Headlines

IPL 2026: ಐಪಿಎಲ್‌ನಲ್ಲಿ ಇದುವರೆಗೆ ಯಾರು ಮಾಡಿರದ ದಾಖಲೆಯ ಸನಿಹದಲ್ಲಿ ವಿರಾಟ್ ಕೊಹ್ಲಿ – Kannada News | Virat Kohli: IPL 9000 Runs Record Awaits vs GT at Chinnaswamy

ಐಪಿಎಲ್​ನ ಮೊದಲ ಆವೃತ್ತಿಯಿಂದಲೂ ಆಡುತ್ತಿರುವ ವಿರಾಟ್ ಕೊಹ್ಲಿ ಈ ಲೀಗ್​ನಲ್ಲಿ ನೂರಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಕೊಹ್ಲಿ ಆಟಕ್ಕೆ ಮುರಿಯದ ದಾಖಲೆಗಳಿಲ್ಲ. ಪ್ರತಿ ಆವೃತ್ತಿಯಲ್ಲೂ ಕೊಹ್ಲಿ ಒಂದಿಲ್ಲೊಂದು ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಅದರಂತೆ ಐಪಿಎಲ್‌ 2026 ರಲ್ಲೂ ಕೊಹ್ಲಿಯ ದಾಖಲೆಗಳ ಪುಸ್ತಕಕ್ಕೆ ಮತ್ತೊಂದು ದಾಖಲೆ ಸೇರುವ ಸನಿಹದಲ್ಲಿದೆ. ಏಪ್ರಿಲ್ 24 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತಮ್ಮ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ…

Read More

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸ ನಿಮಗಿದ್ಯಾ? ಇದು ವೆರಿಕೋಸ್ ವೇನ್ಸ್‌ಗೆ ಕಾರಣವಾಗುತ್ತಾ? – Kannada News | Crossed Legs Side Effects: Myths and Medical Facts

Crossed Legs Side Effects: Myths and Medical FactsImage Credit source: Getty Images ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು (‘ಕ್ರಾಸ್ ಲೆಗ್ ಪೋಷಿಷನ್) ಬಹಳ ಸಾಮಾನ್ಯವಾಗಿದೆ. ಮೊದಲೆಲ್ಲಾ ಈ ರೀತಿ ದೊಡ್ಡವರ ಮುಂದೆ ಕುಳಿತುಕೊಳ್ಳುವುದು ಸರಿಯಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಹಾಗಲ್ಲ, ತಮಗಿಷ್ಟವಾದ ರೀತಿ ಕುಳಿತುಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಈ ರೀತಿ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು (Crossed Legs) ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತಿತ್ತು. ಈ…

Read More

‘ನಾನು ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ’: ಇಡಿ ದಾಳಿ ನಂತರ ನಲಪಾಡ್ ಸ್ಫೋಟಕ ಹೇಳಿಕೆ – Kannada News | Nalapad Speaks Out: ED Raid Timed to Prevent Father N.A. Harriss Ministerial Position

ಬೆಂಗಳೂರು, ಏ.21: ನಲಪಾಡ್ ನಿವಾಸದ ಮೇಲೆ ಇತ್ತೀಚೆಗೆ ನಡೆದ ಇಡಿ ದಾಳಿಯ ಕುರಿತು ಮೊಹಮ್ಮದ್ ಹಾರಿಸ್ ನಲಪಾಡ್ ಅವರು ಪ್ರತಿಕ್ರಿಯೆ ನೀಡಿದ್ದು, ಈ ದಾಳಿ ತಮ್ಮ ತಂದೆ ಎನ್.ಎ. ಹಾರಿಸ್ ಅವರಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ದಾಳಿಯು ತಮ್ಮ ಮತ್ತು ತಮ್ಮ ಸಹೋದರ ಉಮರ್ ಹ್ಯಾರಿಸ್ ನಲಪಾಡ್ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ತಮ್ಮ ತಂದೆ ಸಚಿವ ಸ್ಥಾನ ಪಡೆಯುವುದನ್ನು ತಡೆಯಲು ರಾಜಕೀಯ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮೊಹಮ್ಮದ್…

Read More

ಸುಡು ಬಿಸಿಲಿಗೆ ಬಸವಳಿದ ಮೂಕ ಜೀವಿಗಳಿಗೆ ಈ ರೀತಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ – Kannada News | How can we care stray animals and birds during the summer?

ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಆರೈಕೆImage Credit source: Getty Images ಮನುಷ್ಯರಾದ ನಾವು ಏನೋ ಸರ್ಕಸ್‌ ಮಾಡಿ ಈಗಿರುವ ಸುಡು ಬಿಸಿಲ ತಾಪದಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದೇವೆ. ದಾಹ ನೀಗಿಸಿಕೊಳ್ಳಲು ನೀರು, ಎಳನೀರು ಅಂತೆಲ್ಲಾ ಬಗೆ ಬಗೆಯ ಪಾನೀಯಗಳನ್ನು ಸೇವನೆ ಮಾಡುತ್ತೇವೆ. ಆದರೆ ಬೇಸಿಗೆಯ ತಾಪಕ್ಕೆ (Summer heat) ಬಸವಳಿದ ಮೂಕ ಪ್ರಾಣಿ ಪಕ್ಷಿಗಳು ನಮಗೆ ನೀರು, ಆಹಾರ ಕೊಡಿ, ಸುಡು ಬಿಸಿಲಿಗೆ ಬಸವಳಿದಿದ್ದೇವೆ ರಕ್ಷಣೆ ಕೊಡಿ ಎಂದು ಹೇಗೆ ಕೇಳಿಯಾವು? ಅದರಲ್ಲೂ ಹಲವು ಕಡೆ ನೀರಿನ ಮೂಲಗಳೇ…

Read More

ಎಸ್.ಕೆ. ಉಮೇಶ್ ಬರೆದ ‘ಐ ವಿಟ್ನೆಸ್’ ಕೃತಿ ಆಧಾರಿತ ಸಿನಿಮಾ ‘ಚಾರ್ಜ್‌ಶೀಟ್ 03-08’ – Kannada News | Chargesheet 03 08 Kannada movie based on Eye Witness book by SK Umesh

ನಿಜ ಜೀವನದಲ್ಲಿ ನಡೆದ ಕ್ರೈಂ ಘಟನೆಗಳನ್ನು ಆಧರಿಸಿದ ‘ಚಾರ್ಜ್‌ಶೀಟ್ 03-08’ (Chargesheet 03-08) ಸಿನಿಮಾ ಮೂಡಿಬರುತ್ತಿದೆ. ಸದ್ಯಕ್ಕೆ ಈ ಸಿನಿಮಾದ ಪೋಸ್ಟರ್ ಲಾಂಚ್ ಮಾಡಲಾಗಿದೆ. ಬೆಚ್ಚಿಬೀಳಿಸುವ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ (Kannada Cinema) ನಿರ್ಮಾಣ ಆಗುತ್ತಿದೆ. ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ (SK Umesh) ಬರೆದ ‘ಐ ವಿಟ್ನೆಸ್’ ಕೃತಿ ಆಧರಿಸಿ ಈ ಸಿನಿಮಾವನ್ನು ಮಾಡಲಾಗುತ್ತಿದೆ. 2003ರಲ್ಲಿ ಬೆಂಗಳೂರಿನಲ್ಲಿ ನಡೆದ ನಿಜ…

Read More

ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ ಮಾಟ, ಮಂತ್ರ: ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ – Kannada News | Likely Black Magic Performed Against Siddaramaiah Alleged By Congress Leader KN Rajanna Over CM Silent

ಬೆಂಗಳೂರು, (ಏಪ್ರಿಲ್ 21): ರಾಜ್ಯ ರಾಜಕೀಯದಲ್ಲಿ ಮಾಟ, ಮಂತ್ರ  (Black Magic )ಸದ್ದು ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ (Congress) ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಮೇಲೆ ಮಾಟ ಮಂತ್ರ ಪ್ರಯೋಗ ಆಗಿರಬಹುದು ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಸಂಶಯ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆಎನ್ ರಾಜಣ್ಣ(KN Rajanna), ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ಆಗಿರಬಹುದು ಎಂದಿದ್ದಾರೆ. ಇಂದು (ಏಪ್ರಿಲ್ 21)…

Read More

ಟೀಮ್ ಇಂಡಿಯಾಗೆ 4 ಆಟಗಾರರ ಎಂಟ್ರಿ? – Kannada News | India’s New Test Era: Maiden Call ups for Domestic Stars

ಐಪಿಎಲ್ 2026ರ ಬೆನ್ನಲ್ಲೇ ನಡೆಯಲಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಹೊಸ ಮುಖಗಳಿಗೆ ಅವಕಾಶ ನೀಡಲು ಬಿಸಿಸಿಐ (BCCI) ಚಿಂತಿಸುತ್ತಿದೆ. ಅದರಂತೆ ಅಫ್ಘಾನ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ನಾಲ್ವರು ಹೊಸ ಮುಖಗಳು ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆ ಐವರು ಆಟಗಾರರ ಹೆಸರು ಈ ಕೆಳಗಿನಂತಿದೆ… ಹರ್ಷ್ ದುಬೆ (ವಿದರ್ಭ) ಮಾನವ್ ಸುತಾರ್ (ರಾಜಸ್ಥಾನ್) ಆಖಿಬ್ ನಬಿ (ಜಮ್ಮು-ಕಾಶ್ಮೀರ) ಗುರ್ನೂರ್ ಬ್ರಾರ್ (ಪಂಜಾಬ್) ಪಡಿಕ್ಕಲ್ ಕಂಬ್ಯಾಕ್:…

Read More

ಬೆಂಗಳೂರು ಟೆಕ್ಕಿಯ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ರಾದ್ದಾಂತ; ಬ್ಲ್ಯಾಕ್​ಮೈಲ್, ಆತ್ಮಹತ್ಯೆ ಬೆದರಿಕೆ, ಅಶ್ಲೀಲ ಚಿತ್ರಗಳ ಕರ್ಮಕಾಂಡ – Kannada News | Bengaluru IT Employee’s ₹27L Card Fraud: Blackmail, Suicide Threats & Obscenities

ಐಟಿ ಉದ್ಯೋಗಿಯ ಸಾಂದರ್ಭಿಕ ಚಿತ್ರImage Credit source: AI/Mediaforge/TV9 ಬೆಂಗಳೂರು, ಏಪ್ರಿಲ್ 21: ಐಟಿ ಉದ್ಯೋಗಿಯೊಬ್ಬರು ಕಂಪನಿಯ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ (Corporate credit card) ಅನ್ನು ದುರ್ಬಳಕೆ ಮಾಡಿ ಸಿಕ್ಕಿಬಿದ್ದರೂ ಹಿರಿಯ ಅಧಿಕಾರಿಗಳಿಗೆ ಆತ್ಮಹತ್ಯೆಯ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಎನ್​ಡಿಟಿವಿ ವರದಿಯೊಂದರ ಪ್ರಕಾರ ಆರೋಪಿ ಐಟಿ ಉದ್ಯೋಗಿಯು ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್​ನಿಂದ 27 ಲಕ್ಷ ರೂ ದುರ್ಬಳಕೆ ಮಾಡಿಕೊಂಡಿದ್ದಾರೆ. ಅದನ್ನು ವಾಪಸ್ ಕೇಳಿದ ಕಾರಣಕ್ಕೆ ಹಿರಿಯ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವುದು ತಿಳಿದುಬಂದಿದೆ. ವರ್ತೂರು…

Read More

ಪ್ರಧಾನಿ ಮೋದಿ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ – Kannada News | PM Modi is a terrorist; Mallikarjun Kharge sparks New Controversy BJP Demands Apology

ಚೆನ್ನೈ, ಏಪ್ರಿಲ್ 21: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ (Tamil Nadu Assembly Elections) ಕ್ಷಣಗಣನೆ ಶುರುವಾಗಿದೆ. ಇಂದು ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಏಪ್ರಿಲ್ 23ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಎಐಎಡಿಎಂಕೆಯನ್ನು ಟೀಕಿಸಿದರು. ಈ ವೇಳೆ ಅವರು “ಪ್ರಧಾನಿ ನರೇಂದ್ರ ಮೋದಿ (PM Narendra Modi) ಓರ್ವ ಭಯೋತ್ಪಾದಕ” ಎಂದು ಹೇಳಿಕೆ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ತಮ್ಮ ವಿರೋಧಿಗಳನ್ನು ಬೆದರಿಸುತ್ತಾರೆ…

Read More

ನ್ಯಾಯ ಬೇಕು ಎಂದು 9 ಮಹಡಿಗಳ ಬಿಲ್ಡಿಂಗ್ ಏರಿ ಯುವಕನ ಹೈಡ್ರಾಮಾ: ಮನವೊಲಿಕೆಗೂ ಬಗ್ಗದೆ ಮೊಂಡಾಟ – Kannada News | Youth Climbs 9 Story Building in Devanahalli Demanding Justice and District Collector’s Presence

ದೇವನಹಳ್ಳಿ, ಏಪ್ರಿಲ್​​ 21: ನನಗೆ ನ್ಯಾಯ ಬೇಕು, ಡಿಸಿ ಕರೆಸಿ ಎಂದು ಯುವಕನೋರ್ವ 9 ಮಹಡಿಗಳ ಬಿಲ್ಡಿಂಗ್ ಏರಿ ಹೈಡ್ರಾಮಾ ನಡೆಸಿರುವ ಘಟನೆ ದೇವನಹಳ್ಳಿ ಬೈಪಾಸ್​​ನ ಖಾಸಗಿ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಪೋಕ್ಸೋ ಕೇಸ್​​ನ ಆರೋಪಿ ಆನಂದ್ ಎಂಬ ಯುವಕ ಈ ರೀತಿ ಹುಚ್ಚಾಟ ನಡೆಸಿದ್ದು, ಸ್ಥಳಕ್ಕೆ ಬಂದ ಪೊಲೀಸರ ಮನವೊಲಿಕೆಗೂ ಈತ ಬಗ್ಗಿಲ್ಲ. ಇಲ್ಲಿಗೆ ಡಿಸಿ ಬರಲೇ ಬೇಕು ಎಂದು ಪಟ್ಟುಹಿಡಿದಿರುವ ಈತ, ಸ್ಥಳಕ್ಕೆ ಬಂದ ತಾಯಿಯ ಮನವಿಗೂ ಕ್ಯಾರೇ ಎಂದಿಲ್ಲ. ಎಷ್ಟೇ ಮನವೊಲಿಕೆ ಮಾಡಿದ್ರೂ…

Read More