ಇನ್ಸ್‌ಪೆಕ್ಟರ್​​​ನಿಂದಲೇ ಲಂಚ ಸ್ವೀಕರಿಸುತ್ತಿದ್ದ ಎಸ್‌ಡಿಎ ಲೋಕಾಯುಕ್ತ ಬಲೆಗೆ! – Kannada News | Lokayukta trap in Bengaluru: SDA caught red handed taking Rs 10,000 bribe from inspector at Hebbal office

ಬೆಂಗಳೂರು, (ಏಪ್ರಿಲ್ 22):  ಇನ್ಸ್​ಪೆಕ್ಟರ್​  (Inspector) ಬಳಿಯೇ ಲಂಚ (Bribe) ಸ್ವೀಕರಿಸುವಾಗ ಎಸ್​​ಡಿಎ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಇನ್ನೊಂದೆಡೆ ಬೆಂಗಳೂರಿನ (Bengaluru) ಹೆಬ್ಬಾಳದ ಪಶುಸಂಗೋಪನೆ ಇಲಾಖೆ ಆಯುಕ್ತರ ಕಚೇರಿಯ ಎಸ್‌ಡಿಎ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಲಾಖಾ ತನಿಖೆಯ ಅಂತಿಮ ಆದೇಶ ಪ್ರಕ್ರಿಯೆ ಕಾರ್ಯಗತಗೊಳಿಸಲು ಪಶುಸಂಗೋಪನೆ ಇಲಾಖೆ ಆಯುಕ್ತರ ಕಚೇರಿಯ ಎಸ್‌ಡಿಎ ಮುದಾಸಿರ್ ಎನ್ನುವರು ವಿಜಯಪುರ ಜಿಲ್ಲೆಯ ಪಶುಸಂಗೋಪನೆ ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಂತೆ 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರೆ. ಸದ್ಯ ಮುದಾಸಿರ್‌ನನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರಿಂದ ವಿಚಾರಣೆ ನಡೆಸಿದ್ದಾರೆ.

ಪಿಎಸ್​​ಐ, ಕಾನ್ಸ್​ಟೇಬಲ್ ಲೋಕಾ ಬಲೆಗೆ

ಬಾಗಲಕೋಟೆ: ಇಸ್ಪೀಟ್ ಆಡುವವರ ಬಳಿ ಲಂಚ ಸ್ವೀಕರಿಸುವಾಗ ಪೊಲೀಸ್​ ಸಬ್ ಇನ್ಸ್​ಪೆಕ್ಟರ್ ಹಾಗೂ ಕಾನ್ಸ್​​​ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಠಾಣೆಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ ಭೀಮಪ್ಪ ರಬಕವಿ ಹಾಗೂ ಕಾನ್ಸ್​ಟೇಬಲ್ ಸಂತೋಷ್ ಬಿರಾದಾರ ಎನ್ನುವರು ಮುತ್ತಪ್ಪ ನಾಯ್ಕರ್​ ಎಂಬುವರಿಂದ ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: 1.2 ಲಕ್ಷ ಹಣ ಪಡೆಯುವಾಗ ಪಿಡಿಓ, ಯುಟ್ಯೂಬರ್ ಲೋಕಾಯುಕ್ತ ಬಲೆಗೆ

ಇಸ್ಪೀಟ್ ಆಡುತ್ತಿದ್ದ ಓರ್ವ ಆರೋಪಿ ರಕ್ಷಣೆಗೆ ಮುಂದಾಗಿದ್ದ ಪೊಲೀಸರು, ಬೈಕ್ ಬಿಡಲು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಮುತ್ತಪ್ಪ ನಾಯ್ಕರ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಅನ್ವಯ ಲೋಕಾಯುಕ್ತ SP ಮಹಾಲಿಂಗ ನಂದಗಾಂವಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ಪಿಎಸ್​ಐ ಭೀಮಪ್ಪ, ಪಿಸಿ ಬಿರಾದಾರನನ್ನು 1.70 ಲಕ್ಷ ಲಂಚ ಸ್ವೀಕರಿಸುವಾಗ ಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಾರುಖ್ ಖಾನ್ ಸಿನಿಮಾ ಹಿಂದಿಕ್ಕಿ ನಂಬರ್ 1 ಆದ ‘ಧುರಂಧರ್ 2’ – Kannada News | Dhurandhar 2 movie became highest grossed Indian movie in UK

ರಣವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ. ಬಾಕ್ಸ್ ಆಫೀಸ್​​ನಲ್ಲಿ ಹಲವು ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಅದು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಸಹ ‘ಧುರಂಧರ್ 2’ ಸಿನಿಮಾ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇದೀಗ ‘ಧುರಂಧರ್ 2’ ಸಿನಿಮಾ ಶಾರುಖ್ ಖಾನ್ ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ‘ಪಠಾಣ್’ವನ್ನು ಹಿಂದಿಕ್ಕಿ ನಂಬರ್ ಎನಿಸಿಕೊಂಡಿದೆ. ಅಸಲಿಗೆ ಭಾರತದಲ್ಲಿ ಕೆಲ ವಾರದ ಹಿಂದೆಯೇ ‘ಪಠಾಣ್’ ಸಿನಿಮಾವನ್ನು ‘ಧುರಂಧರ್ 2’ ಹಿಂದಿಕ್ಕಿದೆ ಆದರೆ ಈ ಬಾರಿ ಯುನೈಟೆಡ್ ಕಿಂಗ್​​ಡಮ್​​ನಲ್ಲೂ ಸಹ ‘ಪಠಾಣ್’ ಸಿನಿಮಾವನ್ನು ‘ಧುರಂಧರ್ 2’ ಸಿನಿಮಾ ಸೋಲಿಸಿದೆ.

‘ಧುರಂಧರ್ 2’ ಸಿನಿಮಾ ಯುಕೆಯಲ್ಲಿ ಬಿಡುಗಡೆಯಾಗಿ 33 ದಿನಗಳಲ್ಲಿ ಸುಮಾರು 55.63 ಕೋಟಿ ರೂ ಗಳಿಕೆ ಮಾಡಿದೆ. 2023 ರಲ್ಲಿ ಬಿಡುಗಡೆಯಾಗಿದ್ದ ಶಾರುಖ್ ಖಾನ್ ಅವರ ‘ಪಠಾಣ್’ ಯುಕೆಯಲ್ಲಿ 55 ಕೋಟಿ ರೂಪಾಯಿ ಗಳಿಕೆ ಮಾಡಿ, ಯುಕೆ ಬಾಕ್ಸ್ ಆಫೀಸ್​​ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎನಿಸಿಕೊಂಡಿತ್ತು. ಇದೀಗ ಮೂರು ವರ್ಷಗಳ ಬಳಿಕ ಆ ದಾಖಲೆಯನ್ನು ‘ಧುರಂಧರ್ 2’ ಸಿನಿಮಾ ಮುರಿದು ಹಾಕಿದೆ.

ಇದನ್ನೂ ಓದಿ:ಆಮಿರ್ ಮಾತಿಗೆ ಮಣಿದ ರಣವೀರ್ ಸಿಂಗ್; 10 ಕೋಟಿ ಮರಳಿಸಿದ ‘ಧುರಂಧರ್’ ನಟ

ಈ ಚಿತ್ರವು ಕೇವಲ ಯುಕೆಯಲ್ಲಿ ಮಾತ್ರವಲ್ಲದೆ, ಇನ್ನೂ ಕೆಲವು ದೇಶಗಳಲ್ಲಿ ಸಹ ದಾಖಲೆ ಮೊತ್ತದ ಗಳಿಕೆ ಮಾಡಿದೆ. ಉತ್ತರ ಅಮೇರಿಕಾದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಸಿನಿಮಾ ಎನಿಸಿಕೊಂಡಿದೆ. ‘ಬಾಹುಬಲಿ 2’ ಸಿನಿಮಾದ ದಾಖಲೆಯನ್ನು ಉತ್ತರ ಅಮೆರಿಕನಲ್ಲಿ ಮುರಿದಿದೆ ‘ಧುರಂಧರ್ 2’. ಮತ್ತು ಜರ್ಮನಿಯಲ್ಲೂ ಸಹ ಗಳಿಕೆಯಲ್ಲಿ ದಾಖಲೆಯನ್ನು ಈ ಸಿನಿಮಾ ಬರೆದಿದೆ.

ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್‌ನಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ ಮತ್ತು ಆರ್ ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶ್ವದಾದ್ಯಂತ ಈ ಚಿತ್ರವು ಈಗಾಗಲೇ ಸುಮಾರು 1,787 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿದ್ದು, ಶೀಘ್ರದಲ್ಲೇ ‘ಬಾಹುಬಲಿ 2’ ಚಿತ್ರದ ಒಟ್ಟು ಗಳಿಕೆಯನ್ನು ಮೀರಿಸುವತ್ತ ಮುನ್ನುಗ್ಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮನೆಲಿ ನೈಟಿ ಹಾಕಿಕೊಳ್ತಿದ್ಲು ಎಂದು ಹೆಂಡತಿಯನ್ನೇ ಸುಟ್ಟ ಪತಿ! ಪತ್ನಿಯ ಸ್ಥಿತಿ ಗಂಭೀರ – Kannada News | Domestic Violence: Man burns Wife over wearing nighty instead of saree at home

ಮನೆಲಿ ನೈಟಿ ಹಾಕಿಕೊಳ್ತಿದ್ಲು ಎಂದು ಹೆಂಡತಿಯನ್ನೇ ಸುಟ್ಟ ಪತಿ!

ಬೆಳಗಾವಿ , ಏಪ್ರಿಲ್ 22: ಜಿಲ್ಲೆಯಲ್ಲಿ ಪತ್ನಿಯ (Wife) ಉಡುಪಿನ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ದಾರುಣ ಅಂತ್ಯ ಕಂಡಿರುವ ಘಟನೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ನೈಟಿ ಧರಿಸಿದ್ದ ಕಾರಣಕ್ಕೆ ಪತ್ನಿಗೇ ಕಿರಾತಕ ಗಂಡ ಬೆಂಕಿ ಹಚ್ಚಿದ್ದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಸೀರೆ ಉಡುತ್ತಿರಲಿಲ್ಲ ಅಂತ ಜಗಳ

ಪತಿ ಪತ್ನಿಯರ ನಡುವೆ ಸಾವಿರ ಅಸಮಾಧಾನವಿರುತ್ತದೆ. ಕೆಲವರು ಬುದ್ಧಿ ಜೀವಿಗಳಂತೆ ಪರಸ್ಪರ ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಂಡರೆ, ಇನ್ನೂ ಕೆಲವರು ಕೋಪದ ಕೈಗೆ ಬುದ್ಧಿಕೊಟ್ಟು ಆತುರದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇತ್ತೀಚಿಗೆ ಅನೈತಿಕ ಸಂಬಂಧದ ವಿಚಾರಕ್ಕೆ ಸಂಸಾರದಲ್ಲಿ ಬಿರುಕು ಬಂದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಹೆಂಡತಿ, ಮನೆಯಲ್ಲಿ ಸೀರೆ ಉಡದೆ ನೈಟಿ ಹಾಕುತ್ತಿದ್ದಳು ಎಂಬ ವಿಚಾರಕ್ಕೆ ರೊಚ್ಚಿಗೆದ್ದು ಪತ್ನಿಯನ್ನೇ ಸುಡಲು ಮುಂದಾಗೊರುವ ಘಟನೆ ನಡೆದಿದೆ.

ಮಂಜುಳಾ ಪಾಟೀಲ್ ಮತ್ತು ಕೃಷ್ಣಾಜಿ ಪಾಟೀಲ್ ದಂಪತಿ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮನೆಯಲ್ಲಿ ಪತ್ನಿ ಸೀರೆ ಬದಲು ನೈಟಿ ಅಥವಾ ಗೌನ್ ಧರಿಸುತ್ತಿದ್ದ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಮತ್ತೊಮ್ಮೆ ವಾಗ್ವಾದ ಉಂಟಾಗಿ, ಅದು ಅತಿರೇಕಕ್ಕೆ ತಲುಪಿದ ಸಂದರ್ಭದಲ್ಲಿ ಕೃಷ್ಣಾಜಿ ಪತ್ನಿ ಮಂಜುಳಾಗೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ ಕಸ ಹಾಕಲು ಹೋದ ವಿವಾಹಿತ ಮಹಿಳೆ ನಿಗೂಢ ನಾಪತ್ತೆ: ಪ್ರಿಯಕರನ ಜೊತೆ ಪರಾರಿಯಾದ ಆರೋಪ, ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಪತ್ನಿಯ ದೇಹದ ಶೇ80ರಷ್ಟು ಭಾಗ ಸುಟ್ಟು ಕರಕಲು!

ಘಟನೆಯಿಂದ ಮಂಜುಳಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ದೇಹದ ಶೇ80ರಷ್ಟು ಭಾಗ ಸುಟ್ಟಿದೆ. ಗಂಭೀರ ಗಾಯಗಳಿಂದ ಬಳಲಿದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗೋವಾಕ್ಕೆ ಸ್ಥಳಾಂತರಿಸಲಾಗಿದೆ.

ಮನೆಯಲ್ಲಿ ಗಲಾಟೆಯ ಶಬ್ದ ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂದಗಡ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಯಥಾಸ್ಥಿತಿ; ಇಲ್ಲಿದೆ ದರಪಟ್ಟಿ – Kannada News | Gold Price Today on 22nd April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 22: ಚಿನ್ನದ ಬೆಲೆ ಇಂದು ಬುಧವಾರ ಇಳಿಕೆ ಕಂಡಿದೆ. ಗ್ರಾಮ್​ಗೆ 50 ರೂನಷ್ಟು ಅಲ್ಪ ಕುಸಿತ ಇದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ (Gold Rates) ಯಥಾಸ್ಥಿತಿ ಇದೆ. ಕೆಲವೆಡೆ ಅಲ್ಪಸ್ವಲ್ಪ ಏರಿಳಿತಗಳಿವೆ. ಬೆಳ್ಳಿ ಬೆಲೆಯಲ್ಲಿ ಇವತ್ತು ಬದಲಾವಣೆಯಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,750 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 22ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,475 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,185 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,606 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,475 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,185 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,185 ರೂ
  • ಚೆನ್ನೈ: 14,250 ರೂ
  • ಮುಂಬೈ: 14,185 ರೂ
  • ದೆಹಲಿ: 14,200 ರೂ
  • ಕೋಲ್ಕತಾ: 14,185 ರೂ
  • ಕೇರಳ: 14,185 ರೂ
  • ಅಹ್ಮದಾಬಾದ್: 14,190 ರೂ
  • ಜೈಪುರ್: 14,200 ರೂ
  • ಲಕ್ನೋ: 14,200 ರೂ
  • ಭುವನೇಶ್ವರ್: 14,185 ರೂ

ಇದನ್ನೂ ಓದಿ: ಮಾಸಿಕ 20,500 ರೂ ಆದಾಯ ತರಬಲ್ಲ ಪೋಸ್ಟ್ ಆಫೀಸ್​ನ ಎಸ್​ಸಿಎಸ್​ಎಸ್ ಸ್ಕೀಮ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 585 ರಿಂಗಿಟ್ (13,880 ರುಪಾಯಿ)
  • ದುಬೈ: 537.50 ಡಿರಾಮ್ (13,733 ರುಪಾಯಿ)
  • ಅಮೆರಿಕ: 149.50 ಡಾಲರ್ (14,022 ರುಪಾಯಿ)
  • ಸಿಂಗಾಪುರ: 190.60 ಸಿಂಗಾಪುರ್ ಡಾಲರ್ (14,041 ರುಪಾಯಿ)
  • ಕತಾರ್: 532 ಕತಾರಿ ರಿಯಾಲ್ (13,686 ರೂ)
  • ಸೌದಿ ಅರೇಬಿಯಾ: 544 ಸೌದಿ ರಿಯಾಲ್ (13,604 ರುಪಾಯಿ)
  • ಓಮನ್: 57.05 ಒಮಾನಿ ರಿಯಾಲ್ (13,899 ರುಪಾಯಿ)
  • ಕುವೇತ್: 44.43 ಕುವೇತಿ ದಿನಾರ್ (13,606 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 275 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 275 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 275 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಳೆ ಬಂದರೆ ಆಫೀಸ್‌ಗೆ ಬರುವಂತಿಲ್ಲ! ಉದ್ಯೋಗಿಗಳಿಗೆ 7 ದಿನಗಳ ‘ರೈನ್‌ ಲೀವ್’ ನೀಡಿದ ಕಂಪನಿ, ಬೆಂಗಳೂರಿಗೂ ಈ ವ್ಯವಸ್ಥೆ ಬೇಕು – Kannada News | Unique ‘Rain Leave’ Policy in China: How This Company Prioritizes Staff Welfare

ಬೀಜಿಂಗ್, ಏ.22: ಸಾಮಾನ್ಯವಾಗಿ ಮಳೆ ಬಂದರೆ ಕೆಲಸಕ್ಕೆ ಹೋಗಲು ಕಿರಿಕಿರಿ ಎನಿಸುವುದು ಸಹಜ. ಆದರೆ ಚೀನಾದ ಹುನಾನ್ ಪ್ರಾಂತ್ಯದ ಸ್ನ್ಯಾಕ್ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಮಳೆಯ ದಿನಗಳಲ್ಲಿ ಮನೆಯಲ್ಲೇ ಇರಲು ‘ರೈನ್‌ ಲೀವ್’ (Rain Leave) ಆಫರ್ ನೀಡಿದೆ. ಲಾಟರಿ ಮೂಲಕ ಆಯ್ಕೆಯಾದ ಅದೃಷ್ಟವಂತ ಉದ್ಯೋಗಿಗೆ 7 ದಿನಗಳ ಕಾಲ ಈ ವಿಶೇಷ ರಜೆ ಸಿಕ್ಕಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇದನ್ನು ನೋಡಿದ ಅನೇಕರ ಬೆಂಗಳೂರಿಗೂ ಬಿಸಿಲು ಜಾಸ್ತಿ ಇದ್ರೆ ರಜೆ ನೀಡಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಚೀನಾದ ಪ್ರಸಿದ್ಧ ಸ್ಪೈಸಿ ಸ್ನ್ಯಾಕ್ ಕಂಪನಿ ‘ಮಾಲಾ ವಾಂಗ್ಜಿ’ (Mala Wangzi) ತನ್ನ ಉದ್ಯೋಗಿಗಳಿಗಾಗಿ ವಾರ್ಷಿಕ ಲಾಟರಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ದಕ್ಷಿಣ ಚೀನಾದಲ್ಲಿ ಏಪ್ರಿಲ್ ತಿಂಗಳಲ್ಲಿ ಅತಿಯಾದ ಮಳೆ ಮತ್ತು ಆರ್ದ್ರತೆ ಇರುವುದರಿಂದ, ಉದ್ಯೋಗಿಗಳಿಗೆ ಪ್ರಯಾಣ ಮಾಡುವುದು ಕಷ್ಟ ಎಂಬ ಅಂಶವನ್ನು ಮನಗಂಡು ಕಂಪನಿಯ ಮಾಲೀಕರು ಈ ವಿಭಿನ್ನ ಯೋಜನೆಯನ್ನು ಘೋಷಿಸಿದ್ದರು.

ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಜಂಗ್ ಜಿಲಾಂಗ್ ಹಂಚಿಕೊಂಡಿರುವ ವಿಡಿಯೋದಲ್ಲಿ ಉದ್ಯೋಗಿಗಳು ಲಾಟರಿ ಎತ್ತುವುದನ್ನು ಕಾಣಬಹುದು. ಅಲ್ಲಿ ಸಿಕ್ಕ ಬಹುಮಾನಗಳು ಹೀಗಿವೆ. 7 ದಿನಗಳ ಸಂಪೂರ್ಣ ಸಂಬಳ ಸಹಿತ ‘ಮಳೆ ರಜೆ’. ಇದನ್ನು ಉದ್ಯೋಗಿ ತನಗೆ ಬೇಕಾದಾಗ ಬಳಸಬಹುದು. ಆಟೋಮ್ಯಾಟಿಕ್ ಡ್ರೈಯರ್, ಹೇರ್ ಡ್ರೈಯರ್, ರೈನ್ ಬೂಟ್ಸ್, ಛತ್ರಿ ಮತ್ತು ಡಿಹ್ಯೂಮಿಡಿಫೈಯರ್ ಸೇರಿ ಹಲವು ಉಪಯುಕ್ತ ವಸ್ತುಗಳು ನೀಡಲಾಗಿದೆ. ಮಳೆಯ ದಿನಗಳಲ್ಲಿ ಕೆಲಸಕ್ಕೆ ಎರಡು ಬಾರಿ ತಡವಾಗಿ ಬಂದರೂ ಯಾವುದೇ ದಂಡ ವಿಧಿಸದ ‘ಲೇಟ್-ಫಾರ್-ವರ್ಕ್ ಪಾಸ್’ ಕೂಡ ನೀಡಲಾಗಿದೆ.

ಇದನ್ನೂ ಓದಿ: Video: ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡ ಬೆಂಗಳೂರಿನ ಯುವತಿ

ನಮ್ಮ ನಗರದಲ್ಲಿ 90 ದಿನಗಳ ಪೈಕಿ 82 ದಿನ ಮಳೆ ಬರುತ್ತದೆ. ಉದ್ಯೋಗಿಗಳು ಮಳೆಯಲ್ಲಿ ನೆನೆಯುತ್ತಾ ಕಷ್ಟಪಟ್ಟು ಆಫೀಸ್‌ಗೆ ಬರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಅವರ ಮನಸ್ಥಿತಿಯನ್ನು ಉತ್ತಮವಾಗಿರಿಸುವುದು ನಮ್ಮ ಗುರಿ” ಎಂದು ಕಂಪನಿಯ ಮಾಲೀಕರು ತಿಳಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತನ್ನ ಮರಿ ಎಂದು ಭಾವಿಸಿ 3 ತಿಂಗಳ ಮಗುವನ್ನು ಒತ್ತೆಯಾಳಾಗಿರಿಸಿಕೊಂಡ ಮಂಗ – Kannada News | Dramatic Rescue: Toddler Freed After Monkey Holds Him for Hours in Uttar Pradesh

ಮುಜಫರ್ ನಗರ, ಏಪ್ರಿಲ್ 22: ಮಂಗ(Monkey)ವೊಂದು ಮೂರು ತಿಂಗಳ ಮಗುವನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಘಟನೆ ಮುಜಫರ್​ನಗರದ ಚರ್ತವಾಲ್ ಪಟ್ಟಣದಲ್ಲಿ ನಡೆದಿದೆ. ಆ ದೃಶ್ಯ ಇಡೀ ಊರನ್ನೇ ಬೆಚ್ಚಿಬೀಳಿಸಿತ್ತು. ಮೂರು ತಿಂಗಳ ಹಸುಗೂಸನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಎರಡು ಗಂಟೆಗಳ ಕಾಲ ಇಡೀ ಊರನ್ನೇ ಆತಂಕದ ತುದಿಯಲ್ಲಿ ನಿಲ್ಲಿಸಿದ್ದ ಮಂಗನ ಕಥೆ ಈಗ ವೀಡಿಯೊ ಸಮೇತ ವೈರಲ್ ಆಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ, ಗುಲಿಸ್ತಾ ಅವರ ಮನೆಯಲ್ಲಿ ಮೂರು ತಿಂಗಳ ಮಗು ಹಾಸಿಗೆಯ ಮೇಲೆ ನೆಮ್ಮದಿಯಾಗಿ ನಿದ್ದೆ ಮಾಡುತ್ತಿತ್ತು. ಮನೆಯವರೆಲ್ಲಾ ಕೆಲಸದಲ್ಲಿ ನಿರತರಾಗಿದ್ದಾಗ, ಹೆಣ್ಣು ಮಂಗವೊಂದು ಛಾವಣಿಯ ಮೂಲಕ ಸದ್ದಿಲ್ಲದೆ ಮನೆಯೊಳಗೆ ನುಸುಳಿತ್ತು.

ತಾಯಿ ಗುಲಿಸ್ತಾ ಕೋಣೆಯೊಳಗೆ ಬಂದಾಗ ಕಂಡ ದೃಶ್ಯ ಅವರ ಎದೆ ನಡುಗುವಂತೆ ಮಾಡಿತ್ತು. ಮಗುವಿನ ಪಕ್ಕದಲ್ಲೇ ಕುಳಿತಿದ್ದ ಮಂಗವು ಕಂದಮ್ಮನನ್ನು ಮುಟ್ಟುತ್ತಾ, ಪ್ರೀತಿಯಿಂದ ಸವರುತ್ತಿತ್ತು. ತಾಯಿಯ ಕಿರುಚಾಟ ಕೇಳಿ ನೆರೆಹೊರೆಯವರು ಓಡಿಬಂದರು. ಜನರನ್ನು ನೋಡಿ ಕೆರಳಿದ ಮಂಗವು ಮಗುವನ್ನು ಬಿಡಲು ನಿರಾಕರಿಸಿದ್ದಲ್ಲದೆ, ಯಾರಾದರೂ ಹತ್ತಿರ ಬಂದರೆ ಆಕ್ರಮಣ ಮಾಡಲು ಶುರು ಮಾಡಿತು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪ್ರಾಣಿ ರಕ್ಷಕ ಸನ್ನಿ ಚೋಪ್ರಾ ಅವರನ್ನು ಕರೆಸಲಾಯಿತು. ಆಹಾರ ನೀಡಿದರೂ ಮಂಗ ಮಗುವನ್ನು ಬಿಡಲಿಲ್ಲ. ಆಗ ಚೋಪ್ರಾ ಒಂದು ಉಪಾಯ ಮಾಡಿದರು. ಮೊಬೈಲ್ ಫೋನ್‌ನಲ್ಲಿ ಮಂಗಗಳ ವೀಡಿಯೊಗಳನ್ನು ಪ್ಲೇ ಮಾಡಿ ಮಂಗನ ಮುಂದೆ ಹಿಡಿದರು. ಮಂಗವು ವೀಡಿಯೊ ವೀಕ್ಷಣೆಯಲ್ಲಿ ಮಗ್ನನಾಗುತ್ತಿದ್ದಂತೆಯೇ, ರಕ್ಷಣಾ ಸಿಬ್ಬಂದಿ ಅತ್ಯಂತ ನಾಜೂಕಿನಿಂದ ಮಗುವನ್ನು ಅಲ್ಲಿಂದ ಎಳೆದು ಸುರಕ್ಷಿತವಾಗಿ ರಕ್ಷಿಸಿದರು.

ಮತ್ತಷ್ಟು ಓದಿ: ಕೋತಿ ಕಿತಾಪತಿಗೆ ಹೆಜ್ಜೇನು ದಾಳಿ: ಜೀವ ಬಿಟ್ಟ ಕಾರು ಶೋರೂಂ ಮೇಲ್ವಿಚಾರಕ!

ಮಗು ಸುರಕ್ಷಿತವಾಗಿ ಸಿಕ್ಕ ನಂತರ ರಕ್ಷಕ ಸನ್ನಿ ಚೋಪ್ರಾ ಒಂದು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ, ಆ ಹೆಣ್ಣು ಮಂಗ ತನ್ನ ಸ್ವಂತ ಮರಿಯನ್ನು ಆರು ದಿನಗಳ ಹಿಂದಷ್ಟೇ ಕಳೆದುಕೊಂಡಿತ್ತು. ಮರಿಯನ್ನು ಕಳೆದುಕೊಂಡ ಆ ಮಂಗ ಆಘಾತದಲ್ಲಿತ್ತು. ಈ ಹಸುಗೂಸನ್ನು ನೋಡಿದಾಗ ಅದು ತನ್ನ ಮರಿಯೇ ಎಂದು ಭಾವಿಸಿ, ಆ ಪ್ರೀತಿಯಿಂದಲೇ ಮಗುವನ್ನು ತನ್ನ ಬಳಿ ಇಟ್ಟುಕೊಂಡಿತ್ತು. ಮಗುವಿಗೆ ಯಾವುದೇ ಹಾನಿ ಮಾಡದಿದ್ದರೂ, ತನ್ನ ಮರಿಯನ್ನು ಯಾರಾದರೂ ಕಿತ್ತುಕೊಳ್ಳುತ್ತಾರೆ ಎಂಬ ಭಯದಲ್ಲಿ ಅದು ಆಕ್ರಮಣಕಾರಿ ವರ್ತನೆ ತೋರಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:07 pm, Wed, 22 April 26

Source link

Teenage Pregnancy: ಕಲಬುರಗಿಯಲ್ಲಿ ಹೆಚ್ಚಾಯ್ತು ಹದಿಹರೆಯದ ಗರ್ಭಧಾರಣೆ! ಒಂದೇ ವರ್ಷದಲ್ಲಿ 61 ಪ್ರಕರಣಗಳು ದಾಖಲು – Kannada News | Alarming Rise: Kalaburagi Reports 61 Teenage Pregnancies, Sparks Child Marriage Concerns

ಕಲಬುರಗಿಯಲ್ಲಿ ಹೆಚ್ಚಾಯ್ತು ಹದಿಹರೆಯದ ಗರ್ಭಧಾರಣೆ!

ಕಲಬುರಗಿ, ಏಪ್ರಿಲ್ 22: ಇತ್ತೀಚಿಗೆ ರಾಜ್ಯದಲ್ಲಿ ಹದಿಹರೆಯದ ಗರ್ಭಧಾರಣೆ (Teenage Pregnancy) ಪ್ರಕರಣಗಳು ಹೆಚ್ಚಾಗಿರುವುದು ಆತಂಕ ಮೂಡಿಸಿದೆ. ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ ಬರೋಬ್ಬರಿ 61 ಕೇಸ್​ಗಳು ಕಲಬುರಗಿಯದ್ದೇ ಎಂದು ಏಪ್ರಿಲ್ 13ರ ಆರ್​ಸಿಎಚ್ (Reproductive and Child Health) ಪೋರ್ಟಲ್ ದತ್ತಾಂಶದಿಂದ ತಿಳಿದುಬಂದಿದೆ.

ಯಾವ ತಾಲೂಕಿನಲ್ಲಿ ಎಷ್ಟು ಪ್ರಕರಣ?

ಜಿಲ್ಲೆಯ ಆಳಂದ ತಾಲೂಕಿನಲ್ಲಿ ಅತಿ ಹೆಚ್ಚು ಬಾಲಕಿಯರಲ್ಲಿ ಹದಿಹರೆಯದ ಗರ್ಭಧಾರಣೆ ವರದಿಯಾಗಿದ್ದು, 14 ಪ್ರಕರಣಗಳು ಬೆಳಕಿಗೆ ಬಂದಿವೆ. ಅಫಜಲಪುರ ಹಾಗೂ ಚಿತ್ತಾಪುರ ತಾಲೂಕುಗಳಲ್ಲಿ ತಲಾ 11 ಪ್ರಕರಣಗಳು ದಾಖಲಾಗಿದ್ದರೆ, ಸೇಡಂನಲ್ಲಿ 8, ಕಲಬುರಗಿ ಗ್ರಾಮೀಣ ಭಾಗದಲ್ಲಿ 7, ಜೇವರ್ಗಿಯಲ್ಲಿ 6 ಹಾಗೂ ಚಿಂಚೋಳಿ ಮತ್ತು ಕಲಬುರಗಿ ನಗರ ಪ್ರದೇಶಗಳಲ್ಲಿ ತಲಾ 2 ಪ್ರಕರಣಗಳು ದಾಖಲಾಗಿವೆ ಎಂದು ದತ್ತಾಂಶ ದೃಢಪಡಿಸಿದೆ.

ವಯಸ್ಸಿನ ಆಧಾರದಲ್ಲಿ ನೋಡಿದರೆ, ಆಳಂದ ತಾಲೂಕಿನಲ್ಲಿ ಕೇವಲ 14 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದರೆ, ಉಳಿದೆಡೆ ಒಟ್ಟಾರೆಯಾಗಿ 15 ವರ್ಷ ವಯಸ್ಸಿನ ಇಬ್ಬರು, 16 ವರ್ಷ ವಯಸ್ಸಿನಲ್ಲಿ 6 ಮಂದಿ ಗರ್ಭಿಣಿಯರಾಗಿದ್ದಾರೆ. ಬಹುಪಾಲು ಅಂದರೆ 52 ಬಾಲಕಿಯರು 17ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾರೆ ಎಂದು ಡಾಟಾ ಹೇಳುತ್ತದೆ.

ಟೀನೇಜ್ ಪ್ರೆಗ್ನೆನ್ಸಿಯಿಂದಾಗುವ ದುಷ್ಪರಿಣಾಮಗಳೇನು?

10 ರಿಂದ 19 ವರ್ಷದೊಳಗಿನವರ ಗರ್ಭಧಾರಣೆಯನ್ನು ಟೀನೇಜ್ ಪ್ರೆಗ್ನೆನ್ಸಿ ಎಂದು ಪರಿಗಣಿಸಲಾಗುತ್ತದೆ. ಇವು ಆರೋಗ್ಯದ ದೃಷ್ಟಿಯಿಂದ ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಅವಧಿಪೂರ್ವ ಶಿಶು ಜನನ, ಹುಟ್ಟಿದ ಮಗು ಕಡಿಮೆ ತೂಕವಿರುವುದು ಮತ್ತು ಹೆಚ್ಚಿನ ಶಿಶುಗಳ ಮರಣ ಪ್ರಮಾಣ ಸೇರಿದಂತೆ ಹದಿಹರೆಯದ ಗರ್ಭಧಾರಣೆಯು ಹೆಚ್ಚಿನ ತಾಯಂದಿರ/ನವಜಾತ ಶಿಶುಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ.

ಇದರಿಂದಾಗಿ ಬಾಲಕಿಯರ ವಿದ್ಯಾಭ್ಯಾಸ ಕುಂಠಿತವಾಗುವುದಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು ಮತ್ತು ತೀವ್ರ ಆರೋಗ್ಯ ತೊಡಕುಗಳಿಗೆ ಕಾರಣವಾಗುತ್ತದೆ. ಹದಿಹರೆಯದ ತಾಯಂದಿರು ರಕ್ತಹೀನತೆ, ಪ್ರಿಕ್ಲಾಂಪ್ಸಿಯಾ (ಗರ್ಭಾವಸ್ಥೆಯ 20 ವಾರಗಳ ನಂತರ ಅಥವಾ ಹೆರಿಗೆಯ ನಂತರ ಕಂಡುಬರುವ ಅಧಿಕ ರಕ್ತದೊತ್ತಡದ ಗಂಭೀರ ಸಮಸ್ಯೆ) ಮತ್ತು ಅಕಾಲಿಕ ಜನನಗಳ ಅಪಾಯಗಳನ್ನು ಸಹ ಎದುರಿಸುತ್ತಾರೆ.

ಇದನ್ನೂ ಓದಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಮುಚ್ಚಿ ಹಾಕಲು ನಡೆದಿತ್ತಾ ಸಂಚು?

ಈ ಒಂದು ವರ್ಷದ ಅವಧಿಯಲ್ಲಿ 14ರಿಂದ 17 ವರ್ಷದೊಳಗಿನ 61 ಪ್ರಕರಣಗಳು ದಾಖಲಾಗಿರುವುದು, ಜಿಲ್ಲೆಯಲ್ಲಿ ಬಾಲ್ಯವಿವಾಹಗಳ ಪ್ರಮಾಣವೂ ಹೆಚ್ಚಿರಬಹುದು ಎಂಬ ಅನುಮಾನ ಹುಟ್ಟಿಸಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತರು ಹಾಗೂ ಶಾಲಾ ಶಿಕ್ಷಕರು, ವಿಶೇಷವಾಗಿ ಹೈಸ್ಕೂಲ್ ಶಿಕ್ಷಕರು ಜಾಗೃತಿಯಿಂದ ಕಾರ್ಯನಿರ್ವಹಿಸಿ ಬಾಲ್ಯವಿವಾಹಗಳನ್ನು ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೈ ಕಟ್ಟಿ’ ಸಂಭ್ರಮದ ಹಿಂದಿನ ಕಾರಣ ಬಿಚ್ಚಿಟ್ಟ ಅಭಿಷೇಕ್ ಶರ್ಮಾ – Kannada News | Abhishek Sharma Decodes His New Celebration Style

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 31ನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ (Abhishek Sharma) ಅಕ್ಷರಶಃ ಅಬ್ಬರಿಸಿದ್ದರು. ಹೈದರಾಬಾದ್​ನ ರಾಜೀವ್​ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಎಸ್​ಆರ್​ಹೆಚ್ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಶತಕದ ಬಳಿಕ ‘ಕೈ ಕಟ್ಟಿ’ ಪೋಸ್ ನೀಡುವ ಮೂಲಕ ಸಂಭ್ರಮಿಸಿದ್ದರು.

ಸಾಮಾನ್ಯವಾಗಿ ಅಭಿಷೇಕ್ ಶರ್ಮಾ ಅರ್ಧಶತಕ ಅಥವಾ ಶತಕ ಸಿಡಿಸಿದ ಬಳಿಕ ತಮ್ಮ ಹೆಬ್ಬೆರಳು ಮತ್ತು ತೋರುಬೆರಳಿನ ಮೂಲಕ ‘L’ ಆಕಾರವನ್ನು ತೋರಿಸುವುದು ವಾಡಿಕೆ. ಇದು ಅಭಿಮಾನಿಗಳ ಮೇಲಿನ ‘ಪ್ರೀತಿ’ (Love) ಮತ್ತು ಬೆಂಬಲವನ್ನು ಸೂಚಿಸುತ್ತದೆ ಎಂದು ಅವರು ಈ ಹಿಂದೆ ಸ್ಪಷ್ಟಪಡಿಸಿದ್ದರು.

ಆದರೆ ಈ ಬಾರಿ ಅವರು ‘L’  ಸಂಭ್ರಮದ ಬದಲಿಗೆ ಕೈ ಕಟ್ಟಿ ಪೋಸ್ ನೀಡಿದ್ದರು.  ಇದರ ಬೆನ್ನಲ್ಲೇ ಹೊಸ ಮಾದರಿಯ ಸಂಭ್ರಮಕ್ಕೇನು ಕಾರಣ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಈ ಪ್ರಶ್ನೆಗೆ ಖುದ್ದು ಅಭಿಷೇಕ್ ಶರ್ಮಾ ಉತ್ತರಿಸಿದ್ದಾರೆ.

ಕೈ ಕಟ್ಟಿದ ಸಂಭ್ರಮಕ್ಕೆ ಕಾರಣವೇನು?

ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ಅಭಿಷೇಕ್ ಶರ್ಮಾ, “ಇದು ನಮ್ಮ ಬ್ಯಾಟಿಂಗ್ ಕೋಚ್ ಜೇಮ್ಸ್ ಫ್ರಾಂಕ್ಲಿನ್ ಮತ್ತು ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರಿಗೆ ಅರ್ಪಿಸಿದ ಗೌರವ. ನಾನು ಪಂದ್ಯದ ಕೊನೆಯವರೆಗೂ (20ನೇ ಓವರ್‌ವರೆಗೆ) ಕ್ರೀಸ್‌ನಲ್ಲಿ ನಿಂತು ಬ್ಯಾಟಿಂಗ್ ಮಾಡಬೇಕೆಂದು ಅವರು ನನಗೆ ಸವಾಲು ಹಾಕಿದ್ದರು. ಆ ಗುರಿಯನ್ನು ತಲುಪಿದ ಖುಷಿಗಾಗಿ ಈ ರೀತಿ ಸಂಭ್ರಮಿಸಿದೆ,” ಎಂದು ತಿಳಿಸಿದ್ದಾರೆ.

ಅಲ್ಲದೆ ಈ ಶತಕವನ್ನು ಅನಾರೋಗ್ಯದಿಂದ ಬಳಲುತ್ತಿರುವ ಸಹೋದರಿಗೆ ಅರ್ಪಿಸುತ್ತಿರುವುದಾಗಿ ಅಭಿಷೇಕ್ ಇದೇ ವೇಳೆ ತಿಳಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ 68 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ 10 ಸಿಕ್ಸರ್ ಹಾಗೂ 10 ಫೋರ್​ಗಳೊಂದಿಗೆ ಅಜೇಯ 135 ರನ್ ಬಾರಿಸಿದರು. ಈ ಭರ್ಜರಿ ಶತಕದೊಂದಿಗೆ ಎಸ್​ಆರ್​ಹೆಚ್ ತಂಡವು 20 ಓವರ್​ಗಳಲ್ಲಿ 242 ರನ್​ ಕಲೆಹಾಕಿತು.

ಇದನ್ನೂ ಓದಿ: ದಾಖಲೆ… ವಿಶ್ವ ದಾಖಲೆ… ಅಭಿಷೇಕ್ ಶರ್ಮಾ ಹೆಸರಿಗೆ ಭರ್ಜರಿ ದಾಖಲೆ

ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 195 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡವು 47 ರನ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎಸ್​ಆರ್​ಹೆಚ್ ತಂಡವು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

Published On – 2:56 pm, Wed, 22 April 26

Source link

ಸಿದ್ದರಾಮಯ್ಯ ಸೈಲೆಂಟ್​​ ಆಗಲು ಮಾಟ ಮಂತ್ರ ಕಾರಣವಾ?: ಕಾಂಗ್ರೆಸ್​​ನಲ್ಲಿಯೇ ಹೀಗೊಂದು ಹೊಸ ಚರ್ಚೆ – Kannada News | Is Black Magic Behind Siddaramaiah’s Silence? Fresh Buzz Within Congress

ಸಿದ್ದರಾಮಯ್ಯ ಸೈಲೆಂಟ್​​ ಆಗಲು ಮಾಟ ಮಂತ್ರ ಕಾರಣವಾ?Image Credit source: Tv9 Kannada

ಬೆಂಗಳೂರು, ಏಪ್ರಿಲ್​​ 22: ಇತ್ತೀಚೆಗೆ ರಾಜ್ಯ ಕಾಂಗ್ರೆಸ್​​ನಲ್ಲಿ ಭಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ತಮ್ಮ ಆಪ್ತರೇ ಪಕ್ಷದಲ್ಲಿ ಟಾರ್ಗೆಟ್​​ ಆಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಮಾತ್ರ ಸೈಲೆಂಟ್​​ ಆಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ನಡುವೆ ಇದಕ್ಕೆ ಮಾಜಿ ಸಚಿವ, ಹಾಲಿ ಕಾಂಗ್ರೆಸ್​​ ಶಾಸಕ ಕೆ.ಎನ್​​. ರಾಜಣ್ಣ ಹೊಸ ವ್ಯಾಖ್ಯಾನ ನೀಡಿದ್ದಾರೆ. ಸಿದ್ದರಾಮಯ್ಯ ಇಷ್ಟೊಂದು‌ ಅಸಹಾಯಕ ರೀತಿ ಇದ್ದಾರೆ ಅಂದರೆ ಯಾರೋ ಮಾಟ ಮಂತ್ರ ಮಾಡಿಸಿರಬಹುದಾ ಎಂದು ಯೋಚಿಸ್ತಿದ್ದೇನೆ ಎಂದು ಅವರು ಹೇಳಿರೋದು ‘ಕೈ’ ಮನೆಯಲ್ಲಿಯೇ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ರಾಜಣ್ಣ ಹೇಳಿದ್ದು ಏನು?

ನಾನು, ಸಿಎಂ ಸಿದ್ದರಾಮಯ್ಯ ಇಬ್ಬರೂ ಮಾಟ ಮಂತ್ರ ನಂಬಲ್ಲ. ಆದರೆ ಗಟ್ಟಿಯಾಗಿ ನಿಲ್ಲಿ‌ ಅಂತಾ ಹೇಳಿಸಿಕೊಳ್ಳುವಷ್ಟು ಸಿಎಂ ಅಸಹಾಯಕರಲ್ಲ. ಹೀಗಾಗಿ ಮಾಟ ಮಂತ್ರ ಮಾಡಿಸಿರಬಹುದಾ ಅಂತ ಯೋಚಿಸ್ತಿದ್ದೇನೆ. ಮಾಟ ಮಂತ್ರದ ಬಗ್ಗೆ ಜನರು ಮಾತಾಡುತ್ತಿದ್ದಾರೆ. ನಮ್ಮ ಹಳೇ ಮನೆ ಮುಂದೆಯೂ ನಿಂಬೆಹಣ್ಣು, ದಾರ ಹಾಕಿ ಹೋಗಿದ್ರು. ಕೇರಳದಲ್ಲಿ ಮಾಟ ಮಂತ್ರ ಮಾಡಿಸುತ್ತಾರೆ ಎಂದು ರಾಜಣ್ಣ  ಹೇಳಿದ್ದರು.

ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ ಮಾಟ, ಮಂತ್ರ; ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ

‘ಈಗ ಯಾವ ಮಾಟ ಮಂತ್ರ ನಡೆಯಲ್ಲ’


ಇನ್ನು ರಾಜಣ್ಣ ಅವರ ಈ ಹೇಳಿಕೆಗೆ ಶಾಸಕ ಹೆಚ್​.ಸಿ.ಬಾಲಕೃಷ್ಣ ಟಾಂಗ್​ ನೀಡಿದ್ದು, ಸಿಎಂ ಮೇಲೆ ಮಾಟ ಮಂತ್ರ ಮಾಡೋ ಶಕ್ತಿ ಇರೋದು ರಾಜಣ್ಣಗೆ ಮಾತ್ರ. ಇನ್ಯಾರಿಗೂ ಆ ಶಕ್ತಿ ಇಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗೆ ಯಾರು ಆಪ್ತರು ಇರ್ತಾರೆ ಅವರೇ ಮಾಡಬೇಕು. ಬೇರೆಯವರು ಮಾಟ ಮಂತ್ರ ಮಾಡಿದ್ರೆ ಮುಖ್ಯಮಂತ್ರಿಗಳು ಬಿಡ್ತಾರಾ? ಎಂದು ಪ್ರಶ್ನಿಸಿದ್ದಾರೆ. ಬಳಿಕ ರಾಜಣ್ಣ ಮಾತುಗಳನ್ನ ಅಷ್ಟೊಂದು ಸೀರಿಯಸ್ ಆಗಿ ಪರಿಗಣಿಸಿದ್ದೀರಾ? ಹಾಗಾದ್ರೆ ನಾನು ಅದಕ್ಕೆ ಉತ್ತರ ಕೊಡಲು ಸಾಧ್ಯವಿಲ್ಲ. ಮಂತ್ರದ ಬಗ್ಗೆ ಕ್ಯಾಶುವಲ್ ಆಗಿ ಹೇಳಿದ್ದಾರೆ ಅಂತಾ ಕಾಣಿಸುತ್ತೆ. ಮಾಟದಮೂಲಕ ಅಧಿಕಾರ ಕಸಿದುಕೊಳ್ಳುವುದು, ಅಧಿಕಾರ ಕೊಡಿಸುವ ಕಾಲ ಹೋಯ್ತು. ಈಗ ಯಾವ ಮಾಟ ಮಂತ್ರ ನಡೆಯಲ್ಲ ಎಂದಿದ್ದಾರೆ. ಮತ್ತೊಂದೆಡೆ ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜಣ್ಣಗೆ ಮಾಹಿತಿ ಇರಬಹುದು, ಇಲ್ಲ ಯಾರಾದರೂ ಹೇಳಿರಬಹುದು. ಅದಕ್ಕೆ ಅವರು ಹಾಗೆ ಹೇಳಿರಬೇಕು ಎಂದಿದ್ದಾರೆ. ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರು ಸೈಲೆಂಟ್​ ಆಗಿರುವ ವಿಚಾರ ಈಗ ನಾನಾರೀತಿ ಚರ್ಚೆಗಳಿಗೆ ಕಾರಣವಾಗಿರೋದಂತೂ ಸುಳ್ಳಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:50 pm, Wed, 22 April 26

Source link

Heat Waves: ಬಿಸಿಲಿಗೆ ಬಳಲಿ ಬೆಂಡಾದ ಉತ್ತರ ಕರ್ನಾಟಕ ಜನ, ಜಿಲ್ಲೆಗಳಲ್ಲಿ ಹನಿ ನೀರಿಗೂ ಶುರುವಾಯ್ತು ಪರದಾಟ – Kannada News | Karnataka Heatwave 2026: Green Nets in Yadgir Signals, Drinking Water Crisis Deepens Across Belagavi, Dharwad and Udupi

ಯಾದಗಿರಿಯ ಸುಭಾಷ್ ವೃತ್ತದಲ್ಲಿ ಬಿಸಿಲಿನಿಂದ ರಕ್ಷಣೆಗಾಗಿ ‘ಗ್ರೀನ್ ನೆಟ್’ ಅಳವಡಿಸಿರುವುದುImage Credit source: tv9

ಬೆಂಗಳೂರು, ಏಪ್ರಿಲ್ 22: ಕರ್ನಾಟಕದಲ್ಲಿ (Karnataka) ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಂತೂ ಬಳಲಿ ಬೆಂಡಾಗಿವೆ. ಬೆಂಗಳೂರಿನಿಂದ ಬೆಳಗಾವಿವರೆಗೆ, ಬೀದರ್‌ನಿಂದ ಚಾಮರಾಜನಗರದವರೆಗೆ ಉಷ್ಣ ಅಲೆಗೆ (Karnataka Heatwave) ಜನ ಬೇಸತ್ತಿದ್ದಾರೆ. ರಣಬಿಸಿಲಿನಿಂದ ರಕ್ಷಣೆ ಪಡೆಯಲು ಜಿಲ್ಲಾಡಳಿತಗಳು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದರೆ, ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಜನ ಕಿಲೋಮೀಟರ್‌ಗಟ್ಟಲೆ ಅಲೆಯುವಂತಾಗಿದೆ.

ಬಿಸಿಲ ತಾಪದಿಂದ ಬಚಾವಾಗಲು ‘ಗ್ರೀನ್ ನೆಟ್’ ಮೊರೆ

ಯಾದಗಿರಿಯಲ್ಲಿ ಬಿಸಿಲಿನ ತಾಪ ಎಷ್ಟಿದೆಯೆಂದರೆ, ಸಿಗ್ನಲ್‌ಗಳಲ್ಲಿ ನಿಲ್ಲುವ ವಾಹನ ಸವಾರರಿಗೆ ನೆರಳು ನೀಡಲು ಸುಭಾಷ್ ವೃತ್ತದಲ್ಲಿ ‘ಗ್ರೀನ್ ನೆಟ್’ ಅಳವಡಿಸಲಾಗಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಕೊಂಚ ನಿರಾಳತೆ ತಂದಿದೆ. ಇತ್ತ ಕಲಬುರಗಿಯಲ್ಲಿ ಜನ ಶಾಖದಿಂದ ಬಚಾವಾಗಲು ಸ್ವಿಮ್ಮಿಂಗ್ ಪೂಲ್‌ಗಳ ಮೊರೆ ಹೋಗುತ್ತಿದ್ದಾರೆ.

ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ

ರಾಯಚೂರಿನಲ್ಲಿ ಉಷ್ಣ ಅಲೆಯ ಪರಿಣಾಮ ನವಜಾತ ಶಿಶುಗಳ ಮೇಲೆ ಬೀರುತ್ತಿದ್ದು, ಮಕ್ಕಳಿಗೆ ಡಿಹೈಡ್ರೇಶನ್, ವಾಂತಿ-ಬೇಧಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಮಕ್ಕಳನ್ನು ಹೊರಗೆ ಕರೆತರದಂತೆ ವೈದ್ಯರು ಎಚ್ಚರಿಸಿದ್ದಾರೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಬಿಸಿಲಿನಿಂದ ಹೀಟ್ ಸ್ಟ್ರೋಕ್​ಗೆ ತುತ್ತಾದವರಿಗಾಗಿ ಪ್ರತ್ಯೇಕ 10 ಹಾಸಿಗೆಗಳ ವಾರ್ಡ್ ತೆರೆಯಲಾಗಿದೆ. ಬಿಸಿಲಿಗೆ ಹುತ್ತದೊಳಗೆ ಇರಲಾಗದೆ ಹಾವುಗಳು ಹೊರಬರುತ್ತಿರುವುದು ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಆತಂಕ ಮೂಡಿಸಿದೆ.

ನೀರಡಿಕೆಯಿಂದ ತತ್ತರಿಸಿದ ಕರುನಾಡು

ಒಂದೆಡೆ ಬಿಸಿಲು ಸುಡುತ್ತಿದ್ದರೆ, ಮತ್ತೊಂದೆಡೆ ನೀರಿನ ಹಾಹಾಕಾರ ಮಿತಿಮೀರಿದೆ.

  • ಬೆಳಗಾವಿ: ಚಿಕ್ಕೋಡಿ ತಾಲೂಕಿನ ನರಲಗುಡ್ಡದಲ್ಲಿ ಮಹಿಳೆಯರು 2 ಕಿ.ಮೀ ದೂರ ಹೋಗಿ ನೀರು ತರುವಂತಾಗಿದೆ.
  • ಧಾರವಾಡ: ಕುಂದಗೋಳದ ಬೆನಕನಹಳ್ಳಿಯಲ್ಲಿ 300 ಮನೆಗಳಿಗೆ ಒಂದೇ ನಲ್ಲಿ ಇದ್ದು, ಒಂದು ಕೊಡ ನೀರಿಗಾಗಿ ಜನ 3 ಗಂಟೆ ಕಾಯುತ್ತಿದ್ದಾರೆ.
  • ಉಡುಪಿ: ಬೈಂದೂರಿನ ಅತ್ತಿಕೋಣೆಯಲ್ಲಿ ಸೌಪರ್ಣಿಕಾ ನದಿಯನ್ನು ದೋಣಿ ಮೂಲಕ ದಾಟಿ ನೀರು ತರುವ ಹೀನಾಯ ಸ್ಥಿತಿ ಎದುರಾಗಿದೆ.
  • ಜಲಾಶಯಗಳ ಸ್ಥಿತಿ: ತುಂಗಭದ್ರಾ ಜಲಾಶಯದಲ್ಲಿ ಕೇವಲ 12 ಟಿಎಂಸಿ ನೀರು ಬಾಕಿ ಇದ್ದು, ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳಿಗೆ ಕುಡಿಯುವ ನೀರಿನ ಆತಂಕ ಶುರುವಾಗಿದೆ.

ಇದನ್ನೂ ಓದಿ: ಮುಂದಿನ 7 ದಿನ ಕರ್ನಾಟಕ ಕೂಲ್​ ಕೂಲ್: ಈ ಜಿಲ್ಲೆಗಳಿಗೆ ಬರಲಿದ್ದಾನೆ ವರುಣ; ಬಿಸಿಲ ಧಗೆಯಿಂದ ಸಿಗಲಿದೆ ಮುಕ್ತಿ!

ಕೇವಲ ಮನುಷ್ಯರಷ್ಟೇ ಅಲ್ಲದೆ, ಪ್ರಾಣಿ-ಪಕ್ಷಿಗಳು ಕೂಡ ನೀರಿಲ್ಲದೆ ಪರದಾಡುತ್ತಿವೆ. ಚಾಮರಾಜನಗರದಲ್ಲಿ ಕಾಡಾನೆಗಳು ನೀರನ್ನು ಹುಡುಕುತ್ತಾ ಪಾಲಾರ್ ಹಳ್ಳದತ್ತ ಗುಳೆ ಹೋಗುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version