ರಾತ್ರಿ ವೇಳೆ ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ: ಹಿಗ್ಗಾಮುಗ್ಗಾ ಥಳಿಸಿದ ಯುವಕರು – Kannada News | Viral Video: Congress Leader Rahil Sharif Attacked in Chikkamagaluru

ಚಿಕ್ಕಮಗಳೂರು, ಫೆ.5: ವಿವಾಹಿತ ‌ಹಿಂದೂ ಮಹಿಳೆಯ ಜೊತೆ ಕಾಂಗ್ರೆಸ್ ಮುಖಂಡ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಹಿಂದೂ ಮಹಿಳೆಯ ಜೊತೆ ಕಾಂಗ್ರೆಸ್ ಮುಖಂಡ ಇರುವ ಫೋಟೋ ವೈರಲ್​ ವೈರಲ್​​ ಆಗಿದೆ. ಅಕ್ಕಪಕ್ಕದ ಮನೆಯ ಯುವಕರು ಮುಖಂಡನಿಗೆ ಥಳಿಸಿದ್ದಾರೆ. ಹಿಂದೂ ಮಹಿಳೆಯ ಮನೆಯಲ್ಲಿ ಇರುವಾಗಲೇ ಈ ಮುಖಂಡ ಸಿಕ್ಕಿಬಿದ್ದಿದ್ದಾನೆ. ಹಿಂದೂ ಮಹಿಳೆಯ ಮನೆಯಲ್ಲಿ ನಿನಗೇನು ಕೆಲಸ ಎಂದು ಥಳಿಸಿದ್ದಾರೆ. ಈ ಬಗ್ಗೆ ವಿಡಿಯೋ ಕೂಡ ವೈರಲ್​ ಆಗಿದೆ. ಚಿಕ್ಕಮಗಳೂರು ನಗರದ ಗಾಂಧಿನಗರದಲ್ಲಿ ಈ ಘಟನೆ ನಡೆದಿದೆ. ಇದೀಗ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ರಾತ್ರಿ ವೇಳೆ ಮಹಿಳೆಯಲ್ಲಿ ಕಾಂಗ್ರೆಸ್ ಮುಖಂಡ ರಾಹಿಲ್ ಶರೀಫ್ ಇರುವುದನ್ನು ಕಂಡು ಯುವಕರು ಕೋಪಗೊಂಡಿದ್ದಾರೆ. ಈ ಬಗ್ಗೆ ಮಹಿಳೆ ಕೂಡ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾಹಿಲ್ ನನ್ನ ಸ್ನೇಹಿತ ,ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಔಷಧಿ ಕೊಡಲು ಮನೆಗೆ ಬಂದಿದ್ದರು, ಅ ಸಮಯದಲ್ಲಿ ಕೆಲವರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲವರ್​ಗಾಗಿ ಪತಿಗೆ ಚಟ್ಟಕಟ್ಟಿದ್ದ ಪತ್ನಿ ಪೊಲೀಸ್ ಬಲೆಗೆ: ಅಪಘಾತವೆಂದು ಬಿಂಬಿಸಿ ಗಂಡನ ಶವದೆದುರು ಹೈಡ್ರಾಮಾ ಮಾಡಿದ್ದ ಮಹಿಳೆ

ದೇವನಹಳ್ಳಿ, ಫೆಬ್ರವರಿ 5: ಪ್ರಿಯಕರನಿಗಾಗಿ ಹೆಂಡತಿಯೇ ಗಂಡನನ್ನು ಹತ್ಯೆ ಮಾಡಿ ಅಪಘಾತವೆಂದು ಬಿಂಬಿಸಿ ನಾಟಕವಾಡಿದ್ದ ಪ್ರಕರಣವನ್ನು ಸೂಲಿಬೆಲೆ ಪೊಲೀಸರು ಬಯಲಿಗೆಳೆದಿದ್ದಾರೆ. ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆ ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಗ್ರಾಮದಲ್ಲಿ ಜನವರಿ 24ರಂದು ನಡೆದ ಕೊಲೆ ರಹಸ್ಯ ಕೊನೆಗೂ ಬಯಲಾಗಿದ್ದು, ಮಹಿಳೆ ಪುಷ್ಪಾ ಮತ್ತು ಆಕೆಯ ಪ್ರಿಯಕರ ದೇವರಾಜ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಲವರ್ ದೇವರಾಜ್​ಗಾಗಿ ಪುಷ್ಪಾ ತನ್ನ ಪತಿ ಅಶೋಕ್ (40) ಅನ್ನು ಸಂಚು ರೂಪಿಸಿ ಕೊಲೆ ಮಾಡಿದ್ದಳು. ಇದೀಗ ಆಘಾತಕಾರಿ ರಹಸ್ಯ ಬಯಲಾಗಿದ್ದು, ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ.

ಜನವರಿ 24ರಂದು ಅಶೋಕ್ ಮೃತದೇಹ ಗ್ರಾಮದ ಸಮೀಪದ ರಸ್ತೆಯ ತಿರುವಿನಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಇದೊಂದು ಅಪಘಾತವೆಂದು ಹೇಳಲಾಗಿತ್ತು. ಆದರೆ ಘಟನೆ ನಡೆದ ರೀತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸೂಲಿಬೆಲೆ ಪೊಲೀಸರು ತನಿಖೆ ನಡೆಸಿದಾಗ ಇದು ಪೂರ್ವಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ.

ಪ್ರಿಯಕರನ ಜತೆಗೂಡಿ ಗಂಡನನ್ನೇ ಹತ್ಯೆಗೈದಿದ್ದ ಪುಷ್ಪಾ

ಮೃತನ ಪತ್ನಿ ಪುಷ್ಪಾ ತನ್ನ ಪ್ರಿಯಕರ ದೇವರಾಜ್ ಹಾಗೂ ಸಹಚರರಾದ ಮುನಿಂದ್ರ ಮತ್ತು ಸಿದ್ದಪ್ಪ ಅವರ ಜೊತೆ ಸೇರಿ ಸಂಚು ರೂಪಿಸಿದ್ದಳು. ಎಣ್ಣೆ ಪಾರ್ಟಿ ಮಾಡುವ ನೆಪದಲ್ಲಿ ಅಶೋಕ್​​​ರನ್ನು ಕರೆದುಕೊಂಡು ಹೋಗಿ, ಕೆರೆಯ ಬಳಿ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಶವವನ್ನು ರಸ್ತೆಯ ತಿರುವಿನಲ್ಲಿ ಬಿಸಾಡಿ ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದರು. ಪತಿಯ ಸಾವಿನ ನಂತರ ಪತ್ನಿ ಮತ್ತು ಪ್ರಿಯಕರ ಹೈಡ್ರಾಮಾ ನಡೆಸಿ ಅನುಮಾನ ತಪ್ಪಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ ಸ್ಥಳೀಯರ ಶಂಕೆ ಮೇರೆಗೆ ಪೊಲೀಸರು ತನಿಖೆ ತೀವ್ರಗೊಳಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಜಾತಕದಲ್ಲಿ ದೋಷವಿದೆ ಎಂದು ಯುವತಿ ಮೇಲೆ ಅರ್ಚಕ ಮಸಲತ್ತು: ಸಮಸ್ಯೆ ನಿವಾರಣೆ ನೆಪದಲ್ಲಿ ಅತ್ಯಾಚಾರ

ಸದ್ಯ, ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪುಷ್ಪಾ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ಮುಂದುವರೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ನಿಲುವು ಸ್ಪಷ್ಟ, ಭಾರತದ ವಿರುದ್ಧ ಕಣಕ್ಕಿಳಿಯಲ್ಲ: ಪಾಕ್ ಪ್ರಧಾನಿ – Kannada News | Pakistan Will Not Play Against India: PAK PM Shehbaz Sharif

2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ್ ಬಹಿಷ್ಕರಿಸಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಫೆಬ್ರವರಿ 15 ರಂದು ಇಂಡೊ–ಪಾಕ್ ನಡುವಣ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ.

ಫೆಬ್ರವರಿ 4, 2026 ರಂದು ಫೆಡರಲ್ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಶೆಹಬಾಝ್ ಷರೀಫ್, ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣಗಳನ್ನುಸಹ ಸ್ಪಷ್ಟಪಡಿಸಿದ್ದಾರೆ. ಆ ಕಾರಣಗಳೇನು ಎಂದು ನೋಡುವುದಾದರೆ…

  • ಬಾಂಗ್ಲಾದೇಶ್​ಗೆ ಬೆಂಬಲ: ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಮುಖ್ಯ ಕಾರಣ ಬಾಂಗ್ಲಾದೇಶ್​ಗೆ ಬೆಂಬಲ. ಅಂದರೆ ಐಸಿಸಿ ಟೂರ್ನಿಯಿಂದ ಬಾಂಗ್ಲಾದೇಶ್ ತಂಡವನ್ನು ಹೊರಗಿಟ್ಟಿರುವ ಕ್ರಮವನ್ನು ಖಂಡಿಸಿ ಪಾಕಿಸ್ತಾನ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದೆ.
  • ಬಿಸಿಬಿ ಜೊತೆ ಪಿಸಿಬಿ: ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಗಿಡಬಾರದು, ಅವರಿಗೆ ತಟಸ್ಥ ಸ್ಥಳದಲ್ಲಿ ಪಂದ್ಯವಾಡಲು ಅವಕಾಶ ನೀಡಬೇಕೆಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಗ್ರಹಿಸಿತ್ತು. ಇದಾಗ್ಯೂ ಐಸಿಸಿ ಅವಕಾಶ ನೀಡಿರಲಿಲ್ಲ.  ಇದೀಗ ಬಾಂಗ್ಲಾದೇಶ್ ನಿಲುವಿಗೆ ಬೆಂಬಲ ಸೂಚಿಸಲು ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ.
  • ಕ್ರೀಡೆಯಲ್ಲಿ ರಾಜಕೀಯ ಬೇಡ: ಕ್ರೀಡಾ ಕ್ಷೇತ್ರದಲ್ಲಿ ರಾಜಕೀಯ ಇರಬಾರದು ಎಂಬುದು ನಮ್ಮ ಸ್ಪಷ್ಟ ನಿಲುವು. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಎಂದು ಶೆಹಬಾಝ್ ಷರೀಫ್ ತಿಳಿಸಿದ್ದಾರೆ.

“ಟಿ20 ವಿಶ್ವಕಪ್ ಬಗ್ಗೆ ನಾವು ಸ್ಪಷ್ಟವಾದ ನಿಲುವನ್ನು ತೆಗೆದುಕೊಂಡಿದ್ದೇವೆ. ಭಾರತದ ವಿರುದ್ಧ ಪಂದ್ಯವನ್ನು ಆಡುವುದಿಲ್ಲ. ಏಕೆಂದರೆ ಇದು ಕ್ರೀಡಾ ಕ್ಷೇತ್ರ, ರಾಜಕೀಯವಲ್ಲ. ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ಬಹಳ ಪರಿಗಣಿತ ನಿಲುವನ್ನು ತೆಗೆದುಕೊಂಡಿದ್ದೇವೆ. ಅಲ್ಲದೆ ನಾವು ಬಾಂಗ್ಲಾದೇಶದ ಪರವಾಗಿ ನಿಲ್ಲಬೇಕು. ಇದು ತುಂಬಾ ಸೂಕ್ತವಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ” ಎಂದು ಬುಧವಾರ ಪಾಕಿಸ್ತಾನದಲ್ಲಿ ನಡೆದ ಸಂಪುಟ ಸಭೆಯಲ್ಲಿ ಶೆಹಬಾಝ್ ಹೇಳಿದ್ದಾರೆ.

ಇದಾಗ್ಯೂ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಕುರಿತು ಯಾವುದೇ ಔಪಚಾರಿಕ ಮೇಲ್ ಕಳುಹಿಸಿಲ್ಲ. ಆದರೆ ಇದೀಗ ಪಾಕಿಸ್ತಾನ್ ಪ್ರಧಾನಿಯೇ ಪಂದ್ಯವನ್ನು ಬಹಿಷ್ಕರಿಸುವುದನ್ನು ಘೋಷಿಸಿದ್ದಾರೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಟಿ20 ವಿಶ್ವಕಪ್ ಪಂದ್ಯ ಜರುಗುವುದಿಲ್ಲ ಎಂಬುದು ದೃಢಪಟ್ಟಿದೆ.

ಇದನ್ನೂ ಓದಿ: ಬದಲಾದ ಲೆಕ್ಕಾಚಾರ… ಪಾಕಿಸ್ತಾನ್ ಸೂಪರ್​ ಲೀಗ್​ಗೆ ಕೈಕೊಟ್ಟ ಮ್ಯಾಕ್ಸ್​ವೆಲ್

ಪಂದ್ಯ ಬಹಿಷ್ಕರಿಸಿದರೆ ಆಗುವ ಪರಿಣಾಮಗಳು:

  • ಅಂಕಗಳ ನಷ್ಟ: ಪಾಕಿಸ್ತಾನ್ ತಂಡ ಪಂದ್ಯಕ್ಕೆ ಹಾಜರಾಗದಿದ್ದರೆ, ಭಾರತಕ್ಕೆ 2 ಅಂಕಗಳನ್ನು (Walkover) ನೀಡಲಾಗುತ್ತದೆ.
  • ಐಸಿಸಿ ಎಚ್ಚರಿಕೆ: ಈ “ಆಯ್ದ ಭಾಗವಹಿಸುವಿಕೆ” ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಆರ್ಥಿಕ ದಂಡ ವಿಧಿಸುವ ಸಾಧ್ಯತೆಯಿದೆ.

Source link

‘ಐ ಲವ್ ಯಶ್’; ‘ಟಾಕ್ಸಿಕ್’ ಬಗ್ಗೆ ನಿರೀಕ್ಷೆ ಹೊರಹಾಕಿದ ಆಶಿಶ್ ಚಂಚ್ಲಾನಿ – Kannada News | Ashish Chanchlani on Yash’s Toxic: ‘I Love Yash’; Predicts Big Clash Success

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic Movie) ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ. ಮಲಯಾಳಂನ ಗೀತು ಮೋಹನ್​​ದಾಸ್ ನಿರ್ದೇಶನದ ಈ ಚಿತ್ರ ಮಾರ್ಚ್ 19ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಬಾಲಿವುಡ್ ಯೂಟ್ಯೂಬರ್ ಹಾಗೂ ನಟ ಆಶಿಶ್ ಚಂಚ್ಲಾನಿ ನಿರೀಕ್ಷೆ ಹೊರಹಾಕಿದ್ದಾರೆ. ‘ಐ ಲವ್ ಯಶ್’ ಎಂದು ಅವರು ಪ್ರೀತಿಯಿಂದ ಹೇಳಿಕೊಂಡಿದ್ದಾರೆ.

ಯಶ್ ಅವರು ಭಾರತ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ‘ಕೆಜಿಎಫ್ 2’ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಅವರಿಗೆ ಅಭಿಮಾನಿಗಳು ಸೃಷ್ಟಿ ಆಗಿದೆ. ಈ ಕಾರಣಕ್ಕೆ ‘ಟಾಕ್ಸಿಕ್’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಸಿನಿಮಾದ ಟೀಸರ್ ಹಲ್​​ಚಲ್ ಸೃಷ್ಟಿಸಿದೆ. ಈ ಟೀಸರ್ ನೋಡಿದ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಹೀಗಿರುವಾಗಲೇ ಆಶಿಶ್ ಚಂಚ್ಲಾನಿ ಈ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ಮಾರ್ಚ್ 19ರಂದು ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ರಿಲೀಸ್ ಆಗುತ್ತಿದೆ. ‘ಟಾಕ್ಸಿಕ್’ ಕೂಡ ಅದೇ ದಿನ ತೆರೆಗೆ ಬರುತ್ತಿದೆ. ಎರಡೂ ಸಿನಿಮಾಗಳ ಮಧ್ಯೆ ದೊಡ್ಡ ಕ್ಲ್ಯಾಶ್ ಏರ್ಪಡೋದು ಪಕ್ಕಾ ಆಗಿದೆ. ಈ ಎರಡು ಸಿನಿಮಾಗಳಲ್ಲಿ ಯಾರು ಗೆಲ್ಲಬೇಕು ಎಂದು ಹೇಳಿಕೊಂಡಿದ್ದಾರೆ.

ಆಶಿಶ್ ಅವರಿಗೆ ಎರಡೂ ಸಿನಿಮಾ ಗೆಲ್ಲಬೇಕು ಎಂಬ ಬಯಕೆ ಇದೆ. ‘ಟಾಕ್ಸಿಕ್ ಹಾಗೂ ಧರುಂಧರ್ 2 ಬರ್ತಾ ಇದೆ. ಯಾವ ಸಿನಿಮಾ ಚೆನ್ನಾಗಿ ಮಾಡುತ್ತದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಐ ಲವ್ ಯಶ್. ರಣವೀರ್ ಕೂಡ ಇಷ್ಟ. ಎರಡೂ ಸಿನಿಮಾಗಳು ಗೆಲ್ಲಬೇಕು’ ಎಂದು ಆಶಿಶ್ ಚಂಚ್ಲಾನಿ ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧಂರ್ 2’ ಟೀಸರ್ 9 ಮಿಲಿಯನ್, ‘ಟಾಕ್ಸಿಕ್’ ಟೀಸರ್ 97 ಮಿಲಿಯನ್; ಅಜಗಜಾಂತರ ವ್ಯತ್ಯಾಸ

‘ಧುರಂಧರ್’ ಸಿನಿಮಾ ಈಗಾಗಲೇ ತನ್ನನ್ನು ತಾನು ಸಾಬೀತು ಮಾಡಿಕೊಂಡಿದೆ. ‘ಧುರಂಧರ್ 2’ ಚಿತ್ರದ ಬಗ್ಗೆ ನಿರೀಕ್ಷೆ ಮೂಡಲು ಇದುವೇ ಕಾರಣ. ‘ಟಾಕ್ಸಿಕ್’ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬದಲಾದ ಲೆಕ್ಕಾಚಾರ… ಪಾಕಿಸ್ತಾನ್ ಸೂಪರ್​ ಲೀಗ್​ಗೆ ಕೈಕೊಟ್ಟ ಮ್ಯಾಕ್ಸ್​ವೆಲ್ – Kannada News | Glenn Maxwell pulls out of PSL 2026

ಆಸ್ಟ್ರೇಲಿಯಾ ತಂಡದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಹಿಂದೆ ಸರಿದಿದ್ದಾರೆ. ಇದಕ್ಕೂ ಮುನ್ನ ಮ್ಯಾಕ್ಸ್​ವೆಲ್ ಅವರನ್ನು ಪೇಶಾವರ್ ಝಲ್ಮಿ ಫ್ರಾಂಚೈಸಿಯು ಡೈರೆಕ್ಟನ್ ಸೈನಿಂಗ್ ಆಯ್ಕೆ ಮೂಲಕ  ತಂಡಕ್ಕೆ ಸೇರಿಸಿಕೊಂಡಿದೆ ಎಂದು ವರದಿಯಾಗಿತ್ತು.

Source link

ಮಕ್ಕಳಾಗಿಲ್ಲ ಎಂದು ಕೊರಗುತ್ತಿರುವವರಿಗೆ ವಿಶೇಷ ದೇವಸ್ಥಾನದ ಬಗ್ಗೆ ಹೇಳಿದ ಶೈನ್ ಶೆಟ್ಟಿ – Kannada News | Shine Shetty Reveals a new Temple Name That Helps to Women who suffering From Fertility issues

ಶೈನ್ ಶೆಟ್ಟಿ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​​ಗಳನ್ನು ಕೂಡ ಮಾಡುತ್ತಿರುತ್ತಾರೆ. ಈಗ ಅವರ ಹೊಸ ವಿಡಿಯೋ ಗಮನ ಸೆಳೆದಿದೆ. ಮಕ್ಕಳಾಗದೆ ಕೊರಗುತ್ತಿರುವವರಿಗೆ ಈ ವಿಡಿಯೋ ಸಹಕಾರಿ ಆಗಲಿದೆ. ಕೊಚ್ಚಿಯಿಂದ ಎರಡೂವರೆ ಗಂಟೆ ದೂರದಲ್ಲಿರೋ ದೇವಸ್ಥಾನ ಇದು. ಮನ್ನರಸಲಾ (MANNARASALA) ಎಂಬುದು ದೇವಸ್ಥಾನದ ಹೆಸರು. ಇಲ್ಲಿ ಸೂಚಿಸಿದ ಒಂದು ಸೇವೆ ಕೊಟ್ಟರೆ ಮಕ್ಕಳಾಗುತ್ತದೆ ಎಂಬುದು ನಂಬಿಕೆ. ಮಗು ಆದ ಬಳಿಕ ಐದು ಬಾರಿ ಇಲ್ಲಿಗೆ ಭೇಟಿ ನೀಡಬೇಕಂತೆ. ಮಗು ಆಗದೆ ಇರುವವರು ಮಾತ್ರವಲ್ಲ ನಾಗದೋಷ ಇರುವವರಿಗೂ ಈ ಕ್ಷೇತ್ರ ಬೆಸ್ಟ್ ಎನ್ನುತ್ತಾರೆ ಶೈನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಲಿಫ್ಟ್​ ಒಳಗೆ ಹೈಡ್ರೋಜನ್ ಬಲೂನ್​ಗಳು ಸ್ಫೋಟ – Kannada News | Hydrogen Balloons Spark Fire Inside Lift at Mumbai Building

ಮುಂಬೈ, ಫೆಬ್ರವರಿ 05: ಮುಂಬೈನಲ್ಲಿರುವ ವಸತಿ ಕಟ್ಟಡದ ಲಿಫ್ಟ್​ ಒಳಗೆ ಹೈಡ್ರೋಜನ್ ತುಂಬಿದ ಬಲೂನ್​ಗಳು ಸ್ಫೋಟಗೊಂಡಿರುವ ವಿಡಿಯೋ ವೈರಲ್ ಆಗಿದೆ. ಬಲೂನ್‌ಗಳಿಂದ ತುಂಬಿದ ಪ್ಲಾಸ್ಟಿಕ್ ಚೀಲವನ್ನು ಹೊತ್ತುಕೊಂಡು ಒಬ್ಬ ವ್ಯಕ್ತಿ ಒಳಗೆ ಬರುವುದನ್ನು ಸಿಸಿ ಕ್ಯಾಮರಾದಲ್ಲಿ ಕಾಣಬಹುದು. ಮತ್ತೊಬ್ಬರು ಟ್ರಾಲಿ ಬ್ಯಾಗ್ ಹೊತ್ತು ಬಂದಿದ್ದರು. ಲಿಫ್ಟ್​ ಬಾಗಿಲು ಹಾಕುತ್ತಿದ್ದಂತೆಯೇ ಬಲೂನ್​ಗಳು ಸ್ಫೋಟಗೊಂಡಿವೆ. ಬೆಂಕಿ ಇಡೀ ಲಿಫ್​ ಒಳಗೆ ಹರಡಿತ್ತು. ಎಲ್ಲರೂ ಲಿಫ್ಟ್​ನಿಂದ ಹೊರಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Video: ಹಣ ಕೊಡುವುದಿಲ್ಲ ಎಂದಿದ್ದಕ್ಕೆ ಯುವತಿ ಮುಖಕ್ಕೆ ಗುಟ್ಕಾ ಉಗಿದ ಮಂಗಳಮುಖಿ – Kannada News | Trans Woman Spits Gutka On Girl After She Refuses To Give Money

ನವದೆಹಲಿ, ಫೆಬ್ರವರಿ 05: ಮೆಟ್ರೋ ನಿಲ್ದಾಣದಲ್ಲಿ ಹಣ ಕೊಡಲಿಲ್ಲ ಎಂದು ಮಂಗಳಮುಖಿಯೊಬ್ಬರು ಯುವತಿ ಮುಖಕ್ಕೆ ಗುಟ್ಕಾದಿಂದ ಉಗಿದಿರುವ ವಿಡಿಯೋ ವೈರಲ್ ಆಗಿದೆ. ಯುವತಿ ವಿಡಿಯೋ ಮಾಡುತ್ತಿರುತ್ತಾರೆ, ಆಗ ಹಣ ಕೊಡು ಎಂದು ಆಕೆಗೆ ಆಶೀರ್ವಾದ ಮಾಡಲು ಮಂಗಳಮುಖಿ ಮುಂದೆಬರುತ್ತಾರೆ. ಆಗ ಆಕೆ ಕೊಡುವುದಿಲ್ಲ ಎಂದಿದ್ದಕ್ಕೆ ಮಂಗಳಮುಖಿಯರ ಶಾಪ ನಿನಗೆ ತಟ್ಟುತ್ತೆ ಎನ್ನುತ್ತಾರೆ. ಅದಕ್ಕೆ ಯುವತಿ ಗಾಬರಿಗೊಳ್ಳದೆ ನಿಮ್ಮ ಆಶೀರ್ವಾದ ಸಿಗದಿದ್ದರೆ ಏನಾಗುವುದಿಲ್ಲ ಮುಂದಕ್ಕೆ ಹೋಗಿ ಎನ್ನುತ್ತಾಳೆ. ಆ ಯುವತಿ ಕ್ಯಾಮೆರಾವನ್ನು ಎಸ್ಕಲೇಟರ್ ಬಳಿ ಇರಿಸಿ ವಿಷಯವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದಾಗ, ಮಂಗಳಮುಖಿ ಆಕೆಯ ಮೇಲೆ ಗುಟ್ಕಾ ಉಗುಳುತ್ತಾಳೆ. ಇದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಂಡರ್-19 ವಿಶ್ವಕಪ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ – Kannada News | India becomes first team to reach finals for 10 times

ಅಂಡರ್-19 ವಿಶ್ವಕಪ್​ನ 16ನೇ ಆವೃತ್ತಿಯಲ್ಲೂ ಭಾರತ ತಂಡ ಫೈನಲ್​​ಗೇರಿದೆ. ಹರಾರೆಯಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಟೀಮ್ ಇಂಡಿಯಾ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟಿದೆ. ಈ ಎಂಟ್ರಿಯೊಂದಿಗೆ ವಿಶೇಷ ವಿಶ್ವ ದಾಖಲೆಯನ್ನು ಕೂಡ ತನ್ನದಾಗಿಸಿಕೊಂಡಿದೆ.

ಅಂದರೆ ಭಾರತ ತಂಡವು ಅಂಡರ್-19 ವಿಶ್ವಕಪ್​ನಲ್ಲಿ ಫೈನಲ್​ಗೆ ಏರುತ್ತಿರುವುದು ಇದು 10ನೇ ಬಾರಿ. ಈ ಮೂಲಕ ಕಿರಿಯರ ವಿಶ್ವಕಪ್​ನಲ್ಲಿ ಅತೀ ಹೆಚ್ಚು ಬಾರಿ ಫೈನಲ್​ಗೇರಿದ ತಂಡವೆಂಬ ಹೆಗ್ಗಳಿಕೆಯನ್ನು ಟೀಮ್ ಇಂಡಿಯಾ ತನ್ನ ಹೆಸರಿಗೆ ಸೇರ್ಪಡೆಗೊಳಿಸಿದೆ. 

ಅದರಲ್ಲೂ ಸತತ 6ನೇ ಬಾರಿಗೆ ಫೈನಲ್​ಗೆ ಪ್ರವೇಶಿಸಿದೆ. ಅಂದರೆ ಕಳೆದ 5 ಆವೃತ್ತಿಗಳಲ್ಲೂ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಇದೀಗ ಮತ್ತೊಮ್ಮೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಈ ಮೂಲಕ ಆರನೇ ಬಾರಿ ಅಂಡರ್-19 ವಿಶ್ವಕಪ್ ಗೆಲ್ಲುವ ಇರಾದೆಯಲ್ಲಿದೆ.

ಟೀಮ್ ಇಂಡಿಯಾ ಮೊದಲ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದಿದ್ದು 2000 ರಲ್ಲಿ. ಅಂದು ಮೊಹಮ್ಮದ್ ಕೈಫ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಅಂಡರ್-19 ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ 2008 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2ನೇ ಬಾರಿ ವಿಶ್ವಕಪ್ ಎತ್ತಿ ಹಿಡಿದಿದ್ದರು.

ಆ ಬಳಿಕ 2012, 2018 ಮತ್ತು 2022 ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಇದರ ನಡುವೆ 2006, 2016, 2020 ಮತ್ತು 2024 ರಲ್ಲಿ ಫೈನಲ್​ನಲ್ಲಿ ಸೋಲನುಭವಿಸಿತ್ತು. ಇದೀಗ 10ನೇ ಬಾರಿ ಫೈನಲ್​ಗೆ ಎಂಟ್ರಿ ಕೊಟ್ಟಿರುವ ಭಾರತ ತಂಡವು ಈ ಬಾರಿ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗುವ ನಿರೀಕ್ಷೆಯಿದೆ.

Published On – 8:24 am, Thu, 5 February 26

Source link

ರಾಮ್ ಗೋಪಾಲ್ ವರ್ಮಾಗೆ ಯಶ್ ಮೇಲೆ ಯಾಕಿಷ್ಟು ಕೋಪ? – Kannada News | RGV’s Dhurandhar 2 Post: Is it a Warning to Yash’s Toxic Film?

ರಣವೀರ್ ಸಿಂಗ್ ಅವರ ‘ಧುರಂಧರ್’ (Dhurandhar) ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭಾರಿ ಯಶಸ್ಸನ್ನು ಗಳಿಸಿದ ನಂತರ, ಅದರ ಮುಂದುವರಿದ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಫೆಬ್ರವರಿ 3ರಂದು, ‘ಧುರಂಧರ್ 2’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಈ ಟೀಸರ್​ನಲ್ಲಿ ಆಕ್ಷನ್ ನೋಡಿದ ನಂತರ, ಚಿತ್ರದ ಬಗ್ಗೆ ಕುತೂಹಲ ಉತ್ತುಂಗಕ್ಕೇರಿದೆ. ಹಳೆಯ ದೃಶ್ಯಗಳನ್ನೇ ಮತ್ತೆ ತೋರಿಸಿದ್ದಕ್ಕೆ ಕೆಲವರು ಬೇಸರ ಹೊರಹಾಕಿದ್ದಾರೆ. ‘ಧುರಂಧರ್ 2’ ಚಿತ್ರದ ಟೀಸರ್ ಬಗ್ಗೆ ಪ್ರಸಿದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬರೆದ ಪೋಸ್ಟ್ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.

‘ಧುರಂಧರ್ 2’ ಚಿತ್ರದ ಟೀಸರ್ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ, ‘ಇದು ಸೇಡು ತೀರಿಸಿಕೊಳ್ಳುವ ಮಾತಲ್ಲ, ಇದು ಆದಿತ್ಯ ಧರ್ ಅವರ ಕೋಪ. ಅವರ ದಾರಿಯಲ್ಲಿ ಬರುವವರ ಬಗ್ಗೆ ನನಗೆ ವಿಷಾದವಿದೆ. RIP (ಶಾಂತಿ ಸಿಗಲಿ)’ ಎಂದು ಪೋಸ್ಟ್ ಬರೆದಿದ್ದಾರೆ. ರಾಮ್ ಗೋಪಾಲ್ ವರ್ಮ ಅವರಿಗೆ ಯಶ್ ಮೇಲೆ ಯಾವುದೋ ಹಳೆಯ ಕೋಪ ಇರಬಹುದು ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.

ಮಾರ್ಚ್ 19 ರಂದು, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರದ ಜೊತೆಗೆ, ಯಶ್ ಅವರ ಹೆಚ್ಚು ಚರ್ಚಿಸಲ್ಪಟ್ಟ ‘ಟಾಕ್ಸಿಕ್’ ಕೂಡ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆರ್​ಜಿವಿ ಈ ಪೋಸ್ಟ್ ಮೂಲಕ, ಮುಂಬರುವ ‘ಟಾಕ್ಸಿಕ್’ ಚಿತ್ರದ ನಿರ್ಮಾಪಕರಿಗೆ ಅವರು ದೊಡ್ಡ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

‘ಧುರಂಧರ್’ ಚಿತ್ರದ ಮೊದಲ ಭಾಗವು ಹಿಂದಿಯಲ್ಲಿ ಮಾತ್ರ ಬಿಡುಗಡೆಯಾಯಿತು. ಈ ಚಿತ್ರವು ಹಿಂದಿಯಲ್ಲಿ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ. ಗಳಿಸುವ ಮೂಲಕ ಅಲ್ಲು ಅರ್ಜುನ್ ಅವರ ‘ಪುಷ್ಪ 2’ ಚಿತ್ರದ ದಾಖಲೆಯನ್ನು ಮುರಿಯಿತು. ಈಗ ‘ಧುರಂಧರ್ 2’ ಚಿತ್ರವು ಪ್ಯಾನ್-ಇಂಡಿಯಾ, ಅಂದರೆ ಹಿಂದಿಯಲ್ಲಿ ಮತ್ತು ದಕ್ಷಿಣ ಭಾಷೆಗಳಾದ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಆದ್ದರಿಂದ, ಈ ಚಿತ್ರವು ಯಶ್ ಅವರ ‘ಟಾಕ್ಸಿಕ್’ ಚಿತ್ರಕ್ಕೆ ದೊಡ್ಡ ಸ್ಪರ್ಧೆಯಾಗಲಿದೆ.

ಇದನ್ನೂ ಓದಿ: ‘ಧುರಂಧಂರ್ 2’ ಟೀಸರ್ 9 ಮಿಲಿಯನ್, ‘ಟಾಕ್ಸಿಕ್’ ಟೀಸರ್ 97 ಮಿಲಿಯನ್; ಅಜಗಜಾಂತರ ವ್ಯತ್ಯಾಸ

‘ಧುರಂಧರ್’ ವಿಶ್ವಾದ್ಯಂತ 1300 ಕೋಟಿ ರೂ.ಗಳಷ್ಟು ಹಣವನ್ನು ಸಂಗ್ರಹಿಸಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್. ಮಾಧವನ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ರಣವೀರ್ ಅವರ ವೃತ್ತಿಜೀವನದ ಅತಿದೊಡ್ಡ ಮತ್ತು ಬ್ಲಾಕ್ಬಸ್ಟರ್ ಚಿತ್ರವಾಗಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅನೇಕ ಹೊಸ ದಾಖಲೆಗಳನ್ನು ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version