ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಚನ್ನಗಿರಿ ತಾಲೂಕಿನ ಹಲವೆಡೆ ಅಕಾಲಿಕ ಮಳೆ – Kannada News | Channagiri Taluk Villages Experience Summer Showers, Offering Respite from Heat

ದಾವಣಗೆರೆ, ಏಪ್ರಿಲ್​​ 21: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಕಾಲಿಕ ಮಳೆ ಸುರಿದಿದ್ದು, ಬೇಸಿಗೆಯ ಬಿಸಿಲಿನ ಬೇಗೆಯಿಂದ ಹೈರಾಣಾಗಿದ್ದ ಜನರಿಗೆ ತಂಪೆರೆದಿದೆ. ಚನ್ನಗಿರಿ ತಾಲೂಕಿನ ಮಾವಿನಹೊಳೆ, ರಾಜಗೊಂಡನಹಳ್ಳಿ, ದಂಡಿಗೇನಹಳ್ಳಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ತಾಪಮಾನ ಗಣನೀಯವಾಗಿ ಏರಿಕೆ ಕಂಡಿತ್ತು. ಇದರ ಪರಿಣಾಮವಾಗಿ ಬಿಸಿಲಿನ ಝಳಕ್ಕೆ ಜನಜೀವನ ತತ್ತರಿಸಿ ಹೋಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸುರಿದ ಈ ಬೇಸಿಗೆ ಮಳೆಯು ಜಿಲ್ಲೆಯ ಜನರಿಗೆ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಿದೆ. ರೈತರು ಮತ್ತು ಸಾರ್ವಜನಿಕರು ಈ ಮಳೆಯಿಂದಾಗಿ ಕೊಂಚ ನಿರಾಳರಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ಐಪಿಎಲ್ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ LSG ಆಟಗಾರ – Kannada News | IPL 2026: LSG’s Josh Inglis ties the knot

ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಆಟಗಾರ ಜೋಶ್ ಇಂಗ್ಲಿಸ್ (Josh Inglis) ತಮ್ಮ ದೀರ್ಘಕಾಲದ ಗೆಳತಿ ಮೇಗನ್ ಕಿನ್ಕಾರ್ಟ್ ಅವರನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಸ್ಟ್ರೇಲಿಯಾದ ಈ ಸ್ಪೋಟಕ ಬ್ಯಾಟರ್ ಏಪ್ರಿಲ್ 18, 2026 ರಂದು ಪಶ್ಚಿಮ ಆಸ್ಟ್ರೇಲಿಯಾದ ಮಾರ್ಗರೆಟ್ ರಿವರ್‌ನಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

Source link

ಸರ್ಕಾರಿ ಹಾಸ್ಟೆಲ್​ನಲ್ಲಿ ಖಾಸಗಿ ಕೋಚಿಂಗ್ ಸೆಂಟರ್ ಓಪನ್! ಲಂಚದ ಆಸೆಗೆ ಬಿದ್ದು ಸರ್ಕಾರಿ ಕಟ್ಟಡ ಬಾಡಿಗೆ ನೀಡಿದ್ರಾ ಅಧಿಕಾರಿಗಳು? – Kannada News | Yadgir Hostel Scam: Private Coaching Center Illegally Operates in Govt Building

ಸರ್ಕಾರಿ ಹಾಸ್ಟೆಲ್ ನಲ್ಲಿ ಕೋಚಿಂಗ್ ಸೆಂಟರ್ ಓಪನ್!

ಯಾದಗಿರಿ, ಏಪ್ರಿಲ್ 21: ಜಿಲ್ಲೆಯಲ್ಲಿ ಸರ್ಕಾರಿ ಕಟ್ಟಡದ ದುರುಪಯೋಗಪಡಿಸಿಕೊಂಡ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿ (Yadgir) ತಾಲೂಕಿನ ಲಿಂಗೇರಿ ಸ್ಟೇಷನ್ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಖಾಸಗಿ ವ್ಯಕ್ತಿಯೊಬ್ಬ ಅಕ್ರಮವಾಗಿ ಕೋಚಿಂಗ್ ಸೆಂಟರ್ ಆರಂಭಿಸಿರುವ ಆರೋಪ ಕೇಳಿಬಂದಿದೆ.

ಪ್ರತಿ ತಿಂಗಳು ತಲಾ 5 ಸಾವಿರ ರೂ ಶುಲ್ಕ!

ದೇವಿಂದ್ರಪ್ಪ ಎಂಬಾತ ಅಧಿಕಾರಿಗಳಿಗೆ ಹಣ ನೀಡಿ ಹಾಸ್ಟೆಲ್ ಕಟ್ಟಡವನ್ನು ಬಾಡಿಗೆ ಪಡೆದು ಬೇಸಿಗೆ ಶಿಬಿರದ ಹೆಸರಿನಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಕೋಚಿಂಗ್ ನೀಡುತ್ತಿದ್ದಾನೆ ಎಂಬ ಆರೋಪವಿದೆ. ಹಾಸ್ಟೆಲ್ ಮಕ್ಕಳಿಗೆ ಮಾತ್ರವಲ್ಲದೆ ಹೊರಗಿನ ಮಕ್ಕಳಿಂದಲೂ ಪ್ರತಿ ತಿಂಗಳು ತಲಾ 5 ಸಾವಿರ ರೂಪಾಯಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ವೇಳೆಯೂ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಕೊಠಡಿಗಳಲ್ಲಿ ಉಳಿಸಲಾಗುತ್ತಿದೆ ಎಂಬ ಆರೋಪವೂ ಇದೆ.

ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ

ಸಾಮಾಜಿಕ ಕಾರ್ಯಕರ್ತ ಉಮೇಶ್ ಹಾಗೂ ಸ್ಥಳೀಯ ನಾಗರಾಜ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರಿ ಕಟ್ಟಡವನ್ನು ದುರುಪಯೋಗ ಪಡಿಸಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತನ್ನದೇ ಪಿಂಡ ಬಿಟ್ಟು ಸನ್ಯಾಸಿ ಆದ ಮಾಡೆಲ್; ಸಿಕ್ಕಿತು ಹೊಸ ಹೆಸರು – Kannada News | Model Harsha Richariya Becomes Sanyasi: Own Pinda Daana and New Name Swami Harshanand Giri

ಪ್ರಯಾಗರಾಜ್‌ನಲ್ಲಿ ನಡೆದ ‘ಮಹಾಕುಂಭ’ದ ನಂತರ ಸುದ್ದಿ ಆದವರು ಮಾಡೆಲ್-ಪ್ರಭಾವಿ ಹರ್ಷ ರಿಚಾರಿಯಾ. ಅವರು ಈಗ ತಮ್ಮದೇ ಆದ ಪಿಂಡವನ್ನು ಬಿಟ್ಟು ಮಾಡಿ ಸನ್ಯಾಸಿ ಆಗಿದ್ದಾರೆ. ಹರ್ಷ ರಿಚಾರಿಯಾ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ತಮ್ಮ ಗುರುಗಳ ಸಮ್ಮುಖದಲ್ಲಿ ತಮ್ಮ ಪಿಂಡವನ್ನು ಬಿಟ್ಟು ಸನ್ಯಾಸ ಸ್ವೀಕರಿಸಿದರು. ಅವರಿಗೆ 32 ವರ್ಷ ವಯಸ್ಸಾಗಿದ್ದು, ಈ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದು ಅಚ್ಚರಿ ತಂದಿದೆ. ಉಜ್ಜಯಿನಿಯ ಮೌನ್ ತೀರ್ಥ ಆಶ್ರಮದಲ್ಲಿ ಮಹಾಮಂಡಲೇಶ್ವರ ಸುಮಾನಂದ ಮಹಾರಾಜರ ಸಮ್ಮುಖದಲ್ಲಿ ಈ ಆಚರಣೆಯನ್ನು ನಡೆಸಲಾಯಿತು. ಇಲ್ಲಿ, ಸಂಪ್ರದಾಯದ ಪ್ರಕಾರ, ಅವರನ್ನು ಸನ್ಯಾಸಕ್ಕೆ ದೀಕ್ಷೆ ನೀಡಲಾಯಿತು.

ಈ ಆಚರಣೆಯ ನಂತರ, ಹರ್ಷ ರಿಚಾರಿಯಾ ತಮ್ಮದೇ ಆದ ಹೊಸ ಹೆಸರನ್ನು ಪಡೆದುಕೊಂಡಿದ್ದಾರೆ. ಈಗ ಅವರನ್ನು ಸ್ವಾಮಿ ಹರ್ಷಾನಂದ ಗಿರಿ ಎಂದು ಕರೆಯಲಾಗುತ್ತದೆ. ಆಚರಣೆ ಪೂರ್ಣಗೊಂಡ ನಂತರ, ಈಗ ಹೊಸ ಜೀವನ ಪ್ರಾರಂಭವಾಗಿದೆ ಎಂದು ಹೇಳಿದರು. ಕಳೆದ ಒಂದೂವರೆ ವರ್ಷದಿಂದ ಅವರು ಅಧ್ಯಾತ್ಮದ ಹಾದಿಯಲ್ಲಿ ನಡೆಯುತ್ತಿದ್ದರು. ಈಗ ಅವರು ಸನ್ಯಾಸಿ ಆಗಿದ್ದಾರೆ.

ಹರ್ಷ ರಿಚಾರಿಯಾ ಅವರು ಎಲ್ಲವನ್ನೂ ಬಿಟ್ಟು ಹೋಗಬೇಕೆಂದು ಯೋಚಿಸಿದರು. ಆಗ ಅವರಿಗೆ ಸನ್ಯಾಸತ್ವದ ಆಲೋಚನೆ ಬಂತು. ಅವರು ಬಹಳ ದಿನಗಳಿಂದ ಸನ್ಯಾಸ ಸ್ವೀಕರಿಸುವ ಬಗ್ಗೆ ಯೋಚಿಸುತ್ತಿದ್ದರು. ಈಗ ಅದು ಸಾಧ್ಯವಾಗಿದೆ. ‘ಇಲ್ಲಿಯವರೆಗೆ ನಾನು ಕುಟುಂಬ, ಪೋಷಕರು ಮತ್ತು ನನ್ನ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ಈಗ ಗುರುಜಿಯವರ ಮಾರ್ಗದರ್ಶನದಲ್ಲಿ, ನಾನು ಧರ್ಮ ಮತ್ತು ಸಮಾಜದ ಬಗ್ಗೆ ಯೋಚಿಸುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ:  ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ

ಹಿಂದೂ ಧರ್ಮದಲ್ಲಿ, ಪೂರ್ವಜರ ಶಾಂತಿಗಾಗಿ ನಡೆಸುವ ಪ್ರಮುಖ ಆಚರಣೆಗಳಲ್ಲಿ ಪಿಂಡ ಬಿಡುವುದಕ್ಕೆ ವಿಶೇಷ ಪ್ರಾಮುಖ್ಯತೆ ಇದೆ ಎನ್ನಬಹುದು.  ಪೂರ್ವಜರ ಆತ್ಮಗಳ ತೃಪ್ತಿಗಾಗಿ ಮತ್ತು ಮೋಕ್ಷವನ್ನು ಪಡೆಯಲು ಮಾತ್ರ ಪಿಂಡವನ್ನು ಬಿಡಲಾಗುತ್ತದೆ ಎಂಬ ಉಲ್ಲೇಖ ಗರುಡ ಪುರಾಣದಲ್ಲಿ ಇದೆ. ಕೆಲವು ಸಂದರ್ಭಗಳಲ್ಲಿ  ಇದಕ್ಕೆ ವಿನಾಯಿತಿ ಇದೆ.  ತನ್ನ ಲೌಕಿಕ ಜೀವನವನ್ನು ತ್ಯಜಿಸುವ ಸಂಕೇತವಾಗಿ ಸ್ವತಃ ಪಿಂಡ ಬಿಡಬಹುದು. ಅಲ್ಲದೆ, ಗಯಾದಂತಹ ಧಾರ್ಮಿಕ ಸ್ಥಳಗಳಲ್ಲಿ, ಕೆಲವರು ತಾವು ಇನ್ನೂ ಜೀವಂತವಾಗಿರುವಾಗ ಸ್ವತಃ ಪಿಂಡವನ್ನು ಬಿಡುತ್ತಾರೆ. ಇದರಿಂದಾಗಿ ಅವರು ನಂತರ ತಮ್ಮ ಕುಟುಂಬಗಳ ಮೇಲೆ ಜವಾಬ್ದಾರಿಯನ್ನು ಹೊರಬೇಕಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ – Kannada News | Political Irony in Tamil Nadu: Rahul’s Words Draw Cheers from Opponents

ಚೆನ್ನೈ, ಏಪ್ರಿಲ್ 21: ತಮಿಳುನಾಡು ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ಎಲ್ಲಾ ಪ್ರಮುಖ ಪಕ್ಷಗಳ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪ್ರಚಾರ ಕಾರ್ಯ ನಡೆಸಿದ್ದು, ಭಾಷಣದ ಸಂದರ್ಭದಲ್ಲಿ ಡಿಎಂಕೆಯನ್ನು ಹೊಗಳುವುದು ಬಿಟ್ಟು ಎಐಎಡಿಎಂಕೆಯನ್ನು ಹೊಗಳಿದ್ದಾರೆ. ತಮಿಳುನಾಡು ಅಭಿವೃದ್ಧಿಯಲ್ಲಿ ಎಐಎಡಿಎಂಕೆ ಪ್ರಮುಖ ಪಾತ್ರವಹಿಸಿದೆ ಎಂದರು. ಬಳಿಕ ಮಾತನಾಡಿದ ಅವರು, ಎಐಎಡಿಎಂಕೆ ಮೂಲಕ ಬಿಜೆಪಿ ಈಗ ತಮಿಳುನಾಡಿಗೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಎಐಎಡಿಎಂಕೆ ಭ್ರಷ್ಟಾಚಾರದಲ್ಲಿ ಮುಳುಗಿದೆ, ಅದಕ್ಕಾಗಿಯೇ ಪಳನಿಸ್ವಾಮಿ ಬಿಜೆಪಿಗೆ ಶರಣಾಗಿದ್ದಾರೆ ಎಂದು ಅವರು ಹೇಳಿದರು.

ಕನ್ಯಾಕುಮಾರಿ ಜಿಲ್ಲೆಯು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿರುವ ಜಿಲ್ಲೆಯಾಗಿದೆ. ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ ಆರು ವಿಧಾನಸಭಾ ಸ್ಥಾನಗಳಿವೆ: ನಾಗರಕೋಯಿಲ್, ಕೊಳಚೆಲ್, ಪದ್ಮನಾಭಪುರಂ, ವಿಲವನ್‌ಕೋಡ್, ಕಿಳ್ಳಿಯೂರು ಮತ್ತು ಕನ್ಯಾಕುಮಾರಿ. ಈ ಸ್ಥಾನಗಳಲ್ಲಿ, ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ, ಎಐಎಡಿಎಂಕೆ ಒಂದು ಸ್ಥಾನ ಮತ್ತು ತಮಿಳು ಮನಿಲಾ ಕಾಂಗ್ರೆಸ್ ಒಂದು ಸ್ಥಾನವು ಎನ್‌ಡಿಎಯನ್ನು ಪ್ರತಿನಿಧಿಸುತ್ತದೆ. ಕಾಂಗ್ರೆಸ್ ಮೂರು, ಡಿಎಂಕೆ ಎರಡು ಮತ್ತು ಸಿಪಿಎಂ ಒಂದು ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊಲೆ ಅಪರಾಧಿ ಬೆಂಬಲಕ್ಕೆ ನಿಂತ ಕಾಂಗ್ರೆಸ್! ವಿನಯ್ ಕುಲಕರ್ಣಿ ಬೆಂಬಲಿಸಿ ಮೌನ ಮೆರವಣಿಗೆಗೆ ನಿರ್ಧಾರ – Kannada News | Vinay Kulkarni Case: Congress to Hold Massive Silent Protest March in Dharwad on April 25 in Support of Convicted MLA

ವಿನಯ್ ಕುಲಕರ್ಣಿ ಬೆಂಬಲಿಸಿ ಮೌನ ಮೆರವಣಿಗೆಗೆ ಕಾಂಗ್ರೆಸ್ ಸಭೆಯಲ್ಲಿ ನಿರ್ಧಾರImage Credit source: tv9

ಹುಬ್ಬಳ್ಳಿ, ಏಪ್ರಿಲ್ 21: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಬೆಂಬಲಕ್ಕೆ ಕಾಂಗ್ರೆಸ್ (Congress) ಪಕ್ಷ ನಿಂತಿದೆ. ಏಪ್ರಿಲ್ 25ರಂದು ಧಾರವಾಡದಲ್ಲಿ ವಿನಯ್ ಕುಲಕರ್ಣಿ ಪರವಾಗಿ ಬೃಹತ್ ಮೌನ ಮೆರವಣಿಗೆ ನಡೆಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಈ ಪ್ರತಿಭಟನೆಯ ರೂಪರೇಷೆಗಳ ಬಗ್ಗೆ ಚರ್ಚಿಸಲು ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ತಡರಾತ್ರಿ ಪ್ರಮುಖ ನಾಯಕರ ಸಭೆ ನಡೆಯಿತು.

ಹುಬ್ಬಳ್ಳಿ-ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ವಿನಯ್ ಕುಲಕರ್ಣಿಗೆ ರಾಜಕೀಯ ಪಿತೂರಿಯಿಂದ ಶಿಕ್ಷೆಯಾಗಿದೆ ಎಂದು ಆರೋಪಿಸಲಾಯಿತು. ಈ ಹಿನ್ನೆಲೆಯಲ್ಲಿ ಪಕ್ಷದ ಶಕ್ತಿಯನ್ನು ಪ್ರದರ್ಶಿಸಲು ಮತ್ತು ಕುಲಕರ್ಣಿ ಅವರಿಗೆ ನೈತಿಕ ಬೆಂಬಲ ನೀಡಲು ಏಪ್ರಿಲ್ 25ರಂದು ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ.

ಯೋಗೀಶ್ ಗೌಡ ಕೊಲೆ ಪ್ರಕರಣದ ಹಿನ್ನೆಲೆ

2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಜಿಮ್‌ವೊಂದರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಇದು ಆಸ್ತಿ ವಿಚಾರಕ್ಕಾಗಿ ನಡೆದ ಕೊಲೆ ಎಂದು ಬಿಂಬಿತವಾಗಿತ್ತಾದರೂ, ನಂತರ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ (CBI) ಇದೊಂದು ರಾಜಕೀಯ ಪ್ರೇರಿತ ಕೊಲೆ ಎಂದು ಹೇಳಿತ್ತು. ಸುದೀರ್ಘ ತನಿಖೆಯ ನಂತರ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2026 ರ ಏಪ್ರಿಲ್ 17 ರಂದು ವಿನಯ್ ಕುಲಕರ್ಣಿ ಮತ್ತು ಇತರ 16 ಮಂದಿಯನ್ನು ದೋಷಿಗಳು ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಾಂಗ್ರೆಸ್ ಸಭೆಯ ವಿಡಿಯೋ

ಇದನ್ನೂ ಓದಿ: ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ

ಈಗಾಗಲೇ ಜೈಲಿನಲ್ಲಿರುವ ವಿನಯ್ ಕುಲಕರ್ಣಿ ಅವರ ವಿರುದ್ಧದ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ವಕೀಲರು ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಇದನ್ನು ರಾಜಕೀಯವಾಗಿ ಎದುರಿಸಲು ಸಜ್ಜಾಗಿದ್ದು, 25ರ ಮೆರವಣಿಗೆಯ ಮೂಲಕ ಆಕ್ರೋಶ ಹೊರಹಾಕಲು ಸಜ್ಜಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tilak Varma: 18 ವರ್ಷಗಳ ಬಳಿಕ ಮೂಡಿಬಂದ ಸ್ಫೋಟಕ ಸೆಂಚುರಿ – Kannada News | Tilak Varma equaled Sanath Jayasuriya’s Century Record

ಇದಾದ ಬಳಿಕ ಸಚಿನ್ ತೆಂಡೂಲ್ಕರ್ (66), ರೋಹಿತ್ ಶರ್ಮಾ (52), ಲಿಂಡ್ಲ್​ ಸಿಮನ್ಸ್ (61), ಸೂರ್ಯಕುಮಾರ್ ಯಾದವ್ (49), ಕ್ಯಾಮರೋನ್ ಗ್ರೀನ್ (47), ಕ್ವಿಂಟನ್ ಡಿಕಾಕ್ (53) ಸೆಂಚುರಿಗಳನ್ನು ಸಿಡಿಸಿದ್ದರು. ಆದರೆ ಯಾರಿಗೂ ಸಹ ಜಯಸೂರ್ಯ ಹೆಸರಿನಲ್ಲಿರುವ ಸ್ಫೋಟಕ ಶತಕದ ದಾಖಲೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ.

Source link

National Civil Services Day 2026: ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಆರಿಸುವುದರ ಉದ್ದೇಶವೇನು? – Kannada News | National Civil Services Day 2026: Why is National Civil Services Day celebrated on April 21?

ರಾಷ್ಟ್ರೀಯ ನಾಗರಿಕ ಸೇವೆಗಳ ದಿನImage Credit source: Pinterest

ನಾಗರಿಕ ಸೇವಾ ಇಲಾಖೆಗಳು (Civil Service Department) ಸರ್ಕಾರದ ನೀತಿಗಳನ್ನು ಜಾರಿಗೊಳಿಸುವ, ಆಡಳಿತವನ್ನು ಸಮರ್ಥವಾಗಿ ನಿಭಾಯಿಸುವ ಮತ್ತು ಸಾರ್ವಜನಿಕ ಸೇವೆಗಳನ್ನು ಒದಗಿಸುವ ಮುಖ್ಯ ಕಾರ್ಯವನ್ನು ಮಾಡುತ್ತದೆ. ಒಟ್ಟಾರೆಯಾಗಿ ನಾಗರಿಕ ಸೇವಾ ಇಲಾಖೆಯು ದೇಶದ ಆಡಳಿತ ಬೆನ್ನೆಲುಬಾಗಿದ್ದು, ದೇಶ ಅಭಿವೃದ್ಧಿಯತ್ತ ಸಾಗಲು ಪ್ರತಿಯೊಂದು ನಾಗರಿಕ ಸೇವಾ ಇಲಾಖೆಯ ಪಾತ್ರ ದೊಡ್ಡದು. ಅಲ್ಲದೆ ದೇಶದ ಆಡಳಿತ ವ್ಯವಸ್ಥೆ ಸರಿಯಾದ ರೀತಿಯಲ್ಲಿ ನಡೆಯಲು ನಾಗರಿಕ ಸೇವಾ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಸಹ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಹೀಗೆ ರಾಷ್ಟ್ರದ ಪ್ರಗತಿಗಾಗಿ ಕೆಲಸ ಮಾಡುವ ಮತ್ತು ನೀತಿ ನಿರೂಪಣೆಗೆ ಮಹತ್ವದ ಕೊಡುಗೆ ನೀಡುವ ಸಾರ್ವಜನಿಕ ಸೇವಾ ಅಧಿಕಾರಿಗಳಿಗೆ ಗೌರವವನ್ನು ಸಲ್ಲಿಸುವ ಉದ್ದೇಶದಿಂದ ಪ್ರತಿವರ್ಷ ಏಪ್ರಿಲ್‌ 21 ರಂದು ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳೀಯೋಣ ಬನ್ನಿ.

ರಾಷ್ಟ್ರೀಯ ನಾಗರಿಕ ಸೇವೆಗಳ ದಿನದ ಇತಿಹಾಸವೇನು?

ಸ್ವತಂತ್ರ ಭಾರತದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1947 ರಲ್ಲಿ ನವದೆಹಲಿಯ ಮೆಟ್‌ಕಾಫ್ ಹೌಸ್‌ನಲ್ಲಿ ಆಡಳಿತಾತ್ಮಕ ಸೇವೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಅವರು ಅಧಿಕಾರಿಗಳನ್ನು ದೇಶದ “ಉಕ್ಕಿನ ಚೌಕಟ್ಟು” ಎಂದು ಕರೆದರು ಮತ್ತು ಭಾರತೀಯ ಆಡಳಿತ ಸೇವೆಯು ರಾಷ್ಟ್ರದ ಅಡಿಪಾಯವನ್ನು ಬಲಪಡಿಸುವ ಬೆನ್ನೆಲುಬಾಗಿದೆ ಎಂದು ಒತ್ತಿ ಹೇಳಿದರು.ಈ ದಿನದ ಸವಿನೆನಪಿಗಾಗಿ ಏಪ್ರಿಲ್ 21 ರಂದು ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಆಚರಣೆಯು ಪ್ರಾರಂಭವಾಯಿತು. ಮೊದಲ ಬಾರಿಗೆ 2006 ರಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ಈ ದಿನವನ್ನು ಆಚರಿಸಲಾಯಿತು, ಅಂದಿನಿಂದ ಈ ದಿನದ ಆಚರಣೆಯು ಚಾಲ್ತಿಯಲ್ಲಿದೆ.

ರಾಷ್ಟ್ರೀಯ ನಾಗರಿಕ ಸೇವಾ ದಿನವನ್ನು ಆಚರಿಸುವ ಉದ್ದೇಶವೇನು?

ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಐಎಎಸ್, ಐಪಿಎಸ್, ಐಆರ್‌ಎಸ್, ಐಎಫ್‌ಎಸ್ ಮತ್ತು ಇತರ ನಾಗರಿಕ ಸೇವಕರನ್ನು ಗುರುತಿಸಿ, ಅವರ ಸೇವೆಗಳನ್ನು ಗೌರವಿಸುವುದು ರಾಷ್ಟ್ರೀಯ ನಾಗರಿಕ ಸೇವಾ ದಿನದ ಉದ್ದೇಶವಾಗಿದೆ. ಈ ದಿನವು ಅಧಿಕಾರಿಗಳನ್ನು ಉತ್ತಮ ಆಡಳಿತ ಸೇವೆಗಳನ್ನು ಒದಗಿಸಲು ಪ್ರೋತ್ಸಾಹಿಸುತ್ತದೆ ಮತ್ತು ನಾಗರಿಕ ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ತೋರುವಂತೆ ಯುವಜನರನ್ನು ಪ್ರೋತ್ಸಾಹಿಸಲಾಗುತ್ತದೆ.

ಇದನ್ನೂ ಓದಿ: ಭಾರತದಲ್ಲಿರುವ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ನಿಮಗೆಷ್ಟು ಗೊತ್ತು?

ರಾಷ್ಟ್ರೀಯ ನಾಗರಿಕ ಸೇವೆಗಳ ದಿನದ ಮಹತ್ವವೇನು?

  • ಈ ದಿನವು ಅಧಿಕಾರಿಗಳಿಗೆ ಅವರ ಜವಾಬ್ದಾರಿಗಳನ್ನು ನೆನಪಿಸುತ್ತದೆ, ಸಾರ್ವಜನಿಕರು ಮತ್ತು ಆಡಳಿತದ ನಡುವೆ ವಿಶ್ವಾಸವನ್ನು ಬಲಪಡಿಸುತ್ತದೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುತ್ತದೆ ಮತ್ತು ಯುವಜನರು ನಾಗರಿಕ ಸೇವೆಗೆ ಸೇರಲು ಪ್ರೇರೇಪಿಸುತ್ತದೆ.
  • ರಾಷ್ಟ್ರೀಯ ನಾಗರಿಕ ಸೇವಾ ದಿನವು ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಾಗಿ ಸಾವಿರಾರು ಸರ್ಕಾರಿ ಅಧಿಕಾರಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸೇವೆಗೆ ಗೌರವವಾಗಿದೆ. ಈ ದಿನವು ದೇಶದ ಆಡಳಿತವನ್ನು ಮತ್ತಷ್ಟು ಬಲಪಡಿಸಲು ಸ್ಫೂರ್ತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.
  • ರಾಷ್ಟ್ರೀಯ ನಾಗರಿಕ ಸೇವಾ ದಿನವು ಭಾರತದ ಅಭಿವೃದ್ಧಿಯಲ್ಲಿ ನಾಗರಿಕ ಸೇವಕರ ಪ್ರಯತ್ನಗಳನ್ನು ಗುರುತಿಸಲು ಮತ್ತು ಶ್ಲಾಘಿಸಲು ಮತ್ತು ಅದರ ನಾಗರಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ಮೀಸಲಾಗಿರುವ ಸಂದರ್ಭವಾಗಿದೆ. ಈ ದಿನವು ಸಾರ್ವಜನಿಕ ಸೇವೆಯ ಮಹತ್ವವನ್ನು ನಮಗೆ ನೆನಪಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:30 am, Tue, 21 April 26

Source link

‘ಎರಡನೇ ಮದುವೆ ಆಗ್ತೀನಿ’; ಖುಷಿ ಸುದ್ದಿ ಕೊಟ್ಟ ಚಂದನ್ ಶೆಟ್ಟಿ – Kannada News | Chandan Shetty Confirms Second Marriage: Plans to Remarry in 2027

ಸಂಗೀತ ಸಂಯೋಜಕ, ರ‍್ಯಾಪರ್ ಹಾಗೂ ನಟ ಚಂದನ್ ಶೆಟ್ಟಿ ಅವರು ಈ ಮೊದಲು ನಿವೇದಿತಾ ಗೌಡ ಅವರನ್ನು ಮದುವೆ ಆಗಿದ್ದರು. ಬಿಗ್ ಬಾಸ್​​ನಲ್ಲಿ ಆದ ಪರಿಚಯ ಹಸೆಮಣೆವರೆಗೆ ಇವರನ್ನು ತಂದು ನಿಲ್ಲಿಸಿತು. ಮದುವೆ ಆಗಿ ಕೆಲವೇ ವರ್ಷಗಳಲ್ಲಿ ಇವರು ಬೇರೆ ಆದರು. ಈಗ ಇಬ್ಬರೂ ತಮ್ಮ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ ಚಂದನ್ ಶೆಟ್ಟಿ ಅವರು ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ವಿವಾಹ ಯಾವಾಗ ಎಂಬ ವಿಷಯ ರಿವೀಲ್ ಮಾಡಿದ್ದಾರೆ.

ಚಿತ್ರರಂಗದ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಸಾಮಾನ್ಯ ಎಂಬಂತಾಗಿದೆ. ಇದನ್ನು ಮುಚ್ಚಿಟ್ಟು ಯಾರೂ ದೂರ ಹೋಗುತ್ತಿಲ್ಲ. ಈ ಬಗ್ಗೆ ಸೆಲೆಬ್ರಿಟಿಗಳು ಓಪನ್ ಆಗಿ ಮಾತನಾಡುತ್ತಿದ್ದಾರೆ. ಚಂದನ್ ಹಾಗೂ ನಿವೇದಿತಾ ಡಿವೋರ್ಸ್ ಆದ ಬಳಿಕ ಇಬ್ಬರೂ ಸುದ್ದಿಗೋಷ್ಠಿ ನಡೆಸಿ ವಿಚ್ಛೇದನದ ಬಗ್ಗೆ ಸ್ಪಷ್ಟನೆ ಕೊಟ್ಟರು. ಹೊಂದಾಣಿಕೆ ಸಾಧ್ಯವಾಗದ ಕಾರಣ ಡಿವೋರ್ಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಈಗ ಚಂದನ್ ಎರಡನೇ ಮದುವೆ ಬಗ್ಗೆ ಆಲೋಚಿಸಿದ್ದಾರೆ.

ವಾಹಿನ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಚಂದನ್ ಮಾತನಾಡಿದ್ದಾರೆ. ‘ಚಂದನ್ ಎರಡನೇ ಮದುವೆ ಆಗ್ತಾರಾ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಮದುವೆ ಆಗುತ್ತೇನೆ. ಆದರೆ, ಈ ವರ್ಷ ಅಲ್ಲ. ಒಂದು ಒಳ್ಳೆಯ ಹುಡುಗಿ ನೋಡಿ ಮುಂದಿನ ವರ್ಷ ವಿವಾಹ ಆಗುತ್ತೇನೆ. ಹುಡುಗಿ ನೋಡುವ ಪ್ರಕ್ರಿಯೆ ಶುರುವಾಗಿಲ್ಲ’ ಎಂದರು ಅವರು.

‘ವೈಬ್ ಮ್ಯಾಚ್ ಆದರೆ ಸಾಕು. ಈ ಬಗ್ಗೆ ಈಗ ಏನನನ್ನೂ ಹೇಳೋಕೆ ಇಷ್ಟಪಡಲ್ಲ. ಮುಂದಿನ ವರ್ಷ ಈ ಬಗ್ಗೆ ಮಾತನಾಡುತ್ತೇನೆ’ ಎಂದು ಚಂದನ್ ಹೇಳಿದ್ದಾರೆ. ಅಂದರೆ, 2027ರ ವೇಳೆಗೆ ಚಂದನ್ ಶೆಟ್ಟಿ ಎರಡನೇ ಬಾರಿಗೆ ಹಸೆಮಣೆ ಏರೋದು ಫಿಕ್ಸ್ ಎಂದು ಹೇಳಲಾಗುತ್ತಾ ಇದೆ. ಅವರು ಮದುವೆ ಆಗುವ ಹುಡುಗಿ ಹೇಗಿರುತ್ತಾರೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ

ಚಂದನ್ ಶೆಟ್ಟಿ ಅವರು ಸದ್ಯ ‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಸುಜಯ್ ಶಾಸ್ತ್ರಿ ನಿರ್ದೇಶನ ಇದೆ. ಏಪ್ರಿಲ್ 24ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಅರ್ಚನಾ ಕೊಟ್ಟಿಗೆ ಚಿತ್ರಕ್ಕೆ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಂಬ್ಯುಲೆನ್ಸ್ ನಲ್ಲಿ ಬಂದು ಎಸ್ಎಸ್ಎಲ್​ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಸುರೇಶ್ ಕುಮಾರ್ ಆರ್ಥಿಕ ನೆರವು! – Kannada News | Kolar Girl Who Lost Leg in Accident Writes SSLC Exam: Gets Financial Aid from Suresh Kumar

ಆಂಬ್ಯುಲೆನ್ಸ್ ನಲ್ಲಿ ಬಂದು ಎಸ್ಎಸ್ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಸುರೇಶ್ ಕುಮಾರ್ ಆರ್ಥಿಕ ನೆರವು!

ಕೋಲಾರ, ಏಪ್ರಿಲ್ 21: ಜಿಲ್ಲೆಯ ಕೆಜಿಎಫ್ (Kolar) ತಾಲೂಕಿನ ವಿದ್ಯಾರ್ಥಿನಿ ಕುಸುಮಾ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ, ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಘಟನೆ ಎಲ್ಲರ ಗಮನ ಸೆಳೆದಿತ್ತು. ಈ ಮೂಲಕ ಮನಸ್ಥೈರ್ಯ ಇದ್ದರೆ ಯಾವುದೂ ಅಸಾಧ್ಯವಲ್ಲವೆಂದು ಬಾಲಕಿ ತೋರಿಸಿಕೊಟ್ಟಿದ್ದಳು. ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಳು. ಆದರೆ ಈಗ ಅದೇ ಬಾಲಕಿಯ ಚಿಕಿತ್ಸೆಗೆ ಆಕೆಯ ತಂದೆ ಹರಸಾಹಸ ಪಡುತ್ತಿರುವುದನ್ನು ತಿಳಿದ ಮಾಜಿ ಸಚಿವ ಸುರೇಶ್ ಕುಮಾರ್, ಬಾಲಕಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.

ಸ್ಟ್ರೆಚರ್​ನಲ್ಲಿ ಮಲಗಿಕೊಂಡೇ ಪರೀಕ್ಷೆ ಬರೆದಿದ್ದ ಬಾಲಕಿ

ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿ ನಿವಾಸಿಯಾದ ಸೆಂಟ್ ಮೇರಿಸ್ ಹೈಸ್ಕೂಲ್ ವಿದ್ಯಾರ್ಥಿನಿ 16 ವರ್ಷದ ಕುಸುಮಾ, ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ಕಾಲು ಕಳೆದುಕೊಂಡಿದ್ದಳು. ನಂತರ ಆಕೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು.ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದಿದ್ದರೂ, ವಿದ್ಯಾಭ್ಯಾಸದ ಮೇಲೆ ಆಸಕ್ತಿ ಕಳೆದುಕೊಳ್ಳದ ಕುಸುಮಾ, ತನ್ನ ತಾಯಿಯೊಂದಿಗೆ ಆಂಬ್ಯುಲೆನ್ಸ್ ಮೂಲಕ ಕೆಜಿಎಫ್‌ನ ಸೆಂಟ್ ಜೋಸೆಫ್ ಶಾಲೆಗೆ ಬಂದು ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷಾ ಕೇಂದ್ರದಲ್ಲಿ ಸ್ಟ್ರೆಚರ್ ಬೆಡ್ ಮೇಲೆ ಮಲಗಿಕೊಂಡೇ ಆಕೆ ಪರೀಕ್ಷೆ ಬರೆದಿದ್ದು, ಆಕೆಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.. ವಿದ್ಯಾರ್ಥಿನಿಯ ಪರಿಸ್ಥಿತಿಯನ್ನು ಗಮನಿಸಿ, ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ. ನಾರಾಯಣಸ್ವಾಮಿ ಪರೀಕ್ಷೆ ಬರೆಯಲು ವಿಶೇಷ ಅನುಮತಿ ನೀಡಿದ್ದರು.

ಸುರೇಶ್ ಕುಮಾರ್ ಹೇಳಿದ್ದೇನು?

ಇದನ್ನೂ ಓದಿ ಆಂಬ್ಯುಲೆನ್ಸ್‌ನಲ್ಲೇ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ: ವಿಡಿಯೋ ನೋಡಿ

ವಿಷಯ ತಿಳಿದು ತಕ್ಷಣ ನೆರವಿಗೆ ಬಂದ ಸುರೇಶ್ ಕುಮಾರ್!

ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿ ಬೆಂಗಳೂರಿನ ವೈಟ್‌ಫೀಲ್ಡ್‌ನ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಅಗತ್ಯವಿದ್ದ ಹಣದ ಕೊರತೆಯಿಂದ ತಂದೆ ಶಂಕರಪ್ಪ ಸಂಕಷ್ಟಕ್ಕೀಡಾಗಿ, ತನ್ನ ಕಿಡ್ನಿ ಮಾರಾಟ ಮಾಡುವ ನಿರ್ಧಾರಕ್ಕೂ ಬಂದಿದ್ದರು. ವಿಷಯ ತಿಳಿದು ಮಾಜಿ ಸಚಿವ ಸುರೇಶ್ ಕುಮಾರ್ ತಕ್ಷಣ ಸ್ಪಂದಿಸಿ ನೆರವಿಗೆ ಬಂದಿದ್ದಾರೆ. ಅವರು ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರಿಗೆ ಮಾಹಿತಿ ನೀಡಿ, ಮುಖ್ಯಮಂತ್ರಿ ನಿಧಿಯಿಂದ ಚಿಕಿತ್ಸಾ ವೆಚ್ಚ ಭರಿಸುವ ವ್ಯವಸ್ಥೆ ಮಾಡಲು ಮುಂದಾಗಿದ್ದು, ಈ ಭರವಸೆಯಿಂದ ಕುಟುಂಬಕ್ಕೆ ಜೀವ ಬಂದಂತಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ವಿಷಯ ಹಂಚಿಕೊಂಡ ಸುರೇಶ್ ಕುಮಾರ್ ಅವರ ಮಾನವೀಯ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version