ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್​​ಗೆ ಜಾಮೀನು

ಬೆಂಗಳೂರು, ಏಪ್ರಿಲ್​ 22: ಗೋಲ್ಡ್ ಸ್ಮಗ್ಲಿಂಗ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್​​​ಗೆ ಜಾಮೀನು ಲಭಿಸಿದೆ. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಇಂದು ಪರಪ್ಪನ ಅಗ್ರಹಾರದಿಂದ ರನ್ಯಾ ರಾವ್ ಬಿಡುಗಡೆಯಾಗಲಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ.

Source link

ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ – Kannada News | Rakshita Shetty Visist Bigg Boss Malu Native Nippanal

ರಕ್ಷಿತಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ರನ್ನರ್ ಅಪ್ ಆದ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಈಗ ರಕ್ಷಿತಾ ಶೆಟ್ಟಿ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಮಾಳು ಊರಿಗೆ ತೆರಳಿದ್ದಾರೆ. ಅಲ್ಲಿ ಮಾಳು ಜೊತೆ ಬೈಕ್ ಅಲ್ಲಿ ಲಾಂಗ್ ಡ್ರೈವ್ ಹೋಗಿದ್ದಾರೆ. ಮಾಳು ಅವರ ಊರನ್ನು ನೋಡಿ ರಕ್ಷಿತಾ ಶೆಟ್ಟಿಗೆ ಖುಷಿ ಆಗಿದೆ. ಇತ್ತೀಚೆಗೆ ರಕ್ಷಿತಾ ಅವರ ಊರಿಗೆ ರಘು ಅವರು ಆಗಮಿಸಿದ್ದರು. ಅವರ ಯೂಟ್ಯೂಬ್ ವಿಡಿಯೋ ಗಮನ ಸೆಳೆದಿತ್ತು. ಈಗ ರಕ್ಷಿತಾ ಶೆಟ್ಟಿ ಹಾಗೂ ಮಾಳು ಕಾಂಬಿನೇಷನ್​ ಅಲ್ಲಿ ಯೂಟ್ಯೂಬ್ ವಿಡಿಯೋ ಬರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ದಾಖಲೆ… ವಿಶ್ವ ದಾಖಲೆ… ಅಭಿಷೇಕ್ ಶರ್ಮಾ ಹೆಸರಿಗೆ ಭರ್ಜರಿ ದಾಖಲೆ – Kannada News | Abhishek Sharma Creates Massive Record in IPL

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಭಿಷೇಕ್ ಶರ್ಮಾ (Abhishek Sharma) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಭರ್ಜರಿ ಶತಕ ಸಿಡಿಸುವ ಮೂಲಕ. ಈ ಸೆಂಚುರಿಯೊಂದಿಗೆ ಐಪಿಎಲ್​ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ದಾಖಲೆಯೊಂದು ಅಭಿಷೇಕ್ ಪಾಲಾಗಿದೆ.

Source link

ಮಂಗಳೂರು: ಅತ್ತಾವರದಲ್ಲಿ ಕುಸಿದು ಬಿದ್ದ ಕಾಂಪೌಂಡ್ ಗೋಡೆ, ಪಕ್ಕದಲ್ಲೇ ನಿಲ್ಲಿಸಿದ್ದ ಕಾರುಗಳು ನಜ್ಜುಗುಜ್ಜು! – Kannada News | Mangaluru Rain: Compound Wall Collapses in Attavar; Multiple Cars Smashed Under Debris

ಮಂಗಳೂರು, ಏಪ್ರಿಲ್ 22: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆ ಕೆಲವೆಡೆ ಅವಾಂತರ ಸೃಷ್ಟಿಸಿದೆ. ಮಂಗಳೂರಿನ ಅತ್ತಾವರದಲ್ಲಿ ವರ್ಷದ ಹಿಂದೆಯಷ್ಟೇ ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆಯೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಗೋಡೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಗೋಡೆಯ ಅವಶೇಷಗಳಡಿ ಸಿಲುಕಿ ಸಂಪೂರ್ಣ ಜಖಂಗೊಂಡಿವೆ. ಸ್ಥಳೀಯವಾಗಿ ಧಾರ್ಮಿಕ ಕಾರ್ಯಕ್ರಮವೊಂದು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ವಾಹನಗಳು ಬಂದಿದ್ದವು. ಪಾರ್ಕಿಂಗ್‌ಗೆ ಜಾಗವಿಲ್ಲದ ಕಾರಣ ಕಾರು ಮಾಲೀಕರು ಅನಿವಾರ್ಯವಾಗಿ ಗೋಡೆಯ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಆದರೆ, ಮಳೆಯ ತೀವ್ರತೆಗೆ ಗೋಡೆ ಕುಸಿತಗೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕಾರುಗಳು ಹಾನಿಗೊಳಗಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ! – Kannada News | Chikkodis Naralagudda Villagers Walk 2km Daily Amidst Severe Water Crisis

ಬೆಳಗಾವಿ, ಏಪ್ರಿಲ್ 22: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನರಲಗುಡ್ಡ ಗ್ರಾಮದಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜೀವಜಲಕ್ಕಾಗಿ ಹಾಹಾಕಾರ ಸೃಷ್ಟಿಯಾಗಿದ್ದು, ನರಲಗುಡ್ಡ ಗ್ರಾಮವೂ ಇದಕ್ಕ ಹೊರತಾಗಿಲ್ಲ. ಇಲ್ಲಿನ ನಿವಾಸಿಗಳು ಪ್ರತಿದಿನ ಎರಡು ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ನೀರನ್ನು ತರುವ ಸಂಕಷ್ಟ ಎದುರಿಸುತ್ತಿದ್ದಾರೆ.

ಗ್ರಾಮದಲ್ಲಿನ ಬೋರ್‌ವೆಲ್ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವೆಂದು ಸ್ಥಳೀಯರು ಹೇಳುತ್ತಾರೆ. ಬಿಸಿಲಿನಲ್ಲಿ ದಿನಕ್ಕೆ ಹಲವಾರು ಬಾರಿ ನಡೆದುಕೊಂಡು ಹೋಗಿ ನೀರು ತರುವುದು ಮಕ್ಕಳು ಮತ್ತು ವೃದ್ಧರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ನೀರಿನ ಕೊರತೆಯಿಂದಾಗಿ ಮನೆಗೆ ಅಡುಗೆ ಮಾಡುವುದು ಸೇರಿದಂತೆ ದೈನಂದಿನ ಚಟುವಟಿಕೆಗಳೂ ಸವಾಲಾಗಿ ಪರಿಣಮಿಸಿವೆ. ಕುಡಿಯುವ ನೀರಿಗಾಗಿ ಗ್ರಾಮಸ್ಥರು ಕಷ್ಟಪಡುತ್ತಿದ್ದು, ಅಧಿಕಾರಿಗಳು ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು: ಬೆಂಕಿ ಇಟ್ಟಿದ್ದು ದುಷ್ಕರ್ಮಿಗಳು! – Kannada News | Miscreants Set Plywood Warehouse Ablaze in Nelamangala

ನೆಲಮಂಗಲ, ಏಪ್ರಿಲ್​​ 22: ಫ್ಲೈವುಡ್ ಗೋದಾಮೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಈ ಅವಘಡದಿಂದ ಗೋದಾಮಿನಲ್ಲಿದ್ದ ಫ್ಲೈವುಡ್ ಮತ್ತು ಇತರ ಸಾಮಗ್ರಿ ಬೆಂಕಿಗೆ ಆಹುತಿಯಾಗಿ ಭಾರಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ, ಸ್ಥಳಕ್ಕೆ ಬಂದ ಜನರು ಮತ್ತು ವೀಕ್ಷಕರಿಗೆ ಸುರಕ್ಷತೆ ದೃಷ್ಟಿಯಿಂದ ದೂರ ಉಳಿಯುವಂತೆ ಎಚ್ಚರಿಕೆ ನೀಡಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಬೆಂಕಿ ಅವಘಡವು ದುಷ್ಕರ್ಮಿಗಳ ಕೃತ್ಯ ಎಂದು ಶಂಕಿಸಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವರದಿ: ಮಂಜುನಾಥ್​​, ಟಿವಿ9 ನೆಲಮಂಗಲ

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Optical Illusion: ಹಚ್ಚ ಹಸಿರಿನ ಗಿಡ ಮರಗಳ ನಡುವೆ ಅಡಗಿರುವ ಹಾವನ್ನು 10 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ? – Kannada News | Optical Illusion: Can you find the snake hidden in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: imgur.com

ಈಗಂತೂ ಬುದ್ಧಿವಂತಿಕೆ, ಕಣ್ಣಿನ ಚುರುಕುತನ ಎಷ್ಟಿದೆ ಎಂದು ಪರೀಕ್ಷಿಸಲು ಆಪ್ಟಿಕಲ್‌ ಇಲ್ಯೂಷನ್ ನಂತಹ (optical illusion) ಒಗಟಿನ ಚಿತ್ರಗಳು ಸಹಾಯ ಮಾಡುತ್ತವೆ. ಆದರೆ ಈ ಒಗಟಿನ ಚಿತ್ರಗಳನ್ನು ಬಿಡಿಸುವ ಮಜಾನೇ ಬೇರೆ. ಇದೀಗ ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ವೈರಲ್ ಆಗಿದೆ. ದಟ್ಟವಾದ ಹಸಿರು ಗಿಡ ಮರಗಳ ನಡುವೆ ಅಡಗಿರುವ ಹಾವನ್ನು ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ನೀವು ಈ ಸವಾಲನ್ನು ಸ್ವೀಕರಿಸಲು ರೆಡಿ ಇದ್ದೀರಾ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ದಟ್ಟವಾದ ಕಾಡು ಮತ್ತು ಹಚ್ಚ ಹಸಿರಾದ ಗಿಡ ಮರಗಳು ಗೋಚರಿಸುತ್ತವೆ. ಆದರೆ ಹಸಿರು ಹಾವು ಜಾಣತನದಿಂದ ಈ ಎಲೆಗಳ ನಡುವೆ ಅಡಗಿ ಕುಳಿತಿದೆ. ಅದರ ಬಣ್ಣವು ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸಂಪೂರ್ಣವಾಗಿ ಬೆರೆತು ಹೋಗಿರುವುದರಿಂದ ಹಾವನ್ನು ಗುರುತಿಸುವುದು ಕಷ್ಟಕರ. ನೀವು ಈ ಒಗಟನ್ನು ಕೇವಲ 10 ಸೆಕೆಂಡುಗಳಲ್ಲಿ ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ.

ಇದನ್ನೂ ಓದಿ: ಜಸ್ಟ್ 30 ಸೆಕೆಂಡುಗಳಲ್ಲಿ ಬೆಟ್ಟದ ಮೇಲೆ ಅಡಗಿರುವ ಕುರಿಯನ್ನು ಗುರುತಿಸಬಲ್ಲಿರಾ

ಹಾವು ನಿಮ್ಮ ಕಣ್ಣಿಗೆ ಬಿದ್ದಿತೇ?

ಈ ಒಗಟಿನ ಚಿತ್ರಗಳು ನಿಮ್ಮ ಕಣ್ಣನು ಮೋಸಗೊಳಿಸುತ್ತವೆ ಎನ್ನುವ ಮಾತು ನಿಜ. ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮಗೆ ಅದೇ ರೀತಿ ಅನಿಸಬಹುದು. ಇದೀಗ ಈ ಹಚ್ಚ ಹಸಿರಿನ ಗಿಡ ಮರಗಳ ನಡುವೆ ಅಡಗಿರುವ ಹಸಿರು ಹಾವನ್ನು ಗುರುತಿಸಲು ಸಾಧ್ಯವಾಗದೇ ಇರಬಹುದು. ಹಸಿರು ಹಾವು ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಷೇರು ಮಾರುಕಟ್ಟೆ ಇವತ್ತು ಕುಸಿತ; ಏನಿರಬಹುದು ಕಾರಣಗಳು? ಇಲ್ಲಿದೆ ಡೀಟೇಲ್ಸ್ – Kannada News | Stock Market plunges by several points, down by almost 1pc on Wednesday

ನವದೆಹಲಿ, ಏಪ್ರಿಲ್ 22: ಇಂದು, ಭಾರತೀಯ ಶೇರು ಮಾರುಕಟ್ಟೆ ಭಾರಿ ಕುಸಿತ ಕಂಡಿದೆ. ಕಳೆದ ಮೂರು ದಿನಗಳ ಏರಿಕೆಗೆ ಬ್ರೇಕ್ ಬಿದ್ದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಬುಧವಾರದ ಬೆಳಗಿನ ವಹಿವಾಟಿನಲ್ಲಿ ಬಿಎಸ್​ಇನ ಸೆನ್ಸೆಕ್ಸ್ ಸೂಚ್ಯಂಕ 710 ಅಂಕ (ಶೇ. 0.90) ಕುಸಿದು 78,563ರ ಮಟ್ಟ ಮುಟ್ಟಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ ಸೂಚ್ಯಂಕ 220 ಅಂಕಗಳ ಕುಸಿತ ಕಂಡು (ಶೇ. 0.90) 24,356ರ ಮಟ್ಟಕ್ಕೆ ಇಳಿದಿತ್ತು. ಇಂದಿನ ಮಾರುಕಟ್ಟೆಯ ಪ್ರಮುಖ ಅಂಕಿಅಂಶಗಳು ಮತ್ತು ಕುಸಿತಕ್ಕೆ ಕಾರಣಗಳು ಇಲ್ಲಿವೆ:

1. ಐಟಿ (IT) ವಲಯದಲ್ಲಿ ಭಾರಿ ಮಾರಾಟ

ಇಂದಿನ ಕುಸಿತಕ್ಕೆ ಮುಖ್ಯ ಕಾರಣ ಐಟಿ ಕಂಪನಿಗಳ ಶೇರುಗಳ ಬೆಲೆ ಇಳಿಕೆ. ಪ್ರಮುಖವಾಗಿ HCL Technologies ಶೇರು ಸುಮಾರು 9% ರಷ್ಟು ಕುಸಿದಿದೆ. ಕಂಪನಿಯ ಮುಂದಿನ ದಿನಗಳ ಬೆಳವಣಿಗೆಯ ಬಗ್ಗೆ (weak guidance) ಹೂಡಿಕೆದಾರರಲ್ಲಿ ನಂಬಿಕೆ ಕಡಿಮೆಯಾಗಿರುವುದು ಇದಕ್ಕೆ ಕಾರಣ. ಇನ್ಫೋಸಿಸ್ ಮತ್ತು ಟಿಸಿಎಸ್ ಕೂಡ ನಷ್ಟ ಅನುಭವಿಸಿವೆ.

ಇದನ್ನೂ ಓದಿ: ಮಾಸಿಕ 20,500 ರೂ ಆದಾಯ ತರಬಲ್ಲ ಪೋಸ್ಟ್ ಆಫೀಸ್​ನ ಎಸ್​ಸಿಎಸ್​ಎಸ್ ಸ್ಕೀಮ್

2. ಜಾಗತಿಕ ರಾಜಕೀಯ ಉದ್ವಿಗ್ನತೆ (Geopolitical Tensions)

ಇರಾನ್ ಮತ್ತು ಅಮೆರಿಕಾ ನಡುವಿನ ಸಂಘರ್ಷದ ವಾತಾವರಣ ಇನ್ನೂ ತಿಳಿಯಾಗಿಲ್ಲ. ಕದನ ವಿರಾಮದ ಅವಧಿ ವಿಸ್ತರಣೆಯಾಗಿದ್ದರೂ, ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಮುಂದುವರಿಯುವ ಆತಂಕ ಹೂಡಿಕೆದಾರರನ್ನು ಎಚ್ಚರಿಕೆಯಿಂದ ಇರುವಂತೆ ಮಾಡಿದೆ.

3. ಕಚ್ಚಾ ತೈಲ ಬೆಲೆ ಏರಿಕೆ

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ (Brent Crude) ಬೆಲೆ ಬ್ಯಾರೆಲ್‌ಗೆ $98 ಆಸುಪಾಸಿನಲ್ಲಿದೆ. ಭಾರತವು ತೈಲಕ್ಕಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿರುವುದರಿಂದ, ಬೆಲೆ ಏರಿಕೆಯು ಹಣದುಬ್ಬರ ಮತ್ತು ರೂಪಾಯಿ ಮೌಲ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

4. ವಿದೇಶಿ ಹೂಡಿಕೆದಾರರ ಹೊರಹರಿವು (FII Selling)

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಹಣವನ್ನು ಹಿಂತೆಗೆದುಕೊಳ್ಳುತ್ತಿರುವುದು ಮಾರುಕಟ್ಟೆಯ ಮೇಲೆ ಒತ್ತಡ ಹೇರಿದೆ.

ಇದನ್ನೂ ಓದಿ: ಹತ್ತು ಕೋಟಿ ರೂ ಹಣ ಸೇರಿಸಲು ಎಷ್ಟು ಸಮಯ ಮತ್ತು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

5. ತ್ರೈಮಾಸಿಕ ಫಲಿತಾಂಶದ ಮುನ್ಸೂಚನೆ

ಅನೇಕ ದೊಡ್ಡ ಕಂಪನಿಗಳ ನಾಲ್ಕನೇ ತ್ರೈಮಾಸಿಕ (Q4) ಫಲಿತಾಂಶಗಳು ಇಂದು ಮತ್ತು ನಾಳೆ ಪ್ರಕಟವಾಗಲಿದ್ದು, ಫಲಿತಾಂಶ ಹೇಗಿರಬಹುದು ಎಂಬ ಆತಂಕದಲ್ಲಿ ಹೂಡಿಕೆದಾರರು ಲಾಭಾಂಶವನ್ನು ಕಿಸೆಗೆ ಹಾಕಿಕೊಳ್ಳುತ್ತಿದ್ದಾರೆ (Profit Booking).

ಮಾರುಕಟ್ಟೆ ಕುಸಿದಿದ್ದರೂ, Nestle India ಮತ್ತು Tata Elxsi ನಂತಹ ಕಂಪನಿಗಳು ಉತ್ತಮ ಲಾಭ ಗಳಿಸಿವೆ. ಸಣ್ಣ ಕಂಪನಿಗಳ ಶೇರುಗಳು (Small-cap stocks) ದೊಡ್ಡ ಕುಸಿತ ಕಾಣದೆ ಸ್ಥಿರತೆಯನ್ನು ಕಾಯ್ದುಕೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಸಿನಿಮಾ ಆಕ್ಷನ್ ಸಾಮಾನ್ಯವಾಗಿರಲ್ಲ: ಯಶ್ ಹೇಳಿದ್ದೇನು? – Kannada News | Yash talks about Toxic movie’s action and action director JJ Perry

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳ ಮೇಲೆ ಕೆಲ ದಿನಗಳಷ್ಟೆ ಇದೆ. ಯಶ್ ಅವರು ಇದೀಗ ಅಧಿಕೃತವಾಗಿ ಸಿನಿಮಾದ ಬಹಿರಂಗ ಪ್ರಚಾರ ಆರಂಭಿಸಿದ್ದಾರೆ. ಲಾಸ್ ಏಂಜಲ್ಸ್​​ನಲ್ಲಿ ನಡೆದ ಸಿನಿಮಾಕಾನ್ 2026ಗೆ ಹೋಗಿದ್ದ ಯಶ್, ತಮ್ಮ ‘ರಾಮಾಯಣ’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಅದರಲ್ಲೂ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಯಶ್ ಅವರು ವಿಶೇಷವಾಗಿ ಮಾತನಾಡಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲಕರಾಗಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಯಶ್ ಅವರು ಸಿನಿಮಾದ ಆಕ್ಷನ್ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾಕ್ಕೆ ಭಿನ್ನವಾದ ಆಕ್ಷನ್ ಬೇಕೆಂಬುದು ಯಶ್ ಅವರ ಬಯಕೆ ಆಗಿತ್ತಂತೆ. ಆಕ್ಷನ್ ಎಂಬುದು ಹಿಂದೆ ನೋಡಿದಂತೆ ಇರಬಾರದು, ಅಲ್ಲದೆ, ಪ್ರತಿ ಆಕ್ಷನ್ ದೃಶ್ಯವೂ ಸಹ ಹಿಂದಿನದ್ದಕ್ಕಿಂತಲೂ ಭಿನ್ನವಾಗಿರಬೇಕು ಎಂಬುದು ಅವರ ನಿಲುವಾಗಿತ್ತಂತೆ. ಇದೇ ಕಾರಣಕ್ಕೆ ಯಶ್ ಅವರು ಲಾಸ್ ಏಂಜಲ್ಸ್​​ಗೆ ಹೋಗಿ ಹಾಲಿವುಡ್​ನ ಸ್ಟಾರ್ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ಅವರನ್ನು ಭೇಟಿ ಆದರಂತೆ. ಯಶ್, ಜೆಜೆ ಪೆರ್ರಿ ಅವರನ್ನು ಭೇಟಿ ಆದ ವಿಡಿಯೋಗಳು, ಫೋಟೊಗಳು ಕೆಲ ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ:ಹಾಲಿವುಡ್ ಮಂದಿಯ ಎದುರು ಹೇಗೆ ಮಾತಾಡಿದ್ರು ನೋಡಿ ಯಶ್

‘ಆಕ್ಷನ್ ಸೀನ್​​ಗಳನ್ನು ಆಗಿರುವುದಕ್ಕಿಂತಲೂ ಒಂದು ಹಂತ ಮೇಲಕ್ಕೆ ತೆಗೆದುಕೊಂಡು ಹೋಗಿ ತೋರಿಸಬೇಕು ಎಂಬುದು ನನ್ನ ಆಸೆ ಆಗಿತ್ತು. ಅದರಲ್ಲೂ ಗನ್ ಫೈಟ್​​ಗಳು ಅದ್ಭುತವಾಗಿ ಮೂಡಿ ಬರಬೇಕು ಎಂಬುದು ನನ್ನ ಆಸೆಯಾಗಿತ್ತು. ಹಾಗಾಗಿ ನಾನು ಜೆಜೆ ಪೆರ್ರಿಯನ್ನು ಭೇಟಿ ಮಾಡಿದೆ. ಜೆಜೆ ಪೆರ್ರಿ ಅದ್ಭುತ ವ್ಯಕ್ತಿ, ಅವರು ನನ್ನೊಟ್ಟಿಗೆ ಸಾಕಷ್ಟು ಸಮಯ ಕಳೆದರು. ನನ್ನ ಬಾಡಿ ಲಾಂಗ್​ವೇಜ್ ಅನ್ನು ಅಭ್ಯಾಸ ಮಾಡಿದರು. ಅದ್ಭುತವಾದ ಆಕ್ಷನ್ ದೃಶ್ಯಗಳನ್ನು ಅವರು ಕೊಟ್ಟಿದ್ದಾರೆ’ ಎಂದಿದ್ದಾರೆ ಯಶ್.

‘ಗನ್ ಫೈಟ್​ ಅಂತೂ ಅದ್ಭುತವಾಗಿವೆ. ಅವರು ಅದನ್ನು ‘ಗನ್​​ಫು’ ಎಂದು ಕರೆಯುತ್ತಾರೆ. ಒಂದು ರೀತಿ ಕುಂಫು ಜೊತೆಗೆ ಗನ್ ಫೈಟಿಂಗ್ ಸೇರಿಸಿದ್ದಾರೆ. ‘ಜಾನ್ ವಿಕ್’ನ ಆಕ್ಷನ್ ನನಗೆ ಬಹಳ ಇಷ್ಟವಾಗಿತ್ತು. ಜೆಜೆ ಪೆರ್ರಿ ‘ಟಾಕ್ಸಿಕ್’ಗೂ ಸಹ ಅದ್ಭುತವಾದ ಆಕ್ಷನ್ ದೃಶ್ಯಗಳನ್ನು ನೀಡಿದ್ದಾರೆ. ಸಿನಿಮಾದಲ್ಲಿ ಆಕ್ಷನ್ ಅತ್ಯುದ್ಭುತವಾಗಿದೆ. ಆದರೆ ಆಕ್ಷನ್ ದೃಶ್ಯಗಳು, ಕತೆಯಿಂದ ಪ್ರತ್ಯೇಕವಾಗಿ ನಿಲ್ಲದೆ, ಕತೆಯನ್ನು ಮುಂದಕ್ಕೆ ಕೊಂಡೊಯ್ಯುವ ಗುಣವನ್ನು ಹೊಂದಿರಲಿವೆ’ ಎಂದಿದ್ದಾರೆ ಯಶ್.

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಮೇಲ್ನೋಟಕ್ಕೆ ಇದು ಗ್ಯಾಂಗ್​​ಸ್ಟರ್ ಸಿನಿಮಾ ಆದರೂ ಸಹ ಆಳದಲ್ಲಿ ಇದು ಮಾನವೀಯ ಅಂಶಗಳನ್ನು ಪ್ರತಿಪಾದಿಸುವ ಕತೆಯನ್ನು ಹೊಂದಿದೆಯಂತೆ. ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆರ್​ಬಿಐನಿಂದ ಹೊಸ ಇ-ಮ್ಯಾಂಡೇಟ್ ಫ್ರೇಮ್​ವರ್ಕ್; 15,000 ರೂವರೆಗಿನ ರಿಕರಿಂಗ್ ಪೇಮೆಂಟ್ಸ್​ಗೆ ಒಟಿಪಿ ಬೇಕಿಲ್ಲ – Kannada News | RBI updates e mandate norms: No OTP needed for recurring payments up to Rs 15,000

ನವದೆಹಲಿ, ಏಪ್ರಿಲ್ 22: ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ (ಏಪ್ರಿಲ್ 21) ಹೊಸ ಡಿಜಿಟಲ್ ಪಾವತಿ ಚೌಕಟ್ಟನ್ನು ಪ್ರಕಟಿಸಿದ್ದು, ಮರುಕಳಿಸುವ ಪಾವತಿಗಳ (Recurring Payments) ಮಿತಿಯನ್ನು ಹೆಚ್ಚಿಸಿದೆ. ಇನ್ನು ಮುಂದೆ 15,000 ರೂವರೆಗಿನ ಆಟೋ-ಡೆಬಿಟ್ ಅಥವಾ ಮರುಕಳಿಸುವ ಪಾವತಿಗಳಿಗೆ ಪ್ರತಿ ಬಾರಿ ಒಟಿಪಿ (OTP) ನಮೂದಿಸುವ ಅಗತ್ಯವಿರುವುದಿಲ್ಲ. ಓಟಿಟಿ ಸಬ್​ಸ್ಕ್ರಿಪ್ಷನ್, ಯುಟಿಲಿಟಿ ಬಿಲ್, ಇಎಂಐ (EMI) ಪಾವತಿಗಳಿಗೆ ಇದು ಅನ್ವಯಿಸುತ್ತದೆ. 15,000 ರೂ ಮೇಲ್ಪಟ್ಟ ರೆಕರಿಂಗ್

ವಿಮಾ ಪ್ರೀಮಿಯಂ (Insurance), ಮ್ಯೂಚುವಲ್ ಫಂಡ್ ಹೂಡಿಕೆ ಮತ್ತು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳಿಗೆ ಈ ಮಿತಿಯನ್ನು ₹1 ಲಕ್ಷಕ್ಕೆ ಏರಿಸಲಾಗಿದೆ. ಅಂದರೆ 1 ಲಕ್ಷ ರೂವರೆಗಿನ ಇಂತಹ ಪಾವತಿಗಳಿಗೆ ಹೆಚ್ಚುವರಿ ದೃಢೀಕರಣ (AFA) ಬೇಕಿಲ್ಲ.

ನೀವು ಮೊದಲ ಬಾರಿಗೆ ಆಟೋ-ಪೇ ಸೌಲಭ್ಯವನ್ನು ನೋಂದಾಯಿಸುವಾಗ ಮಾತ್ರ ಒಟಿಪಿ ಅಥವಾ ಪಿನ್ ಮೂಲಕ ದೃಢೀಕರಿಸಬೇಕಾಗುತ್ತದೆ. ಆನಂತರದ ಪಾವತಿಗಳು ನಿಗದಿತ ಮಿತಿಯಲ್ಲಿದ್ದರೆ ತಾನಾಗಿಯೇ ನಡೆಯುತ್ತವೆ.

ಇದನ್ನೂ ಓದಿ: ಭಾರತದ ಷೇರು ಮಾರುಕಟ್ಟೆ ಇವತ್ತು ಕುಸಿತ; ಏನಿರಬಹುದು ಕಾರಣಗಳು? ಇಲ್ಲಿದೆ ಡೀಟೇಲ್ಸ್

ಹೊಸ ನಿಯಮವು ಕೇವಲ ಸೌಲಭ್ಯವನ್ನಷ್ಟೇ ಅಲ್ಲದೆ, ಗ್ರಾಹಕರ ಭದ್ರತೆಗೂ ಆದ್ಯತೆ ನೀಡಿದೆ.

ನಿಮ್ಮ ಖಾತೆಯಿಂದ ಹಣ ಕಡಿತವಾಗುವ ಕನಿಷ್ಠ 24 ಗಂಟೆಗಳ ಮೊದಲು ಬ್ಯಾಂಕ್‌ಗಳು ನಿಮಗೆ ನೋಟಿಫಿಕೇಶನ್ (SMS ಅಥವಾ ಇಮೇಲ್) ಕಳುಹಿಸುವುದು ಕಡ್ಡಾಯ. ಇದರಲ್ಲಿ ಹಣ ಪಡೆಯುವವರು ಯಾರು ಮತ್ತು ಎಷ್ಟು ಮೊತ್ತ ಎಂಬ ಮಾಹಿತಿ ಇರುತ್ತದೆ.

ಈ ನೋಟಿಫಿಕೇಶನ್ ಬಂದಾಗ, ಆ ನಿರ್ದಿಷ್ಟ ಪಾವತಿಯನ್ನು ತಡೆಯಲು ಅಥವಾ ಇ-ಮ್ಯಾಂಡೇಟ್ ಅನ್ನು ರದ್ದುಗೊಳಿಸಲು ಗ್ರಾಹಕರಿಗೆ ಸಂಪೂರ್ಣ ಅವಕಾಶವಿರುತ್ತದೆ.

ಇ-ಮ್ಯಾಂಡೇಟ್ ಸೌಲಭ್ಯವನ್ನು ಬಳಸಿಕೊಳ್ಳಲು ಬ್ಯಾಂಕ್‌ಗಳು ಗ್ರಾಹಕರಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ.

ಕಾರ್ಡ್ ಬದಲಾದರೂ ತೊಂದರೆಯಿಲ್ಲ

ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅವಧಿ ಮುಗಿದು ಹೊಸ ಕಾರ್ಡ್ ಬಂದರೂ, ಹಳೆಯ ಇ-ಮ್ಯಾಂಡೇಟ್‌ಗಳನ್ನು ಹೊಸ ಕಾರ್ಡ್‌ಗೆ ವರ್ಗಾಯಿಸಲು ಬ್ಯಾಂಕ್‌ಗಳಿಗೆ ಅನುಮತಿ ನೀಡಲಾಗಿದೆ. ಇದರಿಂದ ನೀವು ಮತ್ತೆ ನೋಂದಣಿ ಮಾಡುವ ಅಗತ್ಯವಿರುವುದಿಲ್ಲ.

ಇದನ್ನೂ ಓದಿ: ಮಾಸಿಕ 20,500 ರೂ ಆದಾಯ ತರಬಲ್ಲ ಪೋಸ್ಟ್ ಆಫೀಸ್​ನ ಎಸ್​ಸಿಎಸ್​ಎಸ್ ಸ್ಕೀಮ್

ಇದರಿಂದ ಏನು ಲಾಭ?

ಸಾಮಾನ್ಯವಾಗಿ ಒಟಿಪಿ ಬರಲು ತಡವಾಗುವುದು ಅಥವಾ ನೆಟ್‌ವರ್ಕ್ ಸಮಸ್ಯೆಯಿಂದ ಪಾವತಿಗಳು ವಿಫಲವಾಗುತ್ತಿದ್ದವು. ಹೊಸ ನಿಯಮದಿಂದಾಗಿ ಇನ್ಶೂರೆನ್ಸ್ ಪಾವತಿ ಅಥವಾ ಎಸ್‌ಐಪಿ (SIP) ಕಂತುಗಳು ಸರಿಯಾದ ಸಮಯಕ್ಕೆ ಪಾವತಿಯಾಗಿ, ದಂಡದಿಂದ ಪಾರಾಗಲು ಗ್ರಾಹಕರಿಗೆ ಅನುಕೂಲವಾಗಲಿದೆ.

ಈ ಬದಲಾವಣೆಗಳು ತಕ್ಷಣದಿಂದಲೇ (ಏಪ್ರಿಲ್ 21, ಮಂಗಳವಾರ) ಜಾರಿಗೆ ಬರಲಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version