ಸಹೋದರ ಹಾರ್ದಿಕ್ ಜೊತೆಗಿನ ಕಿರಿಕ್ ಬಗ್ಗೆ ಕೊನೆಗೂ ಮೌನ ಮುರಿದ ಕೃನಾಲ್ ಪಾಂಡ್ಯ – Kannada News | Hardik Krunal Rift? Krunal Pandya Finally Addresses Brother Controversy

ಭಾರತ ಕ್ರಿಕೆಟ್​​​ ಅಲ್ಲಿ ಪಾಂಡ್ಯ ಬ್ರದರ್ಸ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ಮೊದಲು ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಇವರು ಒಟ್ಟಾಗಿ ಆಡಿದ್ದರು. ಈಗ ಕೃನಾಲ್ ಬೆಂಗಳೂರು ಪರ ಆಡುತ್ತಿದ್ದರೆ, ಹಾರ್ದಿಕ್ ಮುಂಬೈ ತಂಡದಲ್ಲೇ ಮುಂದುವರಿದಿದ್ದಾರೆ. ಇಬ್ಬರೂ ಬೇರೆ ತಂಡದಲ್ಲಿದ್ದರೂ ಬಾಂಧವ್ಯ ಹಾಗೆಯೇ ಮುಂದುವರಿದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇಬ್ಬರ ಮಧ್ಯೆ ಈಗ ಕಿರಿಕ್ ಆಗಿದೆ ಎನ್ನಲಾಗಿದೆ. ಈ ವಿಷಯವಾಗಿ ಕೃನಾಲ್ ಅವರು ಮೌನ ಮುರಿದಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು ಈ ಮೊದಲು ನತಾಶಾ ಜೊತೆ ವಿವಾಹ ಆಗಿ ವಿಚ್ಛೇದನ ಪಡೆದರು. ಈಗ ಹಾರ್ದಿಕ್ ಅವರು ಮಹಿಕಾ ಶರ್ಮಾ ಜೊತೆ ಸುತ್ತಾಡುತ್ತಿದ್ದಾರೆ. ಮಹಿಕಾ ಸಿಕ್ಕ ಬಳಿಕ ಹಾರ್ದಿಕ್ ವರ್ತನೆಯಲ್ಲಿ ಬದಲಾವಣೆ ಆಗಿದೆ ಎಂದು ವರದಿ ಆಗಿದೆ. ಹಾರ್ದಿಕ್-ಕೃನಾಲ್ ಬೇರೆ ಆಗಲು ಮಹಿಕಾ ಕಾರಣ ಎಂಬ ವದಂತಿಯೂ ಇದೆ. ಈ ಮೊದಲು ಮುಂಬೈ vs ಆರ್​​ಸಿಬಿ ಪಂದ್ಯದಲ್ಲಿ ಹಾರ್ದಿಕ್ ವಿಕೆಟ್ ಬಿದ್ದಾಗ ಕೃನಾಲ್ ಸಂಭ್ರಮಿಸಿದ್ದರು. ಇದು ಕೂಡ ಚರ್ಚೆಯನ್ನು ಹುಟ್ಟುಹಾಕಿತ್ತು. ಅಭಿಮಾನಿಗಳಲ್ಲಿ ವದಂತಿ ಹೆಚ್ಚುವಂತೆ ಮಾಡಿತ್ತು.

ಕೃನಾಲ್ ಅವರು ಈಗ ಆರ್​​ಸಿಬಿ ಇನ್​​ಸೈಡರ್ ಮಿಸ್ಟರ್ ನ್ಯಾಗ್ಸ್ ಜೊತೆ ಮಾತನಾಡಿದ್ದಾರೆ. ‘ಕಳೆದ ವರ್ಷ ನೀವು ನನಗೆ ಸಂದರ್ಶನ ನೀಡಿಲ್ಲ’ ಎಂದು ಮಿಸ್ಟರ್ ನ್ಯಾಗ್ಸ್ ಹೇಳಿದರು. ಇದಕ್ಕೆ ಉತ್ತರಿಸಿದ ಕೃನಾಲ್, ‘ನಾನು ಆರ್​​ಸಿಬಿ ಕುಟುಂಬದ ಜೊತೆ ಇದ್ದೆ’ ಎಂದರು. ‘ನಾನು ಕೂಡ ಆರ್​​ಸಿಬಿ ಕುಟುಂಬದ ಸದಸ್ಯನೇ. ನೀವು ಆರ್​​ಸಿಬಿ ಕುಟುಂಬದ ಜೊತೆ ಇದ್ದಿದ್ದರಿಂದ ಆರ್​​ಸಿಬಿ ಕುಟುಂಬದ ಮತ್ತೊಬ್ಬ ಸದಸ್ಯನ ಭೇಟಿ ಮಾಡಲು ಆಗಿಲ್ಲ ಅಲ್ಲವೇ’ ಎಂದು ಮರು ಪ್ರಶ್ನಿಸಿದರು ನ್ಯಾಗ್ಸ್.

ಇದನ್ನೂ ಓದಿ: ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ 

‘ನಿಮ್ಮ ಕುಟುಂಬದಲ್ಲಿ ಹಲವು ಸದಸ್ಯರು ಇರುತ್ತಾರೆ. ಕೆಲವೊಮ್ಮೆ ಕೆಲವರನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತದೆ’ ಎಂದರು ಕೃನಾಲ್. ‘ನಿಮ್ಮ ಸಹೋದರನ ರೀತಿಯಾ’ ಎಂದು ನ್ಯಾಗ್ಸ್ ಕೇಳುತ್ತಿದ್ದಂತೆ ಕೃನಾಲ್ ನಕ್ಕರು. ‘ಫೈಟ್ ಏನಾದರೂ ನಡೆಯುತ್ತಿದೆಯಾ? ದಯವಿಟ್ಟು ಹೇಳಿ. ವ್ರೆಸ್ಲಿಂಗ್​​ನಲ್ಲಿ ಕೇನ್ ಹಾಗೂ ಅಂಡರ್​​ಟೇಕರ್ ಕೂಡ ಫೈಟ್ ಮಾಡಿಕೊಳ್ಳುತ್ತಿದ್ದರು. ನಿಮ್ಮ ಮಧ್ಯೆ ಎಲ್ಲವೂ ಸರಿ ಇದೆಯೇ’ ಎಂದು ಕೇಳಿದಾಗ, ‘ಆಲ್ ಓಕೆ’ ಎಂದು ನಗುತ್ತಲೇ ಹೇಳಿದರು ಕೃನಾಲ್. ಮಾತಿಗಷ್ಟೇ ಕೃನಾಲ್ ಓಕೆ ಅಂದರೇ ಅಥವಾ ನಿಜಕ್ಕೂ ಹಾರ್ದಿಕ್ ಹಾಗೂ ಕೃನಾಲ್ ಮಧ್ಯೆ ಎಲ್ಲವೂ ಸರಿ ಇದೆಯೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka CET 2026: ಕರ್ನಾಟಕ CET ಪರೀಕ್ಷೆ ಆರಂಭ; 3.3 ಲಕ್ಷ ವಿದ್ಯಾರ್ಥಿಗಳು ಭಾಗಿ, ಈ ಬಾರಿ ಕಟ್ಟುನಿಟ್ಟಿನ ‘ಡ್ರೆಸ್ ಕೋಡ್’ ಜಾರಿ! – Kannada News | Karnataka CET 2026 Exam Begins: KEA Guidelines, Dress Code and Key Dates for Students

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸುವ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ರಾಜ್ಯಾದ್ಯಂತ ಇಂದಿನಿಂದ (ಏಪ್ರಿಲ್ 22) ಆರಂಭವಾಗುತ್ತಿದೆ. ಇಂಜಿನಿಯರಿಂಗ್, ಕೃಷಿ ವಿಜ್ಞಾನ ಮತ್ತು ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಈ ಪರೀಕ್ಷೆ ನಡೆಯುತ್ತಿದೆ.

ಅಂಕಿ-ಅಂಶಗಳ ವಿವರ:

ಈ ವರ್ಷ ದಾಖಲೆಯ ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟು 3,30,479 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇವರಲ್ಲಿ 1,86,099 ಹುಡುಗಿಯರು ಮತ್ತು 1,44,380 ಹುಡುಗರು ಸೇರಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೇ 163 ಕೇಂದ್ರಗಳಲ್ಲಿ 77,604 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.

ಡ್ರೆಸ್ ಕೋಡ್​​ಗಾಗಿ ಅಧಿಕಾರಿಗಳ ನೇಮಕ:

ಪರೀಕ್ಷಾ ಇತಿಹಾಸದಲ್ಲೇ ಮೊದಲ ಬಾರಿಗೆ, ಉಡುಪಿನ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಉಂಟಾಗುವ ಗೊಂದಲ ನಿವಾರಿಸಲು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಒಟ್ಟು 745 ಡ್ರೆಸ್ ಕೋಡ್ ಅಧಿಕಾರಿಗಳನ್ನು ಕೆಇಎ ನೇಮಿಸಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆಗಳು:

  • ಉಡುಪು: ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆಗಳನ್ನು ಧರಿಸುವುದು ಕಡ್ಡಾಯ. ಕಾಲರ್ ಇಲ್ಲದ ಉಡುಪುಗಳಿಗೆ ಆದ್ಯತೆ ನೀಡಬೇಕು.
  • ಹುಡುಗರಿಗೆ ನಿರ್ಬಂಧ: ಕುರ್ತಾ-ಪೈಜಾಮ, ಜೀನ್ಸ್ ಪ್ಯಾಂಟ್ ಮತ್ತು ಶೂಗಳನ್ನು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಲು ಸೂಚಿಸಲಾಗಿದೆ.
  • ಎಲೆಕ್ಟ್ರಾನಿಕ್ ಸಾಧನಗಳು: ಮೊಬೈಲ್, ಬ್ಲೂಟೂತ್, ಇಯರ್‌ಫೋನ್ ಸೇರಿದಂತೆ ಯಾವುದೇ ಗ್ಯಾಜೆಟ್‌ಗಳನ್ನು ಪರೀಕ್ಷಾ ಕೊಠಡಿಯೊಳಗೆ ಬಿಡಲಾಗುವುದಿಲ್ಲ.

ಪರೀಕ್ಷಾ ವೇಳಾಪಟ್ಟಿ:

  • ಏಪ್ರಿಲ್ 22: ಗಡಿಭಾಗ ಮತ್ತು ಇತರ ರಾಜ್ಯಗಳ ಅಭ್ಯರ್ಥಿಗಳು ಏಪ್ರಿಲ್ 22ರಂದು ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ಸೇರಿದಂತೆ ಐದು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ಬರೆಯಲಿದ್ದಾರೆ.
  • ಏಪ್ರಿಲ್ 23: ಬೆಳಿಗ್ಗೆ ಭೌತಶಾಸ್ತ್ರ (Physics) ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ (Chemistry).
  • ಏಪ್ರಿಲ್ 24: ಬೆಳಿಗ್ಗೆ ಜೀವಶಾಸ್ತ್ರ (Biology) ಮತ್ತು ಮಧ್ಯಾಹ್ನ ಗಣಿತ (Mathematics).

ಹೈಟೆಕ್ ಭದ್ರತೆ:

ಪರೀಕ್ಷಾ ಅಕ್ರಮಗಳನ್ನು ತಡೆಯಲು ನೇಮಕಾತಿ ಪರೀಕ್ಷೆಗಳ ಮಾದರಿಯಲ್ಲೇ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲಾ 745 ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಮಲ್ಲೇಶ್ವರಂನಲ್ಲಿರುವ ಕೆಇಎ ಕೇಂದ್ರ ಕಚೇರಿಯಿಂದ ನೇರ ವೆಬ್‌ಕಾಸ್ಟಿಂಗ್ ಮೂಲಕ ನಿಗಾ ಇರಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಪರೀಕ್ಷಾ ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದಾರೆ. ಪರೀಕ್ಷೆಗೆ ಹಾಜರಾಗುವ ಮುನ್ನ ವಿದ್ಯಾರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಮಾರ್ಗಸೂಚಿಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳುವಂತೆ ಪ್ರಾಧಿಕಾರ ಮನವಿ ಮಾಡಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಂಭಮೇಳದ ಮೋನಾಲಿಸಾ ಗರ್ಭಿಣಿ: ಪೊಲೀಸರಿಗೆ ಮಾಹಿತಿ ನೀಡಿದ ಪತಿ ಫರ್ಮಾನ್ – Kannada News | Monalisa Bhosle husband Farman Khan said she is pregnant

ಕುಂಭಮೇಳದಲ್ಲಿ ರುದ್ರಾಕ್ಷಿ ಮಾಡುತ್ತಿದ್ದ ಯುವತಿ ಮೊನಲಿಸಾ ಭೋಸ್ಲೆಯ (Monalisa Bhosle) ಫೋಟೋಗಳು ವೈರಲ್ ಆಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿದ್ದ ಯುವತಿ ಇದೀಗ ಒಂದರ ಹಿಂದೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಮೊನಲಿಸಾ, ಫರ್ಮಾನ್ ಎಂಬಾತನನ್ನು ಕೇರಳದಲ್ಲಿ ವಿವಾಹವಾದರು. ಕೇರಳದ ಕೆಲವು ರಾಜಕೀಯ ಮುಖಂಡರು ಮುಂದೆ ನಿಂತು ಇವರ ಮದುವೆ ಮಾಡಿಸಿದ್ದರು. ಆದರೆ ಇದನ್ನು ಲವ್ ಜಿಹಾದ್ ಎಂದು ಮೊನಲಿಸಾ ಕುಟುಂಬದವರು ಆರೋಪಿಸಿದ್ದರು. ಅದಾದ ಬಳಿಕ ಮೊನಲಿಸಾ, ಅಪ್ರಾಪ್ತೆ ಎಂದು ಆರೋಪಿಸಿ ಪತಿ ಫರ್ಮಾನ್ ಮೇಲೆ ಪೋಕ್ಸೊ ಸಹ ದಾಖಲಾಯ್ತು. ಬಳಿಕ ಮೊನಲಿಸಾ ನಾಪತ್ತೆ ಆಗಿದ್ದಾಳೆ ಎಂದು ಪತಿ ಫರ್ಮಾನ್ ಪೊಲೀಸರಿಗೆ ದೂರು ನೀಡಿದರು. ಇದೀಗ ಮೊನಲಿಸಾ ಗರ್ಭಿಣಿ ಎಂದು ಫರ್ಮಾನ್ ಪೊಲೀಸರ ಬಳಿ ಹೇಳಿದ್ದಾರೆ.

ಮೋನಾಲಿಸಾ ಮತ್ತು ಫರ್ಮನ್ ಖಾನ್ ಕಳೆದ ಮಾರ್ಚ್ ತಿಂಗಳಿನಲ್ಲಿ ಕೇರಳದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಸ್ಥಳೀಯ ನಾಯಕರು ಮತ್ತು ಪೊಲೀಸರ ಸಮ್ಮುಖದಲ್ಲೇ ಈ ವಿವಾಹ ನಡೆದಿತ್ತು. ಆದರೆ, ಈ ಮದುವೆ ಮೊದಲಿನಿಂದಲೂ ಹಲವು ವಿವಾದಗಳಿಗೆ ಕಾರಣವಾಗಿದೆ. ಮೋನಾಲಿಸಾ ಅವರ ಕುಟುಂಬದವರು ಆಕೆ ಇನ್ನೂ ಅಪ್ರಾಪ್ತ ವಯಸ್ಕಳು (Minor) ಎಂದು ಆರೋಪಿಸಿದ್ದರು. ಈ ಕುರಿತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ನಡೆಸಿದ ತನಿಖೆಯಲ್ಲಿ, ಮದುವೆಯ ಸಮಯದಲ್ಲಿ ಆಕೆಗೆ ಸುಮಾರು 16 ವರ್ಷ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಫರ್ಮನ್ ಖಾನ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬಾಯ್​​ಫ್ರೆಂಡ್ ಜೊತೆ ಕೇರಳದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಂಭಮೇಳ ಮೊನಲಿಸ

ತನ್ನ ಕುಟುಂಬದವರು ತನ್ನನ್ನು ಅಣ್ಣನಂತಿರುವ ಸೋದರ ಸಂಬಂಧಿಯ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದರು ಎಂದು ಮೋನಾಲಿಸಾ ಈ ಹಿಂದೆ ಆರೋಪಿಸಿದ್ದರು. ಆ ಕಷ್ಟದ ಸಮಯದಲ್ಲಿ ಫರ್ಮನ್ ತನಗೆ ಬೆನ್ನೆಲುಬಾಗಿ ನಿಂತರು ಎಂದು ಆಕೆ ಹೇಳಿಕೊಂಡಿದ್ದರು. ಮೋನಾಲಿಸಾ ತಂದೆ ನೀಡಿದ ದೂರಿನ ಮೇರೆಗೆ ಮಧ್ಯಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಕೇರಳ ಹೈಕೋರ್ಟ್ ಫರ್ಮನ್ ಖಾನ್ ಅವರ ಬಂಧನಕ್ಕೆ ಮೇ 20 ರವರೆಗೆ ತಡೆಯಾಜ್ಞೆ ನೀಡಿದೆ.

ಮೊನಲಿಸಾರನ್ನು ವಿಚಾರಣೆಗೆಂದು ಮಧ್ಯ ಪ್ರದೇಶ ಪೊಲೀಸರು ಕರೆದಿದ್ದು, ಮೊನಲಿಸಾ ಗರ್ಭಿಣಿ ಆಗಿರುವ ಕಾರಣ ಪ್ರಯಾಣ ಸಾಧ್ಯವಿಲ್ಲ ಎಂದು ಫರ್ಮಾನ್ ಹೇಳಿದ್ದಾರೆ. ಫರ್ಮಾನ್ ಖಾನ್ ನೀಡಿರುವ ‘ಗರ್ಭಿಣಿ’ ಎಂಬ ಮಾಹಿತಿಯನ್ನು ಪೊಲೀಸರು ಈಗ ವೈದ್ಯಕೀಯ ವರದಿಗಳ ಮೂಲಕ ಪರಿಶೀಲಿಸುತ್ತಿದ್ದಾರೆ. ವರದಿ ಬಂದ ನಂತರವಷ್ಟೇ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಮೋನಾಲಿಸಾ ಭೋಸಲೆ ಮತ್ತು ಫರ್ಮಾನ್ ಖಾನ್ ಅವರ ಈ ಅಂತರಧರ್ಮೀಯ ವಿವಾಹ ಮತ್ತು ವಯಸ್ಸಿನ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೇಲೂರಿನಲ್ಲಿ ಪ್ರಕೃತಿ ವಿಸ್ಮಯ: ಚನ್ನಕೇಶವನ ಪಾದ ಸೋಕಿದ ಸೂರ್ಯರಶ್ಮಿ! ವರ್ಷಕ್ಕೊಮ್ಮೆ ನಡೆಯುವ ಅಪರೂಪದ ವಿದ್ಯಮಾನಕ್ಕೆ ಭಕ್ತರು ಫಿದಾ – Kannada News | Hoysala Architectural Wonder: Belur Chennakeshava Temple’s Annual Sun Ray Miracle

ಹಾಸನ, ಏ.22 : ವಿಶ್ವವಿಖ್ಯಾತ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಇಂದು ಮುಂಜಾನೆ ಅಪರೂಪದ ಪ್ರಕೃತಿ ವಿಸ್ಮಯವೊಂದು ಸಂಭವಿಸಿದೆ. ಪ್ರತಿವರ್ಷದಂತೆ ಈ ಬಾರಿಯೂ ಸೂರ್ಯನ ಕಿರಣಗಳು ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಿ, ಚನ್ನಕೇಶವಸ್ವಾಮಿಯ ಮೂಲ ವಿಗ್ರಹಕ್ಕೆ ‘ಕಿರಣಾಭಿಷೇಕ’ ಮಾಡಿವೆ. ಹೊಯ್ಸಳರ ವಾಸ್ತುಶಿಲ್ಪದ ವೈಭವಕ್ಕೆ ಸಾಕ್ಷಿಯಾಗಿರುವ ಈ ದೇಗುಲದಲ್ಲಿ ಪ್ರತಿವರ್ಷ ಏಪ್ರಿಲ್ 21 ಅಥವಾ 22ರಂದು ಈ ವಿಶೇಷ ವಿದ್ಯಮಾನ ಘಟಿಸುತ್ತದೆ. ಇಂದು ಮುಂಜಾನೆ ಸೂರ್ಯೋದಯದ ವೇಳೆಗೆ ಭಕ್ತರು ಈ ಮನೋಹರ ದೃಶ್ಯಕ್ಕೆ ಸಾಕ್ಷಿಯಾದರು. ಮುಂಜಾನೆ ಸರಿಯಾಗಿ 6 ಗಂಟೆ 15 ನಿಮಿಷಕ್ಕೆ ಸೂರ್ಯನ ರಶ್ಮಿಗಳು ದೇಗುಲದ ಮುಖ್ಯ ದ್ವಾರದ ಮೂಲಕ ಗರ್ಭಗುಡಿಯನ್ನು ಪ್ರವೇಶಿಸಿದವು. ನಂತರ ನವರಂಗ ದ್ವಾರವನ್ನು ದಾಟಿದ ಸೂರ್ಯ ಕಿರಣಗಳು ನೇರವಾಗಿ ಶ್ರೀ ಚನ್ನಕೇಶವಸ್ವಾಮಿಯ ಮೂಲ ವಿಗ್ರಹವನ್ನು ಸ್ಪರ್ಶಿಸಿದವು. ಇಲ್ಲಿ ಮತ್ತೊಂದು ವಿಶೇಷವೆಂದರೆ, ಬೇಲೂರಿನ ಪ್ರಸಿದ್ಧ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಮುಗಿದ ನಂತರವೇ ಈ ಸೂರ್ಯ ಕಿರಣಗಳ ಪ್ರವೇಶವಾಗುತ್ತದೆ. ಹೊಯ್ಸಳ ಶಿಲ್ಪಿಗಳ ಅದ್ಭುತ ಗಣಿತ ಶಾಸ್ತ್ರ ಮತ್ತು ಖಗೋಳ ಜ್ಞಾನಕ್ಕೆ ಈ ಘಟನೆ ಕನ್ನಡಿ ಹಿಡಿದಂತಿದೆ. ವರ್ಷಕ್ಕೊಮ್ಮೆ ಮಾತ್ರ ನಡೆಯುವ ಈ ಸೂರ್ಯ ಕಿರಣದ ಅಭಿಷೇಕವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ದೇಗುಲದ ಆವರಣದಲ್ಲಿ ಜಮಾಯಿಸಿದ್ದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tulasi: ರಾಮ ತುಳಸಿ ಮತ್ತು ಕೃಷ್ಣ ತುಳಸಿ ನಡುವಿನ ವ್ಯತ್ಯಾಸವೇನು? ಗುರುತಿಸುವುದು ಹೇಗೆ ? – Kannada News | Tulasi: Spiritual and Medicinal Benefits of Rama and Krishna Tulasi Explained

ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಕೇವಲ ಒಂದು ಔಷಧೀಯ ಸಸ್ಯವಲ್ಲ, ಬದಲಾಗಿ ಅತ್ಯಂತ ಪವಿತ್ರವಾದ ಆಧ್ಯಾತ್ಮಿಕ ಸಸ್ಯವೆಂದು ಪರಿಗಣಿಸಲಾಗಿದೆ. ಇದನ್ನು ಭಕ್ತರು ಪ್ರೀತಿಯಿಂದ “ತಾಯಿ ತುಳಸಿ” ಎಂದು ಕರೆಯುತ್ತಾರೆ. ಮನೆಯ ಮುಂಭಾಗದಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಆ ಮನೆಯಲ್ಲಿ ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂಬುದು ಶತಮಾನಗಳ ನಂಬಿಕೆ. ವಿಶೇಷವಾಗಿ ವೈಷ್ಣವ ಸಂಪ್ರದಾಯದಲ್ಲಿ ತುಳಸಿಗೆ ಅತ್ಯುನ್ನತ ಸ್ಥಾನವಿದ್ದು, ಇದನ್ನು ಭಗವಾನ್ ವಿಷ್ಣುವಿನ ಪ್ರಿಯ ಸಸ್ಯವೆಂದು ಪರಿಗಣಿಸಿ ಪ್ರತಿಯೊಂದು ಪೂಜೆಯಲ್ಲೂ ಇದರ ಎಲೆಗಳನ್ನು ಕಡ್ಡಾಯವಾಗಿ ಬಳಸಲಾಗುತ್ತದೆ.

ರಾಮ ತುಳಸಿಯ ವಿಶೇಷತೆಗಳು:

ತುಳಸಿಯಲ್ಲಿ ಪ್ರಮುಖವಾಗಿ ಎರಡು ವಿಧಗಳಿದ್ದು, ಅದರಲ್ಲಿ ರಾಮ ತುಳಸಿಯು ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಭೇದವಾಗಿದೆ. ಇದರ ಎಲೆಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಮೃದುವಾಗಿರುತ್ತವೆ ಮತ್ತು ಪ್ರಕಾಶಮಾನವಾದ ತಿಳಿ ಹಸಿರು ಬಣ್ಣವನ್ನು ಹೊಂದಿರುತ್ತವೆ. ಇದರ ಸುವಾಸನೆಯು ಹಗುರವಾಗಿ, ಸಿಹಿಯಾಗಿ ಮತ್ತು ಸ್ವಲ್ಪ ಮಟ್ಟಿಗೆ ಲವಂಗದ ಪರಿಮಳವನ್ನು ನೆನಪಿಸುತ್ತದೆ. ಆಧ್ಯಾತ್ಮಿಕವಾಗಿ ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದ್ದು, ಸೌಮ್ಯವಾದ ಗುಣಗಳನ್ನು ಹೊಂದಿರುವ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೈನಂದಿನ ಆರೋಗ್ಯ ರಕ್ಷಣೆಗೆ ಸೂಕ್ತವಾಗಿದೆ.

ಕೃಷ್ಣ ತುಳಸಿಯ ಔಷಧೀಯ ಗುಣಗಳು:

ಕೃಷ್ಣ ತುಳಸಿ ಅಥವಾ ಶ್ಯಾಮ ತುಳಸಿಯು ತನ್ನ ಕಡು ಹಸಿರು ಅಥವಾ ನೇರಳೆ ಬಣ್ಣದ ಎಲೆಗಳಿಂದ ವಿಶಿಷ್ಟವಾಗಿ ಗುರುತಿಸಲ್ಪಡುತ್ತದೆ. ರಾಮ ತುಳಸಿಗೆ ಹೋಲಿಸಿದರೆ ಇದರ ಸುವಾಸನೆ ತೀಕ್ಷ್ಣವಾಗಿರುತ್ತದೆ ಮತ್ತು ರುಚಿಯಲ್ಲಿ ಸ್ವಲ್ಪ ಕಹಿ ಅಥವಾ ಖಾರವಾಗಿರುತ್ತದೆ. ಆಯುರ್ವೇದದಲ್ಲಿ ಕೃಷ್ಣ ತುಳಸಿಯನ್ನು ಅತ್ಯಂತ ಶಕ್ತಿಶಾಲಿ ಔಷಧೀಯ ಸಸ್ಯವೆಂದು ಪರಿಗಣಿಸಲಾಗಿದೆ. ಇದರಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕ (Antioxidant) ಗುಣಗಳಿದ್ದು, ಜ್ವರ, ತೀವ್ರ ಕೆಮ್ಮು, ಉಸಿರಾಟದ ಸಮಸ್ಯೆಗಳು ಮತ್ತು ಚರ್ಮದ ಅಸ್ವಸ್ಥತೆಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ. ಧಾರ್ಮಿಕವಾಗಿ ಇದು ಶ್ರೀಕೃಷ್ಣನ ಶ್ಯಾಮಲ ವರ್ಣವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ರಾಮ ತುಳಸಿ ಮತ್ತು ಕೃಷ್ಣ ತುಳಸಿ ನಡುವಿನ ವ್ಯತ್ಯಾಸ:

ರಾಮ ಮತ್ತು ಕೃಷ್ಣ ತುಳಸಿಗಳ ನಡುವೆ ಬಣ್ಣ, ರುಚಿ ಮತ್ತು ಔಷಧೀಯ ತೀವ್ರತೆಯಲ್ಲಿ ವ್ಯತ್ಯಾಸಗಳಿದ್ದರೂ, ವೈಜ್ಞಾನಿಕವಾಗಿ ಇವೆರಡೂ ‘ಒಸಿಮಮ್ ಟೆನುಯಿಫ್ಲೋರಮ್’ ಎಂಬ ಒಂದೇ ಜಾತಿಗೆ ಸೇರಿವೆ. ರಾಮ ತುಳಸಿಯು ಸಾಮಾನ್ಯ ಆರೋಗ್ಯ ಮತ್ತು ಮಾನಸಿಕ ಶಾಂತಿಗೆ ಪೂರಕವಾಗಿದ್ದರೆ, ಕೃಷ್ಣ ತುಳಸಿಯು ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗೆ ಈ ಎರಡೂ ಪ್ರಭೇದಗಳು ಪ್ರಕೃತಿ ನಮಗೆ ನೀಡಿದ ಅಮೂಲ್ಯ ಸಂಪತ್ತಾಗಿದ್ದು, ಆಧ್ಯಾತ್ಮಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಇವುಗಳ ಪಾತ್ರ ಅನನ್ಯವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:56 am, Wed, 22 April 26

Source link

ಪಹಲ್ಗಾಮ್ ದಾಳಿಯ ಈ ಭೀಕರ ವಿಡಿಯೋ ಎಂದಿಗೂ ಮರೆಯುವಂತಿಲ್ಲ: ಪ್ರವಾಸಿಗರನ್ನು ಸಾವಿನ ದವಡೆಗೆ ತಳ್ಳಿದ್ದು ಯಾರು? – Kannada News | Pahalgam Attack Video: ‘Allah Hu Akbar’ Chant Raises Serious Questions on Operator’s Intent

ಶ್ರೀನಗರ, ಏ.22: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಗೆ ಇಂದು (ಏ.22) ಒಂದು ವರ್ಷ. ಈ ಘಟನೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಆದರೆ ಈ ಭೀಕರ ಘಟನೆ ನಡೆಯುದಕ್ಕೂ ಮುನ್ನ ಏನಾಗಿತ್ತು ಎಂಬ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿನ ‘ಆಪರೇಟರ್’ ವರ್ತನೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರವಾಸಿಗರು ಸಂಚರಿಸುತ್ತಿದ್ದ ವೇಳೆ ಹಠಾತ್ ಗುಂಡಿನ ದಾಳಿ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಆಪರೇಟರ್ ಒಬ್ಬರು “ಅಲ್ಲಾ ಹು ಅಕ್ಬರ್” ಎಂದು ಜಪಿಸುತ್ತಿರುವುದು ಕೇಳಿಸುತ್ತದೆ. ಆದರೆ, ಆತ ಆತಂಕಗೊಂಡ ಪ್ರವಾಸಿಗರನ್ನು ರಕ್ಷಿಸುವ ಬದಲು, ಗುಂಡಿನ ದಾಳಿ ನಡೆಯುತ್ತಿದ್ದ ದಿಕ್ಕಿನತ್ತಲೇ ಅವರನ್ನು ತಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಬಳಕೆದಾರರು ಆಪರೇಟರ್‌ನ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದರೂ ಆಪರೇಟರ್ ಪ್ರವಾಸಿಗರನ್ನು ಸುರಕ್ಷಿತ ಜಾಗಕ್ಕೆ ಕರೆದೊಯ್ಯುವ ಬದಲು ಫೈರಿಂಗ್ ಜೋನ್ ಕಡೆಗೆ ಏಕೆ ಸಾಗಿಸಿದ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.  ಇದೀಗ ಈ ಬಗ್ಗೆ  ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

‘ಪಂಚಾಯತ್’ ನಟನ ಮೇಲೆ ಜಾತಿ ತಾರತಮ್ಯ; ಕರ್ನಾಟಕದ ದೇವಸ್ಥಾನದಲ್ಲಿ ಪ್ರವೇಶ ನಿರಾಕರಣೆ – Kannada News | Panchayat Actor Vinod Suryavanshi Reveals Shocking Caste Discrimination in Karnataka Village

ಜನಪ್ರಿಯ ವೆಬ್ ಸರಣಿ ‘ಪಂಚಾಯತ್’ನಲ್ಲಿ ಕಾರ್ಯದರ್ಶಿಯ ಪಾತ್ರ ನಿರ್ವಹಿಸಿದ ನಟ ವಿನೋದ್ ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ಜಾತಿ ತಾರತಮ್ಯದ ಬಗ್ಗೆ ಆಘಾತಕಾರಿ ವಿಷಯ ಬಹಿರಂಗಪಡಿಸಿದ್ದಾರೆ. ಕರ್ನಾಟಕದ ಹಳ್ಳಿಯೊಂದರಲ್ಲಿ ತಾವು ಮತ್ತು ತಮ್ಮ ಕುಟುಂಬ ಜಾತಿ ತಾರತಮ್ಯವನ್ನು ಎದುರಿಸಬೇಕಾಯಿತು ಎಂದು ಅವರು ಹೇಳಿದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಅದರ ಬಗ್ಗೆ ಮುಕ್ತವಾಗಿ ಮಾತನಾಡಿದರು. ಇಂದಿಗೂ ತಮ್ಮ ಕುಟುಂಬಕ್ಕೆ ದೇವಾಲಯಗಳು ಅಥವಾ ಜನರ ಮನೆಗಳಿಗೆ ಪ್ರವೇಶಿಸಲು ಅವಕಾಶವಿಲ್ಲ ಎಂದು ಅವರು ಹೇಳಿದರು. ಆರ್‌ಜೆ ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ವಿನೋದ್, ‘ಕರ್ನಾಟಕದ ನನ್ನ ಗ್ರಾಮದಲ್ಲಿ ಜಾತಿ ತಾರತಮ್ಯ ಇನ್ನೂ ಇದೆ. ಆ ಗ್ರಾಮದಲ್ಲಿ ಎರಡು ಪ್ರದೇಶಗಳಿವೆ. ಒಂದು ಮೇಲ್ಜಾತಿಗೆ ಮತ್ತು ಇನ್ನೊಂದು ಕೆಳಜಾತಿಗೆ. ದಲಿತ ಪ್ರದೇಶವು ಗ್ರಾಮದಿಂದ ಪ್ರತ್ಯೇಕವಾಗಿದೆ’ ಎಂದು ಹೇಳಿದರು.

‘ನಾನು 12 ವರ್ಷದವನಿದ್ದಾಗ, ನಾನು ನನ್ನ ತಂದೆಯೊಂದಿಗೆ ನನ್ನ ಹಳ್ಳಿಗೆ ಹೋಗಿದ್ದೆ. ಅಲ್ಲಿ ನಾವು ಹೋಟೆಲ್‌ನಲ್ಲಿ ಊಟ ಮಾಡಿ ನಂತರ ನಮ್ಮ ಪಾತ್ರೆಗಳನ್ನು ನಾವೇ ತೊಳೆಯಬೇಕಾಗಿತ್ತು. ಊಟದ ಬಿಲ್ ಅನ್ನು ನಾವೇ ಪಾವತಿಸಿದ್ದೆವು. ಆದರೆ ನಮ್ಮನ್ನು ಇನ್ನೂ ಹಾಗೆಯೇ ನಡೆಸಿಕೊಳ್ಳಲಾಗುತ್ತಿತ್ತು. ಇಂದಿಗೂ, ನನ್ನ ಹಳ್ಳಿಯಲ್ಲಿ ಒಂದು ದೇವಸ್ಥಾನವಿದೆ, ಅಲ್ಲಿ ನಮಗೆ ಹೋಗಲು ಅವಕಾಶವಿಲ್ಲ. ನನ್ನ ಹೆತ್ತವರು ಯಾವಾಗಲೂ ಅಳುವುದನ್ನು ನಾನು ನೋಡಿದ್ದೇನೆ. ಹಬ್ಬಗಳು ಇದ್ದಾಗ, ನನಗೆ ಇನ್ನೂ ಕೆಟ್ಟದೆನಿಸುತ್ತಿತ್ತು. ದೀಪಾವಳಿಯಂತಹ ಹಬ್ಬಗಳು ಏಕೆ ಬರುತ್ತವೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಏಕೆಂದರೆ ನಾವು ಇತರರಂತೆ ಹಬ್ಬಗಳನ್ನು ಆಚರಿಸಲು ಸಾಧ್ಯವಿಲ್ಲ. ಅದು ಇನ್ನೂ ಕೆಟ್ಟದೆನಿಸುತ್ತಿತ್ತು. ನಮ್ಮ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು. ಯಾರಾದರೂ ನಮಗೆ ಸಹಾಯ ಮಾಡಿದಾಗ ಮಾತ್ರ ನಾವು ಹಬ್ಬಗಳನ್ನು ಆಚರಿಸಲು ಸಾಧ್ಯವಾಯಿತು’ ಎಂದಿದ್ದರು ಅವರು.

ಮನರಂಜನಾ ಉದ್ಯಮಕ್ಕೆ ಪ್ರವೇಶಿಸುವ ಮೊದಲು, ವಿನೋದ್ ಹಣ ಸಂಪಾದಿಸಲು ಅನೇಕ ಸಣ್ಣ ಮತ್ತು ದೊಡ್ಡ ಕೆಲಸಗಳನ್ನು ಮಾಡುತ್ತಿದ್ದರು. ‘ನಾನು ಮೊದಲು ಲಿಫ್ಟ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದೆ, ಅದಕ್ಕೆ ನನಗೆ ತಿಂಗಳಿಗೆ 1600 ರೂ. ಸಿಗುತ್ತಿತ್ತು. ನಂತರ, ಆಫೀಸ್ ಬಾಯ್ ಆಗಿ, ನಂತರ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೆ. ನಾನು 12 ಗಂಟೆಗಳ ನಿರಂತರ ಕರ್ತವ್ಯವನ್ನು ಮಾಡುತ್ತಿದ್ದೆ. ಕೆಲವೊಮ್ಮೆ ಜನರು ನನ್ನನ್ನು ನಿಂದಿಸುತ್ತಿದ್ದರು. ನಾನು ಬಹಳಷ್ಟು ಸಹಿಸಿಕೊಂಡಿದ್ದೇನೆ. ಯಾವುದೇ ಕೆಲಸವು ಚಿಕ್ಕದಲ್ಲ ಎಂದು ಜನರು ಹೇಳುತ್ತಾರೆ, ಆದರೆ ಒಬ್ಬ ವ್ಯಕ್ತಿಯ ಮೌಲ್ಯವನ್ನು ಅವನ ಕೆಲಸದ ಮಟ್ಟದಿಂದ ನಿರ್ಧರಿಸಲಾಗುತ್ತದೆ ಎಂದು ನಾನು ನೋಡಿದ್ದೇನೆ. ಕೆಲಸ ದೊಡ್ಡದಾದಷ್ಟೂ ಅವನಿಗೆ ಹೆಚ್ಚಿನ ಗೌರವ ಸಿಗುತ್ತದೆ’ ಎಂದಿದ್ದಾರೆ ವಿನೋದ್.

ವಿನೋದ್ ಸೂರ್ಯವಂಶಿ ಅವರು ‘ಜಾನ್ವಾರ್’, ‘ಥಾಮ’, ‘ಸತ್ಯಮೇವ್ ಜಯತೆ’ ಮತ್ತು ‘ಜಾಲಿ ಎಲ್‌ಎಲ್‌ಬಿ 3’ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ತಂಗಿ ತಂಗಿ ಎನ್ನುತ್ತಿದ್ದವನ ಜತೆಗೇ ಓಡಿಹೋಗಿ ಮದುವೆಯಾದ್ಳು!’ ಪತ್ನಿಯ ವಂಚನೆ ಬಗ್ಗೆ ಪತಿಯ ಅಳಲು – Kannada News | Mandya Betrayal: ‘She Eloped with the Man Who Called Her Sister,’ Alleges Husband After Wife Runs Away with His Friend

ಮಂಡ್ಯ, ಏಪ್ರಿಲ್ 22: ಪ್ರೀತಿಸಿ ಮದುವೆಯಾದ ಆಟೋ ಚಾಲಕ ಸಾಗರ್ ಎಂಬವರ ಪತ್ನಿ ಗಂಡನ ಸ್ನೇಹಿತನ ಜತೆ ಓಡಿಹೋಗಿ ಮದುವೆಯಾದ ವಿಲಕ್ಷಣ ಘಟನೆ ಮಂಡ್ಯದ ಬನ್ನಂಗಾಡಿ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಆಟೋ ಚಾಲಕ ಸಾಗರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ‘ಪ್ರೀತಿಸಿ ಮದುವೆಯಾದ ರಕ್ಷಿತಾ, ತಂಗಿ ತಂಗಿ ಎನ್ನುತ್ತಿದ್ದವನ ಜತೆಗೇ ಓಡಿಹೋಗಿದ್ದಾಳೆ’ ಎಂದು ಸಾಗರ್ ಆರೋಪಿಸಿದ್ದಾರೆ. ರಕ್ಷಿತಾ 22 ಗ್ರಾಂ ಚಿನ್ನ ಮತ್ತು 1 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಹೋಗಿದ್ದಾರೆಂದು ಸಾಗರ್ ಆರೋಪಿಸಿದ್ದಾರೆ. ಪತ್ನಿಯ ಬಗ್ಗೆ ಸಾಗರ್ ಮಾಡಿರುವ ಆರೋಪಗಳು ಈ ವಿಡಿಯೋದಲ್ಲಿದೆ.

ವಿವರಗಳಿಗೆ ಓದಿ: ಮದುವೆಯಾದ ಎರಡೇ ವರ್ಷಕ್ಕೆ ಪತಿಯ ಸ್ನೇಹಿತನ ಜತೆ ಮಹಿಳೆ ಪರಾರಿ! ದೇಗುಲದಲ್ಲಿ ಮದುವೆಯಾಗಿ ಫೋಟೋ ಸ್ಟೇಟಸ್ ಹಾಕಿದ ಕಿಲಾಡಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಮಿರ್ ಮಾತಿಗೆ ಮಣಿದ ರಣವೀರ್ ಸಿಂಗ್; 10 ಕೋಟಿ ಮರಳಿಸಿದ ‘ಧುರಂಧರ್’ ನಟ – Kannada News | Ranveer Singh Returns 10 Cr Advance for ‘Don 3’ After Aamir Khan’s Mediation

ರಣವೀರ್ ಸಿಂಗ್ ಹಾಗೂ ‘ಡಾನ್ 3’ ನಿರ್ದೇಶಕ ಫರ್ಹಾನ್ ಅಖ್ತರ್ ಮಧ್ಯೆ ಕಿರಿಕ್ ಆಗಿತ್ತು. ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ಹಿಂದಕ್ಕೆ ಸರಿದರು. ಇದಕ್ಕೆ ಪ್ರತಿಯಾಗಿ ರಣವೀರ್ 40 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಫರ್ಹಾನ್ ಪಟ್ಟು ಹಿಡಿದಿದ್ದರು. ಈ ವಿಷಯದಲ್ಲಿ ಆಮಿರ್ ಖಾನ್ (Aamir Khan) ಮಧ್ಯಸ್ಥಿಕೆ ವಹಿಸಿದ್ದರು. ಈಗ ಆಮಿರ್ ಮಾತಿಗೆ ರಣವೀರ್ ಗೌರವ ನೀಡಿದ್ದಾರೆ. ತಾವು ತೆಗೆದುಕೊಂಡಿದ್ದ 10 ಕೋಟಿ ರೂಪಾಯಿ ಅಡ್ವಾನ್ಸ್ ಹಣವನ್ನು ಮರಳಿಸಲು ರಣವೀರ್ ನಿರ್ಧರಿಸಿದ್ದಾರೆ.

‘ಡಾನ್’ ಹಾಗೂ ‘ಡಾನ್ 2’ ಚಿತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಆ ಬಳಿಕ ‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ಅವರ ಆಯ್ಕೆ ಮಾಡಲಾಯಿತು. ಈ ಚಿತ್ರಕ್ಕೆ ಶಾರುಖ್ ಫ್ಯಾನ್ಸ್ ಸಾಕಷ್ಟು ವಿರೋಧ ಹೊರಹಾಕಿದರು. ಆದರೂ ನಿರ್ದೇಶಕ, ನಿರ್ಮಾಪಕ ಫರ್ಹಾನ್ ಅಖ್ತರ್ ಸಿನಿಮಾ ಮಾಡಿಯೇ ತೀರೋದಾಗಿ ಪಟ್ಟು ಹಿಡಿದರು. ಟೀಸರ್ ಕೂಡ ರಿಲೀಸ್ ಆಯಿತು. ‘ಧುರಂಧರ್’ ಯಶಸ್ಸಿನ ಬಳಿಕ ರಣವೀರ್ ಸಿಂಗ್ ಬದಲಾದರು.

ಕಥೆ ವಿಷಯದಲ್ಲಿ ರಣವೀರ್ ಹಾಗೂ ಫರ್ಹಾನ್ ಮಧ್ಯೆ ಹೊಂದಾಣಿಕೆ ಸಾಧ್ಯವಾಗಿಲ್ಲ. ಈ ಕಾರಣದಿಂದ ರಣವೀರ್ ಹೊರ ಹೋಗಲು ನಿರ್ಧರಿಸಿದರು. ಈ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸ ಸಾಕಷ್ಟು ನಡೆದಿದ್ದು, ಆ ನಷ್ಟ ಭರಿಸಿ ಕೊಡಲು ರಣವೀರ್ 40 ಕೋಟಿ ರೂಪಾಯಿ ಕೊಡಬೇಕು ಎಂದು ಫರ್ಹಾನ್ ಪಟ್ಟು ಹಿಡಿದರು.

ಇದನ್ನೂ ಓದಿ: ‘ಧುರಂಧರ್ 2’ ನೋಡದಿದ್ದರೂ ಚಿತ್ರತಂಡದ ಸಾಧನೆಗೆ ಭೇಷ್ ಎಂದ ಆಮಿರ್ ಖಾನ್

ಇತ್ತೀಚೆಗೆ ಇವರ ಮಧ್ಯೆ ಆಮಿರ್ ಬಂದಿದ್ದರು ಎನ್ನಲಾಗಿತ್ತು. ಈ ಮಾತಕತೆ ಯಶಸ್ವಿ ಆಗಿದೆ. ಅಡ್ವಾನ್ಸ್ ಆಗಿ ಪಡೆದಿದ್ದ 10 ಕೋಟಿ ರೂಪಾಯಿ ಹಣವನ್ನು ರಣವೀರ್ ಹಿಂದಿರುಗಿಸಲು ಒಪ್ಪಿದ್ದಾರೆ. ಇಷ್ಟೇ ಅಲ್ಲ, ರಣವೀರ್ ಸಿಂಗ್ ಅವರ ಮುಂದಿನ ಚಿತ್ರವೊಂದಕ್ಕೆ ಫರ್ಹಾನ್ ಅವರನ್ನು ನಿರ್ಮಾಪಕರನ್ನಾಗಿ ಸೇರಿಸಿಕೊಳ್ಳುವ ಆಲೋಚನೆ ರಣವೀರ್​ಗೆ ಇದೆ. ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ರಣವೀರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ಈ ಬಗ್ಗೆ ರಣವೀರ್ ಆಗಲೀ ಫರ್ಹಾನ್ ಆಗಲಿ ಈ ಬಗ್ಗೆ ಮಾತನಾಡಿಲ್ಲ. ‘ಡಾನ್ 3’ ಸಿನಿಮಾ ನಿಲ್ಲೋದು ಬಹುತೇಕ ಖಚಿತವಾಗಿದೆ. ಶಾರುಖ್ ಖಾನ್ ಅವರು ಮತ್ತೆ ಈ ಸಿನಿಮಾ ಮಾಡಲು ಒಪ್ಪುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿದೇಶಿ ಮಹಿಳೆ ಮೇಲೆ ಅತ್ಯಾಚಾರದ ಆರೋಪ! ಹೋಂಸ್ಟೇ ಮಾಲೀಕ ಸೇರಿ ಇಬ್ಬರು ಅರೆಸ್ಟ್ – Kannada News | US Woman Raped in Kodagu Homestay: Police Arrest Two Including Owner in Kutta

ವಿದೇಶಿ ಮಹಿಳೆ ಮೇಲೆ ಅತ್ಯಾಚಾರದ ಆರೋಪ!

ಕೊಡಗು, ಏಪ್ರಿಲ್ 22: ಜಿಲ್ಲೆಯಲ್ಲಿ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊನ್ನಂಪೇಟೆ ತಾಲೂಕಿನ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕುಟ್ಟ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇನಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ದೇವಿ ವಿಲ್ಲಾ ಎಂಬ ಹೋಂಸ್ಟೇನಲ್ಲಿ ನಡೆದ ಘಟನೆ

ಅಮೆರಿಕದ ವಾಶಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು ದೇವಿ ವಿಲ್ಲಾ ಎಂಬ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ, ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಾಗಿರುವ ವೃಜೇಶ್ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಹೋಂಸ್ಟೇ ಮಾಲೀಕ ವಿಶಾಲ್ ಮೇಲೂ ಆರೋಪಗಳಿದ್ದು, ಅವರನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಹಿನ್ನೆಲೆ ಹಾಗೂ ಆರೋಪಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

(ಮಾಹಿತಿ ಅಪ್ಡೇಟ್ ಆಗುತ್ತಿದೆ)

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version