‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ಏಪ್ರಿಲ್ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ನಟಿ ತಾರಾ ಅನುರಾಧಾ ನಟಿಸಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ತಾರಾ ಮಾತನಾಡಿದರು. ಈ ಸಿನಿಮಾ ವಿಶೇಷ ಅನಿಸಿದ್ದು ಏಕೆ ಎಂಬುದನ್ನು ವಿವರಿಸಿದರು. ಈ ವೇಳೆ ರಾಕೇಶ್ ಅವರನ್ನು ಕೂಡ ನೆನಪಿಸಿಕೊಂಡರು. ರಾಕೇಶ್ ಅವರು ‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾದಲ್ಲಿ ನಟಿಸಿದ್ದರು. ಇದು ಅವರ ಕೊನೆಯ ಸಿನಿಮಾ ಆಗಬಹುದು.
ಬೆಂಗಳೂರು, ಏಪ್ರಿಲ್ 21: ಬಿಟ್ ಕಾಯಿನ್ ಹಗರಣಕ್ಕೆ (Bitcoin Scam) ಸಂಬಂಧಿಸಿದಂತೆ ಕಿಂಗ್ ಪಿನ್ ಶ್ರೀಕಿ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಏಪ್ರಿಲ್ 21 ರಂದೂ ಮುಂದುವರಿದಿದೆ. ಬೆಂಗಳೂರಿನ ಜಯನಗರದಲ್ಲಿರುವ ಶ್ರೀಕಿ ಮನೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಶೋಧ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ (Congress) ಶಾಸಕ ಎನ್.ಎ. ಹ್ಯಾರಿಸ್ (NA Haris) ಮಗ ನಲಪಾಡ್ ಮತ್ತು ಶ್ರೀಕಿ ನಡುವೆ 4.65 ಕೋಟಿ ರೂಪಾಯಿಗಳ ಹಣಕಾಸು ವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಇದರ ಬಗ್ಗೆ ಇಡಿ ತೀವ್ರ ತನಿಖೆ ನಡೆಸುತ್ತಿದೆ.
ಈ ಹಗರಣ ಈಗ ಹ್ಯಾರಿಸ್ ಕುಟುಂಬಕ್ಕೂ ಸಂಕಷ್ಟ ತಂದೊಡ್ಡಿದೆ. ಇಡಿ ಅಧಿಕಾರಿಗಳು ಶ್ರೀಕಿಯನ್ನು ವಿಚಾರಣೆ ನಡೆಸುತ್ತಿದ್ದು, ಬ್ಯಾಂಕ್ ಖಾತೆಗಳ ಪರಿಶೀಲನೆಗಾಗಿ ಇಂದು ಬ್ಯಾಂಕ್‌ಗೆ ಕರೆದೊಯ್ಯುವ ಸಾಧ್ಯತೆಯಿದೆ. ಶ್ರೀಕಿಯ ಐಷಾರಾಮಿ ಜೀವನಶೈಲಿಗೆ ನಲಪಾಡ್ ಹಣಕಾಸು ಒದಗಿಸಿದ್ದರ ಕುರಿತು ಸಾಕ್ಷ್ಯಗಳನ್ನು ಇಡಿ ಕಲೆಹಾಕುತ್ತಿದೆ.
ನಲಪಾಡ್, ಶ್ರೀಕಿ ಮತ್ತು ಡಿಜಿಪಿ ಪುತ್ರ ರಿಷಬ್ ಒಟ್ಟಾಗಿ ಲಾವೆಲ್ಲೆ ರಸ್ತೆಯ ಸೆಕೆಂಡ್ ಹ್ಯಾಂಡ್ ಶೋರೂಂನಲ್ಲಿ ಪೋರ್ಷೆ ಕಾರ್ ಖರೀದಿಗೆ ಬಂದಿದ್ದರು. ಟೆಸ್ಟ್ ಡ್ರೈವ್ ಮಾಡುವಾಗ ಶ್ರೀಕಿ ಕಾರಿನಲ್ಲಿ ಸಿಗರೆಟ್ ಸೇದಲು ಯತ್ನಿಸಿದ್ದು, ಶೋರೂಂ ಸಿಬ್ಬಂದಿ ನಿರಾಕರಿಸಿದಾಗ ಜಗಳ ತೆಗೆದಿದ್ದ. ನಂತರ ಈ ಗ್ಯಾಂಗ್ 57 ಲಕ್ಷ ರೂಪಾಯಿಗೆ ಕಾರು ಖರೀದಿಸಿತ್ತು.
ಪೋರ್ಷೆ ಕಾರನ್ನೇ ಆಷ್‌ಟ್ರೇ ಆಗಿ ಬಳಸಿ, ಸಿಗರೆಟ್ ಬೂದಿ ಉದುರಿಸಿದ್ದ ಶ್ರೀಕಿ!
ಶ್ರೀಕಿ ಕಾರನ್ನು ಆಷ್‌ಟ್ರೇ ಆಗಿ ಬಳಸಿ, ಸಿಗರೆಟ್ ಬೂದಿ ಉದುರಿಸಿದ್ದಲ್ಲದೆ, ಲೈಟರ್‌ನಿಂದ ಕಾರಿನ ಸೀಟಿಗೆ ಬೆಂಕಿ ಕೂಡ ಹಾಕಿದ್ದ ಎನ್ನಲಾಗಿದೆ. ಬಳಿಕ ಇದೇ ಕಾರನ್ನು 47 ಲಕ್ಷ ರೂಪಾಯಿಗೆ ಅದೇ ಶೋರೂಂಗೆ ವಾಪಸ್ ಮಾರಾಟ ಮಾಡಿದ್ದರು. ಈ ಹಣಕಾಸು ವ್ಯವಹಾರವನ್ನು ನಲಪಾಡ್ ಮತ್ತು ರಿಷಬ್ ನಿರ್ವಹಿಸಿದ್ದರು. ಈ ಘಟನೆಯ ಬಗ್ಗೆ 2024ರಲ್ಲಿ ಸಿಐಡಿ ಎಸ್ಐಟಿ ತಂಡ ನಲಪಾಡ್ ಮತ್ತು ರಿಷಬ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿತ್ತು. ಶ್ರೀಕಿಯ ಹಣಕಾಸು ವ್ಯವಹಾರಕ್ಕೆ ನಲಪಾಡ್ ಸಹಕರಿಸಿದ್ದರಿಂದ ಈಗ ಆತನಿಗೆ ಸಂಕಷ್ಟ ಎದುರಾಗಿದೆ.
ಕೆಲ ವಾರಗಳ ಹಿಂದಷ್ಟೆ ಮೃಣಾಲ್ ಠಾಕೂರ್ (Mrunal Thakur) ಮತ್ತು ತಮಿಳು ಸ್ಟಾರ್ ನಟ ಧನುಶ್ ಕುರಿತು ಸುದ್ದಿಗಳು ಹರಿದಾಡಿದ್ದವು. ಮೃಣಾಲ್ ಠಾಕೂರ್ ಮತ್ತು ಧನುಶ್ ಅವರು ಪರಸ್ಪರ ಪ್ರೀತಿಯಲ್ಲಿದ್ದು, ಶೀಘ್ರವೇ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡಿತ್ತು. ನಟಿ ಮೃಣಾಲ್ ಠಾಕೂರ್ ‘ಡಕಾಯತ್’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಈ ಗಾಳಿಸುದ್ದಿಯನ್ನು ಅಲ್ಲಗಳೆದರು. ಆದರೆ ಇದೀಗ ಧನುಶ್ ಮತ್ತು ಮೃಣಾಲ್ ಕುರಿತಂತೆ ಮತ್ತೊಂದು ಸುದ್ದಿ ಹರಿದಾಡಲು ಆರಂಭವಾಗಿದೆ.
ಮೃಣಾಲ್ ಠಾಕೂರ್ ಮತ್ತು ಧನುಶ್ ಒಟ್ಟಿಗೆ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿರಲಿದ್ದು, ಸಿನಿಮಾ ಅನ್ನು ಧನುಶ್ ಅವರೇ ನಿರ್ದೇಶನ ಸಹ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಮೃಣಾಲ್ ಠಾಕೂರ್ ಅವರು ತೆಲುಗು, ಮರಾಠಿ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಈ ವರೆಗೆ ಯಾವುದೇ ತಮಿಳು ಸಿನಿಮಾನಲ್ಲಿ ನಟಿಸಿಲ್ಲ. ಆದರೆ ಇದೀಗ ಧನುಶ್ ಅವರೊಟ್ಟಿಗೆ ಮೊದಲ ಬಾರಿಗೆ ತಮಿಳು ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ ಮೃಣಾಲ್ ಠಾಕೂರ್.
ಮೃಣಾಲ್ ಠಾಕೂತ್ ಅವರು ಧನುಶ್ ಅವರೊಟ್ಟಿಗಿನ ಸಂಭಂದದ ಸುದ್ದಿಯನ್ನು ಅಲ್ಲಗಳೆದಿದ್ದಾರಾದರೂ ಈಗ ಇಬ್ಬರೂ ಒಟ್ಟಿಗೆ ನಟಿಸುತ್ತಿರುವುದು ಆ ಹಳೆಯ ಸುದ್ದಿಗೆ ಮತ್ತೆ ಮರುಜೀವ ನೀಡಿದೆ. ಅದರಲ್ಲೂ ಮೃಣಾಲ್ ಅವರ ಸಿನಿಮಾವನ್ನು ಧನುಶ್ ನಿರ್ದೇಶನ ಮಾಡಲು ಮುಂದಾಗಿರುವುದು ಇಬ್ಬರ ನಡುವಿನ ಆತ್ಮೀಯತೆ ಸುದ್ದಿಗೆ ಇನ್ನಷ್ಟು ಇಂಬು ನೀಡಿದೆ. ಧನುಶ್ ಅವರು ಇತ್ತೀಚೆಗಷ್ಟೆ ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಮೃಣಾಲ್ ಅವರಿಗೆ ಇನ್ನೂ ಮದುವೆ ಆಗಿಲ್ಲ.
ಧನುಶ್ ಅವರು ರಜನೀಕಾಂತ್ ಅವರ ಪುತ್ರಿಯನ್ನು ವಿವಾಹವಾಗಿದ್ದರು ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 20 ವರ್ಷದ ದಾಂಪತ್ಯದ ಬಳಿಕ ಇತ್ತೀಚೆಗಷ್ಟೆ ಇಬ್ಬರೂ ದೂರಾಗಿದ್ದಾರೆ. ಧನುಶ್ ಪ್ರಸ್ತುತ ‘ಕಾರಾ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದ್ದಾರೆ. ಅದಾದ ಬಳಿಕ ಹಿಂದಿಯಲ್ಲಿ ಒಂದು ಐತಿಹಾಸಿಕ ಕತೆಯುಳ್ಳ ಸಿನಿಮಾನಲ್ಲಿ ನಟಿಸಲಿದ್ದಾರೆ. ಇಳಯರಾಜ ಅವರ ಜೀವನ ಆಧರಿಸಿದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇನ್ನು ಮೃಣಾಲ್ ಠಾಕೂರ್ ಹಿಂದಿಯಲ್ಲಿ ವರುಣ್ ಧವನ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಪೂಜಾ ಮೇರಿ ಜಾನ್’ ಎಂಬ ಮತ್ತೊಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ‘ರಾಕಾ’ ಸಿನಿಮಾನಲ್ಲೂ ನಟಿಸುತ್ತಿದ್ದಾರೆ.
ದಾವಣಗೆರೆ, ಏಪ್ರಿಲ್ 21: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಕಾಲಿಕ ಮಳೆಸುರಿದಿದ್ದು, ಬೇಸಿಗೆಯ ಬಿಸಿಲಿನ ಬೇಗೆಯಿಂದ ಹೈರಾಣಾಗಿದ್ದ ಜನರಿಗೆ ತಂಪೆರೆದಿದೆ. ಚನ್ನಗಿರಿ ತಾಲೂಕಿನ ಮಾವಿನಹೊಳೆ, ರಾಜಗೊಂಡನಹಳ್ಳಿ, ದಂಡಿಗೇನಹಳ್ಳಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ತಾಪಮಾನ ಗಣನೀಯವಾಗಿ ಏರಿಕೆ ಕಂಡಿತ್ತು. ಇದರ ಪರಿಣಾಮವಾಗಿ ಬಿಸಿಲಿನ ಝಳಕ್ಕೆ ಜನಜೀವನ ತತ್ತರಿಸಿ ಹೋಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸುರಿದ ಈ ಬೇಸಿಗೆ ಮಳೆಯು ಜಿಲ್ಲೆಯ ಜನರಿಗೆ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಿದೆ. ರೈತರು ಮತ್ತು ಸಾರ್ವಜನಿಕರು ಈ ಮಳೆಯಿಂದಾಗಿ ಕೊಂಚ ನಿರಾಳರಾಗಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಆಟಗಾರ ಜೋಶ್ ಇಂಗ್ಲಿಸ್ (Josh Inglis) ತಮ್ಮ ದೀರ್ಘಕಾಲದ ಗೆಳತಿ ಮೇಗನ್ ಕಿನ್ಕಾರ್ಟ್ ಅವರನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಸ್ಟ್ರೇಲಿಯಾದ ಈ ಸ್ಪೋಟಕ ಬ್ಯಾಟರ್ ಏಪ್ರಿಲ್ 18, 2026 ರಂದು ಪಶ್ಚಿಮ ಆಸ್ಟ್ರೇಲಿಯಾದ ಮಾರ್ಗರೆಟ್ ರಿವರ್‌ನಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಯಾದಗಿರಿ, ಏಪ್ರಿಲ್ 21: ಜಿಲ್ಲೆಯಲ್ಲಿ ಸರ್ಕಾರಿ ಕಟ್ಟಡದ ದುರುಪಯೋಗಪಡಿಸಿಕೊಂಡ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿ (Yadgir)ತಾಲೂಕಿನ ಲಿಂಗೇರಿ ಸ್ಟೇಷನ್ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಖಾಸಗಿ ವ್ಯಕ್ತಿಯೊಬ್ಬ ಅಕ್ರಮವಾಗಿ ಕೋಚಿಂಗ್ ಸೆಂಟರ್ ಆರಂಭಿಸಿರುವ ಆರೋಪ ಕೇಳಿಬಂದಿದೆ.
ಪ್ರತಿ ತಿಂಗಳು ತಲಾ 5 ಸಾವಿರ ರೂ ಶುಲ್ಕ!
ದೇವಿಂದ್ರಪ್ಪ ಎಂಬಾತ ಅಧಿಕಾರಿಗಳಿಗೆ ಹಣ ನೀಡಿ ಹಾಸ್ಟೆಲ್ ಕಟ್ಟಡವನ್ನು ಬಾಡಿಗೆ ಪಡೆದು ಬೇಸಿಗೆ ಶಿಬಿರದ ಹೆಸರಿನಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಕೋಚಿಂಗ್ ನೀಡುತ್ತಿದ್ದಾನೆ ಎಂಬ ಆರೋಪವಿದೆ. ಹಾಸ್ಟೆಲ್ ಮಕ್ಕಳಿಗೆ ಮಾತ್ರವಲ್ಲದೆ ಹೊರಗಿನ ಮಕ್ಕಳಿಂದಲೂ ಪ್ರತಿ ತಿಂಗಳು ತಲಾ 5 ಸಾವಿರ ರೂಪಾಯಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ವೇಳೆಯೂ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಕೊಠಡಿಗಳಲ್ಲಿ ಉಳಿಸಲಾಗುತ್ತಿದೆ ಎಂಬ ಆರೋಪವೂ ಇದೆ.
ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ
ಸಾಮಾಜಿಕ ಕಾರ್ಯಕರ್ತ ಉಮೇಶ್ ಹಾಗೂ ಸ್ಥಳೀಯ ನಾಗರಾಜ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರಿ ಕಟ್ಟಡವನ್ನು ದುರುಪಯೋಗ ಪಡಿಸಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಯಾಗರಾಜ್‌ನಲ್ಲಿ ನಡೆದ ‘ಮಹಾಕುಂಭ’ದ ನಂತರ ಸುದ್ದಿ ಆದವರು ಮಾಡೆಲ್-ಪ್ರಭಾವಿ ಹರ್ಷ ರಿಚಾರಿಯಾ. ಅವರು ಈಗ ತಮ್ಮದೇ ಆದ ಪಿಂಡವನ್ನು ಬಿಟ್ಟು ಮಾಡಿ ಸನ್ಯಾಸಿ ಆಗಿದ್ದಾರೆ. ಹರ್ಷ ರಿಚಾರಿಯಾ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ತಮ್ಮ ಗುರುಗಳ ಸಮ್ಮುಖದಲ್ಲಿ ತಮ್ಮ ಪಿಂಡವನ್ನು ಬಿಟ್ಟು ಸನ್ಯಾಸ ಸ್ವೀಕರಿಸಿದರು. ಅವರಿಗೆ 32 ವರ್ಷ ವಯಸ್ಸಾಗಿದ್ದು, ಈ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದು ಅಚ್ಚರಿ ತಂದಿದೆ. ಉಜ್ಜಯಿನಿಯ ಮೌನ್ ತೀರ್ಥ ಆಶ್ರಮದಲ್ಲಿ ಮಹಾಮಂಡಲೇಶ್ವರ ಸುಮಾನಂದ ಮಹಾರಾಜರ ಸಮ್ಮುಖದಲ್ಲಿ ಈ ಆಚರಣೆಯನ್ನು ನಡೆಸಲಾಯಿತು. ಇಲ್ಲಿ, ಸಂಪ್ರದಾಯದ ಪ್ರಕಾರ, ಅವರನ್ನು ಸನ್ಯಾಸಕ್ಕೆ ದೀಕ್ಷೆ ನೀಡಲಾಯಿತು.
ಈ ಆಚರಣೆಯ ನಂತರ, ಹರ್ಷ ರಿಚಾರಿಯಾ ತಮ್ಮದೇ ಆದ ಹೊಸ ಹೆಸರನ್ನು ಪಡೆದುಕೊಂಡಿದ್ದಾರೆ. ಈಗ ಅವರನ್ನು ಸ್ವಾಮಿ ಹರ್ಷಾನಂದ ಗಿರಿ ಎಂದು ಕರೆಯಲಾಗುತ್ತದೆ. ಆಚರಣೆ ಪೂರ್ಣಗೊಂಡ ನಂತರ, ಈಗ ಹೊಸ ಜೀವನ ಪ್ರಾರಂಭವಾಗಿದೆ ಎಂದು ಹೇಳಿದರು. ಕಳೆದ ಒಂದೂವರೆ ವರ್ಷದಿಂದ ಅವರು ಅಧ್ಯಾತ್ಮದ ಹಾದಿಯಲ್ಲಿ ನಡೆಯುತ್ತಿದ್ದರು. ಈಗ ಅವರು ಸನ್ಯಾಸಿ ಆಗಿದ್ದಾರೆ.
ಹರ್ಷ ರಿಚಾರಿಯಾ ಅವರು ಎಲ್ಲವನ್ನೂ ಬಿಟ್ಟು ಹೋಗಬೇಕೆಂದು ಯೋಚಿಸಿದರು. ಆಗ ಅವರಿಗೆ ಸನ್ಯಾಸತ್ವದ ಆಲೋಚನೆ ಬಂತು. ಅವರು ಬಹಳ ದಿನಗಳಿಂದ ಸನ್ಯಾಸ ಸ್ವೀಕರಿಸುವ ಬಗ್ಗೆ ಯೋಚಿಸುತ್ತಿದ್ದರು. ಈಗ ಅದು ಸಾಧ್ಯವಾಗಿದೆ. ‘ಇಲ್ಲಿಯವರೆಗೆ ನಾನು ಕುಟುಂಬ, ಪೋಷಕರು ಮತ್ತು ನನ್ನ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ಈಗ ಗುರುಜಿಯವರ ಮಾರ್ಗದರ್ಶನದಲ್ಲಿ, ನಾನು ಧರ್ಮ ಮತ್ತು ಸಮಾಜದ ಬಗ್ಗೆ ಯೋಚಿಸುತ್ತೇನೆ’ ಎಂದಿದ್ದಾರೆ.
ಹಿಂದೂ ಧರ್ಮದಲ್ಲಿ, ಪೂರ್ವಜರ ಶಾಂತಿಗಾಗಿ ನಡೆಸುವ ಪ್ರಮುಖ ಆಚರಣೆಗಳಲ್ಲಿ ಪಿಂಡ ಬಿಡುವುದಕ್ಕೆ ವಿಶೇಷ ಪ್ರಾಮುಖ್ಯತೆ ಇದೆ ಎನ್ನಬಹುದು. ಪೂರ್ವಜರ ಆತ್ಮಗಳ ತೃಪ್ತಿಗಾಗಿ ಮತ್ತು ಮೋಕ್ಷವನ್ನು ಪಡೆಯಲು ಮಾತ್ರ ಪಿಂಡವನ್ನು ಬಿಡಲಾಗುತ್ತದೆ ಎಂಬ ಉಲ್ಲೇಖ ಗರುಡ ಪುರಾಣದಲ್ಲಿ ಇದೆ. ಕೆಲವು ಸಂದರ್ಭಗಳಲ್ಲಿ ಇದಕ್ಕೆ ವಿನಾಯಿತಿ ಇದೆ. ತನ್ನ ಲೌಕಿಕ ಜೀವನವನ್ನು ತ್ಯಜಿಸುವ ಸಂಕೇತವಾಗಿ ಸ್ವತಃ ಪಿಂಡ ಬಿಡಬಹುದು. ಅಲ್ಲದೆ, ಗಯಾದಂತಹ ಧಾರ್ಮಿಕ ಸ್ಥಳಗಳಲ್ಲಿ, ಕೆಲವರು ತಾವು ಇನ್ನೂ ಜೀವಂತವಾಗಿರುವಾಗ ಸ್ವತಃ ಪಿಂಡವನ್ನು ಬಿಡುತ್ತಾರೆ. ಇದರಿಂದಾಗಿ ಅವರು ನಂತರ ತಮ್ಮ ಕುಟುಂಬಗಳ ಮೇಲೆ ಜವಾಬ್ದಾರಿಯನ್ನು ಹೊರಬೇಕಾಗಿಲ್ಲ.
ಚೆನ್ನೈ, ಏಪ್ರಿಲ್ 21: ತಮಿಳುನಾಡು ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ಎಲ್ಲಾ ಪ್ರಮುಖ ಪಕ್ಷಗಳ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪ್ರಚಾರ ಕಾರ್ಯ ನಡೆಸಿದ್ದು, ಭಾಷಣದ ಸಂದರ್ಭದಲ್ಲಿ ಡಿಎಂಕೆಯನ್ನು ಹೊಗಳುವುದು ಬಿಟ್ಟು ಎಐಎಡಿಎಂಕೆಯನ್ನು ಹೊಗಳಿದ್ದಾರೆ. ತಮಿಳುನಾಡು ಅಭಿವೃದ್ಧಿಯಲ್ಲಿ ಎಐಎಡಿಎಂಕೆ ಪ್ರಮುಖ ಪಾತ್ರವಹಿಸಿದೆ ಎಂದರು. ಬಳಿಕ ಮಾತನಾಡಿದ ಅವರು, ಎಐಎಡಿಎಂಕೆ ಮೂಲಕ ಬಿಜೆಪಿ ಈಗ ತಮಿಳುನಾಡಿಗೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಎಐಎಡಿಎಂಕೆ ಭ್ರಷ್ಟಾಚಾರದಲ್ಲಿ ಮುಳುಗಿದೆ, ಅದಕ್ಕಾಗಿಯೇ ಪಳನಿಸ್ವಾಮಿ ಬಿಜೆಪಿಗೆ ಶರಣಾಗಿದ್ದಾರೆ ಎಂದು ಅವರು ಹೇಳಿದರು.
ಕನ್ಯಾಕುಮಾರಿ ಜಿಲ್ಲೆಯು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿರುವ ಜಿಲ್ಲೆಯಾಗಿದೆ. ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ ಆರು ವಿಧಾನಸಭಾ ಸ್ಥಾನಗಳಿವೆ: ನಾಗರಕೋಯಿಲ್, ಕೊಳಚೆಲ್, ಪದ್ಮನಾಭಪುರಂ, ವಿಲವನ್‌ಕೋಡ್, ಕಿಳ್ಳಿಯೂರು ಮತ್ತು ಕನ್ಯಾಕುಮಾರಿ. ಈ ಸ್ಥಾನಗಳಲ್ಲಿ, ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ, ಎಐಎಡಿಎಂಕೆ ಒಂದು ಸ್ಥಾನ ಮತ್ತು ತಮಿಳು ಮನಿಲಾ ಕಾಂಗ್ರೆಸ್ ಒಂದು ಸ್ಥಾನವು ಎನ್‌ಡಿಎಯನ್ನು ಪ್ರತಿನಿಧಿಸುತ್ತದೆ. ಕಾಂಗ್ರೆಸ್ ಮೂರು, ಡಿಎಂಕೆ ಎರಡು ಮತ್ತು ಸಿಪಿಎಂ ಒಂದು ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ.
ವಿನಯ್ ಕುಲಕರ್ಣಿ ಬೆಂಬಲಿಸಿ ಮೌನ ಮೆರವಣಿಗೆಗೆ ಕಾಂಗ್ರೆಸ್ ಸಭೆಯಲ್ಲಿ ನಿರ್ಧಾರImage Credit source: tv9
ಹುಬ್ಬಳ್ಳಿ, ಏಪ್ರಿಲ್ 21: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಬೆಂಬಲಕ್ಕೆ ಕಾಂಗ್ರೆಸ್ (Congress) ಪಕ್ಷ ನಿಂತಿದೆ. ಏಪ್ರಿಲ್ 25ರಂದು ಧಾರವಾಡದಲ್ಲಿ ವಿನಯ್ ಕುಲಕರ್ಣಿ ಪರವಾಗಿ ಬೃಹತ್ ಮೌನ ಮೆರವಣಿಗೆ ನಡೆಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಈ ಪ್ರತಿಭಟನೆಯ ರೂಪರೇಷೆಗಳ ಬಗ್ಗೆ ಚರ್ಚಿಸಲು ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ತಡರಾತ್ರಿ ಪ್ರಮುಖ ನಾಯಕರ ಸಭೆ ನಡೆಯಿತು.
ಹುಬ್ಬಳ್ಳಿ-ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ವಿನಯ್ ಕುಲಕರ್ಣಿಗೆ ರಾಜಕೀಯ ಪಿತೂರಿಯಿಂದ ಶಿಕ್ಷೆಯಾಗಿದೆ ಎಂದು ಆರೋಪಿಸಲಾಯಿತು. ಈ ಹಿನ್ನೆಲೆಯಲ್ಲಿ ಪಕ್ಷದ ಶಕ್ತಿಯನ್ನು ಪ್ರದರ್ಶಿಸಲು ಮತ್ತು ಕುಲಕರ್ಣಿ ಅವರಿಗೆ ನೈತಿಕ ಬೆಂಬಲ ನೀಡಲು ಏಪ್ರಿಲ್ 25ರಂದು ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ.
ಯೋಗೀಶ್ ಗೌಡ ಕೊಲೆ ಪ್ರಕರಣದ ಹಿನ್ನೆಲೆ
2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಜಿಮ್‌ವೊಂದರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಇದು ಆಸ್ತಿ ವಿಚಾರಕ್ಕಾಗಿ ನಡೆದ ಕೊಲೆ ಎಂದು ಬಿಂಬಿತವಾಗಿತ್ತಾದರೂ, ನಂತರ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ (CBI) ಇದೊಂದು ರಾಜಕೀಯ ಪ್ರೇರಿತ ಕೊಲೆ ಎಂದು ಹೇಳಿತ್ತು. ಸುದೀರ್ಘ ತನಿಖೆಯ ನಂತರ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2026 ರ ಏಪ್ರಿಲ್ 17 ರಂದು ವಿನಯ್ ಕುಲಕರ್ಣಿ ಮತ್ತು ಇತರ 16 ಮಂದಿಯನ್ನು ದೋಷಿಗಳು ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಈಗಾಗಲೇ ಜೈಲಿನಲ್ಲಿರುವ ವಿನಯ್ ಕುಲಕರ್ಣಿ ಅವರ ವಿರುದ್ಧದ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ವಕೀಲರು ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಇದನ್ನು ರಾಜಕೀಯವಾಗಿ ಎದುರಿಸಲು ಸಜ್ಜಾಗಿದ್ದು, 25ರ ಮೆರವಣಿಗೆಯ ಮೂಲಕ ಆಕ್ರೋಶ ಹೊರಹಾಕಲು ಸಜ್ಜಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇದಾದ ಬಳಿಕ ಸಚಿನ್ ತೆಂಡೂಲ್ಕರ್ (66), ರೋಹಿತ್ ಶರ್ಮಾ (52), ಲಿಂಡ್ಲ್ ಸಿಮನ್ಸ್ (61), ಸೂರ್ಯಕುಮಾರ್ ಯಾದವ್ (49), ಕ್ಯಾಮರೋನ್ ಗ್ರೀನ್ (47), ಕ್ವಿಂಟನ್ ಡಿಕಾಕ್ (53) ಸೆಂಚುರಿಗಳನ್ನು ಸಿಡಿಸಿದ್ದರು. ಆದರೆ ಯಾರಿಗೂ ಸಹ ಜಯಸೂರ್ಯ ಹೆಸರಿನಲ್ಲಿರುವ ಸ್ಫೋಟಕ ಶತಕದ ದಾಖಲೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ.