ದೇಶದ್ರೋಹಿ ಸ್ನೇಹಿತ; ಕೇಂದ್ರ ಸಚಿವ ರವನೀತ್ ಬಿಟ್ಟುಗೆ ರಾಹುಲ್ ಗಾಂಧಿ ಲೇವಡಿ, ಸಂಸತ್ ಹೊರಗೆ ವಾಗ್ವಾದ – Kannada News | My Traitor Friend; Rahul Gandhi’s dig At BJP Minister Ravneet Bittu outside Parliament Sparks Row

ನವದೆಹಲಿ, ಫೆಬ್ರವರಿ 4: ಇಂದು ಬೆಳಿಗ್ಗೆ ಸಂಸತ್ ಭವನದ ಹೊರಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಇಂದಿನ ಕಲಾಪದ ಆರಂಭಕ್ಕೂ ಮುನ್ನ ಪಾರ್ಲಿಮೆಂಟ್ ಹೊರಗೆ ಮೆಟ್ಟಿಲಿನ ಬಳಿ ಕಾಂಗ್ರೆಸ್ ಸಂಸದರು ಕುಳಿತಿದ್ದರು. ಆಗ ಅಲ್ಲಿಗೆ ಬಂದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು (Ravneet Singh Bittu) ಅವರನ್ನು ನೋಡಿ ತಮಾಷೆ ಮಾಡಿದ್ದಾರೆ. “ನನ್ನ ದೇಶದ್ರೋಹಿ ಸ್ನೇಹಿತ ಬಂದರು ನೋಡಿ” ಎಂದು ಹೇಳುತ್ತಾ ರವನೀತ್ ಸಿಂಗ್​ಗೆ ಹಸ್ತಲಾಘವ ನೀಡಲು ಕೈಚಾಚಿದ್ದಾರೆ. ಆದರೆ, ತಮ್ಮನ್ನು ದೇಶದ್ರೋಹಿ ಎಂದು ಕರೆದಿದ್ದಕ್ಕೆ ಕೋಪಗೊಂಡ ರವನೀತ್ ಬಿಟ್ಟು ರಾಹುಲ್ ಗಾಂಧಿಯ ಹ್ಯಾಂಡ್​ ಶೇಕ್ ಮಾಡಿಲ್ಲ. ಅಷ್ಟೇ ಅಲ್ಲದೆ, “ನೀವು ನಮ್ಮ ದೇಶದ ಶತ್ರು” ಎಂದು ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ. ಈ “ದೇಶದ್ರೋಹಿ” ಹಾಗೂ “ದೇಶದ ಶತ್ರು” ಎಂಬ ಹೇಳಿಕೆಗಳು ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಅಂದಹಾಗೆ, ಈ ರವನೀತ್ ಸಿಂಗ್ ಬಿಟ್ಟು ಕಾಂಗ್ರೆಸ್ ನಾಯಕರಾಗಿದ್ದವರು. 3 ಬಾರಿ ಕಾಂಗ್ರೆಸ್ ಸಂಸದ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ರವನೀತ್ ಬಿಟ್ಟು 2024ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅದಾದ ನಂತರ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಚಿವರೂ ಆಗಿದ್ದರು.

ಇಂದು ಆಗಿದ್ದೇನು?:

ಇಂದು ಕಾಂಗ್ರೆಸ್ ಸಂಸದರು ಸಂಸತ್​​ನ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದಾಗ ಅಲ್ಲಿ ರವನೀತ್ ಬಿಟ್ಟು ನಡೆದುಕೊಂಡು ಹೋಗುತ್ತಿದ್ದರು. ಅವರನ್ನು ನೋಡಿದ ರಾಹುಲ್ ಗಾಂಧಿ “ಅದೋ ಅಲ್ಲಿ ನಮ್ಮ ಒಬ್ಬ ದೇಶದ್ರೋಹಿ ನಡೆದುಕೊಂಡು ಬರುತ್ತಿದ್ದಾರೆ. ಅವರ ಮುಖ ನೋಡಿ” ಎಂದು ತಮಾಷೆ ಮಾಡಿದರು. ಆಗ ಅಲ್ಲಿ ಕುಳಿತಿದ್ದ ಬೇರೆ ಸಂಸದರು ಜೋರಾಗಿ ನಗಲಾರಂಭಿಸಿದರು. ಇದರಿಂದ ರವನೀತ್ ಬಿಟ್ಟುಗೆ ಅವಮಾನವಾಯಿತು. ಅಷ್ಟಕ್ಕೇ ಸುಮ್ಮನಾಗದ ರಾಹುಲ್ ಗಾಂಧಿ ಎದ್ದುನಿಂತು “ಹೆಲೋ ಬ್ರದರ್, ನನ್ನ ದೇಶದ್ರೋಹಿ ಸ್ನೇಹಿತ. ಡೋಂಟ್ ವರಿ, ನೀವು ಕಾಂಗ್ರೆಸ್‌ಗೆ ವಾಪಾಸ್ ಬರುತ್ತೀರಿ” ಎಂದು ಹೇಳುತ್ತಾ ಶೇಕ್ ಹ್ಯಾಂಡ್​​ಗೆ ಕೈ ಚಾಚಿದರು.

ಇದನ್ನೂ ಓದಿ: ಲೋಕಸಭೆ ಅಧಿವೇಶನದಲ್ಲಿ ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದ 8 ಸಂಸದರ ಅಮಾನತು

ಆದರೆ, ಅಷ್ಟರಲ್ಲೇ ಅವಮಾನಗೊಂಡಿದ್ದ ರವನೀತ್ ಸಿಂಗ್ ಬಿಟ್ಟು ರಾಹುಲ್ ಗಾಂಧಿಗೆ ಹಸ್ತಲಾಘವ ನೀಡಲಿಲ್ಲ. “ದೇಶ್ ಕೆ ದುಷ್ಮನ್ (ನೀವು ಈ ದೇಶದ ಶತ್ರು)” ಎಂದು ಹೇಳಿದ ರವನೀತ್ ಬಿಟ್ಟು ಅಲ್ಲಿ ಕುಳಿತಿದ್ದ ಪ್ರತಿಭಟನಾ ನಿರತ ಸಂಸದರ ಕುರಿತಾಗಿ “ನೀವು ಯುದ್ಧ ಗೆದ್ದಂತೆ ಕುಳಿತಿದ್ದೀರ” ಎಂದು ಲೇವಡಿ ಮಾಡಿದರು. ಇದಾದ ನಂತರ ಇಬ್ಬರ ನಡುವೆ ವಾಗ್ವಾದ ನಡೆಯಿತು.

“ಪಕ್ಷಕ್ಕೆ ದ್ರೋಹ ಮಾಡುವವನಿಗೆ ಬೇರೆ ಯಾವುದೇ ಪದ ಸರಿಹೊಂದುವುದಿಲ್ಲ” ಎಂದು ಪ್ರತಿಪಾದಿಸುತ್ತಾ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿತು. “ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶವಿಲ್ಲದಿದ್ದಾಗ ನಾವು ಏನು ಮಾಡಬಹುದು? ರವನೀತ್ ಬಿಟ್ಟು ಅವರನ್ನು ಸಂಸದರನ್ನಾಗಿ ಮಾಡಿದವರು ಯಾರು? ದೇಶದ್ರೋಹಿ ಬಗ್ಗೆ ನಾವು ಇನ್ನೇನು ಹೇಳಲು ಸಾಧ್ಯ?” ಎಂದು ಕಾಂಗ್ರೆಸ್ ಸಂಸದ ಅಮರಿಂದರ್ ರಾಜಾ ವಾರಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ರಾಜಿ ಮಾಡಿಕೊಂಡು ರಾಷ್ಟ್ರವನ್ನೇ ಮಾರಿದ್ದಾರೆ; ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಆರೋಪ

ಸಿಖ್ ಶಾಸಕ ಮತ್ತು ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, ಸಿಖ್ ಸಚಿವರಾದ ಬಿಟ್ಟು ಅವರ ಬಗ್ಗೆ ರಾಹುಲ್ ಗಾಂಧಿ ನೀಡಿದ “ದೇಶದ್ರೋಹಿ” ಎಂಬ ಹೇಳಿಕೆಯನ್ನು ಖಂಡಿಸಿದ್ದಾರೆ. “ರಾಹುಲ್ ಗಾಂಧಿ ಮತ್ತು ಗಾಂಧಿ ಕುಟುಂಬ ದೇಶದ್ರೋಹಿಗಳು. ಸಿಖ್ಖರು ಮತ್ತು ಸರ್ದಾರ್‌ಗಳು ದೇಶದ್ರೋಹಿಗಳಾಗಲು ಸಾಧ್ಯವಿಲ್ಲ. ಈ ಹೇಳಿಕೆಯು ಕಾಂಗ್ರೆಸ್‌ನ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜ್ಯೋತಿಷಿ ಕಮಲಾಕರ್​​ ಭಟ್​​ ಕೇಸ್​​: ಬಿ.ಕೆ. ಹರಿಪ್ರಸಾದ್​- ಸುರೇಶ್​​ ಕುಮಾರ್​ ನಡುವೆ ವಾಕ್ಸಮರ; ಕಾರಣ ಇಲ್ಲಿದೆ – Kannada News | Astrologer Murder Case: BJP MLA Suresh Kumar Counters Congress MLC B.K. Hariprasad’s Allegations

ಹರಿಪ್ರಸಾದ್​ Vs ಸುರೇಶ್​​ ಕುಮಾರ್​Image Credit source: Google

ಬೆಂಗಳೂರು, ಫೆಬ್ರವರಿ 04: ವಿವಾಹಿತ ಮಹಿಳೆಯೋರ್ವರ ಜೊತೆಗೆ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ ಆರೋಪ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆಯೀಗ ಪರಿಷತ್​​ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್​​ ಮತ್ತು ಬಿಜೆಪಿ ಶಾಸಕ ಎಸ್​​.ಸುರೇಶ್​​ ಕುಮಾರ್​ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿರುವ ಹರಿಪ್ರಸಾದ್​​ ಬಿಜೆಪಿ ಮತ್ತು ತಮ್ಮ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ಸುರೇಶ್​​ ಕುಮಾರ್​​ ಗರಂ ಆಗಿದ್ದು, ಕಾಂಗ್ರೆಸ್​​ ನಾಯಕನ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಹರಿಪ್ರಸಾದ್​ ಆರೋಪವೇನು?

ಕಾರವಾರದ ಸಿದ್ದಾಪುರದಲ್ಲಿ ಕಮಲಾಕರ್ ಭಟ್ ಹೆಸರಿನ ಜ್ಯೋತಿಷಿಯ ಅಕ್ರಮ ಸಂಬಂಧಕ್ಕೆ 41 ವರ್ಷದ ಅಮಾಯಕ ವಸಂತ್ ನಾಯ್ಕ್ ಬಲಿಯಾಗಿದ್ದಾರೆ. ಈ ಕ್ರಿಮಿನಲ್ ಪ್ರಕರಣ ನ್ಯಾಯಯುತ ತನಿಖೆಯಾಗಿ, ನ್ಯಾಯಾಲಯ ತೀರ್ಪು ಕೊಡುತ್ತದೆ. ಆದರೆ, ಇಂತಹ ಪ್ರಕರಣದಲ್ಲಿ ಸಂಘಪರಿವಾರದ ಹಿನ್ನಲೆಯಿಂದ ಬಂದ ಬಿಜೆಪಿಯ ಸುರೇಶ್​​ ಕುಮಾರ್​ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಂತಹ ಜನಪ್ರತಿನಿಧಿಗಳ ಪಾತ್ರ ಏನು? ಎಂಬುದು ಸ್ವಸ್ಥ ಸಮಾಜ ದೃಷ್ಟಿಯಿಂದ ಮುಖ್ಯವಾಗುತ್ತದೆ. ಕಮಲಾಕರ ಭಟ್ ಎಂಬ ಜ್ಯೋತಿಷಿ ಭಾಗಿಯಾದ ಕೊಲೆ ಕೇಸ್​​ನಲ್ಲಿ ರಾಜಾಜಿನಗರ ಶಾಸಕ ಸುರೇಶ್​​ ಕುಮಾರ್​​ ಪಾತ್ರವಿಲ್ಲವೇ? ಕೊಲೆ ಆರೋಪಿ ಜೋತಿಷಿ ಗುರೂಜಿ ಕಮಲಾಕರ ಭಟ್ಟನನ್ನು ಓರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ ? ಒರ್ವ ಮಾಜಿ ಕಾನೂನು ಸಚಿವನಿಗೆ ಇಷ್ಟೂ ಅರಿವಿಲ್ಲದಿರುವುದು ಈ ರಾಜ್ಯದ ದುರಂತವಾಗಿದೆ.

ಕೊಲೆಗಡುಕ, ಮಹಿಳಾ ಪೀಡಕ ಕಮಲಾಕರ ಭಟ್ ತನ್ನಲ್ಲಿಗೆ ಜೋತಿಷ್ಯ ಕೇಳಲು ಬರುವ ಗ್ರಾಹಕರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ. ಅದರ ಭಾಗವಾಗಿಯೇ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿ ಅದು ಕೊಲೆಯವರೆಗೂ ಹೋಗಿದೆ. ಈ ರೀತಿ ಜನರ ಮೂಢನಂಬಿಕೆಯನ್ನೇ ಬಳಸಿಕೊಂಡು ಹಲವು ಅಕ್ರಮಗಳನ್ನು ಸಂಪಾದಿಸಿಕೊಂಡು ಇಂತಹ “ಜೀ-ಗುರೂಜಿ”ಗಳು ಸಮಾಜ ಸೇವೆಯ ಹೆಸರಿನಲ್ಲಿ ಸಮಾಜವನ್ನೇ ಯಾಮಾರಿಸುತ್ತಾರೆ. ಇಂತಹ ಮೂಢನಂಬಿಕೆಯ ಅಕ್ರಮ ದಂಧೆಗಳನ್ನು ಬಿಜೆಪಿಯ ಸ್ವಯಂ ಘೋಷಿತ ಸಜ್ಜನ ಶಾಸಕ ಬಿರುದಾಂಕಿತ ಬಿಜೆಪಿಯ ಸುರೇಶ್ ಕುಮಾರ್ ಬೆನ್ನುತ್ತಟ್ಟಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಹಾಗಾಗಿ ಈ ಕೊಲೆಯಲ್ಲಿ ಸುರೇಶ್ ಕುಮಾರ್ ಅಂತವರ ಪಾತ್ರ ಬಹಳ ಮುಖ್ಯವಾಗುತ್ತದೆ. ಹಾಗಾಗಿಯೇ ಶಾಸಕ ಸುರೇಶ್ ಕುಮಾರ್ ಕೂಡಾ ಈ ಕೊಲೆಯ ನೈತಿಕ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಹರಿಪ್ರಸಾದ್​​ ಹೇಳಿದ್ದಾರೆ.

ಇದನ್ನೂ ಓದಿ: ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ಕಮಲಾಕರ ಗುರೂಜಿ ಜೊತೆಗೆ ಸಂಬಂಧ; ಪುತ್ರಿಯಿಂದಲೇ ಮ್ಯಾಟರ್​​ ರಿವೀಲ್

ಸುರೇಶ್​​ ಕುಮಾರ್​​ ಕೌಂಟರ್​

ಸಿದ್ದಾಪುರದಲ್ಲಿ ನಡೆದ ಹೇಯ ಕೃತ್ಯವೊಂದನ್ನು ಮುಂದಿಟ್ಟುಕೊಂಡು, ಅದಕ್ಕೆ ರಾಜಕೀಯ ಬಣ್ಣ ಬಳಿದು ನನ್ನ ಹೆಸರನ್ನು ತಳುಕು ಹಾಕಲು ನೀವು ನಡೆಸಿರುವ ಪ್ರಯತ್ನ ನಿಮ್ಮ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುವಂತಿದೆ. ಒಬ್ಬ ವ್ಯಕ್ತಿ ಮಾಡಿದ ಅಪರಾಧಕ್ಕೆ, ಆತನ ಪರಿಚಯವಿದ್ದ ಜನಪ್ರತಿನಿಧಿಯೇ ನೈತಿಕ ಹೊಣೆ ಹೊರಬೇಕು ಎಂಬ ನಿಮ್ಮ ವಾದ ಬಾಲಿಶವಾದದ್ದು. ಸಾರ್ವಜನಿಕ ಜೀವನದಲ್ಲಿರುವ ನಾವು ಸಾವಿರಾರು ಜನರನ್ನು ಭೇಟಿಯಾಗುತ್ತೇವೆ. ಯಾರೋ ಒಬ್ಬರು ನನ್ನ ಜೊತೆ ಫೋಟೋ ತೆಗೆಸಿಕೊಂಡರು ಅಥವಾ ಪರಿಚಯಸ್ಥರಾಗಿದ್ದರು ಎಂಬ ಒಂದೇ ಕಾರಣಕ್ಕೆ, ಅವರ ಖಾಸಗಿ ಬದುಕಿನ ವಿಕೃತಿಗಳಿಗೆ ಅಥವಾ ಅವರು ಎಸಗುವ ಕ್ರಿಮಿನಲ್ ಕೃತ್ಯಗಳಿಗೆ ನಾನು ಉತ್ತರದಾಯಿಯಾಗುತ್ತೇನೆಯೇ? ಹಾಗಾದರೆ, ನಿಮ್ಮ ಪಕ್ಷದ ನಾಯಕರ ಜೊತೆ ಫೋಟೋ ತೆಗೆಸಿಕೊಂಡವರು, ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು ಜೈಲು ಪಾಲಾದ ಉದಾಹರಣೆಗಳಿಲ್ಲವೇ? ಆಗ ನಿಮ್ಮ ನಾಯಕರುಗಳೆಲ್ಲ ಆ ಅಪರಾಧಗಳ ನೈತಿಕ ಹೊಣೆ ಹೊತ್ತಿದ್ದಾರೆಯೇ? ಎಂದು ಸುರೇಶ್​​ ಕುಮಾರ್​​ ಪ್ರಶ್ನಿಸಿದ್ದಾರೆ.

ಬಹಳ ಹಿಂದೆ ಯಶವಂತಪುರದ ಪೆಟ್ರೋಲ್ ಬಂಕ್ ಬಳಿ ನನ್ನ ಗಾಡಿಗೆ ಇಂಧನ ತುಂಬಿಸುತ್ತಿರುವಾಗ ಈ ವ್ಯಕ್ತಿಯ ಪರಿಚಯವಾಗಿತ್ತು. ನಾನು ಒಮ್ಮೆ ಮಾತ್ರ ಅವರನ್ನು ಭೇಟಿ ಮಾಡಿರುವುದು. ಈಗೇನಾದರೂ ನನಗೆ ಎದುರಿಗೆ ಸಿಕ್ಕರೆ ಅವರನ್ನು ಗುರುತು ಹಿಡಿಯುವುದೂ ಅಸಾಧ್ಯ. ​ನೀವು ನನಗೆ ಸಂವಿಧಾನದ ಪಾಠ ಮಾಡಲು ಬಂದಿದ್ದೀರಿ. ಒಬ್ಬ ಮಾಜಿ ಕಾನೂನು ಸಚಿವನಾಗಿ ಸಂವಿಧಾನದ ಪ್ರತಿಯೊಂದು ಸಾಲಿನ ಮಹತ್ವ ನನಗೆ ಚೆನ್ನಾಗಿ ತಿಳಿದಿದೆ. ವೈಜ್ಞಾನಿಕ ಮನೋಭಾವ ಮತ್ತು ತಾರ್ಕಿಕತೆ ಎಂದರೆ, ಘಟನೆಗಳ ಸತ್ಯಾಸತ್ಯತೆಯನ್ನು ಅರಿಯದೇ ಕೇವಲ ರಾಜಕೀಯ ದ್ವೇಷಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುವುದಲ್ಲ. ತನಿಖೆ ನಡೆಯುತ್ತಿರುವ ಗಂಭೀರ ಪ್ರಕರಣವೊಂದರಲ್ಲಿ, ನೇರ ಸಾಕ್ಷ್ಯಗಳಿಲ್ಲದೇ ಒಬ್ಬ ಶಾಸಕನ ಪಾತ್ರವಿದೆ ಎಂದು ತೀರ್ಪು ನೀಡುವುದು ಯಾವ ರೀತಿಯ ವೈಜ್ಞಾನಿಕ ಮನೋಭಾವ? ಇದು ಪಕ್ಕಾ ಪೂರ್ವಾಗ್ರಹ ಪೀಡಿತ ಮನಸ್ಥಿತಿ. ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಇದು ಕೊಳೆತ ಮನಸ್ಥಿತಿ ಎಂದು ಸುರೇಶ್​ ಕುಮಾರ್​​ ತಿವಿದಿದ್ದಾರೆ.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ; ದೂರು ನೀಡಿದ್ದಕ್ಕೆ ಹಲ್ಲೆ, ಓರ್ವ ಸಾವು

ನಾನು ಜ್ಯೋತಿಷ್ಯವನ್ನ ತುಂಬಾ ನಂಬುವನೂ ಅಲ್ಲ ಅಥವಾ ಯಾವುದೇ ಮೂಢನಂಬಿಕೆಯನ್ನ ಬೆಂಬಲಿಸುವನೂ ಅಲ್ಲ. ಆದರೆ, ಧಾರ್ಮಿಕ ನಂಬಿಕೆಗಳಿಗೂ, ಕ್ರಿಮಿನಲ್ ಚಟುವಟಿಕೆಗಳಿಗೂ ಇರುವ ವ್ಯತ್ಯಾಸ ತಿಳಿಯದಷ್ಟು ದಡ್ಡನೂ ನಾನಲ್ಲ. ಕೊಲೆಗಾರ ಕೊಲೆಗಾರನೇ, ಅವನು ಜ್ಯೋತಿಷಿಯಾಗಿರಲಿ ಅಥವಾ ರಾಜಕಾರಣಿಯಾಗಿರಲಿ. ಆತನಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂಬುದೇ ನನ್ನ ನಿಲುವು. ಅದನ್ನು ಬಿಟ್ಟು, ಬಿಜೆಪಿಯವರಿಗೆ ಕ್ರಿಮಿನಲ್ ಗಳ ಜೊತೆ ಅವಿನಾಭಾವ ಸಂಬಂಧ ಎಂದು ಸಾರಾಸಗಟಾಗಿ ಇಡೀ ಪಕ್ಷವನ್ನು ನಿಂದಿಸುವುದು ನಿಮ್ಮ ಹತಾಶೆಯನ್ನು ತೋರಿಸುತ್ತದೆ. ಅಪರಾಧವನ್ನು ಅಪರಾಧವನ್ನಾಗಿ ನೋಡುವ ಸಂಸ್ಕಾರ ಬೆಳೆಸಿಕೊಳ್ಳಿ. ಶವದ ಮುಂದೆ ನಿಂತು ರಾಜಕೀಯ ಲಾಭ ಹುಡುಕುವ ನಿಮ್ಮ ಚಾಳಿ, ಸ್ವಸ್ಥ ಸಮಾಜಕ್ಕೆ ಮತ್ತು ನೀವು ಉಲ್ಲೇಖಿಸಿದ ಸಂವಿಧಾನಕ್ಕೆ ಮಾಡುವ ದ್ರೋಹ. ಆ ಭಗವಂತ ನಿಮಗೆ ಸದ್ಬುದ್ದಿ ನೀಡಲಿ ಎಂದವರು ಕೌಂಟರ್​​ ಕೊಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:36 pm, Wed, 4 February 26

Source link

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮುರುಡೇಶ್ವರಕ್ಕೆ ಪ್ರವಾಸ ಹೋಗುವವರಿಗೆ kstdcನಿಂದ ವಿಶೇಷ ಪ್ಯಾಕೇಜ್​​ – Kannada News | Explore Karnataka’s Sacred South: KSTDC’s Affordable 6 Day Temple Tour Package

ಬೆಂಗಳೂರು, ಫೆ.4: ಕರ್ನಾಟಕದ ದಕ್ಷಿಣ ಭಾಗಗಳಲಾಗದ ಮಂಗಳೂರು, ಉಡುಪಿ, ಇನ್ನು ಹಲವು ಜಿಲ್ಲೆಗಳು ಒಳ್ಳೆಯ ಪ್ರವಾಸಿ ತಾಣಗಳನ್ನು ಹೊಂದಿದೆ. ಇತ್ತೀಚಿನ ಕೇಂದ್ರ ಬಜೆಟ್​​​ನಲ್ಲೂ ಪ್ರವಾಸಿತಾಣಗಳಿಗೆ ಹೆಚ್ಚಿನ ಆದ್ಯತೆಗಳನ್ನು ನೀಡಲಾಗಿದೆ. ರಾಜ್ಯ ಸರ್ಕಾರ ಕೂಡ ಈ ಪ್ರವಾಸಿನ ತಾಣಗಳ ಅಭಿವೃದ್ಧಿ ಹಾಗೂ ಅಲ್ಲಿ ಹೆಚ್ಚಿನ ಪ್ರವಾಸಿಗಳು ಭೇಟಿ ನೀಡಬೇಕು ಎಂಬ ಕಾರಣಕ್ಕೆ ವಿಶೇಷ ಪ್ಯಾಕೇಜ್​​ಗಳನ್ನು ನೀಡಿದೆ. ಇದೀಗ kstdc ಕರ್ನಾಟಕದ ದಕ್ಷಿಣ ಭಾಗಗಳಲ್ಲಿರುವ ಪುಣ್ಯಕ್ಷೇತ್ರಕ್ಕೆ ಹೋಗಲು ವಿಶೇಷ ಪ್ಯಾಕೇಜ್​​​ ಒಂದನ್ನು ನೀಡಿದೆ. ಒಟ್ಟು 6 ದಿನಗಳ ಪ್ರವಾಸ ಇದ್ದಾಗಿದೆ. ಇದರಲ್ಲಿ ಎಲ್ಲ ರೀತಿ ಸೌಲಭ್ಯಗಳು ನೀಡಲಾಗಿದೆ. ಕಡಿಮೆ ಖರ್ಚಿನಲ್ಲಿ ಹೊಸ ವಿಚಾರಗಳನ್ನು ಹಾಗೂ ಹೊಸ ಹೊಸ ಸ್ಥಳಗಳನ್ನು ನೀಡಬಹುದು.

ಪ್ರವಾಸದ ಅವಧಿ: 6 ದಿನಗಳು / 5 ರಾತ್ರಿಗಳು.

ಪ್ರಮುಖ ಸ್ಥಳಗಳು: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು, ಉಡುಪಿ, ಕೊಲ್ಲೂರು, ಮುರುಡೇಶ್ವರ ಮತ್ತು ಗೋಕರ್ಣ.

ಪ್ರಯಾಣದ ಮಾರ್ಗ: ಬೆಂಗಳೂರು → ಧರ್ಮಸ್ಥಳ → ಮಂಗಳೂರು → ಉಡುಪಿ → ಮುರುಡೇಶ್ವರ → ಗೋಕರ್ಣ → ಬೆಂಗಳೂರು.

6 ದಿನಗಳ ಪ್ರವಾಸದ ವೇಳಾಪಟ್ಟಿ ಇಲ್ಲಿದೆ ನೋಡಿ:

ದಿನ 1: ರಾತ್ರಿ 09:00 ಗಂಟೆಗೆ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ನಿರ್ಗಮನ.

ದಿನ 2; 05:00 am – 08:00 am ಫ್ರೆಶಪ್ ಮತ್ತು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ

09:00 am – 09:45 am ಕಲಶೇಶ್ವರ ದರ್ಶನ ಮತ್ತು ಉಪಹಾರ

11:45 am – 01:30 pm ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಿ

01:30 pm – 05:30 pm ವರೆಗೆ ಪ್ರಯಾಣ

01:30 pm – 05:30 pm ಪ್ರಯಾಣ. ಮೂಕಾಂಬಿಕಾದೇವಿ ದರ್ಶನ ಮತ್ತು ಭೋಜನ ರಾತ್ರಿ

09:00 ಗಂಟೆಗೆ ಬೈಂದೂರಿನಲ್ಲಿ ವಾಸ್ತವ್ಯ

ದಿನ 3: ಬೆಳಿಗ್ಗೆ 06.00 ಕ್ಕೆ ಬೈಂದೂರಿನಿಂದ ಹೊರಡುವುದು

06.45 ರಿಂದ 07.30 ರವರೆಗೆ ಇಂದಗುಂಜಿ ಗಣೇಶ ದರ್ಶನ

08:00 – 08.30 ರವರೆಗೆ ಶಂಬುಲಿಂಗೇಶ್ವರ ದೇವಸ್ಥಾನ-ಗುಣವಂತೆ

09:00 – 09:45 ಕ್ಕೆ ಉಪಹಾರ

9.45 – 10:00 ರವರೆಗೆ ಬೆಳಗಿನ ಉಪಾಹಾರ

04:00 ಕ್ಕೆ ಗೋಕರ್ಣ, ಮಹಾಬಲೇಶ್ವರ ದೇವಸ್ಥಾನ ಮತ್ತು OM ಬೀಚ್

05:00 pm – 06:00 pm ಧಾರೇಶ್ವರ ದೇವಸ್ಥಾನ

06:30 pm ಹೊನ್ನಾವರ ಮತ್ತು ಅಲ್ಲಿಯೇ ವಾಸ್ತವ್ಯ

ದಿನ 4: 06:00 ಗಂಟೆಗೆ ಹೋಟೆಲ್‌ನಿಂದ ನಿರ್ಗಮನ

07:00 am – 09:30 am ಮುರುಡೇಶ್ವರ ದೇವಸ್ಥಾನ ಮತ್ತು ಉಪಹಾರ

10:30 am – 11:30 am ಆನೆಗುಡ್ಡೆ ವಿನಾಯಕ ದೇವಸ್ಥಾನದ ದರ್ಶನ

12:00 – 02:00 ಕ್ಕೆ ಉಡುಪಿ ಶ್ರೀಕೃಷ್ಣನ ದರ್ಶನ ಮತ್ತು ಮಧ್ಯಾಹ್ನ

03:00 ಕ್ಕೆ ಮಂಜುಳ ​​ದೇವಸ್ಥಾನ ಮತ್ತು ಮಧ್ಯಾಹ್ನ 03:00 ಕ್ಕೆ ಮಂಜುಳ ​​ದೇವಸ್ಥಾನ.

ಸಂಜೆ 07:30 ಕ್ಕೆ ಕಟೀಲು ದುರ್ಗಾಪರಮೇಶ್ವರಿ ದರ್ಶನಕ್ಕೆ ಆಗಮನ ಮತ್ತು ಅಲ್ಲಿಯೇ ವಾಸ್ತವ್ಯ

ಇದನ್ನೂ ಓದಿ; 720 ರೂ.ಗೆ ಒಂದೇ ದಿನದಲ್ಲಿ ಬೆಂಗಳೂರಿನ 6 ಸ್ಥಳಗಳನ್ನು ಸುತ್ತಾಡಬಹುದು

ದಿನ 5: 06:00 ಗಂಟೆಗೆ ಹೋಟೆಲ್‌ನಿಂದ ಹೊರಡುವುದು

07:30 am – 01:30 pm ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಮತ್ತು ಉಪಹಾರ

02:30 pm – 03:30 pm ಮಧ್ಯಾಹ್ನದ ಊಟದ ನಂತರ ಸೌತಡಕ ವಿನಾಯಕ ದೇವಸ್ಥಾನದ ದರ್ಶನ

05:00 pm 09:00 pm ಆದಿ ಸುಬ್ರಮಣ್ಯ, ಕುಕ್ಕೆ ಸುಬ್ರಮಣ್ಯ ಮತ್ತು
3 pm ಕುಕ್ಕೆಯಿಂದ ಹೊರಡುವುದು

ದಿನ 6: ಬೆಳಿಗ್ಗೆ 05:30 ಕ್ಕೆ ಬೆಂಗಳೂರಿಗೆ ಆಗಮನ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:37 pm, Wed, 4 February 26

Source link

ಯಶ್ ಚಿತ್ರಕ್ಕೆ ಕೌಂಟರ್ ಕೊಡೋಕೆ ಬಂತು ಮತ್ತೊಂದು ‘ರಾಮಾಯಣ’; ರಾಮನ ಪಾತ್ರದಲ್ಲಿ ಸ್ಟಾರ್ ಹೀರೋ – Kannada News | Mahesh Babu Confirms Rama Role in Rajamouli’s Varanasi: Intense Training for Epic Saga

ರಣಬೀರ್ ಕಪೂರ್ (Ranbir Kapoor) ನಟನೆಯ ‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಗೆ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ರಾಮಾಯಣದ ಮೇಲೆ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ. ಈಗ ಈ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆ ಆಗುತ್ತಿದೆ. ‘ರಾಮಾಯಣ’ ಆಧರಿಸಿ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ! ಮಹೇಶ್ ಬಾಬು ಇದಕ್ಕೆ ಹೀರೋ!

ರಾಜಮೌಳಿ ಅವರು ಮಹೇಶ್ ಬಾಬು ಜೊತೆ ‘ವಾರಣಾಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ.ಈ ಬಗ್ಗೆ ಮೊದಲೇ ಘೋಷಣೆ ಆಗಿದೆ. ಆದರೆ, ಚಿತ್ರದ ಕಥೆ ಯಾವ ರೀತಿ ಇರಲಿದೆ ಎಂಬ ಸುಳಿವನ್ನು ನಿರ್ದೇಶಕರು ನೀಡಿರಲಿಲ್ಲ. ಈಗ ಮಹೇಶ್ ಬಾಬು ಅವರು ಈ ಬಗ್ಗೆ ದೊಡ್ಡ ವಿಷಯ ರಿವೀಲ್ ಮಾಡಿದ್ದಾರೆ. ‘ನಾನು ರಾಮನ ಪಾತ್ರ ಮಾಡುತ್ತಿದ್ದೇನೆ’ ಎಂದು ಮಹೇಶ್ ಬಾಬು ಒಪ್ಪಿಕೊಂಡಿದ್ದಾರೆ.

‘ವಾರಣಾಸಿ’ ಚಿತ್ರಕ್ಕಾಗಿ ಮಹೇಶ್ ಬಾಬು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ.ಕೇವಲ ಎರಡೇ ಎರಡು ಶಾಟ್​​ಗೋಸ್ಕರ್ ಮಹೇಶ್ ಬಾಬು ಬರೋಬ್ಬರಿ ಆರು ತಿಂಗಳು ಟ್ರೇನಿಂಗ್ ಪಡೆದಿದ್ದರಂತೆ. ‘ನಾನು ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಅದಕ್ಕಾಗಿ ಕೆಲವು ಭಂಗಿಗಳನ್ನು ಕಲಿಯಬೇಕಿತ್ತು. ಆಧುನಿಕ ಪಾತ್ರಗಳಂತೆ ನಿಲ್ಲಲು ಆಗೋದಿಲ್ಲ. ಆ ತರಬೇತಿಯ ಭಾಗವಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡೆ’ ಎಂದು ಮಹೇಶ್ ಬಾಬು ಹೇಳಿದ್ದಾರೆ.

‘ಜರ್ಮನಿಯಲ್ಲಿ ನಾನು ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದೆ. ಈ ವೇಳೆ ಗೊತ್ತಿಲ್ಲದೆ ಒಂದು ಭಂಗಿಯಲ್ಲಿ ನಿಲ್ಲುತ್ತಿದ್ದೆ. ಒಂದೆರಡು ವಿದೇಶಿಯರು ನನ್ನನ್ನು ನೋಡಿ, ಈ ವ್ಯಕ್ತಿಗೆ ಏನಾಗಿದೆ ಎಂದುಕೊಳ್ಳುತ್ತಿದ್ದರು. ಆದರೆ, ಈಸಿದ್ಧತೆ ಶೂಟಿಂಗ್​​​ನಲ್ಲಿ ತುಂಬಾನೇ ಸಹಕಾರಿ ಆಯಿತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವೇದಿಕೆ ಮೇಲೆ ರ‍್ಯಾಂಪ್ ವಾಕ್ ಮಾಡಿದ ಮಹೇಶ್ ಬಾಬು ಮಗಳು ಸಿತಾರಾ

ಮಹೇಶ್ ಬಾಬು ಅವರು ಕಳರಿಪಯಟ್ಟು ರೀತಿಯ ಕಲೆಯನ್ನು ಕಲಿತಿದ್ದಾರೆ. ಆರು ತಿಂಗಳಲ್ಲಿ ಅವರು ಕಲಿತ ವಿಷಯಗಳು ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವು. ‘ನಾನು ನಿಲ್ಲೋದು, ಕುಳಿತುಕೊಳ್ಳೋದು, ಎಲ್ಲವೂ ಬದಲಾಗಿದೆ’ ಎಂದು ಮಹೇಶ್ ಬಾಬು ಹೇಳಿದ್ದಾರೆ. ಈ ಸಿನಿಮಾ ಯಾವ ರೀತಿ ಇರುತ್ತದೆ ಎಂಬ ಕುತೂಹಲ ಮೂಡಿದೆ.

‘ಆರ್​ಆರ್​​ಆರ್​’ ಸಿನಿಮಾದಲ್ಲಿ ಬರೋ ರಾಮ್ ಚರಣ್ ಪಾತ್ರ ‘ರಾಮಾಯಣ’ದ ರಾಮನ ಪಾತ್ರದಿಂದ ಸ್ಫೂರ್ತಿ ಪಡೆದಿದೆ ಎಂದು ಅವರು ಈ ಮೊದಲು ಹೇಳಿದ್ದರು. ಪೃಥ್ವಿರಾಜ್ ಅವರು ಕುಂಭ ಹೆಸರಿನ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Lakkundi Gold Treasure: ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ? – Kannada News | Ancient Wealth of Lakkundi: Locals Believe Snakes Protect Gold in Jain Basadis

ಗದಗ, ಫೆಬ್ರುವರಿ 04: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಅಡಗಿರುವ ನಿಧಿ ಮತ್ತು ಅದನ್ನು ಸರ್ಪಗಳು ಕಾಯುತ್ತವೆ ಎಂಬ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಲಕ್ಕುಂಡಿ ಗ್ರಾಮದ ಹಿರಿಯರಾದ ವಿರುಪಾಕ್ಷಪ್ಪ ಯಾವಗಲ್ ಅವರು ಟಿವಿ9ಗೆ ನೀಡಿರುವ ಹೇಳಿಕೆಯ ಪ್ರಕಾರ, ಇಲ್ಲಿನ ಜೈನ ಬಸದಿಗಳ ಭಾಗದಲ್ಲಿ ಸಾಕಷ್ಟು ಸರ್ಪಗಳಿದ್ದು, ಅವು ನಿಧಿಗೆ ಕಾವಲು ಕಾಯುತ್ತವೆ. ಪ್ರಸ್ತುತ ನಾಗನಾಥ ದೇವಾಲಯ ಎಂದು ಗುರುತಿಸಲಾಗುವ ಸ್ಥಳ ಮೂಲತಃ ಜೈನ ಬಸದಿ ಎಂಬುದಕ್ಕೆ ಹಲವು ಕುರುಹುಗಳು ದೊರೆತಿವೆ.

ಈ ಭಾಗದಲ್ಲಿ ಹಿಂದೆ ಸುಮಾರು ಏಳು ಜೈನ ಬಸದಿಗಳ ಸಂಕೀರ್ಣ ಇತ್ತು. ಅದರಲ್ಲಿ ಮೂರು ಮಾತ್ರ ಉಳಿದಿದ್ದು, ನಾಲ್ಕು ಸಂಪೂರ್ಣ ಹಾಳಾಗಿವೆ. ಇಲ್ಲಿ ಜೈನ ತೀರ್ಥಂಕರರ ಸ್ಥಾಪನೆಗೆ ಬಳಸುತ್ತಿದ್ದ ಪೀಠದ ಕುರುಹೂ ಇದೆ. ಈ ಪ್ರದೇಶದಲ್ಲಿ ಸರ್ಪಗಳು ಇರುವುದು ಸಾಮಾನ್ಯವಾಗಿದ್ದು, ಅವು ನಿಧಿಯನ್ನು ಕಾಯುತ್ತವೆ ಎಂಬುದು ಲಕ್ಕುಂಡಿಯ ಗ್ರಾಮಸ್ಥರ ನಂಬಿಕೆ. ಈಗಾಗಲೇ ಚಿನ್ನದ ನಿಧಿ, ಹವಳ, ಮುತ್ತುರತ್ನಗಳು ಪತ್ತೆಯಾಗಿವೆ. ಟಂಕಸಾಲೆ ಇದ್ದುದರಿಂದ ಲಕ್ಕುಂಡಿಯ ಗಲ್ಲಿ ಗಲ್ಲಿಯಲ್ಲಿಯೂ ಚಿನ್ನ ಸಿಗಬಹುದು ಎಂಬ ಇತಿಹಾಸ ತಜ್ಞರ ಮಾತು ಈ ನಂಬಿಕೆಗೆ ಪುಷ್ಠಿ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Viral Video: ಆಹಾರ ಡೆಲಿವರಿ ಏಜೆಂಟ್​​ಗೆ ಸ್ಮಶಾನದಿಂದ ಬಂತೊಂದು ಕರೆ – Kannada News | Food Delivery Takes Unexpected Turn at Graveyard, Video Sparks Online Buzz

ನವದೆಹಲಿ, ಫೆಬ್ರವರಿ 04: ಸಾಮಾನ್ಯವಾಗಿ ರಾತ್ರಿ ಹೊತ್ತು ಸ್ಮಶಾನದ ಅಕ್ಕಪಕ್ಕದ ಜಾಗದಲ್ಲಿ ಹಾದುಹೋಗುವಾಗಲೇ ಜೀವ ಬಾಯಿಗೆ ಬಂದಂಥಾ ಅನುಭವವಾಗುತ್ತೆ. ಇನ್ನು ಸ್ಮಶಾನದಿಂದಲೇ ಕಾಲ್ ಬಂದರೆ ಭಯವಾಗದೇ ಇದ್ದೀತೆ. ಆಹಾರ ವಿತರಣಾ ಏಜೆಂಟ್​​ಗೆ ತಡರಾತ್ರಿ ಸ್ಮಶಾನದಿಂದ ಕರೆ ಬಂದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸಣ್ಣ ವಿಡಿಯೋದಲ್ಲಿ ಡೆಲಿವರಿ ಏಜೆಂಟ್​ ಗ್ರಾಹಕನಿಗೆ ಕರೆ ಮಾಡಿ ಆ ಜಾಗವನ್ನು ತಲುಪಿದ್ದರು. ಫೋನ್‌ನಲ್ಲಿರುವ ಮಹಿಳೆ ಶಾಂತವಾಗಿ ಅವರಿಗೆ ಮುಂದೆ ನಡೆಯಲು ಹೇಳುತ್ತಾಳೆ. ನಾಯಿಯನ್ನು ತೋರಿಸುತ್ತಾಳೆ ಮತ್ತು ಚಿಂತಿಸಬೇಡಿ ಎಂದೂ ಹೇಳುತ್ತಾಳೆ. ಆದರೆ ಏಜೆಂಟ್ ಮುಂದೆ ಹೆಜ್ಜೆ ಹಾಕಿದ ತಕ್ಷಣ ಮತ್ತು ಮಾರ್ಗವು ಸ್ಮಶಾನದತ್ತ ಸಾಗುತ್ತದೆ.

ಮತ್ತಷ್ಟು ಓದಿ: Video: ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಬಹುದು

ಕೂಡಲೇ ಡೆಲಿವರಿ ಏಜೆಂಟ್ ಅಲ್ಲೇ ನಿಲ್ಲುತ್ತಾರೆ. ಪರಿಸ್ಥಿತಿಯನ್ನು ಅರಿತ ಅವನು ಒಳಗೆ ಹೋಗಲು ನಿರಾಕರಿಸುತ್ತಾರೆ, ಅಲ್ಲಿ ಸಂಪೂರ್ಣವಾಗಿ ಕತ್ತಲೆಯಿರುತ್ತದೆ. ನಾನು ಒಳಗೆ ಹೋಗುವುದಿಲ್ಲ, ಎಂದು ಆತ ಹೇಳುತ್ತಾರೆ. ಮಹಿಳೆ ಗೇಟ್ ಮೂಲಕ ಹೋಗಿ ಪಾರ್ಸೆಲ್ ಕೊಡುವಂತೆ ಒತ್ತಾಯಿಸುತ್ತಾಳೆ.

ಮಹಿಳೆ ತಾನು ಮತ್ತು ತನ್ನ ಸ್ನೇಹಿತರು ಸ್ಮಶಾನದ ಒಳಗೆ ಪಾರ್ಟಿ ಮಾಡುತ್ತಿದ್ದೇವೆ, ಅಲ್ಲೇ ಆಹಾರವನ್ನು ತಂದುಕೊಡುವಂತೆ ಕೇಳಿಕೊಳ್ಳುತ್ತಾಳೆ.ಏಜೆಂಟ್ ಮತ್ತಷ್ಟು ಹಿಂಜರಿದಾಗ, ನೀವು ದೆವ್ವಗಳಿಗೆ ಹೆದರಿದಂತೆ ಕಾಣುತ್ತದೆ ಎಂದು ವ್ಯಂಗ್ಯವಾಡುತ್ತಾಳೆ. ಅದಕ್ಕೆ ಡೆಲಿವರಿ ಏಜೆಂಟ್ ನನಗೆ ಭಯ ಇರುವುದು ಮೂಢನಂಬಿಕೆ, ದೆವ್ವಗಳಿಗೆ ಅಲ್ಲ, ರಾತ್ರ ಹೊತ್ತು ಯಾರಾದರೂ ಏನಾದರೂ ಮಾಡಿದರೆ ಎನ್ನುವ ಭಯವಿದೆ ಎಂದು ಹೇಳುತ್ತಾರೆ.

ಅನೇಕ ನೆಟ್ಟಿಗರು ಡೆಲಿವರಿ ಏಜೆಂಟ್ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವಿತರಣಾ ಏಜೆಂಟ್‌ಗಳು ಮನುಷ್ಯರು, ರೋಬೋಟ್‌ಗಳಲ್ಲ ಎಂಬುದನ್ನು ಮರೆತುಬಿಡುತ್ತಾರೆ ಜನರು ಅನೇಕ ಸಂದರ್ಭಗಳಲ್ಲಿ ಮರೆಯುತ್ತಾರೆ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗರ್- ಶಿವಲಿಂಗೇಗೌಡ – Kannada News | Talks War Between BJP MLA Sharanu Salagar And Congress MLA shivalingegowda In Session

ಬೆಂಗಳೂರು, (ಫೆಬ್ರವರಿ 04): ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಲಂಚ ಆರೋಪ ಪ್ರಕರಣ ಸಂಬಂಧ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ (BJP And JDS) ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಸಚಿವ ತಿಮ್ಮಾಪುರ ರಾಜೀನಾಮೆ ನೀಡಬೇಕೆಂದು ಧರಣಿ ನಡೆಸಿವೆ. ನಿನ್ನೆ(ಫೆಬ್ರವರಿ 03) ಅಹೋರಾತ್ರಿ ಧರಣಿ ನಡೆಸಿ ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದಿದ್ದು, ಇಂದು (ಫೆ.04)  ಸಹ ಪ್ರತಿಭಟನೆ ಮುಂದುವರೆಸಿವೆ. ಈ ವೇಳೆ ಬಸವಕಲ್ಯಾಣ  ಬಿಜೆಪಿ  ಶಾಸಕ ಶರಣು ಸಲಗರ್ ಹಾಗೂ ಅರಸೀಕರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವೈಯಕ್ತಿಕವಾಗಿ ಬೈದಾಡಿಕೊಂಡಿಕೊಂಡಿರುವ ಪ್ರಸಂಗ ನಡೆದಿದೆ.

ದೇವೇಗೌಡ್ರಿಗೆ ದೋಖಾ ಮಾಡಿದ ಶಿವಲಿಂಗೇಗೌಡಗೆ ಧಿಕ್ಕಾರ ಎಂದು ಎಂದು ಶರಣು ಸಲಗರ್ ಘೋಷಣೆ ಕೂಗಿದರು. ಇದರಿಂದ ಕೆರಳಿದ ಶಿವಲಿಂಗೇಗೌಡ, ಚಿಂಚೋಳಿಯಲ್ಲಿ ನಿನ್ನ ಹೆಂಡತಿಯನ್ನು ತಹಶೀಲ್ದಾರ್ ಬಿಟ್ಟುಕೊಂಡು ಎಷ್ಟು ದುಡ್ಡು ಹೊಡೆದಿದ್ದೀಯಾ ಎಂದು ಗೊತ್ತಿದೆ. ನಿಮಗೆ ಮಾನ, ಮರ್ಯಾದೆ ಇದೆಯಾ ಎಂದು ಆಕ್ರೋಶ ಕಿಡಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ತಡೆ; ಕೇಂದ್ರದ ಅರಣ್ಯ ಸಚಿವರ ಜತೆ ಹೆಚ್​ಡಿಕೆ ಮಾತುಕತೆ – Kannada News | Elephant Attacks in Karnataka: HDK Urges Central Govt for Urgent Human Wildlife Conflict Solutions

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

ನವದೆಹಲಿ, ಫೆಬ್ರುವರಿ 04: ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತವಾಗಿ ತಡೆಯೊಡ್ಡಿ ಜನರ ಜೇವ ರಕ್ಷಣೆ ಮಾಡುವ ಬಗ್ಗೆ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H D Kumaraswamy) ಅವರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಭೂಪೇಂದ್ರ ಯಾದವ್‌ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು. ಸಂಸತ್‌ ಭವನದಲ್ಲಿರುವ ಅರಣ್ಯ ಸಚಿವರ ಕಚೇರಿಯಲ್ಲಿ ನಡೆದ ಈ ಭೇಟಿಯ ವೇಳೆ ಕುಮಾರಸ್ವಾಮಿ ಮುಖ್ಯವಾಗಿ ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಆನೆಗಳ ದಾಳಿ ಬಗ್ಗೆ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಹೆಚ್​ಡಿಕೆ, ವನ್ಯಜೀವಿ ಉಪಟಳ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಅನೇಕರು, ಅದರಲ್ಲಿಯೂ ಅರಣ್ಯದ ಅಂಚಿನಲ್ಲಿ ಬೇಸಾಯ ಮಾಡುವ, ದನಕರುಗಳನ್ನು ಮೇಯಿಸುವ ರೈತರು ಬಲಿಯಾಗಿದ್ದಾರೆ. ಇನ್ನೂ ಅನೇಕರು ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಕರ್ನಾಟಕದಲ್ಲಿ ಈ ಸಮಸ್ಯೆ ಬಿಗಡಾಯಿಸಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಭೂಪೇಂದ್ರ ಯಾದವ್‌ ಅವರನ್ನು ವಿನಂತಿಸಿದರು.

ಕುಮಾರಸ್ವಾಮಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಈ ಬಗ್ಗೆ ತುರ್ತು ಗಮನ ಹರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಅದಕ್ಕೆ ಪೂರಕವಾದ ಎಲ್ಲಾ ಮಾಹಿತಿಯನ್ನು ಸಚಿವ ಕುಮಾರಸ್ವಾಮಿ ಅವರಿಂದ ಪಡೆದುಕೊಂಡರು. ಅಲ್ಲದೆ, ಈ ನಿಟಿನಲ್ಲಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಅಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವ ಕುರಿತು ನಿರ್ದೇಶನ ನೀಡಿದರು.

ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್‌ ಅಧಿವೇಶನ ಮುಗಿಯುವದರೊಳಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸಚಿವ ಭೂಪೇಂದ್ರ ಯಾದವ್‌ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಅತ್ಯಂತ ತ್ವರಿತವಾಗಿ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಅಂತರ್ ಸಚಿವಾಲಯ ವಿಷಯಗಳ ಕುರಿತು ಸಮಾಲೋಚನೆ

ಈ ಭೇಟಿಯ ಸಂದರ್ಭದಲ್ಲಿ ಸಚಿವದ್ವಯರು ತಮ್ಮ ನಿರ್ವಹಣೆಯ ಇಲಾಖೆಗಳಿಗೆ ಸಂಬಂಧಿಸಿದ ಸುದೀರ್ಘ ಚರ್ಚೆ ನಡೆಸಿದರು. ಎರಡೂ ಇಲಾಖೆಗಳ ಸಮನ್ವಯತೆ, ಅಭಿವೃದ್ಧಿ ವಿಷಯಗಳ ಕುರಿತಾಗಿ ಅವರಿಬ್ಬರ ಮಾತುಕತೆ ಕೇಂದ್ರೀಕೃತವಾಗಿತ್ತು. ಜತೆಗೆ, ಉಕ್ಕು ಉದ್ಯಮದ ಬೆಳವಣಿಗೆ ಹಾಗೂ ಅದಕ್ಕೆ ಪೂರಕವಾಗಿ ಪರಿಸರ ಇಲಾಖೆಯಿಂದ ದೊರೆಯುತ್ತಿರುವ ಉತ್ತಮ ಸಹಕಾರದ ಬಗ್ಗೆಯೂ ಮಾತುಕತೆ ನಡೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಂಟಮೂರಿ ಮಹಿಳೆ ವಿವಸ್ತ್ರ ಕೇಸ್; 12 ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ – Kannada News | Vantamuri Woman Assault Case: 12 Accused Get 5 Year Rigorous Imprisonment in Belagavi

ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್​​Image Credit source: Google

ಬೆಳಗಾವಿ, ಫೆಬ್ರುವರಿ 04: ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ 12 ಜನ ಆರೋಪಿಗಳಿಗೆ ಐದು ವರ್ಷಗಳ ಕಠಿಣ ಶಿಕ್ಷೆಯನ್ನು ಬೆಳಗಾವಿಯ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ. ಈ ಕುರಿತು ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 12 ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಸಾಬೀತಾಗಿದ್ದು, ಪ್ರತಿಯೊಂದು ಸೆಕ್ಷನ್‌ಗೆ ಒಂದೊಂದು ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಆರೋಪಿಗಳಾದ ಬಸಪ್ಪ ನಾಯಿಕ, ರಾಜು ನಾಯಿಕ, ಕೆಂಪಣ್ಣ ನಾಯಿಕ, ಪಾರ್ವತಿ ನಾಯಕ, ಯಲ್ಲವ್ವ ನಾಯಿಕ, ಲಕ್ಕಪ್ಪ ನಾಯಿಕ, ಗಂಗವ್ವ ನಾಯಿಕ, ಸಂಗೀತಾ ಹೆಗ್ಗನಾಯಿಕ, ಸಂತೋಷ ನಾಯಿಕ, ಶೋಭಾ ನಾಯಿಕ, ಲಕ್ಕವ್ವ ನಾಯಿಕ ಹಾಗೂ ಶಿವಪ್ಪ ವನ್ನೂರಿಗೆ ಶಿಕ್ಷೆ ವಿಧಿಸಲಾಗಿದೆ. ತೀರ್ಪು ಪ್ರಕಟವಾಗುತ್ತಿದ್ದಂತೆ ಕೋರ್ಟ್‌ದಲ್ಲೇ ಆರೋಪಿಗಳು ಹಾಗೂ ಅವರ ಕುಟುಂಬಸ್ಥರು ಕಣ್ಣೀರು ಹಾಕಿದ್ದರು.

ಮಗಳನ್ನು ಕರೆದುಕೊಂಡು ಹೋಗಿದ್ದವನ ತಾಯಿಯ ಮೇಲೆ ಕ್ರೌರ್ಯ

2023ರ ಡಿಸೆಂಬರ್ 10ರಂದು ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ ರಾಜ್ಯದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಯುವಕ ತಾನು ಪ್ರೀತಿಸಿದ್ದ ಯುವತಿಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದಕ್ಕೆ ಕೋಪಗೊಂಡ ಯುವತಿಯ ಕುಟುಂಬಸ್ಥರು, ಆತನ ಮನೆ ಮೇಲೆ ದಾಳಿ ನಡೆಸಿದ್ದರು. ನಂತರ ಆತನ ತಾಯಿಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಕ್ರೌರ್ಯ ಮೆರೆಯಲಾಗಿತ್ತು. ಈ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು.

ಓರ್ವ ಬಾಲಾಪರಾಧಿ ಬಿಟ್ಟು ಉಳಿದವರಿಗೆ ಶಿಕ್ಷೆ

ಈ ಘಟನೆಯ ನಂತರ ಪೊಲೀಸರು ಓಡಿಹೋಗಿದ್ದ ಪ್ರೇಮಿಗಳನ್ನು ಪತ್ತೆಹಚ್ಚಿ ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಮದುವೆ ಮಾಡಿಸಿದ್ದು, ದಂಪತಿ ಪ್ರಸ್ತುತ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಬಾಲಾಪರಾಧಿ ಸೇರಿ 13 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಪೊಲೀಸ್ ವಾಹನಗಳಲ್ಲಿ ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಎರಡು ವರ್ಷಗಳ ವಿಚಾರಣೆಯ ಬಳಿಕ, ಬಾಲಾಪರಾಧಿಯನ್ನು ಹೊರತುಪಡಿಸಿ ಉಳಿದ 12 ಮಂದಿ ಆರೋಪಿಗಳು ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 2:12 pm, Wed, 4 February 26

Source link

ಕ್ವಾರ್ಟರ್ ಫೈನಲ್​ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ – Kannada News | Karnataka squad for Ranji Trophy quarterfinal

ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ದೇವದತ್ ಪಡಿಕ್ಕಲ್ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿ ಟೀಮ್ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಕಾಣಿಸಿಕೊಂಡಿದ್ದಾರೆ.

ಹಾಗೆಯೇ ಕಳೆದ ಪಂದ್ಯದ ವೇಳೆ ಗಾಯಗೊಂಡು ಹೊರಗುಳಿದಿದ್ದ ಅನುಭವಿ ದಾಂಡಿಗ ಕರುಣ್ ನಾಯರ್ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಮಯಾಂಕ್ ಅಗರ್ವಾಲ್ ಕೂಡ ತಂಡದಲ್ಲಿದ್ದಾರೆ. ಆದರೆ ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ವೇಗಿ ವೈಶಾಕ್ ವಿಜಯಕುಮಾರ್ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.

ಇನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಲಿದ್ದು, ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಬ್ಯಾಟ್ ಬೀಸಲಿದ್ದಾರೆ.

ಐದನೇ ಕ್ರಮಾಂಕದಲ್ಲಿ ಸ್ಮರಣ್ ರವಿಚಂದ್ರನ್ ಕಣಕ್ಕಿಳಿಯಲಿದ್ದು, ಆರನೇ ಕ್ರಮಾಂಕದಲ್ಲಿ ಶ್ರೇಯಸ್ ಗೋಪಾಲ್ ಕಾಣಿಸಿಕೊಳ್ಳಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೃತಿಕ್ ಕೃಷ್ಣ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಇನ್ನು ಬೌಲರ್​ಗಳಾಗಿ ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ ಹಾಗೂ ವಿದ್ಯಾಧರ್ ಪಾಟೀಲ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಕರ್ನಾಟಕ ತಂಡ: ದೇವದತ್ ಪಡಿಕ್ಕಲ್ (ನಾಯಕ), ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಕೆವಿ ಅನೀಶ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ಎಂ. ವೆಂಕಟೇಶ್, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆಎಲ್ ಶ್ರೀಜಿತ್.

ಕ್ವಾರ್ಟರ್ ಫೈನಲ್ ಎದುರಾಳಿ ಯಾರು?

ಪಂಜಾಬ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 5 ವಿಕೆಟ್​ಗಳ ಜಯ ಸಾಧಿಸಿರುವ ಕರ್ನಾಟಕ ತಂಡವು ಕ್ವಾರ್ಟರ್ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಫೆಬ್ರವರಿ 6 ರಂದು ನಡೆಯಲಿರುವ ನಾಲ್ಕನೇ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಕರ್ನಾಟಕ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಲಿದೆ.

ಶಾರ್ದೂಲ್ ಠಾಕೂರ್ ಮುಂದಾಳತ್ವದ ಮುಂಬೈ ತಂಡದಲ್ಲೂ ಸ್ಟಾರ್ ಬ್ಯಾಟರ್​ಗಳ ದಂದೇ ಇದೆ. ಅದರಲ್ಲೂ ಟೆಸ್ಟ್ ಸ್ಪೆಷಲಿಸ್ಟ್​ಗಳೆಂದೇ ಗುರುತಿಸಿಕೊಂಡಿರುವ ಸರ್ಫರಾಝ್ ಖಾನ್, ಯಶಸ್ವಿ ಜೈಸ್ವಾಲ್, ಸಿದ್ಧೇಶ್ ಲಾಡ್​ನಂತಹ ದಾಂಡಿಗರು ಇರುವುದರಿಂದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಇದನ್ನೂ ಓದಿ: IPL 2026: ಐಪಿಎಲ್​ಗೆ SRH ತಂಡದ ಸ್ಟಾರ್ ಆಟಗಾರ ಡೌಟ್

ಮುಂಬೈ ತಂಡ: ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಮುಶೀರ್ ಖಾನ್, ಅಖಿಲ್ ಹೆರ್ವಾಡ್ಕರ್, ಸಿದ್ದೇಶ್ ಲಾಡ್, ಸರ್ಫರಾಝ್ ಖಾನ್, ಆಕಾಶ್ ಆನಂದ್ (ವಿಕೆಟ್ ಕೀಪರ್), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಸಾಯಿರಾಜ್ ಪಾಟೀಲ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಾಸ್ತ್. ಸೂರ್ಯಾಂಶ್ ಶೆಡ್ಗೆ, ದಿವ್ಯೇಶ್ ಸಕ್ಸೇನಾ.

Source link

Exit mobile version