ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ಬಿಚ್ಟಿಟ್ಟ ಡಿಹೆಚ್​​ಒ – Kannada News | Bidar and Belagavi Deaths: Alcohol and Heart Attack, Not Heatwave, Confirms DHO

ಬೀದರ್​​/ಬೆಳಗಾವಿ, ಏಪ್ರಿಲ್​​ 22: ಬೀದರ್ ಜಿಲ್ಲೆಯಲ್ಲಿ 20 ವರ್ಷದ ಯುವಕ ಸಮೀರ್‌ನ ಸಾವಿನ ಕುರಿತು ಆರಂಭದಲ್ಲಿ ಬಿಸಿಲಿನ ಧಗೆ ಕಾರಣ ಎಂದು ವರದಿಯಾಗಿತ್ತು. ಅದೇ ರೀತಿ ಬೆಳಗಾವಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ವೆಂಕಟೇಶ್ ಅವರ ಸಾವಿಗೂ ಬಿಸಿಲೇ ಕಾರಣ ಎನ್ನಲಾಗಿತ್ತು. ಆದರೆ, ಈ ಎರಡೂ ಪ್ರಕರಣಗಳ ಬಗ್ಗೆ ಡಿಹೆಚ್‌ಒ ಅವರು ಸ್ಪಷ್ಟನೆ ನೀಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಸಮೀರ್ ಬಿಸಿಲಿನಿಂದ ಮೃತಪಟ್ಟಿಲ್ಲ. ಅವರು ಮದ್ಯ ಸೇವಿಸುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದರು. ಇನ್ನು, ಬೆಳಗಾವಿಯ ವೆಂಕಟೇಶ್ ಅವರು ಕೂಡ ಬಿಸಿಲಿನಿಂದ ನಿಧನರಾಗಿಲ್ಲ. ಅವರಿಗೆ ಹೃದಯಾಘಾತ ಸಂಭವಿಸಿತ್ತು, ಅದರಿಂದಲೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಂಟು ವರ್ಷದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಧನುಶ್ – Kannada News | Dhanush talks about Vada Chennai 2 said it will sooner than expected

ಧನುಶ್ (Dhanush), ತಮಿಳು ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ಮಾತ್ರವಲ್ಲ, ತನ್ನ ವಾರಗೆಯ ಇತರೆ ನಟರಗಿಂತಲೂ ಭಿನ್ನ ರೀತಿಯ ಕತೆಯ ಆಯ್ಕೆಯಿಂದ ಮಾಸ್ ಪ್ರೇಕ್ಷಕರನ್ನು ಮಾತ್ರವಲ್ಲದೆ, ಗಂಭೀರ ಸಿನಿಮಾ ಪ್ರೇಮಿಗಳ ಫೇವರೇಟ್ ಸಹ ಆಗಿದ್ದಾರೆ. ಅವರ ನಟನೆಯ ಹಲವು ಸಿನಿಮಾಗಳು, ಕೇವಲ ಮಾಸ್ ಅಂಶಗಳನ್ನು ಮಾತ್ರ ಒಳಗೊಳ್ಳದೆ ಕತೆ, ಕ್ರಿಯಾತ್ಮಕತೆ ಹೊಂದಿರುವ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಅವುಗಳಲ್ಲಿ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ಅವುಗಳಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಸಿನಿಮಾ ಎಂದರೆ ‘ವಡಾ ಚೆನ್ನೈ’. ಇದೀಗ ಈ ಸಿನಿಮಾದ ಎರಡನೇ ಭಾಗದ ಬಗ್ಗೆ ಸ್ವತಃ ಧನುಶ್ ಮಾತನಾಡಿದ್ದಾರೆ.

ಧನುಶ್ ಅವರ ಯಾವುದಾದರೂ ಸಿನಿಮಾದ ಸೀಕ್ವೆಲ್​​ಗೆ ಭಾರಿ ಬೇಡಿಕೆ ಇದೆಯೆಂದರೆ ಅದು ‘ವಡಾ ಚೆನ್ನೈ’ಗೆ. ವೆಟ್ರಿಮಾರನ್ ನಿರ್ದೇಶಿಸಿದ್ದ ಈ ಸಿನಿಮಾ ನಿಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕತೆ ಒಳಗೊಂಡಿತ್ತು. ಸ್ಲಂ ಯುವಕನೊಬ್ಬ, ತನ್ನ ಮೆಚ್ಚಿನ ವ್ಯಕ್ತಿಯ ಕೊಂದ ಅವನ ಗೆಳೆಯರ ಮೇಲೆ ಸೇಡು ತೀರಿಸಿಕೊಳ್ಳುವ ಕತೆಯನ್ನು ಒಳಗೊಂಡಿತ್ತು ‘ವಡ ಚೆನ್ನೈ’. ಈ ಸಿನಿಮಾದ ಸೀಕ್ವೆಲ್​​ಗಾಗಿ ಹಲವು ವರ್ಷಗಳಿಂದಲೂ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ ಧನುಶ್.

ಇದನ್ನೂ ಓದಿ:ಗಾಸಿಪ್​​ಗಳ ನಡುವೆ ಒಟ್ಟಿಗೆ ನಟಿಸಲಿರುವ ಧನುಶ್-ಮೃಣಾಲ್ ಠಾಕೂರ್

ಇದೀಗ ‘ಕಾರಾ’ ಹೆಸರಿನ ಸಿನಿಮಾನಲ್ಲಿ ನಟಿಸಿರುವ ಧನುಶ್, ಆ ಸಿನಿಮಾದ ಪ್ರಚಾರದ ವೇಳೆ ಮಾತನಾಡಿ, ‘ವಡಾ ಚೆನ್ನೈ 2 ಖಂಡಿತವಾಗಿಯೂ ಬರಲಿದೆ. ಇದು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಬೇಗನೆ ಮತ್ತು ಭರ್ಜರಿಯಾಗಿಯೇ ಬರುತ್ತದೆ’ ಎಂದಿದ್ದಾರೆ. ‘ಸಿನಿಮಾಕ್ಕೆ ‘ರೈಸ್ ಆಫ್ ಅನ್ಬು’ ಎಂದು ಟ್ಯಾಗ್​ಲೈನ್ ಇಡಲಾಗಿದ್ದು, ಪ್ರೇಕ್ಷಕರು ಅಂದುಕೊಂಡಿರುವುದಕ್ಕಿಂತಲೂ ಬೇಗನೆ ಅದು ತೆರೆಗೆ ಬರಲಿದೆ’ ಎಂದಿದ್ದಾರೆ.

ನಿರ್ದೇಶಕ ವೆಟ್ರಿಮಾರನ್ ಪ್ರಸ್ತುತ ಜೂನಿಯರ್ ಎನ್‌ಟಿಆರ್ ಜೊತೆಗಿನ ಸಿನಿಮಾ ಮತ್ತು ಸೂರ್ಯ ಅಭಿನಯದ ‘ವಾಡಿವಾಸಲ್’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಎಸ್​​ಟಿಆರ್ ಜೊತೆಗೆ ‘ಅರಸನ್’ ಹೆಸರಿನ ಸಿನಿಮಾವನ್ನು ಸಹ ತೆಗೆದಿದ್ದಾರೆ. ಈ ಕಾರಣದಿಂದಾಗಿ ‘ವಡಾ ಚೆನ್ನೈ 2’ ತಡವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಧನುಷ್ ಅವರ ಇತ್ತೀಚಿನ ಮಾತುಗಳು ಚಿತ್ರದ ಕೆಲಸಗಳು ಶೀಘ್ರದಲ್ಲೇ ಆರಂಭವಾಗಲಿವೆ ಎಂಬುದನ್ನು ಸೂಚಿಸಿವೆ.

2018 ರಲ್ಲಿ ತೆರೆಕಂಡಿದ್ದ ‘ವಡಾ ಚೆನ್ನೈ’ ಮೊದಲ ಭಾಗವು ಸಿನಿಮಾ ವಿಮರ್ಶಕರ ಮನಸ್ಸು ಗೆದ್ದಿದ್ದು ಮಾತ್ರವಲ್ಲದೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಉತ್ತರ ಚೆನ್ನೈನ ಭೂಗತ ಲೋಕದ ಕಥೆಯನ್ನು ಹೊಂದಿದ್ದ ಈ ಸಿನಿಮಾದ ಎರಡನೇ ಭಾಗಕ್ಕಾಗಿ ಅಭಿಮಾನಿಗಳು ಕಳೆದ ಆರು ವರ್ಷಗಳಿಂದ ಕಾಯುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿರುಗಾಳಿ ಮಳೆಗೆ ಬಳ್ಳಾರಿ ಹೊಸ ಬಸ್​ ನಿಲ್ದಾಣದ ಬಳಿ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ – Kannada News | Massive Tree Falls During Storm in Ballari, Damaging Over 15 Bikes at KSRTC Stand

ಬಳ್ಳಾರಿ, ಏಪ್ರಿಲ್​​ 22: ಬಿರುಗಾಳಿ ಮಳೆಗೆ ಬೃಹತ್ ಮರ ಬಿದ್ದು 15ಕ್ಕೂ ಹೆಚ್ಚು ಬೈಕ್​ಗಳು ಜಖಂ ಆಗಿರುವ ಘಟನೆ ಬಳ್ಳಾರಿ ನಗರದ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಬಸ್ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಬೃಹತ್ ಮರ ಬಿದ್ದ ಪರಿಣಾಮ ಬೈಕ್‌ಗಳು ಜಖಂಗೊಂಡಿವೆ. ನಮ್ಮ ವಾಹನಗಳು ಸೇಫ್​ ಆಗಿರಲಿ ಅಂತಾ ಪಾರ್ಕಿಂಗ್ ಮಾಡಿದ್ದೆವು. ಆದರೆ ಮರ ಬಿದ್ದು ಬೈಕ್​ಗಳಿಗೆ ಹಾನಿ ಆಗಿದೆ. ಹೀಗಾಗಿ ಪರಿಹಾರ ಕೊಡಿ ಎಂದು ವಾಹನ ಪಾರ್ಕಿಂಗ್ ಸ್ಥಳದ ಮ್ಯಾನೇಜರ್​​ನ ಬೈಕ್​​ಗಳ ಮಾಲೀಕರು ಆಗ್ರಹಿಸಿದ ಪ್ರಸಂಗವೂ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಗೂಳಿ ಮತ್ತು ನಾಯಿ ನಡುವೆ ಕಾದಾಟ, ಸಮೀಪ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರಿಗೆ ಗಾಯ – Kannada News | Animal Clash in Greater Noida Leaves Two Women Injured

ನೋಯ್ಡಾ, ಏಪ್ರಿಲ್ 22: ಗೂಳಿ ಮತ್ತು ನಾಯಿ ನಡುವಿನ ಕಾದಾಟದಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ರಸ್ತೆಯಲ್ಲಿ ಗೂಳಿ ಮತ್ತು ಬೀದಿ ನಾಯಿ ನಡುವೆ ಕಾದಾಟ ನಡೆದಿತ್ತು, ಏಕಾಏಕಿ ಎದುರು ಜನರು ಇದ್ದಾರೆಂದು ನೋಡದೆ ಗೂಳಿ ಹಾರಿದೆ ಅದರ ಹಿಂದೆ ನಾಯಿಯು ಕೂಡ ಮಹಿಳೆಯರ ಮೇಲೆ ಹಾರಿದ ಪರಿಣಾಮ ಇಬ್ಬರೂ ನೆಲಕ್ಕೆ ಬಿದ್ದಿದ್ದಾರೆ.

Source link

Video: ನಂಗೆ ಮನೆಗೆ ಹೋಗೆಬೇಕು ಅಷ್ಟೇ; ಕ್ಲಾಸ್ ರೂಮ್ ಕಿಟಕಿ ಹತ್ತಿ ರಂಪಾಟ ಮಾಡಿದ ಪುಟಾಣಿ – Kannada News | A little boy tried to climb out of the classroom window and escape.

ಈ ಮಕ್ಕಳನ್ನು (children) ಬೆಳಗ್ಗೆ ಎಬ್ಬಿಸಿ ರೆಡಿ ಮಾಡಿ ಶಾಲೆಗೆ ಕಳುಹಿಸುವುದು ಅಮ್ಮಂದಿರ ಕಷ್ಟದ ಕೆಲಸ. ಈ ಪುಟಾಣಿಗಳು ಶಾಲೆಗೆ ಹೋಗಲ್ಲ ಎಂದು ಬೆಳ್ಳಗೆ ಅಳುತ್ತಾ ಕುಳಿತುಕೊಂಡರೆ ಹೆತ್ತವರ ಕಥೆ ಮುಗಿದೇ ಹೋಯ್ತು. ಅಮ್ಮಂದಿರಂತೂ ಸಮಾಧಾನ ಪಡಿಸಿ ಕಳಿಸುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಇನ್ನು ಹೆತ್ತವರು ಶಾಲೆಗೆ ಬಿಟ್ಟು ಬರಲು ಹೋದಾಗ ರಚ್ಚೆ ಹಿಡಿದು ಅಳುವುದಿದೆ. ಈ ಪುಟಾಣಿಯದ್ದು ಅದೇ ಕಥೆ. ಪುಟ್ಟ ಬಾಲಕನು ಅಮ್ಮನನ್ನು ಕಂಡು ಅಳುತ್ತಿದ್ದು, ಕ್ಲಾಸ್‌ ರೂಮ್‌ ಬಾಗಿಲು ಮುಚ್ಚಿದ್ದಂತಿದೆ. ಹೀಗಾಗಿ ಕ್ಲಾಸ್ ರೂಮ್ ಕಿಟಕಿ ಹತ್ತಿ ಹೊರ ಹೋಗಲು ಪ್ರಯತ್ನಿಸಿದ ದೃಶ್ಯ ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯ ನೋಡಿ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

sengteitamarikp ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಶಾಲೆಗೆ ಹೋದ ಪುಟಾಣಿಯೂ ಮನೆಗೆ ಬರುತ್ತೇನೆ ಎಂದು ಅಳುತ್ತಿದೆ. ಇದೇ ವೇಳೆ ಶಾಲಾ ಶಿಕ್ಷಕಿ ತರಗತಿ ಕೋಣೆಯ ಬಾಗಿಲು ಮುಚ್ಚಿದ್ದಂತಿದೆ. ಹೀಗಾಗಿ ಪುಟ್ಟ ಹುಡುಗ ಕ್ಲಾಸ್‌ ರೂಮ್‌ ಕಿಟಕಿ ಹತ್ತಿ ಹೊರ ಬರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟಾಣಿ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದಂತೆ ನಾಚಿ ನೀರಾದ ಪುಟ್ಟ ಹುಡುಗ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಬಾಲ್ಯದಲ್ಲಿ ನಾವು ಹೀಗೆಯೇ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ. ಇನ್ನೊಬ್ಬರು, ನಾನು ಹೀಗೆಯೇ ಇದ್ದದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಪುಟಾಣಿ ಜೈಲಿನಲ್ಲಿ ಇದ್ದಂತೆ ಅನಿಸುತ್ತಿರಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC After AI: SSLC ನಂತರ AI ಲೋಕಕ್ಕೆ ಎಂಟ್ರಿ ಕೊಡಬೇಕೇ? ಟಾಪ್ ಕೋರ್ಸ್‌ಗಳ ವಿವರ ಇಲ್ಲಿವೆ – Kannada News | SSLC After AI: Top Career Paths and Courses in Karnataka for Future Tech Pros

SSLC ನಂತರ ಕೃತಕ ಬುದ್ಧಿಮತ್ತೆImage Credit source: gemini ai

ಹತ್ತನೇ ತರಗತಿಯ ಫಲಿತಾಂಶದ ನಂತರ ಮುಂದೇನು ಎಂಬ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳನ್ನು ಕಾಡುತ್ತಿರುತ್ತದೆ. ಸಾಂಪ್ರದಾಯಿಕ ಕೋರ್ಸ್‌ಗಳಿಗಿಂತ ಭಿನ್ನವಾಗಿ, ಭವಿಷ್ಯದ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ (Artificial Intelligence – AI) ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಈಗ SSLC ನಂತರವೇ ಮುಕ್ತ ಅವಕಾಶಗಳಿವೆ. ತಂತ್ರಜ್ಞಾನ ಬೆಳೆದಂತೆಲ್ಲಾ AI ಇಂಜಿನಿಯರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಹತ್ತನೇ ತರಗತಿಯ ನಂತರ ನೀವು ಆಯ್ದುಕೊಳ್ಳಬಹುದಾದ ಪ್ರಮುಖ ದಾರಿಗಳು ಇಲ್ಲಿವೆ.

ಡಿಪ್ಲೊಮಾ ಇನ್ AI ಆ್ಯಂಡ್ ಮೆಷಿನ್ ಲರ್ನಿಂಗ್ (3 ವರ್ಷಗಳು):

ನೀವು ನೇರವಾಗಿ ಇಂಜಿನಿಯರಿಂಗ್ ಲೋಕಕ್ಕೆ ಪ್ರವೇಶಿಸಲು ಬಯಸಿದರೆ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಲಭ್ಯವಿರುವ ಈ ಡಿಪ್ಲೊಮಾ ಕೋರ್ಸ್ ಅತ್ಯುತ್ತಮ. ಇಲ್ಲಿ ಪ್ರೋಗ್ರಾಮಿಂಗ್, ಡೇಟಾ ಸೈನ್ಸ್ ಮತ್ತು ರೋಬೋಟಿಕ್ಸ್‌ನ ಮೂಲಭೂತ ಅಂಶಗಳನ್ನು ಕಲಿಸಲಾಗುತ್ತದೆ. ಈ ಕೋರ್ಸ್ ಮುಗಿಸಿದ ನಂತರ ನೇರವಾಗಿ ಕೆಲಸಕ್ಕೆ ಸೇರಬಹುದು ಅಥವಾ ಇಂಜಿನಿಯರಿಂಗ್‌ನ ಎರಡನೇ ವರ್ಷಕ್ಕೆ (Lateral Entry) ಪ್ರವೇಶ ಪಡೆಯಬಹುದು.

ಹೊಸ ತಲೆಮಾರಿನ ಐಟಿಐ (ITI) ಕೋರ್ಸ್‌ಗಳು:

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಸರ್ಕಾರಿ ಐಟಿಐಗಳಲ್ಲಿ ಕೈಗಾರಿಕೆ 4.0 (Industry 4.0) ಅಡಿಯಲ್ಲಿ ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ.

  • IoT and AI ಟೆಕ್ನಿಷಿಯನ್: ಸ್ಮಾರ್ಟ್ ಸಾಧನಗಳು ಮತ್ತು ಕೃತಕ ಬುದ್ಧಿಮತ್ತೆಯ ತಾಂತ್ರಿಕ ನಿರ್ವಹಣೆಯ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಇದು ಅಲ್ಪಾವಧಿಯಲ್ಲಿ ಉದ್ಯೋಗ ಪಡೆಯಲು ಸಹಕಾರಿ.

ಪೈಥಾನ್ ಮತ್ತು ಡೇಟಾ ಸೈನ್ಸ್ ಸರ್ಟಿಫಿಕೇಶನ್:

AI ಕಲಿಯಲು ಪೈಥಾನ್ (Python) ಪ್ರೋಗ್ರಾಮಿಂಗ್ ಭಾಷೆ ಅತಿ ಮುಖ್ಯ. SSLC ರಜೆಯ ಸಮಯದಲ್ಲಿ ಅಥವಾ ಪಿಯುಸಿ ಜೊತೆಜೊತೆಗೇ ಆನ್‌ಲೈನ್ ವೇದಿಕೆಗಳ ಮೂಲಕ ನೀವು ಪ್ರಮಾಣಪತ್ರ ಪಡೆಯಬಹುದು. ಗೂಗಲ್ ಮತ್ತು ಮೈಕ್ರೋಸಾಫ್ಟ್ ಇವು ವಿದ್ಯಾರ್ಥಿಗಳಿಗಾಗಿ ‘AI for Beginners’ ಎಂಬ ಉಚಿತ ಕೋರ್ಸ್‌ಗಳನ್ನು ನೀಡುತ್ತವೆ.

ಇದನ್ನೂ ಓದಿ: ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಯಾವಾಗ ಬಿಡುಗಡೆ? ನಾಳೆ ಅಥವಾ ನಾಡಿದ್ದು?

ಭವಿಷ್ಯದ ಬಿಗ್ ಪ್ಲಾನ್; ಪಿಯುಸಿ ಟು ಬಿ.ಟೆಕ್ (B.Tech):

ನೀವು ಈ ಕ್ಷೇತ್ರದಲ್ಲಿ ದೊಡ್ಡ ಸಂಶೋಧಕ ಅಥವಾ ಸಾಫ್ಟ್‌ವೇರ್ ಆರ್ಕಿಟೆಕ್ಟ್ ಆಗಬೇಕೆಂದಿದ್ದರೆ:

  • ಹಂತ 1: ಪಿಯುಸಿಯಲ್ಲಿ ಪಿಸಿಎಂ (Physics, Chemistry, Maths) ವಿಭಾಗವನ್ನು ಆರಿಸಿ.
  • ಹಂತ 2: ಸಿಇಟಿ ಅಥವಾ ಜೆಇಇ ಪರೀಕ್ಷೆ ಬರೆದು ಬಿ.ಇ/ಬಿ.ಟೆಕ್‌ನಲ್ಲಿ AI & Data Science ಸ್ಪೆಷಲೈಸೇಶನ್ ಆಯ್ದುಕೊಳ್ಳಿ.

AI ವೃತ್ತಿಜೀವನಕ್ಕೆ ಇಂದೇ ತಯಾರಿ ನಡೆಸಿ:

  • ಗಣಿತದ ಮೇಲೆ ಹಿಡಿತವಿರಲಿ: AI ಎಂದರೆ ಅಂಕಿ-ಅಂಶಗಳ ಆಟ, ಹಾಗಾಗಿ ಗಣಿತವನ್ನು ಇಷ್ಟಪಟ್ಟು ಕಲಿಯಿರಿ.
  • ಕೋಡಿಂಗ್ ಅಭ್ಯಾಸ: ಸಣ್ಣ ವಯಸ್ಸಿನಲ್ಲೇ ಕೋಡಿಂಗ್ ಕಲಿಯುವುದು ನಿಮ್ಮ ಲಾಜಿಕ್ ಆಲೋಚನೆಯನ್ನು ಸುಧಾರಿಸುತ್ತದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿಗಿಂತ ಕೌಶಲ್ಯಕ್ಕೆ ಹೆಚ್ಚಿನ ಬೆಲೆಯಿದೆ. ನೀವು ತಂತ್ರಜ್ಞಾನ ಪ್ರೇಮಿಯಾಗಿದ್ದರೆ, SSLC ನಂತರ AI ಹಾದಿ ಹಿಡಿಯುವುದು ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪಾಯಕಾರಿ ಪಿಚ್ ಎಂದು ಪರಿಗಣಿಸಿ ಪಂದ್ಯವನ್ನೇ ರದ್ದು ಮಾಡಿದ ಅಂಪೈರ್ – Kannada News | Dangerous Pitch Forces West Indies Championship Match Cancellation After Player Injury

ವೆಸ್ಟ್ ಇಂಡೀಸ್‌ನ ಸರ್ ವಿವ್ ರಿಚರ್ಡ್ಸ್ ಮೈದಾನದಲ್ಲಿ ನಡೆಯುತ್ತಿದ್ದ ವೆಸ್ಟ್​ ಇಂಡೀಸ್ ಚಾಂಪಿಯನ್​ಶಿಪ್ ಪಂದ್ಯವನ್ನು ಅಪಾಯಕಾರಿ ಪಿಚ್ ಕಾರಣದಿಂದ ರದ್ದು ಮಾಡಲಾಗಿದೆ. ವೆಸ್ಟ್ ಇಂಡೀಸ್‌ನ ಹಿರಿಯ ವೇಗಿ ಜೇಡನ್ ಸೀಲ್ಸ್ ಎಸೆದ ಒಂದು ಬಾಲ್ ಪಿಚ್​​​ ಮೇಲೆ ಬಿದ್ದು ಭಾರೀ ಮಟ್ಟದಲ್ಲಿ ಬೌನ್ಸ್ ಆಗಿ ಬ್ಯಾಟ್ಸಮನ್ ಹೆಲ್ಮೆಟ್​​ಗೆ ಹೊಡೆದಿದೆ. ಇದಾದ ಬಳಿಕ ಅಂಪೈರ್​​ಗಳು ಪಂದ್ಯವನ್ನು ನಿಲ್ಲಿಸಲು ನಿರ್ಧರಿಸಿದರು. ಇದು ಚರ್ಚೆಗೆ ಗ್ರಾಸವಾಗಿದೆ.
ಲೀವರ್ಡ್ ಐಲ್ಯಾಂಡ್ ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೋ ತಂಡದ ನಡುವೆ ಪಂದ್ಯ ನಡೆಯುತ್ತಿತ್ತು.

ಲೀವರ್ಡ್ ಐಲ್ಯಾಂಡ್ ಆಟಗಾರ ಜೆರೆಮಿಯಾ ಲೂಯಿಸ್‌ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಟ್ರಿನಿಡಾಡ್ ಮತ್ತು ಟೊಬಾಗೋ ತಂಡದ ಬೌಲರ್ ಸೀಲ್ಸ್ ಮಾಡಿದ ಎಸೆತ ಅನಿರೀಕ್ಷಿತ ಬೌನ್ಸ್ ಉಂಟುಮಾಡಿತು. ಇದು ಬ್ಯಾಟರ್ ಜೆರೆಮಿಯಾ ಲೂಯಿಸ್‌ ಹೆಲ್ಮೆಟ್‌ಗೆ ಬಡಿಯಿತು. ಜೆರೆಮಿಯಾ ಲೂಯಿಸ್‌ ತಕ್ಷಣವೇ ನೆಲಕ್ಕೆ ಬಿದ್ದರು. ಈ ಬಾಲ್ ಹೆಲ್ಮೆಟ್​​ ಅನ್ನು ಹಾನಿ ಮಾಡಿತ್ತು. ಈ ವೇಳೆ ಜೆರೆಮಿಯಾ ಲೂಯಿಸ್‌ ಹತಾಶೆಯಿಂದ ಹೆಲ್ಮೆಟ್ ಅನ್ನು ಒದ್ದು ಮೈದಾನದಿಂದ ಹೊರನಡೆದರು. ಲೂಯಿಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಸ್ಥಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊದಲು ಬ್ಯಾಟ್ ಮಾಡಿದ್ದ ಲೀವಾರ್ಡ್ 131 ರನ್ ಗಳಿಸಿ ಆಲ್​​ಔಟ್ ಆಯಿತು. ನಂತರ ಟ್ರಿನಿಡಾಡ್ ಮತ್ತು ಟೊಬಾಗೋ ತಂಡ 175 ರನ್​​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಮೂರನೇ ದಿನದಾಟದಲ್ಲಿ ಬ್ಯಾಟಿಂಗ್​ಗೆ ಇಳಿದ ಲೀವರ್ಡ್ ಐಲ್ಯಾಂಡ್ 140 ರನ್​​ಗೆ 7 ವಿಕೆಟ್ ಕಳೆದುಕೊಂಡಿತ್ತು. ಈ ಏಳೂ ವಿಕೆಟ್‌ಗಳನ್ನು ಸೀಲ್ಸ್ ಕಬಳಿಸಿದ್ದರು ಅನ್ನೋದು ವಿಶೇಷ.

ಪಂದ್ಯದ ನಂತರ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ. ‘ಸರ್ ವಿವ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಅಪಾಯಕಾರಿ ಪಿಚ್ ಪರಿಸ್ಥಿತಿಯಿಂದಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಲೀವರ್ಡ್ ಐಲ್ಯಾಂಡ್ ಮತ್ತು ಟ್ರಿನಿಡಾಡ್- ಟೊಬಾಗೊ ದ್ವಿಪಕ್ಷೀಯ ಸರಣಿಯ ಈ ಪಂದ್ಯವನ್ನು ಡ್ರಾ ಎಂದು ರದ್ದುಗೊಳಿಸಲಾಗಿದೆ’ ಎಂದು ಹೇಳಿದೆ.

ಮೈದಾನದಲ್ಲಿರುವ ಅಂಪೈರ್‌ಗಳು ಆಟ ಮುಂದುವರಿಯುವುದು ಅಪಾಯಕಾರಿ ಎಂದು ನಿರ್ಧರಿಸಿದ್ದರಿಂದ ಪಂದ್ಯ ರದ್ದುಗೊಳಿಸಲಾಗಿದೆ. ಚಾಂಪಿಯನ್ ಶಿಪ್ ಫೈನಲ್ ಮೇ 17-20ರವರೆಗೆ ನಡೆಯಲಿದೆ. ಅಲ್ಲಿಯವರೆಗೆ ಇಲ್ಲಿ ಯಾವುದೇ ಪಂದ್ಯ ನಡೆಸಬಾರದು ಎಂದು ನಿರ್ಧರಿಸಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೃತ್ಯು ಮಡಿಲಲ್ಲಿ ಒಂದು ಗಂಟೆ! ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ ‘ಫ್ಲೈ 91’ ವಿಮಾನ – Kannada News | Fly91 Hubballi Incident: Technical Glitch Weather Delays Landing, Passengers Face Fear

ಹುಬ್ಬಳ್ಳಿ, ಏ.22: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ‘ಫ್ಲೈ 91’ ಸಂಸ್ಥೆಯ ವಿಮಾನವು ಮತ್ತೊಮ್ಮೆ ಲ್ಯಾಂಡಿಂಗ್ ಸಮಸ್ಯೆಗೆ ಸಿಲುಕಿದ್ದು, ಪ್ರಯಾಣಿಕರಲ್ಲಿ ಭೀತಿ ಮೂಡಿಸಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ವಿಮಾನವು ನಿಗದಿತ ಸಮಯಕ್ಕೆ ಲ್ಯಾಂಡ್ ಆಗಲಾಗದೆ ಸುಮಾರು ಒಂದು ಗಂಟೆ ಕಾಲ ಆಗಸದಲ್ಲೇ ಸುತ್ತಾಡಿದ ಘಟನೆ ನಿನ್ನೆ ನಡೆದಿದೆ. ನಿನ್ನೆ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ IC3412 AT-76 ಸಂಖ್ಯೆಯ ಫ್ಲೈ 91 ವಿಮಾನವು ರಾತ್ರಿ 8:15ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಲ್ಯಾಂಡಿಂಗ್ ವೇಳೆ ತಾಂತ್ರಿಕ ತೊಂದರೆ ಅಥವಾ ಹವಾಮಾನ ವೈಪರೀತ್ಯದ ಕಾರಣದಿಂದ ವಿಮಾನಕ್ಕೆ ಕೆಳಗಿಳಿಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನವು ಹುಬ್ಬಳ್ಳಿ ಮತ್ತು ದಾಂಡೇಲಿ ಸುತ್ತಮುತ್ತಲಿನ ಪ್ರದೇಶಗಳ ಆಗಸದಲ್ಲಿ ಒಂದು ಗಂಟೆ ಕಾಲ ಹಾರಾಟ ನಡೆಸಿದೆ. ಅಂತಿಮವಾಗಿ ರಾತ್ರಿ 9:15ಕ್ಕೆ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.ಫ್ಲೈ 91 ಏರ್‌ಲೈನ್ಸ್ ಕಂಪನಿಗೆ ಇದು ಸತತ ಎರಡನೇ ಘಟನೆಯಾಗಿದೆ. ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬಂದಿದ್ದ ಇದೇ ಕಂಪನಿಯ ವಿಮಾನವು 4 ಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿ, ಕೊನೆಗೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿತ್ತು. ಮರುಕಳಿಸುತ್ತಿರುವ ಇಂತಹ ಘಟನೆಗಳಿಂದಾಗಿ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹವಾಮಾನ ವೈಪರೀತ್ಯದ ಕಾರಣವನ್ನು ಅಧಿಕಾರಿಗಳು ನೀಡುತ್ತಿದ್ದರೂ, “ಕೇವಲ ಫ್ಲೈ 91 ವಿಮಾನಕ್ಕೆ ಮಾತ್ರ ಯಾಕೆ ಪದೇ ಪದೇ ತೊಂದರೆಯಾಗುತ್ತಿದೆ?” ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಉಡುಪಿ ಜಿಲ್ಲೆಯಲ್ಲಿ ಜೀವ ಜಲಕ್ಕೆ ಹಾಹಾಕಾರ: ಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ! – Kannada News | Drinking Water Crisis in Udupi: Villagers Risk Boat Journey Daily to Fetch Water in Byndoor

ಉಡುಪಿ, ಏಪ್ರಿಲ್ 22: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಅತ್ತಿಕೋಣೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸುಮಾರು 75ಕ್ಕೂ ಹೆಚ್ಚು ಕುಟುಂಬಗಳು ಜೀವಜಲಕ್ಕಾಗಿ ಪರದಾಡುತ್ತಿವೆ. ಇಲ್ಲಿನ ನಿವಾಸಿಗಳು ಪ್ರತಿದಿನ ಸೌಪರ್ಣಿಕಾ ನದಿ ದಾಟಿ ದೋಣಿಯ ಮೂಲಕ ನೀರು ತರುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಈ ನೀರಿನ ಸಮಸ್ಯೆ ಗ್ರಾಮವನ್ನು ಕಾಡುತ್ತಿದೆ. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಲು ವಿಫಲರಾಗಿದ್ದಾರೆ. ಟ್ಯಾಂಕ್ ನಿರ್ಮಾಣ, ಬಂಟವಾಡಿಯಲ್ಲಿ ಸಿಹಿನೀರಿನ ಡ್ಯಾಂ ನಿರ್ಮಾಣ ಮತ್ತು ಹೊಳೆ ನೀರು ಶುದ್ಧೀಕರಿಸುವ ಯೋಜನೆಗಳು ಕಾರ್ಯರೂಪಕ್ಕೆ ಬಂದಿದ್ದರೂ, ಅಸಮರ್ಪಕ ನಿರ್ವಹಣೆಯಿಂದಾಗಿ ಸಂಪೂರ್ಣವಾಗಿ ವಿಫಲವಾಗಿವೆ. ಡ್ಯಾಂನಲ್ಲಿ ಉಪ್ಪುನೀರು ಬೆರೆತು, ಶುದ್ಧೀಕರಣ ಘಟಕದಿಂದ ಸಮರ್ಪಕ ನೀರು ಪೂರೈಕೆಯಾಗದೆ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ.

ಪ್ರತಿದಿನ ಬೆಳಗ್ಗೆ ಮಹಿಳೆಯರು ಅಪಾಯಕಾರಿ ದೋಣಿ ಪ್ರಯಾಣದ ಮೂಲಕ ನೀರು ತರಬೇಕಾದ ಪರಿಸ್ಥಿತಿ ಇದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನ್ನ ಬಳಿ ಡಿಎಲ್ ಇದೆಯಪ್ಪ’: ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್! – Kannada News | Home Minister G Parameshwar drives friends new car in Sadashiva Nagar

ಬೆಂಗಳೂರು, ಏಪ್ರಿಲ್ 22: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇತ್ತೀಚೆಗೆ ತಮ್ಮ ಸ್ನೇಹಿತನ ಹೊಸ ಕಾರನ್ನು ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಸದಾಶಿವ ನಗರದಲ್ಲಿ ಸ್ನೇಹಿತರೊಬ್ಬರು ಹೊಸ ಕಾರನ್ನು ಸಚಿವರಿಗೆ ತೋರಿಸಲು ತಂದಿದ್ದರು. ಈ ಸಂದರ್ಭದಲ್ಲಿ ಡಾ. ಪರಮೇಶ್ವರ್ ಅವರು ಕಾರಿನ ಚಾಲಕನ ಸೀಟಿನಲ್ಲಿ ಕುಳಿತು, ನಗರದಲ್ಲಿ ಒಂದು ರೌಂಡ್ ಓಡಿಸಿದ್ದಾರೆ. ಕಾರು ಚಲಾಯಿಸುವಾಗ ಅವರು ತಮಾಷೆಯಾಗಿ ನನ್ನ ಬಳಿ ಡಿಎಲ್ ಇದೆಯಪ್ಪ ಎಂದು ಹೇಳಿ ನಗೆ ಚಟಾಕಿ ಹಾರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version