ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣವಕಾಶ; ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಾತಿ – Kannada News | Gujarat Income Tax Sports Quota Recruitment 2026: MTS and Tax Asst Jobs Apply Now!

ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಯುವಜನರಿಗೆ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿಗೆ ಗುಜರಾತ್‌ನ ಆದಾಯ ತೆರಿಗೆ ಇಲಾಖೆಯಿಂದ ಉತ್ತಮ ಅವಕಾಶ ದೊರೆತಿದೆ. ಕ್ರೀಡಾ ಕೋಟಾದಡಿಯಲ್ಲಿ ಮಲ್ಟಿ–ಟಾಸ್ಕಿಂಗ್ ಸ್ಟಾಫ್ (MTS) ಮತ್ತು ತೆರಿಗೆ ಸಹಾಯಕ (Tax Assistant) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 46 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ರಾಜ್ಯ, ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಅಭ್ಯರ್ಥಿಗಳಿಗೆ ಇದು ಸರ್ಕಾರಿ ವಲಯದಲ್ಲಿ ವೃತ್ತಿಜೀವನ ನಿರ್ಮಿಸಿಕೊಳ್ಳಲು ಸುವರ್ಣಾವಕಾಶವಾಗಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 31ರಿಂದ ಆರಂಭಗೊಂಡಿದ್ದು, ಫೆಬ್ರವರಿ 21 ಕೊನೆಯ ದಿನಾಂಕ. ಆಸಕ್ತ ಅಭ್ಯರ್ಥಿಗಳು ಗುಜರಾತ್ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ incometaxgujarat.gov.in ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಗಮನದಿಂದ ಓದಿ.

ಈ ನೇಮಕಾತಿಯಲ್ಲಿ ತೆರಿಗೆ ಸಹಾಯಕ ಮತ್ತು ಮಲ್ಟಿ–ಟಾಸ್ಕಿಂಗ್ ಸ್ಟಾಫ್ ಎರಡು ಪ್ರಮುಖ ಹುದ್ದೆಗಳು ಸೇರಿವೆ . ಎರಡೂ ಹುದ್ದೆಗಳು ಸಂಪೂರ್ಣವಾಗಿ ಕ್ರೀಡಾ ಕೋಟಾದಡಿಯಲ್ಲಿ ಭರ್ತಿಯಾಗಲಿದ್ದು, ಕ್ರೀಡಾ ಕ್ಷೇತ್ರದಲ್ಲಿ ಪ್ರಮಾಣಿತ ಸಾಧನೆ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇಲಾಖೆಯು ಶೈಕ್ಷಣಿಕ ಅರ್ಹತೆಯ ಜೊತೆಗೆ ಕ್ರೀಡಾ ಪ್ರದರ್ಶನಕ್ಕೂ ಹೆಚ್ಚಿನ ಮಹತ್ವ ನೀಡುತ್ತದೆ.

ತೆರಿಗೆ ಸಹಾಯಕ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪದವಿ ಹೊಂದಿರಬೇಕು. ಜೊತೆಗೆ, ಡೇಟಾ ಎಂಟ್ರಿಯಲ್ಲಿ ಗಂಟೆಗೆ ಕನಿಷ್ಠ 8000 ಕೀ ಡಿಪ್ರೆಶನ್‌ಗಳ ವೇಗ ಇರಬೇಕು. ಮಲ್ಟಿ–ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರುವುದು ಸಾಕಷ್ಟು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕ್ರೀಡಾ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ವಯೋಮಿತಿಯ ಕುರಿತು ಹೇಳುವುದಾದರೆ, ತೆರಿಗೆ ಸಹಾಯಕ ಹುದ್ದೆಗೆ 18 ರಿಂದ 27 ವರ್ಷಗಳು ಹಾಗೂ MTS ಹುದ್ದೆಗೆ 18 ರಿಂದ 25 ವರ್ಷಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ದೊರೆಯುತ್ತದೆ.

ಇದನ್ನೂ ಓದಿ: IIT ಮದ್ರಾಸ್ ಸಮ್ಮರ್ ಇಂಟರ್ನ್‌ಶಿಪ್; ತರಬೇತಿಯ ಜೊತೆಗೆ 30,000 ರೂ. ಸ್ಟೈಫಂಡ್

ವೇತನದ ದೃಷ್ಟಿಯಿಂದಲೂ ಈ ಹುದ್ದೆಗಳು ಆಕರ್ಷಕವಾಗಿವೆ. ತೆರಿಗೆ ಸಹಾಯಕ ಹುದ್ದೆಗೆ ಆಯ್ಕೆಯಾದವರಿಗೆ 25,500 ರಿಂದ 81,100 ರೂ. ವರೆಗೆ ಸಂಬಳ ದೊರೆಯುತ್ತದೆ. MTS ಹುದ್ದೆಗೆ 18,000 ರಿಂದ 56,900 ರೂ. ವರೆಗೆ ವೇತನ ನೀಡಲಾಗುತ್ತದೆ. ಇದರ ಜೊತೆಗೆ, ಇತರ ಸರ್ಕಾರಿ ಭತ್ಯೆಗಳು ಮತ್ತು ಸೌಲಭ್ಯಗಳನ್ನೂ ಪಡೆಯಬಹುದು. ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಕ್ರೀಡಾ ಸಾಧನೆ, ಪ್ರಮಾಣಪತ್ರಗಳ ಮೌಲ್ಯಮಾಪನ ಮತ್ತು ದಾಖಲೆ ಪರಿಶೀಲನೆ ಪ್ರಮುಖ ಪಾತ್ರ ವಹಿಸುತ್ತದೆ. ಲಿಖಿತ ಪರೀಕ್ಷೆಗಿಂತ ಕ್ರೀಡಾ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನೇಮಕಾತಿ ಲಿಂಕ್ ಕ್ಲಿಕ್ ಮಾಡಿ, ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಕ್ರೀಡಾ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಫಾರ್ಮ್ ಸಲ್ಲಿಸಬೇಕು. ನಂತರ ಅದರ ಪ್ರತಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದು ಒಳಿತು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಟ್‌ಫ್ಲಿಕ್ಸ್‌ನಲ್ಲಿ ದಾಖಲೆ ಬರೆದ ‘ಧುರಂಧರ್’: ‘ಅನಿಮಲ್’, ‘ಪುಷ್ಪ 2’ ರೆಕಾರ್ಡ್ ಧೂಳೀಪಟ – Kannada News | Dhurandhar Netflix Records beats Animal And Pushpa 2 in 3 days

ಕಳೆದ ವರ್ಷಾಂತ್ಯಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್’ ಈಗ ಒಟಿಟಿ (OTT) ಲೋಕದಲ್ಲೂ ಅಧಿಪತ್ಯ ಸಾಧಿಸಿದೆ. ಜನವರಿ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ (Netflix) ಬಿಡುಗಡೆಯಾದ ಈ ಸಿನಿಮಾ, ಕೇವಲ ಒಂದೇ ವಾರದಲ್ಲಿ ಭಾರತದ ಅತಿದೊಡ್ಡ ಹಿಟ್ ಚಿತ್ರಗಳಾದ ‘ಅನಿಮಲ್’, ‘ಫೈಟರ್’ ಮತ್ತು ‘ಪುಷ್ಪ 2: ದಿ ರೂಲ್’ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿ ಹೊಸ ಇತಿಹಾಸ ಸೃಷ್ಟಿಸಿದೆ. ಆ ಮೂಲಕ, ರಣವೀರ್ ಸಿಂಗ್ ನಟನೆಯ ಈ ಸಿನಿಮಾ ಚಿತ್ರಮಂದಿರದಲ್ಲಿ ಮಾತ್ರವಲ್ಲದೇ ಒಟಿಟಿಯಲ್ಲೂ ಸೂಪರ್ ಹಿಟ್ ಆಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ‘ಧುರಂಧರ್’ ಬರೋಬ್ಬರಿ 7.6 ಮಿಲಿಯನ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಭಾರತದ ಪೋಸ್ಟ್-ಥಿಯೇಟ್ರಿಕಲ್ ಡಿಜಿಟಲ್ ಬಿಡುಗಡೆಯ ಇತಿಹಾಸದಲ್ಲೇ ಮೊದಲ ವಾರಾಂತ್ಯದಲ್ಲಿ 7 ಮಿಲಿಯನ್ ಗಡಿ ದಾಟಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಈ ಹಿಂದೆ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ 6.2 ಮಿಲಿಯನ್ ವೀಕ್ಷಣೆಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಹೃತಿಕ್ ರೋಷನ್ ಅವರ ‘ಫೈಟರ್’ (5.9 ಮಿಲಿಯನ್) ಮತ್ತು ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ (5 ಮಿಲಿಯನ್) ನಂತರದ ಸ್ಥಾನಗಳಲ್ಲಿದ್ದವು. ಇದೀಗ ‘ಧುರಂಧರ್’ ಈ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದೆ.

ಅಂಕಿಅಂಶಗಳ ಪ್ರಕಾರ, ಏಳು ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ನ ‘ಟಾಪ್ 10’ ಇಂಗ್ಲಿಷೇತರ ಸಿನಿಮಾಗಳ ಪಟ್ಟಿಯಲ್ಲಿ ‘ಧುರಂಧರ್’ ಮೊದಲ ಸ್ಥಾನದಲ್ಲಿದೆ. ವಿಶೇಷವೆಂದರೆ, ಪಾಕಿಸ್ತಾನದಲ್ಲಿ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ನಿಷೇಧ ಹೇರಲಾಗಿದ್ದರೂ, ಅಲ್ಲಿನ ಒಟಿಟಿ ಟ್ರೆಂಡಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈವರೆಗೆ ಜಾಗತಿಕವಾಗಿ ಈ ಚಿತ್ರವು 26.1 ಮಿಲಿಯನ್ ಗಂಟೆಗಳ ವೀಕ್ಷಣೆಯನ್ನು ಕಂಡಿದೆ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾದ 4 ಕೋಟಿ ಟಿಕೆಟ್ ಮಾರಾಟ; ಶಾರುಖ್, ಆಮಿರ್ ದಾಖಲೆ ಉಡೀಸ್

‘ಧುರಂಧರ್’ ಚಿತ್ರದ ಯಶಸ್ಸಿನ ನಂತರ ಅಭಿಮಾನಿಗಳು ಇದರ ಎರಡನೇ ಭಾಗ ‘ಧುರಂಧರ್: ದಿ ರಿವೇಂಜ್’ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ಸೀಕ್ವೆಲ್ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಕೂಡ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಣಾಹಣಿ ನಡೆಯುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಂಡನನ್ನು ಕೋರ್ಟ್​​​​ ಕಟಕಟೆಯಲ್ಲಿ ನಿಲ್ಲಿಸಿದ ಪತ್ನಿ: ಜಡ್ಜ್ ಎದುರೇ ವಿಷಸೇವಿಸಿದ ಪತಿ; ಏನಿದು ಪ್ರಕರಣ? – Kannada News | Bagalkote: Man Attempts Suicide in Banahatti Court During Divorce Hearing

ಬಾಗಲಕೋಟೆ, ಫೆಬ್ರವರಿ 05: ದಂಪತಿ ವಿಚ್ಛೇದನ ವಿಚಾರಣೆ ವೇಳೆ ಜಡ್ಜ್ ಎದುರೇ ಗಂಡ ವಿಷಸೇವಿಸಿ ಆತ್ಮಹತ್ಯೆಗೆ (Suicide Attempt) ಯತ್ನಿಸಿದ ಘಟನೆ ಜಿಲ್ಲೆಯ ಬನಹಟ್ಟಿ ಕೋರ್ಟ್​ನಲ್ಲಿ (Banahatti Court) ನಡೆದಿದೆ. ಜಗದಾಳ ಗ್ರಾಮದ ನಿವಾಸಿ ಯಾಕೂಬ್ ದೊಡ್ಡಮನಿ(35) ಆತ್ಮಹತ್ಯೆಗೆ ಯತ್ನಿಸಿದ ಪತಿ.  ಸದ್ಯ ಯಾಕೂಬ್ ದೊಡ್ಡಮನಿಯನ್ನು ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ಇತ್ತು. ಹೀಗಾಗಿ ಬನಹಟ್ಟಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವೇಳೆ ಜಡ್ಜ್ ಮುಂದೆ ಯಾಕೂಬ್ ದೊಡ್ಡಮನಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯಾಕೂಬ್ ದೊಡ್ಡಮನಿ ತನ್ನ ಪತ್ನಿ ಅನೈತಿಕ ಸಂಬಂಧದ ಬಗ್ಗೆ ಉಲ್ಲೇಖಿಸಿ ನ್ಯಾಯಾಲಯದ ಜಡ್ಜ್​ಗೆ ಬರೆದಿರುವ ಪತ್ರಯೊಂದು ಬಹಿರಂಗವಾಗಿದೆ.

ಸಹೋದರ ಹೇಳಿದ್ದಿಷ್ಟು

ಇನ್ನು ಘಟನೆ ಬಗ್ಗೆ ಯಾಕೂಬ್ ದೊಡ್ಡಮನಿಯ ಸಹೋದರ ಸಂಬಂಧಿ ಸದಾಶಿವ ದೊಡ್ಡಮನಿ ಮಾಧ್ಯಮದವರೊಂದಿಗೆ ಮಾತನಾಡಿ, ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು. ಹಿರಿಯರು ಎಷ್ಟೇ ಕಾಳಜಿ ವಹಿಸಿದರೂ ದಂಪತಿ ಒಂದಾಗಲಿಲ್ಲ. ಇಂದು ಕೋರ್ಟ್‌ನಲ್ಲಿ ಕೇಸ್‌ ನಡೆದಿತ್ತು. ಈ ವೇಳೆ‌‌ ನನ್ನ ಸಹೋದರ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಅನೈತಿಕ ಸಂಬಂಧ ಶಂಕೆ: ಪತಿಯಿಂದಲೇ ಪತ್ನಿಯ ಹತ್ಯೆ

ಅನೈತಿಕ ಸಂಬಂಧ ಶಂಕೆಯಿಂದ ಪತಿಯಿಂದಲೇ ಪತ್ನಿಯ ಹತ್ಯೆ ಮಾಡಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ನಡೆದಿದೆ. ಕತ್ತು ಹಿಸುಕಿ ಪತ್ನಿ ಮಮತಾ(32) ಕೊಲೆಗೈದ ಪತಿ ರಂಗನಾಥ್. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಬಾಲ್ಯ ವಿವಾಹವಾಗಿದ್ದಕ್ಕೆ ಪೋಕ್ಸೊ ಕೇಸ್: ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಪತ್ನಿ ಕೊಂದು ಪೊಲೀಸ್ ಠಾಣೆಗೆ ಬಂದು ರಂಗನಾಥ್ ಶರಣಾಗಿದ್ದಾರೆ. ರಂಗನಾಥ್​ ಮತ್ತು ಮಮತಾ 12 ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಬಸ್​ ಡಿಕ್ಕಿ: ಬೈಕ್​ ಸವಾರ ಸಾವು

ಖಾಸಗಿ ಬಸ್​ ಡಿಕ್ಕಿಯಾಗಿ ಬೈಕ್​ ಸವಾರ ಉಮೇಶ್(28) ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹೆದ್ದಾರಿ ಬಳಿ ನಡೆದಿದೆ. ಮೃತ ಉಮೇಶ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಗ್ರಾಮದ ನಿವಾಸಿ. ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:26 pm, Thu, 5 February 26

Source link

ಕಾಂಗ್ರೆಸ್ ಏನೋ ಪ್ಲಾನ್ ಮಾಡಿದೆಯೆಂದು ನಾನೇ ಪ್ರಧಾನಿ ಮೋದಿಗೆ ಗೈರಾಗಲು ಸೂಚಿಸಿದ್ದೆ; ಸ್ಪೀಕರ್ ಓಂ ಬಿರ್ಲಾ – Kannada News | I Advised PM Modi Not To Come Lok Sabha Congress MPs Planned Something Om Birla On Speech Row

ನವದೆಹಲಿ, ಫೆಬ್ರವರಿ 5: “ಕಾಂಗ್ರೆಸ್ ಸಂಸದರು ಅಧಿವೇಶನದಲ್ಲಿ ಏನೋ ಮಾಡಲು ಪ್ಲಾನ್ ಮಾಡಿದ್ದರು ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಹೀಗಾಗಿಯೇ ನಿನ್ನೆಯ ಅಧಿವೇಶನಕ್ಕೆ ಬಾರದಂತೆ ಮತ್ತು ಕಲಾಪವನ್ನು ಉದ್ದೇಶಿಸಿ ಭಾಷಣ ಮಾಡದಂತೆ ನಾನೇ ಪ್ರಧಾನಿ ಮೋದಿಯವರಿಗೆ ಸಲಹೆ ನೀಡಿದ್ದೆ” ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೂ ಮುನ್ನ ಲೋಕಸಭಾ ಅಧಿವೇಶನವನ್ನು (Lok Sabha Session) ಮುಂದೂಡಲಾಗಿತ್ತು. ಇದಕ್ಕೆ ಕಾರಣವಾದ ಗದ್ದಲದ ಬಗ್ಗೆ ಬೇಸರ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ವಿರೋಧ ಪಕ್ಷದ ಸದಸ್ಯರು ಪ್ರಧಾನಮಂತ್ರಿಗಳ ಕುರ್ಚಿಯನ್ನು ಸುತ್ತುವರೆದಿದ್ದರಿಂದ ಭದ್ರತಾ ಕಾರಣದಿಂದ ಪ್ರಧಾನಿ ಮೋದಿಯವರಿಗೆ ಲೋಕಸಭೆಗೆ ಬರದಂತೆ ನಾನೇ ಸಲಹೆ ನೀಡಿದ್ದೆ ಎಂದು ಹೇಳಿದ್ದಾರೆ.

“ಲೋಕಸಭೆಯ ಕೊಠಡಿಯೊಳಗೆ ಕೆಲವು ವಿರೋಧ ಪಕ್ಷದ ಸದಸ್ಯರು “ದುರ್ವರ್ತನೆ” ತೋರಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಧಾನಿ ಭಾಷಣದ ಸಮಯದಲ್ಲಿ ಅವ್ಯವಸ್ಥೆ ಸೃಷ್ಟಿಸಲು ಪ್ರಯತ್ನಿಸಬಹುದು ಎಂಬ ಪೂರ್ವ ಮಾಹಿತಿ ನನಗೆ ಸಿಕ್ಕಿತ್ತು. ಇತಿಹಾಸದಲ್ಲಿ ಎಂದಿಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಂಸತ್ತಿನ ಸದನಕ್ಕೆ ತಂದಿರಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಪ್ರಧಾನಿಯವರ ಪೀಠದ ಬಳಿಗೆ ಹೋಗಿ ಗದ್ದಲ ನಡೆಸಿದರು. ಇದು ಅನಿರೀಕ್ಷಿತ ದಾಳಿಗೂ ಕಾರಣವಾಗಬಹುದು ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಅಂತಹ ಘಟನೆ ಸಂಭವಿಸಿದ್ದರೆ ಅದು ರಾಷ್ಟ್ರದ ಘನತೆಗೆ ತೀವ್ರ ಹಾನಿಯನ್ನುಂಟು ಮಾಡುತ್ತಿತ್ತು. ಅದಕ್ಕಾಗಿಯೇ ನಾನು ಪ್ರಧಾನಿಯನ್ನು ಸಂಸತ್ತಿಗೆ ಬರದಂತೆ ಒತ್ತಾಯಿಸಿದೆ. ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಕಲಾಪವನ್ನು ಮುಂದೂಡಲಾಯಿತು. ನಿನ್ನೆ ನಡೆದದ್ದು ಸಂಸತ್ತಿನ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ” ಎಂದು ಲೋಕಸಭಾ ಸ್ಪೀಕರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Parliament Session: ಇಂದು ಪ್ರಧಾನಿ ಮೋದಿ ಭಾಷಣ ರದ್ದು; ವಿಪಕ್ಷಗಳ ಪ್ರತಿಭಟನೆಯಿಂದ ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಪುಸ್ತಕದ ಆಯ್ದ ಭಾಗಗಳನ್ನು ಓದದಂತೆ ನಿರ್ಬಂಧಿಸಿದ ನಂತರ ಬುಧವಾರ ಲೋಕಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಬಿಜೆಪಿಯ ಹಿರಿಯ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ರಾಹುಲ್ ಗಾಂಧಿಯ ಈ ಕ್ರಮವನ್ನು ಬಲವಾಗಿ ವಿರೋಧಿಸಿದರು.

ಬಳಿಕ ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಸೇರಿದಾಗ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಎಡ್ವಿನಾ ಮತ್ತು ನೆಹರು ಮತ್ತು ದಿ ಮಿತ್ರೋಖಿನ್ ಆರ್ಕೈವ್‌ನಂತಹ ಪುಸ್ತಕಗಳನ್ನು ಉಲ್ಲೇಖಿಸಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದರು. ಸದನದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೊರತುಪಡಿಸಿ ಯಾವುದೇ ಪುಸ್ತಕ, ಪತ್ರಿಕೆ ಅಥವಾ ಪತ್ರವನ್ನು ಸಂಸದರು ಓದುವಂತಿಲ್ಲ. ರಾಹುಲ್ ಗಾಂಧಿ ನರವಾಣೆ ಅವರ ಪುಸ್ತಕವನ್ನು ಉಲ್ಲೇಖಿಸುವುದನ್ನು ತಡೆಯಲು ಇದೇ ನಿಯಮವನ್ನು ಅನ್ವಯಿಸಲಾಗಿತ್ತು ಎಂದು ಸದನದಲ್ಲಿ ತಿಳಿಸಲಾಯಿತು.

ಇದನ್ನೂ ಓದಿ: ಮಹಿಳಾ ಸಂಸದರನ್ನು ಛೂ ಬಿಟ್ಟ ಕಾಂಗ್ರೆಸ್; ಇಂದು ಸಂಸತ್​​ನಲ್ಲಿ ಮೋದಿ ಭಾಷಣ ಮಾಡದಿರಲು ಕಾರಣವೇನು?

ಆದರೂ ನಿಶಿಕಾಂತ್ ದುಬೆ ಅವರ ಹೇಳಿಕೆಗಳು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸಂಸದರಿಂದ ಪ್ರತಿಭಟನೆಗೆ ಕಾರಣವಾಯಿತು. ಅವರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಬಳಿಕ ಸಂಜೆ 5 ಗಂಟೆಯವರೆಗೆ ಕಲಾಪ ಮುಂದೂಡಬೇಕಾಯಿತು. ಕಲಾಪ ಮುಂದೂಡಿಕೆಯ ನಂತರ ಕಾಂಗ್ರೆಸ್ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ, ದುಬೆ ಅವರಿಗೆ ಪುಸ್ತಕಗಳಿಂದ ಉಲ್ಲೇಖಿಸಲು ಅವಕಾಶ ನೀಡಿದ್ದನ್ನು ಆಕ್ಷೇಪಿಸಿದರು. ಅದೇ ನಿಯಮವನ್ನು ಉಲ್ಲೇಖಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪುಸ್ತಕವನ್ನು ಓದಲು ಅವಕಾಶವನ್ನು ನಿರಾಕರಿಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದಂತೆ ನಿಶಿಕಾಂತ್ ದುಬೆ ಅವರನ್ನು ಕೂಡ ಅಮಾನತುಗೊಳಿಸುವಂತೆ ಒತ್ತಾಯಿಸಿದರು.

ಆದರೆ, ಸ್ಪೀಕರ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿಲ್ಲ. ಹೀಗಾಗಿ, ಸಂಜೆ 5 ಗಂಟೆಗೆ ಸದನ ಮತ್ತೆ ಸೇರಿದಾಗ ಪ್ರತಿಭಟನೆಗಳು ತೀವ್ರಗೊಂಡವು. ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ನೇತೃತ್ವದಲ್ಲಿ ಮಹಿಳಾ ಸಂಸದರು ಪ್ರತಿಭಟನೆಯ ವೇಳೆ ಪ್ರಧಾನಿಯವರ ಕುರ್ಚಿಯ ಕಡೆಗೆ ತೆರಳಿ ಮುತ್ತಿಗೆ ಹಾಕಿದರು. ಯಾವುದೇ ಕಾರಣಕ್ಕೂ ಮೋದಿಗೆ ಭಾಷಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಹೀಗಾಗಿ, 1 ದಿನದ ಕಲಾಪವನ್ನು ಮುಂದೂಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರವಾಹದಂತೆ ಉಕ್ಕುತ್ತಿದೆ ಇಲಾನ್ ಮಸ್ಕ್ ಶ್ರೀಮಂತಿಕೆ; 800 ಬಿಲಿಯನ್ ಡಾಲರ್ ಆಸ್ತಿವಂತನೆನಿಸಿದ ಮೊದಲ ಮನುಷ್ಯ – Kannada News | Elon Musk becomes first person in the world to have assets valued 800 billion USD

ನವದೆಹಲಿ, ಫೆಬ್ರುವರಿ 5: ಟೆಸ್ಲಾ, ಸ್ಪೇಸ್​ಎಕ್ಸ್, ನ್ಯೂರಾಲಿಂಕ್ ಇತ್ಯಾದಿ ಸಂಸ್ಥೆಗಳ ಒಡೆಯರಾದ ಇಲಾನ್ ಮಸ್ಕ್ (Elon Musk) ಅವರ ವಿಶ್ವದ ನಂಬರ್ ಒನ್ ಶ್ರೀಮಂತನೆಂಬ ಬಿರುದು ಅಬಾಧಿತವಾಗಿ ಮುಂದುವರಿಯುವುದು ಖಚಿತವಾಗಿದೆ. ಅವರ ಆಸ್ತಿ ಮೌಲ್ಯ 800 ಬಿಲಿಯನ್ ಡಾಲರ್ ದಾಟಿದೆ. 800 ಬಿಲಿಯನ್ ಎಂದರೆ 72 ಲಕ್ಷ ಕೋಟಿ ರೂ. ಈ 800 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಜಗತ್ತಿನ ಮೊದಲ ವ್ಯಕ್ತಿ ಇಲಾನ್ ಮಸ್ಕ್.

ಅವರದ್ದೇ ಮಾಲಕತ್ವದ ಸಂಸ್ಥೆಗಳಾದ ಸ್ಪೇಸ್ ಎಕ್ಸ್ ಮತ್ತು ಎಕ್ಸ್​ಎಐ ವಿಲೀನ ಆದ ನಂತರ ಮಸ್ಕ್ ಅವರ ಶ್ರೀಮಂತಿಕೆ ತಾರಕಕ್ಕೇರಿದೆ. ಎಕ್ಸ್​ಎಐ ಅನ್ನು ಖರೀದಿಸಿದ ಬಳಿಕ ಸ್ಪೇಸ್​ಎಕ್ಸ್​ನ ಮೌಲ್ಯ ಬಹಳ ಹೆಚ್ಚಾಗಿದೆ. ಈ ಡೀಲ್​ಗೆ ಮುನ್ನ ಸ್ಪೇಸ್​ಎಕ್ಸ್ ಮೌಲ್ಯ 336 ಬಿಲಿಯನ್ ಡಾಲರ್ ಇತ್ತು. ಎಕ್ಸ್​ಎಐ ಮೌಲ್ಯ 122 ಬಿಲಿಯನ್ ಡಾಲರ್ ಇತ್ತು. ಒಪ್ಪಂದದ ಬಳಿಕ ಸ್ಪೇಸ್​ಎಕ್ಸ್​ನ ಮೌಲ್ಯ 542 ಬಿಲಿಯನ್ ಡಾಲರ್​ಗೆ ಏರಿದೆ. ಇದರಲ್ಲಿ ಇಲಾನ್ ಮಸ್ಕ್ ಅವರ ಷೇರುಪಾಲು ಶೇ. 43ರಷ್ಟಿದ್ದು, ಅದರ ಮೌಲ್ಯ 542 ಬಿಲಿಯನ್ ಡಾಲರ್ ಇದೆ. ಇದರ ಜೊತೆಗೆ ಇಲಾನ್ ಮಸ್ಕ್ ಅವರು ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾಲಕತ್ವ ಹೊಂದಿದ್ದಾರೆ.

ಇಲಾನ್ ಮಸ್ಕ್ ಅವರ ಬಹುತೇಕ ಆಸ್ತಿಗಳೆಲ್ಲವೂ ಷೇರುಗಳ ಸ್ವರೂಪದಲ್ಲೇ ಇವೆ. ಫೋರ್ಬ್ಸ್ ಬಿಲಿಯನೇರ್​ಗಳ ಪಟ್ಟಿಯ ಪ್ರಕಾರ ಅವರ ಆಸ್ತಿ ಮೌಲ್ಯ 854 ಬಿಲಿಯನ್ ಡಾಲರ್​ಗೆ ಏರಿತು. ಈ ವರದಿ ಬರೆಯುವ ಸಂದರ್ಭದಲ್ಲಿ ಅವರ ಆಸ್ತಿಮೌಲ್ಯ 841 ಬಿಲಿಯನ್ ಡಾಲರ್ ಇತ್ತು. ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರುದಾರಿಕೆ ಇರುವುದರ ಜೊತೆಗೆ 124 ಬಿಲಿಯನ್ ಡಾಲರ್ ಮೌಲ್ಯದ ಸ್ಟಾಕ್ ಆಪ್ಷನ್ಸ್ ಕೂಡ ಮಸ್ಕ್ ಅವರಿಗಿದೆ. ಟೆಸ್ಲಾದ ಬ್ಯುಸಿನೆಸ್ ಗುರಿಯನ್ನು ಈಡೇರಿಸಿದರೆ ಈ ಸ್ಟಾಕ್ ಆಪ್ಷನ್​ಗಳು ಷೇರುಗಳಾಗಿ ಪರಿವರ್ತನೆ ಆಗುತ್ತವೆ. ಆಗ ಮಸ್ಕ್ ಅವರ ಶ್ರೀಮಂತಿಕೆಯ ಮೌಲ್ಯ 1 ಟ್ರಿಲಿಯನ್ ಡಾಲರ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತವೆ.

ಇದನ್ನೂ ಓದಿ: ಎಎಂಸಿಎ ಪ್ರಾಜೆಕ್ಟ್ ರೇಸ್​ನಿಂದ ಎಚ್​ಎಎಲ್ ಔಟ್; ಈ ಯೋಜನೆಯಿಂದ ನಿರ್ಗಮಿಸಲು ಕಾರಣವಾಯಿತಾ ಈ ಸಂಗತಿ?

ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ಶ್ರೀಮಂತರಿವರು…

  1. ಇಲಾನ್ ಮಸ್ಕ್: 841.1 ಬಿಲಿಯನ್ ಡಾಲರ್
  2. ಲ್ಯಾರಿ ಪೇಜ್: 272.4 ಬಿಲಿಯನ್ ಡಾಲರ್
  3. ಸೆರ್ಗೇ ಬ್ರಿನ್: 251.3 ಬಿಲಿಯನ್ ಡಾಲರ್
  4. ಜೆಫ್ ಬೇಜೋಸ್: 244.3 ಬಿಲಿಯನ್ ಡಾಲರ್
  5. ಮಾರ್ಕ್ ಜುಕರ್ಬರ್ಗ್: 229.3 ಬಿಲಿಯನ್ ಡಾಲರ್
  6. ಲ್ಯಾರಿ ಎಲಿಸನ್: 190.6 ಬಿಲಿಯನ್ ಡಾಲರ್
  7. ಬರ್ನಾರ್ಡ್ ಆರ್ನಾಲ್ಟ್: 165.3 ಬಿಲಿಯನ್ ಡಾಲರ್
  8. ಜೆನ್ಸೆನ್ ಹುಆಂಗ್: 151.3 ಬಿಲಿಯನ್ ಡಾಲರ್
  9. ವಾರನ್ ಬಫೆಟ್: 149.5 ಬಿಲಿಯನ್ ಡಾಲರ್
  10. ಅಮಾನ್ಷಿಯೋ ಆರ್ಟೆಗಾ: 148.5 ಬಿಲಿಯನ್ ಡಾಲರ್
  11. ರಾಬ್ ವಾಲ್ಟನ್: 146 ಬಿಲಿಯನ್ ಡಾಲರ್
  12. ಜಿಮ್ ವಾಲ್ಟನ್: 143.3 ಬಿಲಿಯನ್ ಡಾಲರ್
  13. ಅಲೈಸ್ ವಾಲ್ಟನ್: 134.1 ಬಿಲಿಯನ್ ಡಾಲರ್
  14. ಮಿಚೆಲ್ ಡೆಲ್: 130 ಬಿಲಿಯನ್ ಡಾಲರ್
  15. ಸ್ಟೀವ್ ಬಾಲ್ಮರ್: 129.7 ಬಿಲಿಯನ್ ಡಾಲರ್
  16. ಮೈಕೇಲ್ ಬ್ಲೂಂಬರ್ಗ್: 109.4 ಬಿಲಿಯನ್ ಡಾಲರ್
  17. ಕಾರ್ಲೊಸ್ ಸ್ಲಿಮ್ ಹೆಲು: 108 ಬಿಲಿಯನ್ ಡಾಲರ್
  18. ಬಿಲ್ ಗೇಟ್ಸ್: 105.5 ಬಿಲಿಯನ್ ಡಾಲರ್
  19. ಮುಕೇಶ್ ಅಂಬಾನಿ: 103.4 ಬಿಲಿಯನ್ ಡಾಲರ್
  20. ಫ್ರಾಂಕಾಯ್ಸ್ ಬೆಟೆನ್​ಕೋರ್ಟ್ ಮೆಯೆರ್ಸ್: 97.3 ಬಿಲಿಯನ್ ಡಾಲರ್
  21. ಥಾಮಸ್ ಪೀಟರ್​ಫಿ: 85.3 ಬಿಲಿಯನ್ ಡಾಲರ್
  22. ಜುಲಿಯಾ ಕೋಚ್: 81.1 ಬಿಲಿಯನ್ ಡಾಲರ್
  23. ಚ್ಯಾಂಗ್​ಪೆಂಗ್ ಝಾಹೋ: 78.8 ಬಿಲಿಯನ್ ಡಾಲರ್
  24. ಚಾರ್ಲ್ಸ್ ಕೋಚ್: 73.7 ಬಿಲಿಯನ್ ಡಾಲರ್
  25. ಝೋಂಗ್ ಶಂಶನ್: 70 ಬಿಲಿಯನ್ ಡಾಲರ್
  26. ಝಾಂಗ್ ಯಿಮಿಂಗ್: 69.3 ಬಿಲಿಯನ್ ಡಾಲರ್
  27. ಗೌತಮ್ ಅದಾನಿ: 67.1 ಬಿಲಿಯನ್ ಡಾಲರ್
  28. ಜೆಫ್ ಯಾಸ್: 65.6 ಬಿಲಿಯನ್ ಡಾಲರ್
  29. ಜರ್ಮನ್ ಲಾರಿಯಾ ಮೊಟಾ ವೆಲಾಸ್ಕೋ: 63.1 ಬಿಲಿಯನ್ ಡಾಲರ್
  30. ಮಾ ಹುವಾಟೆಂಗ್: 57.7 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

UPSC CSE and IFS Notification OUT: UPSC ನಾಗರಿಕ ಸೇವಾ ಪರೀಕ್ಷೆ; 933 ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟ – Kannada News | UPSC CSE and IFS 2026 Notification OUT: Apply for 933 Posts by Feb 24! Eligibility and Details

ಕೇಂದ್ರ ಲೋಕಸೇವಾ ಆಯೋಗ (UPSC) 2026ರ ನಾಗರಿಕ ಸೇವಾ ಪರೀಕ್ಷೆ (CSE) ಮತ್ತು ಭಾರತೀಯ ಅರಣ್ಯ ಸೇವಾ ಪರೀಕ್ಷೆ (IFS)ಗಳ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶದ ಉನ್ನತ ಆಡಳಿತಾತ್ಮಕ ಸೇವೆಗಳಲ್ಲಿ ವೃತ್ತಿಜೀವನ ನಿರ್ಮಿಸಲು ತಯಾರಿ ನಡೆಸುತ್ತಿರುವ ಯುವಜನರಿಗೆ ಇದು ಅತ್ಯಂತ ಮಹತ್ವದ ಅವಕಾಶವಾಗಿದೆ. ಈ ಪರೀಕ್ಷೆಗಳ ಮೂಲಕ IAS, IPS, IFS ಸೇರಿದಂತೆ ವಿವಿಧ ಕೇಂದ್ರ ಸೇವೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಒಟ್ಟು 933 ಹುದ್ದೆಗಳನ್ನು ಭರ್ತಿ ಮಾಡಲು UPSC ಉದ್ದೇಶಿಸಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅಭ್ಯರ್ಥಿಗಳಿಗೆ ಅಗತ್ಯವಾದ ಎಲ್ಲಾ ಸೂಚನೆಗಳನ್ನು ಆಯೋಗವು ಅಧಿಸೂಚನೆಯಲ್ಲಿ ನೀಡಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

UPSC 2026ರ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಫೆಬ್ರವರಿ 4ರಿಂದ ಆರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು UPSCಯ ಅಧಿಕೃತ ವೆಬ್‌ಸೈಟ್ upsconline.nic.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 24,ಸಂಜೆ 6 ಗಂಟೆಯವರೆಗೆ ನಿಗದಿಪಡಿಸಲಾಗಿದೆ. ಅಂತಿಮ ದಿನದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು, ಅಭ್ಯರ್ಥಿಗಳು ಮುಂಚಿತವಾಗಿಯೇ ಅರ್ಜಿ ಪೂರ್ಣಗೊಳಿಸುವಂತೆ ಆಯೋಗವು ಸಲಹೆ ನೀಡಿದೆ.

ಹುದ್ದೆಗಳ ವಿತರಣೆ ಮತ್ತು ಮೀಸಲಾತಿ:

ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಘೋಷಿಸಲಾದ 933 ಹುದ್ದೆಗಳಲ್ಲಿ ಸುಮಾರು 35 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ವಿವಿಧ ಕೇಂದ್ರ ಸೇವೆಗಳು ಮತ್ತು ಇಲಾಖೆಗಳಲ್ಲಿ ಅಧಿಕಾರಿ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ಮೀಸಲಾತಿ ಸಂಬಂಧಿತ ಎಲ್ಲಾ ಸೌಲಭ್ಯಗಳನ್ನು ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಅನ್ವಯಿಸಲಾಗುತ್ತದೆ.

ಅರ್ಹತೆ ಮತ್ತು ವಯಸ್ಸಿನ ಮಿತಿ:

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಸಹ ಪ್ರಾಥಮಿಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಯಸ್ಸಿನ ಮಿತಿಯನ್ನು ಆಗಸ್ಟ್ 1, 2026ರ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಸಾಮಾನ್ಯವಾಗಿ ವಯೋಮಿತಿ 21 ರಿಂದ 32 ವರ್ಷಗಳವರೆಗೆ ಇರುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ದೊರೆಯುತ್ತದೆಯಾದರೆ, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಪ್ರಯತ್ನಗಳ ಗರಿಷ್ಠ ಸಂಖ್ಯೆ:

UPSC ನಾಗರಿಕ ಸೇವಾ ಪರೀಕ್ಷೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗರಿಷ್ಠ ಆರು ಬಾರಿ ಪ್ರಯತ್ನಿಸಬಹುದು. ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಒಂಬತ್ತು ಪ್ರಯತ್ನಗಳಿಗೆ ಅವಕಾಶವಿದೆ. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಪ್ರಯತ್ನಗಳ ಸಂಖ್ಯೆಗೆ ಮಿತಿ ವಿಧಿಸಲಾಗಿಲ್ಲ; ಆದರೆ ಅವರು ನಿಗದಿತ ವಯೋಮಿತಿಯೊಳಗೆ ಇರಬೇಕು.

ಇದನ್ನೂ ಓದಿ: IIT ಮದ್ರಾಸ್ ಸಮ್ಮರ್ ಇಂಟರ್ನ್‌ಶಿಪ್; ತರಬೇತಿಯ ಜೊತೆಗೆ 30,000 ರೂ. ಸ್ಟೈಫಂಡ್

OTR ಮತ್ತು ಅರ್ಜಿ ಶುಲ್ಕ:

ಈ ಬಾರಿ ಅರ್ಜಿ ಸಲ್ಲಿಸಲು ಒಂದು ಬಾರಿ ನೋಂದಣಿ (One Time Registration – OTR) ಕಡ್ಡಾಯವಾಗಿದೆ. ಅಭ್ಯರ್ಥಿಗಳು ಮೊದಲು OTR ಪ್ರೊಫೈಲ್ ರಚಿಸಿ, ನಂತರವೇ ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಬೇಕು. ಸಾಮಾನ್ಯ ಮತ್ತು OBC ಪುರುಷ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100ರೂ. ಆಗಿದ್ದು, ಮಹಿಳಾ ಅಭ್ಯರ್ಥಿಗಳು, ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅಪ್‌ಲೋಡ್ ಮಾಡುವ ಫೋಟೋ ಇತ್ತೀಚಿನದಾಗಿರಬೇಕು ಮತ್ತು ಅದರಲ್ಲಿ ಅಭ್ಯರ್ಥಿಯ ಹೆಸರು ಹಾಗೂ ದಿನಾಂಕ ಸ್ಪಷ್ಟವಾಗಿ ಕಾಣಿಸಬೇಕು.

ಪರೀಕ್ಷಾ ಕೇಂದ್ರ ಆಯ್ಕೆ:

ಪ್ರಾಥಮಿಕ ಪರೀಕ್ಷೆಯ ಕೇಂದ್ರಗಳನ್ನು “ಮೊದಲು ಬಂದವರಿಗೆ ಆದ್ಯತೆ” ಆಧಾರದ ಮೇಲೆ ಹಂಚಲಾಗುತ್ತದೆ. ಆದ್ದರಿಂದ, ನಿಮ್ಮ ಆದ್ಯತೆಯ ನಗರದಲ್ಲಿ ಪರೀಕ್ಷಾ ಕೇಂದ್ರವನ್ನು ಪಡೆಯಲು ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ಇದು ನಿಮ್ಮ ಪರೀಕ್ಷಾ ಅನುಭವವನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ – Kannada News | Parliament Budget Session: PM Narendra Modi Speech In Rajya Sabha, here Is Live streaming

ನವದೆಹಲಿ, (ಫೆಬ್ರವರಿ 05): ಕೇಂದ್ರ ಬಜೆಟ್ ಅಧಿವೇಶನ (Union Budget session 2026) ಅಂತಿಮ ಹಂತಕ್ಕೆ ಬಂದಿದೆ. ನಿನ್ನೆ (ಫೆಬ್ರವರಿ 04) ಲೋಕಸಭಾ ಬಜೆಟ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಷಣ ಮಾಡಬೇಕಿತ್ತು. ಆದರೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಗಳ ಅಂಶಗಳನ್ನು ಉಲ್ಲೇಖಿಸಲು ಸದನದಲ್ಲಿ ಅವಕಾಶ ನೀಡದ ಕಾರಣ ವಿರೋಧ ಪಕ್ಷಗಳ ಸಂಸದರು ಗಲಾಟೆ ಮಾಡಿದ್ದರು. ಹೀಗಾಗಿ ಲೋಕಸಭೆಯಲ್ಲಿ ಮೋದಿ ಮಾಡಬೇಕಿದ್ದ ಭಾಷಣವನ್ನು ರದ್ದು ಮಾಡಲಾಗಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಉತ್ತರ ನೀಡುತ್ತಿದ್ದು, ಇದರ ನೇರಪ್ರಸಾರ ಇಲ್ಲಿದೆ ನೋಡಿ.

Source link

ಚಾಮರಾಜನಗರ ಜಿಲ್ಲೆಯಲ್ಲಿ ಹಸುಗಳ ಸರಣಿ ಸಾವು: ಎರಡೇ ದಿನಗಳಲ್ಲಿ ಮೃತಪಟ್ಟ 11 ಗೋವು – Kannada News | Chamarajanagar: 11 Cows Die in 2 Days, Poisoning Feared

ಚಾಮರಾಜನಗರ, ಫೆಬ್ರವರಿ 05: ಕಾಡು ಪ್ರಾಣಿಗಳ ಹಾವಳಿಹಿಂದ ಜಾನುವಾರುಗಳನ್ನು ಕಳೆದುಕೊಂಡು ಮೊದಲೇ ಕಂಗಾಲಾಗಿದ್ದ ಗಡಿ ಜಿಲ್ಲೆ ಚಾಮರಾಜನಗರದ ರೈತರಿಗೆ ಮತ್ತೊಂದು ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಹಸುಗಳ ಸರಣಿ ಸಾವು ನಡೆಯುತ್ತಿದ್ದು, ಕೇವಲ ಎರಡು ದಿನಗಳ ಅವಧಿಯಲ್ಲಿ ಒಂದೆರಡಲ್ಲ ಬರೋಬ್ಬರಿ 11 ಗೋವುಗಳು ಮೃತಟಪಟ್ಟಿವೆ. ಜಾನುವಾರುಗಳಿಗೆ ವಿಷ ಹಾಕಿರುವ ಅನುಮಾನ ವ್ಯಕ್ತವಾಗಿದ್ದು, ಹಸುಗಳ ಮಾಲಕರು ಕಣ್ಣೀರಿಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ 6 ಹಸುಗಳು ಅನುಮಾನಾಸ್ಪದವಾಗಿ ನಿನ್ನೆ ಮೃತಪಟ್ಟಿದ್ದವು. ಪರಶಿವ ಎಂಬವರಿಗೆ ಸೇರಿದ ಹಸುಗಳು ಜಮೀನಿನ ಪಕ್ಕದಲ್ಲಿ ಗೋವಿನ ಮೃತದೇಹಗಳು ಬಿದ್ದಿದ್ದು, ಬೆಳಗ್ಗೆ ಮೇವು ಹಾಕಲು ಜಮೀನಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ತಹಶೀಲ್ಧಾರ್ ಚೈತ್ರಾ, ಪಶು ವೈದ್ಯಾಧಿಕಾರಿ ಸಿದ್ದರಾಜು ಪರಿಶೀಲನೆ ನಡೆಸಿದ್ದರು. ಮೇಲ್ನೊಟಕ್ಕೆ ವಿಷ ಪೂರಿತ ಆಹಾರ ಅಥವಾ ವಿಷ ಪೂರಿತ ನೀರು ಸೇವಿಸಿ ಹಸುಗಳು ಮೃತಪಟ್ಟಿರುವ ಬಗ್ಗೆ ಅಂದಾಜಿಸಲಾಗಿತ್ತು. 8 ಹಸುಗಳ ಪೈಕಿ 6 ಮೃತಪಟ್ಟಿದ್ದರೆ ಇನ್ನು 2 ನಾಪತ್ತೆಯಾಗಿರುವ ವಿಚಾರ ಈ ವೇಳೆ ಗೊತ್ತಾಗಿತ್ತು.

ಇದನ್ನೂ ಓದಿ: ಸುಳ್ವಾಡಿಯಲ್ಲಿ ಭಾರೀ ದುರಂತ; ಫ್ಲೋರೈಡ್ ಮಿಶ್ರಿತ ನೀರು ಕುಡಿದು 47 ಮಂದಿಗೆ ಕಿಡ್ನಿ ವೈಫಲ್ಯ

ಘಟನೆ ಮಾಸುವ ಮುನ್ನವೇ ಇದೇ ತಾಲೂಕಿನ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ಇಂದು 5 ಹಸುಗಳ ನಿಗೂಢವಾಗಿ ಮೃತಪಟ್ಟಿವೆ. ಗ್ರಾಮದ ತಂಗವೇಲು ಎಂಬುವವರಿಗೆ ಸೇರಿದ ಹಸುಗಳು ಮೃತಪಟ್ಟಿರೋದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಹಸುಗಳನ್ನ ಕಳೆದುಕೊಂಡಿರುವ ಮಾಲಕರಿ ಕಣ್ಣೀರು ಹಾಕಿದ್ದು, ಜೀವನೊಪಾಯಕ್ಕೆ ಇದ್ದಿದ್ದೆ ಈ ಹಸುಗಳು. ಈಗ ನಮ್ಮ ಕತೆ ಏನು ಎಂದು ಭಾವುಕರಾಗಿದ್ದಾರೆ. ಹಸು ಸಾವಿಗೆ ಕಾರಣವಾದರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಡವಾಗಿ ಸಭೆಗೆ ಆಗಮಿಸಿದ ಆಧಿಕಾರಿಗಳಿಗೆ ಚಳಿ ಬಿಡಿಸಿದ ರೈತರು

2 ತಾಸುಗಳ ಕಾಲ ತಡವಾಗಿ ಸಭೆಗೆ ಆಗಮಿಸಿದ ಆಧಿಕಾರಿಗಳಿಗೆ ರೈತರು ಚಳಿಬಿಡಿಸಿರುವ ಘಟನೆ ಚಾಮರಾಜನಗರದ ಜಿಲ್ಲಾಧಿಕಾರಿ ಭವನದಲ್ಲಿ ನಡೆದಿದೆ. ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್​​ಗೆ ರೈತರು ಹಿಗ್ಗಾ ಮುಗ್ಗಾ ಜಾಡಿಸಿದ್ದು, ಈ ವೇಳೆ ಮಾಧ್ಯಮದವರಿಗೆ ವಿಡಿಯೋ ರೆಕಾರ್ಡ್ ಮಾಡದಂತೆ ಎಡಿಸಿ ಜವರೇಗೌಡ ಸೂಚಿಸಿದ ಪ್ರಸಂಗವೂ ನಡೆದಿದೆ. ಕಬಿನಿ ಹಿನ್ನೀರು, ಬಂಡೀಪುರದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್, ಹೋಮ್ ಸ್ಟೇ ಹಾಗೂ ಹೋಟೇಲ್​​ಗಳ ತೆರವು ವಿಚಾರವಾಗಿ ಸಭೆ ಕರೆಯಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಗರೇಟ್ ಸೇದಿದ್ರೆ ರಜತ್ ದೊಡ್ಡ ಹೀರೋನಾ? ದೂರು ನೀಡಿದ ಕಾರ್ಯಕರ್ತರ ಪ್ರತಿಕ್ರಿಯೆ – Kannada News | Karnataka Sena Pade activists talk about Rajath Kishan reels controversy

ನಟ, ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ (Rajath Kishan) ಅವರು ಈ ಮೊದಲು ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ಸಂಕಷ್ಟ ಎದುರಿಸುವಂತಾಗಿತ್ತು. ಈಗ ಅವರು ಪಾರಂಪರಿಕ ಕಟ್ಟಡದ ಎದುರು ಸಿಗರೇಟ್ ಸೇದಿದ್ದಕ್ಕೆ ದೂರು ದಾಖಲಾಗಿದೆ. ‘ಕರ್ನಾಟಕ ಸೇನಾ ಪಡೆ’ (Karnataka Sena Pade) ಕಾರ್ಯಕರ್ತರು ದೂರು ನೀಡಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ಪ್ರತಿಕ್ರಿಯೆ ನೀಡಿದ್ದಾರೆ. ‘ಮೈಸೂರಿನ ಪಾರಂಪರಿಕ ಕಟ್ಟಡ ಆಗಿರುವ ನಮ್ಮ ಡಿಸಿ ಕಚೇರಿ ಎದುರು ರಜತ್ ಸಿಗರೇಟ್ ಸೇದಿ, ರೀಲ್ಸ್ ಮಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಸಾರ್ವಜನಿಕವಾಗಿ ಸಿಗರೇಟ್ ಸೇದುವುದು ಅಪರಾಧ. ಅಂಥದ್ದರಲ್ಲಿ ಸೆಲೆಬ್ರಿಟಿ ಆದ ಇವರು ಈ ರೀತಿ ಮಾಡಿದ್ದು ಎಷ್ಟರಮಟ್ಟಿಗೆ ಸರಿ? ಇದರಿಂದ ಯುವ ಜನತೆಗೆ ಏನು ಸಂದೇಶ ನೀಡುತ್ತಾರೆ? ಸಿಗರೇಟ್ ಸೇದಿದರೆ ಇವರೇನೂ ದೊಡ್ಡ ಹೀರೋ ಅಂದುಕೊಂಡಿದ್ದಾರಾ? ರಜತ್ (Rajath)​ ಅವರಿಗೆ ಈ ರೀತಿ ಫೋಟೋಶೂಟ್ ಮಾಡಲು ಅನುಮತಿ ಕೊಟ್ಟವರು ಯಾರು? ರಜತ್ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕಾರ್ಯಕರ್ತರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

9 ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಇದುವರೆಗೆ ಮುರಿಯಲಾಗದ ದಾಖಲೆಗಳಿವು – Kannada News | T20 World Cup History: Records, Champions & Fascinating Facts from 2007 to 2024

ಹೆಚ್ಚು ಬಾರಿ ಚಾಂಪಿಯನ್ ಆದ ತಂಡಗಳು; ಟಿ20 ವಿಶ್ವಕಪ್​ನಲ್ಲಿ ಮೂರು ತಂಡಗಳು ಮಾತ್ರ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ಆ ಮೂರು ತಂಡಗಳಲ್ಲಿ ಭಾರತ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಸೇರಿವೆ. 2007ಮತ್ತು 2024 ರ ಭಾರತ ಪ್ರಶಸ್ತಿ ಎತ್ತಿ ಹಿಡಿದರೆ, 2012 ಮತ್ತು 2016 ರಲ್ಲಿ ವಿಂಡೀಸ್ ಚಾಂಪಿಯನ್ ಆಗಿತ್ತು. ಮತ್ತೊಂದೆಡೆ, ಇಂಗ್ಲೆಂಡ್ 2010 ಮತ್ತು 2022 ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿತ್ತು.

Source link

Exit mobile version