ಬೆಂಗಳೂರಿನ ಯುವಕರಲ್ಲಿ ಹೆಚ್ಚುತ್ತಿದೆ ಬಾಯಿ ಕ್ಯಾನ್ಸರ್: ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ, ತಜ್ಞರ ಎಚ್ಚರಿಕೆ – Kannada News | Bengaluru Health Alert: Doctors Warn of Rising Oral Cancer Cases Among Youth; Symptoms Often Overlooked
ಬೆಂಗಳೂರು, ಏಪ್ರಿಲ್ 23: ಸಾಮಾನ್ಯವಾಗಿ ಬಾಯಿ ಕ್ಯಾನ್ಸರ್ (Oral Cancer) ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಭಾವನೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ (Bengaluru) 30 ಮತ್ತು 40ರ ವಯೋಮಾನದ ಯುವಜನತೆಯಲ್ಲಿ ಇದರ ಲಕ್ಷಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಬಾಯಿ ಕ್ಯಾನ್ಸರ್ಗೆ ತಂಬಾಕು ಸೇವನೆ ಇಂದಿಗೂ ಪ್ರಮುಖ ಕಾರಣವಾಗಿದ್ದರೂ, ಲಕ್ಷಣಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚುವಲ್ಲಿ ವಿಳಂಬವಾಗುತ್ತಿರುವುದು ಈ ಅಪಾಯವನ್ನು ಹೆಚ್ಚಿಸಿದೆ ಎಂದು ಮೆಡಿಕಲ್ ಆಂಕಾಲಜಿಸ್ಟ್ ಡಾ. ರಾಜೀವ್ ವಿಜಯಕುಮಾರ್ ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ…