲುತ್ತಿಲ್ಲವೇ?Image Credit source: Pinterest

ಎಷ್ಟೇ ಸಂಪಾದಿಸಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲ, ಅನಗತ್ಯ ಖರ್ಚುಗಳು ಹೆಚ್ಚಾಗುತ್ತಿವೆ ಎಂಬುದು ಇಂದಿನ ಕಾಲದ ಅನೇಕರ ದೊಡ್ಡ ಸಮಸ್ಯೆ. ವಾಸ್ತು ಶಾಸ್ತ್ರದ ಪ್ರಕಾರ, ನಾವು ಹಣ ಇಡುವ ಪರ್ಸ್ ಅಥವಾ ಕೈಚೀಲದಲ್ಲಿರುವ ‘ನಕಾರಾತ್ಮಕ ಶಕ್ತಿ’ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ನಿಮ್ಮ ಪರ್ಸ್ ಅನ್ನು ಅದೃಷ್ಟದ ಕೇಂದ್ರವನ್ನಾಗಿ ಮಾಡಲು ಈ ಕೆಳಗಿನ ಸರಳ ಬದಲಾವಣೆಗಳನ್ನು ಮಾಡಿಕೊಳ್ಳಿ:

ಸಂಪತ್ತು ಹೆಚ್ಚಿಸಲು ಪರ್ಸ್‌ನಲ್ಲಿ ಇರಬೇಕಾದ ವಸ್ತುಗಳು:

ಅರಿಶಿನ ಮಿಶ್ರಿತ ಅಕ್ಕಿ:

ವಾಸ್ತು ಪ್ರಕಾರ ಅಕ್ಕಿ ಧಾನ್ಯಗಳು ಸಮೃದ್ಧಿಯನ್ನು ಪ್ರತಿನಿಧಿಸುತ್ತವೆ. ಕೆಲವು ಅಕ್ಕಿ ಕಾಳುಗಳಿಗೆ ಸ್ವಲ್ಪ ಅರಿಶಿನ ಹಚ್ಚಿ, ಅದನ್ನು ಒಂದು ಚಿಕ್ಕ ಕಾಗದದಲ್ಲಿ ಕಟ್ಟಿ ಪರ್ಸ್‌ನಲ್ಲಿ ಇರಿಸಿ. ಇದು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಆರ್ಥಿಕ ಸ್ಥಿರತೆಯನ್ನು ತರುತ್ತದೆ. (ಗಮನಿಸಿ: ಅಕ್ಕಿ ಕಾಳುಗಳು ಪುಡಿಯಾಗಿದ್ದರೆ ತಕ್ಷಣ ಬದಲಿಸಿ).

ಲಕ್ಷ್ಮಿ ದೇವಿಯ ಚಿತ್ರ:

ಹಣದ ದೇವತೆಯಾದ ಲಕ್ಷ್ಮಿ ದೇವಿಯ ಸಣ್ಣ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಶುಭ. ಇದು ಆದಾಯದ ಹೊಸ ಮೂಲಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಆದರೆ, ಫೋಟೋ ಹಳೆಯದಾಗಿ ಅಥವಾ ಹರಿದು ಹೋಗಿದ್ದರೆ ಅದನ್ನು ತಕ್ಷಣವೇ ಗೌರವಯುತವಾಗಿ ಬದಲಾಯಿಸಿ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಹಸಿರು ಏಲಕ್ಕಿ:

ಏಲಕ್ಕಿಗಳು ಕೇವಲ ಸುವಾಸನೆಗೆ ಮಾತ್ರವಲ್ಲ, ಅವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿ ಹೊಂದಿವೆ. ಒಂದು ಅಥವಾ ಎರಡು ಹಸಿರು ಏಲಕ್ಕಿಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಂಡು ಅದೃಷ್ಟ ಒಲಿಯುತ್ತದೆ.

ಇವುಗಳನ್ನು ನಿಮ್ಮ ಪರ್ಸ್‌ನಿಂದ ತಕ್ಷಣ ಹೊರಹಾಕಿ:

ಪರ್ಸ್ ಅನ್ನು ಎಂದಿಗೂ ಕಸದ ರಾಶಿಯಂತೆ ಬಳಸಬಾರದು. ಈ ವಸ್ತುಗಳು ಲಕ್ಷ್ಮಿ ದೇವಿಯ ಕೆಂಗಣ್ಣಿಗೆ ಕಾರಣವಾಗಬಹುದು. ಹೋಟೆಲ್ ಬಿಲ್‌ಗಳು ಅಥವಾ ಹಳೆಯ ಗ್ಯಾಸ್ ರಶೀದಿಗಳನ್ನು ಪರ್ಸ್‌ನಲ್ಲಿ ಇಡುವುದರಿಂದ ‘ರಾಹು ದೋಷ’ ಉಂಟಾಗಿ ಹಣದ ಹರಿವು ನಿಲ್ಲಬಹುದು. ಇದಲ್ಲದೇ ಹಳೆಯ ಮತ್ತು ಹರಿದ ನೋಟುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಬಡತನವನ್ನು ಆಹ್ವಾನಿಸಿದಂತೆ. ನೋಟುಗಳನ್ನು ಕಂಡ ಕಂಡಂತೆ ಮಡಚಿ ಇಡಬೇಡಿ. ಬದಲಾಗಿ, ಅವುಗಳನ್ನು ಕ್ರಮಬದ್ಧವಾಗಿ ಜೋಡಿಸಿ ಇಡುವುದು ಹಣದ ಮೇಲಿರುವ ನಿಮ್ಮ ಗೌರವವನ್ನು ತೋರಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:23 pm, Wed, 22 April 26

Source link

ಸರ್ಕಾರಿ ಸಭೆಯಲ್ಲಿ ಸಚಿವರ ಪುತ್ರನಿಗೆ ರಾಜ ಮರ್ಯಾದೆ: ಕೈಕಟ್ಟಿ ನಿಂತ ಅಧಿಕಾರಿಗಳು – Kannada News | Kanakagiri Protocol Violation: Minister Shivaraj Tangadagi Son Sits While Senior Officials Stand

ಕನಕಗಿರಿ ಉತ್ಸವದ ಪೂರ್ವಭಾವಿ ಸಭೆImage Credit source: tv9 kannada

ಕೊಪ್ಪಳ, ಏಪ್ರಿಲ್​​ 22: ಜಿಲ್ಲೆಯ ಕನಕಗಿರಿಯಲ್ಲಿ ಸರ್ಕಾರಿ ಶಿಷ್ಟಾಚಾರಕ್ಕೆ ಎಳ್ಳುನೀರು ಬಿಟ್ಟ ಘಟನೆಯೊಂದು ನಡೆದಿದೆ. ಕನಕಗಿರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ (Shivaraj Tangadagi) ಪುತ್ರ ಶಶಾಂಕ್ ನಡೆಸಿದ ದರ್ಬಾರ್ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಈ ನಡೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಿನ್ನೆ ಕನಕಗಿರಿ ಉತ್ಸವದ ಪೂರ್ವಭಾವಿ ಸಭೆ ನಡೆಯಿತು. ಈ ವೇಳೆ ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಾಂಕ್ ವೇದಿಕೆಯ ಮೇಲೆ ಕುಳಿತ್ತಿದ್ದರು, ಆದರೆ ಅದೇ ಸಭೆಯಲ್ಲಿ ಕ್ಷೇತ್ರದ ಜವಾಬ್ದಾರಿ ಹೊತ್ತಿರುವ ತಹಶೀಲ್ದಾರ್ ವಿಶ್ವನಾಥ್ ಮುರಡಿ ಮತ್ತು ತಾಲ್ಲೂಕು ಪಂಚಾಯತ್ ಇಓ ರಾಜಶೇಖರ್​ಗೆ ಕುಳಿತುಕೊಳ್ಳಲು ಕುರ್ಚಿಯೇ ಇರಲಿಲ್ಲ.

ಸಚಿವನ ಪುತ್ರನಿಗೆ ‘ರಾಜ ಮರ್ಯಾದೆ’: ನನ್ನ ಗಮನಕ್ಕೆ ಬಂದಿಲ್ಲ ಎಂದ ಡಿಸಿ

ಸರಕಾರಿ ಶಿಷ್ಟಾಚಾರದ ಪ್ರಕಾರ ಸರಕಾರಿ ಸಭೆಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಆದ್ಯತೆ ಇರಬೇಕು. ಆದರೆ ಇಲ್ಲಿ ಸಚಿವರ ಪುತ್ರನಿಗೆ ‘ರಾಜ ಮರ್ಯಾದೆ’ ನೀಡಿದ ಜಿಲ್ಲಾಡಳಿತ, ಹಿರಿಯ ಅಧಿಕಾರಿಗಳು ವೇದಿಕೆ ಮೇಲೆ ನಿಲ್ಲುವಂತೆ ಮಾಡಿದೆ. ಇನ್ನು ಸಚಿವ ಶಿವರಾಜ್ ತಂಗಡಗಿ ಪುತ್ರ ಕುತಿರುವುದು ನನ್ನ ಗಮನಕ್ಕೆ ಇಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಸಚಿವ ಶಿವರಾಜ್ ತಂಗಡಗಿಗೆ ಎದೆ ನೋವು, ಆಸ್ಪತ್ರೆಗೆ ದಾಖಲು

ಸಚಿವರ ಮಗ ಎಂಬ ಒಂದೇ ಕಾರಣಕ್ಕೆ ಅಧಿಕಾರಿಗಳನ್ನು ಗೌರವವಿಲ್ಲದೆ ನಿಲ್ಲಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಚಿವರಿಗಿಂತ ಅವರ ಮಗನೇ ಪವರ್‌ಫುಲ್ ಆಗಿದ್ದಾರಾ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ಪುತ್ರನಿಗೆ ಏನು ಕೆಲಸ ಅನ್ನೋದು ಇದೀಗ ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಸರ್ಕಾರಿ ಅಧಿಕಾರಿಗಳೇ ತಾವು ನಿಂತ ಫೋಟೋಗಳನ್ನ ಸ್ಟೇಟಸ್ ಹಾಕೊಂಡಿದ್ದರು, ಅವರ ಪಕ್ಕದಲ್ಲಿಯೇ ಮಂತ್ರಿ ಮಗ ಕುರ್ಚಿಯಲ್ಲಿ ಕುಳಿತಿದ್ದಾನೆ, ಆದರೆ ಮೂವರು ಅಧಿಕಾರಿಗಳು ಮಾತ್ರ ಎದ್ದುನಿಂತಿದ್ದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ.

ಮಗ ಮಾಡಿದ್ದು ತಪ್ಪು ಎಂದ ಸಚಿವ ಶಿವರಾಜ್​ ತಂಗಡಗಿ

ಇನ್ನು ಈ ವಿಚಾರವಾಗಿ ಖುದ್ದು ಸಚಿವ ಶಿವರಾಜ್​ ತಂಗಡಗಿ ಮಾತಾನಾಡಿದ್ದು, ಮಗ ಮಾಡಿದ್ದು ತಪ್ಪು. ಸರ್ಕಾರಿ ಕಾರ್ಯಕ್ರಮದ ಮೂಲೆಯಲ್ಲಿ ಕೂರಲು ಮಗನಿಗೆ ಅವಕಾಶವಿಲ್ಲ, ಅವನು ಅಲ್ಲಿ ಕೂತಿದ್ದೇ ತಪ್ಪು.  ಮಗ ಜನ ಪ್ರತಿನಿಧಿ ಅಲ್ಲ, ನಾನು ಜನ ಪ್ರತಿನಿಧಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: 50 ಎಕರೆ ಸವಾಲು ಹಾಕಿದ ಬಿಜೆಪಿ ಮಾಜಿ ಶಾಸಕರಿಗೆ ವಿಡಿಯೋ ಬಿಡ್ಲಾ ಎಂದ ಸಚಿವ ತಂಗಡಗಿ

ಒಟ್ಟಿನಲ್ಲಿ ಕನಕಗಿರಿಯಲ್ಲಿ ನಡೆದ ಈ ಘಟನೆ ಜಿಲ್ಲಾಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಸಚಿವರ ಓಲೈಕೆಗೆ ಬಿದ್ದ ಅಧಿಕಾರಿಗಳು ತಮ್ಮ ಹುದ್ದೆಯ ಮರ್ಯಾದೆಯನ್ನು ಗಾಳಿಗೆ ತೂರಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಮಗನ ರಾಜಕೀಯ ಭವಿಷ್ಯ ರೂಪಿಸಲು ಸಚಿವರೇ ಮಗನನ್ನ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದರಾ ಎನ್ನುವ ಅನುಮಾನಗಳು ಶುರುವಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RCB ವಿರುದ್ಧ ಹೀರೋ SRH ವಿರುದ್ಧ ಝೀರೋ! – Kannada News | David miller Bowled By Eshan Malinga

RCB ವಿರುದ್ಧ ಹೀರೋ SRH ವಿರುದ್ಧ ಝೀರೋ… ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಹೀರೋ ಎನಿಸಿಕೊಂಡಿದ್ದ ಡೇವಿಡ್ ಮಿಲ್ಲರ್ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಝೀರೋಗೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.

ಹೈದರಾಬಾದ್​ನ ರಾಜೀವ್​ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 242 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 10 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಡೇವಿಡ್ ಮಿಲ್ಲರ್ (0) ಈಶಾನ್ ಮಲಿಂಗಾ ಎಸೆದ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು.

ಇದಕ್ಕೂ ಮುನ್ನ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಇದೇ ಮಿಲ್ಲರ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರೋಚಕ ಜಯ ತಂದು ಕೊಟ್ಟಿದ್ದರು. ಈ ಪಂದ್ಯದಲ್ಲಿ ಆರ್​ಸಿಬಿ ನೀಡಿದ 176 ರನ್​ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತಂಡಕ್ಕೆ ಕೊನೆಯ ಓವರ್‌ನಲ್ಲಿ 15 ರನ್ಗಳ ಅವಶ್ಯಕತೆಯಿತ್ತು.

ವೆಸ್ಟ್ ಇಂಡೀಸ್‌ನ ವೇಗಿ ರೊಮಾರಿಯೋ ಶೆಫರ್ಡ್ ಎಸೆದ ಕೊನೆಯ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಕೇವಲ 2 ರನ್ ಬಂದವು. ಆದರೆ ಬಳಿಕ ಡೇವಿಡ್ ಮಿಲ್ಲರ್  ಸತತವಾಗಿ 6, 6, 4 ಸಿಡಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಥ್ರಿಲ್ಲರ್ ಗೆಲುವು ತಂದುಕೊಟ್ಟಿದ್ದರು.

ಇದೇ ಕಾರಣದಿಂದಾಗಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮಿಲ್ಲರ್ ಅವರನ್ನು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಆದರೆ ಈ ಬಾರಿ ಗೋಲ್ಡನ್ ಡಕ್​ಗೆ ಔಟಾಗುವ ಮೂಲಕ ಮಿಲ್ಲರ್ ನಿರಾಸೆ ಮೂಡಿಸಿದ್ದಾರೆ.

 

Source link

ನನ್ನ ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ ಸರ್: ಕಣ್ಣೀರಿಟ್ಟ ಪತಿ – Kannada News | Gym trainer Nithish Reacts about Wife Escaped With Friend at Bengaluru

ಬೆಂಗಳೂರು, (ಏಪ್ರಿಲ್ 22): ಜಿಮ್ ಟ್ರೈನರ್‌ನನ್ನು  ಪ್ರೀತಿಸಿ ಮದುವೆಯಾಗಿ ಈಗ ಗಂಡನ ಸ್ನೇಹಿತನ ಜೊತೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಜಿಮ್ ಟ್ರೈನರ್ ನಿತೇಶ್ ಮತ್ತು ನವೀನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ನಿತೇಶ್ ಯುವತಿಯೊಬ್ಬರನ್ನು ಪ್ರೀತಿಸಿ ಮದುವೆಯಾದ ಬಳಿಕ, ಸ್ನೇಹಿತ ನವೀನ್ ಅವರ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು. ಈ ವೇಳೆ ನವೀನ್ ತನ್ನ ಪತ್ನಿ ಮೇಲೆ ಕಣ್ಣು ಹಾಕಿರುವುದು ನಿತೇಶ್ ಗಮನಕ್ಕೆ ಬಂದಿತ್ತು. ನವೀನ್‌ನ ನಂಬರ್ ಅನ್ನು ಹುಡುಗಿಯ ಹೆಸರಿನಲ್ಲಿ ಸೇವ್ ಮಾಡಿಕೊಂಡು ಪತ್ನಿ ಚಾಟಿಂಗ್ ಮಾಡುತ್ತಿದ್ದಳು. ಈ ಬಗ್ಗೆ ಹಲವು ಬಾರಿ ಬುದ್ಧಿ ಮಾತು ಹೇಳಿದ್ದ ನಿತೇಶ್, ನಂತರ ಬನಶಂಕರಿಯ ಬೇರೊಂದು ಮನೆಗೆ ಶಿಫ್ಟ್ ಆಗಿದ್ದರು. ಆದ್ರೆ, ಇದೀಗ ನಿತೇಶ್ ಹೆಂಡತಿ ಸ್ನೇಹಿತ ನವೀನ್ ಜೊತೆ ಓಡಿ ಹೋಗಿದ್ದಾಳೆ. ಇದರಿಂದ ಪತಿ ನಿತೇಶ್ ಕಂಗಾಲಾಗಿದ್ದು, ಇತ್ತ ಅಣ್ಣನ ತರ ಅಂದಿದ್ಲು, ಈಗ ಅಣ್ಣನ ಜೊತೆಯೇ ಓಡಿ ಹೋಗಿದ್ದಾಳೆಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕಿದ ಬೆಸ್ಟ್ ಫ್ರೆಂಡ್: ಪ್ರೀತಿಸಿ ಮದುವೆಯಾದ ಪತ್ನಿ ಈಗ ಗೆಳೆಯನ ಪಾಲು

Source link

ಕ್ಯಾಮೆರಾ ಎದುರಲ್ಲೇ ಬಯಲಾಯ್ತು ‘ಧುರಂಧರ್’ ಗಾಯಕಿಯ ಕಳ್ಳಾಟ; ಭಾರಿ ಟ್ರೋಲ್ – Kannada News | Dhurandhar singer Jasmine Sandlas Ahmedabad concert water stunt and Lip Sync controversy

ಖ್ಯಾತ ಪಂಜಾಬಿ ಗಾಯಕಿ ಜಾಸ್ಮಿನ್ ಸ್ಯಾಂಡ್ಲಸ್ (Jasmine Sandlas) ಸದ್ಯ ವಿವಾದವೊಂದರ ಕೇಂದ್ರಬಿಂದುವಾಗಿದ್ದಾರೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ (Dhurandhar) ಸಿನಿಮಾದ ಹಾಡುಗಳ ಮೂಲಕ ಜಾಸ್ಮಿನ್ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಆದರೆ ಈ ಗಾಯಕಿಯ ಇತ್ತೀಚಿನ ಲೈವ್ ಕಾನ್ಸರ್ಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವೇದಿಕೆ ಮೇಲೆ ಲಿಪ್ ಸಿಂಕ್ (Lip Sync) ಮಾಡಿದ್ದು ಹಾಗೂ ಮೈ ಮೇಲೆ ನೀರು ಸುರಿದುಕೊಂಡಿದ್ದು ಟೀಕೆಗೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ಏಪ್ರಿಲ್ 19ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಜಾಸ್ಮಿನ್ ಸ್ಯಾಂಡ್ಲಸ್ ಹಾಡು ಹೇಳುತ್ತಿದ್ದರು. ಲೆಹೆಂಗಾ ಧರಿಸಿ ಮಿಂಚುತ್ತಿದ್ದ ಅವರು, ತಮ್ಮ ಹಿಟ್ ಹಾಡು ‘ಶರಾರತ್’ ಹಾಡುತ್ತಿದ್ದಾಗ ಹಠಾತ್ತನೆ ಮೈಮೇಲೆ ನೀರು ಸುರಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ವೇದಿಕೆಯ ಮೇಲೆ ಹಾಡಿನ ಹುಕ್ ಸ್ಟೆಪ್ ಹಾಕುತ್ತಾ ಪ್ರೇಕ್ಷಕರನ್ನು ರಂಜಿಸಲು ಯತ್ನಿಸಿದರು. ಆದರೆ, ಅವರ ಈ ಓವರ್ ಆ್ಯಕ್ಟಿಂಗ್ ನೋಡಿ ಜನರಿಗೆ ಕಿರಿಕಿರಿ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಗಮನಿಸಿದರೆ ಒಂದು ಹಂತದಲ್ಲಿ ಜಾಸ್ಮಿನ್ ಸ್ಯಾಂಡ್ಲಸ್ ಅವರು ಮೈಕ್ ಕೆಳಗೆ ಇಳಿಸಿದರೂ ಹಿನ್ನೆಲೆಯಲ್ಲಿ ಹಾಡು ಪ್ಲೇ ಆಗುತ್ತಿರುವುದು ಕಂಡುಬಂದಿದೆ. ಇದು ಲಿಪ್ ಸಿಂಕ್ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ಆದ್ದರಿಂದ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಲೈವ್ ಕಾನ್ಸರ್ಟ್‌ನಲ್ಲೂ ಇವರು ಲೈವ್ ಆಗಿ ಹಾಡುವುದಿಲ್ಲ’ ಎಂದು ಟೀಕಿಸಲಾಗಿದೆ.

ಜಾಸ್ಮಿನ್ ಸ್ಯಾಂಡ್ಲಸ್ ವೈರಲ್ ವಿಡಿಯೋ:

‘ಇವರನ್ನು ಹಾಡಲು ಕರೆಸಿದ್ದಾರೋ ಅಥವಾ ನಟನೆ ಮಾಡಲು ಕರೆಸಿದ್ದಾರೋ’ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ‘ಕೇವಲ ಎರಡು ಹಾಡುಗಳು ಹಿಟ್ ಆದ ಕೂಡಲೇ ಇವರ ಅತಿರೇಕದ ವರ್ತನೆ ಜಾಸ್ತಿಯಾಗಿದೆ’ ಎಂಬ ಟೀಕೆ ಕೂಡ ಬಂದಿದೆ. ಇಷ್ಟೆಲ್ಲ ಟೀಕೆಗಳ ನಡುವೆಯೂ ಜಾಸ್ಮಿನ್ ಸ್ಯಾಂಡ್ಲಸ್ ಅವರ ಅಪ್ಪಟ ಅಭಿಮಾನಿಗಳು ಅವರ ಪರವಾಗಿಯೇ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ತಯಾರಾಗಿದ್ದು ಹೇಗೆ ಗೊತ್ತಾ? ಚಿತ್ರಮಂದಿರದಲ್ಲೇ ನೋಡಿ ಮೇಕಿಂಗ್ ವಿಡಿಯೋ

ಸೂಪರ್ ಹಿಟ್ ಆಗಿರುವ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಒಟ್ಟು ಐದು ಹಾಡುಗಳಿಗೆ ಜಾಸ್​ಮಿನ್ ಸ್ಯಾಂಡ್ಲಸ್ ಧ್ವನಿಯಾಗಿದ್ದಾರೆ. ‘ಶರಾರತ್’, ‘ಮೈ ಔರ್ ತೂ’, ‘ಆರಿ ಆರಿ’ ಮತ್ತು ‘ಜೈಯೇ ಸಜನಾ’ ಹಾಡುಗಳು ಈಗಾಗಲೇ ಭಾರಿ ಫೇಮಸ್ ಆಗಿವೆ. ಈ ಹಾಡುಗಳ ಮೂಲಕ ಜಾಸ್ಮಿನ್ ಸ್ಯಾಂಡ್ಲಸ್ ಅವರಿಗೆ ಸಖತ್ ಜನಪ್ರಿಯತೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಾಜಿಯಾಬಾದ್‌ನಲ್ಲಿ 4 ವರ್ಷದ ಮಗುವನ್ನು ಕೊಂದಿದ್ದ ಆರೋಪಿಯ ಎನ್​ಕೌಂಟರ್; ಶವ ಬೇಡವೆಂದ ಕುಟುಂಬಸ್ಥರು – Kannada News | Accused who killed 4 year old girl in Ghaziabad encounter family refuses to claim body

ಗಾಜಿಯಾಬಾದ್, ಏಪ್ರಿಲ್ 22: ಮಾವ, ಮಾವ ಎಂದು ಮುದ್ದಾಗಿ ಕರೆಯುತ್ತಾ ಮನೆತುಂಬ ಓಡಾಡಿಕೊಂಡಿದ್ದ 4 ವರ್ಷದ ಹೆಣ್ಣುಮಗುವಿನ ಮೇಲೆ ಆ 55 ವರ್ಷದ ಮಾವನ ಕಣ್ಣು ಬಿದ್ದಿತ್ತು. ತನ್ನ ಸ್ವಂತ ತಂಗಿಯ 4 ವರ್ಷದ ಮಗುವನ್ನು ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದ ಆ ವ್ಯಕ್ತಿ ಆ ಮಗುವಿನ ಮೇಲೆ ಅತ್ಯಾಚಾರ (Child Abuse) ನಡೆಸಿದ್ದ. ಬಳಿಕ ಈ ವಿಷಯವನ್ನು ಆ ಮಗು ಮನೆಯವರಿಗೆ ಹೇಳಬಹುದು ಎಂಬ ಭಯದಿಂದ ಮಗುವನ್ನು ಕೊಲೆ ಮಾಡಿದ್ದ. ಬಳಿಕ ತನಗೇನೂ ಗೊತ್ತೇ ಇಲ್ಲವೆಂಬಂತೆ ಮಗುವಿನ ಶವದ ಮುಂದೆ ಮನೆಯವರ ಜೊತೆ ಅತ್ತು ನಾಟಕವಾಡಿದ್ದ.

ಗಾಜಿಯಾಬಾದ್​​ನ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿ ಕಾರಿನಲ್ಲಿ ಮಗುವಿನ ಶವವನ್ನು ಮುಚ್ಚಿಡಲಾಗಿತ್ತು. ಆ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದು ಸೋದರಮಾವನೇ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು. ಇದರಿಂದ ಆತನ ಕುಟುಂಬ ಆಘಾತಗೊಂಡಿತ್ತು. ಅವರಿಗೆ ಇಡೀ ಊರಿನಲ್ಲಿ ತಲೆ ಎತ್ತಿಕೊಂಡು ತಿರುಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊಲೆ ಆರೋಪಿ ಜಾಸಿಮ್ ತಲೆಮರೆಸಿಕೊಂಡಿದ್ದ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆತನನ್ನು ಹಿಡಿದುಕೊಟ್ಟವರಿಗೆ 50,000 ರೂ. ಬಹುಮಾನ ಘೋಷಿಸಲಾಗಿತ್ತು.

ಇದನ್ನೂ ಓದಿ: ‘ಮಂಚಕ್ಕೆ ಕೈ-ಕಾಲು ಕಟ್ಟಿ ಹಾಕಿ ಬೆಂಕಿ ಹಚ್ಚಿದೆ’: ಪ್ರಿಯಕರನ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿದ ಯುವತಿ ಬಿಚ್ಚಿಟ್ಟಳು ಹಲವು ರಹಸ್ಯ!

ಆತನನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ಬಂಧಿಸಲು ಪ್ರಯತ್ನಿಸಿದ್ದರು. ಆದರೆ, ಭಾನುವಾರ ತಡರಾತ್ರಿ ತೀಲಾ ಮಾಡ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರು ಜಾಸಿಮ್​ನನ್ನು ಕೊಂದಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಇದರಿಂದ ಪೊಲೀಸರು ಎನ್​ಕೌಂಟರ್ ನಡೆಸಿದ್ದರು. ದೆಹಲಿ ರೈಲು ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆತನನ್ನು ಪತ್ತೆಹಚ್ಚಲಾಯಿತು.

ಇದನ್ನೂ ಓದಿ: ಅತ್ತಿಗೆ ಜೊತೆ ಅನೈತಿಕ ಸಂಬಂಧ: ಸಹೋದರನಿಂದಲೇ ನಡೀತು ಚಿಕ್ಕಪ್ಪನ ಮಗನ ಬರ್ಬರ ಕೊಲೆ; ಮೂವರು ವಶಕ್ಕೆ

ಲೋನಿಯ ಬಂತ್ಲಾ ಕಾಲುವೆಯ ಬಳಿ ಜಾಸಿಮ್ ಇದ್ದಾನೆ ಎಂಬ ಸುಳಿವಿನ ಮೇರೆಗೆ ಪೊಲೀಸ್ ತಂಡಗಳು ಬಲೆ ಬೀಸಿ ಆತನನ್ನು ಹಿಡಿಯಲು ಪ್ರಯತ್ನಿಸಿದವು. ಆಗ ಆತ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ನಡೆಸಿದಾಗ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸರು, ಹೆಡ್ ಕಾನ್‌ಸ್ಟೆಬಲ್‌ಗಳಾದ ಅಮಿತ್ ಮತ್ತು ಇಕ್ಬಾಲ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗುವಿನ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದ ಜಾಸಿಮ್ ಹತ್ಯೆಯಾದ ಸುದ್ದಿ ತಿಳಿದರೂ ಅವರ ಕುಟುಂಬದವರು ಆತನ ಶವವನ್ನು ವಶಕ್ಕೆ ಪಡೆದು, ಸಂಸ್ಕಾರ ಮಾಡಲು ನಿರಾಕರಿಸಿದ್ದಾರೆ. ಆತ ಮಗುವನ್ನು ಕೊಂದಿ ದಿನವೇ ನಮ್ಮೆಲ್ಲರ ಪಾಲಿಗೆ ಸತ್ತುಹೋಗಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬೆನ್ನಿಗೆ ಚೂರಿ ಹಾಕಿದ ಬೆಸ್ಟ್ ಫ್ರೆಂಡ್: ಪ್ರೀತಿಸಿ ಮದುವೆಯಾದ ಪತ್ನಿ ಈಗ ಗೆಳೆಯನ ಪಾಲು – Kannada News | Bangalore Relationship Betrayal: Wife Elopes with Friend, Gym Trainer Seeks Justice

ಪ್ರೀತಿಸಿ ಮದುವೆಯಾದ ಪತ್ನಿ ಈಗ ಗೆಳೆಯನ ಪಾಲು

ಬೆಂಗಳೂರು, ಏ.22: ರಾಜ್ಯದಲ್ಲಿ ಗಂಡನನ್ನು ಬಿಟ್ಟು ಬೇರೊಬ್ಬನ ಜತೆಗೆ ಓಡಿ ಹೋಗಿರುವ ಪ್ರಕರಣಗಳೇ ವರದಿಯಾಗುತ್ತಿದೆ. ಬೆಂಗಳೂರು, ಮಂಡ್ಯದಲ್ಲಿ ಇಂದು ಬೆಳಿಗ್ಗೆಯಿಂದ ಎರಡು ಪ್ರಕರಣಗಳು ಪತ್ತೆಯಾಗಿದೆ. ಇದೀಗ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜಿಮ್ ಟ್ರೈನರ್ ಒಬ್ಬರಿಗೆ ಸ್ವಂತ ಸ್ನೇಹಿತನೇ ಕಣ್ಣು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. “ಅವನು ನನಗೆ ಅಣ್ಣನ ಸಮಾನ” ಎಂದು ಪತಿ ನಿತೇಶ್‌ಗೆ ಹೇಳುತ್ತಿದ್ದ ಪತ್ನಿಯು ಈಗ ಅದೇ ಸ್ನೇಹಿತನ ಜೊತೆ ನಾಪತ್ತೆಯಾಗಿರುವುದು ಸಂಚಲನ ಮೂಡಿಸಿದೆ.

ಜಿಮ್ ಟ್ರೈನರ್ ನಿತೇಶ್ ಮತ್ತು ನವೀನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ನಿತೇಶ್ ಯುವತಿಯೊಬ್ಬರನ್ನು ಪ್ರೀತಿಸಿ ಮದುವೆಯಾದ ಬಳಿಕ, ಸ್ನೇಹಿತ ನವೀನ್ ಅವರ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು. ಈ ವೇಳೆ ನವೀನ್ ತನ್ನ ಪತ್ನಿ ಮೇಲೆ ಕಣ್ಣು ಹಾಕಿರುವುದು ನಿತೇಶ್ ಗಮನಕ್ಕೆ ಬಂದಿತ್ತು. ನವೀನ್‌ನ ನಂಬರ್ ಅನ್ನು ಹುಡುಗಿಯ ಹೆಸರಿನಲ್ಲಿ ಸೇವ್ ಮಾಡಿಕೊಂಡು ಪತ್ನಿ ಚಾಟಿಂಗ್ ಮಾಡುತ್ತಿದ್ದಳು. ಈ ಬಗ್ಗೆ ಹಲವು ಬಾರಿ ಬುದ್ಧಿ ಮಾತು ಹೇಳಿದ್ದ ನಿತೇಶ್, ನಂತರ ಬನಶಂಕರಿಯ ಬೇರೊಂದು ಮನೆಗೆ ಶಿಫ್ಟ್ ಆಗಿದ್ದರು.

ಬನಶಂಕರಿಗೆ ಹೋದ ಮೇಲೂ ನವೀನ್ ಜೊತೆಗಿನ ಸಂಪರ್ಕ ಮುಂದುವರಿದಿತ್ತು. ಮೂರು ದಿನಗಳ ಹಿಂದೆ ಹೊಟ್ಟೆನೋವು ಎಂದು ಕೆಲಸಕ್ಕೆ ರಜೆ ಹಾಕಿದ್ದ ಪತ್ನಿ, ಬ್ಯಾಗ್ ಪ್ಯಾಕ್ ಮಾಡಿಕೊಂಡು ಪ್ರಿಯಕರ ನವೀನ್ ಜೊತೆ ಎಸ್ಕೇಪ್ ಆಗಿದ್ದಾಳೆ. ಪತ್ನಿ ನಾಪತ್ತೆಯಾದ ಬಗ್ಗೆ ನಿತೇಶ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಯುವತಿ ಮತ್ತು ನವೀನ್‌ನನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದಾರೆ. ಆದರೆ ಪೊಲೀಸರ ಮುಂದೆ ಪತ್ನಿ ಒಂದು ಶಾಕಿಂಗ್​​​ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ‘ನನ್ನ ಹೆಂಡತಿ 1 ಲಕ್ಷ ರೂ., ಚಿನ್ನ ವಾಪಸ್ ಕೊಡಲಿ!’ ಪತ್ನಿ ವಿರುದ್ಧ ಪತಿ ಆಕ್ರೋಶ

“ನಾನು ಯಾವುದೇ ಕಾರಣಕ್ಕೂ ಗಂಡನ ಜೊತೆ ಹೋಗಲ್ಲ, ಬದಲಾಗಿ ಪಿಜಿ (PG) ಹೋಗುತ್ತೇನೆ” ಎಂದು ಯುವತಿ ಹಠ ಹಿಡಿದಿದ್ದಾಳೆ.ಇದರಿಂದ ಕಂಗೆಟ್ಟಿರುವ ನಿತೇಶ್, “ನನಗೆ ಮೋಸವಾಗಿದೆ, ನ್ಯಾಯ ಕೊಡಿಸಿ” ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಜಯನಗರ ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:33 pm, Wed, 22 April 26

Source link

ಈ ವರ್ಷದ ಪ್ರಮುಖ ಸೆಕ್ಟರ್ ಇದು; ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್​ಗಳಿವು – Kannada News | Major Mutual Funds tracking the energy sector in 2026 year

ಪಶ್ಚಿಮ ಏಷ್ಯಾ ಬಿಕ್ಕಟ್ಟು ಪರಿಸ್ಥಿತಿಯು ಇಂಧನ ಕ್ಷೇತ್ರದ ಮೇಲೆ ಎಲ್ಲರ ಚಿತ್ತ ನೆಡುವಂತೆ ಮಾಡಿದೆ. ತೈಲ, ಅನಿಲ, ವಿದ್ಯುತ್ ಇತ್ಯಾದಿ ಎನರ್ಜಿ ಸೆಕ್ಟರ್ ಈಗ ಅತ್ಯಗತ್ಯ ಎನಿಸಿದೆ. ಇಂಧನ ಭದ್ರತೆಯ ಪ್ರಾಮುಖ್ಯತೆ ಈಗ ಎಲ್ಲರಿಗೂ ಗೊತ್ತಾಗಿದೆ. ಭಾರತವು 2030ರ ವೇಳೆಗೆ 500GW ನವೀಕರಿಸಬಹುದಾದ ಇಂಧನ ಗುರಿಯನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಎನರ್ಜಿ ಫಂಡ್‌ಗಳು ಹೂಡಿಕೆದಾರರ ನೆಚ್ಚಿನ ಆಯ್ಕೆಯಾಗಿವೆ. ಇಂಧನ (Energy) ವಲಯದಲ್ಲಿ ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್‌ಗಳ (Mutual Funds) ಬಗ್ಗೆ ಮಾಹಿತಿ ಇಲ್ಲಿದೆ.

1. ನಿಪ್ಪಾನ್ ಇಂಡಿಯಾ ಪವರ್ ಆಂಡ್ ಇನ್ಫ್ರಾ ಫಂಡ್

ಇದು ಶಕ್ತಿ ಮತ್ತು ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡುವ ಅತ್ಯಂತ ಹಳೆಯ ಫಂಡ್‌ಗಳಲ್ಲಿ ಒಂದಾಗಿದೆ. ಈ ಫಂಡ್ ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್, NTPC ಮತ್ತು ಟಾಟಾ ಪವರ್‌ಗಳಂತಹ ದೊಡ್ಡ ಕಂಪನಿಗಳಲ್ಲಿ ಹೆಚ್ಚಿನ ಹೂಡಿಕೆ ಹೊಂದಿದೆ. ಇತ್ತೀಚಿನ ವರದಿಗಳ ಪ್ರಕಾರ, ಇದು ಸ್ಥಿರವಾದ ಆದಾಯವನ್ನು ನೀಡುತ್ತಾ ಬಂದಿದೆ.

2. ಎಸ್‌ಬಿಐ ಎನರ್ಜಿ ಅಪರ್ಚುನಿಟಿಸ್ ಫಂಡ್

ಇದು ಹೊಸ ತಲೆಮಾರಿನ ಎನರ್ಜಿ ಫಂಡ್ ಆಗಿದ್ದು, ಸಾಂಪ್ರದಾಯಿಕ ತೈಲ ಮತ್ತು ಅನಿಲ ಕಂಪನಿಗಳ ಜೊತೆಗೆ ಹಸಿರು ಇಂಧನ (Green Energy) ಕಂಪನಿಗಳ ಮೇಲೆ ಹೆಚ್ಚು ಗಮನ ಹರಿಸುತ್ತದೆ. ಗೇಲ್ (GAIL) ಮತ್ತು ಎನ್‌ಟಿಪಿಸಿ (NTPC) ಈ ಫಂಡ್‌ನ ಪ್ರಮುಖ ಹೂಡಿಕೆಗಳಾಗಿವೆ.

ಇದನ್ನೂ ಓದಿ: ಆರ್​ಬಿಐನಿಂದ ಹೊಸ ಇ-ಮ್ಯಾಂಡೇಟ್ ಫ್ರೇಮ್​ವರ್ಕ್; 15,000 ರೂವರೆಗಿನ ರಿಕರಿಂಗ್ ಪೇಮೆಂಟ್ಸ್​ಗೆ ಒಟಿಪಿ ಬೇಕಿಲ್ಲ

3. ಟಾಟಾ ರಿಸೋರ್ಸಸ್ ಆಂಡ್ ಎನರ್ಜಿ ಫಂಡ್

ಈ ಫಂಡ್ ಇಂಧನ ಮಾತ್ರವಲ್ಲದೆ ಲೋಹ (Metals) ಮತ್ತು ಗಣಿಗಾರಿಕೆ ವಲಯದಲ್ಲೂ ಹೂಡಿಕೆ ಮಾಡುತ್ತದೆ. ವೇದಾಂತ ಮತ್ತು ಅಲ್ಟ್ರಾಟೆಕ್ ಸಿಮೆಂಟ್‌ನಂತಹ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಇದು ವೈವಿಧ್ಯತೆಯನ್ನು ಕಾಯ್ದುಕೊಂಡಿದೆ.

4. ಡಿಎಸ್‌ಪಿ ನ್ಯಾಚುರಲ್ ರಿಸೋರ್ಸಸ್ ಆಂಡ್ ಎನರ್ಜಿ ಫಂಡ್

ಈ ಫಂಡ್‌ನ ವಿಶೇಷತೆಯೆಂದರೆ ಇದು ಜಾಗತಿಕ ಇಂಧನ ಮಾರುಕಟ್ಟೆಯಲ್ಲೂ ಹೂಡಿಕೆ ಮಾಡುತ್ತದೆ (BlackRock ಮೂಲಕ). ಭಾರತೀಯ ಕಂಪನಿಗಳಾದ ONGC ಮತ್ತು ಆಯಿಲ್ ಇಂಡಿಯಾದಲ್ಲಿ ಇದು ಬಲವಾದ ಹೂಡಿಕೆ ಹೊಂದಿದೆ.

5. ಐಸಿಐಸಿಐ ಪ್ರುಡೆನ್ಶಿಯಲ್ ಎನರ್ಜಿ ಆಪರ್ಚುನಿಟಿಸ್ ಫಂಡ್

ಇಂಧನ ಸಂವಹನ (Power Transmission) ಮತ್ತು ವಿತರಣಾ ಕಂಪನಿಗಳ ಮೇಲೆ ಇದು ಹೆಚ್ಚು ಒತ್ತು ನೀಡುತ್ತದೆ. ಮಾರುಕಟ್ಟೆಯಲ್ಲಿ ಇಂಧನ ಬೇಡಿಕೆ ಹೆಚ್ಚಾದಂತೆಲ್ಲಾ ಈ ಫಂಡ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

6. ಕೊಟಾಕ್ ಎನರ್ಜಿ ಆಪರ್ಚುನಿಟಿಸ್ ಫಂಡ್ (Kotak Energy Opportunities Fund)

ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಈ ಫಂಡ್, ಇಂಧನ ಪರಿವರ್ತನೆಯ (Energy Transition) ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಅಂದರೆ ಸಾಂಪ್ರದಾಯಿಕ ಇಂಧನದಿಂದ ಸೌರ ಮತ್ತು ಪವನ ಶಕ್ತಿಯತ್ತ ಬದಲಾಗುತ್ತಿರುವ ಕಂಪನಿಗಳನ್ನು ಇದು ಗುರಿಯಾಗಿಸಿಕೊಂಡಿದೆ.

2026ರಲ್ಲಿ ಇಂಧನ ವಲಯದಲ್ಲಿ ಏಕೆ ಹೂಡಿಕೆ ಮಾಡಬೇಕು?

ಭಾರತ ಸರ್ಕಾರವು ನವೀಕರಿಸಬಹುದಾದ ಇಂಧನಕ್ಕೆ ಒತ್ತು ನೀಡುತ್ತಿದೆ. ಸೌರಶಕ್ತಿ (PM Suryaghar) ಮತ್ತು ಹಸಿರು ಹೈಡ್ರೋಜನ್ ಯೋಜನೆಗಳಿಗೆ ಭಾರಿ ಪ್ರೋತ್ಸಾಹ ನೀಡುತ್ತಿದೆ. ಇಂಧನ ವಲಯದಲ್ಲಿ ಹೂಡಿಕೆ ಮಾಡಬೇಕೆನ್ನಲು ಇದು ಒಂದು ಕಾರಣ.

ಕೈಗಾರಿಕೆಗಳು ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ಹೆಚ್ಚಾದಂತೆ ವಿದ್ಯುತ್ ಬೇಡಿಕೆ ಗಣನೀಯವಾಗಿ ಏರುತ್ತಿರುವುದು ಮತ್ತೊಂದು ಸಂಗತಿ.

ಸರ್ಕಾರ ಮೂಲಸೌಕರ್ಯ ಅಭಿವೃದ್ಧಿ ಹೆಚ್ಚಿಸುತ್ತಿದೆ. ವಿದ್ಯುತ್ ಸರಬರಾಜು ಜಾಲ (Grid Modernization) ಸುಧಾರಿಸಲು ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.

ಇದನ್ನೂ ಓದಿ: ಭಾರತದ ಷೇರು ಮಾರುಕಟ್ಟೆ ಇವತ್ತು ಕುಸಿತ; ಏನಿರಬಹುದು ಕಾರಣಗಳು? ಇಲ್ಲಿದೆ ಡೀಟೇಲ್ಸ್

ಗಮನಿಸಿ: ಇವು ‘ಸೆಕ್ಟೋರಲ್ ಫಂಡ್‌’ಗಳಾದ ಕಾರಣ ರಿಸ್ಕ್ ಹೆಚ್ಚಿರುತ್ತದೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ನಿಮ್ಮ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸುವುದು ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿನೊಳಗೆ ಇದ್ದುಕೊಂಡೇ ವಿಧ್ವಂಸಕ ಕೃತ್ಯ ಎಸಗಲು ಸಂಚು: ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ NIA ನ್ಯಾಯಾಲಯ – Kannada News | Bengaluru Prison Terror Plot: NIA Jails T. Naseer and 6 Others for 7 Years

ಬೆಂಗಳೂರು, ಏಪ್ರಿಲ್​​ 22: ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಜೈಲಿನಲ್ಲಿಯೇ ಸಂಚೂರೂಪಿಸಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಲಷ್ಕರ್-ಎ-ತೈಬಾ ಸಂಘಟನೆಯ ಸದಸ್ಯ ಟಿ. ನಾಸೀರ್ ಸೇರಿದಂತೆ ಏಳು ಆರೋಪಿಗಳಿಗೆ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯವು ಏಳು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ನಾಸೀರ್ ಸೇರಿ ಸಯ್ಯದ್ ಸುಹೈಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸಯ್ಯದ್ ಮುದಸ್ಸಿರ್ ಪಾಶಾ, ಮೊಹಮ್ಮದ್ ಫೈಸಲ್ ರಬ್ಬಾನಿ ಮತ್ತು ಸಲ್ಮಾನ್ ಖಾನ್​​ ಶಿಕ್ಷೆಗೆ ಒಳಪಟ್ಟವರಾಗಿದ್ದು, 48,000 ದಂಡವನ್ನೂ ವಿಧಿಸಲಾಗಿದೆ.

ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಾಸೀರ್ ನೇತೃತ್ವದಲ್ಲಿ ಲಷ್ಕರ್-ಎ-ತೈಬಾ ಸಂಪರ್ಕಿತ ಉಗ್ರ ಸಂಚು ರೂಪಿಸಲಾಗಿತ್ತು ಎಂದು ಎನ್‌ಐಎ ತಿಳಿಸಿದ್ದು, ಈ ಪ್ರಕರಣದಲ್ಲಿ ಆರೋಪಿಗಳು ಈಗಾಗಲೇ ತಪ್ಪೊಪ್ಪಿಕೊಂಡಿದ್ದರು. ಈ ಸಂಚಿನಲ್ಲಿ ಜೈಲಿನಲ್ಲಿ ಇರುವ ಯುವಕರನ್ನು ಗುರುತಿಸಿ, ನೇಮಕ ಮಾಡಿ, ತರಬೇತಿ ನೀಡಿ, ಮತಾಂತರಗೊಳಿಸಿ, ಉಗ್ರವಾದದತ್ತ ಆಕರ್ಷಿಸಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಆರೋಪಿಗಳು ಯೋಜಿಸಿದ್ದರು. 2023ರ ಜುಲೈನಲ್ಲಿ ಶಸ್ತ್ರಾಸ್ತ್ರಗಳು, ಗುಂಡುಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡ ನಂತರ ಬೆಂಗಳೂರು ಸೆಂಟ್ರಲ್ ಕ್ರೈಮ್ ಬ್ರಾಂಚ್ (CCB) ಈ ಬಗ್ಗೆ ಪ್ರಕರಣ ದಾಖಲಿಸಿತ್ತು.

ಇದನ್ನೂ ಓದಿ: ಇನ್ಸ್‌ಪೆಕ್ಟರ್​​​ನಿಂದಲೇ ಲಂಚ ಸ್ವೀಕರಿಸುತ್ತಿದ್ದ ಎಸ್‌ಡಿಎ ಲೋಕಾಯುಕ್ತ ಬಲೆಗೆ!

ಆರೋಪಿಗಳು ಬೆಂಗಳೂರಿನಲ್ಲಿಯೂ ಉಗ್ರ ದಾಳಿಗಳನ್ನು ನಡೆಸುವ ಯೋಜನೆ ರೂಪಿಸಿದ್ದರು ಎಂಬುದು ಬಯಲಾದ ಕಾರಣ, ನಂತರ ಈ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು. 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ಟಿ. ನಾಸೀರ್ ಅದಾಗಲೇ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಎಂಬುದಿಲ್ಲಿ ಗಮನಾರ್ಹ. ಬಂಧಿತರಲ್ಲಿ ಸಲ್ಮಾನ್ ಖಾನ್ ಎಂಬಾತನನ್ನು ರುವಾಂಡಾ ಗಣರಾಜ್ಯದಿಂದ ಹಸ್ತಾಂತರದ ಮೂಲಕ ಭಾರತಕ್ಕೆ ತರಲಾಗಿತ್ತು. ಈ ಪ್ರಕರಣದಲ್ಲಿ 11 ಮಂದಿ ಬಂಧಿತ ಆರೋಪಿಗಳು ಹಾಗೂ ಪರಾರಿಯಾಗಿರುವ ಜುನೈದ್ ಅಹ್ಮದ್ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇನ್ಸ್‌ಪೆಕ್ಟರ್​​​ನಿಂದಲೇ ಲಂಚ ಸ್ವೀಕರಿಸುತ್ತಿದ್ದ ಎಸ್‌ಡಿಎ ಲೋಕಾಯುಕ್ತ ಬಲೆಗೆ! – Kannada News | Lokayukta trap in Bengaluru: SDA caught red handed taking Rs 10,000 bribe from inspector at Hebbal office

ಬೆಂಗಳೂರು, (ಏಪ್ರಿಲ್ 22):  ಇನ್ಸ್​ಪೆಕ್ಟರ್​  (Inspector) ಬಳಿಯೇ ಲಂಚ (Bribe) ಸ್ವೀಕರಿಸುವಾಗ ಎಸ್​​ಡಿಎ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಇನ್ನೊಂದೆಡೆ ಬೆಂಗಳೂರಿನ (Bengaluru) ಹೆಬ್ಬಾಳದ ಪಶುಸಂಗೋಪನೆ ಇಲಾಖೆ ಆಯುಕ್ತರ ಕಚೇರಿಯ ಎಸ್‌ಡಿಎ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಲಾಖಾ ತನಿಖೆಯ ಅಂತಿಮ ಆದೇಶ ಪ್ರಕ್ರಿಯೆ ಕಾರ್ಯಗತಗೊಳಿಸಲು ಪಶುಸಂಗೋಪನೆ ಇಲಾಖೆ ಆಯುಕ್ತರ ಕಚೇರಿಯ ಎಸ್‌ಡಿಎ ಮುದಾಸಿರ್ ಎನ್ನುವರು ವಿಜಯಪುರ ಜಿಲ್ಲೆಯ ಪಶುಸಂಗೋಪನೆ ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಂತೆ 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರೆ. ಸದ್ಯ ಮುದಾಸಿರ್‌ನನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರಿಂದ ವಿಚಾರಣೆ ನಡೆಸಿದ್ದಾರೆ.

ಪಿಎಸ್​​ಐ, ಕಾನ್ಸ್​ಟೇಬಲ್ ಲೋಕಾ ಬಲೆಗೆ

ಬಾಗಲಕೋಟೆ: ಇಸ್ಪೀಟ್ ಆಡುವವರ ಬಳಿ ಲಂಚ ಸ್ವೀಕರಿಸುವಾಗ ಪೊಲೀಸ್​ ಸಬ್ ಇನ್ಸ್​ಪೆಕ್ಟರ್ ಹಾಗೂ ಕಾನ್ಸ್​​​ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಠಾಣೆಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ ಭೀಮಪ್ಪ ರಬಕವಿ ಹಾಗೂ ಕಾನ್ಸ್​ಟೇಬಲ್ ಸಂತೋಷ್ ಬಿರಾದಾರ ಎನ್ನುವರು ಮುತ್ತಪ್ಪ ನಾಯ್ಕರ್​ ಎಂಬುವರಿಂದ ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: 1.2 ಲಕ್ಷ ಹಣ ಪಡೆಯುವಾಗ ಪಿಡಿಓ, ಯುಟ್ಯೂಬರ್ ಲೋಕಾಯುಕ್ತ ಬಲೆಗೆ

ಇಸ್ಪೀಟ್ ಆಡುತ್ತಿದ್ದ ಓರ್ವ ಆರೋಪಿ ರಕ್ಷಣೆಗೆ ಮುಂದಾಗಿದ್ದ ಪೊಲೀಸರು, ಬೈಕ್ ಬಿಡಲು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಮುತ್ತಪ್ಪ ನಾಯ್ಕರ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಅನ್ವಯ ಲೋಕಾಯುಕ್ತ SP ಮಹಾಲಿಂಗ ನಂದಗಾಂವಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ಪಿಎಸ್​ಐ ಭೀಮಪ್ಪ, ಪಿಸಿ ಬಿರಾದಾರನನ್ನು 1.70 ಲಕ್ಷ ಲಂಚ ಸ್ವೀಕರಿಸುವಾಗ ಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version