ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಬಲಿ?: ಮರ್ಮಾಂಗದ ಭಾದೆ ತಾಳಲಾರದೆ ಪ್ರಾಣಬಿಟ್ಟ 45 ವರ್ಷದ ವ್ಯಕ್ತಿ – Kannada News | Victoria Hospital Negligence: Bengaluru Man Dies After Unstitched Wound, Family Alleges

ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಬಲಿ?Image Credit source: Tv9 Kannada

ಬೆಂಗಳೂರು, ಏಪ್ರಿಲ್​​ 22: ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಎಂತಹ ಸ್ಥಿತಿಯಲ್ಲೂ ರೋಗಿಯನ್ನು ಪ್ರಾಣಾಪಾಯದಿಂದ ಪಾರುಮಾಡುವ ಕಾರಣ ದೇವರಿಗೆ ಅವರನ್ನು ಹೋಲಿಸಲಾಗುತ್ತದೆ. ಆದರೆ ಕೆಲವೊಮ್ಮೆ ಇದೇ ವೈದ್ಯರು ರೋಗಿಗಳ ಪಾಲಿಗೆ ಯಮನಾದ ಉದಾಹರಣೆಗಳೂ ಇವೆ. ಇಂತಹುದ್ದೇ ಆರೋಪವೊಂದು ಈಗ ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆ (ಶಾಂತವೇರಿ ಗೋಪಾಲಗೌಡ ಆಸ್ಪತ್ರೆ) ವೈದ್ಯರ ವಿರುದ್ಧ ಕೇಳಿಬಂದಿದೆ. ಡಾಕ್ಟರ್​​ ನಿರ್ಲಕ್ಷ್ಯಕ್ಕೆ ಮರ್ಮಾಂಗದ ಭಾದೆ ತಾಳಲಾರದೆ ವ್ಯಕ್ತಿಯೋರ್ವ ನರಳಿ ನರಳಿ ಪ್ರಾಣಬಿಟ್ಟಿದ್ದಾನೆ ಎಂದು ದೂರಲಾಗಿದ್ದು, ಇದು ಇಡೀ ವೈದ್ಯ ಲೋಕವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ ಎಂಬ ಮಾತುಗಳು ಕೇಳಿಬಂದಿವೆ.

ಹೌದು, ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದ 45 ವರ್ಷದ ಶಾ ನವಾಜ್ ಎಂಬ ವ್ಯಕ್ತಿ ಮರ್ಮಾಂಗದಲ್ಲಿ ಗಡ್ಡೆ ಬೆಳೆದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆ ಎಮರ್ಜೆನ್ಸಿ ವಿಭಾಗಕ್ಕೆ ಅವರನ್ನು ಎಡ್ಮಿಟ್​​ ಮಾಡಿಕೊಳ್ಳಲಾಗಿತ್ತು. ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಹೇಳಿದ್ದು, ಬಳಿಕ ಚಿಕಿತ್ಸೆಗಾಗಿ ಆತನ ಮರ್ಮಾಂಗವನ್ನು ಆಸ್ಪತ್ರೆ ಸಿಬ್ಬಂದಿ ಕೊಯ್ದಿದ್ದರು. ಅದಾದ ಕೆಲ ದಿನಗಳ ಬಳಿಕ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ತಿಳಿಸಿದ್ದರು. ಆದರೆ ಗಾಯ ಇನ್ನೂ ಆರಿಲ್ಲ ಎಂದು ಈ ವೇಳೆ ಸರ್ಜರಿ ವಿಭಾಗ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಆಪರೇಷನ್ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ಸಮನ್ವಯತೆ ಕೊರತೆ ಕಾರಣ ರೋಗಿ ಗಂಭೀರ ಸ್ಥಿತಿಯಲ್ಲಿ ಇರುವಾಗಲೇ ಡಿಸ್ಚಾರ್ಜ್ ಆಗುವಂತೆ ಒತ್ತಡ ಹೇರಲಾಗಿದೆ. ಕೊನೆಗೆ ಕೊಯ್ದಿದ್ದ ಮರ್ಮಾಂಗಕ್ಕೆ ಹೊಲಿಗೆ ಕೂಡ ಮಾಡದೇ ಸಿಬ್ಬಂದಿ ಕಳುಹಿಸಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:  ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆಯ ವಿಚಾರಣೆ ವೇಳೆ ಬಯಲಾಯ್ತು ಸ್ಫೋಟಕ ವಿಚಾರ! ಅಸಲಿಗೆ ಆಗಿದ್ದೇನು ಗೊತ್ತೇ?

ಪತಿ ಜೊತೆ ಫುಟ್​​ಪಾತ್​​ನಲ್ಲೇ 3 ದಿನ ಕಳೆದ ಪತ್ನಿ

ಎಷ್ಟೇ ಅಂಗಲಾಚಿದರೂ ಆಸ್ಪತ್ರೆ ಸಿಬ್ಬಂದಿ ಮತ್ತೆ ಅಡ್ಮಿಟ್ ಮಾಡಿಕೊಳ್ಳದ ಕಾರಣ ಕೊನೆಗೆ 3 ದಿನ ಫುಟ್​​ಪಾತ್​​ನಲ್ಲೇ ರೋಗಿ ಪತಿಯನ್ನು ಮಡದಿ ಇಟ್ಟುಕೊಂಡಿದ್ದರು. ಮರ್ಮಾಂಗದಿಂದ ರಕ್ತ ಸುರಿಯುತ್ತಲೇ ಇದ್ದರೂ ಹೊಲಿಗೆ ಕೂಡ ಮಾಡದೇ ನಿರ್ಲಕ್ಷ್ಯ ತೋರಿದ ಕಾರಣ ಕೊನೆಗೆ ಮರ್ಮಾಂಗದ ಭಾದೆ ತಾಳಲಾರದೆ ನವಾಜ್ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ನವಾಜ್​​ರನ್ನೇ ನಂಬಿಕೊಂಡಿದ್ದ ಹೆಂಡತಿ ಹಾಗೂ ನಾಲ್ಕು ಮಂದಿ ಮಕ್ಕಳು ಘಟನೆಯಿಂದ ಬೀದಿಗೆ ಬಿದ್ದಿದ್ದು, ಮನೆಗೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು – Kannada News | Anurag Kashyap talks about Elra KaleLithade Kala movie

ಬಾಲಿವುಡ್​ನ ಸ್ಟಾರ್ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap), ಬಾಲಿವುಡ್​ ಇಂದ ದೂರಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ಕೆಲಸ ಮಾಡುವುದಾಗಿ ಅವರು ಈ ಹಿಂದೆಯೇ ಹೇಳಿಕೊಂಡಿದ್ದರು. ಮಾತ್ರವಲ್ಲದೆ ಸ್ಥಳೀಯ ಸಿನಿಮಾಗಳಿಗೆ ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ. ಇದೀಗ ಅನುರಾಗ್ ಕಶ್ಯಪ್ ಅವರು ಕನ್ನಡ ಸಿನಿಮಾ ‘ಎಲ್ರ ಕಾಲೆಳಿತದೆ ಕಾಲ’ಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿನಿಮಾದ ನಿರ್ದೇಶಕ ಸುಜಯ್ ಶಾಸ್ತ್ರಿ, ಅನುರಾಗ್ ಕಶ್ಯಪ್ ಮನೆಗೆ ಹೋಗಿದ್ದು, ತಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅನುರಾಗ್ ಸಹ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Hanuman Temples: ಸ್ತ್ರೀ ರೂಪದ ಹನುಮ, ತಲೆಕೆಳಗಾದ ಆಂಜನೇಯ; ಅಚ್ಚರಿ ಮೂಡಿಸುವ 5 ಅಪರೂಪದ ದೇವಾಲಯಗಳಿವು – Kannada News | Rare Hanuman Temples in India: Discover Unique Forms and Ancient Stories

ವಿಶಿಷ್ಟ ಹನುಮಂತನ ದೇವಾಲಯImage Credit source: gemini ai

ಭಾರತದಾದ್ಯಂತ ಹನುಮಂತನ ಸಾವಿರಾರು ದೇವಾಲಯಗಳಿವೆ. ಆದರೆ ಕೆಲವು ಕ್ಷೇತ್ರಗಳು ತಮ್ಮ ವಿಶಿಷ್ಟ ವಿಗ್ರಹ ಶೈಲಿ, ಪೌರಾಣಿಕ ಹಿನ್ನೆಲೆ ಮತ್ತು ನಂಬಿಕೆಗಳಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಸ್ತ್ರೀ ರೂಪದ ಹನುಮನಿಂದ ಹಿಡಿದು ತಲೆಕೆಳಗಾಗಿ ನಿಂತಿರುವ ಆಂಜನೇಯನವರೆಗೆ, ಅಚ್ಚರಿ ಮೂಡಿಸುವ ಐದು ಅಪರೂಪದ ದೇವಾಲಯಗಳ ಮಾಹಿತಿ ಇಲ್ಲಿದೆ.

ಗಿರಿಜಾಬಂಧ್ ಹನುಮಾನ್, ರತನ್‌ಪುರ (ಛತ್ತೀಸ್‌ಗಢ):

ಸಾಮಾನ್ಯವಾಗಿ ಹನುಮಂತನನ್ನು ಬ್ರಹ್ಮಚಾರಿ ಮತ್ತು ವೀರ ರೂಪದಲ್ಲಿ ನೋಡುತ್ತೇವೆ. ಆದರೆ ರತನ್‌ಪುರದಲ್ಲಿ ಹನುಮಂತನು ಮಾತೃತ್ವದ ರೂಪದಲ್ಲಿ (ಸ್ತ್ರೀ ರೂಪ) ಕಾಣಿಸಿಕೊಳ್ಳುತ್ತಾನೆ. ಇಡೀ ವಿಶ್ವದಲ್ಲೇ ಹನುಮನನ್ನು ಸ್ತ್ರೀ ರೂಪದಲ್ಲಿ ಪೂಜಿಸುವ ಏಕೈಕ ದೇವಾಲಯ ಇದಾಗಿದೆ. ಈ ವಿಗ್ರಹವು ದಕ್ಷಿಣಾಭಿಮುಖವಾಗಿದ್ದು, ಶ್ರೀರಾಮ ಮತ್ತು ಲಕ್ಷ್ಮಣರನ್ನು ಹೆಗಲ ಮೇಲೆ ಹೊತ್ತಿರುವಂತೆ ಕೆತ್ತಲಾಗಿದೆ. ಅಹಿರಾವಣ ಮತ್ತು ಮಹಿರಾವಣನನ್ನು ಪಾದಗಳ ಕೆಳಗೆ ನಿಗ್ರಹಿಸಿರುವ ಈ ಹನುಮಂತನು ಭಕ್ತರ ಸಕಲ ಸಂಕಷ್ಟಗಳನ್ನು ದೂರ ಮಾಡುತ್ತಾನೆ. ವಿಶೇಷವಾಗಿ ಮಕ್ಕಳಿಲ್ಲದವರು ಮತ್ತು ದೀರ್ಘಕಾಲದ ಕಾಯಿಲೆ ಇರುವವರು ಇಲ್ಲಿಗೆ ಭೇಟಿ ನೀಡಿದರೆ ಶೀಘ್ರ ಫಲ ಸಿಗುತ್ತದೆ ಎಂಬುದು ಭಕ್ತರ ದೃಢ ನಂಬಿಕೆ.

ಲೇಟೆ ಹನುಮಾನ್, ಪ್ರಯಾಗ್ರಾಜ್ (ಉತ್ತರ ಪ್ರದೇಶ):

ಪ್ರಯಾಗ್ರಾಜ್‌ನ ಪವಿತ್ರ ತ್ರಿವೇಣಿ ಸಂಗಮದ ದಡದಲ್ಲಿರುವ ಈ ದೇವಾಲಯದಲ್ಲಿ ಹನುಮಂತನು ಮಲಗಿರುವ ಭಂಗಿಯಲ್ಲಿ ದರ್ಶನ ನೀಡುತ್ತಾನೆ. ಲಂಕೆಯ ವಿಜಯದ ನಂತರ ದಣಿದ ಹನುಮನು ಇಲ್ಲಿ ವಿಶ್ರಾಂತಿ ಪಡೆದನೆಂದು ಪುರಾಣಗಳು ಹೇಳುತ್ತವೆ. ಸುಮಾರು 20 ಅಡಿ ಎತ್ತರದ ಈ ಬೃಹತ್ ವಿಗ್ರಹವು ನೆಲಮಟ್ಟಕ್ಕಿಂತ ಕೆಳಗಿದೆ.

ಮಳೆಗಾಲದಲ್ಲಿ ಗಂಗಾ ನದಿಯ ನೀರು ಉಕ್ಕಿ ಹನುಮನ ವಿಗ್ರಹವನ್ನು ಸ್ಪರ್ಶಿಸುತ್ತದೆ. ಇದನ್ನು ‘ಗಂಗಾ ಮಾತೆಯು ಹನುಮನ ಪಾದಗಳಿಗೆ ಮಾಡುವ ಅಭಿಷೇಕ’ ಎಂದು ಭಾವಿಸಲಾಗುತ್ತದೆ. ಸಂಗಮ ಸ್ನಾನದ ನಂತರ ಈ ಹನುಮನ ದರ್ಶನ ಪಡೆದರೆ ಮಾತ್ರ ತೀರ್ಥಯಾತ್ರೆ ಪೂರ್ಣಗೊಳ್ಳುತ್ತದೆ ಎನ್ನಲಾಗುತ್ತದೆ.

ಉಲ್ಟಾ ಹನುಮಾನ್, ಸವರ್ (ಮಧ್ಯಪ್ರದೇಶ):

ಇಂದೋರ್ ಬಳಿಯ ಸವರ್‌ನಲ್ಲಿರುವ ಈ ದೇವಾಲಯದಲ್ಲಿ ಹನುಮಂತನು ತಲೆ ಕೆಳಗೆ ಮತ್ತು ಕಾಲುಗಳನ್ನು ಮೇಲಕ್ಕೆತ್ತಿ (ಶೀರ್ಷಾಸನ) ನಿಂತಿದ್ದಾನೆ. ಅಹಿರಾವಣನು ರಾಮ-ಲಕ್ಷ್ಮಣರನ್ನು ಅಪಹರಿಸಿ ಪಾತಾಳ ಲೋಕಕ್ಕೆ ಕರೆದೊಯ್ದಾಗ, ಅವರನ್ನು ರಕ್ಷಿಸಲು ಹನುಮನು ಭೂಮಿಯನ್ನು ಸೀಳಿ ಪಾತಾಳಕ್ಕೆ ಹೋದ ಸ್ಥಳವಿದು ಎನ್ನಲಾಗುತ್ತದೆ. ಪಾತಾಳ ಪ್ರವೇಶಿಸುವಾಗ ಹನುಮನು ತಲೆಕೆಳಗಾದ ಸ್ಥಿತಿಯಲ್ಲಿದ್ದ ಕಾರಣ ಇಲ್ಲಿ ವಿಗ್ರಹವೂ ಅದೇ ರೂಪದಲ್ಲಿದೆ. ವಿಗ್ರಹದ ಮೇಲೆ ಸಿಂಧೂರದ ಅಲಂಕಾರವಿದ್ದು, ಪಕ್ಕದಲ್ಲಿ ಪರಸ್ಪರ ಹೆಣೆದುಕೊಂಡಿರುವ ಹಳೆಯ ಬೇವೂ ಮತ್ತು ರವಿ ಮರಗಳು ಇಲ್ಲಿನ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಮಹಾವೀರ ಮಂದಿರ, ಪಾಟ್ನಾ (ಬಿಹಾರ):

ಉತ್ತರ ಭಾರತದ ಅತಿ ದೊಡ್ಡ ಹನುಮಾನ್ ದೇವಾಲಯಗಳಲ್ಲಿ ಒಂದಾದ ಇದು ಪಾಟ್ನಾ ಜಂಕ್ಷನ್ ಬಳಿಯಿದೆ. ಇಲ್ಲಿ ಗರ್ಭಗುಡಿಯಲ್ಲಿ ಎರಡು ಹನುಮಂತನ ವಿಗ್ರಹಗಳು ಅಕ್ಕಪಕ್ಕದಲ್ಲಿವೆ. ಒಂದು ದುಷ್ಟ ಶಿಕ್ಷೆಯ ಸಂಕೇತವಾದರೆ, ಇನ್ನೊಂದು ಭಕ್ತ ರಕ್ಷಣೆಯ ಸಂಕೇತವಾಗಿದೆ. ಇದು ಕೇವಲ ಪ್ರಾರ್ಥನಾ ಕೇಂದ್ರವಲ್ಲ, ಕ್ಯಾನ್ಸರ್ ರೋಗಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಮೂಲಕ ಸಾಮಾಜಿಕ ಕಳಕಳಿ ತೋರುತ್ತಿದೆ. ಇಲ್ಲಿನ ‘ನೈವೇದ್ಯಂ’ ಲಡ್ಡು ಪ್ರಸಾದವು ವಿಶ್ವಪ್ರಸಿದ್ಧವಾಗಿದೆ.

ಹನುಮತ್ ಧಾಮ, ಶಹಜಹಾನ್‌ಪುರ (ಉತ್ತರ ಪ್ರದೇಶ):

ಗಾರ ನದಿಯ ದಡದಲ್ಲಿರುವ ಒಂದು ಪುಟ್ಟ ದ್ವೀಪದಲ್ಲಿ ಈ ಬೃಹತ್ ದೇವಾಲಯವಿದೆ. ಇಲ್ಲಿನ ಹನುಮ ವಿಗ್ರಹವು 104 ಅಡಿ ಎತ್ತರವಿದ್ದು, ಉತ್ತರ ಭಾರತದ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ. ನದಿಯ ಮಧ್ಯದಲ್ಲಿರುವ ಕಾರಣ ಭಕ್ತರು ಸೇತುವೆಯ ಮೂಲಕ ದೇವಾಲಯವನ್ನು ತಲುಪಬೇಕು. ರಾತ್ರಿಯ ಸಮಯದಲ್ಲಿ ವಿದ್ಯುತ್ ದೀಪಗಳಿಂದ ಈ ವಿಗ್ರಹವು ಕಂಗೊಳಿಸುತ್ತದೆ. ಹನುಮಂತನು ತನ್ನ ಹೃದಯವನ್ನು ಹರಿದು ರಾಮ-ಸೀತೆಯರನ್ನು ತೋರಿಸುವ ವಿಗ್ರಹವು ಭಕ್ತರ ಮನಸ್ಸಿನಲ್ಲಿ ಭಕ್ತಿಭಾವವನ್ನು ಉಕ್ಕಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka SSLC Result 2026 Date: ವಿದ್ಯಾರ್ಥಿಗಳೇ ಎಲ್ಲದಕ್ಕೂ ಸನ್ನದ್ಧರಾಗಿ: ನಾಳೆ ಅಥವಾ ನಾಡಿದ್ದು, ಯಾವಾಗ ಫಲಿತಾಂಶ? ಇಲ್ಲಿದೆ ಮಾಹಿತಿ – Kannada News | KSEAB SSLC Result 2026 Soon: Check Karnataka 10th Marks, DigiLocker

ಬೆಂಗಳೂರು, ಏ.22: ಕರ್ನಾಟಕದ 10ನೇ ತರಗತಿ (SSLC) ವಿದ್ಯಾರ್ಥಿಗಳ ಫಲತಾಂಶ ಕಾಯುವಿಕೆ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ. ನಾಳೆ ಅಥವಾ ನಾಡಿದ್ದು (ಏ.23, 24) ಫಲಿತಾಂಶ ಬರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೊಂದು ಮೂಲಗಳ ಪ್ರಕಾರ ಮೇ ತಿಂಗಳ ಆರಂಭದಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂಕಪಟ್ಟಿಯನ್ನು ಪಡೆಯಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಗೊಂದಲು ಮಾಡಿಕೊಳ್ಳುವುದು ಬೇಡ, ಫಲಿತಾಂಶ ಈ ವಾರದಲ್ಲಿ ಅಥವಾ ಮುಂದಿನ ತಿಂಗಳು ಬಂದರು ಎಲ್ಲದಕ್ಕೂ ಸಿದ್ಧರಾಗಿರುವುದು ಒಳ್ಳೆಯದು.

ಫಲಿತಾಂಶ ಯಾವಾಗ?

ಕಳೆದ ಎರಡು ವರ್ಷಗಳ (2024 ಮತ್ತು 2025) ಅಂಕಿಅಂಶಗಳನ್ನು ಗಮನಿಸಿದರೆ, ಫಲಿತಾಂಶವು ಮೇ 9ರ ಸುಮಾರಿಗೆ ಪ್ರಕಟವಾಗಿತ್ತು. ಈ ವರ್ಷವೂ ಮಂಡಳಿಯು ಅದೇ ಸಮಯದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಫಲಿತಾಂಶ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ ಈ ಹಿಂದೆ ಏಪ್ರಿಲ್ 23 ಅಥವಾ 24ಕ್ಕೆ ಫಲಿತಾಂಶ ಪ್ರಕಟ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಬಂದಿಲ್ಲ ಹಾಗೂ ಇಲಾಖೆ ಕೂಡ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.

ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ಲಿಂಕ್‌ಗಳ ಮೂಲಕ ಫಲಿತಾಂಶ ಚೆಕ್ ಮಾಡಬಹುದು:

karresults.nic.in

kseab.karnataka.gov.in

ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ?

ಮೊದಲು ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.

ಮುಖಪುಟದಲ್ಲಿ ಕಾಣುವ ‘SSLC Result 2026’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕವನ್ನು (Date of Birth) ನಮೂದಿಸಿ.

‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಇದನ್ನೂ ಓದಿ: Karnataka CET 2026: ಸಿಇಟಿ ಪರೀಕ್ಷೆಗೆ ಹೋಗುವವರ ಗಮನಕ್ಕೆ; ಕಾಲರ್ ಇಲ್ಲದ ಅರ್ಧ ತೋಳಿನ ಬಟ್ಟೆ ಕಡ್ಡಾಯ

ಡಿಜಿಲಾಕರ್ ಮತ್ತು ಕರ್ನಾಟಕ ಒನ್ ಆಪ್:

ಅಧಿಕೃತ ವೆಬ್‌ಸೈಟ್ ಮಾತ್ರವಲ್ಲದೆ, ವಿದ್ಯಾರ್ಥಿಗಳು DigiLocker ಮೂಲಕವೂ ತಮ್ಮ ಅಂಕಪಟ್ಟಿಯನ್ನು ಪಡೆಯಬಹುದು. ಅಲ್ಲದೆ, ಗೂಗಲ್ ಪ್ಲೇ ಸ್ಟೋರ್‌ನಿಂದ KarnatakaOne ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳುವ ಮೂಲಕವೂ ಫಲಿತಾಂಶ ವೀಕ್ಷಿಸಬಹುದು.

ಈ ಬಾರಿ ಹೊಸ ಬದಲಾವಣೆ:

ಈ ಶೈಕ್ಷಣಿಕ ವರ್ಷದಿಂದ ಕೆಎಸ್‌ಇಎಬಿ (KSEAB) ಮಹತ್ವದ ಬದಲಾವಣೆ ಮಾಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಯಲ್ಲಿ (Third Language) ಶ್ರೇಣಿಗಳ (Grades) ಬದಲು ಅಂಕಗಳನ್ನು (Marks) ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಈ ವಿಚಾರ ಹೈಕೋರ್ಟ್​​​ ಮೆಟ್ಟಿಲೇರಿತ್ತು. ಈ ಬಗ್ಗೆ ಇತ್ಯರ್ಥ ಮಾಡಿದ ಕೋರ್ಟ್​​ 2025-26ರಿಂದ ಹಿಂದಿ ವಿಷಯಕ್ಕೆ ಅಂಕ ನೀಡಬೇಕೆಂದು ಪೀಠ ಸ್ಪಷ್ಟಪಡಿಸಿದ್ದು, ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ. ನಿಯಮ ರೂಪಿಸುವ ಮುನ್ನ ಪರೀಕ್ಷಾ ಪದ್ಧತಿ ಬದಲಾವಣೆ ಸೂಕ್ತವಲ್ಲ ಎಂದು ತಿಳಿಸಿದೆ.

ಹೈಕೋರ್ಟ್​​ ಆದೇಶದಿಂದ ಫಲಿತಾಂಶ ಪ್ರಕಟಣೆಗೆ ಯಾವುದೇ ಅಡ್ಡಿಯಿಲ್ಲ: ಮಧು ಬಂಗಾರಪ್ಪ

ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಕೂಡ ಒಂದು ಹೇಳಿಕೆಯನ್ನು ನೀಡಿದ್ದಾರೆ. ಕೋರ್ಟ್ ಆದೇಶದಿಂದ ಫಲಿತಾಂಶ ಪ್ರಕಟಣೆಗೆ ಯಾವುದೇ ತಾಂತ್ರಿಕ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಹೈಕೋರ್ಟ್ ಆದೇಶದಲ್ಲಿ ಏನಿದೆ ಎಂಬುದನ್ನು ನಾವು ಸಂಪೂರ್ಣವಾಗಿ ಪರಿಶೀಲಿಸಬೇಕಿದೆ. ನ್ಯಾಯಾಲಯವು ಮುಂದಿನ ವರ್ಷದಿಂದ ಈ ಪದ್ಧತಿ ಜಾರಿ ಮಾಡಿ ಎಂದು ಹೇಳಿದೆ. ಆದರೆ, ಈ ವರ್ಷದಿಂದಲೇ ಜಾರಿಯಾಗಿದ್ದರೆ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು” ಎಂದು ಸಚಿವರು ಹೇಳಿದ್ದಾರೆ.

ಹೈಕೋರ್ಟ್ ಆದೇಶ ಬಂದ ತಕ್ಷಣ ಫಲಿತಾಂಶ ವಿಳಂಬವಾಗಬಹುದು ಎಂಬ ಆತಂಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮನೆ ಮಾಡಿತ್ತು. ಆದರೆ, “ಫಲಿತಾಂಶ ಪ್ರಕಟಣೆಗೆ ಯಾವುದೇ ಅಡ್ಡಿಯಿಲ್ಲ, ನಿಗದಿತ ಸಮಯಕ್ಕೇ ರಿಸಲ್ಟ್ ಬರಲಿದೆ” ಎಂದು ಸಚಿವರು ಭರವಸೆ ನೀಡಿದ್ದಾರೆ. ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿರುವುದಾಗಿ ಸಚಿವರು ತಿಳಿಸಿದ್ದಾರೆ. ಸಿಎಂ ಅವರೊಂದಿಗೆ ಚರ್ಚಿಸಿ, ಮುಂದಿನ ಕಾನೂನಾತ್ಮಕ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ಪರೀಕ್ಷಾ ಮಂಡಳಿಯು ಫಲಿತಾಂಶ ಪ್ರಕಟಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಹಂತಗಳನ್ನು ಅನುಸರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯಕರನೊಂದಿಗೆ ವಿವಾಹಿತೆ ಪರಾರಿ ಕೇಸ್​​ಗೆ ಹೊಸ ಟ್ವಿಸ್ಟ್​​: ಪತಿಗೆ ನಿದ್ದೆ ಮಾತ್ರೆ ನೀಡಿ ಪತ್ನಿ ಎಸ್ಕೇಪ್​? – Kannada News | Husband Alleges Wife Drugged Him, Escaped With Lover in Bagalagunte

ಬೆಂಗಳೂರು, ಏಪ್ರಿಲ್​​ 22: ಕಸ ಹಾಕಲು ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದ ವಿವಾಹಿತೆ ಪ್ರಿಯಕರನ ಜೊತೆ ಪರಾರಿ ಕೇಸ್​​ಗೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ಪತ್ನಿ ಪ್ರಿಯಾಂಕಾ ತನಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎಂದು ಪತಿ ಶರತ್ ಕುಮಾರ್ ಆರೋಪಿಸಿದ್ದಾರೆ. ಶರತ್ ಕುಮಾರ್ ನೀಡಿರುವ ದೂರಿನ ಪ್ರಕಾರ, ಪ್ರಿಯಾಂಕಾ ಕಸ ಹಾಕಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಕಸದ ಬುಟ್ಟಿಯ ಜೊತೆಗೆ ಬ್ಯಾಗ್ ಒಂದನ್ನೂ ತೆಗೆದುಕೊಂಡು ಹೋಗಿರುವುದು ತಿಳಿದುಬಂದಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರನ್ನು ಮನೆಯಲ್ಲಿಯೇ ಬಿಟ್ಟು ಪ್ರಿಯಾಂಕಾ ತೆರಳಿದ್ದಾರೆ. ಈ ಘಟನೆಗೂ ಮುನ್ನ ಪ್ರಿಯಾಂಕಾ ತನಗೆ ಪ್ರಭು ಎಂಬುವನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಅಥವಾ ಕೊಲ್ಲುವುದಾಗಿ ಬೆದರಿಸುತ್ತಿದ್ದಾನೆ ಎಂದು ಹೇಳಿಕೊಂಡಿದ್ದಳು ಎಂಬುದಾಗಿಯೂ ಶರತ್ ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಭು ಬಾಗಲಗುಂಟೆಯಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಿ: ಅರುಣ್​​ ಕುಮಾರ್​​, ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ನನ್ನ ಹೆಂಡತಿ 1 ಲಕ್ಷ ರೂ., ಚಿನ್ನ ವಾಪಸ್ ಕೊಡಲಿ!’ ಪತ್ನಿ ವಿರುದ್ಧ ಪತಿ ಆಕ್ರೋಶ – Kannada News | Mandya wife betrayal: Auto driver’s wife leaves husband for lover, man demands his money and gold back

ಮಂಡ್ಯ, ಏಪ್ರಿಲ್ 22: ಪ್ರೀತಿಸಿ ಮದುವೆಯಾದ ಪತಿಯನ್ನೇ ಬಿಟ್ಟು ಆತನ ಸ್ನೇಹಿತನೊಂದಿಗೆ ಮಹಿಳೆ ಪರಾರಿಯಾದ ಘಟನೆ ಜಿಲ್ಲೆಯ ಬನ್ನಂಗಾಡಿ ಗ್ರಾಮದಲ್ಲಿ ನಡೆದಿದೆ. ಮದುವೆಯಾದ ಎರಡೇ ವರ್ಷಕ್ಕೆ ರಕ್ಷಿತಾ ಈ ಕೃತ್ಯ ಎಸಗಿದ್ದು, ದೇವಸ್ಥಾನದಲ್ಲಿ ಇಂದ್ರನ ಜೊತೆ ಮದುವೆಯಾಗಿ ಆ ಫೋಟೋಗಳನ್ನು ತನ್ನ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾಳೆ. ಇದರಿಂದ ವಿಷಯ ತಿಳಿದ ಸಾಗರ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಸಾಗರ್, ತನ್ನ ಪತ್ನಿ ಬರುವಳೆಂಬ ನಿರೀಕ್ಷೆಯಲ್ಲಿ ಸಾಗರ್ 4 ಲಕ್ಷ ರೂಪಾಯಿ ಖರ್ಚು ಮಾಡಿ ಮನೆ ಸಿದ್ಧಪಡಿಸಿದ್ದೆ. ಆದರೆ, ರಕ್ಷಿತಾ 22 ಗ್ರಾಂ ಚಿನ್ನ ಮತ್ತು 1 ಲಕ್ಷ ರೂಪಾಯಿ ನಗದಿನೊಂದಿಗೆ ಇಂದ್ರನ ಜೊತೆ ಓಡಿ ಹೋಗಿದ್ದಾಳೆ ಎಂದಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಮುಚ್ಚಿ ಹಾಕಲು ನಡೆದಿತ್ತಾ ಸಂಚು? – Kannada News | American Tourist Physically assulted at Kodagu Homestay; Cover Up Allegations Emerge

ಕುಟ್ಟ ಗ್ರಾಮದಲ್ಲಿರುವ ಹೋಂಸ್ಟೇImage Credit source: Tv9 Kannadda

ಮಡಿಕೇರಿ, ಏಪ್ರಿಲ್​​ 22: ಕೊಡಗು ಜಿಲ್ಲೆಯ ಕುಟ್ಟ ಗ್ರಾಮದಲ್ಲಿರುವ ಹೋಂಸ್ಟೇಯಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ರಿವೀಲ್​​ ಆಗಿದೆ. ಮಹಿಳೆಯ ಮೇಲೆ ಝಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಅತ್ಯಾಚಾರ ನಡೆಸಿದ್ದರೂ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಾಗಿತ್ತು. ಹೀಗಾಗಿ ಬರೋಬ್ಬರಿ ಮೂರು ದಿನಗಳ ಕಾಲ ವೈಫೈ ಸಂಪರ್ಕವನ್ನು ಕಡಿತಗೊಳಿಸಿ ಸಂತ್ರಸ್ತೆಗೆ ಹೊರಗಿನ ಸಂಪರ್ಕ ಸಿಗದಂತೆ ನೋಡಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ.

ಅಂತಿಮವಾಗಿ ವೈಫೈ ಸಂಪರ್ಕ ದೊರಕಿದ ಬಳಿಕ, ಮೈಸೂರಿಗೆ ತೆರಳುವ ನೆಪದಲ್ಲಿ ಸಂತ್ರಸ್ತೆ ಹೋಂಸ್ಟೇಯಿಂದ ಹೊರಗೆ ಬಂದಿದ್ದಾಳೆ. ಆ ಬಳಿಕವೇ ಘಟನೆ ಕುರಿತು ಅಮೆರಿಕ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾಳೆ. ಅದನ್ನು ಆಧರಿಸಿ ಅಮೆರಿಕ ರಾಯಭಾರ ಅಧಿಕಾರಿಗಳು ಮೈಸೂರು ಪೊಲೀಸರಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದು, ಪ್ರಕರಣ ಅಧಿಕೃತವಾಗಿ ದಾಖಲಾಗಿತ್ತು. ಕುಟ್ಟ ಪೊಲೀಸ್ ಠಾಣೆಯಲ್ಲಿ ಕೇಸ್​​ ಬೆನ್ನಲ್ಲೇ, ಹೋಂಸ್ಟೇಯ ಕೆಲಸಗಾರ ವೃಜೇಶ್ ಮತ್ತು ಮಾಲೀಕ ವಿಶಾಲ್​​ನ ಬಂಧಿಸಿದ್ದಾರೆ. ಆರೋಪಿಗಳನ್ನು ಮೇ 3ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಬಗ್ಗೆ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ವಿದೇಶಿ ಮಹಿಳೆ ಮೇಲೆ ಅತ್ಯಾಚಾರದ ಆರೋಪ! ಹೋಂಸ್ಟೇ ಮಾಲೀಕ ಸೇರಿ ಇಬ್ಬರು ಅರೆಸ್ಟ್

ಕಠಿಣ ಕ್ರಮ ಎಂದ ಗೃಹಸಚಿವರು

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್​​, ಈಗಾಗಲೇ ನಾವು ಎಸ್​ಒಪಿಯನ್ನು ನೀಡಿದ್ದೇವೆ. ಹೋಂಸ್ಟೇ ನಡೆಸುವವರು ಆ ಪ್ರಕಾರ ನಡೆಸುಕೊಂಡು ಹೋಗಬೇಕು. ಏನು ಕ್ರಮ ವಹಿಸಬೇಕು ಎಲ್ಲವನ್ನೂ ಎಸ್​ಒಪಿಯಲ್ಲಿ ಕೊಟ್ಟಿರುತ್ತೇವೆ. ಅದನ್ನೂ ಮೀರಿ ಈ ಘಟನೆ ಆದಾಗ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ವಿದೇಶಿಗರ ಮೇಲೆ ಈ ರೀತಿ ನಡೆದ್ರೆ ನಮ್ಮ ಸಮಾಜ, ನಮ್ಮ ದೇಶದ ಬಗ್ಗೆ ಏನು ಸಂದೇಶ ಹೋಗುತ್ತದೆ? ಹೀಗಾಗಿ ನಾವು ಕಠಿಣ ಕ್ರಮ ತೆಗೆದುಕೊಳ್ತೇವೆ. ಘಟನೆ ನಂತರ ಮುಚ್ಚಾಕುವ ಪ್ರಯತ್ನ ಮಾಡಿದ್ದಾರೆ ಅನ್ನಿಸುತ್ತಿದ್ದು, ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರಿ ಗಾಳಿ ಮಳೆಗೆ ಮನೆ ಮೇಲೆ ಬಿತ್ತು ಬೃಹದಾಕಾರದ ಅಶ್ವತ್ಥ ಮರ: ಪವಾಡಸದೃಶ ರೀತಿಯಲ್ಲಿ ಪಾರಾದ ಕುಟುಂಬ – Kannada News | Mangaluru Rain Fury: Giant Peepal Tree Falls on House; Family of Five Including Infant Escape Miraculously

ಮನೆ ಮೇಲೆ ಬಿದ್ದ ಬೃಹದಾಕಾರದ ಅಶ್ವತ್ಥ ಮರImage Credit source: tv9

ಮಂಗಳೂರು, ಏಪ್ರಿಲ್ 22: ಕರಾವಳಿಯಲ್ಲಿ (Coastal Karnataka) ಮಂಗಳವಾರ ತಡರಾತ್ರಿ ಭಾರಿ ಗಾಳಿ-ಮಳೆ (Rain) ಸುರಿದಿದೆ. ಗಾಳಿ-ಮಳೆಗೆ ಮಂಗಳೂರಿನ (Mangalore) ಕುದ್ರೋಳಿಯ ಬಸವನಗುಡಿ ರಸ್ತೆಯಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ಇಲ್ಲಿನ ಮನೆಯೊಂದರ ಮೇಲೆ ಬೃಹದಾಕಾರದ ಅಶ್ವತ್ಥ ಮರವೊಂದು ಉರುಳಿ ಬಿದ್ದಿದ್ದು, ಮನೆಯಲ್ಲಿದ್ದವರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವರದರಾಜ್ ಶೇಟ್ ಎಂಬುವವರ ಮನೆ ಮೇಲೆ ನಸುಕಿನ ಜಾವ 3:30ರ ಸುಮಾರಿಗೆ ಈ ಮರ ಬಿದ್ದಿದೆ.

ಸಾಮಾನ್ಯವಾಗಿ ಮನೆಯ ಸದಸ್ಯರು ಪ್ರತಿದಿನ ಮಹಡಿಯ ಮೇಲಿರುವ ಬೆಡ್‌ರೂಂನಲ್ಲಿ ಮಲಗುತ್ತಿದ್ದರು. ಆದರೆ, ಮಂಗಳವಾರ ರಾತ್ರಿ ಅಚಾನಕ್ಕಾಗಿ ‘ಇವತ್ತು ಕೆಳಗಡೆ ಅಡ್ಜಸ್ಟ್ ಮಾಡಿಕೊಂಡು ಮಲಗೋಣ’ ಎಂದು ನಿರ್ಧರಿಸಿ ಕೆಳಮಹಡಿಯಲ್ಲಿ ಮಲಗಿದ್ದರು. ನಸುಕಿನ ಜಾವ ಮರ ಬಿದ್ದ ರಭಸಕ್ಕೆ ಮಹಡಿಯ ಭಾಗ ಜಖಂಗೊಂಡಿದ್ದು, ಒಂದು ವೇಳೆ ಮೇಲೆ ಮಲಗಿದ್ದರೆ ಭಾರೀ ಅಪಾಯ ಸಂಭವಿಸುತ್ತಿತ್ತು ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ 4 ತಿಂಗಳ ಮಗು ಹಾಗೂ 80 ವರ್ಷದ ಇಬ್ಬರು ವೃದ್ಧರಿದ್ದರು.

ಪಾಲಿಕೆ ವಿರುದ್ಧ ಆಕ್ರೋಶ

ಈ ಮರ ಅಪಾಯಕಾರಿಯಾಗಿದೆ ಎಂದು ಈ ಹಿಂದೆಯೇ ಮಹಾನಗರ ಪಾಲಿಕೆಗೆ ದೂರು ನೀಡಲಾಗಿತ್ತು. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪಾಲಿಕೆಯ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ವರದರಾಜ್ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಜನಪ್ರತಿನಿಧಿಗಳು ಸ್ಥಳಕ್ಕೆ ಬರುವವರೆಗೂ ಮರ ತೆರವು ಮಾಡಲು ಬಿಡುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ.

ಅತ್ತಾವರದಲ್ಲಿ ಕಾಂಪೌಂಡ್ ಕುಸಿತ

ಅತ್ತಾವರದಲ್ಲಿ ಕಾಂಪೌಂಡ್ ಕುಸಿದು ಕಾರುಗಳು ಸಂಪೂರ್ಣ ಜಖಂ

ಮತ್ತೊಂದೆಡೆ, ಮಂಗಳೂರಿನ ಅತ್ತಾವರದಲ್ಲಿ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಧಾರ್ಮಿಕ ಕಾರ್ಯಕ್ರಮವಿದ್ದ ಕಾರಣ ಪಾರ್ಕಿಂಗ್ ಜಾಗವಿಲ್ಲದೆ ಕಾರನ್ನು ಅಲ್ಲಿ ನಿಲ್ಲಿಸಲಾಗಿತ್ತು. ‘ವರ್ಷದ ಹಿಂದೆಯಷ್ಟೇ ನಿರ್ಮಿಸಿದ ಗೋಡೆ ಮಳೆಗೆ ಕುಸಿದಿದೆ, ಈಗ ನಮಗೆ ಪರಿಹಾರ ನೀಡುವವರು ಯಾರು?’ ಎಂದು ಕಾರು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಮುಂದಿನ 7 ದಿನ ಕರ್ನಾಟಕ ಕೂಲ್​ ಕೂಲ್: ಈ ಜಿಲ್ಲೆಗಳಿಗೆ ಬರಲಿದ್ದಾನೆ ವರುಣ; ಬಿಸಿಲ ಧಗೆಯಿಂದ ಸಿಗಲಿದೆ ಮುಕ್ತಿ!

ಏತನ್ಮಧ್ಯೆ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಏಪ್ರಿಲ್ 22 ಮತ್ತು 23 ರಂದು ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಸಂಜೆ ಅಥವಾ ರಾತ್ರಿ ವೇಳೆ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬುರ್ಖಾ ಹಾಕಿದ್ದ ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿ ಒದ್ದು ಪರಾರಿಯಾದ ವ್ಯಕ್ತಿ – Kannada News | CCTV Reveals Brutal Street Assault on Woman in Uttar Pradesh

ಶಾಮ್ಲಿ, ಏಪ್ರಿಲ್ 22: ಉತ್ತರ ಪ್ರದೇಶದ ಶಾಮ್ಲಿಯಲ್ಲಿ ವ್ಯಕ್ತಿಯೊಬ್ಬ ಹೊಂಚು ಹಾಕಿ ಕುಳಿತು, ಬುರ್ಖಾ ಧರಿಸಿರುವ ಮಹಿಳೆಯನ್ನು ಎಳೆದೊಯ್ದು, ಕೈ ಟ್ವಿಸ್ಟ್​ ಮಾಡಿರುವ ಘಟನೆ ನಡೆದಿದೆ. ಆ ಆರೋಪಿಯನ್ನು ಮಂಜೀತ್ ಎಂದು ಗುರುತಿಸಲಾಗಿದೆ. ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿ, ಆಕೆಗೆ ಒದ್ದು ಅಲ್ಲಿಂದ ಓಡಿ ಹೋಗಿದ್ದಾನೆ. ಬಳಿಕ ಅಲ್ಲೇ ಇದ್ದವರು ಆ ಮಹಿಳೆಯ ಆರೋಗ್ಯ ವಿಚಾರಿಸುತ್ತಿರುವುದು ಹಾಗೂ ಘಟನೆ ಬಗ್ಗೆ ವಿವರ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಹೋದರ ಹಾರ್ದಿಕ್ ಜೊತೆಗಿನ ಕಿರಿಕ್ ಬಗ್ಗೆ ಕೊನೆಗೂ ಮೌನ ಮುರಿದ ಕೃನಾಲ್ ಪಾಂಡ್ಯ – Kannada News | Hardik Krunal Rift? Krunal Pandya Finally Addresses Brother Controversy

ಭಾರತ ಕ್ರಿಕೆಟ್​​​ ಅಲ್ಲಿ ಪಾಂಡ್ಯ ಬ್ರದರ್ಸ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ಮೊದಲು ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಇವರು ಒಟ್ಟಾಗಿ ಆಡಿದ್ದರು. ಈಗ ಕೃನಾಲ್ ಬೆಂಗಳೂರು ಪರ ಆಡುತ್ತಿದ್ದರೆ, ಹಾರ್ದಿಕ್ ಮುಂಬೈ ತಂಡದಲ್ಲೇ ಮುಂದುವರಿದಿದ್ದಾರೆ. ಇಬ್ಬರೂ ಬೇರೆ ತಂಡದಲ್ಲಿದ್ದರೂ ಬಾಂಧವ್ಯ ಹಾಗೆಯೇ ಮುಂದುವರಿದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇಬ್ಬರ ಮಧ್ಯೆ ಈಗ ಕಿರಿಕ್ ಆಗಿದೆ ಎನ್ನಲಾಗಿದೆ. ಈ ವಿಷಯವಾಗಿ ಕೃನಾಲ್ ಅವರು ಮೌನ ಮುರಿದಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು ಈ ಮೊದಲು ನತಾಶಾ ಜೊತೆ ವಿವಾಹ ಆಗಿ ವಿಚ್ಛೇದನ ಪಡೆದರು. ಈಗ ಹಾರ್ದಿಕ್ ಅವರು ಮಹಿಕಾ ಶರ್ಮಾ ಜೊತೆ ಸುತ್ತಾಡುತ್ತಿದ್ದಾರೆ. ಮಹಿಕಾ ಸಿಕ್ಕ ಬಳಿಕ ಹಾರ್ದಿಕ್ ವರ್ತನೆಯಲ್ಲಿ ಬದಲಾವಣೆ ಆಗಿದೆ ಎಂದು ವರದಿ ಆಗಿದೆ. ಹಾರ್ದಿಕ್-ಕೃನಾಲ್ ಬೇರೆ ಆಗಲು ಮಹಿಕಾ ಕಾರಣ ಎಂಬ ವದಂತಿಯೂ ಇದೆ. ಈ ಮೊದಲು ಮುಂಬೈ vs ಆರ್​​ಸಿಬಿ ಪಂದ್ಯದಲ್ಲಿ ಹಾರ್ದಿಕ್ ವಿಕೆಟ್ ಬಿದ್ದಾಗ ಕೃನಾಲ್ ಸಂಭ್ರಮಿಸಿದ್ದರು. ಇದು ಕೂಡ ಚರ್ಚೆಯನ್ನು ಹುಟ್ಟುಹಾಕಿತ್ತು. ಅಭಿಮಾನಿಗಳಲ್ಲಿ ವದಂತಿ ಹೆಚ್ಚುವಂತೆ ಮಾಡಿತ್ತು.

ಕೃನಾಲ್ ಅವರು ಈಗ ಆರ್​​ಸಿಬಿ ಇನ್​​ಸೈಡರ್ ಮಿಸ್ಟರ್ ನ್ಯಾಗ್ಸ್ ಜೊತೆ ಮಾತನಾಡಿದ್ದಾರೆ. ‘ಕಳೆದ ವರ್ಷ ನೀವು ನನಗೆ ಸಂದರ್ಶನ ನೀಡಿಲ್ಲ’ ಎಂದು ಮಿಸ್ಟರ್ ನ್ಯಾಗ್ಸ್ ಹೇಳಿದರು. ಇದಕ್ಕೆ ಉತ್ತರಿಸಿದ ಕೃನಾಲ್, ‘ನಾನು ಆರ್​​ಸಿಬಿ ಕುಟುಂಬದ ಜೊತೆ ಇದ್ದೆ’ ಎಂದರು. ‘ನಾನು ಕೂಡ ಆರ್​​ಸಿಬಿ ಕುಟುಂಬದ ಸದಸ್ಯನೇ. ನೀವು ಆರ್​​ಸಿಬಿ ಕುಟುಂಬದ ಜೊತೆ ಇದ್ದಿದ್ದರಿಂದ ಆರ್​​ಸಿಬಿ ಕುಟುಂಬದ ಮತ್ತೊಬ್ಬ ಸದಸ್ಯನ ಭೇಟಿ ಮಾಡಲು ಆಗಿಲ್ಲ ಅಲ್ಲವೇ’ ಎಂದು ಮರು ಪ್ರಶ್ನಿಸಿದರು ನ್ಯಾಗ್ಸ್.

ಇದನ್ನೂ ಓದಿ: ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ 

‘ನಿಮ್ಮ ಕುಟುಂಬದಲ್ಲಿ ಹಲವು ಸದಸ್ಯರು ಇರುತ್ತಾರೆ. ಕೆಲವೊಮ್ಮೆ ಕೆಲವರನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತದೆ’ ಎಂದರು ಕೃನಾಲ್. ‘ನಿಮ್ಮ ಸಹೋದರನ ರೀತಿಯಾ’ ಎಂದು ನ್ಯಾಗ್ಸ್ ಕೇಳುತ್ತಿದ್ದಂತೆ ಕೃನಾಲ್ ನಕ್ಕರು. ‘ಫೈಟ್ ಏನಾದರೂ ನಡೆಯುತ್ತಿದೆಯಾ? ದಯವಿಟ್ಟು ಹೇಳಿ. ವ್ರೆಸ್ಲಿಂಗ್​​ನಲ್ಲಿ ಕೇನ್ ಹಾಗೂ ಅಂಡರ್​​ಟೇಕರ್ ಕೂಡ ಫೈಟ್ ಮಾಡಿಕೊಳ್ಳುತ್ತಿದ್ದರು. ನಿಮ್ಮ ಮಧ್ಯೆ ಎಲ್ಲವೂ ಸರಿ ಇದೆಯೇ’ ಎಂದು ಕೇಳಿದಾಗ, ‘ಆಲ್ ಓಕೆ’ ಎಂದು ನಗುತ್ತಲೇ ಹೇಳಿದರು ಕೃನಾಲ್. ಮಾತಿಗಷ್ಟೇ ಕೃನಾಲ್ ಓಕೆ ಅಂದರೇ ಅಥವಾ ನಿಜಕ್ಕೂ ಹಾರ್ದಿಕ್ ಹಾಗೂ ಕೃನಾಲ್ ಮಧ್ಯೆ ಎಲ್ಲವೂ ಸರಿ ಇದೆಯೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version