ಹಬ್ಬದ ಮನೆಯಲ್ಲೀಗ ಸೂತಕ: ಮಗಳು ಮನೆಗೆ ಬರುವ ಖುಷಿಯಲ್ಲಿದ್ದವನ ಜೀವ ತೆಗೆದ ಮಾಂಜಾ ದಾರ! – Kannada News | Bike rider killed by manja thread in Bidar; SP vows strict action against illegal kite thread sales
ಬೀದರ್, ಜನವರಿ 14: ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮಂಗಲಗಿ ಗ್ರಾಮದ ಬಳಿ ನಡೆದಿದೆ. ಬಂಬಳಗಿ ಗ್ರಾಮದ ಸಂಜುಕುಮಾರ್ ಹೊಸಮನಿ(48) ಮೃತ ದುರ್ದೈವಿಯಾಗಿದ್ದು, ಪೊಲೀಸ್ ವರದಿಯ ಪ್ರಕಾರ ಸಂಜುಕುಮಾರ್ ಸ್ಥಳೀಯ ಹಾಸ್ಟೆಲ್‌ನಿಂದ ತನ್ನ ಮಗಳನ್ನು ಕರೆತರಲು ತೆರಳುತ್ತಿದ್ದಾಗ ಅವಘಡ ನಡೆದಿದೆ. ಮೃತ ವ್ಯಕ್ತಿ ಲಾರಿ ಕ್ಲೀನರ್ ಆಗಿ ಉದ್ಯೋಗ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ. ಬೆಳಿಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಮೋಟರ್ ಸೈಕಲ್‌ನಲ್ಲಿಪ್ರಯಾಣಿಸುತ್ತಿದ್ದ ವೇಳೆ ತಳಮಡಗಿ…