Kakanmath Temple: ಕಾಕನಮಠ ದೇವಾಲಯ; ಬರೀ ಒಂದರ ಮೇಲೊಂದರಂತೆ ಕಲ್ಲುಗಳನ್ನಿಟ್ಟು ಕಟ್ಟಿದ 115 ಅಡಿ ಎತ್ತರದ ಭವ್ಯ ಶಿವ ದೇವಾಲಯ – Kannada News | Kakanmath Temple Morena: Ancient Shiva Marvel Built Without Cement
ಕಾಕನಮಠ ದೇವಾಲಯImage Credit source: kevinstandagephotography ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಿಹೋನಿಯಾ ಪ್ರದೇಶದಲ್ಲಿರುವ ‘ಕಾಕನಮಠ ದೇವಾಲಯ’ವು ಕೇವಲ ಒಂದು ಪುರಾತನ ಕಟ್ಟಡವಲ್ಲ. ಇದು ವಾಸ್ತುಶಿಲ್ಪದ ಅಚ್ಚರಿ ಮತ್ತು ನಿಗೂಢತೆಗಳ ಸಂಗಮ. ಸುಮಾರು 115 ಅಡಿ ಎತ್ತರದ ಈ ಭವ್ಯ ಶಿವ ದೇವಾಲಯವು ಇಂದಿಗೂ ಇತಿಹಾಸಕಾರರನ್ನು ಮತ್ತು ವಿಜ್ಞಾನಿಗಳನ್ನು ಬೆರಗುಗೊಳಿಸುತ್ತಿದೆ. ತನ್ನ ವಿಶಿಷ್ಟ ನಿರ್ಮಾಣ ಶೈಲಿಯಿಂದಲೇ ಜಗತ್ಪ್ರಸಿದ್ಧಿಯಾಗಿದೆ. ನಿರ್ಮಾಣದ ರಹಸ್ಯ: ವಾಸ್ತುಶಿಲ್ಪದ ಮಾಯಾಲೋಕ: ಈ ದೇವಾಲಯದ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಇದರ ನಿರ್ಮಾಣದಲ್ಲಿ ಸಿಮೆಂಟ್, ಪ್ಲಾಸ್ಟರ್ ಅಥವಾ ಸುಣ್ಣದಂತಹ…