World Earth Day 2026: ನಮ್ಮ ಬದುಕಿಗೆ ಇರುವುದೊಂದೇ ಪೃಥ್ವಿ; ಭೂಮಿ ತಾಯಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ – Kannada News | World Earth Day 2026: What is the purpose of celebrating World Earth Day?

ಭೂಮಿ ತಾಯಿ ಮನುಷ್ಯ, ಸಸ್ಯ, ಪ್ರಾಣಿ ಸಂಕುಲ ಸೇರಿದಂತೆ  ಸಕಲ ಜೀವ ರಾಶಿಗಳನ್ನೂ ತನ್ನ ಒಡಲಿನಲ್ಲಿಟ್ಟು ಸಾಕಿ ಸಲಹುತ್ತಿದ್ದಾಳೆ. ಭೂಮಿ (Earth) ಪ್ರತಿ ಜೀವಿಯ ಬದುಕಿಗೆ ನೆಲೆಯಾಗಿದ್ದು, ಇದು ನಮ್ಮ ಬದುಕಿಗೆ ಅಗತ್ಯವಿರುವ ಗಾಳಿ, ನೀರು, ಆಹಾರವನ್ನು ಒದಗಿಸುತ್ತಿದೆ. ಆದರೆ ಇಂದು ಮನುಷ್ಯನ ಸ್ವಾರ್ಥಕ್ಕೆ ಭೂಮಿ ತನ್ನ ಸಮತೋಲನ, ಅಸ್ತಿತ್ವವನ್ನು ಕಳೆದುಕೊಂಡು ವಿನಾಶದತ್ತ ಹೆಜ್ಜೆ ಹಾಕುತ್ತಿದೆ. ನಗರೀಕರಣ, ಆಧುನೀಕರಣ ಹವಾಮಾನ ಬದಲಾವಣೆ, ಜೀವ ಸಂಕುಲಗಳ ನಾಶ, ಮಾಲಿನ್ಯ ಮತ್ತು ಅರಣ್ಯನಾಶ ಸೇರಿದಂತೆ ಇಡೀ ಪರಿಸರವೇ ನಾಶವಾಗಿ ಭೂಮಿಯ ಆರೋಗ್ಯ ಹದಗೆಡುತ್ತಿದೆ. ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಪೀಳಿಗೆಗಾಗಿ ಸಕಲ ಜೀವ ಸಂಕುಲಗಳ ಉಳಿವಿಗಾಗಿ ಪರಿಸರ ಮತ್ತು ಭೂಮಿಯನ್ನು ರಕ್ಷಿಸಬೇಕು ಎನ್ನುವ ಉದ್ದೇಶದಿಂದ ಏಪ್ರಿಲ್‌ 22 ರಂದು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ವಿಶ್ವ ಭೂ ದಿನದ ಇತಿಹಾಸವೇನು?

1969 ರಲ್ಲಿ ಯುನೆಸ್ಕೋ ಸಮ್ಮೇಳನದಲ್ಲಿ ಶಾಂತಿ ಕಾರ್ಯಕರ್ತ ಜಾನ್ ಮೆಕ್‌ಕಾನ್ನೆಲ್ ಮೊದಲು ಭೂ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮುಂದಿಟ್ಟರು. ನಂತರ 1970 ರಲ್ಲಿ ಅಮೆರಿಕದಲ್ಲಿ ಭೂ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.  ಆ ಸಮಯದಲ್ಲಿ ಮಾಲಿನ್ಯದ ಸಮಸ್ಯೆ ಅಲ್ಲಿ ತುಂಬಾ ಹೆಚ್ಚಾಗಿದ್ದ ಕಾರಣ, ಹಾಗೂ  1969 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ತೈಲ ಸೋರಿಕೆ ಘಟನೆ ನಂತರ ಯುಎಸ್ ಸೆನೆಟರ್ ಗೇಲಾರ್ಡ್ ನೆಲ್ಸನ್ ಪರಿಸರವನ್ನು ಉಳಿಸಲು ಒಂದು ಚಳುವಳಿಯನ್ನು ಪ್ರಾರಂಭಿಸಿದರು. ಇದರಲ್ಲಿ 20 ದಶಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಜನರು ರ್ಯಾಲಿಗಳನ್ನು ನಡೆಸಿ ಮಾಲಿನ್ಯದ ವಿರುದ್ಧ ಧ್ವನಿ ಎತ್ತಿದರು. ಈ ಆಂದೋಲನದ ಕಾರಣದಿಂದಾಗಿ, ಅಮೆರಿಕದಲ್ಲಿ ಪರಿಸರ ಸಂರಕ್ಷಣಾ ಸಂಸ್ಥೆ (ಇಪಿಎ) ರಚನೆಯಾಯಿತು ಮತ್ತು ಮಾಲಿನ್ಯವನ್ನು ತಡೆಯಲು ಹೊಸ ಕಾನೂನುಗಳನ್ನು ರೂಪಿಸಲಾಯಿತು. 1990 ರ ಹೊತ್ತಿಗೆ, ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲು ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಶ್ವ ಭೂ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.  ನಂತರ 2016 ರಲ್ಲಿ, ಭೂ ದಿನವನ್ನು ಹವಾಮಾನ ಸಂರಕ್ಷಣೆಗೆ ಮೀಸಲಿಡಲಾಯಿತು.

ವಿಶ್ವ ಭೂ ದಿನದ ಮಹತ್ವವೇನು?

  • ವಿಶ್ವ ಭೂ ದಿನವನ್ನು ಆಚರಿಸುವ ಉದ್ದೇಶವೆಂದರೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಭೂಮಿಯನ್ನು ರಕ್ಷಿಸಲು ಜನರನ್ನು ಪ್ರೇರೇಪಿಸುವುದು.
  • ಇಂದು ಮನುಷ್ಯನ ಸ್ವಾರ್ಥಕ್ಕೆ ಇಡೀ ಪರಿಸರವೇ ನಾಶವಾಗುತ್ತಿದೆ. ಇವುಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮುಂದಿನ ಪೀಳಿಗೆಗಾಗಿ ಸುಸ್ಥಿರ ಪರಿಸರವನ್ನು ನಿರ್ಮಿಸಲು ಜನರಿಗೆ ಶಿಕ್ಷಣ ನೀಡಲು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಗಿಡ ನೆಡುವುದು, ಸ್ವಚ್ಛತಾ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.  ಭೂ ದಿನವು ಕೇವಲ ಒಂದು ಆಚರಣೆಯಲ್ಲ, ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಇದನ್ನೂ ಓದಿ: ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಆರಿಸುವುದರ ಉದ್ದೇಶವೇನು?

ಭೂಮಿ ತಾಯಿಯ ರಕ್ಷಣೆಗೆ ನೀವು ಹೇಗೆ ಕೊಡುಗೆ ನೀಡಬಹುದು?

  • ಪ್ಲಾಸ್ಟಿಕ್ ಬದಲಿಗೆ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ.
  • ನಿಮ್ಮ ಮನೆ ಹತ್ತಿರ ಮರಗಳನ್ನು ನೆಡಿ ಅಥವಾ ಮರ ನೆಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.
  • ಸೌರ ಅಥವಾ ಪವನ ಶಕ್ತಿಯಂತಹ ನವೀಕರಿಸಬಹುದಾದಂತಹ ಪರ್ಯಾಯಗಳನ್ನು ಆರಿಸಿಕೊಳ್ಳಿ.
  • ನೀರನ್ನು ಉಳಿಸುವಂತಹ ಕಾರ್ಯಗಳನ್ನು ಮಾಡಿ.
  • ಆದಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸಿ.
  • ಸ್ವಚ್ಛತಾ ಕಾರ್ಯಗಳಲ್ಲಿ ಭಾಗವಹಿಸಿ.
  • ಸಾಮಾಜಿಕ ಮಾಧ್ಯಮ, ಅಭಿಯಾನಗಳು ಮತ್ತು ಕಾರ್ಯಕ್ರಮಗಳ ಮೂಲಕ ಜನರಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿ.
  • ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವ ಪರಿಸರ ಸ್ನೇಹಿ ಉತ್ಪನ್ನಗಳನ್ನು ಖರೀದಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿಕೃತಿ ದಹನ ಮಾಡಲು ಹೋಗಿ ಮಹಿಳೆಯ ದುಪಟ್ಟಾಗೆ ತಗುಲಿದ ಬೆಂಕಿ, ಪೊಲೀಸರಿಂದ ರಕ್ಷಣೆ – Kannada News | Close Call in Lucknow: Police Act Swiftly to Save Woman from Flames

ಲಕ್ನೋ, ಏಪ್ರಿಲ್ 22: ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪ್ರತಿಕೃತಿ ದಹನ ಮಾಡಲು ಹೋಗಿ ದುಪಟ್ಟಾಗೆ ಬೆಂಕಿ ತಗುಲಿರುವ ಘಟನೆ ವರದಿಯಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಉತ್ತರ ಪ್ರದೇಶ ಪೊಲೀಸರು ಕೂಡಲೇ ಓಡಿ ಬಂದು ದುಪಟ್ಟಾವನ್ನು ಎಳೆದು ಎಸೆದು ಮಹಿಳೆಯನ್ನು ರಕ್ಷಿಸಿದ್ದಾರೆ. ಪೊಲೀಸರು ಬರುವುದು ಒಂದು ನಿಮಿಷ ತಡವಾಗಿದ್ದರೂ ಮಹಿಳೆ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ನನ್ನ ಮೇಲೆ ಸುಳ್ಳು ಪೋಕ್ಸೋ ಕೇಸ್ ಹಾಕಿದ್ದಾರೆ, ಅದಿಕ್ಕೆ ಹೀಗೆ ಮಾಡಿದೆ’: 9ನೇ ಮಹಡಿಯಿಂದ ಹಾರಲು ಮುಂದಾಗಿದ್ದ ಯುವಕ! – Kannada News | Devanahalli Incident: Ex POCSO Accused Climbs Building Demanding Justice

9ನೇ ಮಹಡಿಯಿಂದ ಹಾರಲು ಮುಂದಾಗಿದ್ದ ಯುವಕ ಆನಂದ್Image Credit source: Tv9

ದೇವನಹಳ್ಳಿ, ಏಪ್ರಿಲ್ 22: ಬೈಪಾಸ್​​ನ ಖಾಸಗಿ ಅಪಾರ್ಟ್ಮೆಂಟ್ನ ಯುವಕನೋರ್ವ 9 ಮಹಡಿಗಳ ಬಿಲ್ಡಿಂಗ್ ಏರಿ ಹೈಡ್ರಾಮಾ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಯುವಕ ಆನಂದ್ ಪೋಕ್ಸೋ (POCSO) ಕೇಸ್​ನಲ್ಲಿ ಈಗಾಗಲೇ ಜೈಲೂಟದ ರುಚಿ ತಿಂದು ಇತ್ತೀಚೆಗಷ್ಟೇ ವಾಪಸಾಸಿದ್ದ ಬೆನ್ನಲ್ಲೇ ಮತ್ತೊಂದು ಅವಾಂತರ ಸೇಷ್ಟಿಸಿದ್ದಾನೆ. ನಿನ್ನೆ (21 ಏಪ್ರಿಲ್) ಮಧ್ಯಾಹ್ನ 12 ಗಂಟೆಯಿಂದಲೇ ಕೆಳಗೆ ಹಾರುವುದಾಗಿ ಬೆದರಿಕೆ ಹಾಕುತ್ತಿದ್ದವನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಆತನ ಹುಚ್ಚಾಟದ ಹಿಂದಿನ ಕಾರಣ ಬಹಿರಂಗವಾಗಿದೆ.

ಅಪ್ರಾಪ್ತೆಯನ್ನು ಮದುವೆಯಾಗಿ ಜೈಲಿಗೆ ಹೋಗಿದ್ದ

ಆನಂದ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಕಾಲೋನಿಯ ನಿವಾಸಿ. ಶಾಲಾ ಕಾಲೇಜು ದಿನಗಳಲ್ಲಿಯೇ ಅದೇ ಏರಿಯಾದ 14 ವರ್ಷದ ಅಪ್ರಾಪ್ತ ಬಾಲಕಿಯನ್ನು 2023 ರಲ್ಲಿ ಪ್ರೀತಿಸಿದ್ದ. ಕದ್ದು ಮುಚ್ಚಿ ಮದುವೆಯೂ ಆಗಿದ್ದ. ಅಪ್ರಾಪ್ತೆಯನ್ನು ಮದುವೆಯಾಗಿದ್ದಕ್ಕೆ ಆತನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿ ಜೈಲು ಸೇರಿದ್ದ. ಆದರೆ ಆರೋಪಿ ಆನಂದ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ. ಆಗಿದ್ದು ಆಗಿಹೋಯ್ತು ಎಂದು ಜೈಲಿನಿಂದ ಹೊರಬಂದ ನಂತರ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ.

ತನಗೆ ನ್ಯಾಯ ಬೇಕು, ಸ್ಥಳಕ್ಕೆ ಡಿಸಿ, ಕಮಿಷನರ್ ಬರಲೇಬೇಕು ಅಂತ ಪಟ್ಟು

ಹೀಗಿದ್ದರೂ ಆತನಿಗೆ ಸಮಾಧಾನವಿರಲಿಲ್ಲ. ಮತ್ತೆ ಅದೇ ಹುಡುಗಿಯ ಬಗ್ಗೆ ತಲೆಕೆಡಿಸಿಕೊಂಡಿದ್ದ. ಇದೇ ವಿಚಾರದಲ್ಲಿ ಹುಡುಗಿ ಕಡೆಯವರು ಮತ್ತೆ ಆನಂದ್ ಮೇಲೆ ಪೊಲೀಸರಿಗೆ ದೂರು ನೀಡಿದ್ದು, ಇತ್ತೀಚಿಗೆ ಗಲಾಟೆ ಕೇಸಲ್ಲೂ ಪೊಲೀಸರು ಕರೆದು ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ. ಇದೆಲ್ಲದರಿಂದ ಮನನೊಂದ ಆತ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವನಹಳ್ಳಿ ಬೈಪಾಸ್ ಬದಿಯಲ್ಲಿರೋ ಖಾಸಗಿ ಅಪಾರ್ಟ್ಮೆಂಟ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ತನಗೆ ನ್ಯಾಯ ಬೇಕು, ಸ್ಥಳಕ್ಕೆ ಡಿಸಿ, ಕಮಿಷನರ್ ಬರಲೇಬೇಕು ಅಂತ ಪಟ್ಟು ಹಿಡಿದಿದ್ದ.

ಇದನ್ನೂ ಓದಿ ನ್ಯಾಯ ಬೇಕು ಎಂದು 9 ಮಹಡಿಗಳ ಬಿಲ್ಡಿಂಗ್ ಏರಿ ಯುವಕನ ಹೈಡ್ರಾಮಾ: ಮನವೊಲಿಕೆಗೂ ಬಗ್ಗದೆ ಮೊಂಡಾಟ

ಯುವಕ ಪೊಲೀಸರ ವಶಕ್ಕೆ

ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಎಸ್​ಡಿಆರ್​ಎಫ್ ತಂಡ ಸ್ಥಳಕ್ಕಾಗಮಿಸಿ ಯುವಕನನ್ನು ಮನವೊಲಿಸಲು ಹರಸಾಹಸಪಟ್ಟಿದ್ದಾರೆ. ಸಂಜೆ 7 ಗಂಟೆಯಾದರೂ ಆನಂದ್ ಇಳಿಯಲು ಸಮ್ಮತಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾತುಕತೆ ನಡೆಸಿ, ಅವನ ಬೇಡಿಕೆಗಳನ್ನು ಪರಿಗಣಿಸುವ ಭರವಸೆ ನೀಡಿದ್ದಾರೆ. ಕೊನೆಗೆ ಸುಮಾರು ಏಳು ಗಂಟೆಗಳ ಕಾರ್ಯಾಚರಣೆ ಬಳಿಕ ಯುವಕನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲು ಸಾಧ್ಯವಾಗಿದ್ದು, ಬಳಿಕ ದೇವನಹಳ್ಳಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಆನಂದ್ ಹೇಳಿದ್ದೇನು?

ಕೆಳಗೆ ಬಂದ ಆನಂದ್ ಮಾಧ್ಯಮಗಳೊಂದಿಗೆ ಮಾತನಾಡಿ ತಾನು ಯಾವುದೇ ಹೈಡ್ರಾಮ ಮಾಡಿಲ್ಲ. ನನಗೆ ಬಹಳ ತೊಂದರೆ ಕೊಟ್ಟಿದ್ದಾರೆ. ಲವ್ ಮ್ಯಾಟರ್ ಅಲ್ಲಿ ನನ್ನ ಮೇಲೆ ಸುಳ್ಳು ಕಂಪ್ಲೇಂಟ್ ಕೊಟ್ಟಿದ್ರು. ಅದನ್ನ ವಾಪಾಸ್ ತಗೋಬೇಕು ಅಂತ ಹೀಗೆ ಮಾಡಿದ್ದೇನೆ ಎಂದಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Impact of Jealousy: ಮತ್ತೊಬ್ಬರ ಏಳಿಗೆ ನೋಡಿ ಅಸೂಯೆ ಪಡಬಾರದು ಯಾಕೆ ಗೊತ್ತಾ? ಕಾರಣ ಇಲ್ಲಿದೆ – Kannada News | Impact of Jealousy on Life: A Daily Spiritual Reflection from Dr. Basavaraj Guruji

ಒಬ್ಬ ವ್ಯಕ್ತಿ ಉನ್ನತ ಸ್ಥಾನಕ್ಕೇರಲು ಆತನ ಮನಸ್ಸತ್ವ, ಸಾಧನೆ, ಪರಿಶ್ರಮ, ಮನಸ್ಸಿನ ಭಾವನೆಗಳು ಮತ್ತು ಶ್ರದ್ಧಾಭಕ್ತಿಗಳು ಪ್ರಮುಖ ಕಾರಣಗಳಾಗಿವೆ. ಇವುಗಳ ಮೇಲೆ ಪರಿಪೂರ್ಣ ಗಮನವಿಟ್ಟಾಗ ಯಶಸ್ಸು ದೊರೆಯುತ್ತದೆ. ಆದರೆ, ಇತ್ತೀಚಿನ ಸಮಾಜದಲ್ಲಿ ಬೇರೆಯವರ ಅಭಿವೃದ್ಧಿ, ಶ್ರೇಯಸ್ಸು, ಕೀರ್ತಿ ಮತ್ತು ಹೆಸರು ಕಂಡಾಗ ಅವರಿಗೆ ತೊಂದರೆ ಕೊಡಬೇಕು ಅಥವಾ ಅವರನ್ನು ಹಾಳು ಮಾಡಬೇಕು ಎನ್ನುವ ಮನಸ್ಸತ್ವಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಇನ್ನೊಬ್ಬರ ಸಂಪಾದನೆ, ಕೀರ್ತಿ ಅಥವಾ ಏಳಿಗೆ ನೋಡಿ ಅಸೂಯೆ ಪಟ್ಟಾಗ ಅಥವಾ ವ್ಯಥೆ ಪಟ್ಟಾಗ ಅದರ ಪ್ರಭಾವ ನಮ್ಮ ಮೇಲೆ ನಕಾರಾತ್ಮಕವಾಗಿ ಬೀರುತ್ತದೆ. ಇದು ನಮ್ಮ ಸಮಯವನ್ನು ವ್ಯರ್ಥ ಮಾಡುತ್ತದೆ, ದೇಹದ ಧನಾತ್ಮಕ ಶಕ್ತಿಗಳನ್ನು ಕುಂದಿಸುತ್ತದೆ ಮತ್ತು ದೈವಬಲವನ್ನು ಕಡಿಮೆ ಮಾಡುತ್ತದೆ. ಬೇರೆಯವರ ನಾಶವನ್ನು ಬಯಸಿದಾಗ, ಆ ನಕಾರಾತ್ಮಕ ಭಾವನೆಗಳು ನಮ್ಮ ದೇಹದಲ್ಲಿನ 72 ಸಾವಿರ ನಾಡಿಗಳಲ್ಲಿ ವಿಷ ತುಂಬಿದಂತೆ. ಹಾಗಾಗಿ ಯಾರ ಏಳಿಗೆಯ ವಿಚಾರದಲ್ಲಿಯೂ ಅಸೂಯೆ ಪಡಬಾರದು.

ಮಹಾಭಾರತದ ದುರ್ಯೋಧನನ ಉದಾಹರಣೆ ಇದಕ್ಕೆ ಸೂಕ್ತ. ಎಲ್ಲ ಸಂಪತ್ತು ಮತ್ತು ಸಾಮ್ರಾಜ್ಯವಿದ್ದರೂ, ಕೇವಲ ಐದು ಪಾಂಡವರ ಬಗ್ಗೆ ಹೆಚ್ಚು ಚಿಂತೆ ಮಾಡಿ, ನಕಾರಾತ್ಮಕವಾಗಿ ಯೋಚಿಸಿದ್ದರಿಂದ ದುರ್ಯೋಧನನು ತನ್ನ ಇಡೀ ಸಾಮ್ರಾಜ್ಯ, ವಂಶ ಮತ್ತು ಕುಟುಂಬವನ್ನೇ ನಾಶ ಮಾಡಿಕೊಂಡ. ಇದು ಅಸೂಯೆಯ ಪರಿಣಾಮಕ್ಕೆ ಉತ್ತಮ ನಿದರ್ಶನ.

ಇದಕ್ಕೆ ವಿರುದ್ಧವಾಗಿ, ನಾವು ಮೆಚ್ಚುಗೆ ವ್ಯಕ್ತಪಡಿಸಿದಾಗ, ಶುಭಾಶಯ ಕೋರಿದಾಗ, ಸಂತೋಷ ವ್ಯಕ್ತಪಡಿಸಿದಾಗ ಅಥವಾ “ನಿಮಗೆ ಒಳ್ಳೆಯದಾಗಲಿ” ಎಂದು ಸಕಾರಾತ್ಮಕ ಭಾವನೆಯಿಂದ ಹೇಳಿದಾಗ, ನಮ್ಮಲ್ಲಿನ ನಕಾರಾತ್ಮಕ ಶಕ್ತಿಗಳು ಬೇಗ ಹೊರಟುಹೋಗಿ ಧನಾತ್ಮಕ ಶಕ್ತಿಗಳು ಆವರಿಸಿಕೊಳ್ಳುತ್ತವೆ. ಭಗವಂತ ನಮಗೂ ಅವಕಾಶಗಳನ್ನು ನೀಡುತ್ತಾನೆ. ಯಾರಾದರೂ ತಪ್ಪು ರೀತಿಯಿಂದ ಯಶಸ್ಸು ಗಳಿಸುತ್ತಿದ್ದರೂ, ಅಂತಹ ಯಶಸ್ಸು ತಕ್ಷಣ ಫಲ ನೀಡಿದರೂ, ಮುಂದಿನ ದಿನಗಳಲ್ಲಿ ಅದು ಅವರಿಗೆ ವಿಷವಾಗಿ ಪರಿಣಮಿಸಿ ರಿವರ್ಸ್ ಆಗುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ನಮ್ಮ ಜೀವನದಲ್ಲಿ ಕಷ್ಟಪಟ್ಟು ದುಡಿಯುವುದು (“ಕಾಯಕವೇ ಕೈಲಾಸ”), ನಮ್ಮ ಗುರಿ, ಸಾಧನೆ ಮಾಡುವ ಛಲ, ಅಟ ಮತ್ತು ಶ್ರಮ ಇವು ಇದ್ದಾಗ ಮಾತ್ರ ಮನುಷ್ಯನಿಗೆ ಏಳಿಗೆ ಸಾಧ್ಯ. ಸಮಾಜದಲ್ಲಿ ಮೂರು ವರ್ಗದ ಜನರಿರುತ್ತಾರೆ: ಕಷ್ಟಪಟ್ಟು ದುಡಿದು ಸಾಧಾರಣ ಜೀವನ ನಡೆಸುವವರು, ಸ್ವಲ್ಪ ಕಷ್ಟಪಟ್ಟು ಕಾಲಕ್ಕೆ ತಕ್ಕಂತೆ ಜೀವನ ಸಾಗಿಸುವವರು, ಮತ್ತು ಕಷ್ಟಪಡದೆಯೇ ಎಲ್ಲವನ್ನು ಪಡೆಯುವವರು. ಆದರೆ ಕಷ್ಟಪಡದೆ ಪಡೆದ ಸಂಪತ್ತು ಕೊನೆಯ ವ್ಯಕ್ತಿಯಲ್ಲಿ ಉಳಿಯುವುದಿಲ್ಲ.

ಒಂದೇ ತರಗತಿಯಲ್ಲಿ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ರೀತಿ ಪಾಠ ಮಾಡಿದರೂ, ಕೆಲವು ವಿದ್ಯಾರ್ಥಿಗಳು ಸೂಕ್ಷ್ಮತೆಯಿಂದ ಗ್ರಹಿಸುತ್ತಾರೆ, ಕೆಲವರು ಮಧ್ಯಮವಾಗಿ, ಮತ್ತೆ ಕೆಲವರು ನಿರ್ಲಕ್ಷಿಸುತ್ತಾರೆ. ಹೀಗಾಗಿ, ಆ ವಿದ್ಯಾರ್ಥಿಗಳಲ್ಲೇ ಡಾಕ್ಟರ್, ಇಂಜಿನಿಯರ್, ರೈತ, ವ್ಯಾಪಾರಿ, ದೇಶಕ್ಕೆ ಕೀರ್ತಿ ತರುವವರು ಆಗುತ್ತಾರೆ. ಪಾಠ ಒಂದೇ ಆದರೂ, ಸ್ವೀಕಾರ ಮಾಡುವವರ ಮೇಲೆ ಅದರ ಪ್ರಭಾವ ಬೀರುತ್ತದೆ. ಆದ್ದರಿಂದ, ಯಾವುದೇ ವಿಷಯದಲ್ಲಿ ಬೇರೆಯವರ ಬಗ್ಗೆ ಅಸೂಯೆ ಪಡುವುದು, ವ್ಯಥೆ ಪಡುವುದು ಅಥವಾ ಕೆಟ್ಟ ಮಾತುಗಳನ್ನಾಡುವುದು ನಮ್ಮ ಪಂಚಭೂತಗಳ ದೇಹಕ್ಕೆ ಹಾನಿಕರ. ನಾವು ಸಕಾರಾತ್ಮಕವಾಗಿ ಯೋಚಿಸೋಣ, ಶುಭಾಶಯ ಕೋರೋಣ ಮತ್ತು ನಮಗೆ ಬೇಕಾದ ಸ್ಥಾನಕ್ಕೆ ತಲುಪಲು ಪ್ರಯತ್ನ ಪಡೋಣ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:49 am, Wed, 22 April 26

Source link

ಮದುವೆಯಾದ ಎರಡೇ ವರ್ಷಕ್ಕೆ ಪತಿಯ ಸ್ನೇಹಿತನ ಜತೆ ಮಹಿಳೆ ಪರಾರಿ! ದೇಗುಲದಲ್ಲಿ ಮದುವೆಯಾಗಿ ಫೋಟೋ ಸ್ಟೇಟಸ್ ಹಾಕಿದ ಕಿಲಾಡಿ – Kannada News | Mandya: Woman Elopes with Husband’s Friend Within Two Years of Marriage; Uploads Wedding Photos on Status

ಮದುವೆಯಾದ ಎರಡೇ ವರ್ಷಕ್ಕೆ ಪತಿಯ ಸ್ನೇಹಿತನ ಜತೆ ಮಹಿಳೆ ಪರಾರಿ!Image Credit source: tv9

ಮಂಡ್ಯ, ಏಪ್ರಿಲ್ 22: ಪ್ರೀತಿಸಿ ಮದುವೆಯಾದ ಎರಡೇ ವರ್ಷಕ್ಕೆ ಪತ್ನಿಯೊಬ್ಬಳು ಪತಿಯ ಸ್ನೇಹಿತನ ಜೊತೆಯೇ ಓಡಿ ಹೋಗಿ ಮದುವೆಯಾಗಿರುವ ಘಟನೆ ಮಂಡ್ಯ (Mandya) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬನ್ನಂಗಾಡಿ ಗ್ರಾಮದ ಆಟೋ ಚಾಲಕ ಸಾಗರ್ ಎಂಬುವವರ ಪತ್ನಿ ರಕ್ಷಿತಾ ಎಂಬಾಕೆಯೇ ಈಗ ತನ್ನ ಪತಿಯ ಸ್ನೇಹಿತ ಇಂದ್ರನ ಜೊತೆ ಪರಾರಿಯಾದವಳು. ‘ಪ್ರೀತಿಸಿ ಮದುವೆಯಾದ ಹೆಂಡತಿ ತಂಗಿ ತಂಗಿ ಎನ್ನುತ್ತಿದ್ದವನ ಜತೆಗೇ ಓಡಿಹೋಗಿದ್ದಾಳೆ’ ಎಂದು ಇದೀಗ ಸಾಗರ್ ಮಾಧ್ಯಮಗಳ ಎದುರು ಅಳಲುತೋಡಿಕೊಂಡಿದ್ದಾರೆ.

ಆಟೋದಲ್ಲಿ ಅರಳಿದ ಪ್ರೀತಿ ಮತ್ತು ವಿವಾಹ

ರಕ್ಷಿತಾ ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ಆಟೋ ಚಾಲಕ ಸಾಗರ್ ಪರಿಚಯವಾಗಿದ್ದ. ಕಾಲಕ್ರಮೇಣ ಇವರ ಪರಿಚಯ ಪ್ರೀತಿಗೆ ತಿರುಗಿ, ಇಬ್ಬರೂ ಮದುವೆಯಾಗಿದ್ದರು. ಮದುವೆಯಾದ ಎರಡು ವರ್ಷಗಳ ಕಾಲ ದಂಪತಿ ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಸಾಗರ್ ಸ್ನೇಹಿತ ಇಂದ್ರನ ಜೊತೆ ರಕ್ಷಿತಾ ಹತ್ತಿರವಾಗಿದ್ದಳು.

ಹಣ, ಒಡವೆ ಜೊತೆ ಪರಾರಿ: ಸಾಗರ್ ಆರೋಪ


ಮನೆಯಿಂದ ಹೊರಡುವಾಗ ರಕ್ಷಿತಾ ಸುಮ್ಮನೆ ಹೋಗಿಲ್ಲ. ಪತಿಯ ಮನೆಯಲ್ಲಿದ್ದ ಸುಮಾರು ಒಂದು ಲಕ್ಷ ರೂಪಾಯಿ ನಗದು ಮತ್ತು 22 ಗ್ರಾಂ ಚಿನ್ನದ ಒಡವೆಗಳನ್ನು ದೋಚಿಕೊಂಡು ಹೋಗಿದ್ದಾಳೆ ಎಂದು ಸಾಗರ್ ಆರೋಪಿಸಿದ್ದಾರೆ. ಇಂದ್ರನ ಜೊತೆ ದೇವಸ್ಥಾನವೊಂದರಲ್ಲಿ ಮದುವೆಯಾದ ರಕ್ಷಿತಾ, ಆ ಫೋಟೋಗಳನ್ನು ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಳ್ಳುವ ಮೂಲಕ ಪತಿಗೆ ಶಾಕ್ ನೀಡಿದ್ದಾಳೆ.

ಇದನ್ನೂ ಓದಿ: ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆಯ ವಿಚಾರಣೆ ವೇಳೆ ಬಯಲಾಯ್ತು ಸ್ಫೋಟಕ ವಿಚಾರ! ಅಸಲಿಗೆ ಆಗಿದ್ದೇನು ಗೊತ್ತೇ?

ಇತ್ತ ಪತ್ನಿಯ ಕೃತ್ಯದಿಂದ ಕಂಗೆಟ್ಟ ಸಾಗರ್ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ‘ಅವರಿಬ್ಬರು ಹೇಗಾದರೂ ಇರಲಿ, ನನಗೆ ತೊಂದರೆಯಿಲ್ಲ. ಆದರೆ ನನಗೆ ಕೂಡಲೇ ವಿಚ್ಛೇದನ (Divorce) ನೀಡಲಿ ಮತ್ತು ಮನೆಯಿಂದ ಕದ್ದೊಯ್ದ ಹಣ ಹಾಗೂ ಒಡವೆಗಳನ್ನು ವಾಪಸ್ ನೀಡಲಿ’ ಎಂದು ಸಾಗರ್ ಆಗ್ರಹಿಸಿದ್ದಾರೆ. ಮಗನ ಪರಿಸ್ಥಿತಿಯನ್ನು ಕಂಡು ಸಾಗರ್ ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂದಿನ 7 ದಿನ ಕರ್ನಾಟಕ ಕೂಲ್​ ಕೂಲ್: ಈ ಜಿಲ್ಲೆಗಳಿಗೆ ಬರಲಿದ್ದಾನೆ ವರುಣ; ಬಿಸಿಲ ಧಗೆಯಿಂದ ಸಿಗಲಿದೆ ಮುಕ್ತಿ! – Kannada News | Bengaluru Weather Update: Rain Expected in Parts of Karnataka Amidst High Heat

ಬೆಂಗಳೂರು, ಏ.22: ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲ ಧಗೆ ಮುಂದುವರಿಯಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಲಕ್ಷಣಗಳಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಏಪ್ರಿಲ್ 22 ಮತ್ತು 23 ರಂದು ಅಲ್ಲಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಏಪ್ರಿಲ್ 25ರವರೆಗೆ ಅಲ್ಲಲ್ಲಿ ಹಗುರ ಮಳೆಯಾಗುವ ಮುನ್ಸೂಚನೆಯಿದೆ. ಮುಂದಿನ 7 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸಂಜೆ ಹೊತ್ತಿಗೆ ರಾಜ್ಯದ ಈ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ. ಮಧ್ಯಾಹ್ನ ಬಿಸಿಲು ಹೆಚ್ಚಿರಲಿದ್ದು, ಉತ್ತರ ಒಳನಾಡಿನ ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ತಾಪಮಾನ 40°C ದಾಟುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36°C – 37°C ಆಸುಪಾಸಿನಲ್ಲಿರಲಿದ್ದು, ಸಾಮಾನ್ಯಕ್ಕಿಂತ 2-3 ಡಿಗ್ರಿ ಹೆಚ್ಚಿರಲಿದೆ.

ಮಳೆ ಬರುವ ಸಮಯದಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.ಗುಡುಗು ಮತ್ತು ಸಿಡಿಲಿನ ಮುನ್ಸೂಚನೆ ಇರುವುದರಿಂದ ಮರದ ಕೆಳಗೆ ಅಥವಾ ಬಯಲು ಪ್ರದೇಶದಲ್ಲಿ ನಿಲ್ಲದಂತೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಗುಡುಗು ಸಹಿತ ಮಳೆ ಬರುವಾಗ ಎಲೆಕ್ಟ್ರಾನಿಕ್ ಉಪಕರಣಗಳಿಂದ ದೂರವಿರಿ ಮತ್ತು ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಿರಿ ಎಂದು ಇಲಾಖೆ ಹೇಳಿದೆ. ಬಿಸಿಲ ಧಗೆ ಹೆಚ್ಚಿರುವುದರಿಂದ ಹನಿ ನೀರಾವರಿ ಪದ್ಧತಿ ಅನುಸರಿಸಲು ಮತ್ತು ಜಾನುವಾರುಗಳಿಗೆ ಸಾಕಷ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಲಹೆ ನೀಡಲಾಗಿದೆ.

ವಿಭಾಗ ಜಿಲ್ಲೆಗಳು ಮುನ್ಸೂಚನೆ (ದಿನಾಂಕ)
ಕರಾವಳಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಏಪ್ರಿಲ್ 22 ರಿಂದ 25 ರವರೆಗೆ ಗುಡುಗು ಸಹಿತ ಹಗುರ ಮಳೆ.
ಉತ್ತರ ಒಳನಾಡು ಬೆಳಗಾವಿ, ಧಾರವಾಡ, ಹಾವೇರಿ ಏಪ್ರಿಲ್ 22 ರಿಂದ 25 ರವರೆಗೆ ಗುಡುಗು, ಮಿಂಚು ಸಹಿತ ಮಳೆ.
ಗದಗ, ವಿಜಯಪುರ ಏಪ್ರಿಲ್ 22 ರಂದು ಮಳೆಯ ಸಾಧ್ಯತೆ.
ಬೀದರ್, ಕಲಬುರಗಿ ಏಪ್ರಿಲ್ 23 ಮತ್ತು 24 ರಂದು ಮಳೆ ನಿರೀಕ್ಷೆ.
ದಕ್ಷಿಣ ಒಳನಾಡು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಏಪ್ರಿಲ್ 22 ರಿಂದ 25 ರವರೆಗೆ ಸಂಜೆ ವೇಳೆ ಗುಡುಗು ಸಹಿತ ಮಳೆ.
ಚಾಮರಾಜನಗರ, ಮೈಸೂರು, ಮಂಡ್ಯ ಏಪ್ರಿಲ್ 22 ರಿಂದ 24 ರವರೆಗೆ ಅಲ್ಲಲ್ಲಿ ಹಗುರ ಮಳೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಏಪ್ರಿಲ್ 23 ರಂದು ಮೋಡಕವಿದ ವಾತಾವರಣ, ಹಗುರ ಮಳೆ ಸಾಧ್ಯತೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಅಲ್ಲಲ್ಲಿ ಹಗುರದಿಂದ ಕೂಡಿದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಏಪ್ರಿಲ್ 25ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ. ಏಪ್ರಿಲ್ 23 ಮತ್ತು 24 ರಂದು ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಕಾದ ಕೆಂಡದಂತಾಗಿದ್ದ ಕರಾವಳಿಯಲ್ಲಿ ಇಂದು ವರ್ಷಧಾರೆ!

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ. ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಏಪ್ರಿಲ್ 23 ರಂದು ಹಗುರ ಮಳೆಯಾಗುವ ಸಾಧ್ಯತೆಯಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಸರ್ಕಸ್​ನಲ್ಲಿ ಸೇಫ್ಟಿನೆಟ್ ದಾಟಿ ವೇದಿಕೆ ಎದುರಿದ್ದ ಪ್ರೇಕ್ಷಕರೆಡೆಗೆ ಹಾರಿದ ಹುಲಿ – Kannada News | Russia Circus Chaos: Tiger Leaps Into Crowd After Safety Failure

ರಷ್ಯಾ, ಏಪ್ರಿಲ್ 22: ಸರ್ಕಸ್​​ನಲ್ಲಿ ಸೇಫ್ಟಿನೆಟ್ ದಾಟಿ ಹುಲಿಯೊಂದು ಪ್ರೇಕ್ಷಕರಿದ್ದಲ್ಲಿಗೆ ಹಾರಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಹುಲಿಯೊಂದು ಇದ್ದಕ್ಕಿದ್ದಂತೆ ಪ್ರೇಕ್ಷಕರತ್ತ ಹಾರಿತು. ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ಕ್ಷಣವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸರ್ಕಸ್ ಕುರಿತು ಕಳವಳ ಹುಟ್ಟುಹಾಕಿದೆ. ಆ ಸರ್ಕಸ್​ನಲ್ಲಿ ಮೂರು ಹುಲಿಗಳು ಹಾಗೂ ಒಬ್ಬ ತರಬೇತುದಾರನಿದ್ದ. ಆ ಸುರಕ್ಷತಾ ನೆಟ್ ಹರಿದುಬೀಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಗ ಹುಲಿಯು ವೇದಿಕೆ ಎದುರಿದ್ದ ಪ್ರೇಕ್ಷಕರಿದ್ದಲ್ಲಿಗೆ ಹಾರಿದೆ. ಯಾರೂ ಕೂಗಾಡದಂತೆ ಓಡದಂತೆ ಪ್ರೇಕ್ಷಕರಿಗೆ ಸಲಹೆ ನೀಡಲಾಯಿತು. ಕೂಡಲೇ ತರಬೇತುದಾರ ಆ ಹುಲಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಭಿಷೇಕ್ ಶರ್ಮಾ ಶತಕ ಸಿಡಿಸಿದಾಗ ತಂದೆಯ ಸೆಲೆಬ್ರೇಷನ್ ಹೇಗಿತ್ತು ನೋಡಿ – Kannada News | Abhishek Sharma Father Celebration After he smash Century in SRH vs DC Match

ಹೈದರಾಬಾದ್ ಹಾಗೂ ಡೆಲ್ಲಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ಪರ ಆಡಿದ ಅಭಿಷೇಕ್ ಶರ್ಮ ಅವರು ಶತಕ ಸಿಡಿಸಿದ್ದಾರೆ. ಅವರು ಕೇವಲ 68 ಬಾಲ್​​ಗಳಿಗೆ 135 ರನ್ ಸಿಡಿಸಿದರು. ಸ್ಟ್ರೈಕ್ ರೇಟ್ 198 ಇತ್ತು. ಇದರಲ್ಲಿ 10 ಫೋರ್ ಹಾಗೂ 10 ಸಿಕ್ಸ್ ಸೇರಿವೆ. ಅವರು ಶತಕ ಸಿಡಿಸಿ ಸೆಲೆಬ್ರೇಷನ್ ಮಾಡುವಾಗ ಅವರ ತಂದೆ ಕೂಡ ಖುಷಿಯಾದರು. ಅಭಿಷೇಕ್ ತಂದೆ ಸೆಲೆಬ್ರೇಷನ್ ಮಾಡಿದ ರೀತಿ ಇಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

‘ಮಂಚಕ್ಕೆ ಕೈ-ಕಾಲು ಕಟ್ಟಿ ಹಾಕಿ ಬೆಂಕಿ ಹಚ್ಚಿದೆ’: ಪ್ರಿಯಕರನ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿದ ಯುವತಿ ಬಿಚ್ಚಿಟ್ಟಳು ಹಲವು ರಹಸ್ಯ! – Kannada News | Byadarahalli Murder Case: Accused Prema Confesses to Burning Boyfriend Kiran Alive; Statements Revealed

ಬೆಂಗಳೂರು, ಏಪ್ರಿಲ್ 22: ಬೆಂಗಳೂರಿನ (Bengaluru) ಬ್ಯಾಡರಹಳ್ಳಿಯಲ್ಲಿ ನಡೆದ ಕಿರಣ್ ಕೊಲೆ ಪ್ರಕರಣ ಸಂಬಂಧ ಒಂದೊಂದೇ ಭಯಾನಕ ವಿಚಾರಗಳು ಇದೀಗ ಹೊರಬರುತ್ತಿವೆ. ಸದ್ಯ ಆತನ ಪ್ರೇಯಸಿ ಪ್ರೇಮಾ ಪೊಲೀಸರ ವಶದಲ್ಲಿದ್ದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ. ಕಿರಣ್ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿ ಹಾಕಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದೆ ಎಂದು ಆಕೆ ನೀಡಿರುವ ಹೇಳಿಕೆ ಕೇಳಿ ಖುದ್ದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ನಾಲ್ಕುವರೆ ಲಕ್ಷದ ಗಿಫ್ಟ್ ನೀಡಲು ಮುಂದಾಗಿದ್ದ ಪ್ರೇಮಾ!

ಪೊಲೀಸರ ತನಿಖೆಯ ವೇಳೆ ದೊರೆತ ಮಾಹಿತಿ ಪ್ರಕಾರ, ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರೇಮಾಗೆ ಕಿರಣ್ ಪರಿಚಯವಾಗಿದ್ದ. ಈ ವರ್ಷದ ಫೆಬ್ರವರಿ 14ರ ‘ವ್ಯಾಲೆಂಟೈನ್ಸ್ ಡೇ’ ದಿನ ಪ್ರೇಮಾ ತನ್ನ ಪ್ರೀತಿಯನ್ನು ನಿವೇದಿಸಿದ್ದಳು. ಕಿರಣ್ ಕೂಡ ಒಪ್ಪಿಕೊಂಡಿದ್ದ. ಪ್ರಿಯಕರನಿಗಾಗಿ ಪ್ರೇಮಾ ಬರೋಬ್ಬರಿ 4.5 ಲಕ್ಷ ರೂಪಾಯಿ ಮೌಲ್ಯದ ಬೈಕ್ ಮತ್ತು ಮೊಬೈಲ್ ಫೋನ್ ಕೊಡಿಸಲು ಮುಂದಾಗಿದ್ದಳು. ಕೊಲೆ ಕೃತ್ಯ ನಡೆದ ದಿನವೂ ಇಬ್ಬರೂ ಸೇರಿ ಬೈಕ್ ನೋಡಲು ಹೋಗಿದ್ದರು ಎನ್ನಲಾಗಿದೆ.

ಪ್ರೀತಿ ದ್ರೋಹವಾಗಿ ಬದಲಾದಾಗ…

ಆದರೆ, ಇತ್ತೀಚೆಗೆ ಕಿರಣ್ ಪ್ರೇಮಾಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದ. ಇದರಿಂದ ಮನನೊಂದಿದ್ದ ಪ್ರೇಮಾ, ಆತನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ತೀರ್ಮಾನಿಸಿದ್ದಳು. ಅದಕ್ಕಾಗಿಯೇ ಪೆಟ್ರೋಲ್ ಮತ್ತು ಸೀಮೆಎಣ್ಣೆಯನ್ನು ಮೊದಲೇ ಖರೀದಿಸಿ ತಂದಿಟ್ಟುಕೊಂಡಿದ್ದಳು. ಮದುವೆ ವಿಚಾರವಾಗಿ ಮನೆಯಲ್ಲಿ ಮತ್ತೆ ಗಲಾಟೆ ಆರಂಭವಾದಾಗ, ಪ್ಲಾನ್ ಪ್ರಕಾರ ಕಿರಣ್‌ನನ್ನು ಮಂಚಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾಳೆ.

ಇದನ್ನೂ ಓದಿ: ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆಯ ವಿಚಾರಣೆ ವೇಳೆ ಬಯಲಾಯ್ತು ಸ್ಫೋಟಕ ವಿಚಾರ! ಅಸಲಿಗೆ ಆಗಿದ್ದೇನು ಗೊತ್ತೇ?

ಸದ್ಯ ಬ್ಯಾಡರಹಳ್ಳಿ ಪೊಲೀಸರು ಈಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಹತ್ಯೆಗೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ಉಂಟಾದ ವೈಫಲ್ಯ ಇಷ್ಟೊಂದು ಭೀಕರ ಅಂತ್ಯ ಕಂಡಿರುವುದು ನಾಗರಿಕ ಸಮಾಜವನ್ನು ನಡುಗಿಸುವಂತೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಮ್ಯಾಚ್ ನೋಡಲು ಬಂದ ಸ್ಟಾರ್ ನಟನಿಗೆ ಯಾರು ಎಂದು ಪ್ರಶ್ನೆ; ಮುಂದೇನಾಯ್ತು? – Kannada News | Victory Venkatesh Unrecognized at IPL Hyderabad Match; Fans React Strongly.

ಐಪಿಎಲ್ ಪಂದ್ಯ ನೋಡಲು ಅನೇಕ ಸೆಲೆಬ್ರಿಟಿಗಳು ಆಗಮಿಸುತ್ತಾರೆ. ಅವರಿಗೆ ವಿಐಪಿ ಸೌಲಭ್ಯ ಸಿಗುತ್ತದೆ. ವಿಶೇಷ ಆಸನದಲ್ಲಿ ಅವರನ್ನು ಕೂರಿಸಲಾಗುತ್ತದೆ. ಟಿವಿಯಲ್ಲೂ ಪದೇ ಪದೇ ಅವರನ್ನೇ ತೋರಿಸಲಾಗುತ್ತದೆ. ಆದರೆ, ಈಗ ಟಾಲಿವುಡ್​ ಸ್ಟಾರ್​ ನಟನಿಗೆ ಅವಮಾನ ಆಗಿದೆ. ಹೈದರಾಬಾದ್ ಪಂದ್ಯ ನೋಡಲು ಬಂದ ವಿಕ್ಟರಿ ವೆಂಕಟೇಶ್​​ ಅವರನ್ನು ಯಾರು ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹೈದರಾಬಾದ್ ಹೋಂ ಮ್ಯಾಚ್ ನೋಡಲು ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ಹಾಜರಿ ಹಾಕುತ್ತಿದ್ದಾರೆ. ಅವರು ಹೈದರಾಬಾದ್ ಬಾವುಟ ಹಿಡಿದು ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಕೆಲ ಉತ್ತರ ಭಾರತದವರಿಗೆ ಆ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

‘ಕೈಯಲ್ಲಿ ಹೈದರಾಬಾದ್ ತಂಡದ ಬಾವುಟ ಹಿಡಿದಿರುವ ಈ ವ್ಯಕ್ತಿ ಯಾರು? ಎಸ್​​ಆರ್​​ಎಚ್​ ತಂಡ ಹೈದರಾಬಾದ್‌ನಲ್ಲಿ ಆಡುವಾಗ ನಾನು ಯಾವಾಗಲೂ ಅವರನ್ನು ನೋಡುತ್ತೇನೆ. ನಾನು ಅವರನ್ನು ಯಾವುದೋ ಸಿನಿಮಾದಲ್ಲಿ ನೋಡಿದಂತೆ ಇದೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಖ್ಯಾತ ತೆಲುಗು ನಟ ಎಂದು ಹೇಳಿದ್ದಾರೆ.

ಇನ್ನೂ ಕೆಲವರು ಒಂದು ವಿಶೇಷ ಕ್ಲಿಪ್​ ಹಂಚಿಕೊಂಡಿದ್ದಾರೆ. ಈ ಕ್ಲಿಪ್​​ನಲ್ಲಿ ಶಾರುಖ್ ಖಾನ್ ಅವರು ವಿಕ್ಟರಿ ವೆಂಕಟೇಶ್​​​ಗೆ ನಮಸ್ಕಾರ ಮಾಡುತ್ತಿರುವ ದೃಶ್ಯ ಇದೆ. ‘ಶಾರುಖ್ ಅವರನ್ನು ಕೇಳಿ, ಆ ವ್ಯಕ್ತಿ ಯಾರೆಂದು ಹೇಳುತ್ತಾರೆ’ ಎಂದು ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:50 am, Wed, 22 April 26

Source link

Exit mobile version