ಲಕ್ಷ ಲಕ್ಷ ಹಣ, ಒಡವೆ ಗಿಫ್ಟ್ ಕೊಟ್ರೂ ಮತ್ತೊಬ್ಬನ ಜತೆ ಚಕ್ಕಂದ: ಹಂತಕನ ಡೆತ್ ನೋಟ್ನಲ್ಲಿ ಮಹಿಳೆ ಕೊಲೆ ರಹಸ್ಯ ಬಯಲು – Kannada News | Big twist To madanayakanahalli drakshayini Murder Case: Accused Veerabhadra reveals In Death Note Why Killed her
ಬೆಂಗಳೂರು, (ಜನವರಿ 14): ಮಾದನಾಯಕನಹಳ್ಳಿ ಪೊಲೀಸ್ ಠಾಣಾ (madanayakanahalli Police) ವ್ಯಾಪ್ತಿಯಲ್ಲಿ 55 ವರ್ಷದ ದಾಕ್ಷಾಯಿಣಿ ಕೊಲೆ ಪ್ರಕರಣದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜನವರಿ 10ರಂದು ಕುದುರೆಗೆರೆಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ದಾಕ್ಷಾಯಿಣಿಯನ್ನು ಸೋದರ ಮಾವ 60 ವರ್ಷದ ವೀರಭದ್ರ ಎಂಬಾತ ಕೊಡಲಿಯಿಂದ ಕೊಚ್ಚಿ ಪರಾರಿಯಾಗಿದ್ದ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಬಲೆ ಬೀಸಿದ್ದರು. ಆದ್ರೆ, ತಲೆ ಮರೆಸಿಕೊಂಡಿದ್ದ ಹಂತಕ ವೀರಭದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ನೇಣಿಗೆ ಶರಣಾಗಿರುವುದು…