ಆಮಿರ್ ಮಾತಿಗೆ ಮಣಿದ ರಣವೀರ್ ಸಿಂಗ್; 10 ಕೋಟಿ ಮರಳಿಸಿದ ‘ಧುರಂಧರ್’ ನಟ – Kannada News | Ranveer Singh Returns 10 Cr Advance for ‘Don 3’ After Aamir Khan’s Mediation

ರಣವೀರ್ ಸಿಂಗ್ ಹಾಗೂ ‘ಡಾನ್ 3’ ನಿರ್ದೇಶಕ ಫರ್ಹಾನ್ ಅಖ್ತರ್ ಮಧ್ಯೆ ಕಿರಿಕ್ ಆಗಿತ್ತು. ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ಹಿಂದಕ್ಕೆ ಸರಿದರು. ಇದಕ್ಕೆ ಪ್ರತಿಯಾಗಿ ರಣವೀರ್ 40 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಫರ್ಹಾನ್ ಪಟ್ಟು ಹಿಡಿದಿದ್ದರು. ಈ ವಿಷಯದಲ್ಲಿ ಆಮಿರ್ ಖಾನ್ (Aamir Khan) ಮಧ್ಯಸ್ಥಿಕೆ ವಹಿಸಿದ್ದರು. ಈಗ ಆಮಿರ್ ಮಾತಿಗೆ ರಣವೀರ್ ಗೌರವ ನೀಡಿದ್ದಾರೆ. ತಾವು ತೆಗೆದುಕೊಂಡಿದ್ದ 10 ಕೋಟಿ ರೂಪಾಯಿ ಅಡ್ವಾನ್ಸ್ ಹಣವನ್ನು ಮರಳಿಸಲು ರಣವೀರ್ ನಿರ್ಧರಿಸಿದ್ದಾರೆ.

‘ಡಾನ್’ ಹಾಗೂ ‘ಡಾನ್ 2’ ಚಿತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಆ ಬಳಿಕ ‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ಅವರ ಆಯ್ಕೆ ಮಾಡಲಾಯಿತು. ಈ ಚಿತ್ರಕ್ಕೆ ಶಾರುಖ್ ಫ್ಯಾನ್ಸ್ ಸಾಕಷ್ಟು ವಿರೋಧ ಹೊರಹಾಕಿದರು. ಆದರೂ ನಿರ್ದೇಶಕ, ನಿರ್ಮಾಪಕ ಫರ್ಹಾನ್ ಅಖ್ತರ್ ಸಿನಿಮಾ ಮಾಡಿಯೇ ತೀರೋದಾಗಿ ಪಟ್ಟು ಹಿಡಿದರು. ಟೀಸರ್ ಕೂಡ ರಿಲೀಸ್ ಆಯಿತು. ‘ಧುರಂಧರ್’ ಯಶಸ್ಸಿನ ಬಳಿಕ ರಣವೀರ್ ಸಿಂಗ್ ಬದಲಾದರು.

ಕಥೆ ವಿಷಯದಲ್ಲಿ ರಣವೀರ್ ಹಾಗೂ ಫರ್ಹಾನ್ ಮಧ್ಯೆ ಹೊಂದಾಣಿಕೆ ಸಾಧ್ಯವಾಗಿಲ್ಲ. ಈ ಕಾರಣದಿಂದ ರಣವೀರ್ ಹೊರ ಹೋಗಲು ನಿರ್ಧರಿಸಿದರು. ಈ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸ ಸಾಕಷ್ಟು ನಡೆದಿದ್ದು, ಆ ನಷ್ಟ ಭರಿಸಿ ಕೊಡಲು ರಣವೀರ್ 40 ಕೋಟಿ ರೂಪಾಯಿ ಕೊಡಬೇಕು ಎಂದು ಫರ್ಹಾನ್ ಪಟ್ಟು ಹಿಡಿದರು.

ಇದನ್ನೂ ಓದಿ: ‘ಧುರಂಧರ್ 2’ ನೋಡದಿದ್ದರೂ ಚಿತ್ರತಂಡದ ಸಾಧನೆಗೆ ಭೇಷ್ ಎಂದ ಆಮಿರ್ ಖಾನ್

ಇತ್ತೀಚೆಗೆ ಇವರ ಮಧ್ಯೆ ಆಮಿರ್ ಬಂದಿದ್ದರು ಎನ್ನಲಾಗಿತ್ತು. ಈ ಮಾತಕತೆ ಯಶಸ್ವಿ ಆಗಿದೆ. ಅಡ್ವಾನ್ಸ್ ಆಗಿ ಪಡೆದಿದ್ದ 10 ಕೋಟಿ ರೂಪಾಯಿ ಹಣವನ್ನು ರಣವೀರ್ ಹಿಂದಿರುಗಿಸಲು ಒಪ್ಪಿದ್ದಾರೆ. ಇಷ್ಟೇ ಅಲ್ಲ, ರಣವೀರ್ ಸಿಂಗ್ ಅವರ ಮುಂದಿನ ಚಿತ್ರವೊಂದಕ್ಕೆ ಫರ್ಹಾನ್ ಅವರನ್ನು ನಿರ್ಮಾಪಕರನ್ನಾಗಿ ಸೇರಿಸಿಕೊಳ್ಳುವ ಆಲೋಚನೆ ರಣವೀರ್​ಗೆ ಇದೆ. ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ರಣವೀರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ಈ ಬಗ್ಗೆ ರಣವೀರ್ ಆಗಲೀ ಫರ್ಹಾನ್ ಆಗಲಿ ಈ ಬಗ್ಗೆ ಮಾತನಾಡಿಲ್ಲ. ‘ಡಾನ್ 3’ ಸಿನಿಮಾ ನಿಲ್ಲೋದು ಬಹುತೇಕ ಖಚಿತವಾಗಿದೆ. ಶಾರುಖ್ ಖಾನ್ ಅವರು ಮತ್ತೆ ಈ ಸಿನಿಮಾ ಮಾಡಲು ಒಪ್ಪುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *