Spiritual Reasons: ದೇವಸ್ಥಾನದಲ್ಲಿ ದೇವರ ವಿಗ್ರಹದ ಮುಂದೆ ಯಾಕೆ ಫೋಟೋ, ಸೆಲ್ಫಿ ತೆಗೆಯಬಾರದು? ಆಧ್ಯಾತ್ಮಿಕ ಕಾರಣ ಇಲ್ಲಿದೆ – Kannada News | Temple Photography Rules: Why Garbhagudi Photos are Forbidden? Expert Vastu Guide

ದೇವಸ್ಥಾನದಲ್ಲಿ ದೇವರ ವಿಗ್ರಹದ ಮುಂದೆ ಯಾಕೆ ಫೋಟೋ

ಸಾಕಷ್ಟು ಜನರಿಗೆ ಹೋದಲ್ಲಿ ಬಂದಲ್ಲಿ ಫೋಟೋ ತೆಗೆದುಕೊಳ್ಳುವ ಆಸೆ ಇರುತ್ತದೆ. ಹಿರಿಯರೊಂದಿಗೆ, ಕುಟುಂಬ ಸಮಾರಂಭಗಳಲ್ಲಿ ಅಥವಾ ಸುಂದರ ಪ್ರಕೃತಿಯ ಮಧ್ಯದಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಹೆಚ್ಚಾಗಿ ಬಿಟ್ಟಿದೆ. ಆದರೆ, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಸೆಲ್ಫಿ ತೆಗೆಸಿಕೊಳ್ಳುವುದು ಇದು ಅಷ್ಟು ಶುಭವಲ್ಲ. ಅದರಲ್ಲಿ ಮುಖ್ಯವಾಗಿ ದೇವಾಲಯಗಳಲ್ಲಿ, ವಿಶೇಷವಾಗಿ ಮೂಲ ವಿಗ್ರಹ ಅಥವಾ ಗರ್ಭಗುಡಿಯೊಳಗೆ ಸೆಲ್ಫಿ ಅಥವಾ ಫೋಟೋಗಳನ್ನು ತೆಗೆದುಕೊಳ್ಳುವುದು ಶುಭವಲ್ಲ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ದೇವಸ್ಥಾನಗಳಲ್ಲಿ ಮೂಲ ವಿಗ್ರಹಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಶ್ರದ್ಧೆಯಿಂದ ಪ್ರತಿಷ್ಠಾಪಿಸಲಾಗುತ್ತದೆ. ಈ ವಿಗ್ರಹಗಳಿಗೆ ನಿರಂತರವಾಗಿ ಅಭಿಷೇಕಗಳು ನಡೆದು, ಅವು ಶಾಸ್ತ್ರೋಕ್ತವಾಗಿ ಪ್ರಾಣಪ್ರತಿಷ್ಠಾಪನೆಗೊಂಡಿರುತ್ತವೆ. ಭೂಸ್ಪರ್ಶದಲ್ಲಿರುವ ಇಂತಹ ವಿಗ್ರಹಗಳು ಪಂಚಭೂತಗಳ ನಿಯಂತ್ರಣದಲ್ಲಿರುತ್ತವೆ ಮತ್ತು ಅತೀಂದ್ರಿಯ ಶಕ್ತಿಯನ್ನು ಹೊಂದಿರುತ್ತವೆ. ನಾವು, ಮನುಷ್ಯರು, ನಿರಂತರವಾಗಿ ಚಲಿಸುತ್ತಿರುತ್ತೇವೆ ಮತ್ತು ನಮ್ಮ ದೇಹದಲ್ಲಿ ಅನೇಕ ನಕಾರಾತ್ಮಕ ಶಕ್ತಿಗಳೂ ಸಹ ಇರಬಹುದು. ಇಂತಹ ನಕಾರಾತ್ಮಕ ಅಂಶಗಳನ್ನು ಹೊಂದಿರುವ ದೇಹದಿಂದ, ದೈವಿಕ ಶಕ್ತಿಯ ಮೂಲವಾಗಿರುವ ಮೂಲ ವಿಗ್ರಹಗಳೊಂದಿಗೆ ಫೋಟೋ ತೆಗೆದುಕೊಳ್ಳುವುದು ಸೂಕ್ತವಲ್ಲ.

ದೇವತಾ ಮೂರ್ತಿಗಳೊಂದಿಗೆ ತೆಗೆದ ಫೋಟೋವನ್ನು ನೋಡಿದಾಗ, ಹಂಚಿಕೊಂಡಾಗ ಅಥವಾ ಅದು ಸಾರ್ವಜನಿಕವಾದಾಗ, ನಮ್ಮಲ್ಲಿರುವ ಧನಾತ್ಮಕ ಶಕ್ತಿಯು ಕ್ರಮೇಣ ಹೊರಟುಹೋಗುತ್ತದೆ. ಇದಕ್ಕೆ ಉದಾಹರಣೆಯಾಗಿ, ಸೂರ್ಯನ ಜೊತೆ ಯಾವುದೇ ಗ್ರಹವಿದ್ದರೂ ಅದು ತನ್ನ ಬಲವನ್ನು ಕಳೆದುಕೊಳ್ಳುತ್ತದೆ. ಪ್ರಸ್ತುತ ಸೂರ್ಯನ ಜೊತೆ ಶುಕ್ರನಿದ್ದು, ಶುಕ್ರನಿಗೆ ಬಲವಿಲ್ಲ. ಅಂತಹ ಸೂರ್ಯನ ಶಕ್ತಿಯ ಮುಂದೆ ಗ್ರಹಗಳೇ ತಮ್ಮ ಶಕ್ತಿ ಕಳೆದುಕೊಳ್ಳುವಾಗ, ಜಗದ್ವ್ಯಾಪಕ, ಸರ್ವಾಂತರ್ಯಾಮಿ, ಸರ್ವಶಕ್ತನಾದ ಭಗವಂತನ ವಿಗ್ರಹದ ಜೊತೆ ಫೋಟೋ ತೆಗೆದರೆ ನಮ್ಮ ಶಕ್ತಿ ಕುಂದುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಆದ್ದರಿಂದ, ಪ್ರತಿಷ್ಠಾಪಿತ ದೇವತಾ ಮೂರ್ತಿಗಳ ಜೊತೆ, ವಿಶೇಷವಾಗಿ ಗರ್ಭಗುಡಿಯ ಆ ಭಾಗದಲ್ಲಿ, ಫೋಟೋಗಳನ್ನು ತೆಗೆದುಕೊಳ್ಳಬಾರದು. ದೇವಸ್ಥಾನದ ಹೊರಗಡೆ ಅಥವಾ ಪರಿವಾರ ದೇವತೆಗಳಿರುವ ಸ್ಥಳಗಳಲ್ಲಿ ಫೋಟೋಗಳನ್ನು ತೆಗೆದುಕೊಳ್ಳಬಹುದೇ ಎಂದು ಪ್ರಶ್ನಿಸಿದರೆ, ಹೊರಗಿನ ಸ್ಥಳಗಳಲ್ಲಿ ಅಥವಾ ಸುಂದರವಾದ ಗಿಡಗಳು, ವಾತಾವರಣದ ಫೋಟೋಗಳನ್ನು ತೆಗೆದುಕೊಳ್ಳಬಹುದು. ಆದರೆ ಅಭಿಷೇಕ ಮತ್ತು ಅರ್ಚನೆಗೊಳ್ಳುವ ವಿಗ್ರಹಗಳೊಂದಿಗೆ ಫೋಟೋ ತೆಗೆಯುವುದು ನಿಷಿದ್ಧ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಯಾಕೆ ಹಣ್ಣಿಗೆ ಕೊಳಕು ನೀರು ಸಿಂಪಡಣೆ ಮಾಡ್ತೀಯ ಎಂದಿದ್ದಕ್ಕೆ ಗಟ ಗಟನೆ ಚರಂಡಿ ನೀರು ಕುಡಿದ ಹಣ್ಣಿನ ವ್ಯಾಪಾರಿ – Kannada News | Virar Vendor Caught Using Gutter Water on Fruits, Locals Intervene

ವಿರಾರ್, ಫೆಬ್ರವರಿ 04: ಯಾಕೆ ಹಣ್ಣಿಗೆ ಚರಂಡಿ ನೀರು ಸಿಂಪಡಣೆ ಮಾಡ್ತೀರಾ ಎಂದು ಕೇಳಿದ್ದಕ್ಕೆ ಹಣ್ಣಿನ ವ್ಯಾಪಾರಿಯೊಬ್ಬ ಗಟ ಗಟನೆ ಚರಂಡಿ ನೀರು ಕುಡಿದಿರುವ ಘಟನೆ ಮಹಾರಾಷ್ಟ್ರದ ವಿರಾರ್​​ನಲ್ಲಿ ನಡೆದಿದೆ. ನಂತರ ಸ್ಥಳೀಯರು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದರು. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ವೀಡಿಯೊವು ಪುರುಷರ ಗುಂಪೊಂದು ಹಣ್ಣಿನ ಮಾರಾಟಗಾರನಿಗೆ ಹಣ್ಣುಗಳ ಮೇಲೆ ಸಿಂಪಡಿಸುತ್ತಿದ್ದ ನೀರು ಗಟರ್ ನೀರು ಆದರೆ ಅವನು ಆ ನೀರು ಬಿಎಂಸಿ ನೀರು ಎಂದು ವಾದಿಸುತ್ತಿದ್ದ.

ಬಿಎಂಸಿ ನೀರು ಎಲ್ಲಿದೆ ಎಂದು ಕೇಳಿದಾಗ, ಕ್ಯಾಮೆರಾದಲ್ಲಿ ಕೊಳಕು ನೀರನ್ನು ತೋರಿಸಿದ್ದಷ್ಟೇ ಅಲ್ಲದೆ ಅದೇ ನೀರನ್ನು ಕುಡಿದಿದ್ದಾನೆ. ಆ ವ್ಯಕ್ತಿ ಹಣ್ಣುಗಳನ್ನು ತೂಕ ಮಾಡಲು ಬಳಸುವ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿ ಗುಂಪಿನ ಮುಂದೆ ಕುಡಿಯುತ್ತಾನೆ. ಮಾರಾಟಗಾರನು ಹಣ್ಣುಗಳ ಮೇಲೆ ನೀರನ್ನು ಸಿಂಪಡಿಸಿದ್ದಾಗಿ ಒಪ್ಪಿಕೊಂಡು, ತಾನೂ ಅದನ್ನು ಕುಡಿದಿದ್ದೇನೆ ಎಂದು ಹೇಳುವ ಮೂಲಕ ಅದನ್ನು ಸಮರ್ಥಿಸಿಕೊಳ್ಳುತ್ತಾನೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

IPL 2026: ಐಪಿಎಲ್​ಗೆ SRH ತಂಡದ ಸ್ಟಾರ್ ಆಟಗಾರ ಡೌಟ್

Source link

ಬ್ರಾಹ್ಮಣ ಸಮುದಾಯಕ್ಕೆ ಅವಮಾನ? ಮನೋಜ್ ಸಿನಿಮಾ ವಿರುದ್ಧ ಆಕ್ರೋಶ – Kannada News | Ghooskhor Pandat movie landed in controversy for its name

ಸಿನಿಮಾಗಳು (Cinema) ವಿವಾದಕ್ಕೆ ಸಿಲುಕುವುದು ತೀರ ಸಾಮಾನ್ಯ ಆಗಿಬಿಟ್ಟಿದೆ. ಸಿನಿಮಾಗಳಲ್ಲಿ ಜಾತಿ, ಧರ್ಮ, ಸಮುದಾಯ, ವೃತ್ತಿಯ ಅಪಮಾನ ಮಾಡಲಾಗಿದೆ ಎಂಬ ದೂರು ಇತ್ತೀಚೆಗೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇದೇ ಸಾಲಿಗೆ ಖ್ಯಾತ ನಟ ಮನೋಜ್ ಬಾಜಪೇಯಿ ನಟನೆಯ ಸಿನಿಮಾ ಸಹ ಸೇರಿಕೊಂಡಿದೆ. ಮನೋಜ್ ನಟನೆಯ ಹೊಸ ಸಿನಿಮಾ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಹೆಸರಿನ ಬಗ್ಗೆ ಇದೀಗ ಆಕ್ರೋಶ ವ್ಯಕ್ತವಾಗಿದೆ. ಸಿನಿಮಾದ ಹೆಸರು ಬದಲಾವಣೆ ಮಾಡದಿದ್ದಲ್ಲಿ ಸಿನಿಮಾ ಬಹಿಷ್ಕರಿಸುವುದಾಗಿ ಹಲವರು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ.

ಮನೋಜ್ ಬಾಜಪೇಯಿ ನಾಯಕನಾಗಿ ನಟಿಸಿರುವ ‘ಗುಸ್​​ಕೋರ್ ಪಂಡತ್’ ಹೆಸರಿನ ಸಿನಿಮಾದ ಟ್ರೈಲರ್ ನಿನ್ನೆ (ಫೆಬ್ರವರಿ 03) ಬಿಡುಗಡೆ ಆಗಿದೆ. ಟ್ರೈಲರ್​​ನಲ್ಲಿ ತೋರಿಸಿರುವಂತೆ ಮನೋಜ್ ಬಾಜಪೇಯಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಮನೋಜ್ ಅವರು ಭ್ರಷ್ಟಾಚಾರ, ಸಿಟ್ಟು, ಕ್ರೂರತನದಿಂದ ತುಂಬಿರುವ ಪೊಲೀಸ್ ಪಾತ್ರದಲ್ಲಿ ನಟಿಸಿರುವುದು ಟ್ರೈಲರ್​​ನಿಂದ ತಿಳಿದು ಬರುತ್ತಿದೆ. ಆದರೆ ಪಾತ್ರದ ಬಗ್ಗೆ ಅಲ್ಲದೆ, ಸಿನಿಮಾಕ್ಕೆ ಇಟ್ಟಿರುವ ಹೆಸರು ಇದೀಗ ವಿವಾದಕ್ಕೆ ಕಾರಣವಾಗಿದೆ.

ಸಿನಿಮಾಕ್ಕೆ ‘ಗುಸ್ಕೋರ್ ಪಂಡತ್’ ಎಂದು ಹೆಸರಿಡಲಾಗಿದೆ. ಇದು ಪಂಡಿತರನ್ನು ದೂಷಿಸುತ್ತಿರುವಂತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಗುಸ್ಕೋರ್ ಪಂಡತ್’ ಎಂದರೆ ನುಸುಳುಕೋರ ಪಂಡಿತ್ ಎಂದರ್ಥ. ಅಸಲಿಗೆ ಸಿನಿಮಾದ ಹೆಸರು ‘ಗುಸ್ಕೋರ್ ಪಂಡಿತ್’ ಎಂದೇ ಇತ್ತು ಎನ್ನಾಗಿದೆ ಆದರೆ ಸೆನ್ಸಾರ್​​ನವರಿಗಾಗಿ ‘ಪಂಡಿತ್’ ಅನ್ನು ಬದಲಾಯಿಸಿ ‘ಪಂಡತ್’ ಮಾಡಲಾಗಿದೆ.

ಇದನ್ನೂ ಓದಿ:‘ಜನ ನಾಯಗನ್’ ಸಿನಿಮಾದ 20 ನಿಮಿಷ ದೃಶ್ಯಕ್ಕೆ ಕತ್ತರಿ? ವಿಜಯ್​​​ಗೆ ನಿರಾಸೆ

ಹಲವಾರು ಮಂದಿ ಈ ಬಗ್ಗೆ ಟ್ವೀಟ್​ ಮಾಡಿದ್ದು, ಬ್ರಾಹ್ಮಣರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಸಿನಿಮಾಕ್ಕೆ ಈ ರೀತಿಯ ಹೆಸರು ಇಡಲಾಗಿದೆ. ಸಿನಿಮಾದ ಹೆಸರು ಬದಲಾವಣೆ ಮಾಡದಿದ್ದಲ್ಲಿ ಸಿನಿಮಾ ಬಹಿಷ್ಕರಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಗುಸ್​ಕೋರ್ ಮುಸ್ಲಿಂ’, ‘ಗುಸ್​ಕೋರ್ ದಲಿತ್’ ಎಂದು ಹೆಸರಿಡಿ ನೋಡೋಣ ಎಂದು ಸಹ ಕೆಲವರು ಸವಾಲು ಹಾಕಿದ್ದಾರೆ.

ಸಿನಿಮಾನಲ್ಲಿ ಮನೋಜ್ ಬಾಜಪೇಯಿ ಪಾತ್ರದ ಹೆಸರು ಅಜಯ್ ದೀಕ್ಷಿತ್, ಆದರೆ ಅವರ ಪಾತ್ರದ ಅಡ್ಡ ಹೆಸರು ಪಂಡಿತ್ ಎಂದಾಗಿದೆ. ಸಿನಿಮಾನಲ್ಲಿ ಮನೋಜ್ ಜೊತೆಗೆ ನುಸ್ರತ್ ಬರೂಚಾ ಸಹ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ರಿತೇಶ್ ಶಾ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ನೀರಜ್ ಪಾಂಡೆ. ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ನೇರವಾಗಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆಯರಲ್ಲಿ ಕ್ಯಾನ್ಸರ್​​ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು – Kannada News | Oncologists Warn of Rising Cancer Cases Among Young Women, Urge Not to Ignore Symptoms

ಬೆಂಗಳೂರು, ಫೆಬ್ರವರಿ 04: ಕ್ಯಾನ್ಸರ್‌ನ ಪ್ರವೃತ್ತಿಗಳಲ್ಲಿ ಕಳವಳಕಾರಿ ಬದಲಾವಣೆ ಕಂಡುಬರುತ್ತಿದ್ದು, ಕಡಿಮೆ ವಯಸ್ಸಿನ ಮಹಿಳೆಯರಲ್ಲಿಯೇ ಹೆಚ್ಚಾಗಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಆಂಕಾಲಜಿಸ್ಟ್‌ಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ರೋಗ ಲಕ್ಷಣಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಮಹಿಳೆಯರು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂಬ ಮನವಿಯನ್ನೂ ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನ್ ಕೆ.ಆರ್. ಮಾಡಿದ್ದಾರೆ.

ಸ್ಥೂಲತೆ, ಇನ್ಸುಲಿನ್ ಪ್ರತಿರೋಧ, ಮಧುಮೇಹ, ನಿರಂತರ ಒತ್ತಡ, ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದಿರುವುದು, ತಂಬಾಕು ಸೇವನೆ ಹಾಗೂ ತಡವಾಗಿ ಗರ್ಭಧಾರಣೆ ಮೊದಲಾದ ಜೀವನಶೈಲಿ ಸಂಬಂಧಿತ ಅಂಶಗಳು ಕ್ಯಾನ್ಸರ್​​ಗೆ ಪ್ರಮುಖ ಕಾರಣಗಳಾಗಿ ಹೊರಹೊಮ್ಮುತ್ತಿವೆ. ದೇಹದ ಕೊಬ್ಬಿನ ಪ್ರಮಾಣ, ಸಂತಾನೋತ್ಪತ್ತಿ ಚಿಕಿತ್ಸೆಗಳು ಮತ್ತು ತಡಗರ್ಭಧಾರಣೆಯಿಂದ ಉಂಟಾಗುವ ದೀರ್ಘಕಾಲದ ಇಸ್ಟ್ರೋಜನ್ ಪ್ರಭಾವವು ಸ್ತನ ಮತ್ತು ಎಂಡೋಮೆಟ್ರಿಯಲ್ ಕ್ಯಾನ್ಸರ್‌ಗಳಂತಹ ಹಾರ್ಮೋನ್ ಕ್ಯಾನ್ಸರ್‌ಗಳಿಗೆ ಹೆಚ್ಚು ಕಾರಣವಾಗ್ತಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ರೋಗಕ್ಕೆ ಯಾವ ಅಂಶಗಳು ಕಾರಣವಾಗುತ್ತೆ ಗೊತ್ತಾ?

ಇತ್ತೀಚೆಗೆ ಕಡಿಮೆ ವಯಸ್ಸಿನಲ್ಲಿಯೇ ಕ್ಯಾನ್ಸರ್​​ ಪ್ರಕರಣಗಳು ಕಾಣಸಿಗುತ್ತಿದ್ದು, 30 ಮತ್ತು 40ರ ವಯಸ್ಸಿನ ಮಹಿಳೆಯರಲ್ಲಿ ಆರಂಭಿಕ ಹಂತದ ಸ್ತನ ಮತ್ತು ವಿರಳ ಎಂಡೋಮೆಟ್ರಿಯಲ್ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಇನ್ನು ತಮಗೆ ವಯಸ್ಸು ಕಡಿಮೆ. ಹೀಗಾಗಿ ಕ್ಯಾನ್ಸರ್​​ ಬರಲ್ಲ ಎಂಬ ಭಾವನೆಯಲ್ಲಿ ಕೆಲ ಮಹಿಳೆಯರು ಇರುತ್ತಾರೆ. ಅಸಾಮಾನ್ಯ ರಕ್ತಸ್ರಾವ, ಸ್ತನದಿಂದ ದ್ರವ ಹೊರಬರುವುದು, ಸಣ್ಣ ಗಡ್ಡೆಗಳು, ಕಾರಣವಿಲ್ಲದ ತೂಕ ಇಳಿಕೆ, ದೀರ್ಘಕಾಲದ ದಣಿವಿನಂತಹ ಸೂಕ್ಷ್ಮ ಲಕ್ಷಣಗಳನ್ನು ಹಾರ್ಮೋನಲ್ ಸಮಸ್ಯೆ ಅಥವಾ ಜೀವನಶೈಲಿ ಒತ್ತಡವೆಂದು ನಿರ್ಲಕ್ಷಿಸಲಾಗುತ್ತದೆ. ಕ್ಯಾನ್ಸರ್ 50 ವರ್ಷಗಳ ನಂತರ ಮಾತ್ರವೇ ಬರುತ್ತದೆ ಎಂಬ ಭಾವನೆ ಈಗ ಅನ್ವಯಿಸುವುದಿಲ್ಲ ಎಂದು ಫೋರ್ಟಿಸ್ ಆಸ್ಪತ್ರೆಗಳ ಮೆಡಿಕಲ್ ಆಂಕಾಲಜಿ ಮತ್ತು ಹೆಮಾಟೋ-ಆಂಕಾಲಜಿ ವಿಭಾಗದ ಪ್ರಿನ್ಸಿಪಲ್ ನಿರ್ದೇಶಕರಾದ ಡಾ. ನೀತಿ ರೈಝಾದಾ ತಿಳಿಸಿದ್ದಾರೆ. ನಗರ ಪ್ರದೇಶಗಳ ಯುವಜನರಲ್ಲಿ ಆರಂಭಿಕ ಹಂತದ ಥೈರಾಯ್ಡ್ ಮತ್ತು ಕಿಡ್ನಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆಯೂ ಅವರು ಎಚ್ಚರಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ ಅವತಾರದಲ್ಲಿ ರುಕ್ಮಿಣಿ ವಸಂತ್; ಇಲ್ಲಿವೆ ಸುಂದರ ಫೋಟೋಗಳು – Kannada News | Rukmini Vasanth Looks Amazing In her New look and New photoshoot

ರುಕ್ಮಿಣಿ ವಸಂತ್ ಅವರ ಹೊಸ ಫೋಟೋಶೂಟ್ ವೈರಲ್ ಆಗಿದೆ. ಈ ಫೋಟೋಶೂಟ್​ ಅಲ್ಲಿ ಅವರು ಗಮನ ಸೆಳೆದಿದ್ದಾರೆ. ಅವರ ಡ್ರೆಸ್​​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ರುಕ್ಮಿಣಿ ಅವರು ಮತ್ತಷ್ಟು ಸುಂದರವಾಗಿ ಕಾಣಿಸಿದ್ದಾರೆ.

Source link

ಪತ್ನಿಯ ಚಿಕಿತ್ಸೆಗೆಂದು ಇಟ್ಟಿದ್ದ ಸಾಲದ ಹಣವನ್ನೇ ಹೊತ್ತೊಯ್ದ ಕದೀಮರು! – Kannada News | Thieves Break Car Glass, Loot Rs.2.5 Lakh Meant for Treatment in Nelamangala

ನೆಲಮಂಗಲ, ಫೆಬ್ರುವರಿ 04: ಪತ್ನಿಯ ಚಿಕಿತ್ಸೆಗೆಂದು ಸಂಗ್ರಹಿಸಿದ್ದ ಸಾಲದ ಹಣವನ್ನೇ ಕಳ್ಳರು  ದೋಚಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜಿಎಸ್ ಆಸ್ಪತ್ರೆ ಬಳಿ ನಡೆದಿದೆ. ಚಿಕ್ಕಬಾಣವರ ನಿವಾಸಿ ಹೇಮಣ್ಣ ಎಂಬುವವರು ತಮ್ಮ ಪತ್ನಿ ಅನಸೂಯ ಅವರಿಗೆ ಅನಾರೋಗ್ಯ ಹಿನ್ನೆಲೆ ನಗರೂರು ಸಮೀಪದ ಬಿಜಿಎಸ್ ಆಸ್ಪತ್ರೆಗೆ ಆಯುರ್ವೇದ ಚಿಕಿತ್ಸೆಗಾಗಿ ತೆರಳಿದ್ದರು. ಚಿಕಿತ್ಸೆಗಾಗಿ ಹಾಗೂ ಮತ್ತೊಬ್ಬರಿಗೆ ಹಣ ನೀಡಬೇಕಿದ್ದ ಕಾರಣ ಹೇಮಣ್ಣ ಸುಮಾರು ಎರಡು ಲಕ್ಷ ಐವತ್ತು ಸಾವಿರ ರೂಪಾಯಿ ಸಾಲ ಪಡೆದು ಕಾರಿನ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ವಾಪಸ್ ಬರುವಷ್ಟರಲ್ಲಿ ದುಷ್ಕರ್ಮಿಗಳು ಕಾರಿನ ಗ್ಲಾಸ್ ಒಡೆದು ನಗದು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Home Positivity: ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಾಗಲು ಈ 4 ಸರಳ ಮಾರ್ಗ ಅನುಸರಿಸಿ – Kannada News | Home Positivity: Women’s Role, Cleanliness and Rituals for Peace and Prosperity

ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಸಕಾರಾತ್ಮಕತೆ ನೆಲೆಸಲು ಕುಟುಂಬದ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾದರೂ, ಅದರಲ್ಲೂ ಮಹಿಳೆಯರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಮನೆಯ ಸ್ವಚ್ಛತೆ, ಪೂಜೆ-ಪಾಠ, ದಿನನಿತ್ಯದ ಸಣ್ಣ ಅಭ್ಯಾಸಗಳು – ಇವೆಲ್ಲವೂ ಮನೆಯ ವಾತಾವರಣವನ್ನು ರೂಪಿಸುತ್ತವೆ. ನಮ್ಮ ಹಿರಿಯರು ಹೇಳುವಂತೆ, ಲಕ್ಷ್ಮೀ ದೇವಿ ಯಾವಾಗಲೂ ಸ್ವಚ್ಛ, ಪ್ರಕಾಶಮಾನ ಮತ್ತು ಸಾತ್ವಿಕ ಶಕ್ತಿಯಿರುವ ಸ್ಥಳದಲ್ಲೇ ವಾಸಿಸುತ್ತಾಳೆ. ಆದ್ದರಿಂದ ಮನೆಗೆ ದೈವಿಕ ಶಕ್ತಿಯನ್ನು ಆಕರ್ಷಿಸಲು ಕೆಲವು ಸರಳ ಕ್ರಮಗಳನ್ನು ಪಾಲಿಸುವುದು ಬಹಳ ಉಪಯುಕ್ತ.

ಮೊದಲನೆಯದಾಗಿ, ಸ್ವಚ್ಛತೆ ಅತ್ಯಂತ ಮುಖ್ಯ. ಅಸ್ತವ್ಯಸ್ತವಾಗಿರುವ ಮನೆ ಮನಸ್ಸಿನಲ್ಲಿಯೂ ಗೊಂದಲವನ್ನು ಉಂಟುಮಾಡುತ್ತದೆ. ಹಳೆಯ, ಹರಿದ ಬಟ್ಟೆಗಳು, ಬಳಕೆಯಾಗದ ವಸ್ತುಗಳು, ಹಳೆಯ ಕಾಗದಗಳು ಇತ್ಯಾದಿ ನಕಾರಾತ್ಮಕತೆಯನ್ನು ಸೆಳೆಯುತ್ತವೆ ಎಂದು ನಂಬಲಾಗಿದೆ. ಮನೆಯನ್ನು ಸ್ವಚ್ಛವಾಗಿ, ಗಾಳಿಯಾಡುವಂತೆ ಮತ್ತು ಬೆಳಕಿನಿಂದ ತುಂಬಿರುವಂತೆ ಇಟ್ಟರೆ ಅದು ಶಾಂತಿಯನ್ನು ಮತ್ತು ಹಿತಕರತೆಯನ್ನು ನೀಡುತ್ತದೆ. “ಸ್ವಚ್ಛತೆಯೇ ದೇವರು” ಎಂಬ ಮಾತಿನ ಅರ್ಥವೂ ಇದೇ.

ದೈನಂದಿನ ದೀಪ ಪೂಜೆ ಕೂಡ ಮನೆಯಲ್ಲಿ ಸಾತ್ವಿಕ ಶಕ್ತಿಯನ್ನು ಹೆಚ್ಚಿಸುವ ಪ್ರಮುಖ ವಿಧಾನವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಒಂದು ದೀಪ ಹಚ್ಚಿ, ಹೂವಿಟ್ಟು, ಧೂಪ ಹಚ್ಚುವುದರಿಂದ ಮನೆಯಲ್ಲಿ ಪವಿತ್ರತೆ ಮೂಡುತ್ತದೆ. ದೀಪದ ಬೆಳಕು ಕತ್ತಲನ್ನು ದೂರ ಮಾಡುವಂತೆ, ಮನಸ್ಸಿನಲ್ಲಿರುವ ಭಯ ಮತ್ತು ನಕಾರಾತ್ಮಕತೆಯನ್ನೂ ದೂರ ಮಾಡುತ್ತದೆ. ಹೆಚ್ಚು ಸಮಯವಿಲ್ಲದಿದ್ದರೂ ಈ ಸಣ್ಣ ಆಚರಣೆ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಅದೇ ರೀತಿ, ಮಂಗಳವಾರ, ಶುಕ್ರವಾರ ಅಥವಾ ಇತರ ಶುಭ ದಿನಗಳಲ್ಲಿ ವಿಶೇಷ ಪೂಜೆ, ಲಕ್ಷ್ಮೀ ಆರಾಧನೆ ಅಥವಾ ಇಷ್ಟದೇವರ ಪ್ರಾರ್ಥನೆ ಮಾಡುವುದು ಒಳ್ಳೆಯದು. ತಿಂಗಳಿಗೊಮ್ಮೆ ಭಜನೆ, ಶ್ಲೋಕ ಪಠಣ ಅಥವಾ ಆಧ್ಯಾತ್ಮಿಕ ಚರ್ಚೆಗಳನ್ನು ನಡೆಸಿದರೆ ಮನೆಯ ವಾತಾವರಣ ಇನ್ನಷ್ಟು ಪಾವನವಾಗುತ್ತದೆ. ಇಂತಹ ಸಣ್ಣ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳು ಕುಟುಂಬದವರಲ್ಲಿ ಒಗ್ಗಟ್ಟು ಮತ್ತು ಸಂತೋಷವನ್ನು ಹೆಚ್ಚಿಸುತ್ತವೆ.

ಇವೆಲ್ಲಕ್ಕಿಂತ ಮುಖ್ಯವಾದದ್ದು ನಂಬಿಕೆ ಮತ್ತು ಭಕ್ತಿ. ದೇವರಲ್ಲಿ ದೃಢ ವಿಶ್ವಾಸ ಇಟ್ಟರೆ ಮನಸ್ಸಿಗೆ ಧೈರ್ಯ ಬರುತ್ತದೆ. ಪ್ರಾರ್ಥನೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ. ಭಕ್ತಿಯಿಂದ ಮಾಡಿದ ಸಣ್ಣ ಪೂಜೆಯೂ ದೊಡ್ಡ ಫಲವನ್ನು ನೀಡುತ್ತದೆ ಎಂಬುದು ನಮ್ಮ ಸಂಸ್ಕೃತಿಯ ನಂಬಿಕೆ. ಈ ಸರಳ ಅಭ್ಯಾಸಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ, ಮನೆಯಲ್ಲಿ ಸ್ವಾಭಾವಿಕವಾಗಿ ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕತೆ ನೆಲೆಸುತ್ತದೆ. ಸಂತೋಷದಿಂದ ತುಂಬಿದ, ಶಾಂತಿಯುತ ಮನೆ ನಮ್ಮ ಬದುಕನ್ನೇ ಸುಂದರಗೊಳಿಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಾರಣಾಸಿ’ ಚಿತ್ರೀಕರಣಕ್ಕೆ ಐಮ್ಯಾಕ್ಸ್ ಬಳಸಿದ್ದೇಕೆ: ಕಾರಣ ನೀಡಿದ ರಾಜಮೌಳಿ – Kannada News | SS Rajamouli explains why he choose IMAX camera to Shoot Varanasi movie

ರಾಜಮೌಳಿ (Rajamouli) ನಿರ್ದೇಶಿಸಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ‘ವಾರಣಾಸಿ’ ಭಾರತದಲ್ಲಿ ಮಾತ್ರವಲ್ಲ ವಿಶ್ವ ಸಿನಿಮಾ ರಂಗದಲ್ಲಿಯೇ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ ಶುರುವಾಗಲಿದೆ. ಕೆಲ ವಾರಗಳ ಹಿಂದಷ್ಟೆ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ದಿನ ಮಾತನಾಡಿದ್ದ ರಾಜಮೌಳಿ, ಈ ಸಿನಿಮಾಕ್ಕಾಗಿ ತಾವು ಐಮ್ಯಾಕ್ಸ್ ಕ್ಯಾಮೆರಾಗಳನ್ನು ಬಳಸಿದ್ದಾಗಿ ಹೇಳಿದ್ದರು. ಇದೀಗ ತಾವು, ಐಮ್ಯಾಕ್ಸ್ ಕ್ಯಾಮೆರಾಗಳನ್ನೇ ಬಳಸಿದ್ದು ಏಕೆಂದು ವಿವರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, ತಾವು ಐಮ್ಯಾಕ್ಸ್ ಕ್ಯಾಮೆರಾಗಳನ್ನು ಬಳಸಿದ್ದಕ್ಕೆ ಕಾರಣ ನೀಡಿದ್ದಾರೆ. ಸಿನಿಮಾನಲ್ಲಿ ಅಂಟಾರ್ಟಿಕಾದ ಹಿಮ ಬೆಟ್ಟದ ದೃಶ್ಯಗಳು, ರಾಮಾಯಣದ ದೃಶ್ಯಗಳು ಇವೆಲ್ಲ ಇವೆ. ಆ ದೃಶ್ಯಗಳಲ್ಲಿ ಬಳಸಿರುವ ಬೆಟ್ಟಗಳು, ಬೆಂಕಿ, ಇನ್ನೂ ಹಲವು ವಸ್ತುಗಳು ಅಗಲವಾಗಿರುವ ಜೊತೆಗೆ ಬಹಳ ಉದ್ದವಾಗಿಯೂ ಇವೆ. ಹಾಗಾಗಿ ಅವುಗಳ ಬೃಹತ್ತತೆ, ವಿಶೇಷವಾಗಿ ಎತ್ತರವನ್ನು ಸರಿಯಾಗಿ ತೋರಿಸಲೆಂದು ತಾವು ಐಮ್ಯಾಕ್ಸ್ ಕ್ಯಾಮೆರಾ ಬಳಸಿದ್ದಾಗಿ ರಾಜಮೌಳಿ ಹೇಳಿದ್ದಾರೆ.

ನಾನು ಈ ಬಾರಿ ಕ್ಯಾಮೆರಾ ಕುರಿತಾಗಿ ಯಾವುದೇ ತಾಂತ್ರಿಕತೆಯಲ್ಲಿ ತೊಡಗಿಕೊಳ್ಳಲಿಲ್ಲ. ಎಲ್ಲವನ್ನೂ ನಮ್ಮ ಡಿಓಪಿ ನೋಡಿಕೊಂಡರು. ನಾನು ಅವರಿಗೆ ನನ್ನ ವಿಷನ್ ಅಷ್ಟನ್ನೇ ಹೇಳುತ್ತಿದ್ದೆ, ಇದು ನನ್ನ ಕಲ್ಪನೆ ಹೀಗೆ ದೃಶ್ಯ ಬರಬೇಕು ಎಂಬುದು ನನ್ನ ಉದ್ದೇಶ ಎಂದಷ್ಟೆ ಹೇಳುತ್ತಿದ್ದೆ. ನಮ್ಮ ಡಿಓಪಿ ಅದಕ್ಕೆ ತಕ್ಕಂತೆ ಎಲ್ಲವನ್ನೂ ಅರೇಂಜ್ ಮಾಡಿ ನನಗೆ ಔಟ್​​ಪುಟ್ ನೀಡುತ್ತಿದ್ದರು ಎಂದಿದ್ದಾರೆ ರಾಜಮೌಳಿ. ‘ವಾರಣಾಸಿ’ ಸಿನಿಮಾಕ್ಕೆ ಡಿಓಪಿ ಆಗಿ ಕೆಲಸ ಮಾಡಿರುವುದು ಪಿಎಸ್​​ ವಿನೋದ್.

ಇತರೆ ಸಿನಿಮಾಗಳನ್ನು ಸಿನಿಮಾಸ್ಕೋಪ್ ಅಥವಾ 70 ಎಂಎಂ ಕ್ಯಾಮೆರಾಗಳು ತೋರಿಸುವುದಕ್ಕಿಂತಲೂ 26% ಹೆಚ್ಚಿನ ದೃಶ್ಯಗಳನ್ನು ಐಮ್ಯಾಕ್ಸ್ ತೋರಿಸುತ್ತದೆ. ಜೊತೆಗೆ ಇತರೆ ಕ್ಯಾಮೆರಾಗಳಿಗಿಂತಲೂ ಹೆಚ್ಚು ಶಾರ್ಪ್ ಆದ ದೃಶ್ಯಗಳನ್ನು ಐಮ್ಯಾಕ್ಸ್ ಕ್ಯಾಮೆರಾ ಮತ್ತು ಪ್ರೊಜೆಕ್ಷನ್ ನೀಡುತ್ತದೆ. ಇದೇ ಕಾರಣಕ್ಕೆ ವಿಶ್ವದ ಅತ್ಯುತ್ತಮ ಸಿನಿಮಾಗಳನ್ನು ಐಮ್ಯಾಕ್ಸ್​​ನಲ್ಲಿಯೇ ಚಿತ್ರೀಕರಣ ಮಾಡಲಾಗುತ್ತದೆ. ವಿಶ್ವಶ್ರೇಷ್ಠ ನಿರ್ದೇಶಕ ಎನಿಸಿಕೊಂಡಿರುವ ಕ್ರಿಸ್ಟೊಫರ್ ನೋಲನ್ ಸಹ ತಮ್ಮ ಸಿನಿಮಾಗಳನ್ನು ಐಮ್ಯಾಕ್ಸ್​​ನಲ್ಲಿ ಚಿತ್ರೀಕರಿಸುತ್ತಾರೆ. ಅದೂ ಅಲ್ಲದೆ ಅವರು ಡಿಜಿಟಲ್ ಬದಲಿಗೆ ಐಮ್ಯಾಕ್ಸ್ ರೀಲ್​​ಗಳನ್ನು ಚಿತ್ರೀಕರಣಕ್ಕೆ ಬಳಸುತ್ತಾರೆ.

ಇದನ್ನೂ ಓದಿ:94ರ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಲಿಜೆಂಡರಿ ನಿರ್ದೇಶಕ, ರಾಜಮೌಳಿಗೂ ಕಾತರ

‘ವಾರಣಾಸಿ’ ಸಿನಿಮಾ ಭಾರತದ ಈ ವರೆಗೆ ಭಾರಿ ಬಜೆಟ್ ಸಿನಿಮಾ ಆಗಿದೆ. ಸಿನಿಮಾಕ್ಕಾಗಿ ಸುಮಾರು 1000 ದಿಂದ 1500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಸಿನಿಮಾವು ಭಾರತದ ಪೌರಾಣಿಕ ಕತೆಗಳ ಅಂಶಗಳನ್ನು ಒಳಗೊಂಡಿದೆ. ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಸಿನಿಮಾನಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಇನ್ನೂ ಕೆಲವು ಜನಪ್ರಿಯ ವಿದೇಶಿ ನಟರು ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ 7ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಸ್ಟೇಜ್ ಮೇಲೆ ಹೊಗೆ ಕಂಡು ಭಯದಲ್ಲೇ ಅಳುತ್ತಾ ಓಡಿಹೋದ ಪುಟಾಣಿ ಡ್ಯಾನ್ಸರ್ಸ್ – Kannada News | The little girls went on stage to dance, do you know what happened next?

ಪುಟಾಣಿಗಳು (kids) ಏನು ಮಾಡಿದ್ರು ಅದಕ್ಕೂ ನೋಡೋಕೆ ಚಂದ. ಈ ಮಕ್ಕಳ ಆಟ ತುಂಟಾಟಗಳನ್ನು ಹೆತ್ತವರು ಕಣ್ತುಂಬಿಸಿಕೊಳ್ತಾರೆ. ಇಬ್ಬರೂ ಮುದ್ದಾದ ಪುಟಾಣಿಗಳು ಡ್ಯಾನ್ಸ್ (dance) ಮಾಡಲು ವೇದಿಕೆ ಹತ್ತಿದ್ದಾರೆ. ಹಾಡು ಪ್ಲೇ ಆಗುತ್ತಿದ್ದಂತೆ ಪುಟಾಣಿಯೊಂದು ಅಳಲು ಶುರು ಮಾಡಿದೆ. ಈ ಪುಟ್ಟ ಹುಡುಗಿಯ ಅಳಲು ಶುರು ಮಾಡಿದ್ದು, ವೇದಿಕೆಯಲ್ಲಿನ ಹೊಗೆ ನೋಡಿ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕಲಾಕಾರ್ಸ್ (Kalakaars) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ನರ್ಸರಿಯ ವಾರ್ಷಿಕೋತ್ಸವವಾಗಿದ್ದು, ಇಬ್ಬರೂ ಪುಟಾಣಿ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಡ್ಯಾನ್ಸ್ ಮಾಡಲು ವೇದಿಕೆ ಹತ್ತಿದ್ದಾರೆ. ಮಕ್ಕಳು ರೆಡಿಯಾಗುತ್ತಿದ್ದಂತೆ ಹಿಂದಿನಿಂದ ಟುಸ್​ ಎಂದು ಹೊಗೆ ಬಂದಿದೆ. ಇದರಿಂದ ಸ್ಟೇಜ್ ಮೇಲಿದ್ದ ಒಂದು ಪುಟಾಣಿ ಹೆದರಿ ಓಡಿ ಹೋಗಿದೆ. ಇತ್ತ ಇನ್ನೊಂದು ಪುಟಾಣಿ ಜೋರಾಗಿ ಅಳಲು ಪ್ರಾರಂಭಿಸಿದ್ದು, ಅಲ್ಲೇ ಇದ್ದ ಹೆತ್ತವರು ಬಂದು ಪುಟ್ಟ ಹುಡುಗಿಯನ್ನು ಸಮಾಧಾನ ಪಡಿಸುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ಸೆರೆಹಿಡಿದ ತಂದೆ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನನ್ನ ಮಗಳು ಚಿಕ್ಕವಳಿದ್ದಾಗ ಹೀಗೆಯೇ ಮಾಡುತ್ತಿದ್ದಳು ಎಂದಿದ್ದಾರೆ. ಮತ್ತೊಬ್ಬರು, ಅಯ್ಯೋ ಎಷ್ಟು ಮುಗ್ಧತೆ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮಕ್ಕಳಿಗೆ ಪ್ರಾಕ್ಟೀಸ್ ಮಾಡುವಾಗ ಈ ರೀತಿ ಹೊಗೆ ಬಿಡಿ, ಇಲ್ಲದಿದ್ದರೆ ಹೀಗೆ ಆಗುತ್ತೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version