4 ಸರಣಿಗಳ ವೇಳೆ ಜಸ್​ಪ್ರೀತ್ ಬುಮ್ರಾಗೆ ರೆಸ್ಟ್​..! – Kannada News | BCCI to Rest Jasprit Bumrah from ODIs to Keep Him Fresh for BGT

ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ವೇಗದ ಅಸ್ತ್ರ ಜಸ್‌ಪ್ರೀತ್ ಬುಮ್ರಾ ಅವರನ್ನು ಮುಂಬರುವ ‘ಬಾರ್ಡರ್-ಗವಾಸ್ಕರ್’ ಟ್ರೋಫಿಗಾಗಿ ಫ್ರೆಶ್ ಆಗಿ ಇರಿಸಲು ಬಿಸಿಸಿಐ (BCCI) ವಿಶೇಷ ಕಾರ್ಯತಂತ್ರ ರೂಪಿಸಿದೆ. 2026ರ ಸಾಲಿನಲ್ಲಿ ನಡೆಯಲಿರುವ ಪ್ರಮುಖ ಏಕದಿನ (ODI) ಸರಣಿಗಳಿಂದ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

ಟೆಸ್ಟ್​ ಕ್ರಿಕೆಟ್ ಆದ್ಯತೆ:

ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಸೈಕಲ್ ಭಾರತ ತಂಡದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯು ವಿಶ್ವ ಟೆಸ್ಟ್ ಫೈನಲ್ ತಲುಪಲು ಬಹಳ ಮುಖ್ಯ.

ಬುಮ್ರಾ ಅವರ ಬೆನ್ನು ನೋವಿನ ಸಮಸ್ಯೆ ಮತ್ತು ಅವರ ಬೌಲಿಂಗ್ ಶೈಲಿಯನ್ನು ಪರಿಗಣಿಸಿ, ಅವರನ್ನು ಕೇವಲ ಪ್ರಮುಖ ಟೆಸ್ಟ್ ಪಂದ್ಯಗಳಿಗೆ ಮಾತ್ರ ಬಳಸಿಕೊಳ್ಳಲು ಮಂಡಳಿ ಮುಂದಾಗಿದೆ. ಹೀಗಾಗಿ ಮುಂಬರುವ ಏಕದಿನ ಸರಣಿಗಳಲ್ಲಿ ಜಸ್​ಪ್ರೀತ್ ಬುಮ್ರಾ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.

ಯಾವೆಲ್ಲಾ ಸರಣಿಗಳಿಂದ ಹೊರಕ್ಕೆ?

  • ಅಫ್ಘಾನಿಸ್ತಾನ್ ಸರಣಿ: ಜೂನ್ 2026ರಲ್ಲಿ ನಡೆಯಲಿರುವ 3 ಏಕದಿನ ಪಂದ್ಯಗಳಿಂದ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
  • ಇಂಗ್ಲೆಂಡ್ ಪ್ರವಾಸ: ಜುಲೈನಲ್ಲಿ ನಡೆಯಲಿರುವ 3 ಏಕದಿನ ಪಂದ್ಯಗಳಿಂದಲೂ ಅವರು ಹೊರಗುಳಿಯಬಹುದು.
  • ವೆಸ್ಟ್ ಇಂಡೀಸ್ ಸರಣಿ: ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ 3 ಏಕದಿನ ಪಂದ್ಯಗಳ ಸರಣಿಯಲ್ಲೂ ಬುಮ್ರಾ ಆಡುವುದು ಅನುಮಾನ.
  • ಶ್ರೀಲಂಕಾ ಸರಣಿ: ವರ್ಷಾಂತ್ಯದಲ್ಲಿ ನಡೆಯಲಿರುವ 3 ಏಕದಿನ ಪಂದ್ಯಗಳಿಂದಲೂ ಬುಮ್ರಾ ಹೊರಗಿಡುವ ಸಾಧ್ಯತೆ ಹೆಚ್ಚಿದೆ.

ವಿಶ್ರಾಂತಿಗೆ ಪ್ರಮುಖ ಕಾರಣಗಳು:

  • ಟೆಸ್ಟ್ ಪಂದ್ಯಗಳಿಗೆ ಆದ್ಯತೆ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಡಿಯಲ್ಲಿ ನಡೆಯಲಿರುವ ಮುಂದಿನ 9 ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಪೂರ್ಣ ಪ್ರಮಾಣದಲ್ಲಿ ಲಭ್ಯವಿರಬೇಕು ಎಂಬುದು ಬಿಸಿಸಿಐ ಉದ್ದೇಶ.
  • ಬಾರ್ಡರ್-ಗವಾಸ್ಕರ್ ಟ್ರೋಫಿ (BGT): ಜನವರಿ 2027ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುವ 5 ಟೆಸ್ಟ್ ಪಂದ್ಯಗಳ ಸರಣಿಯ ವೇಳೆಗೆ ಬುಮ್ರಾ ಸಂಪೂರ್ಣ ಫಿಟ್ ಆಗಿರಬೇಕು ಎಂಬುದು ಆಯ್ಕೆದಾರರ ಗುರಿ.
  • ಕಾರ್ಯದೊತ್ತಡ ನಿರ್ವಹಣೆ: ಜಸ್​ಪ್ರೀತ್ ಬುಮ್ರಾ ಅವರ ವಿಭಿನ್ನ ಬೌಲಿಂಗ್ ಶೈಲಿಯು ಬೆನ್ನಿನ ಮೇಲೆ ಹೆಚ್ಚು ಒತ್ತಡ ಹೇರುವುದರಿಂದ, ಸಣ್ಣ ಸರಣಿಗಳಲ್ಲಿ ಅವರಿಗೆ ವಿಶ್ರಾಂತಿ ನೀಡಿ ದೀರ್ಘಕಾಲದವರೆಗೆ ಫಿಟ್ ಆಗಿರಲು ಸಹಾಯ ಮಾಡಲಾಗುತ್ತಿದೆ.

ಯುವ ಆಟಗಾರರಿಗೆ ಅವಕಾಶ:

ಜಸ್​ಪ್ರೀತ್ ಬುಮ್ರಾ ಅಲಭ್ಯತೆಯ ಸಮಯದಲ್ಲಿ ಆಕಾಶ್ ದೀಪ್, ಹರ್ಷಿತ್ ರಾಣಾ ಅಥವಾ ಮಯಾಂಕ್ ಯಾದವ್ ಅವರಂತಹ ಯುವ ವೇಗಿಗಳನ್ನು ಏಕದಿನ ಸರಣಿಗಳಲ್ಲಿ ಪರೀಕ್ಷಿಸಲು ಆಯ್ಕೆಗಾರರು ಚಿಂತಿಸಿದ್ದಾರೆ. ಇದು ಭವಿಷ್ಯದ 2027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಕಟ್ಟಲು ಸಹಕಾರಿಯಾಗಲಿದೆ.

ಇದನ್ನೂ ಓದಿ: MI vs CSK ಪಂದ್ಯವನ್ನು ‘ಎಲ್ ಕ್ಲಾಸಿಕೋ’ ಎಂದು ಕರೆಯುವುದು ಯಾಕೆ?

ಒಟ್ಟಾರೆಯಾಗಿ ಹೇಳುವುದಾದರೆ, ಭಾರತ ತಂಡಕ್ಕೆ ಬುಮ್ರಾ ಕೇವಲ ಒಬ್ಬ ಆಟಗಾರನಲ್ಲ, ಅವರು ತಂಡದ ಗೆಲುವಿನ ಮಂತ್ರ. ಹೀಗಾಗಿ, ಅವರನ್ನು ಅತಿ ಹೆಚ್ಚು ಒತ್ತಡವಿಲ್ಲದೆ ಬಳಸಿಕೊಳ್ಳುವುದು ಬಿಸಿಸಿಐನ ಜಾಣತನದ ನಡೆಯಾಗಿದೆ. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಸರಣಿಯಲ್ಲಿ ಅವರನ್ನು ಸಂಪೂರ್ಣ ಫಿಟ್​ನೆಸ್​ನೊಂದಿಗೆ ಬಳಸಿಕೊಳ್ಳಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.

Source link

SSLC District Wise Result: ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ – Kannada News | Karnataka SSLC Result District Wise Rankings 2026: Dakshina Kannada First, Kalaburagi Last

ಸಚಿವ ಮಧು ಬಂಗಾರಪ್ಪ ಅವರಿಂದ ಮಾಹಿತಿImage Credit source: Tv9 Kannada

ಬೆಂಗಳೂರು, ಏಪ್ರಿಲ್​​ 23: 2025-26ನೇ ಸಾಲಿನ SSLC ಪರೀಕ್ಷೆ ಫಲಿತಾಂಶ (Karnataka SSLC 10th Result 2026) ಏಪ್ರಿಲ್‌ 23ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದೆ. ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಿಸಲ್ಟ್​​ ಸಂಬಂಧಿತ ಮಾಹಿತಿ ನೀಡಿದ್ದಾರೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಮೂಲಕ ಎಸ್​​ಎಸ್​​ಎಲ್​​ಸಿಯಲ್ಲಿ ಶೇ.94.1 ಮಂದಿ ಪಾಸ್​​ ಆಗಿದ್ದಾರೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೂ ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು.

ದಕ್ಷಿಣ ಕನ್ನಡ ಫಸ್ಟ್​​, ಕಲಬುರಗಿ ಲಾಸ್ಟ್​​

ಈ ಬಾರಿಯ ಎಸ್​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ  ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Published On – 12:21 pm, Thu, 23 April 26

Source link

100 ಕೋಟಿ ರೂ. ಸುರಿದು ಹೊಸ ಮನೆ ನಿರ್ಮಿಸುತ್ತಿದ್ದಾರೆ ಅಲ್ಲು ಅರ್ಜುನ್; ಹೇಗಿರಲಿದೆ ನಿವಾಸ? – Kannada News | Allu Arjun’s Rs 100 Cr Dream Home: Construction Begins in Jubilee Hills, Hyderabad

ಅಲ್ಲು ಅರ್ಜುನ್ (Allu Arjun) ಸಾಲು ಸಾಲು ಯಶಸ್ಸು ಕಾಣುತ್ತಿದ್ದಾರೆ. ‘ಪುಷ್ಪ’, ‘ಪುಷ್ಪ 2’ ದೊಡ್ಡ ಯಶಸ್ಸು ಕಂಡಿದೆ. ಈಗ ಅವರು ‘ರಾಕಾ’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಹೀಗಿರುವಾಗಲೇ ಅವರು ಹೈದರಾಬಾದ್​​ನ ಜುಬ್ಲಿ ಹಿಲ್ಸ್​​ನಲ್ಲಿ ದೊಡ್ಡ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ಸದ್ಯ ಅವರು ಜುಬ್ಲಿ ಹಿಲ್ಸ್​​ನಲ್ಲೇ ವಾಸವಿದ್ದಾರೆ. ಅದೇ ಭಾಗದಲ್ಲಿ ಈಗ ಹೊಸ ಮನೆ ಕೂಡ ನಿರ್ಮಾಣ ಆಗುತ್ತಿದೆ. ಇದು ಅವರ ಡ್ರೀಮ್ ಹೌಸ್ ಎನ್ನಲಾಗಿದೆ.

ಅಲ್ಲು ಅರ್ಜುನ್ ಅವರ ಹೊಸ ಮನೆ ನಿರ್ಮಾಣಕ್ಕೆ 80-100 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರ ಮನೆಯ ಜಾಗ ಸುಮಾರು 4 ಸಾವಿರ ಸ್ಕ್ವೇರ್ ಯಾರ್ಡ್ ಅಲ್ಲಿ ಇರಲಿದೆ. ಇದರಲ್ಲಿ ಮನೆ, ಗಾರ್ಡನ್, ಪ್ಲೇಯಿಂಗ್ ಏರಿಯಾ, ಸ್ವಿಮಿಂಗ್ ಪೂಲ್ ಎಲ್ಲವೂ ಸೇರಿರಲಿದೆ. ಅದ್ಭುತ ವಾಸ್ತುಶಿಲ್ಪವನ್ನು ಇದು ಹೊಂದಿರಲಿದೆ. ಈಗಾಗಲೇ ಮನೆ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಖ್ಯಾತ ನಟ ಚಿರಂಜೀವಿ ನಿವಾಸ ಕೂಡ ಜುಬ್ಲಿ ಹಿಲ್ಸ್​​ನಲ್ಲೇ ಇದೆ. ಈ ಮನೆಯ ಪಕ್ಕದಲ್ಲೇ ಅಲ್ಲು ಅರ್ಜುನ್ ಹೊಸ ನಿವಾಸ ರೆಡಿ ಆಗುತ್ತಿದೆ. ಈ ಮೂಲಕ ಅಲ್ಲು ಅರ್ಜುನ್ ಹಾಗೂ ಚಿರಂಜೀವಿ ನೆರೆಹೊರೆಯವಲಾಗಲಿದ್ದಾರೆ. ಸಂಬಂಧದಲ್ಲಿ ಅಲ್ಲು ಅರ್ಜುನ್​​ಗೆ ಚಿರಂಜೀವಿ ಮಾವ ಆಗಬೇಕು. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಹೋದರಿಯನ್ನು ಚಿರಂಜೀವಿಗೆ ಕೊಟ್ಟು ಮದುವೆ ಮಾಡಲಾಗಿದೆ.

ಇದನ್ನೂ ಓದಿ: ಮುಂಬೈನಲ್ಲಿ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ತಿಂಗಳ ಬಾಡಿಗೆ ಎಷ್ಟು ಗೊತ್ತೆ?

ಮನೆ ನಿರ್ಮಾಣ ಪೂರ್ಣಗೊಂಡ ಬಳಿಕ ಅಲ್ಲು ಅರ್ಜುನ್ ಹೊಸ ಮನೆಗೆ ಶಿಫ್ಟ್ ಆಗಬಹುದು. ಅಲ್ಲು ಅರ್ಜುನ್ ಅವರು ಪ್ರತಿ ವರ್ಷ ಬರ್ತ್​​ಡೇ ಸಂದರ್ಭದಲ್ಲಿ ಅಭಿಮಾನಿಗಳನ್ನು ಮನೆ ಬಳಿ ಭೇಟಿ ಆಗುತ್ತಾರೆ. ಈಗ ಹೊಸ ನಿವಾಸದಲ್ಲಿ ಅಭಿಮಾನಿಗಳನ್ನು ನೋಡಲು ಗ್ಯಾಲರಿ ಕೂಡ ನಿರ್ಮಾಣ ಮಾಡಬಹುದೇ ಎಂಬ ಪ್ರಶ್ನೆ ಮೂಡಿದೆ.
ಅಲ್ಲು ಅರ್ಜುನ್ ಅವರು ‘ರಾಕಾ’ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ ಆದರೆ, ಅಟ್ಲೀ ನಿರ್ದೇಶಕರಾಗಿದ್ದಾರೆ. ಈ ಸಿನಿಮಾ ಶೂಟ್​​ಗಾಗಿ ಅಲ್ಲು ಅರ್ಜುನ್ ಅವರು ಮುಂಬೈಗೆ ತೆರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: CET ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರ ಮೂಗಿಗೆ ಗಮ್ ಟೇಮ್ ಅಂಟಿಸಿದ ಭದ್ರತಾ ಸಿಬ್ಬಂದಿ – Kannada News | CET Exam Security: Gum Tape Applied to Students Nose Pins

ಎಂಜಿನಿಯರಿಂಗ್‌ ಸೇರಿದಂತೆ ನಾನಾ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪ್ರಾರಂಭವಾಗಿದೆ. ಇದೀಗ CET ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರು ಧರಿಸಿದ್ದ ಮೂಗು ಬೊಟ್ಟಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಗಮ್ ಟೇಪ್ ಅಂಟಿಸಿದ ಘಟನೆ ಬೆಳಕಿಗೆ ಬಂದಿದೆ. ಪರೀಕ್ಷಾ ಕೇಂದ್ರಗಳಲ್ಲಿ ಆಭರಣಗಳನ್ನು ಧರಿಸುವುದನ್ನು ನಿಷೇಧಿಸುವ ಕಟ್ಟುನಿಟ್ಟಿನ ಭದ್ರತಾ ನಿಯಮಗಳ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಮೂಗುತ್ತಿ ಧರಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಆರಂಭದಲ್ಲಿ ಅವುಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಲಾಗಿತ್ತು. ಆಭರಣ ತೆಗೆಯಲು ಸೂಚಿಸಿದರೂ ಸಾಧ್ಯವಾಗದ ವಿದ್ಯಾರ್ಥಿನಿಯರಿಗೆ ಸಿಬ್ಬಂದಿ ತಾತ್ಕಾಲಿಕ ಪರಿಹಾರವಾಗಿ ಟೇಪ್ ಅಂಟಿಸಿರುವುದು ವರದಿಯಾಗಿದೆ.

ಇದನ್ನೂ ಓದಿ: ಸಿಇಟಿ ಪರೀಕ್ಷೆಗೆ ಹೋಗುವವರ ಗಮನಕ್ಕೆ; ಕಾಲರ್ ಇಲ್ಲದ ಅರ್ಧ ತೋಳಿನ ಬಟ್ಟೆ ಕಡ್ಡಾಯ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka SSLC Result 2026: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ, ಇಲ್ಲಿದೆ ಡಿಟೇಲ್ಸ್ – Kannada News | Karnataka SSLC Result 2026 Declared; Check KSEAB direct link at karresults.nic.in kseab.karnataka.gov.in for Rankings and Toppers details

ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟImage Credit source: tv9

ಬೆಂಗಳೂರು, ಏಪ್ರಿಲ್ 23: 2025-26ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ (SSLC Result 2026) ಬುಧವಾರ (ಏಪ್ರಿಲ್ 23) ಶಿಕ್ಷಣ ಇಲಾಖೆಯ ವೆಬ್​ಸೈಟ್​ನಲ್ಲಿ ಪ್ರಕಟವಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಅಧಿಕೃತ ಪೋರ್ಟಲ್ https://karresults.nic.in ಮೂಲಕವೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಹಾಗೇಯೇ ‘KarnatakaOne’ ಎನ್ನುವ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ಪರಿಶೀಲಿಸಿಕೊಳ್ಳಬಹುದು. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಮಂಡಳಿ ವತಿಯಿಂದಲೇ ನೇರವಾಗಿ ಫಲಿತಾಂಶದ ವಿವರಗಳು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ರವಾನೆಯಾಗುತ್ತಿದೆ.

(ಮಾಹಿತಿ ಅಪ್​ಡೇಟ್ ಆಗುತ್ತಿದೆ)

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ

Published On – 12:02 pm, Thu, 23 April 26

Source link

ರಿಷಭ್ ಪಂತ್ ಮತ್ತು ಸಂಜೀವ್ ಗೋಯೆಂಕಾ ನಡುವಣ ವಿಡಿಯೋ ವೈರಲ್

ಐಪಿಎಲ್ 2026ರ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವಿನ ಪಂದ್ಯವು ಕೇವಲ ಆಟದ ಕಾರಣಕ್ಕಷ್ಟೇ ಅಲ್ಲದೆ, ಮಾಲೀಕ ಸಂಜೀವ್ ಗೋಯೆಂಕಾ ಮತ್ತು ನಾಯಕ ರಿಷಬ್ ಪಂತ್ ಅವರ ನಡುವಿನ ವಿಶೇಷ ಬಾಂಧವ್ಯದ ಕಾರಣಕ್ಕಾಗಿ ಸುದ್ದಿಯಲ್ಲಿದೆ.

ಪಂದ್ಯದ ವೇಳೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾಗ, ಅನಿರೀಕ್ಷಿತವಾಗಿ ಪುಟಿದ ಚೆಂಡು ರಿಷಬ್ ಪಂತ್ ಅವರ ಮೂಗಿಗೆ ಬಲವಾಗಿ ಬಡಿದಿತ್ತು. ಈ ನೋವಿನ ನಡುವೆ ಪಂತ್ ಪಂದ್ಯದಲ್ಲಿ ಮುಂದುವರೆದಿದ್ದರು. ಇದಾಗ್ಯೂ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಪಂದ್ಯ ಗೆಲ್ಲಿಸಿಕೊಡಲು ರಿಷಭ್ ಪಂತ್​ಗೆ ಸಾಧ್ಯವಾಗಿರಲಿಲ್ಲ.

ಇತ್ತ ಸೋಲಿನ ನೋವಿನ ನಡುವೆ ರಿಷಭ್ ಪಂತ್ ಎಲ್​ಎಸ್​ಜಿ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಅವರನ್ನು ಮೈದಾನದಲ್ಲಿ ಭೇಟಿಯಾಗಿದ್ದರು.

ಸಾಮಾನ್ಯವಾಗಿ ಮೈದಾನದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳುತ್ತಿದ್ದ ಗೋಯೆಂಕಾ, ಈ ಬಾರಿ ಪಂತ್ ಅವರ ಬಳಿ ಬಂದು ಅತ್ಯಂತ ಪ್ರೀತಿಯಿಂದ ಮಾತನಾಡಿಸಿದರು. ಅಲ್ಲದೆ ಪಂತ್ ಅವರ ಮೂಗಿನ ಗಾಯದ ಬಗ್ಗೆ ವಿಚಾರಿಸಿ, ಅವರನ್ನು ಅಪ್ಪಿಕೊಂಡು ಬೆನ್ನುತಟ್ಟುವ ಮೂಲಕ ಧೈರ್ಯ ತುಂಬಿದರು.

ಹಿಂದಿನ ಸೀಸನ್‌ಗಳಲ್ಲಿ ಸಂಜೀವ್ ಗೋಯೆಂಕಾ ಅವರು ಆಟಗಾರರೊಂದಿಗೆ ನಡೆಸುತ್ತಿದ್ದ ಸಂವಾದಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿದ್ದವು. ಆದರೆ, ಈ ಬಾರಿ ಗೋಯೆಂಕಾ ಅವರ ಸೌಮ್ಯ ಸ್ವಭಾವ ಮತ್ತು ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದರೊಂದಿಗೆ ರಿಷಭ್ ಪಂತ್ ಮತ್ತು ಸಂಜೀವ್ ಗೋಯೆಂಕಾ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳಿಗೆ ಈ ಒಂದು ದೃಶ್ಯ ಪೂರ್ಣವಿರಾಮ ಇಟ್ಟಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 159 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 18 ಓವರ್​ಗಳಲ್ಲಿ 118 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಎಲ್​ಎಸ್​ಜಿ ಪಡೆ 40 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

 

Source link

ಮೇ 1ರಿಂದ ಹೊಸ ಗೇಮಿಂಗ್ ರೂಲ್ಸ್; ಆಟಗಾರರಿಗೆ ಬದಲಾವಣೆಗಳೇನು? ಇಲ್ಲಿದೆ ಡೀಟೇಲ್ಸ್ – Kannada News | New online gaming rules from 2026 May 1st, know what new for players

ನವದೆಹಲಿ, ಏಪ್ರಿಲ್ 23: ಕೇಂದ್ರ ಸರ್ಕಾರವು ಆನ್‌ಲೈನ್ ಗೇಮಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು (Promotion and Regulation of Online Gaming Act, 2025) ಜಾರಿಗೊಳಿಸಿದೆ. ಈ ನಿಯಮಗಳು ಮೇ 1, 2026 ರಿಂದ ಜಾರಿಗೆ ಬರಲಿವೆ. ಕಳೆದ ವರ್ಷ (2025) ಆಗಸ್ಟ್ ತಿಂಗಳಲ್ಲಿ ಸಂಸತ್ತು ಈ ಆನ್ಲೈನ್ ಗೇಮಿಂಗ್ ಕಾಯ್ದೆಗೆ ಅನುಮೋದನೆ ಕೊಟ್ಟಿತ್ತು. ಇದೀಗ ಕಾರ್ಯಾತ್ಮಕ ನಿಯಮಗಳನ್ನು ಚಾಲನೆಗಳಿಸಲಾಗಿದೆ. ಬಳಕೆದಾರರಿಗೆ ರಕ್ಷಣೆ ಹಾಗೂ ಉದ್ಯಮ ಬೆಳವಣಿಗೆ ಎರಡನ್ನೂ ಸಮತೋಲನಗೊಳಿಸಲು ಸಾಧ್ಯವಾಗುವಂತೆ ಒಂದು ಫ್ರೇಮ್​ವರ್ಕ್ ರೂಪಿಸಲಾಗುತ್ತಿದೆ. ಈ ಆನ್ಲೈನ್ ಗೇಮಿಂಗ್ ಕಾನೂನಿನ ಕೆಲ ಪ್ರಮುಖ ಅಂಶಗಳು ಇಲ್ಲಿವೆ:

ಹೊಸ ನಿಯಂತ್ರಣ ಮಂಡಳಿ

ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ‘ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ’ವನ್ನು (Online Gaming Authority of India) ಸ್ಥಾಪಿಸಿದೆ. ಇದು ಐಟಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಗೃಹ, ಹಣಕಾಸು ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.

ಗೇಮ್‌ಗಳ ವರ್ಗೀಕರಣ

ಹಣದ ಆಟಗಳು (Money games) ಮತ್ತು ಕೌಶಲ್ಯದ ಆಟಗಳನ್ನು ವರ್ಗೀಕರಿಸಲು ಸ್ಪಷ್ಟ ಮಾನದಂಡಗಳನ್ನು ತರಲಾಗಿದೆ. ಬಳಕೆದಾರರು ಹಣ ಪಾವತಿಸುತ್ತಾರೆಯೇ? ಬಹುಮಾನವಾಗಿ ನಗದು ಸಿಗುತ್ತದೆಯೇ? ಗೇಮ್ ಹೇಗೆ ಆದಾಯ ಸೃಷ್ಟಿಸುತ್ತದೆ? ಗೇಮ್​ನಲ್ಲಿ ಕ್ಯಾಷ್ ಅಥವಾ ರಿವಾರ್ಡ್ ಗೆಲ್ಲುವ ನಿರೀಕ್ಷೆ ಇದೆಯೇ? ಎಂಬಿತ್ಯಾದಿ ಅಂಶಗಳ ಆಧಾರದ ಮೇಲೆ ಆಟಗಳನ್ನು ಮನಿ ಗೇಮ್ ಅಥವಾ ಸ್ಕಿಲ್ ಗೇಮ್ ಎಂದು ವರ್ಗೀಕರಿಸಲಾಗುತ್ತದೆ.

ಇದನ್ನೂ ಓದಿ: ಜಾಗತಿಕ ಆಘಾತಗಳಿಗೆ ಭಾರತದ 3 ಆರ್ಥಿಕ ರಕ್ಷಾ ಕವಚಗಳು: ಫಿಚ್ ಬಿಎಂಐ ವಿಶ್ಲೇಷಣೆ

ನೋಂದಣಿ ಕಡ್ಡಾಯ

ಎಲ್ಲಾ ಗೇಮ್‌ಗಳಿಗೆ ನೋಂದಣಿ ಅಗತ್ಯವಿಲ್ಲದಿದ್ದರೂ, ‘ಇ-ಸ್ಪೋರ್ಟ್ಸ್’ ಶೀರ್ಷಿಕೆಗಳಿಗೆ (Esports titles) ನೋಂದಣಿ ಕಡ್ಡಾಯವಾಗಿದೆ. ಕಂಪನಿಯ ಮೂಲ, ಬಳಕೆದಾರರ ಸಂಖ್ಯೆ ಮತ್ತು ಹಣಕಾಸಿನ ವಹಿವಾಟಿನ ಆಧಾರದ ಮೇಲೆ ಕೆಲವು ಆಟಗಳಿಗೆ ಅನುಮತಿ ಪಡೆಯುವುದು ಅಗತ್ಯವಿರುತ್ತದೆ. ಒಮ್ಮೆ ಅನುಮತಿ ಸಿಕ್ಕರೆ ಅದು 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.

ಆಟಗಾರರ ಸುರಕ್ಷತೆಗೆ ಆದ್ಯತೆ

  • ಅಪ್ರಾಪ್ತ ವಯಸ್ಸಿನ ಮಕ್ಕಳಿಗಾಗಿ ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನೆ ಇರಲಿದೆ.
  • ಆಟಗಾರರು ಅತಿಯಾಗಿ ಆಟಕ್ಕೆ ಅಡಿಕ್ಟ್ ಆಗುವುದನ್ನು ತಪ್ಪಿಸಲು ಸಮಯದ ಮಿತಿಯನ್ನು ನಿಗದಿಪಡಿಸಲಾಗಿದೆ.
  • ಪೋಷಕರು ತಮ್ಮ ಮಕ್ಕಳ ಗೇಮಿಂಗ್ ಚಟುವಟಿಕೆಯನ್ನು ನಿಯಂತ್ರಿಸಲು ವಿಶೇಷ ಆಯ್ಕೆಗಳನ್ನು ನೀಡಲಾಗುವುದು.

ಬ್ಯಾಂಕಿಂಗ್ ಮತ್ತು ಪಾವತಿ ನಿಯಮಗಳು

ಯಾವುದೇ ಗೇಮಿಂಗ್ ಪ್ಲಾಟ್‌ಫಾರ್ಮ್ ಸರ್ಕಾರದಿಂದ ಅನುಮೋದನೆ ಪಡೆದಿದೆಯೇ ಎಂದು ಬ್ಯಾಂಕುಗಳು ಪರಿಶೀಲಿಸಬೇಕು. ಅನಧಿಕೃತ ಅಥವಾ ನಿಷೇಧಿತ ಆಟಗಳಿಗೆ ಹಣ ಸಂದಾಯ ಮಾಡುವುದನ್ನು ಬ್ಯಾಂಕುಗಳು ನಿರ್ಬಂಧಿಸಲಿವೆ.

ಇದನ್ನೂ ಓದಿ: ಈ ವರ್ಷದ ಪ್ರಮುಖ ಸೆಕ್ಟರ್ ಇದು; ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್​ಗಳಿವು

ದೂರು ಸಲ್ಲಿಸಲು ಅವಕಾಶ

ಆಟಗಾರರಿಗೆ ಯಾವುದೇ ತೊಂದರೆಯಾದಲ್ಲಿ ಮೊದಲು ಗೇಮಿಂಗ್ ಕಂಪನಿಗೆ ದೂರು ನೀಡಬೇಕು. ಅಲ್ಲಿ ಪರಿಹಾರ ಸಿಗದಿದ್ದರೆ 30 ದಿನಗಳ ಒಳಗಾಗಿ ಸರ್ಕಾರಿ ಪ್ರಾಧಿಕಾರಕ್ಕೆ ದೂರು ನೀಡಬಹುದು.

ಒಟ್ಟಾರೆಯಾಗಿ, ಈ ನಿಯಮಗಳು ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು ವ್ಯವಸ್ಥಿತಗೊಳಿಸಲು ಮತ್ತು ಆಟಗಾರರ ಹಿತರಕ್ಷಣೆಯನ್ನು ಕಾಯುವ ಉದ್ದೇಶ ಹೊಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ 3.30 ರೂಪಾಯಿಗೆ ಒಂದು ಮೊಟ್ಟೆ ಲಭ್ಯ; ಕಂಗಾಲಾದ ಕೋಳಿ ಸಾಕಾಣಿಕೆದಾರರು! – Kannada News | Karnataka Egg Price Crash: Farmers Face Crisis Amidst Gulf Conflict and Holiday Season

ಚಿಕ್ಕಬಳ್ಳಾಪುರ, ಏ.23: ಗಲ್ಫ್ ರಾಷ್ಟ್ರಗಳೊಂದಿಗಿನ ಯುದ್ಧ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿರುವ ಕಾರಣದಿಂದಾಗಿ ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಚಿಕ್ಕಬಳ್ಳಾಪುರದಲ್ಲಿ ಮೊಟ್ಟೆಗಳ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ವಿದೇಶಗಳಿಗೆ ಮೊಟ್ಟೆಗಳನ್ನು ರಫ್ತು ಮಾಡಲು ಸಾಧ್ಯವಾಗದೆ ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ನಿಂತುಹೋಗಿರುವುದರಿಂದ ಮಾರುಕಟ್ಟೆಯಲ್ಲಿ ಮೊಟ್ಟೆಗಳಿಗೆ ಬೇಡಿಕೆ ಕುಸಿದಿದೆ. ಪರಿಣಾಮವಾಗಿ, ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಂತಹ ಪ್ರದೇಶಗಳಲ್ಲಿ ಕೋಳಿ ಸಾಕಾಣಿಕೆದಾರರು ರಸ್ತೆ ಬದಿಯಲ್ಲಿ ಮೊಟ್ಟೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಮೊಟ್ಟೆಗಳು ಕೇವಲ ಮೂರು ರೂಪಾಯಿ 30 ಪೈಸೆಗೆ ಲಭ್ಯವಿದೆ. ಹಿಂದೆ ಒಂದು ಮೊಟ್ಟೆಗೆ ಐದರಿಂದ ಆರು ರೂಪಾಯಿ ಇತ್ತು. ಮೊಟ್ಟೆಗೆ ಬೆಲೆ ಇಲ್ಲದೆ ಕೋಳಿ ಸಾಕಾಣಿಕೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಮೊಟ್ಟೆ ಉತ್ಪಾದಕರಿಗೆ ದೊಡ್ಡ ಹೊಡೆತ ನೀಡಿದ್ದು, ಹಲವರು ನಷ್ಟ ಅನುಭವಿಸುತ್ತಿದ್ದಾರೆ. ಇದೇ ವೇಳೆ, ಮೊಟ್ಟೆ ಪ್ರಿಯರಿಗೆ ಇದು ಸಿಕ್ಕಿದ್ದೇ ಚಾನ್ಸ್ ಎಂಬಂತಾಗಿದೆ. ಕಡಿಮೆ ಬೆಲೆಗೆ ಮೊಟ್ಟೆಗಳು ಸಿಗುತ್ತಿರುವುದರಿಂದ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಒಂದು ದಿನದಲ್ಲಿ ತಿನ್ನುವ ಮೊಟ್ಟೆಗಳಿಗಿಂತ ಹೆಚ್ಚಾಗಿ ಖರೀದಿಸಿ ಸೇವಿಸುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಈ ಅನಿರೀಕ್ಷಿತ ಬೆಳವಣಿಗೆಯಿಂದ ಮೊಟ್ಟೆ ಮಾರುಕಟ್ಟೆಯಲ್ಲಿ ವಿಭಿನ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಣಾ ದಗ್ಗುಬಾಟಿ, ಕರಣ್ ಜೋಹರ್ ಸಿನಿಮಾನಲ್ಲಿ ನಟಿಸಲ್ಲ ಅಕ್ಷಯ್ ಕುಮಾರ್ – Kannada News | Akshay Kumar not acting with Rana Daggubati in Karan Johar’s movie

ಅಕ್ಷಯ್ ಕುಮಾರ್ (Akshay Kumar), ಬಾಲಿವುಡ್​ನ ಅತ್ಯಂತ ಬ್ಯುಸಿ ಸ್ಟಾರ್ ನಟ. ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿಬಿಡುತ್ತಾರೆ. ಅಕ್ಷಯ್ ಕುಮಾರ್ ಅವರು, ಸಿನಿಮಾ ಆಫರ್​​ಗಳನ್ನು ರಿಜೆಕ್ಟ್ ಮಾಡುವುದೇ ಇಲ್ಲ ಎಂಬ ಮಾತಿದೆ. ಆದರೆ ಇದೀಗ ಅಕ್ಷಯ್ ಕುಮಾರ್ ಅವರು ಸಿನಿಮಾ ಒಂದನ್ನು ರಿಜೆಕ್ಟ್ ಮಾಡಿದ್ದಾರೆ. ಅದೂ ಸಾಮಾನ್ಯ ನಿರ್ಮಾಣ ಸಂಸ್ಥೆಯನ್ನಲ್ಲ. ಬದಲಿಗೆ ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯ ಆಫರ್ ಅನ್ನೇ ರಿಜೆಕ್ಟ್ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ.

ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ಅಡಿಯಲ್ಲಿ, ಉಜ್ಜಯಿನಿ ನಗರದ ಹಿನ್ನೆಲೆಯ ಐತಿಹಾಸಿಕ ಥ್ರಿಲ್ಲರ್ ಚಿತ್ರವೊಂದರಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗಿತ್ತು. ಇದೇ ಸಿನಿಮಾನಲ್ಲಿ ‘ಬಾಹುಬಲಿ’ ಸಿನಿಮಾದ ವಿಲನ್ ರಾಣಾ ದಗ್ಗುಬಾಟಿ ಸಹ ನಟಿಸಲಿದ್ದು, ‘ಬಾಹುಬಲಿ’ ಮಾದರಿಯ ಸಿನಿಮಾ ಇದಾಗಿರಲಿದೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಆದರೆ ಇದೀಗ ಅಕ್ಷಯ್ ಕುಮಾರ್ ಅವರು ಆ ಸಿನಿಮಾನಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ.

ಅಕ್ಷಯ್ ಕುಮಾರ್ ಮತ್ತು ರಾಣಾ ದಗ್ಗುಬಾಟಿ ಕರಣ್ ಜೋಹರ್ ಅವರ ಚಿತ್ರಕ್ಕಾಗಿ ಒಂದಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಅಕ್ಷಯ್ ಕುಮಾರ್ ಅವರ ತಂಡವು ಇದನ್ನು ಅಧಿಕೃತವಾಗಿ ನಿರಾಕರಿಸಿದ್ದು, ಇದು ಕೇವಲ ವದಂತಿ ಎಂದು ತಿಳಿಸಿದೆ. ಅಕ್ಷಯ್ ಕುಮಾರ್ ಸದ್ಯ ತಮ್ಮ ಇತ್ತೀಚಿನ ಚಿತ್ರ ‘ಭೂತ್ ಬಂಗ್ಲಾ’ ಯಶಸ್ಸಿನಲ್ಲಿದ್ದಾರೆ. ಪ್ರಿಯದರ್ಶನ್ ನಿರ್ದೇಶನದ ಈ ಹಾರರ್ ಕಾಮಿಡಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಕ್ಷಯ್ ಕುಮಾರ್ ಅವರು ಮುಂದೆ ‘ವೆಲ್ಕಮ್ ಟು ದಿ ಜಂಗಲ್’, ‘ಹೈವಾನ್’, ಅನೀಸ್ ಬಾಜ್ಮಿ ಅವರ ಚಿತ್ರ ಮತ್ತು ‘ಗೋಲ್‌ಮಾಲ್ 5’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

ಆದರೆ ಈಗ ಉಜ್ಜಯಿನಿ ಆಧರಿತ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದು ಅಕ್ಷಯ್ ಹೇಳಲು ಕಾರಣ ಏನೆಂದು ತಿಳಿದು ಬಂದಿಲ್ಲ. ಅಕ್ಷಯ್ ಕುಮಾರ್ ಅವರು ಸಾಮಾನ್ಯವಾಗಿ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಲು ಹೆಚ್ಚು ಆಸಕ್ತಿ ತೋರುತ್ತಾರೆ ಆದರೆ ಈ ಸಿನಿಮಾಕ್ಕೆ ಒಲ್ಲೆ ಎಂದಿದ್ದಾರೆ. ಕರಣ್ ಜೋಹರ್ ಜೊತೆಗೆ ಮನಸ್ತಾಪದ ಕಾರಣಕ್ಕೆ ಅಕ್ಷಯ್ ನಟಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ರಾಣಾ ದಗ್ಗುಬಾಟಿ ಸಹ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ನಟನೆಗಿಂತಲೂ ಸಿನಿಮಾ ನಿರ್ಮಾಣ, ವಿತರಣೆಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ‘ಕಾಂತಾ’ ಹೆಸರಿನ ಸಿನಿಮಾ ನಿರ್ಮಿಸಿದ್ದರು. ಇದೀಗ ಇನ್ನೂ ಕೆಲವು ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದಾರೆ. ಕೆಲ ಸಿನಿಮಾಗಳಲ್ಲಿ ನಟನೆ ಸಹ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Copper Ring Benefits: ತಾಮ್ರದ ಉಂಗುರವನ್ನು ಈ ರಾಶಿಯವರು ಧರಿಸಿದ್ರೆ ಅದೃಷ್ಟವೇ ಬದಲಾಗಲಿದೆ – Kannada News | Copper Ring Benefits: Astrology, Health and Sun’s Grace for Prosperity

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಶಾಂತಿ ಮತ್ತು ದೈಹಿಕ ಆರೋಗ್ಯಕ್ಕೆ ಲೋಹಗಳಿಗೆ ವಿಶೇಷ ಸ್ಥಾನವಿದೆ. ಹಿಂದೂ ಸಂಪ್ರದಾಯದಲ್ಲಿ ಚಿನ್ನ ಮತ್ತು ಬೆಳ್ಳಿಯಷ್ಟೇ ತಾಮ್ರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪೂಜೆ, ಯಜ್ಞ ಮತ್ತು ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸಲು ತಾಮ್ರದ ಪಾತ್ರೆಗಳನ್ನೇ ಬಳಸುವುದು ವಾಡಿಕೆ. ತಾಮ್ರವು ಎಂದಿಗೂ ಅಶುದ್ಧವಾಗದ ಲೋಹವೆಂದು ನಂಬಲಾಗಿದ್ದು, ಇದನ್ನು ಧರಿಸುವುದರಿಂದ ದೇಹ ಮತ್ತು ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳಬಹುದು ಎಂಬ ನಂಬಿಕೆಯಿದೆ.

ಸೂರ್ಯನ ಪ್ರಭಾವ ಮತ್ತು ಅದೃಷ್ಟದ ಬದಲಾವಣೆ:

ತಾಮ್ರವನ್ನು ನವಗ್ರಹಗಳ ರಾಜನಾದ ಸೂರ್ಯನಿಗೆ ಸಂಬಂಧಿಸಿದ ಲೋಹವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನದ ಕಷ್ಟದ ದಿನಗಳು ಕಳೆದು ಶುಭ ದಿನಗಳು ಬರಲೆಂದು ಆಶಿಸುತ್ತಾರೆ. ಇದಕ್ಕಾಗಿ ರತ್ನಗಳು ಮತ್ತು ಲೋಹಗಳನ್ನು ಧರಿಸುವ ಸಾಂಪ್ರದಾಯಿಕ ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಸರಿಯಾದ ಕ್ರಮದಲ್ಲಿ ತಾಮ್ರದ ಉಂಗುರವನ್ನು ಧರಿಸುವುದರಿಂದ ಜಾತಕದಲ್ಲಿ ಸೂರ್ಯನ ಸ್ಥಾನ ಬಲಗೊಳ್ಳುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಪ್ರಾರಂಭವಾಗುತ್ತವೆ.

ವಿಶೇಷ ಫಲ ಪಡೆಯುವ ರಾಶಿಗಳು:

ಜ್ಯೋತಿಷ್ಯದ ಪ್ರಕಾರ, ಈ ಉಂಗುರವು ಕೆಲವು ರಾಶಿಚಕ್ರದವರಿಗೆ ವರದಾನವಾಗಿ ಪರಿಣಮಿಸುತ್ತದೆ. ಮಂಗಳನ ಆಳ್ವಿಕೆಯ ಮೇಷ ರಾಶಿಯವರು ಇದನ್ನು ಧರಿಸುವುದರಿಂದ ಆತ್ಮವಿಶ್ವಾಸ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಸೂರ್ಯನ ಅಧಿಪತ್ಯದ ಸಿಂಹ ರಾಶಿಯವರಿಗೆ ಇದು ವೃತ್ತಿಜೀವನದಲ್ಲಿ ಅಭಿವೃದ್ಧಿ ಹಾಗೂ ಕೀರ್ತಿಯನ್ನು ತಂದುಕೊಡುತ್ತದೆ. ಇನ್ನು ಗುರುವಿನ ಆಳ್ವಿಕೆಯ ಧನು ರಾಶಿಯವರು ಇದನ್ನು ಧರಿಸುವುದರಿಂದ ಅದೃಷ್ಟ ಸುಧಾರಿಸಿ, ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಧರಿಸುವ ಕ್ರಮ ಮತ್ತು ಸಮಯ:

ತಾಮ್ರದ ಉಂಗುರವನ್ನು ಧರಿಸಲು ಭಾನುವಾರ ಮತ್ತು ಮಂಗಳವಾರ ಅತ್ಯಂತ ಶುಭ ದಿನಗಳು. ಭಾನುವಾರ ಧರಿಸುವುದರಿಂದ ಸೂರ್ಯ ದೇವನ ಅನುಗ್ರಹ ಸಿಕ್ಕರೆ, ಮಂಗಳವಾರ ಧರಿಸುವುದರಿಂದ ಮಂಗಳ ದೋಷದ ಪ್ರಭಾವ ಕಡಿಮೆಯಾಗುತ್ತದೆ. ಇದನ್ನು ಸಾಮಾನ್ಯವಾಗಿ ಬಲಗೈಯ ಉಂಗುರದ ಬೆರಳಿಗೆ ಧರಿಸುವುದು ಉತ್ತಮ. ಧರಿಸುವ ಮೊದಲು ಉಂಗುರವನ್ನು ಪವಿತ್ರ ಜಲದಿಂದ ಶುದ್ಧೀಕರಿಸುವುದು ಶಾಸ್ತ್ರೋಕ್ತ ವಿಧಾನವಾಗಿದೆ.

ಆರೋಗ್ಯ ಮತ್ತು ಮಾನಸಿಕ ಲಾಭಗಳು:

ಇದು ಕೇವಲ ಜ್ಯೋತಿಷ್ಯಕ್ಕೆ ಮಾತ್ರ ಸೀಮಿತವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿದೆ. ತಾಮ್ರದ ಸಂಪರ್ಕವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ ಎಂದು ನಂಬಲಾಗಿದೆ. ಮನಸ್ಸಿನಲ್ಲಿ ಅತಿಯಾದ ಆತಂಕ ಅಥವಾ ಕೋಪ ಇರುವವರು ತಾಮ್ರದ ಉಂಗುರ ಧರಿಸುವುದರಿಂದ ಮಾನಸಿಕ ಶಾಂತಿಯನ್ನು ಕಂಡುಕೊಳ್ಳಬಹುದು ಮತ್ತು ಪರಿಸ್ಥಿತಿಗಳನ್ನು ಎದುರಿಸುವ ಧೈರ್ಯ ಪಡೆಯಬಹುದು ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:27 am, Thu, 23 April 26

Source link

Exit mobile version