UPSC New Rule: ಸೇವೆಯಲ್ಲಿರುವ ಐಎಎಸ್​, ಐಎಫ್​ಎಸ್ ಅಧಿಕಾರಿಗಳಿಗೆ ಯುಪಿಎಸ್​ಸಿಯಿಂದ ಹೊಸ ನಿರ್ಬಂಧ – Kannada News | UPSC New Rules: IAS, IFS Officers Restricted from Reappearing for CSE 2026 Exams

ನವದೆಹಲಿ, ಫೆಬ್ರವರಿ 05: ಕೇಂದ್ರ ಲೋಕಸೇವಾ ಆಯೋಗ(UPSC) ತನ್ನ ನಾಗರಿಕ ಸೇವಾ ಪರೀಕ್ಷೆ (CSE)2026ರ ಅಧಿಸೂಚನೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಪರಿಚಯಿಸಿದೆ. ಇದು ಈಗಾಗಲೇ ಸೇವೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಮರು-ಪ್ರಯತ್ನಗಳನ್ನು ಸೀಮಿತಗೊಳಿಸುತ್ತದೆ. ಸೇವೆ ಸಲ್ಲಿಸುತ್ತಿರುವ ಐಎಎಸ್​ ಮತ್ತು ಐಎಫ್​ಎಸ್ ಅಧಿಕಾರಿಗಳು ಸಿಎಸ್​ಇ 2026ರಲ್ಲಿ ಹಾಜರಾಗುವುದನ್ನು ನಿಷೇಧಿಸಲಾಗಿದೆ.

ಮುಂದಿನ ಪ್ರಯತ್ನದಲ್ಲಿ ತಮ್ಮ ಶ್ರೇಣಿಯನ್ನು ಸುಧಾರಿಸಲು ಬಯಸುವ ಐಪಿಎಸ್ ಅಧಿಕಾರಿಗಳು ಗ್ರೂಪ್ ಎ ಸೇವೆಗಳನ್ನು ಹಂಚಿಕೆ ಮಾಡಿದ ಅಭ್ಯರ್ಥಿಗಳ ಮೇಲೆ ಅಧಿಕಸೂಚನೆಯು ಷರತ್ತುಗಳನ್ನು ವಿಧಿಸುತ್ತದೆ. ಈ ಕ್ರಮವು ಒಂದು ಬಾರಿಯ ಸುಧಾರಣಾ ವಿಂಡೋವನ್ನು ಔಪಚಾರಿಕಗೊಳಿಸುತ್ತದೆ ಮತ್ತು ರಾಜೀನಾಮೆ ನೀಡದೆ ಪುನರಾವರ್ತಿತ ಪ್ರಯತ್ನಗಳಿಗೆ ಅವಕಾಶ ನೀಡುವ ಹಿಂದಿನ ಅವಕಾಶವನ್ನು ಮುಚ್ಚುತ್ತದೆ.
ಹಿಂದಿನ ಪರೀಕ್ಷೆಯ ಆಧಾರದ ಮೇಲೆ ಐಎಎಸ್ ಅಥವಾ ಐಎಫ್​ಎಸ್ ಆಗಿ ನೇಮಕಗೊಂಡಿರುವ ಮತ್ತು ಆ ಸೇವೆಯ ಸದಸ್ಯರಾಗಿ ಮುಂದುವರೆದ ಯಾವುದೇ ಅಭ್ಯರ್ಥಿಯು ಸಿಎಸ್​ಇ 2026ರಲ್ಲಿ ಕಾಣಿಸಿಕೊಳ್ಳಲು ಅರ್ಹರಾಗುವುದಿಲ್ಲ ಎಂದು ಅಧಿಸೂಚನೆ ಸ್ಪಷ್ಟವಾಗಿ ಹೇಳುತ್ತದೆ.

ಈ ನಿರ್ಬಂಧವು ಎಲ್ಲಾ ಹಂತಗಳಿಗೂ ಅನ್ವಯಿಸುತ್ತದೆ, ಪ್ರಾಥಮಿಕ ಪರೀಕ್ಷೆಯ ನಂತರ ಆದರೆ ಮುಖ್ಯ ಪರೀಕ್ಷೆಗೂ ಮೊದಲು ಅಬ್ಯಥರ್ಥಯನ್ನು ಐಎಎಸ್ ಅಥವಾ ಐಎಫ್​ಎಸ್ಗೆ ನೇಮಿಸಿದರೆ, ಅವರು ಮುಖ್ಯ ಪರೀಕ್ಷೆಯನ್ನು ಬರೆಯಲು ಸಾಧ್ಯವಿಲ್ಲ. ಮುಖ್ಯ ಪರೀಕ್ಷೆ ಪ್ರಾರಂಭವಾದ ನಂತರ ಆದರೆ ಅಂತಿಮ ಫಲಿತಾಂಶ ಘೋಷಣೆಯಾಗುವ ಮೊದಲು ನೇಮಕಗೊಂಡರೆ ಅವರನ್ನು ಸಿಎಸ್​ಎ 2026ರ ಅಡಿಯಲ್ಲಿ ಹಂಚಿಕೆಗೆ ಪರಿಗಣಿಸಲಾಗುವುದಿಲ್ಲ. ಇದು ಸೇವೆಯಲ್ಲಿರುವ ಐಎಎಸ್​ ಮತ್ತು ಐಎಫ್​ಎಸ್ ಅಧಿಕಾರಿಗಳು ರಾಜೀನಾಮೆ ನೀಡದ ಹೊರತು ಮತ್ತೆ ಪರೀಕ್ಷೆ ಬರೆಯುವುದನ್ನು ತಡೆಯುತ್ತದೆ.

ಹಿಂದಿನ ಪರೀಕ್ಷೆಯ ಮೂಲಕ ಈಗಾಗಲೇ ಆಯ್ಕೆಯಾದ ಅಥವಾ ಪೊಲೀಸ್ ಸೇವೆಗೆ ನೇಮಕಗೊಂಡ ಅಭ್ಯರ್ಥಿಗಳು ಸಿಎಸ್​ಇ2026ರ ಮೂಲಕ ಮತ್ತೆ ಐಪಿಎಸ್ ಆಯ್ಕೆ ಮಾಡಲು ಅಥವಾ ಹಂಚಿಕೆ ಮಾಡಲು ಸಾಧ್ಯವಿಲ್ಲ.

ಮತ್ತಷ್ಟು ಓದಿ: SSLC ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಇಲಾಖೆ ಹೊಸ ಪ್ಲಾನ್; ಪರೀಕ್ಷೆ ಮುಗಿಯುವವರೆಗೂ ಟಿವಿ–ಮೊಬೈಲ್ ಆಫ್!

ಸಿಎಸ್​ಇ 2025 ಅಥವಾ ಅದಕ್ಕಿಂತ ಹಿಂದೆ ಯಾವುದೇ ಸೇವೆಗೆ ನಿಯೋಜಿಸಲಾದ ಅಭ್ಯರ್ಥಿಗಳು ರಾಜೀನಾಮೆ ನೀಡದೆ ಸಿಎಸ್​ಇ2027 ಅಥವಾ ಸಿಎಸ್​ಇ 2027ರಲ್ಲಿ ಹಾಜರಾಗಲು ಒಂದು ಬಾರಿ ಅವಕಾಶವಿರುತ್ತದೆ. 2028ರಲ್ಲಿ ಸಿಎಸ್​ಇ ಅಥವಾ ಇನ್ಯಾವುದೇ ಪರೀಕ್ಷೆಗೆ ಹಾಜರಾಗುವವರು ಸೇವೆಗೆ ರಾಜೀನಾಮೆ ನೀಡುವುದು ಕಡ್ಡಾಯವಾಗಿರುತ್ತದೆ.

ಫೆಬ್ರವರಿ 24 ರೊಳಗೆ UPSC ನೇಮಕಾತಿ ನಮೂನೆಗಳನ್ನು ಭರ್ತಿ ಮಾಡಿ
UPSC CSE 2026 ಅಧಿಸೂಚನೆಯ ಪ್ರಕಾರ , ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಫೆಬ್ರವರಿ 4 ರಂದು ಪ್ರಾರಂಭವಾಗಿದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 24, 2026 ರವರೆಗೆ ಫಾರ್ಮ್ ಅನ್ನು ಭರ್ತಿ ಮಾಡಬಹುದು. ಈ ನೇಮಕಾತಿ ಡ್ರೈವ್ ವಿವಿಧ ನಾಗರಿಕ ಸೇವೆಗಳಲ್ಲಿ ಸುಮಾರು 933 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ upsconline.nic.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಎಪ್ಸ್ಟೀನ್ ಫೈಲ್ಸ್ ಒಳಗೆ ಬಾಲಿವುಡ್ ಸೆಲೆಬ್ರಿಟಿಗಳ ಹೆಸರು: ಏನಿದು ಕರ್ಮಕಾಂಡ? – Kannada News | Nandita Das Anurag Kashyap and other celebrities name in Epstein Files

ಲೈಂಗಿಕ ಅಪರಾಧಗಳಲ್ಲಿ ಸಿಕ್ಕಿ ಹಾಕಿಕೊಂಡ ಜೆಫ್ರಿ ಎಪ್ಸ್ಟೀನ್ (Jeffrey Epstein) ಮತ್ತು ಆತನ ಕರ್ಮಕಾಂಡದ ಬಗ್ಗೆ ಇಡೀ ಜಗತ್ತಿನಲ್ಲಿ ಚರ್ಚೆ ಆಗುತ್ತಿದೆ. ಜಗತ್ತಿನ ಶ್ರೀಮಂತ ವ್ಯಕ್ತಿಗಳಿಗಾಗಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಕೂಪಕ್ಕೆ ತಳ್ಳಿದ ಆರೋಪ ಆತನ ಮೇಲಿತ್ತು. ಜೆಫ್ರಿ ಎಪ್ಸ್ಟೀನ್ ನಡೆಸಿದ್ದ ಅಪರಾಧಿ ಚಟುವಟಿಕೆಗಳ ಬಗ್ಗೆ ಲಕ್ಷಾಂತರ ಪುಟಗಳ ದಾಖಲೆ (Epstein Files) ಕಲೆಹಾಕಲಾಗಿದೆ. ಈ ದಾಖಲೆಗಳಲ್ಲಿ ಭಾರತದ ಕೆಲವು ಸೆಲೆಬ್ರಿಟಿಗಳ ಹೆಸರುಗಳು ಕೇಳಿಬರುತ್ತಿರುವುದು ಆಘಾತಕಾರಿ ಸಂಗತಿ. ಆ ಬಗ್ಗೆ ಎಲ್ಲ ಕಡೆಗಳಲ್ಲಿ ಸುದ್ದಿ ಆಗುತ್ತಿದೆ.

ಹಲವು ವಿಡಿಯೋಗಳು, ಫೋಟೋಗಳು ಹಾಗೂ ಇ-ಮೇಲ್ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಬಿಲ್ ಗೇಟ್ಸ್, ಅನಿಲ್ ಅಂಬಾನಿ ಅವರಂತಹ ಪ್ರತಿಷ್ಠಿತ ವ್ಯಕ್ತಿಗಳ ಹೆಸರು ಕಾಣಿಸಿದೆ. ಜೆಫ್ರಿ ಎಪ್ಸ್ಟೀನ್ ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಬಿಲ್ ಗೇಟ್ಸ್ ಅವರು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತದ ಕೆಲವು ಸೆಲೆಬ್ರಿಟಿಗಳ ಹೆಸರು ಕಾಣಿಸಿಕೊಂಡಿರುವುದು ಶಾಕಿಂಗ್ ಎನಿಸಿದೆ.

ನಂದಿತಾ ದಾಸ್, ಅನುರಾಗ್ ಕಶ್ಯಪ್, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಮುಂತಾದ ಸೆಲೆಬ್ರಿಟಿಗಳ ಹೆಸರುಗಳು ಎಪ್ಸ್ಟೀನ್ ಫೈಲ್ಸ್​ ಪುಟಗಳಲ್ಲಿ ಪ್ರಸ್ತಾಪ ಆಗಿವೆ ಎಂಬ ಮಾಹಿತಿ ಕೇಳಿಬಂದಿದೆ. ಅಷ್ಟಕ್ಕೂ, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್​​ಗೂ ಈ ಸೆಲೆಬ್ರಿಟಿಗಳು ಯಾವ ರೀತಿಯ ನಂಟು ಇದೆ ಎಂಬ ಪ್ರಶ್ನೆ ಉದ್ಭವ ಆಗಿದೆ. ಅಭಿಮಾನಿಗಳಿಗೆ ಆಘಾತವಾಗಿದೆ.

ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ. ‘ನನ್ನನ್ನು ಅತಿಥಿಯಾಗಿ ಅನೇಕರು ಆಹ್ವಾನಿಸುತ್ತಾರೆ. ಆದರೆ ಬಹುತೇಕ ಆಹ್ವಾನಗಳಿಗೆ ನಾನು ಪ್ರತಿಕ್ರಿಯೆಯನ್ನೇ ನೀಡವುದಿಲ್ಲ’ ಎಂದು ಅನುರಾಗ್ ಕಶ್ಯಪ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಜೆಫ್ರಿ ಎಪ್‌ಸ್ಟೀನ್ ಫೈಲ್ಸ್: ನ್ಯಾಯಾಂಗ ಇಲಾಖೆಯ ವೆಬ್ ಪುಟದಲ್ಲಿ ಮತ್ತೆ ಕಾಣಿಸಿಕೊಂಡ ಟ್ರಂಪ್ ಫೋಟೋ

ಎಪ್ಸ್ಟೀನ್ ಫೈಲ್ಸ್​ನಲ್ಲಿ ಹೆಸರು ಉಲ್ಲೇಖ ಆಗಿದೆ ಎಂದಮಾತ್ರಕ್ಕೆ ಅವರೆಲ್ಲರೂ ಅಪರಾಧಿಗಳು ಎಂದು ಅರ್ಥವಲ್ಲ. ಬೇರೆ ಬೇರೆ ಕಾರಣಗಳಿಂದ ಹೆಸರುಗಳು ಪ್ರಸ್ತಾಪ ಆಗಿರಬಹುದು. ಜೆಫ್ರಿ ಎಪ್ಸ್ಟೀನ್ ಪ್ರಭಾವಿ ವ್ಯಕ್ತಿ ಆಗಿದ್ದ. ಆತನ ಜೊತೆ ಜಗತ್ತಿನ ಪ್ರಖ್ಯಾತ ವ್ಯಕ್ತಿಗಳು ನಂಟು ಹೊಂದಿದ್ದರು. ಹಲವು ಕಾರ್ಯಕ್ರಮಗಳನ್ನು ಆತ ಆಯೋಜಿಸಿದ್ದ. ಅದಕ್ಕೆ ಸಂಬಂಧಿಸಿದಂತೆ ಹಲವರ ಹೆಸರು ಕೇಳಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೇಘಾಲಯದಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ವೇಳೆ ಸ್ಫೋಟ, 16 ಕಾರ್ಮಿಕರ ಸಾವು – Kannada News | 16 labourers from Assam killed many injured in illegal coal mine blast in Meghalaya

ಶಿಲ್ಲಾಂಗ್, ಫೆಬ್ರವರಿ 5: ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ (Coal Mining) ವೇಳೆ ಸಂಭವಿಸಿದ ಸ್ಫೋಟದಲ್ಲಿ ಅಸ್ಸಾಂನ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಥಾಂಗ್ಸ್ಕು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಣಿಯಿಂದ 16 ಶವಗಳನ್ನು ಹೊರತೆಗೆದಿದ್ದು, ಇನ್ನೂ ಹಲವರು ಗಾಯಗೊಂಡಿದ್ದಾರೆ. ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ನಂತರ ಶಿಲ್ಲಾಂಗ್‌ಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲು ಪೊಲೀಸರು ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ಸಹಾಯ ಪಡೆದುಕೊಂಡರು. ಇನ್ನೂ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು; ಹಲವು ಕಾರ್ಮಿಕರು ಕಣ್ಮರೆ

ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ತನಿಖೆ ನಡೆಸಲಾಗುವುದು. ಪರಿಸರ ಹಾನಿ ಮತ್ತು ಗಂಭೀರ ಸುರಕ್ಷತಾ ಕಾಳಜಿಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2014ರಲ್ಲಿ ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮತ್ತು ಇತರ ಅವೈಜ್ಞಾನಿಕ ಗಣಿಗಾರಿಕೆ ಪದ್ಧತಿಗಳ ಮೇಲೆ ನಿಷೇಧ ಹೇರಿತ್ತು. ಆದರೂ ಮೇಘಾಲಯದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಲೇ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಳಿಗಾಲದಲ್ಲಿ ಈ ಆಹಾರಗಳ ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಬಹುದು ಎಚ್ಚರ! – Kannada News | Bad Cholesterol: Winter Foods That Can Increase LDL

ಚಳಿಗಾಲದಲ್ಲಿ ಆಹಾರ ಪದ್ಧತಿಯ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಈ ಸಮಯದಲ್ಲಿ ಜನ ಬೇಸಿಗೆಗಿಂತ ಹೆಚ್ಚು ಆಹಾರ ಸೇವನೆ ಮಾಡುತ್ತಾರೆ. ಅದರಲ್ಲಿಯೂ ಕರಿದ ಆಹಾರ ಮತ್ತು ಸಿಹಿತಿಂಡಿಗಳ ಸೇವನೆ ಹೆಚ್ಚಾಗುತ್ತದೆ. ಆದರೆ ಈ ರೀತಿಯ ಆಹಾರಗಳ ಸೇವನೆ ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಅನ್ನು ತ್ವರಿತವಾಗಿ ಹೆಚ್ಚಿಸಬಹುದು ಎಂಬುದನ್ನು ಮರೆಯಬಾರದು. ಅದಕ್ಕೂ ಮೊದಲು ಕೊಲೆಸ್ಟ್ರಾಲ್ ಹೆಚ್ಚಾಗುವುದಕ್ಕೆ ಕಾರಣವೇನು, ಯಾಕೆ ಈ ಸಮಯದಲ್ಲಿ ಜನ ಹೆಚ್ಚು ಹೆಚ್ಚು ಆಹಾರ ಸೇವನೆ ಮಾಡುತ್ತಾರೆ ಎಂಬುದರ ಬಗ್ಗೆ ತಿಳಿಯಬೇಕಾಗುತ್ತದೆ. ಹಾಗಾದರೆ ಯಾವ ರೀತಿಯ ಆಹಾರಗಳ ಸೇವನೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸಬಹುದಾದ ಆಹಾರಗಳು:

ಹೆಚ್ಚು ತುಪ್ಪ ಸೇರಿಸಿದ ತರಕಾರಿಗಳು: ಯಾವುದೇ ತರಕಾರಿಗೆ ತುಪ್ಪ ಸೇರಿಸಿ ಅದನ್ನು ಬಿಸಿ ಮಾಡಿ ತಿನ್ನುವುದು ಬಹಳ ಹಾನಿಕಾರಕವಾಗಿದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬಿದ್ದು, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ, ತುಪ್ಪವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ತುಪ್ಪವನ್ನು ಹೊರತುಪಡಿಸಿ, ಸಮೋಸಾಗಳು, ಕಚೋರಿ ಅಥವಾ ಪಕೋಡಾಗಳಂತಹ ಕರಿದ ಆಹಾರಗಳ ಸೇವನೆ ಮಾಡುವುದನ್ನು ಆದಷ್ಟು ತಪ್ಪಿಸಬೇಕು. ಇದರಲ್ಲಿ ಹೆಚ್ಚಾಗಿ ಸಂಸ್ಕರಿಸಿದ ಎಣ್ಣೆಯನ್ನು ಬಳಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ.

ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ನಿಂದ ಹೃದಯವನ್ನು ರಕ್ಷಿಸಿಕೊಳ್ಳಲು ಈ ರೀತಿ ಮಾಡಿ; ಹೃದಯಾಘಾತ, ಪಾರ್ಶ್ವವಾಯುವಿನಿಂದ ದೂರವಿರಿ

ಕೆಂಪು ಮಾಂಸ: ಚಳಿಗಾಲದ ಹೊರತಾಗಿಯೂ, ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮಾಂಸ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಇದು ಹೆಚ್ಚಿನ ಪ್ರಮಾಣದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಆದ್ದರಿಂದ, ಇದನ್ನು ಮಿತವಾಗಿ ಸೇವಿಸಿ. ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ, ಅದನ್ನು ಸೇವಿಸದಿರುವುದೇ ಒಳ್ಳೆಯದು. ಜೊತೆಗೆ, ಚಳಿಗಾಲದಲ್ಲಿ, ಹೆಚ್ಚು ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡುವುದನ್ನು ತಪ್ಪಿಸಬೇಕು.

ಚಳಿಗಾಲದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

  • ಪ್ರತಿದಿನ 30 ನಿಮಿಷಗಳ ನಡಿಗೆ ಮತ್ತು ಲಘು ವ್ಯಾಯಾಮ ಮಾಡಿ.
  • ಆಹಾರದಲ್ಲಿ ಹಸಿರು ತರಕಾರಿ ಮತ್ತು ಹಣ್ಣುಗಳ ಸೇವನೆ ಮಾಡಿ.
  • ಕನಿಷ್ಠ ತಿಂಗಳಿಗೊಮ್ಮೆ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಲಿಷ್ಠ ತಂಡಗಳನ್ನು ಮಣಿಸಿ ಟಿ20 ವಿಶ್ವಕಪ್​ನಿಂದ ಹೊರಹಾಕಿದ ದುರ್ಬಲ ತಂಡಗಳಿವು – Kannada News | T20 World Cup Shocks: Underdog Victories That Rewrote Cricket History

2022 ರ ಟಿ20 ವಿಶ್ವಕಪ್‌ನಲ್ಲೂ ಇದೇ ರೀತಿಯ ಚಿತ್ರಣ ಕಂಡುಬಂದಿತ್ತು. ಜಿಂಬಾಬ್ವೆ, ಪಾಕಿಸ್ತಾನವನ್ನು ಕೇವಲ ಒಂದು ರನ್‌ನಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 130 ರನ್‌ಗಳನ್ನು ಗಳಿಸಿರೆ, ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 20 ಓವರ್‌ಗಳಲ್ಲಿ ಕೇವಲ 129 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ ಸುಲಭವಾಗಿ ಗೆಲ್ಲುತ್ತದೆ ಎಂದು ಊಹಿಸಲಾಗಿತ್ತು. ಆದರೆ ಕೇವಲ 1 ರನ್​ನಿಂದ ಸೋತಿತ್ತು.

Source link

ರೀಲ್ಸ್, ಫೇಸ್ಬುಕ್ ಪೋಸ್ಟ್​ಗಾಗಿ ಮಾಡಬಾರದು: ಪುನೀತ್ ಕೆರೆಹಳ್ಳಿಗೆ ಕೋರ್ಟ್ ಪಾಠ, ಕೇಸಿಗೆ ತಡೆ – Kannada News | Punith Kerehalli Case: HC Stays Illegal Immigrant Probe, Cautions on Social Media Posts

ಬೆಂಗಳೂರು, ಫೆಬ್ರವರಿ 05: ಅಕ್ರಮ ಬಾಂಗ್ಲಾ ವಲಸಿಗರನ್ನು ಪ್ರಶ್ನಿಸಿದ್ದ ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ (Puneeth Kerehalli) ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಹೈಕೋರ್ಟ್ ಏಕಸದಸ್ಯ ಪೀಠ ಪೊಲೀಸರನ್ನು ತರಾಟೆ ತೆಗೆದುಕೊಳ್ಳುವ ಮೂಲಕ ಕೇಸ್​ಗೆ ತಡೆ ನೀಡಿತ್ತು. ಬಳಿಕ ಪೊಲೀಸರನ್ನು ನಿಂದಿಸಲಾಗಿದೆ. ಹೀಗಾಗಿ ರೀಲ್ಸ್ ಮತ್ತು ಫೇಸ್​ ಬುಕ್ ಪೋಸ್ಟ್​ಗಾಗಿ ಇದನ್ನೆಲ್ಲಾ ಮಾಡಬಾರದು ಎಂದು ಪುನೀತ್ ಕೆರೆಹಳ್ಳಿಗೆ ಹೈಕೋರ್ಟ್ ಖಡಕ್​ ಎಚ್ಚರಿಕೆ ನೀಡಿದೆ. ಜೊತೆಗೆ ಸಿಕೆ ಅಚ್ಚುಕಟ್ಟೆ ಠಾಣೆ ಕೇಸ್​ಗೆ ಮಧ್ಯಂತರ ತಡೆ ನೀಡಿದೆ.

ಅಕ್ರಮ ಬಾಂಗ್ಲಾ ವಲಸಿಗರನ್ನು ಪ್ರಶ್ನಿಸಿದ್ದಕ್ಕೆ ಸಂಬಂಧ ಬೆಂಗಳೂರಿನ ಚನ್ನಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದತಿ ಕೋರಿ ಪುನೀತ್‌ ಕೆರೆಹಳ್ಳಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ಮಾಡಿದೆ.

ಇದನ್ನೂ ಓದಿ: ಅಕ್ರಮ ವಲಸಿಗರನ್ನ ತೋರಿಸಿದ್ರೂ ಕೇಸ್ ಹಾಕ್ತೀರಿ: ಪೊಲೀಸರಿಗೆ ಕೋರ್ಟ್ ಕ್ಲಾಸ್, ಪುನೀತ್ ಕೆರೆಹಳ್ಳಿಗೆ ರಿಲೀಫ್

ಅಕ್ರಮ ಬಾಂಗ್ಲಾ ವಲಸಿಗರ ವಿಚಾರವಾಗಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ  ಪ್ರಕರಣಗಳ ಪೈಕಿ ಒಂದು ಪ್ರಕರಣಕ್ಕೆ ನಿನ್ನೆ ಹೈಕೋರ್ಟ್ ತಡೆ ನೀಡಿತ್ತು. ಆ ಬಳಿಕ ಪುನೀತ್ ಕೆರೆಹಳ್ಳಿ ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರನ್ನು ನಿಂದಿಸಿದ್ದಾರೆ. ಈ ಬಗ್ಗೆ ಹೈಕೋರ್ಟ್​ಗೆ ಹೆಚ್ಚುವರಿ ಎಸ್‌ಪಿಪಿ ಬಿ.ಎನ್.ಜಗದೀಶ್ ಹೇಳಿಕೆ ನೀಡಿದ್ದಾರೆ.

ಈ ವೇಳೆ ಬಾಕಿ ಕೇಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಪುನೀತ್ ಕೆರೆಹಳ್ಳಿಯನ್ನ ತರಾಟೆಗೆ ತೆಗೆದುಕೊಂಡಿದೆ. ರೀಲ್ಸ್, ಫೇಸ್ ಬುಕ್ ಪೋಸ್ಟ್​ಗಾಗಿ ಇದನ್ನೆಲ್ಲಾ ಮಾಡಬಾರದು. ಸಬ್ ಜುಡೀಸ್​ ಪ್ರಕರಣದ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದು ಪೀಠ ಪ್ರಶ್ನಿಸಿದೆ.

ಇದನ್ನೂ ಓದಿ: ವಲಸಿಗರ ಶೆಡ್​ಗೆ ನುಗ್ಗಿ ಬೆದರಿಕೆ: ಪುನೀತ್​ ಕೆರೆಹಳ್ಳಿಗೆ ಜಾಮೀನು; ಹೋರಾಟ ಆರಂಭವೆಂದ ಹಿಂದೂ ಕಾರ್ಯಕರ್ತ

ಸದ್ಯ ಬಾಕಿ ಕೇಸ್ ಬಗ್ಗೆ ಫೇಸ್ ಬುಕ್ ಪೋಸ್ಟ್ ಮಾಡದಂತೆ, ಡಿಸಿಪಿ ಮುಂದೆ ಹಾಜರಾಗಿ ಬಾಂಡ್ ನೀಡಲು ಹೈಕೋರ್ಟ್ ಸೂಚನೆ ನೀಡಿದೆ. ಅಕ್ರಮ ವಲಸಿಗರ ಬಗ್ಗೆ ಹೇಳುವುದು ತಪ್ಪೆನ್ನುತ್ತಿಲ್ಲ, ಆದರೆ ಹೇಳುವ ವಿಧಾನ ಸರಿಯಿಲ್ಲವೆಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Source link

ಜ್ಯೋತಿಷಿ ಜತೆ ಚಕ್ಕಂದ: ಹೆಂಡ್ತಿ ಸುಚಿತ್ರಾಳ ಮತ್ತಷ್ಟು ಕಾಮಪುರಣ ಬಿಚ್ಚಿಟ್ಟ ಪತಿ – Kannada News | Shivamogga Murder Case: Husband Mahesh reveals Wife Suchitra And Kamalakar Bhat Relationship

ಶಿವಮೊಗ್ಗ, (ಫೆಬ್ರವರಿ 05): ಕೊಲೆ ಕೇಸ್‌ನಲ್ಲಿ  (Murder Case) ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಈತನ ಲವರ್‌ ಸುಚಿತ್ರಾ ಜೈಲು ಪಾಲಾಗಿದ್ದಾರೆ. ಈ ಜೋಡಿಹಕ್ಕಿ ಜೈಲು ಸೇರ್ತಿದ್ದಂತೆ ಇವರ ಒಂದೊಂದೇ ಕಾಮಪುರಾಣ ಹೊರಗೆ ಬರುತ್ತಿವೆ. ನಿತ್ಯಪೂಜೆ ಅಂತಾ ಬೆಳ್ಳಂ ಬೆಳಗ್ಗೆ ಟಿವಿಯಲ್ಲಿ ಬರುತ್ತಿದ್ದ ಕಮಲಾಕರ, ರಾತ್ರಿ ಆಗುತ್ತಿದ್ದಂತೆಯೇ  ಸುಚಿತ್ರಾಳ ಜತೆ ಮಂಚ ಏರ್ತಿದ್ದ. ಕಮಲಾಕರ ಹಾಗೂ ಸುಚಿತ್ರಾ ಮಾತನಾಡಿದ್ದಾರೆ ಎನ್ನಲಾಗ ಆಡಿಯೋ ವೈರಲ್ ಆಗಿದೆ. ಇನ್ನು ಮತ್ತೊಂದೆಡೆ ದಾಳಿಯಿಂದ ಗಾಯಗೊಂಡಿರುವ ಸುಚಿತ್ರಾಳ ಪತಿ ಮಹೇಶ್, ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೇ ವೇಳೆ ಹೆಂಡ್ತಿ ಸುಚಿತ್ರಾಳ ಮತ್ತಷ್ಟು ನವರಂಗಿ ಆಟವನ್ನು ಟಿವಿ9 ಮುಂದೆ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಜ್ಯೋತಿಷಿ ಕಮಲಾಕರ್‌‌ ಭಟ್‌‌, ಸುಚಿತ್ರಾಳ ಸ್ಫೋಟಕ ಆಡಿಯೋ ವೈರಲ್‌: ಅಸಲಿ ಮುಖ ಬಯಲು

Source link

‘ಟಾಕ್ಸಿಕ್’ ಪ್ರಚಾರದಲ್ಲಿ ವಿಳಂಬ ಏಕೆ? ಯಶ್ ಮಾಡುತ್ತಿರುವ ಯೋಜನೆಯೇನು? – Kannada News | Why Yash not yet started Toxic movie promotions

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾ ಸದ್ಯ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ‘ಕೆಜಿಎಫ್’ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ಯಶ್ ನಟಿಸುತ್ತಿರುವ ಚಿತ್ರವಾದ್ದರಿಂದ ಸಹಜವಾಗಿಯೇ ಕುತೂಹಲ ಗಗನಕ್ಕೇರಿದೆ. ಚಿತ್ರದ ಬಿಡುಗಡೆಗೆ ಮಾರ್ಚ್ 19 ಕ್ಕೆ ನಿಗದಿ ಆಗಿದೆ. ಬಿಡುಗಡೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಇದ್ದರೂ ದೊಡ್ಡ ಮಟ್ಟದ ಪ್ರಚಾರ ಶುರುವಾಗದಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಸಾಮಾನ್ಯವಾಗಿ ಇಷ್ಟು ದೊಡ್ಡ ಬಜೆಟ್‌ನ ಪ್ಯಾನ್-ಇಂಡಿಯಾ ಚಿತ್ರಗಳಿಗೆ ಹಲವು ತಿಂಗಳುಗಳ ಮೊದಲೇ ಪ್ರಚಾರ ಆರಂಭವಾಗುತ್ತದೆ. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೆ ಈಗಲೇ ಸಿನಿಮಾದ ಪ್ರಚಾರವನ್ನು ರಾಜಮೌಳಿ ಆರಂಭಿಸಿಬಿಟ್ಟಿದ್ದಾರೆ. ಯಶ್ ಸಹ ಪ್ರಚಾರವನ್ನು ಗಂಭೀರವಾಗಿ ಪರಿಗಣಿಸುವ ನಟ, ಏಕೆಂದರೆ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾ ಸಂದರ್ಭದಲ್ಲಿ ದೇಶದಾದ್ಯಂತ ಸಂಚರಿಸಿ ಸಿನಿಮಾ ಪ್ರಚಾರನ್ನು ಏಕಾಂಗಿಯಾಗಿ ಮಾಡಿದ್ದರು. ಆದರೆ ಯಶ್ ಈ ಬಾರಿ ಬೇರೆಯದೇ ತಂತ್ರ ಅನುಸರಿಸುತ್ತಿರುವ ಅನುಮಾನವಿದೆ.

ಟಾಕ್ಸಿಕ್ ಚಿತ್ರವನ್ನು ಹಾಲಿವುಡ್ ಗುಣಮಟ್ಟದಲ್ಲಿ ನಿರ್ಮಿಸಲಾಗುತ್ತಿದ್ದು, ಅಂತಿಮ ಹಂತದ ಎಡಿಟಿಂಗ್ ಹಾಗೂ ವಿಎಫ್‌ಎಕ್ಸ್ (VFX) ಕೆಲಸಗಳು ಪ್ರಚಾರಕ್ಕಿಂತ ಹೆಚ್ಚು ಸಮಯ ಪಡೆದುಕೊಳ್ಳುತ್ತಿವೆ ಎನ್ನಲಾಗುತ್ತಿದೆ. ಸಿನಿಮಾದ ಪ್ರಚಾರ ತಡವಾಗಲು ಇದೂ ಸಹ ಕಾರಣ ಇರಬಹುದು. ಸಿನಿಮಾದ ಪ್ರಚಾರದ ಹೆಸರಲ್ಲಿ ಈ ವರೆಗೆ ಕೇವಲ ಒಂದು ಟೀಸರ್ ಮತ್ತು ಸಿನಿಮಾದ ನಟಿಯರ ಕ್ಯಾರೆಕ್ಟರ್ ಪೋಸ್ಟರ್​​ಗಳನ್ನು ಮಾತ್ರವೇ ಬಿಡುಗಡೆ ಮಾಡಲಾಗಿದೆ. ಯಶ್ ಅಥವಾ ಚಿತ್ರತಂಡದ ಯಾರೊಬ್ಬರು ಬಹಿರಂಗವಾಗಿ ಪ್ರಚಾರವನ್ನು ಆರಂಭಿಸಿಯೇ ಇಲ್ಲ.

ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾಗೆ ಯಶ್ ಮೇಲೆ ಯಾಕಿಷ್ಟು ಕೋಪ?

ಯಶ್ ಯಾವಾಗಲೂ ‘ಸರ್ಪ್ರೈಸ್’ ನೀಡುವಲ್ಲಿ ನಿಸ್ಸೀಮರು. ಜನವರಿಯಲ್ಲಿ ಬಿಡುಗಡೆಯಾದ ‘ರಾಯ’ನ ಪಾತ್ರದ ಪರಿಚಯ ಈಗಾಗಲೇ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಪ್ರಚಾರವನ್ನು ಕೊನೆಯ ಕ್ಷಣದಲ್ಲಿ ಅಬ್ಬರದಿಂದ ಮಾಡುವ ಮೂಲಕ ಹೈಪ್ ಅನ್ನು ನೇರವಾಗಿ ಥಿಯೇಟರ್‌ಗೆ ಕೊಂಡೊಯ್ಯುವ ಪ್ಲಾನ್ ಸಹ ಯಶ್ ಅವರದ್ದಾಗಿರುವ ಸಾಧ್ಯತೆ ಇದೆ. ‘ಕೆಜಿಎಫ್’ ಸಮಯಕ್ಕಿಂತಲೂ ಭಿನ್ನವಾಗಿ ಈ ಬಾರಿ ಪ್ರಚಾರ ಮಾಡುವ ಯೋಜನೆ ಯಶ್ ಅವರಿಗೆ ಇದ್ದಂತಿದೆ.

ಇಂದಿನ ದಿನಗಳಲ್ಲಿ ಪ್ರಚಾರವು ಸಿನಿಮಾದ ಓಪನಿಂಗ್‌ಗೆ ಬಹಳ ಮುಖ್ಯ. ಉತ್ತಮ ಪ್ರಚಾರದಿಂದ ಉತ್ತಮ ಓಪನಿಂಗ್ ಸಿಗುತ್ತದೆ ಎಂಬುದು ಸಿನಿಮಾ ರಂಗದಲ್ಲಿ ಇರುವ ನಂಬಿಕೆ. ಆದರೆ, ಯಶ್ ಅವರ ಬ್ರ್ಯಾಂಡ್ ವ್ಯಾಲ್ಯೂ ಮತ್ತು ‘ಕೆಜಿಎಫ್’ ನಂತರದ ಅವರ ವರ್ಚಸ್ಸು ಜನರನ್ನು ಥಿಯೇಟರ್‌ಗೆ ಸೆಳೆಯಲು ಶಕ್ತವಾಗಿದೆ. ಮುಂದಿನ ದಿನಗಳಲ್ಲಿ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದ್ದು, ಟ್ರೈಲರ್ ಬಿಡುಗಡೆ ಬಳಿಕ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದೆ.

ಪ್ರಚಾರದಲ್ಲಿ ಆಗುತ್ತಿರುವ ವಿಳಂಬ ಯಶ್ ಅಭಿಮಾನಿಗಳಿಗೆ ಸ್ವಲ್ಪ ಆತಂಕ ತಂದಿದ್ದರೂ, ಯಶ್ ಅವರು ಯಾವಾಗಲೂ ಗುಣಮಟ್ಟಕ್ಕೆ ಆದ್ಯತೆ ನೀಡುವುದರಿಂದ ‘ಟಾಕ್ಸಿಕ್’ ಪ್ರಚಾರವೂ ಸಹ ಪರಿಣಾಮಕಾರಿ ಮತ್ತು ಸ್ಟೈಲಿಷ್ ಆಗಿಯೇ ಆಗಲಿದೆ ಎಂಬುದು ನಿರೀಕ್ಷೆ. ಮಾರ್ಚ್ 19ರ ಯುಗಾದಿ ಹಬ್ಬದಂದು ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕವಿವಿ ಶುಲ್ಕ ಏರಿಕೆ ವಿವಾದ: ಸಂಶೋಧನಾ ಪ್ರಬಂಧ ಸುಟ್ಟುಹಾಕಿ ಕಣ್ಣೀರಿಟ್ಟ ವಿದ್ಯಾರ್ಥಿಗಳು – Kannada News | Dharwad KUD PhD Fee Hike: SC, ST Students Protest, Burn Thesis at VC Chamber

ಧಾರವಾಡ, ಫೆಬ್ರವರಿ 05: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಸ್‌ಸಿ/ಎಸ್‌ಟಿ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಶುಲ್ಕ ವಿಧಿಸಿರುವ ಆಡಳಿತ ಮಂಡಳಿ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿಸಿ ಚೇಂಬರ್ ಬಳಿ ಸಂಶೋಧನಾ ಪ್ರಬಂಧವನ್ನು ಸುಟ್ಟುಹಾಕಿ ವಿದ್ಯಾರ್ಥಿಗಳು ಕಣ್ಣೀರಿಟ್ಟಿರುವಂತಹ ಘಟನೆ ನಡೆದಿದೆ. ಮೊದಲ ವರ್ಷ 1,350 ಶುಲ್ಕ ಕಟ್ಟಿದ್ದ ಸಂಶೋಧನಾ ವಿದ್ಯಾರ್ಥಿಗಳು, 2ನೇ ವರ್ಷಕ್ಕೆ 4,000 ರೂ. ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಕವಿವಿ ಆಡಳಿತ ಮಂಡಳಿ ವಿರುದ್ಧ ಸಂಶೋಧನಾ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಖ್ಖರಿಗೆ ಮಾಡಿದ ಅವಮಾನ; ರಾಹುಲ್ ಗಾಂಧಿಯ ದೇಶದ್ರೋಹಿ ಹೇಳಿಕೆಗೆ ಮೋದಿ ಆಕ್ರೋಶ – Kannada News | Rahul Gandhi Called Ravneet Singh Bittu as traitor Because He Is Sikh PM Modi says in Parliament

ನವದೆಹಲಿ, ಫೆಬ್ರವರಿ 5: ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಉತ್ತರವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಸಭೆಯಲ್ಲಿ ಭಾಷಣ ಮಾಡಿದರು. ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಹುಲ್ ಗಾಂಧಿ (Rahul Gandhi) ಇದುವರೆಗೂ ಕಾಂಗ್ರೆಸ್ ತೊರೆದ ಯಾರನ್ನೂ ದೇಶದ್ರೋಹಿ ಎಂದು ಕರೆದಿಲ್ಲ, ಆದರೆ ರವನೀತ್ ಬಿಟ್ಟು ಸಿಖ್ ಆಗಿರುವುದರಿಂದಲೇ ಅವರನ್ನು ದೇಶದ್ರೋಹಿ ಎಂದು ಕರೆದರು. ಸಿಖ್ಖರನ್ನು ಕಂಡರೆ ಕಾಂಗ್ರೆಸ್​​ನವರಿಗೆ ಆಗುವುದಿಲ್ಲ ಎಂದು ಮೋದಿ ಟೀಕಿಸಿದ್ದಾರೆ.

“ನಿನ್ನೆ ಸಂಸತ್ ಹೊರಗೆ ಒಂದು ಘಟನೆ ನಡೆಯಿತು. ಈ ಸದನದ ಸಂಸದ ರವನೀತ್ ಸಿಂಗ್ ಬಿಟ್ಟು ಅವರನ್ನು ಕಾಂಗ್ರೆಸ್‌ನ ಯುವ ರಾಜ ಎಂದು ಕರೆಸಿಕೊಳ್ಳುವ ರಾಹುಲ್ ಗಾಂಧಿ ‘ದೇಶದ್ರೋಹಿ’ ಎಂದು ಕರೆದರು. ಅವರ ದುರಹಂಕಾರ ಆಕಾಶಕ್ಕೇರಿದೆ. ಕಾಂಗ್ರೆಸ್ ಲೆಕ್ಕವಿಲ್ಲದಷ್ಟು ಬಾರಿ ವಿಭಜನೆಯಾಗಿದೆ, ಅದೆಷ್ಟೋ ಕಾಂಗ್ರೆಸ್ ನಾಯಕರು ಪಕ್ಷ ಬದಲಾಯಿಸಿದ್ದಾರೆ. ಆದರೆ, ಯಾರನ್ನೂ ಇದುವರೆಗೂ ಅವರು ‘ದೇಶದ್ರೋಹಿ’ ಎಂದು ಕರೆಯಲಿಲ್ಲ. ರವನೀತ್ ಸಿಂಗ್ ಬಿಟ್ಟು ಅವರನ್ನು ದೇಶದ್ರೋಹಿ ಎಂದು ಕರೆಯಲು ಅವರು ಸಿಖ್ ಸಮುದಾಯದವರು ಎಂಬುದೇ ಕಾರಣ. ಇದು ಸಿಖ್ಖರಿಗೆ ಮಾಡಿದ ಅವಮಾನ, ಗುರುಗಳಿಗೆ ಮಾಡಿದ ಅವಮಾನ. ಇದು ಕಾಂಗ್ರೆಸ್‌ನಲ್ಲಿ ತುಂಬಿರುವ ಸಿಖ್ಖರ ಮೇಲಿನ ದ್ವೇಷದ ಅಭಿವ್ಯಕ್ತಿಯಾಗಿತ್ತು. ರವನೀತ್ ಬಿಟ್ಟು ದೇಶಕ್ಕಾಗಿ ತಮ್ಮನ್ನು ತಾವು ತ್ಯಾಗ ಮಾಡಿದ ಕುಟುಂಬದ ಸದಸ್ಯ. ಅಂಥವರನ್ನು ದೇಶದ್ರೋಹಿ ಎಂದು ಕರೆಯುವುದನ್ನು ದೇಶ ಹೇಗೆ ಸಹಿಸಿಕೊಳ್ಳುತ್ತದೆ? ಇದು ಅತ್ಯಂತ ದುರದೃಷ್ಟಕರ” ಎಂದು ಪ್ರಧಾನಿ ಮೋದಿ ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version