SSLC Exam 2 Time Table: 10ನೇ ತರಗತಿಯಲ್ಲಿ ಫೇಲ್ ಆದವರಿಗೆ ಮತ್ತೊಂದು ಚಾನ್ಸ್: ಪರೀಕ್ಷೆ-2 ವೇಳಾಪಟ್ಟಿ ಪ್ರಕಟ – Kannada News | Karnataka SSLC exam 2 time table Announced By KSEAB, here Is date And Fee details

ಬೆಂಗಳೂರು, (ಏಪ್ರಿಲ್ 23): ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕುತೂಹಲದಿಂದ ಕಾಯುತ್ತಿದ್ದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Results 2026)   ಪ್ರಕಟವಾಗಿದ್ದು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೇ.94.10 ಫಲಿತಾಂಶ ಬಂದಿದೆ. ಇನ್ನು ಜಿಲ್ಲೆಗಳಲ್ಲಿ 98.40% ಉತ್ತೀರ್ಣ ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ‌ ಸ್ಥಾನ ಪಡೆದುಕೊಂಡಿದ್ದರೆ, ಕಲಬುರಗಿ ಕೊನೆ ಸ್ಥಾನದಲ್ಲಿದೆ. ಇನ್ನು ಪಾಸಾದ ವಿದ್ಯಾರ್ಥಿಗಳ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಮುಂದೆ ಯಾವ ಕಾಲೇಜಿ ಏನು ಅಂತೆಲ್ಲಾ ಚರ್ಚೆಯಲ್ಲಿ ತೊಡಗಿದ್ದಾರೆ. ಇನ್ನು ಫೇಲಾದ ವಿದ್ಯಾರ್ಥಿಗಳು ಚಿಂತಿಸುವ ಅಗತ್ಯವಿಲ್ಲ. ಇನ್ನೊಂದು ಪರೀಕ್ಷೆ ಬರೆಯಲು ಅವಕಾಶ ಇದ್ದು, ಎರಡನೇ ಪರೀಕ್ಷೆ ಬರೆದು ಪಾಸಾಗಿ ಕಾಲೇಜು ಮೆಟ್ಟಿಲು ಏರಬಹುದು. ಹೌದು…ಪರೀಕ್ಷೆ 2 ವೇಳಾಪಟ್ಟಿ ಸಹ ಪ್ರಕಟವಾಗಿದ್ದು, ಅದು ಈ ಕೆಳಗಿನಂತಿದೆ ನೋಡಿ.

ಮೇ 18ರಿಂದ ಮೇ 25ರವರೆಗೆ ಪರೀಕ್ಷೆ 2

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ (ಪೂರಕ ಪರೀಕ್ಷೆ) ನಡೆಸಲಾಗುತ್ತದೆ. ಪರೀಕ್ಷೆ-2 ಮೇ 18ರಿಂದ ಮೇ 25, 2026ರವರೆಗೆ ನಡೆಯಲಿದೆ. ಈ ಮರುಪರೀಕ್ಷೆಗೆ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಈ ಬಾರಿ ಮರುಪರೀಕ್ಷೆಯ ತೃತೀಯ ಪರೀಕ್ಷೆಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: SSLC District Wise Result: ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ

ಪರೀಕ್ಷೆ 1ಕ್ಕೆ ಗೈರು ಹಾಜರಾಗಿರುವ ವಿದ್ಯಾರ್ಥಿಗಳು ಈಗಾಗಲೇ ಅಭ್ಯಾಸ ಮಾಡಿದ ಶಾಲೆಯಲ್ಲಿ  ಪರೀಕ್ಷೆ 2ಕ್ಕೆ ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.  ಇವರು ಖಾಸಗಿ ವಿದ್ಯಾರ್ಥಿಗಳಾಗಿ ನೊಂದಾಯಿಸಲು  ನಿಗಧಿಪಡಿಸಿರುವ  ನೋಂದಣಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು.

ಪರೀಕ್ಷೆ 2 ವೇಳಾಪಟ್ಟಿ

  • 18-5-26 ಪ್ರಥಮ ಭಾಷೆ: ಕನ್ನಡ, ತೆಗಲು, ಹಿಂದಿ, ಇಂಗ್ಲೀಷ್, ಮರಾಠಿ, ಉರ್ದು, ಸಂಸ್ಕೃತ.
  • 19-5-26: (ಕೋರ್ ಸಬ್ಜೆಕ್ಟ್) ಪೊಲಿಟಿಕಲ್ ಸೈನ್ಸ್,.
  • 20-5-26 ದ್ವಿತೀಯ ಭಾಷೆ: ಇಂಗ್ಲೀಷ್, ಕನ್ನಡ.
  • 21-5-26: (ಕೋರ್ ಸಬ್ಜೆಕ್ಟ್) ಗಣಿತ, ಸಮಾಜಶಾಸ್ತ್ರ,.
  • 22 5-26: ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಕೊಂಕಣಿ, ತುಳು, ಮರಾಠಿ, ಸಂಸ್ಕೃತ.
  • 23-5-26 ಕೋರ್ ಸಬ್ಜೆಕ್ಟ್: ಸೋಷಿಯಲ್ ಸೈನ್ಸ್

ಪರೀಕ್ಷೆ 2  ಶುಲ್ಕ ಎಷ್ಟು?

ಪರೀಕ್ಷೆ 1ರಲ್ಲಿ ಅನುತ್ತೀರ್ಣರಾದವರಿಗೆ  ಪರೀಕ್ಷೆ 2 ಅವಕಾಶ ಇದ್ದು, ನೊಂದಾಯಿಸಿಕೊಳ್ಳಲು ವಿಷಯಕ್ಕೆ ಇಂತಿಷ್ಟು ಎಂದು ಶುಲ್ಕು ನಿಗಧಿಪಡಿಸಲಾಗಿದೆ.  ಒಂದು ವಿಷಯಕ್ಕೆ  ಅಂದರೆ ಒಂದೇ ವಿಷಯದಲ್ಲಿ ಫೇಲಾಗಿದ್ದರೆ 448 ರೂ. , ಎರಡು ವಿಷಯಕ್ಕೆ 559 ರೂ., ಇನ್ನು ಮೂರು ಅಥವಾ 3ಕ್ಕಿಂತ ಹೆಚ್ಚು ವಿಷಯಗಳಿಗೆ 752 ರೂಪಾಯಿ ಕಟ್ಟಬೇಕು. ವಿಶೇಷ ಅಂದ್ರೆ ತೃತೀಯ ಭಾಷೆ ಹಿಂದಿಯಲ್ಲಿ ಅಂಕಗಳನ್ನು ಉತ್ತಮಗೊಳಿಸಲು ಶುಲ್ಕ ವಿನಾಯಿ ನೀಡಲಾಗಿದೆ.

ಮರುಮೌಲ್ಯಮಾಪನ ಮತ್ತು ಮರುಎಣಿಕೆ

ಫಲಿತಾಂಶದಲ್ಲಿ ಅಸಮಾಧಾನವಿದ್ದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ (Revaluation) ಮತ್ತು ಅಂಕಗಳ ಮರುಎಣಿಕೆ (Re-totalling) ಅವಕಾಶ ಕಲ್ಪಿಸಲಾಗಿದೆ. ಫಲಿತಾಂಶ ಪ್ರಕಟವಾದ ದಿನಾಂಕದಿಂದ 15 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು. ಈ ಸಂಬಂಧ ಅರ್ಜಿಯನ್ನು kseab.karnataka.gov.in ವೆಬ್‌ಸೈಟ್ ಮೂಲಕ ಸಲ್ಲಿಸಬಹುದು.’

ಸ್ಕ್ಯಾನ್ ಪ್ರತಿ ಮತ್ತು ಮರುಮೌಲ್ಯಮಾಪನದ ಶುಲ್ಕ

ಫಲಿತಾಂಶದಲ್ಲಿ ಅಸಮಾಧಾನವಿದ್ದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆದ್ರೆ, ಮರುಮೌಲ್ಯ ಮಾಪನಕ್ಕೆ ಒಂದು ವಿಷಯಕ್ಕೆ 800 ರೂ ಶುಲ್ಕ ಜೊತೆಗೆ 10 ರೂ. ಸೇವಾ ಶುಲ್ಕ ಕಟ್ಟಬೇಕು. ಇನ್ನು ನಿಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಬೇಕಾಗಿದ್ದಲ್ಲಿ ಒಂದು ವಿಷಯಕ್ಕೆ  410 ರೂಪಾಯಿ ಪ್ಲಸ್ 10 ರೂ. ಸೇವಾ ಶುಲ್ಕ ನಿಗಧಿಪಡಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಲ್ಲಂಗಡಿ ಹಣ್ಣು ಕಿಡ್ನಿಯನ್ನು ಕ್ಲೀನ್ ಮಾಡುತ್ತದೆಯೇ? ಬೇಸಿಗೆಯಲ್ಲಿ ಈ ಹಣ್ಣಿನ ಸೇವನೆ ಆರೋಗ್ಯಕರವೇ? – Kannada News | Watermelon for Kidney Health: Benefits, Risks, and Portion Guide

ಗ್ರೀಷ್ಮಕಾಲದಲ್ಲಿ ಅಂದರೆ ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರಗಳನ್ನು ಅದರಲ್ಲಿಯೂ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ತರಕಾರಿಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುತ್ತದೆ. ಅಂತವುಗಳ ಪೈಕಿ ಕಲ್ಲಂಗಡಿ ಹಣ್ಣು (Watermelon) ಕೂಡ ಒಂದು. ದೇಹದಲ್ಲಿ ನೀರಿನ ಕೊರತೆಯಾಗುವುದನ್ನು ತಡೆಯಲು ಜನ ಇದನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ ಆದರೆ ಕಲ್ಲಂಗಡಿ ಕಿಡ್ನಿ (Kidney) ಆರೋಗ್ಯಕ್ಕೆ ಹಾನಿಕಾರಕವೇ, ಇದು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ, ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಇರುವವರು ಇದನ್ನು ಸೇವನೆ ಮಾಡಬಹುದೇ, ಈ ಬಗ್ಗೆ ತಜ್ಞರ ಅಭಿಪ್ರಾಯವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಲ್ಲಂಗಡಿ ಹಣ್ಣಿನ ಸೇವನೆ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದೇ?

ಆರೋಗ್ಯ ತಜ್ಞರ ಪ್ರಕಾರ, ಸರಿಯಾದ ಪ್ರಮಾಣದಲ್ಲಿ ಕಲ್ಲಂಗಡಿ ಸೇವಿಸುವುದು ಕಿಡ್ನಿಗೆ ಹಾನಿಕಾರಕವಲ್ಲ. ಇದರಲ್ಲಿ ಸುಮಾರು 90% ನೀರಿನ ಅಂಶವಿದ್ದು, ದೇಹವನ್ನು ಹೈಡ್ರೇಟ್ ಇಡಲು ಸಹಾಯ ಮಾಡುತ್ತದೆ. ಉತ್ತಮ ಹೈಡ್ರೇಶನ್ ಕಿಡ್ನಿಗಳ ಕಾರ್ಯಕ್ಷಮತೆಗೆ ಒಳ್ಳೆಯದು. ಜೊತೆಗೆ ಈ ಹಣ್ಣಿನಲ್ಲಿ ವಿಟಮಿನ್ C, ಪೊಟ್ಯಾಸಿಯಮ್ ಹಾಗೂ ಕೆಲವು ಅಮಿನೋ ಆಮ್ಲಗಳು ಇದ್ದು, ದೇಹದ ಸಮತೋಲನ ಕಾಪಾಡಲು ಸಹಕಾರಿ.

ಇದನ್ನೂ ಓದಿ: ಕಿಡ್ನಿ ಆರೋಗ್ಯವಾಗಿ ಇರಬೇಕು ಅಂದ್ರೆ ಆರೋಗ್ಯ ತಜ್ಞರು ಹೇಳಿದ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಲೇಬೇಕು!

ಕಿಡ್ನಿ ರೋಗಿಗಳು ತಿನ್ನಬಹುದೇ?

ತಜ್ಞರ ಮಾತಿನ ಪ್ರಕಾರ, ಸಾಮಾನ್ಯವಾಗಿ ಕಿಡ್ನಿ ಸಮಸ್ಯೆ ಹೊಂದಿರುವವರು ವೈದ್ಯರ ಸಲಹೆಯೊಂದಿಗೆ ಮಿತ ಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಬಹುದು. ಇದರಲ್ಲಿ ಇರುವ ಅಮಿನೋ ಆಮ್ಲಗಳು ಕಿಡ್ನಿ ಆರೋಗ್ಯಕ್ಕೆ ಸಹಾಯ ಮಾಡುವ ಸಾಧ್ಯತೆಯಿದೆ. ಆದರೆ ಗಂಭೀರ ಕಿಡ್ನಿ ಕಾಯಿಲೆ ಇರುವವರು ತಮ್ಮ ವೈದ್ಯರ ಮಾರ್ಗದರ್ಶನವನ್ನು ತಪ್ಪದೇ ಪಾಲಿಸಬೇಕು.

ಕಲ್ಲಂಗಡಿ ಕಿಡ್ನಿಯನ್ನು ಕ್ಲೀನ್ ಮಾಡುತ್ತದೆಯೇ?

ಬಹಳಷ್ಟು ಜನರು ಕಲ್ಲಂಗಡಿ ಹಣ್ಣು ಕಿಡ್ನಿಯನ್ನು ಡಿಟಾಕ್ಸ್ ಮಾಡುತ್ತದೆ ಎಂದು ನಂಬುತ್ತಾರೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ವೈದ್ಯಕೀಯವಾಗಿ ನೋಡಿದರೆ, ಕಿಡ್ನಿಗಳು ಸ್ವತಃ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವ ಸಾಮರ್ಥ್ಯ ಹೊಂದಿವೆ. ಕಲ್ಲಂಗಡಿ ಹೈಡ್ರೇಶನ್ ನೀಡುತ್ತದೆ. ಇದು ಆರೋಗ್ಯಕರವಾದ ಹಣ್ಣಾದರೂ, ಅತಿಯಾಗಿ ಸೇವಿಸುವುದರಿಂದ ಶರೀರದ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಮಧುಮೇಹ ರೋಗಿಗಳು ಎಚ್ಚರಿಕೆ ವಹಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Brahma Muhurt: ಬೆಳಿಗ್ಗೆ 3 ರಿಂದ 5 ಗಂಟೆಯ ನಡುವೆ ಎಚ್ಚರವಾಗುತ್ತಿದೆಯೇ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು ಗೊತ್ತಾ? – Kannada News | Waking Up 3 5 AM? Spiritual Meaning and Brahma Muhurta Secrets Unveiled

ನಿದ್ರೆಯ ಸಮಯದಲ್ಲಿ ಹಠಾತ್ತನೆ ಎಚ್ಚರಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ ಎಂದು ನಮಗೆ ತೋರಬಹುದು. ದಿನಕ್ಕೆ ಒಂದು ಅಥವಾ ಎರಡು ಬಾರಿ ಹೀಗಾದರೆ ಚಿಂತೆಯಿಲ್ಲ, ಆದರೆ ನೀವು ಪದೇ ಪದೇ ಬೆಳಿಗ್ಗೆ 3 ರಿಂದ 5 ಗಂಟೆಯ ನಡುವೆಯೇ ಎಚ್ಚರಗೊಳ್ಳುತ್ತಿದ್ದರೆ, ಅದರ ಹಿಂದೆ ಒಂದು ಬಲವಾದ ಕಾರಣವಿರಬಹುದು. ಇಡೀ ಜಗತ್ತೇ ಗಾಢ ನಿದ್ರೆಯಲ್ಲಿರುವಾಗ ನಿಮ್ಮ ನಿದ್ರೆ ಮಾತ್ರ ಈ ನಿರ್ದಿಷ್ಟ ಸಮಯದಲ್ಲಿ ಅಡ್ಡಿಪಡಿಸುತ್ತಿದ್ದರೆ, ಅದು ಜೀವನದಲ್ಲಿ ಸಂಭವಿಸಲಿರುವ ಆಂತರಿಕ ಬದಲಾವಣೆ ಅಥವಾ ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಬ್ರಹ್ಮ ಮುಹೂರ್ತ ಪವಿತ್ರ ಶಕ್ತಿಯ ಕಾಲ:

ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಸಮಯವನ್ನು ಕೇವಲ ಅಂಕಿಗಳಾಗಿ ನೋಡುವುದಿಲ್ಲ, ಬದಲಾಗಿ ಒಂದು ಅದೃಶ್ಯ ಶಕ್ತಿಯಾಗಿ ವಿವರಿಸಲಾಗಿದೆ. ಬೆಳಿಗ್ಗೆ 3 ರಿಂದ 5 ರವರೆಗಿನ ಸಮಯವನ್ನು ‘ಬ್ರಹ್ಮ ಮುಹೂರ್ತ’ ಎಂದು ಕರೆಯಲಾಗುತ್ತದೆ. ಇದು ದಿನದ 24 ಗಂಟೆಗಳಲ್ಲಿ ಅತ್ಯಂತ ಪವಿತ್ರವಾದ ಸಮಯ. ಈ ಅವಧಿಯಲ್ಲಿ ವಾತಾವರಣವು ಸಂಪೂರ್ಣವಾಗಿ ಶುದ್ಧವಾಗಿದ್ದು, ಸಕಾರಾತ್ಮಕ ಶಕ್ತಿಯು ಅತಿ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಎಚ್ಚರಗೊಳ್ಳುವ ವ್ಯಕ್ತಿಯು ಆಧ್ಯಾತ್ಮಿಕ ಶಕ್ತಿ ಮತ್ತು ದೈವಿಕ ಆಶೀರ್ವಾದಗಳನ್ನು ಸುಲಭವಾಗಿ ಪಡೆಯುತ್ತಾನೆ ಎಂಬ ನಂಬಿಕೆಯಿದೆ.

ದೈಹಿಕ ಅಗತ್ಯವೋ ಅಥವಾ ದೈವಿಕ ಸಂದೇಶವೋ?

ರಾತ್ರಿಯಲ್ಲಿ ಎಚ್ಚರವಾಗುವುದಕ್ಕೆ ಹೆಚ್ಚು ನೀರು ಕುಡಿಯುವುದು ಅಥವಾ ವಯಸ್ಸಿನ ಕಾರಣವಿರಬಹುದು ಎಂದು ನಾವು ಭಾವಿಸುತ್ತೇವೆ. ಆದರೆ ಜ್ಯೋತಿಷ್ಯದ ದೃಷ್ಟಿಕೋನದಲ್ಲಿ, ಈ ಪವಿತ್ರ ಸಮಯದಲ್ಲಿ ಮೂತ್ರ ವಿಸರ್ಜನೆಯಂತಹ ನೈಸರ್ಗಿಕ ಪ್ರಕ್ರಿಯೆಯ ನೆಪದಲ್ಲಿ ನಿಮ್ಮನ್ನು ಎಚ್ಚರಗೊಳಿಸುವುದು ಒಂದು ಸಂಕೇತವಾಗಿದೆ. ನಿಮ್ಮನ್ನು ಗಾಢ ನಿದ್ರೆಯಿಂದ ಹೊರತಂದು, ನಿರ್ದಿಷ್ಟ ಉದ್ದೇಶಕ್ಕಾಗಿ ಅಥವಾ ಬ್ರಹ್ಮಾಂಡದ ಶಕ್ತಿಯೊಂದಿಗೆ ನಿಮ್ಮನ್ನು ಸಂಪರ್ಕಿಸಲು ಪ್ರಕೃತಿಯೇ ಮಾಡುವ ಪ್ರಯತ್ನ ಇದಾಗಿರುತ್ತದೆ ಎಂದು ಹೇಳಲಾಗುತ್ತದೆ.

ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತ:

ಬೆಳಿಗ್ಗೆ 3 ರಿಂದ 5 ಗಂಟೆಯ ನಡುವೆ ಎಚ್ಚರಗೊಳ್ಳುವುದು ನಿಮ್ಮ ಪ್ರಜ್ಞೆಯು ಉನ್ನತ ಮಟ್ಟಕ್ಕೆ ತಲುಪುತ್ತಿದೆ ಎಂಬುದನ್ನು ಸೂಚಿಸುತ್ತದೆ. ಈ ಸಮಯದಲ್ಲಿ ಮನಸ್ಸು ಅತ್ಯಂತ ಶಾಂತ ಮತ್ತು ಕೇಂದ್ರೀಕೃತವಾಗಿರುತ್ತದೆ. ಆದ್ದರಿಂದಲೇ ಈ ಅವಧಿಯು ಧ್ಯಾನ, ಪ್ರಾರ್ಥನೆ ಮತ್ತು ಆತ್ಮಾವಲೋಕನಕ್ಕೆ ಅತ್ಯುತ್ತಮವಾಗಿದೆ. ಈ ಸಮಯದಲ್ಲಿ ವ್ಯಕ್ತಿಯ ಆಂತರಿಕ ಪ್ರಜ್ಞೆಯು ಕಾಸ್ಮಿಕ್ ಶಕ್ತಿಯೊಂದಿಗೆ (Cosmic Energy) ನೇರವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ, ಇದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಪೂರ್ವಜರ ಮತ್ತು ದೇವತೆಗಳ ಆಶೀರ್ವಾದ:

ಹಿಂದೂ ನಂಬಿಕೆಯ ಪ್ರಕಾರ, ಬ್ರಹ್ಮ ಮುಹೂರ್ತವು ಭೌತಿಕ ಲೋಕ ಮತ್ತು ಆಧ್ಯಾತ್ಮಿಕ ಲೋಕಗಳ ನಡುವಿನ ಅಂತರವು ಕಿರಿದಾಗಿರುವ ಸಮಯ. ಈ ಸಮಯದಲ್ಲಿ ನೀವು ಆಗಾಗ್ಗೆ ಎಚ್ಚರಗೊಂಡರೆ, ಅದು ನಿಮ್ಮ ಪೂರ್ವಜರು ಅಥವಾ ಆರಾಧ್ಯ ದೇವತೆಗಳು ನಿಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂಬುದರ ಸಂಕೇತವೂ ಆಗಿರಬಹುದು. ಇದು ಅವರ ರಕ್ಷಣೆ, ಆಶೀರ್ವಾದ ಮತ್ತು ನಿಮ್ಮೊಂದಿಗೆ ಅವರು ಆಧ್ಯಾತ್ಮಿಕವಾಗಿ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ.

ಹೀಗಾದಾಗ ಏನು ಮಾಡಬೇಕು?

ನೀವು ಈ ಪವಿತ್ರ ಸಮಯದಲ್ಲಿ ಎಚ್ಚರಗೊಂಡಾಗ, ಭಯಪಡುವ ಬದಲು ಎರಡು ನಿಮಿಷ ಕಣ್ಣು ಮುಚ್ಚಿ ಪ್ರಶಾಂತವಾಗಿ ಕುಳಿತುಕೊಳ್ಳಿ. ನಿಮ್ಮ ಇಷ್ಟದೇವತೆಯನ್ನು ಸ್ಮರಿಸಿ ಅಥವಾ ಸರಳವಾಗಿ ಉಸಿರಾಟದ ಮೇಲೆ ಗಮನವಿಟ್ಟು ಧ್ಯಾನ ಮಾಡಿ. ಇದು ನಿಮ್ಮ ಜೀವನದಲ್ಲಿ ಅದ್ಭುತವಾದ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಸಹಾಯ ಮಾಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳ್ತಂಗಡಿಯ ಐತಿಹಾಸಿಕ ದೇಗುಲಕ್ಕೆ ನುಗ್ಗಿ ದಾಂಧಲೆ: ದೈವದ ಪರಿಕರಗಳನ್ನ ಚೆಲ್ಲಾಪಿಲ್ಲಿ ಮಾಡಿದ ಪದವೀಧರ – Kannada News | Mangaluru: Temple Vandalism Incident; Man Breaks In at Night, Damages Idol

ಮಂಗಳೂರು, ಏಪ್ರಿಲ್​​ 23: ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಐತಿಹಾಸಿಕ ಪ್ರಸಿದ್ಧ ಬಳಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ (Balanja Temple) ತಡರಾತ್ರಿ ಅಮಾನವೀಯ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವ ದೇಗುಲಕ್ಕೆ ನುಗ್ಗಿ ದಾಂಧಲೆ ಮಾಡಿದ್ದಲ್ಲದೇ ದೇವರ ಮೂರ್ತಿ ಭಗ್ನಗೊಳಿಸಿ ವಿಕೃತಿ ಮೆರೆದಿರುವಂತಹ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಅಜೇಯ್ ಎಂಬಾತನಿಂದ ಕೃತ್ಯವೆಸಗಲಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? 

ಮೊದಲು ದೇಗುಲದ ಕೆರೆಗೆ ಹಾರಿದ ಅಜೇಯ್, ಬಳಿಕ ದೇವಸ್ಥಾನದ ಹೆಂಚುಗಳನ್ನು ತೆಗೆದು ಒಳನುಗ್ಗಿದ್ದಾನೆ. ದೇಗುಲದ ಒಳಗಿದ್ದ ಪೂಜಾ ಪರಿಕರಗಳು ಹಾಗೂ ದೈವದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ, ದೇವರ ಮೂರ್ತಿಯನ್ನು ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾನೆ.

ಇದನ್ನೂ ಓದಿ: ಕ್ಯಾಮರಾ ಹಿಡಿದ ಮಹಿಳೆ ಮೇಲೆ ಕೋಪಗೊಂಡ ದೈವ! ಮೈ ಜುಮ್ ಎನ್ನಿಸುವ ದೃಶ್ಯ

ಇನ್ನು ಅಜೇಯ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಈ ಕೃತ್ಯದ ಹಿಂದೆ ಮಾನಸಿಕ ಅಸ್ವಸ್ಥತೆಯ ಶಂಕೆ ವ್ಯಕ್ತವಾಗಿದೆ. ಸದ್ಯ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಕಾಲೇಜು ವಿದ್ಯಾರ್ಥಿಗೆ ಗುಂಪೊಂದರಿಂದ ಮಾರಣಾಂತಿಕ ಹಲ್ಲೆ

ಕಾಲೇಜು ವಿದ್ಯಾರ್ಥಿಗೆ ಐವರ ತಂಡದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಸ್ ನಿಲ್ದಾಣದ ಬಳಿ ನಡೆದಿದೆ. ಆದಿಲ್ ಹುಸೈನ್(21) ಹಲ್ಲೆಗೊಳಗಾದ ಬಿಕಾಂ ವಿದ್ಯಾರ್ಥಿ. ತಲೆ ಹಾಗೂ ಮುಖದ ಭಾಗಕ್ಕೆ ತಂಡದಿಂದ ದಾಳಿ ಮಾಡಲಾಗಿದ್ದು, ಮೊಹಿಯುದ್ದೀನ್, ಮೋಹದ್ ಸೇರಿ ಐವರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.

ನಡೆದಿದ್ದೇನು?

ಪುತ್ತೂರು ಖಾಸಗಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಆದಿಲ್ ಹುಸೈನ್, ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಚಹಾ ಕುಡುಯುತ್ತ ನಿಂತಿದ್ದ ವೇಳೆ ಕಲ್ಲಿನಿಂದ ದಾಳಿ ಮಾಡಲಾಗಿದೆ. ಇತ್ತೀಚೆಗೆ ಕಾಲೇಜಿನಲ್ಲಿ ಮೊಹಿಯುದ್ದೀನ್ ತಂಡದಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿತ್ತು. ಹಳೇ ದ್ವೇಷ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾರೆಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ವಿದ್ಯಾರ್ಥಿ ಆದಿಲ್ ದೂರು ನೀಡಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಲಂಡನ್‌ನಲ್ಲಿ 100 ರೂ ದಿನಸಿ ಶಾಪಿಂಗ್ ಚಾಲೆಂಜ್‌ ಸ್ವೀಕರಿಸಿದ ಭಾರತೀಯ ಮಹಿಳೆ – Kannada News | Indian woman accepts 100 grocery item shopping challenge in London

ಭಾರತಕ್ಕೆ ಹೋಲಿಸಿದ್ರೆ ವಿದೇಶದಲ್ಲಿ (foreign) ಜೀವನ ನಡೆಸುವುದು ತುಂಬಾ ಸುಲಭ. ಕೈ ತುಂಬಾ ಸಂಬಳ ಸಿಗುತ್ತದೆ, ಹೀಗಾಗಿ ಆರಾಮಾದಾಯಕವಾಗಿದೆ ಜೀವನ ನಡೆಸಬಹುದು ಅಂದುಕೊಳ್ತಾರೆ. ದಿನನಿತ್ಯ ಅಗತ್ಯಗಳನ್ನು ಪೂರೈಸಿಕೊಳ್ಳಲು ತಿಂಗಳ ಸಂಬಳ ಸಾಲುವುದಿಲ್ಲ. ಅಗ್ಗದ ಬೆಲೆಗೆ ದಿನಸಿ ವಸ್ತುಗಳು ಸಿಗಲ್ಲ. ಇದೀಗ ಭಾರತೀಯ ಮಹಿಳೆ ಲಂಡನ್‌ನಲ್ಲಿ (London) ಚಾಲೆಂಜ್ ಸ್ವೀಕರಿಸಿದ್ದಾರೆ. ಕೇವಲ 100 ರೂಯೊಳಗೆ ದಿನಸಿ ಸಾಮಗ್ರಿಗಳನ್ನು ಖರೀದಿಸುವುದೇ ಬಹುದೊಡ್ಡ ಚಾಲೆಂಜ್. ಆದರೆ ಕೊನೆಗೆ ಈ ಮಹಿಳೆ 100 ರೂಗೆ ಖರೀದಿಸಲು ಸಾಧ್ಯವಾದ ವಸ್ತು ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ವಿದೇಶಿ ದುಬಾರಿ ಜೀವನ ಕಂಡು ಶಾಕ್ ಆಗಿದ್ದಾರೆ.

@veggiewander ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಭಾರತೀಯ ಮಹಿಳೆ ಲಂಡನ್‌ನಲ್ಲಿ 100 ರೂಗೆ ದಿನಸಿ ಸಾಮಗ್ರಿಗಳನ್ನು ಖರೀದಿಸಿರುವ ಚಾಲೆಂಜ್ ಸ್ವೀಕರಿಸಿರುವುದನ್ನು ಕಾಣಬಹುದು. ಮಹಿಳೆಯೂ 100 ರೂ ನೋಟು ಹಿಡಿದು ಲಂಡನ್‌ನ ಅಂಗಡಿಯೊಂದಕ್ಕೆ ನಡೆದು ಹೋಗಿದ್ದಾರೆ. ಈ ಬಜೆಟ್ ಒಳಗೆ ಏನನ್ನಾದರೂ ಖರೀದಿಸಲು ಪ್ರಯತ್ನಿಸುವ  ಚಾಲೆಂಜ್ ನೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ.

ವೈರಲ್ ವಿಡಿಯೋ ಇಲ್ಲಿದೆ

ಮೊದಲು ಸ್ಯಾಂಡ್‌ವಿಚ್ ವಿಭಾಗಕ್ಕೆ ಹೋಗಿ ಬೇಸಿಕ್ ಚೀಸ್ ಹಾಗೂ ಈರುಳ್ಳಿ ಸ್ಯಾಂಡ್‌ವಿಚ್ ಅನ್ನು ಎತ್ತಿಕೊಂಡು ಬೆಲೆ ಎಷ್ಟೆಂದು ನೋಡಿದಾಗ 1.50 ಪೌಂಡ್‌ಗಳು (ಸುಮಾರು 190 ರೂ ) ಎಂದು ತಿಳಿಯುತ್ತದೆ. ಆ ಬಳಿಕ ಆ ಮಹಿಳೆ 500 ಮಿಲಿ ನೀರಿನ ಬಾಟಲಿಯನ್ನು ತೆಗೆದುಕೊಂಡಿದ್ದಾರೆ. ಈ ಬಾಟಲಿಯ ಬೆಲೆ ಬೆಲೆ 1.15 ಪೌಂಡ್‌ಗಳು (ಸುಮಾರು 145 ರೂ) ಗಳಾಗಿದ್ದು, ಮತ್ತೆ 100 ರೂ ಒಳಗೆ ಖರೀದಿಸಬಹುದಾದ ದಿನಸಿ ವಸ್ತುವಿಗಾಗಿ ಹುಡುಕಾಟ ನಡೆಸಿದ್ದಾರೆ.

ತದನಂತರದಲ್ಲಿ 0.89 ಪೌಂಡ್‌ಗಳ (ಸುಮಾರು 113 ರೂ) ಬೆಲೆಯ ಎಲೆಕೋಸು ಮತ್ತು 1.65 ಪೌಂಡ್‌ಗಳ (ಸುಮಾರು 209 ರೂ ) ಬೆಲೆಯ ಓರಿಯೊ ಬಿಸ್ಕಟ್‌ ಪ್ಯಾಕ್ ಗಮನಿಸುತ್ತಾರೆ. ತನ್ನ ಬಜೆಟ್ ಚಾಲೆಂಜ್ ಗಿಂತ ಈ ಎಲ್ಲಾ ವಸ್ತುವಿನ ಬೆಲೆ ಹೆಚ್ಚಾಗಿರುವುದರಿಂದ ಅಲ್ಲಿಗೆ ಸುಮ್ಮನಾಗುತ್ತಾರೆ. ಆದರೆ ಕೊನೆಗೆ ಸಿಕ್ಕಿದ್ದು ಸಣ್ಣದಾದ ಕ್ಯಾರೆಟ್ ಪ್ಯಾಕೆಟ್. ಇದರ ಬೆಲೆ 0.60 ಪೌಂಡ್‌ಗಳ (ಸುಮಾರು 75 ರೂ). 100 ರೊಳಗೆ ಸಿಗುವ ಏಕೈಕ ವಸ್ತು ಅದೇ ಎಂದು ತೀರ್ಮಾನಿಸಿ, ಅದನ್ನು ಖರೀದಿಸಲು ನಿರ್ಧರಿಸುತ್ತಾರೆ.

ಇದನ್ನೂ ಓದಿ: ಜರ್ಮನ್‌ನಲ್ಲಿ ಡ್ರೀಮ್‌ ಜಾಬ್‌ ಗಿಟ್ಟಿಸಿಕೊಂಡ ಭಾರತೀಯ ಮಹಿಳೆ ಹೇಳಿದ್ದೇನು ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತದಲ್ಲಿ ಈ ಮೊತ್ತಕ್ಕೆ ಹಲವಾರು ದಿನಸಿ ವಸ್ತುಗಳನ್ನು ಸುಲಭವಾಗಿ ಕೊಂಡುಕೊಳ್ಳಬಹುದು ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಾರತದೊಂದಿಗೆ ಏಕೆ ಹೋಲಿಸುತ್ತೀರಿ. ಹಾಗೆ ನೋಡಿದರೆ ನೀವು ಸಂಬಳವನ್ನು ಹೋಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಭಾರತಕ್ಕೂ ವಿದೇಶಕ್ಕೂ ಇಷ್ಟೇ ವ್ಯತ್ಯಾಸ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ – Kannada News | Salman Khan and Nayantara movie shooting begins

ಸಲ್ಮಾನ್ ಖಾನ್ (Salman Khan) ಇದೀಗ ಮತ್ತೊಬ್ಬ ದಕ್ಷಿಣದ ನಿರ್ದೇಶಕನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಮಹರ್ಷಿ’, ‘ವಾರಿಸು’ ಇನ್ನೂ ಕೆಲವು ಹಿಟ್ ಸಿನಿಮಾಗಳನ್ನು ನೀಡಿರುವ ವಂಶಿ ಪೈಡಪಲ್ಲಿ ನಿರ್ದೇಶನದ ಬಾಲಿವುಡ್ ಸಿನಿಮಾನಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದು, ನಯನತಾರಾ ಈ ಸಿನಿಮಾದ ನಾಯಕಿ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ತೆಲುಗು ಸ್ಟಾರ್ ನಿರ್ಮಾಪಕ ದಿಲ್ ರಾಜು. ಇದೀಗ ಸಿನಿಮಾದ ಮುಹೂರ್ತ ನೆರವೇರಿದ್ದು, ಸಿನಿಮಾದ ಚಿತ್ರೀಕರಣವೂ ಶುರುವಾಗಿದೆ. ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಗುಜರಾತ್ ಶಿಕ್ಷಣ ಸಚಿವರಿಗೆ POTM ಪ್ರಶಸ್ತಿ ಅರ್ಪಿಸಿದ ರವೀಂದ್ರ ಜಡೇಜಾ – Kannada News | Ravindra Jadeja’s IPL Man of the Match: Dedicates Award to Wife Rivaba Jadeja

ವಾಸ್ತವವಾಗಿ ಲಕ್ನೋ ವಿರುದ್ಧದ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಮಾತನಾಡಿದ್ದ ರಿವಾಬಾ ಜಡೇಜಾ, ಲಕ್ನೋ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದಿದ್ದರು. ರಿವಾಬಾ ಹೇಳಿದಂತೆ ಜಡೇಜಾ ಬ್ಯಾಟಿಂಗ್​ನಲ್ಲಿ 43 ರನ್​ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರೆ, ಬೌಲಿಂಗ್​ನಲ್ಲಿ ಪ್ರಮುಖ ವಿಕೆಟ್ ಉರುಳಿಸಿದರು. ಇದಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

Source link

ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ – Kannada News | Tamil Nadu Elections Newlyweds Couple come to vote soon after marriage in Tirunelveli

ಚೆನ್ನೈ, ಏಪ್ರಿಲ್ 23: ತಮಿಳುನಾಡಿನಲ್ಲಿ ಇಂದು ವಿಧಾನಸಭಾ ಚುನಾವಣೆ (Tamil Nadu Assembly Elections) ನಡೆಯುತ್ತಿದೆ. ಇಂದು ನಡೆದ ಚುನಾವಣೆಯಲ್ಲಿ ಮತ ಚಲಾಯಿಸಲು ತಿರುನಲ್ವೇಲಿಯಲ್ಲಿ ನವವಿವಾಹಿತ ದಂಪತಿ ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದಿದ್ದಾರೆ. ಕೊರಳಲ್ಲಿ ಹಾರ ಹಾಕಿಕೊಂಡೇ ಮತಗಟ್ಟೆಗೆ ಬಂದ ದಂಪತಿ ಮತ ಚಲಾಯಿಸಿದ್ದಾರೆ.

ತಮಿಳುನಾಡಿನಲ್ಲಿ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಸಮ್ಮಿಶ್ರ ಸರ್ಕಾರದ ಅವಧಿ ಮೇ 7ರಂದು ಕೊನೆಗೊಳ್ಳುತ್ತದೆ. ಹೀಗಾಗಿ, ತಮಿಳುನಾಡಿನಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದೆ. ಅದರಂತೆ, 3,585 ಪುರುಷ ಅಭ್ಯರ್ಥಿಗಳು ಮತ್ತು 438 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 4,023 ಅಭ್ಯರ್ಥಿಗಳು ತಮಿಳುನಾಡಿನಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಸುಮಾರು 5.73 ಕೋಟಿ ಮತದಾರರು ಇಂದು ಮತ ಚಲಾಯಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೀತಿಸಿ ಮದುವೆಯಾದ ಎಂಜಿನಿಯರ್ ದಾರುಣ ಅಂತ್ಯ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ? – Kannada News | Bengaluru Software Engineer’s Tragic End: Dowry Harassment Alleged in Death Case

ಬೆಂಗಳೂರು, ಏಪ್ರಿಲ್​​ 23: ಪತಿ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಸಾಫ್ಟ್‌ವೇರ್ ಎಂಜಿನಿಯರ್ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಆರೋಪ ಬೆಂಗಳೂರಲ್ಲಿ (Bengaluru) ಕೇಳಿಬಂದಿದೆ. ಭುವನೇಶ್ವರಿ (29) ಮೃತ ವಿವಾಹಿತೆಯಾಗಿದ್ದು, ತಾಯಿ ಮತ್ತು 18 ತಿಂಗಳ ಮಗುವಿನೊಂದಿಗೆ ಅವರು ವಾಸವಿದ್ದರು ಎನ್ನಲಾಗಿದೆ. ನಿರಂತರವಾಗಿ ಕರೆ ಮಾಡಿದರೂ ಭುವನೇಶ್ವರಿ ಸಂಪರ್ಕಕ್ಕೆ ಸಿಗದ ಕಾರಣ ಸ್ನೇಹಿತೆ ಅನುಮಾನಗೊಂಡು ವಿಷಯವನ್ನು ಅವರ ತಾಯಿಗೆ ತಿಳಿಸಿದ್ದಾರೆ. ಬಳಿಕ ತಾಯಿ ಹಾಗೂ ನೆರೆಹೊರೆಯವರು ಪರಿಶೀಲಿಸಿದಾಗ ಭುವನೇಶ್ವರಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಸೋಮವಾರವೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ಭುವನೇಶ್ವರಿ ತಂದೆ ತಮಿಳುನಾಡಿನ ತಿರುವಾರೂರಿನ ನಿವಾಸಿ ಟಿ. ಅಂಬಳಗನ್ ಅವರು ಪೊಲೀಸರಿಗೆ ದೂರು ನೀಡಿದ್ದು, ಮೃತ ಮಹಿಳೆಯ ಪತಿ ಹರೀಶ್ ಕುಮಾರ್, ಅತ್ತೆ ಮತ್ತು ಮಾವನ ಮಗನ ವಿರುದ್ಧ ಆರೋಪ ಮಾಡಿದ್ದಾರೆ. ಅಲ್ಲದೆ ಕಳೆದ ಏಳು ತಿಂಗಳಿನಿಂದ ಮಗಳು ಭುವನೇಶ್ವರಿ ಜೊತೆಗೆ ಆಕೆಯ ಪತಿ ಹರಿಶ್​​ ಕುಮಾರ್​​ ವಾಸಿಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಭುವನೇಶ್ವರಿ ಮತ್ತು ಹರೀಶ್ ವಿವಾಹಕ್ಕೂ ಮೊದಲು ಪ್ರೀತಿಸುತ್ತಿದ್ದು, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ 2022ರ ನವೆಂಬರ್ 20ರಂದು ಇವರಿಬ್ಬರ ವಿವಾಹ ನಡೆದಿತ್ತು. ಸುಮಾರು 25 ಲಕ್ಷ ಹಣವನ್ನು ಮದುವೆಗೆ ಖರ್ಚು ಮಾಡಲಾಗಿತ್ತು. ಆದರೆ ಮದುವೆ ಬಳಿಕ ಪತಿ ಮನೆಯಲ್ಲಿ ಭುವನೆಶ್ವರಿ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಒಳಗಾಗಿ ಮನೋವ್ಯಾಧಿಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಉದ್ಯಮಿ ಜತೆ ಡೇಟಿಂಗ್, ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಆರೋಪ; ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ದೂರು

2025ರ ಅಕ್ಟೋಬರ್​​ನಲ್ಲಿ ತವರು ಸೇರಿದ್ದ ಭುವನೇಶ್ವರಿಯನ್ನು ಆ ಬಳಿಕ ಪತಿ ಹರೀಶ್​​ ಸಂಪರ್ಕಿಸಿರಲಿಲ್ಲ. ಬದಲಾಗಿ ವಿಚ್ಛೇದನಕ್ಕೆ ಒತ್ತಡ ಹಾಕಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದ. ನಂತರ ಭುವನೇಶ್ವರಿ ಜೆ.ಪಿ. ನಗರದ ಫ್ಲಾಟ್‌ನಲ್ಲಿ ವಾಸಿಸಲು ಆರಂಭಿಸಿದ್ದರು. ಮಗುವಿಗೆ ಅನಾರೋಗ್ಯ ಉಂಟಾದಾಗಲೂ ನೋಡಲು ಬಂದಿರಲಿಲ್ಲ. ಅಲ್ಲದೆ, 2026ರ ಏಪ್ರಿಲ್ 8ರಂದು ಹರೀಶ್ ತಂದೆ ನಿಧನರಾದಾಗ ಭುವನೇಶ್ವರಿ ಮತ್ತು ಅವರ ಕುಟುಂಬ ಅಂತ್ಯಕ್ರಿಯೆಗೆ ಹಾಜರಾಗಲು ಹೋದಾಗಲೂ ಆರೋಪಿಗಳು ಅವರನ್ನು ತಡೆದಿದ್ದರು. ಮದುವೆಯ ಸಮಯದಲ್ಲಿ ಚಿನ್ನಾಭರಣ ಮತ್ತು ಹಣವನ್ನು ವರದಕ್ಷಿಣೆಯಾಗಿ ನೀಡಿದರೂ ಹರೀಶ್, ಅವರ ತಾಯಿ ಹಾಗೂ ಸಹೋದರರು ತಿಂಗಳಿಗೆ 20,000ರಿಂದ 30,000 ಹಣವನ್ನು ಸಂಬಳದಿಂದ ನೀಡಲು ಮತ್ತು ಪೋಷಕರಿಂದ ದುಡ್ಡು ತರುವಂತೆ ಭುವನೇಶ್ವರಿ ಅವರನ್ನು ಒತ್ತಾಯಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ಸಾರಿಗೆ ನೌಕರರ ದರ್ಪ: ವಿಡಿಯೋ ನೋಡಿ – Kannada News | Gadag Bus Staff Allegedly Assault Student: Protest Erupts at Puttaraj Gavai Bus Stand

ಗದಗ, ಏಪ್ರಿಲ್​​ 23: ಬಸ್ ನಿಲ್ಲಿಸಿ ಅಂದಿದಕ್ಕೆ ವಿದ್ಯಾರ್ಥಿಗಳ‌ ಮೇಲೆ ಸಾರಿಗೆ ನೌಕರರಿಂದ ದರ್ಪ‌‌ ಮೆರೆದ ಘಟನೆಯೊಂದು ಗದಗ ನಗರದ ಪುಟ್ಟರಾಜ್ ಗವಾಯಿಗಳ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಾರಿಗೆ ನೌಕರರು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ವಿದ್ಯಾರ್ಥಿಗಳು ಬಸ್ ಹತ್ತಲು ಕೈ ತೋರಿಸಿದರೂ ಚಾಲಕ ಬಸ್ ನಿಲ್ಲಿಸಿಲ್ಲ. ಇದನ್ನು ಪ್ರಶ್ನಿಸಲು ಹೋದ ವಿದ್ಯಾರ್ಥಿಗಳು ಮತ್ತು ಸಾರಿಗೆ ನೌಕರರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ನೌಕರರು ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆ ಮಾಡಿದ ನೌಕರನ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಶಹರ ಪೊಲೀಸ್ ಠಾಣೆ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಲು ಹರಸಹಾಸ ಪಟ್ಟರು. ಬಸ್ ಸಂಚಾರ ಸ್ಥಗಿತ ಹಿನ್ನೆಲೆ ಪ್ರಯಾಣಿಕರು ಪರದಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version