ಬೆಂಗಳೂರಲ್ಲಿ ಜನವರಿ 16ಕ್ಕೆ ಎಎಂಬಿ ಸಿನಿಮಾಸ್ ಕಾರ್ಯಾರಂಭ; ವಿಶೇಷತೆ ಏನು? – Kannada News | Amb Cinemas Kapali To start from Jan 16 In Gandhi Nagara

ಮಹೇಶ್ ಬಾಬು ಅವರು ಕೇವಲ ನಟನೆ ಮಾತ್ರವಲ್ಲದೆ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ಅವರ ಒಡೆತನದ ಎಎಂಬಿ ಸಿನಿಮಾಸ್ ಕೂಡ ಒಂದು. ಹೈದರಾಬಾದ್ ಸೇರಿದಂತೆ ಕೆಲವೆಡೆ ಅತ್ಯುತ್ತಮ ಸಿನಿಮಾ ಅನುಭವವನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಚೈನ್ ಆಗಿದೆ. ಇದೀಗ ಈ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ಪ್ರಾರಂಭ ಆಗುತ್ತಿದೆ. ಇದಕ್ಕೆ ದಿನಾಂಕ ಫಿಕ್ಸ್ ಆಗಿದೆ. ಮಹೇಶ್ ಬಾಬು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಐತಿಹಾಸಿಕ ಚಿತ್ರಮಂದಿರ ಇದ್ದ ಜಾಗದಲ್ಲಿಯೇ ಮಹೇಶ್ ಬಾಬು ತಮ್ಮ ಹೊಸ ಚಿತ್ರಮಂದಿರವನ್ನು ಪ್ರಾರಂಭಿಸುತ್ತಿದ್ದಾರೆ. ಬೆಂಗಳೂರಿನ ಗಾಂಧಿ ನಗರದಲ್ಲಿ ಹಲವು ಚಿತ್ರಮಂದಿರಗಳು ಇದ್ದವು. ಇದರ ಪೈಕಿ ಕಪಾಲಿ ಚಿತ್ರಮಂದಿರ ಕೂಡ ಒಂದಾಗಿತ್ತು. ಇಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳು ಪ್ರದರ್ಶನ ಕಂಡಿದ್ದವು. ಈಗ ಹೊಸ ಚಿತ್ರಮಂದಿರಕ್ಕೆ ‘ಎಎಂಬಿ ಸಿನಿಮಾಸ್ ಕಪಾಲಿ’ ಎಂದೇ ಹೆಸರಿಡಲಾಗಿದೆ. ಇದು ಡಿಸೆಂಬರ್​​ನಲ್ಲೇ ಆರಂಭ ಆಗಬೇಕಿತ್ತು. ಆದರೆ, ಒಂದು ತಿಂಗಳು ತಡವಾಗಿದೆ.

ಮಹೇಶ್ ಬಾಬು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಜನವರಿ 16ರಂದು ಬೆಂಗಳೂರಿನಲ್ಲಿ AMB ಸಿನಿಮಾಸ್ ಕಾರ್ಯಾರಂಭ ಮಾಡಲಿದೆ. ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಥಿಯೇಟರ್ ಇದು. ಇದನ್ನು ಮಾಡಲು ಎಎಂಬಿ ತಂಡ ಸಾಕಷ್ಟು ಶ್ರಮ ಹಾಕಿದೆ. ಆ ಬಗ್ಗೆ ನನಗೆ ಹೆಮ್ಮೆ ಇದೆ. ನಮ್ಮ ಬೆಂಗಳೂರಿನಲ್ಲಿ ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ನೋಡಲು ಕಾದಿದ್ದೇನೆ’ ಎಂದು ಮಹೇಶ್ ಬಾಬು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಕಾನಿಕ್ ಚಿತ್ರಮಂದಿರ ಇದ್ದ ಜಾಗದಲ್ಲೇ ಹೊಸ ಚಿತ್ರಮಂದಿರ ನಿರ್ಮಿಸಿದ ಮಹೇಶ್ ಬಾಬು

ಈ ಥಿಯೇಟರ್ ದಕ್ಷಿಣ ಭಾರತದ ಮೊಟ್ಟ ಮೊದಲ ಡಾಲ್ಬಿ ವಿಷನ್ ವಿಥ್ ಅಟ್ಮೋಸ್ ಚಿತ್ರಮಂದಿರ ಆಗಿರಲಿದೆ. 60 ಅಡಿ ಅಗಲದ 9 ಸ್ಕ್ರೀನ್​​ಗಳು ಇದರಲ್ಲಿ ಇರಲಿವೆ. ಪ್ರತಿ ಸ್ಕ್ರೀನ್​​ನಲ್ಲಿ 600 ಪ್ರೇಕ್ಷಕರು ಒಮ್ಮೆಲೆ ಸಿನಿಮಾ ನೋಡಬಹುದಾಗಿದೆ. ಸ್ಕ್ರೀನ್ ಗಳು ಅತ್ಯುತ್ತಮ ವಿಡಿಯೋ ಗುಣಮಟ್ಟವನ್ನು ಹೊಂದಿರಲಿದೆಯಂತೆ. ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಈಗಾಗಲೇ ಹೈದರಾಬಾದ್​​ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Budhaditya Yoga: ಮಕರದಲ್ಲಿ ಬುಧಾದಿತ್ಯಯೋಗ; ಈ 5 ರಾಶಿಯವರು ಮುಟ್ಟಿದೆಲ್ಲ ಚಿನ್ನ!

ಬುಧ ಮತ್ತು ಆದಿತ್ಯರು ಖಗೋಳದಲ್ಲಿ ಆಗಾಗ ಸಂಧಿಸುತ್ತಿರುತ್ತಾರೆ. ಇವರ ಸಂಯೋಗದಿಂದ ಬೌದ್ಧಿಕ, ಮಾನಸಿಕ ಹಾಗೂ ಕೌಶಲಗಳ ಆಧಿಕ್ಯವಿರಲಿದೆ. ಆದರೆ ಅವುಗಳ ಸ್ಥಿತಿಯ ಮೇಲೆ ಪರಿಣಾಮದ ವ್ಯತ್ಯಾಸ ಆಗುವುದು. ಬುಧಾದಿತ್ಯಯೋಗವು ಜನವರಿ ಹದಿನೇಳರಿಂದ ಫೆಬ್ರವರಿ ನಾಲ್ಕರ ವರೆಗೆ ಮಕದರಲ್ಲಿ ಇರಲಿದ್ದು ಬುದ್ಧಿ, ವಾಕ್‌ಶಕ್ತಿ, ಆಡಳಿತ ಸಾಮರ್ಥ್ಯ, ಲೆಕ್ಕಾಚಾರ ಮತ್ತು ನಿರ್ಣಯ ಶಕ್ತಿಗೆ ಕಾರಣವಾಗುತ್ತದೆ. ಈ ಯೋಗ ಮಕರ ರಾಶಿಯಲ್ಲಿ ನಿರ್ಮಾಣವಾಗಿದ್ದು, ಶನಿ ಅಧಿಪತ್ಯದ ಕಾರಣ ಫಲಗಳು ತಕ್ಷಣ ವ್ಯಕ್ತವಾಗದೆ ಕಾಲಾನಂತರದಲ್ಲಿ ಶ್ರಮ, ಶಿಸ್ತು ಮತ್ತು ಸಹನೆಯ ಮೂಲಕ ಫಲ ನೀಡುತ್ತವೆ.

ಶುಭ ಫಲರಾಶಿಗಳು:

  • ಮೀನ: ಧೈರ್ಯ, ಪ್ರಯತ್ನ, ಸಂವಹನ ಕ್ಷೇತ್ರದಲ್ಲಿ ಪ್ರಗತಿ. ಬರವಣಿಗೆ, ಮಾಧ್ಯಮ, ವ್ಯವಹಾರಗಳಲ್ಲಿ ಲಾಭ. ಸಹೋದರರಿಂದ ಸಹಕಾರ ದೊರೆಯುತ್ತದೆ.
  • ವೃಷಭ: ಬುದ್ಧಿವಂತಿಕೆ, ವಿದ್ಯಾಭ್ಯಾಸ, ಮಕ್ಕಳ ವಿಷಯದಲ್ಲಿ ಶುಭ. ಸೃಜನಶೀಲತೆ, ಹೂಡಿಕೆ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು.
  • ಕನ್ಯಾ: ಭಾಗ್ಯೋದಯ, ಧರ್ಮ–ವಿದ್ಯೆ, ಗುರುಕೃಪೆ. ದೂರ ಪ್ರಯಾಣ ಲಾಭಕರ. ಜೀವನದ ದಿಕ್ಕು ಸ್ಪಷ್ಟವಾಗಿ ರೂಪುಗೊಳ್ಳುತ್ತದೆ.
  • ತುಲಾ: ಉದ್ಯೋಗ, ಅಧಿಕಾರ, ಆಡಳಿತ ಕ್ಷೇತ್ರದಲ್ಲಿ ಉನ್ನತಿ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಹೆಸರು–ಪ್ರತಿಷ್ಠೆ ಹೆಚ್ಚಳ.
  • ವೃಶ್ಚಿಕ: ಆದಾಯ ವೃದ್ಧಿ, ಆಶಾಪೂರ್ತಿ. ಸ್ನೇಹ ವಲಯ ವಿಸ್ತರಣೆ. ಹಿರಿಯರ ಸಹಕಾರದಿಂದ ಲಾಭಕರ ಯೋಜನೆಗಳು.

ಅಶುಭ ಫಲರಾಶಿಗಳು:

  • ಮಿಥುನ: ಷಷ್ಠದಲ್ಲಿ ಶತ್ರುಕಾಟ, ಸಾಲ, ಆರೋಗ್ಯ ಸಮಸ್ಯೆ. ಉದ್ಯೋಗ ಒತ್ತಡ. ಕಾನೂನು ವಿಷಯಗಳಲ್ಲಿ ಎಚ್ಚರ ಅಗತ್ಯ.
  • ಕರ್ಕಾಟಕ: ಸಪ್ತಮದಲ್ಲಿ ದಾಂಪತ್ಯ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ. ಅಹಂಕಾರ, ಮಾತಿನ ಗೊಂದಲದಿಂದ ದೂರ ಸಂಭವ.
  • ಸಿಂಹ : ರವಿಯ ರಾಶಿಯಗಿದ್ದರೂ ಅಷ್ಟಮಸ್ಥಾನವಾಗಿದ್ದು ಅನಿರೀಕ್ಷಿತ ವಿಘ್ನ, ಭಯ, ಮಾನಸಿಕ ಒತ್ತಡ. ಆರೋಗ್ಯ ಕಡೆ ಹೆಚ್ಚು ಜಾಗ್ರತೆ ಅಗತ್ಯ.
  • ಧನು: ದ್ವಾದಶದ ಈ ರಾಶಿಯವರಿಗೆ ಆರ್ಥಿಕ ವೆಚ್ಚ ಹೆಚ್ಚಳ, ನಿದ್ರಾಭಂಗ, ಏಕಾಂತ ಭಾವನೆ. ವಿದೇಶ ಸಂಬಂಧಿತ ಚಿಂತನೆ. ಫಲ ವಿಳಂಬ.

ಮಿಶ್ರ ಫಲ ರಾಶಿಗಳು:

  • ಮಕರ: ಈ ರಾಶಿಯಲ್ಲಿಯೇ ಇರುವ ಬುಧಾದಿತ್ಯರಿಂದ ಆತ್ಮವಿಶ್ವಾಸ, ವ್ಯಕ್ತಿತ್ವ ಬಲ. ಆದರೆ ಅಹಂಕಾರ, ಆರೋಗ್ಯದ ನಿರ್ಲಕ್ಷ್ಯ ಸಾಧ್ಯ. ಶ್ರಮದ ನಂತರ ಫಲ.
  • ಕುಂಭ: ಹಣ ಮತ್ತು ವಾಕ್‌ ಶಕ್ತಿಯ ವೃದ್ಧಿ. ಆದಾಯ ಇದ್ದರೂ ಕುಟುಂಬ ಕಲಹ ಸಾಧ್ಯ. ಮಾತಿನಲ್ಲಿ ಸಂಯಮ ಅಗತ್ಯ.
  • ಮೇಷ: ಈ ರಾಶಿಯವರಿಗೆ ಮನೆ, ಆಸ್ತಿ ಲಾಭ. ಒಳಮನಸ್ಸಿನ ಅಶಾಂತಿ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ.

– ಲೋಹಿತ ಹೆಬ್ಬಾರ್

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 15ರ ದಿನಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಇತರರ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ನಿಮಗೆ ಆಹ್ವಾನ ಬಂದರೂ ಹೋಗಬೇಡಿ; ಅವರು ತಮ್ಮ ನಿರೀಕ್ಷೆಯನ್ನು ನಿಮ್ಮ ಮೇಲೆ ಹೇರಬಹುದು. ಹಣದ ವಿಷಯದಲ್ಲಿ ಜಾಣತನ ತೋರಿದರೆ ಬಾಕಿ ವ್ಯವಹಾರಗಳು ಸುಧಾರಣೆಯ ಹಾದಿಗೆ ಬರುತ್ತವೆ. ಪ್ರೀತಿಯಲ್ಲಿ ಇರುವವರು ಮನದ ಮಾತುಗಳನ್ನು ನೇರವಾಗಿ ಹೇಳಿದರೆ ವಿಶ್ವಾಸ ಗಟ್ಟಿಯಾಗುತ್ತದೆ. ಮದುವೆ ಬಗ್ಗೆ ಯೋಚಿಸುತ್ತಿರುವವರಿಗೆ ಕುಟುಂಬದ ಅನುಮೋದನೆ ಸಿಗುವ ಸೂಚನೆಗಳಿವೆ. ಕುಟುಂಬದಲ್ಲಿ ಉಂಟಾಗುವ ಸಣ್ಣ ಉದ್ವಿಗ್ನತೆಯು ಸಹನೆ ಮತ್ತು ಸಮತೋಲನದಿಂದ ಕಡಿಮೆಯಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ನಿಲುವು ಸ್ಪಷ್ಟವಾಗಿದ್ದರೆ ಒತ್ತಡ ಕಡಿಮೆಯಾಗುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಸ್ನೇಹಿತರು ಹಾಗೂ ಸಂಬಂಧಿಗಳೊಂದಿಗೆ ಇರುವ ಅಂತರ ನಿಧಾನವಾಗಿ ಕಡಿಮೆಯಾಗುತ್ತದೆ; ನೀವು ತೋರಿಸುವ ಮೃದು ಧೋರಣೆ ಮನೆಯಲ್ಲಿಯ ವಾತಾವರಣವನ್ನೂ ಸುಧಾರಿಸುತ್ತದೆ. ಈ ಹಿಂದಿನ ಅಸಮಾಧಾನಗಳನ್ನು ಬಿಟ್ಟು ಸಂಭಾಷಣೆ ಪುನರ್‌ ಆರಂಭವಾಗುವುದು ಮನಸಿಗೆ ನೆಮ್ಮದಿ ನೀಡುತ್ತದೆ. ಹಣದ ಹರಿವು ಸಾಮಾನ್ಯವಾಗಿದ್ದರೂ ಲೆಕ್ಕಾಚಾರದಲ್ಲಿ ಜಾಗರೂಕತೆ ಅವಶ್ಯಕ. ಪ್ರೀತಿಯಲ್ಲಿ ಇರುವವರಿಗೆ ಇಂದು ಮನದ ಮಾತು ಹಂಚಿಕೊಳ್ಳಲು ಸೂಕ್ತ ಸಮಯ ಆಗಿರುತ್ತದೆ. ಮದುವೆಗೆ ಯೋಚಿಸುವವರಿಗೆ ಹೊಸ ಮಾತುಕತೆಗಳು ಶುಭ ಸೂಚನೆ ನೀಡುತ್ತವೆ. ಕೆಲಸದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಮಹತ್ವ ಸಿಗುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಸಂಕೀರ್ಣ ವಿಷಯಗಳನ್ನು ಬಹಳ ಸರಳವಾಗಿ ವಿವರಿಸುವ ನಿಮ್ಮ ಕೌಶಲ ಇಂದು ಹೆಚ್ಚು ಮೆಚ್ಚುಗೆ ಪಡೆಯುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಬೇಕಿದ್ದ ಪರಿಕರಗಳು ಅಥವಾ ಸಂಪನ್ಮೂಲಗಳು ದೊರೆಯುವುದರಿಂದ ಕೆಲಸದ ವೇಗ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ನಿಯಮಿತ ಸಂಗ್ರಹಕ್ಕೆ ಒತ್ತು ಕೊಡುತ್ತೀರಿ; ರೆಕರಿಂಗ್ ಡೆಪಾಸಿಟ್ ಅಥವಾ ಮ್ಯೂಚುವಲ್ ಫಂಡ್‌ನ ಎಸ್‌ಐಪಿ ಬಗ್ಗೆ ಈಗ ತೆಗೆದುಕೊಳ್ಳುವ ನಿರ್ಧಾರ ಭವಿಷ್ಯಕ್ಕೆ ಬಲ ನೀಡುತ್ತದೆ. ಕುಟುಂಬದಲ್ಲಿ ಸಲಹೆ ಕೇಳುವವರು ಹೆಚ್ಚಾಗುತ್ತಾರೆ. ಪ್ರೀತಿ ಜೀವನದಲ್ಲಿ ನೇರವಂತಿಕೆ ವಿಶ್ವಾಸವನ್ನು ಗಟ್ಟಿ ಮಾಡುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 15ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಈ ದಿನ ನಿಮ್ಮ ಹೊಸ ಯೋಜನೆಗಳು ವೇಗವಾಗಿ ಬೆಳೆಯುತ್ತವೆ. ಉದ್ಯೋಗಸ್ಥರಿಗೆ ನಿರ್ದಿಷ್ಟ ಗುರಿ ತಲುಪಲು ನಿರೀಕ್ಷಿತ ಪ್ರಮಾಣದ ಸಹಾಯ ಸಿಗಲಿದೆ. ಅಂಗಡಿ ಮಾಲೀಕರು ಮತ್ತು ಬ್ಯೂಟಿ ಸಲೂನ್ ನಡೆಸುತ್ತಾ ಇರುವವರಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರಿಂದ ಸಂತೃಪ್ತ ಲಾಭ ದೊರೆಯಲಿದೆ. ರೈತರಿಗೆ ಹವಾಮಾನವು ಹಿತಕರವಾಗಿ ಪರಿಣಮಿಸಿ ಬೆಳೆ ಹಾಗೂ ಮಾರಾಟದಲ್ಲಿ ಸುಧಾರಣೆ ತರುತ್ತದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಹೊಸ ವಿಧಾನಗಳನ್ನು ಅಳವಡಿಸಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ಕುಟುಂಬದಲ್ಲಿ ಸದಸ್ಯರೊಂದಿಗೆ ಸಂವಹನ ಸ್ಪಷ್ಟ ಆಗುವುದು ಸಂತೋಷ ಹೆಚ್ಚಿಸುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಈ ದಿನ ನಿಮ್ಮ ಮುಖ್ಯ ಕಾರ್ಯಗಳಲ್ಲಿ ಯಶಸ್ಸು ಕಾಣಲಿದೆ. ಪೊಲೀಸ್ ಮತ್ತು ಸೇನೆಯಲ್ಲಿ ಇರುವವರು ನಿಯೋಜನೆ ಆಗಿರುವ ಕೆಲಸಗಳಲ್ಲಿ ಶಿಸ್ತಿನಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ಆಹಾರ ಸೇವೆ ಅಥವಾ ಕ್ಯಾಂಟೀನ್- ಕಾಂಟ್ರ್ಯಾಕ್ಟ್ ಕೆಲಸದವರು ಒಪ್ಪಂದ ನವೀಕರಣ ಆದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಮತ್ತು ಗ್ರಾಹಕರಿಂದ ಉತ್ತಮ ವಿಮರ್ಶೆ ಪಡೆಯುತ್ತೀರಿ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಬಂದರೂ ಸಹೋದ್ಯೋಗಿಗಳ ಸಹಕಾರದಿಂದ ಒತ್ತಡ ಕಡಿಮೆಯಾಗುತ್ತದೆ. ಕುಟುಂಬದೊಳಗಿನ ಸಮಸ್ಯೆಗಳಿಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುತ್ತೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮ ಜೀವನಶೈಲಿಯಲ್ಲಿ ಕೆಲವು ಧಾರ್ಮಿಕ ವಿಧಾನಗಳನ್ನು ಅಳವಡಿಸಿಕೊಳ್ಳಲಿದ್ದೀರಿ. ಯಾವುದೆಲ್ಲ ನಿಮಗೆ ಹಿಂಸೆ- ಕಿರಿಕಿರಿ ನೀಡುತ್ತಿತ್ತೋ ಅದಕ್ಕಾಗಿ ಇತರರನ್ನು ದೂರುವುದು ನಿಲ್ಲಿಸಲಿದ್ದೀರಿ. ವಾಸ್ತವ ನೆಲೆಗಟ್ಟಿನಲ್ಲಿ ಮುಂದೆ ಸಾಗುವುದಕ್ಕೆ ಆದ್ಯತೆ ಕೊಡುತ್ತೀರಿ. ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಉದ್ದೇಶಗಳನ್ನು ಸ್ಪಷ್ಟಗೊಳಿಸುವುದಕ್ಕೆ ಉತ್ತಮ ವೇದಿಕೆ ದೊರೆಯಲಿದೆ. ಹಣದ ಸಮಸ್ಯೆಯಲ್ಲಿ ಸಿಲುಕಿದವರಿಗೆ ಅದರಿಂದ ಹೊರಬರುವ ಮಾರ್ಗೋಪಾಯ ಗೋಚರ ಆಗಲಿದೆ. ಮುಖ್ಯವಾಗಿ ಸಾಂಸಾರಿಕ ಜೀವನ ಸಂತೃಪ್ತಿಯಿಂದ ಇರುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 15ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಇಂದು ಮನೆಗೆ ಬರುವ ಸಂಬಂಧಿಗಳು ಹರ್ಷ ತುಂಬಿದ ವಾತಾವರಣಕ್ಕೆ ಕಾರಣ ಆಗುತ್ತಾರೆ. ವಿದ್ಯಾರ್ಥಿಗಳು ಗಮನ ಕೇಂದ್ರೀಕರಿಸುವುದರಿಂದ ಪರೀಕ್ಷಾ ಸಿದ್ಧತೆ ಸರಿಯಾದ ದಾರಿಗೆ ಬರುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಕಾರ್ಯವಿಧಾನ ಬದಲಾವಣೆ ಹೊಸ ಅವಕಾಶ ತರುತ್ತದೆ, ಮೇಲಧಿಕಾರಿಗಳ ನಿರೀಕ್ಷೆ ಪೂರೈಸಲು ಸ್ಪಷ್ಟ ಸಂವಹನ ಅಗತ್ಯ. ವ್ಯವಹಾರ ನಡೆಸುವವರಿಗೆ ಗ್ರಾಹಕರಿಂದ ಬಂದ ಪ್ರತಿಕ್ರಿಯೆ ಮುಂದಿನ ಯೋಜನೆಗೆ ಮಾರ್ಗದರ್ಶಿ ಆಗುತ್ತದೆ. ಫ್ರೀಲಾನ್ಸರ್‌ಗಳಿಗೆ ಹೊಸ ಪ್ರಾಜೆಕ್ಟ್‌ಗಳ ವಿಚಾರಣೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಈ ದಿನ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತವೆ. ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ಹೊಸ ಪ್ರಯತ್ನಗಳಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ. ವ್ಯವಹಾರಸ್ಥರಿಗೆ ಹೊಸ ಗ್ರಾಹಕರು ಹಾಗೂ ಒಪ್ಪಂದಗಳಿಂದ ಲಾಭ ಕಾಣಲಿದೆ. ವಿದ್ಯಾರ್ಥಿಗಳು ಹೊಸ ಪಾಠವನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಫ್ರೀಲಾನ್ಸರ್‌ಗಳಿಗೆ ಸೃಜನಾತ್ಮಕ ಯೋಜನೆಗಳಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳುತ್ತವೆ, ಹಿರಿಯರ ಮಾರ್ಗದರ್ಶನ ಉಪಯುಕ್ತವಾಗಲಿದೆ. ಪ್ರೀತಿಯ ಸಂಬಂಧಗಳಲ್ಲಿ ಪರಸ್ಪರ ನಂಬಿಕೆಯಿಂದ ವಿಶ್ವಾಸವನ್ನು ಗಟ್ಟಿ ಆಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಈ ದಿನ ನಿಮ್ಮ ತೀಕ್ಷ್ಣ ಅಭಿಪ್ರಾಯ ಮತ್ತು ವಿಶ್ಲೇಷಣಾ ಶಕ್ತಿಯು ವಿವಿಧ ಕ್ಷೇತ್ರದಲ್ಲಿ ಪ್ರಮುಖ ಅವಕಾಶಗಳನ್ನು ತರುತ್ತದೆ. ಉದ್ಯೋಗಸ್ಥರು ಹೊಸ ಯೋಜನೆಗಳೊಂದಿಗೆ ಮೆಚ್ಚುಗೆಯನ್ನು ಪಡೆಯುತ್ತಾರೆ. ವ್ಯವಹಾರಸ್ಥರು ಹೊಸ ಒಪ್ಪಂದಗಳು ಮತ್ತು ಗ್ರಾಹಕರ ವಿಶ್ವಾಸದಿಂದ ಹೆಚ್ಚಿನ ಆದಾಯದ ಮೂಲ ಹಾಗೂ ಲಾಭ ಪಡೆಯುತ್ತಾರೆ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಫ್ರೀಲಾನ್ಸರ್‌ಗಳು ಕಠಿಣ- ಸವಾಲು ಎನಿಸಿದ ಪ್ರಾಜೆಕ್ಟ್‌ಗಳಲ್ಲಿ ಯಶಸ್ಸು ಪಡೆಯುತ್ತಾರೆ. ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನದಿಂದ ಸಮಸ್ಯೆಗಳು ಪರಿಹಾರವಾಗುತ್ತವೆ.

ಲೇಖನ- ಸ್ವಾತಿ ಎನ್.ಕೆ.

Source link

ಶಿಡ್ಲಘಟ್ಟ ಕಮಿಷನರ್​​ಗೆ ಅಶ್ಲೀಲವಾಗಿ ನಿಂದಿಸಿ ಬೆದರಿಕೆ: ಕಾಂಗ್ರೆಸ್ ಮುಖಂಡನಿಗೆ ಶುರುವಾಯ್ತು ಬಂಧನದ ಭೀತಿ – Kannada News | Sidlaghatta Municipal Commissioner Amrutha Gowda Files Complaint Against Congress Leader Rajeev Gowda for threatened With obscene words

ಚಿಕ್ಕಬಳ್ಳಾಪುರ, (ಜನವರಿ 14): ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟನಗರಸಭೆ ಪೌರಾಯುಕ್ತೆ (Sidlaghatta Municipal Commissioner) ಅಮೃತಗೌಡ ಅವರಿಗೆ ಫೋನ್​​ನಲ್ಲಿ ಅಶ್ಲೀಲವಾಗಿ ಬೈದು ಪ್ರಾಣ ಬೆದರಿಕೆ ಹಾಕಿದ ಕಾಂಗ್ರೆಸ್​ ಮುಖಂಡ ರಾಜೀವ್ ಗೌಡಗೆ ಸಂಕಷ್ಟ ಎದುರಾಗಿದೆ. ಅಶ್ಲೀಲವಾಗಿ ಬೈದು ನಿಂದಿಸಿರುವುದಕ್ಕೆ ನೊಂದ ಪೌರಾಯುಕ್ತೆ ಅಮೃತಾಗೌಡ ಅವರು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಪೊಲೀಸ್ ಠಾಣೆಗೆ ತೆರಳಿ ರಾಜೀವ್ ಗೌಡ ವಿರುದ್ಧ ದೂರು ದಾಖಲಿಸಿದ್ದಾರೆ. ಬಿಎನ್​​ಎಸ್ 79, 132, 352,199, 54 ಅಡಿಯಲ್ಲಿ ರಾಜೀವ್ ಗೌಡ ವಿರುದ್ಧ ದೂರು ದಾಖಲಿಸಿದ್ದು, ಕೇಂದ್ರ ಸ್ಥಾನದಲ್ಲಿ ಏಕಾಂಗಿಯಾಗಿ ಇದ್ದೇನೆ. ಹೀಗಾಗಿ ಮುಂದಿನ ಆಗು ಹೋಗುಗಳಿಗೆ ರಾಜೀವ್ ಗೌಡ ಅವರೇ ಹೊಣೆ. ಇನ್ನು ಸೂಕ್ತ ರಕ್ಷಣೆ ನೀಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಈ ಘಟನೆಯಿಂದ ನನಗೆ ಮಾನಸಿಕವಾಗಿ ತೀವ್ರ ಆಘಾತವಾಗಿದೆ. ಆತ್ಮಸ್ಥೈರ್ಯ ಕುಂದಿಸಿದ್ದಾರೆ. ಕೇಂದ್ರ ಸ್ಥಾನದಲ್ಲಿ ಒಬ್ಬಳೇ ವಾಸವಿದ್ದೇನೆ. ಸೂಕ್ತ ರಕ್ಷಣೆ ನೀಡಬೇಕು. ಹಾಗೇ ಅಶ್ಲೀಲವಾಗಿ ನಿಂದಿಸಿ ಬೆದರಿಕೆ ಹಾಕಿರುವ ರಾಜೀವ್ ಗೌಡ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದೀಗ ದೂರು ದಾಖಲಾಗುತ್ತಿದ್ದಂತೆಯೇ ರಾಜೀವ್ ಗೌಡಗೆ ಸಂಕಷ್ಟ ಎದುರಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಾರಾ ಎನ್ನುವುದು ಮುಂದಿರುವ ಪ್ರಶ್ನೆ.

ಇದನ್ನೂ ನೋಡಿ: ಅಶ್ಲೀಲವಾಗಿ ನಿಂದಿಸಿ ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ, ಕಣ್ಣೀರಿಟ್ಟ ಪೌರಾಯುಕ್ತೆ

ಆಯುಕ್ತೆ ಅಮೃತಾ ಗೌಡ ಹೇಳಿದ್ದಿಷ್ಟು

ಇನ್ನು ಈ ಪ್ರಕರಣ ಸಂಬಂಧ ಟಿವಿ9 ಜತೆ ಮಾತನಾಡಿರುವ ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತಾ ಗೌಡ,
ಶಿಷ್ಟಾಚಾರದ ಪ್ರಕಾರವೇ ನಾವು ಬ್ಯಾನರ್​​ ತೆರವುಗೊಳಿಸಿದ್ದೇವೆ. ಯಾವುದೇ ಒತ್ತಡದಿಂದ ನಾವು ಬ್ಯಾನರ್​​ ತೆರವುಗೊಳಿಸಿರಲಿಲ್ಲ. ಬ್ಯಾನರ್ ತೆರವುಗೊಳಿಸುವಾಗ ಕೌನ್ಸಿಲರ್​ಗೆ ಮಾಹಿತಿ ನೀಡಿದ್ದು, ಬೇರೆ ಸ್ಥಳದಲ್ಲಿ ಬ್ಯಾನರ್​ ಹಾಕಿಕೊಳ್ಳುವಂತೆ ನಾವು ಹೇಳಿದ್ದೆವು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ನಮಗೆ ಬಹಳ ನೋವಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಈ ಬಗ್ಗೆ ರಾಜೀವ್ ಗೌಡ ಹೇಳಿದ್ದೇನು?

ಬ್ಯಾನರ್ ತೆರವುಗೊಳಿಸಿದ್ದಕ್ಕೆ ಅಧಿಕಾರಿಗೆ ಅಶ್ಲೀಲವಾಗಿ ಬೈದು ನಿಂದನೆ ಮಾಡಿರುವ ಆಡಿಯೋ ವೈರಲ್ ಆಗಿರುವ ಮಾತನಾಡಿರುವ ರಾಜೀವ್ ಗೌಡ, ನಾನು ಅಧಿಕಾರಿಯ ಜೊತೆ ಕೆಟ್ಟದಾಗಿ ಮಾತನಾಡಿಲ್ಲ. ಅಧಿಕಾರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಉದ್ದೇಶ ಪೂರಕವಾಗಿ ನಾನು ಮಾತನಾಡಿಲ್ಲ. ಆಡಿಯೋದಲ್ಲಿ ಮಾತನಾಡಿರುವುದು ನಾನೇ. ಆದರೆ ಕೆಟ್ಟದಾಗಿ ಮತನಾಡಿಲ್ಲ. ಅಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಬೇಸರದಿಂದ ಮತನಾಡಿದ್ದೇನೆ. ಆಯುಕ್ತಗೆ ನಾನು ಬೆಂಕಿ ಹಚ್ಚುತ್ತೇನೆ ಎಂದು ಹೇಳಿಲ್ಲ. ಬದಲಿಗೆ ಫ್ಲೆಕ್ಸ್ ಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ್ದೇನೆ ಅಷ್ಟೇ. ನನ್ನದು ತಪ್ಪಾಗಿದ್ದರೆ ಏನೇ ಕ್ರಮ ತೆಗೆದುಕೊಂಡರು ಎದುರಿಸುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

ವಿಪಕ್ಷಗಳು ಆಕ್ರೋಶ

ಶಿಡ್ಲಘಟ್ಟದಲ್ಲಿ ನಗರಸಭೆ ಪೌರಾಯುಕ್ತೆಗೆ ಅಶ್ಲೀಲವಾಗಿ ಬೈದು ಅವಾಜ್ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಕೂಡಲೇ ಬಂಧಿಸಬೇಕೆಂದು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆಗ್ರಹಿಸಿದ್ದಾರೆ. ಇನ್ನು ಈ ಪ್ರಕರಣ ಸಂಬಂಧ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ಅವರೇ ಖುದ್ದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರವಾಣಿ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಮಹಿಳಾ ಅಧಿಕಾರಿಗಳಿಗೆ ಹೀಗಾದರೆ ಹೇಗೆ? ಅವರು ಹೇಗೆ ಕಾರ್ಯನಿರ್ವಹಿಸಬೇಕು? ಎಂದು ಪ್ರಶ್ನಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಇತ್ತೀಚೆಗೆ ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ ‘ಕಲ್ಟ್’ ಸಿನಿಮಾದ ಪ್ರಚಾರ ಸಭೆ ನಡೆದಿತ್ತು. ಈ ವೇಳೆ, ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಸಿನಿಮಾ ಪ್ರಚಾರದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಟ್ರಾಫಿಕ್ ಸಮಸ್ಯೆಗೆ ಉಂಟಾಯಿತು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಕಚೇರಿಗೆ ತಂದಿಟ್ಟಿದ್ದರು. ಈ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ರಾಜೀವ್ ಗೌಡರ ಬೆಂಬಲಿಗ ಅಪ್ಸರ್‌ಗೆ ಪೌರಾಯುಕ್ತರು ಮಾಹಿತಿ ನೀಡಿದ್ದರು. ಆದ್ರೆ, ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ರಾಜೀವ್ ಗೌಡ ತೀವ್ರ ಆಕ್ರೋಶಗೊಂಡು ಪೌರಾಯುಕ್ತರಿಗೆ ಕರೆ ಮಾಡಿ ಜಗಳವಾಡಿದ್ದಾರೆ. ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. “ನಮ್ಮ ಬ್ಯಾನರ್ ಬಿಚ್ಚಿಸಿದರೆ ಬೆಂಕಿ ಹಚ್ಚಿಸುವೆ. ನನ್ನ ಒಳ್ಳೆಯತನ ನೋಡಿದ್ದೀರಿ, ಕೆಟ್ಟತನ ನೋಡಿಲ್ಲ” ಎಂದು ಹರಿಹಾಯ್ದಿದ್ದಾರೆ. ಸದ್ಯ ಅಶ್ಲೀಲವಾಗಿ ಬೈದಿರುವ ರಾಜೀವ್ ಗೌಡನ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜೀವ್ ಗೌಡನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:52 pm, Wed, 14 January 26

Source link

ಅಡವಿಟ್ಟಾಗ ಅಸಲಿ, ಬ್ಯಾಂಕ್​​ನಿಂದ ಬಿಡಿಸಿಕೊಂಡಾಗ ನಕಲಿ ಚಿನ್ನ: SBI ಬ್ಯಾಂಕ್ನಿಂದ ಮೋಸ – Kannada News | Bengaluru SBI Gold Loan Fraud: Couple Receives Fake Gold Chain from Mahalakshmi Layout Branch

ಬೆಂಗಳೂರು, ಜನವರಿ 14: ಇತ್ತೀಚೆಗೆ ಮೈಸೂರಿನಲ್ಲಿ ಕೆನರಾ ಬ್ಯಾಂಕ್​​ನಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ ಚಿನ್ನದಲ್ಲಿ ಮೋಸವೆಸಗಿದ್ದ ಆರೋಪ ಕೇಳಿಬಂದಿತ್ತು. ಇದೀಗ ಅಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ (bangaluru) ನಡೆದಿದೆ. ಅಡವಿಟ್ಟು ಬಿಡಿಸಿಕೊಂಡಿದ್ದ ಚಿನ್ನದ ಚೈನ್​ ಪರಿಶೀಲಿಸಿದಾಗ ನಕಲಿ ಎಂಬುವುದು ಪತ್ತೆ ಆಗಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ಎಸ್​​ಬಿಐ (SBI) ಶಾಖೆಯಲ್ಲಿ ಘಟನೆ ನಡೆದಿದ್ದು, ದಂಪತಿ ಮೋಸ ಹೋಗಿದ್ದಾರೆ. ಸದ್ಯ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನಡೆದದ್ದೇನು?

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ಎಸ್​​ಬಿಐ ಶಾಖೆಯಲ್ಲಿ 1 ವರ್ಷದ ಹಿಂದೆ ಮುಕೇಶ್ ಮತ್ತು ಪೂರ್ಣಿಮಾ ದಂಪತಿ ಚಿನ್ನದ ಚೈನ್ ಬ್ಯಾಂಕ್​ನಲ್ಲಿ ಅಡವಿಟ್ಟು 2 ಲಕ್ಷ ರೂ ಪಡೆದಿದ್ದರು. ಅಸಲು, ಬಡ್ಡಿ ಸೇರಿ ಪ್ರತಿ ತಿಂಗಳು 11,700 ರೂ. ಪಾವತಿಸುತ್ತಿದ್ದರು. ನಿನ್ನೆ ಸಾಲದ ಮೊತ್ತ ಸಂಪೂರ್ಣ ಪಾವತಿಸಿ ಚೈನ್ ಬಿಡಿಸಿಕೊಂಡಿದ್ದರು.

ಇದನ್ನೂ ಓದಿ: ಹುಣಸೂರು ಚಿನ್ನದಂಗಡಿ ಕಳ್ಳತನ: ಪೊಲೀಸ್ರು ಚಾಪೆ ಕೆಳಗೆ ನುಗ್ಗಿದ್ರೆ, ರಂಗೋಲಿ ಕೆಳಗಡೆ ತೂರಿದ ದರೋಡೆಕೋರರು

ದುಡ್ಡಿನ ಅವಶ್ಯಕತೆ ಹಿನ್ನೆಲೆ ದಂಪತಿ ಮಾರ್ವಾಡಿ ಅಂಗಡಿಗೆ ತೆರಳಿದ್ದಾರೆ. ಅಲ್ಲಿ ಪರಿಶೀಲನೆ ಮಾಡಿ ನೋಡಿದಾಗ ಅದು ನಕಲಿ ಚಿನ್ನ ಎಂಬುವುದು ಪತ್ತೆ ಆಗಿದೆ. ಒಂದು ಕ್ಷಣ ಆತಂಕಕ್ಕೆ ಒಳಗಾದ ದಂಪತಿ, ಕೂಡಲೇ ಮಹಾಲಕ್ಷ್ಮೀ ಲೇಔಟ್​ನ ಎಸ್​​ಬಿಐ ಶಾಖೆಗೆ ತೆರಳಿದ್ದಾರೆ. ಈ ಬಗ್ಗೆ ಬ್ಯಾಂಕ್​ನಲ್ಲಿ ಪ್ರಶ್ನಿಸಿದಾಗ ಸಿಬ್ಬಂದಿ ದಂಪತಿ ಆರೋಪ ನಿರಾಕರಿಸಿದ್ದು, ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಹೀಗಾಗಿ ಸದ್ಯ ದಂಪತಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಸ್​ನಲ್ಲಿ 22 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕದ್ದಿದ್ದ ಕಳ್ಳಿಯ ಬಂಧನ

ಕೆಎಸ್​​ಆರ್​​ಟಿಸಿ ಬಸ್​ನಲ್ಲಿ 22 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದ ಮಹಿಳೆ ವನಜಾಕ್ಷಿ ಎಂಬುವವರು ದೇವಸ್ಥಾನಕ್ಕೆ ಹೋಗುವ ಸಲುವಾಗಿ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಕ್ರಾಸ್​ನಿಂದ ಸೂಲಿಬೆಲೆಗೆ ತೆರಳಲು ಬಸ್ ಹತ್ತುತ್ತಿದ್ದ ವೇಳೆ, ಚಿನ್ನಾಭರಣ ಕಳವು ಮಾಡಿದ್ದರು.

ಇದನ್ನೂ ಓದಿ: ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್: ಅದು ನಮ್ಮ ಬಂಗಾರ ವಾಪಸ್​ ನೀಡಿ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು, ಆಂಧ್ರ ಪ್ರದೇಶದ ಕುಪ್ಪಂ ಮೂಲದ ಮೀನಾಕ್ಷಿಯನ್ನ ಬಂಧಿಸಿದ್ದರು. ಬಂಧಿತ ಮಹಿಳೆಯಿಂದ 22 ಲಕ್ಷ ರೂ ಮೌಲ್ಯದ 240 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.

ವರದಿ: ನಟರಾಜ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:09 pm, Wed, 14 January 26

Source link

IND vs NZ: 2ನೇ ಪಂದ್ಯದಲ್ಲೂ ವಿಕೆಟ್ ಗಿಫ್ಟ್; ಪವರ್ ಕಳೆದುಕೊಂಡ್ರಾ ಹಿಟ್​ಮ್ಯಾನ್?

Source link

ರಷ್ಯನ್ ತೈಲ, ಕಲ್ಲಿದ್ದಲು ಖರೀದಿ: ಭಾರತವನ್ನು ಹಿಂದಿಕ್ಕಿದ ಟರ್ಕಿ – Kannada News | Russian fuel exports, India’s share come down in 2025 December, as Türkiye replaces for 2nd place

ನವದೆಹಲಿ, ಜನವರಿ 14: ಭಾರತವು ರಷ್ಯಾದಿಂದ ತೈಲ ಪಡೆಯುತ್ತಿರುವುದು (Russian Oil) ಡಿಸೆಂಬರ್​ನಲ್ಲಿ ಗಣನೀಯವಾಗಿ ಕಡಿಮೆ ಆಗಿದೆ. ನವೆಂಬರ್​ಗೆ ಹೋಲಿಸಿದರೆ ರಷ್ಯನ್ ತೈಲ ಖರೀದಿಯಲ್ಲಿ ಶೇ. 29ರಷ್ಟು ಇಳಿಮುಖವಾಗಿದೆ. ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ (ಸಿಆರ್​ಇಎ) ಸಂಸ್ಥೆಯ ಇತ್ತೀಚಿನ ವರದಿಯಲ್ಲಿ ಈ ಅಂಕಿಅಂಶಗಳಿವೆ. ಡಿಸೆಂಬರ್ ತಿಂಗಳಲ್ಲಿ ಭಾರತದ ಒಟ್ಟಾರೆ ಕಚ್ಛಾ ತೈಲ (crude oil) ಆಮದು ಹೆಚ್ಚಾದರೂ ರಷ್ಯನ್ ತೈಲ ಆಮದಿನಲ್ಲಿ ಕಡಿಮೆ ಆಗಿರುವುದು ಗಮನಾರ್ಹ.

ರಿಲಾಯನ್ಸ್​ನ ಜಾಮ್​ನಗರ್ ರಿಫೈನರಿಯು ಡಿಸೆಂಬರ್ ತಿಂಗಳಲ್ಲಿ ರಷ್ಯನ್ ತೈಲ ಖರೀದಿಯಲ್ಲಿ ಶೇ. 49ರಷ್ಟು ಕಡಿಮೆಗೊಳಿಸಿದೆ. ಇತರ ಭಾರತೀಯ ರಿಫೈನರಿಗಳೂ ಕೂಡ ಆಮದು ತಗ್ಗಿಸಿವೆ. ಕೆಪ್ಲರ್ ವರದಿ ಪ್ರಕಾರ ನವೆಂಬರ್​ನಲ್ಲಿ ಭಾರತೀಯ ರಿಫೈನರಿಗಳು 1.8 ಮಿಲಿಯನ್ ಬ್ಯಾರಲ್​ನಷ್ಟು ಕಚ್ಛಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದ್ದವು. ಡಿಸೆಂಬರ್​ನಲ್ಲಿ ಈ ಆಮದು 1.2 ಮಿಲಿಯನ್ ಬ್ಯಾರಲ್​ಗೆ ಇಳಿಕೆ ಆಗಿದೆ.

ಇದನ್ನೂ ಓದಿ: ರಫ್ತು ಸಜ್ಜಿತ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ನಂ. 1; ಕರ್ನಾಟಕದ ಸ್ಥಾನವೆಷ್ಟು?

ರಷ್ಯನ್ ತೈಲ ಖರೀದಿಯಲ್ಲಿ ಭಾರತವನ್ನು ಹಿಂದಿಕ್ಕಿದ ಟರ್ಕಿ

ರಷ್ಯಾದಿಂದ ಅತಿಹೆಚ್ಚು ಪಳೆಯುಳಿಕೆ ಇಂಧನ (Fossil Fuel) ಖರೀದಿಯಲ್ಲಿ ಚೀನಾ ನಂತರ ಭಾರತ ಇತ್ತು. ಇದೀಗ ಟರ್ಕಿ ದೇಶವು ಭಾರತವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಸಿಆರ್​ಇಎ ವರದಿ ಪ್ರಕಾರ ಭಾರತವು ರಷ್ಯಾದಿಂದ 24,150 ಕೋಟಿ ರೂ ಮೌಲ್ಯದಷ್ಟು ಪಳೆಯುಳಿಕೆ ಇಂಧನವನ್ನು ಖರೀದಿ ಮಾಡಿತ್ತು.

ಇಲ್ಲಿ ಪಳೆಯುಳಿಕೆ ಇಂಧನ ಅಥವಾ ಫಾಸಿಲ್ ಫುಯೆಲ್ ಎಂದರೆ ಕಚ್ಛಾ ತೈಲ, ಕಲ್ಲಿದ್ದಲು ಒಳಗೊಳ್ಳುತ್ತವೆ. ರಷ್ಯಾದಿಂದ ಭಾರತ ಖರೀದಿಸಿರುವ ಪಳೆಯುಳಿಕೆ ಇಂಧನದಲ್ಲಿ ಶೇ 78ರಷ್ಟು ಕಚ್ಛಾ ತೈಲವೇ ಇದೆ. 18,900 ಕೋಟಿ ರೂ ಮೌಲ್ಯದ ತೈಲವನ್ನು ಭಾರತವು ರಷ್ಯಾದಿಂದ ಡಿಸೆಂಬರ್​ನಲ್ಲಿ ಆಮದು ಮಾಡಿಕೊಂಡಿದೆ. ಕಲ್ಲಿದ್ದಲು 4,450 ಕೋಟಿ ರೂ, ತೈಲ ಉತ್ಪನ್ನಗಳು 860 ಕೋಟಿ ರೂ ಮೌಲ್ಯದಷ್ಟನ್ನು ಭಾರತ ಆಮದು ಮಾಡಿಕೊಂಡಿದೆ.

ಇದನ್ನೂ ಓದಿ: ಇನ್ನು 10-20 ವರ್ಷ ಮಾತ್ರ ಮನುಷ್ಯರು ಕೆಲಸ ಮಾಡಬೇಕಾಗಬಹುದು: ಇಲಾನ್ ಮಸ್ಕ್ ಹೀಗ್ಯಾಕಂದ್ರು ಗೊತ್ತಾ?

ರಷ್ಯಾದಿಂದ ರಫ್ತಾಗುವ ಒಟ್ಟೂ ಪಳೆಯುಳಿಕೆ ಇಂಧನದಲ್ಲಿ ಚೀನಾದ ಪಾಲು ಶೇ. 48ರಷ್ಟಿದೆ. 63,000 ಕೋಟಿ ರೂ ಮೌಲ್ಯದ ಆಮದು ಚೀನಾದಿಂದ ಆಗುತ್ತದೆ. ನಂತರದ ಸ್ಥಾನ ಟರ್ಕಿ ಮತ್ತು ಭಾರತದ್ದು. ಯೂರೋಪಿಯನ್ ಯೂನಿಯನ್ ಶೇ 11ರಷ್ಟು ಆಮದು ಮಾಡಿಕೊಳ್ಳುತ್ತದೆ. ರಷ್ಯಾದಿಂದ ಇಯು ಹೆಚ್ಚಾಗಿ ಎಲ್​ಎನ್​ಜಿ ಮತ್ತು ಪೈಪ್​ಲೈನ್ ಗ್ಯಾಸ್ ಅನ್ನು ಅತಿಹೆಚ್ಚು ಖರೀದಿ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಇರುಮುಡಿ ಹೊತ್ತು ಸಾಗಿದ ಶಿವಣ್ಣ ದಂಪತಿ – Kannada News | Shivarajkumar carries sacred Irumudi in Bejjavalli Ayyappa Temple

ನಟ ಶಿವರಾಜ್​ಕುಮಾರ್ (Shivarajkumar) ಅವರು ಅಯ್ಯಪ್ಪ ಸ್ವಾಮಿಯ ಭಕ್ತರು. ಹಲವು ಬಾರಿ ಅವರು ಮಾಲೆ ಧರಿಸಿದ್ದರು. ಈ ವರ್ಷವೂ ಅವರು ಮಾಲೆ ಧರಿಸಿ ಇರುಮುಡಿ (Irumudi) ಹೊತ್ತಿದ್ದಾರೆ. ಅವರ ಜೊತೆ ಪತ್ನಿ ಗೀತಾ ಕೂಡ ಸಾಥ್ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶ್ರೀಕ್ಷೇತ್ರ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ (Bejjavalli Ayyappa Temple) ದೇವಾಲಯಕ್ಕೆ ಅವರು ಇರುಮುಡಿ ಹೊತ್ತು ಸಾಗಿದ್ದಾರೆ. ವಿಶ್ವ ಸಂತೋಷ ಭಾರತಿ ಗುರೂಜಿ ನೇತೃತ್ವದಲ್ಲಿ ಮೆರವಣಿಗೆ ಸಾಗಿದೆ. ಮಕರ ಸಂಕ್ರಮಣದ ಅಂಗವಾಗಿ ಅಯ್ಯಪ್ಪನ ಪೂಜೆಗೂ ಮುನ್ನ ಮೆರವಣಿಗೆ ಮಾಡಲಾಗಿದೆ. ವಿವಿಧ ಆಭರಣಗಳ ಸಮೇತ, ಉತ್ಸವ ಮೂರ್ತಿಯನ್ನ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತರಲಾಗಿದೆ. ಬೆಜ್ಜವಳ್ಳಿ ಅಯ್ಯಪ್ಪನ ಉತ್ಸವದ ಹಿನ್ನೆಲೆಯಲ್ಲಿ ಇಂದು (ಜನವರಿ 14) ಭಕ್ತರ ದಂಡು ನೆರೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version