Headlines

ಹತ್ತು ವರ್ಷ ಹಿಂದಿನ ಈ ಕ್ರೈಮ್ ಥ್ರಿಲ್ಲರ್ ಚಿತ್ರವನ್ನು ನೀವು ನೋಡಿದ್ದೀರಾ?

ನೀವು ಕ್ರೈಮ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುತ್ತೀರಾ? ಒಟಿಟಿಯಲ್ಲಿ ಉತ್ತಮ ಕ್ರೈಮ್ ಥ್ರಿಲ್ಲರ್ ಸಿನಿಮಾವನ್ನು ನೋಡಲು ಬಯಸುತ್ತೀರಾ? ಈ ಸಿನಿಮಾ ಹತ್ತು ವರ್ಷಗಳ ಹಿಂದೆ, ಅಂದರೆ 2016ರಲ್ಲಿ ಬಿಡುಗಡೆಯಾಯಿತು. ಆದರೆ ಈ ಸಿನಿಮಾದ ಹೆಸರು ಖಂಡಿತವಾಗಿಯೂ ಟಾಪ್ ಕ್ರೈಮ್ ಥ್ರಿಲ್ಲರ್ ಸಿನಿಮಾಗಳ ಪಟ್ಟಿಯಲ್ಲಿದೆ. ಈ ಸಿನಿಮಾದ ಹೆಸರು ‘ಧ್ರುವಂಗಲ್ ಪದಿನಾರು’. ಕಾರ್ತಿಕ್ ನರೇನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಮಾಡುವ ಸಮಯದಲ್ಲಿ ಕಾರ್ತಿಕ್ ಕೇವಲ 21 ವರ್ಷ ವಯಸ್ಸಿನವನಾಗಿದ್ದನು. ಉತ್ತಮ ಥ್ರಿಲ್ಲರ್ ಸಿನಿಮಾವನ್ನು ನೀಡಿದರು. ಅಪಘಾತದಿಂದಾಗಿ ತನ್ನ…

Read More

ಯುಗಾದಿ, ರಂಜಾನ್ ರಜೆಗೆ ಊರಿಗೆ ಹೋದವರಿಗೆ ಬೆಂಗಳೂರಿಗೆ ವಾಪಸ್ ಬರಲು ವಿಶೇಷ ರೈಲುಗಳು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಬೆಂಗಳೂರು, ಮಾರ್ಚ್ 18: ಯುಗಾದಿ (Ugadi) ಹಾಗೂ ರಂಜಾನ್ ಹಬ್ಬದ ಸಾಲು ರಜೆಗಳ ಸಂದರ್ಭ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆ (SWR) ಬೆಂಗಳೂರು (Bangalore) ನಗರದಿಂದ ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳ ಸೇವೆ ಒದಗಿಸುತ್ತಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಹೋಸಪೇಟೆ ಹಾಗೂ ಗೋವಾ (ಮಡಗಾಂವ್) ಮಾರ್ಗಗಳಿಗೆ ಈ ವಿಶೇಷ ರೈಲುಗಳು ಸಂಚರಿಸುತ್ತಿವೆ. ವಿಶೇಷ ರೈಲುಗಳ ವೇಳಾಪಟ್ಟಿ, ಎಲ್ಲೆಲ್ಲಿ ನಿಲುಗಡೆ ಹೊಂದಿವೆ ಎಂಬ ಹಾಗೂ ಇತರ ಮಾಹಿತಿ ಇಲ್ಲಿದೆ. ಬೆಂಗಳೂರು ಬೆಳಗಾವಿ ವಿಶೇಷ ರೈಲು ರೈಲು…

Read More

Video: ನೇಪಾಳ: ಮೃತದೇಹವನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಪಘಾತ, ವಿಡಿಯೋ ನೋಡಿ

ಕಠ್ಮಂಡು, ಮಾರ್ಚ್​ 19: ನೇಪಾಳದಲ್ಲಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಆದರೆ ಪವಾಡವೆಂಬಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಪೈಲಟ್ ಸೇರಿ ಐದು ಪ್ರಯಾಣಿಕರು ಬದುಕುಳಿದಿದ್ದಾರೆ.ಆದರೆ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ, ಅವರ ಕಾಲಿಗೆ ಸಣ್ಣಪುಟ್ಟ ಗಾಯವಾಗಿದೆ. ಏರ್ ರಾಜವಂಶದ ಚಾಪರ್ ಅಪಘಾತಕ್ಕೊಳಗಾಗಿರುವ ಹೆಲಿಕಾಪ್ಟರ್ ಆಗಿದೆ. ಕೃಷಿ ಭೂಮಿಯಲ್ಲಿ ಇಳಿಯುವಾಗ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಗಾಯಗೊಂಡ ಪ್ರಯಾಣಿಕರನ್ನು ಕಂಪನಿಯ ಮತ್ತೊಂದು ಹೆಲಿಕಾಪ್ಟರ್ ಮೂಲಕ ಕಠ್ಮಂಡುವಿಗೆ ಸ್ಥಳಾಂತರಿಸಲಾಯಿತು. ಉಳಿದ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.   ವಿಡಿಯೋ…

Read More

ಬೀಚ್ ಪಕ್ಕ ದುಬಾರಿ ಮನೆ ಖರೀದಿಸಿದ ‘ದಂಗಲ್’ ಸಿನಿಮಾ ನಟಿ ಸಾನ್ಯಾ ಮಲ್ಹೋತ್ರ

ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾ ವಿಶಿಷ್ಟ ದಾಖಲೆಗಳನ್ನು ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾ ಮೂಲಕ ವಿಶಿಷ್ಟ ದಾಖಲೆ ಬರೆದರು. ‘ದಂಗಲ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅವರು, ಅಲ್ಪಾವಧಿಯಲ್ಲಿಯೇ ತಮ್ಮ ಸಹಜ ನಟನೆಗಾಗಿ ಮೆಚ್ಚುಗೆಯನ್ನು ಪಡೆದರು. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಅವರು ಮುಂಬೈನಲ್ಲಿ ಭವ್ಯವಾದ ಮನೆಯನ್ನು ಖರೀದಿಸಿದ್ದಾರೆ. ಸಾನ್ಯಾ ಈ ಅಪಾರ್ಟ್‌ಮೆಂಟ್ ಅನ್ನು ಸುಮಾರು 14.3 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ. ಇದಕ್ಕಾಗಿ ಅವರು ಕೇವಲ 71.5 ಲಕ್ಷ ರೂ. ಸ್ಟಾಂಪ್…

Read More

Video: ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲೊಂದು ಹ್ಯಾಂಡ್ ಪಂಪ್

ಮಿರ್ಜಾಪುರ, ಮಾರ್ಚ್​ 19: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ವಿಂಧ್ಯಾಚಲ ಪ್ರದೇಶದಲ್ಲಿ ಹೊಸದಾಗಿ ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲಿ ಹ್ಯಾಂಡ್ ಪಂಪ್ ಇರುವುದು ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ವಿಂಧ್ಯವಾಸಿನಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ಮಾರ್ಗವಾದ ದೂಧ್‌ನಾಥ್ ತಿರಹಾದಿಂದ ವಿಂಧ್ಯಚಲದವರೆಗೆ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದೆ. ರಸ್ತೆಬದಿಯಲ್ಲಿರುವ ಹ್ಯಾಂಡ್ ಪಂಪ್ ಅನ್ನು ತೆಗೆದುಹಾಕುವ ಬದಲು, ಅಧಿಕಾರಿಗಳು ಅದರ ಸುತ್ತ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ.ವಿಸ್ತರಣೆಯ ನಂತರ ಅದನ್ನು ಮಧ್ಯದಲ್ಲಿಯೇ ಬಿಟ್ಟಿದ್ದರು. ಕೈ ಪಂಪ್ ಮೊದಲು ಬದಿಯಲ್ಲಿತ್ತು, ಆದರೆ ಅಗಲಗೊಳಿಸಿದ ನಂತರ ಅದು ಮಧ್ಯದಲ್ಲಿ…

Read More

Vasthu Tips: ಅಡುಗೆಮನೆಯೊಳಗೆ ಚಪ್ಪಲಿ ಧರಿಸಬಾರದೇ? ವಾಸ್ತು ತಜ್ಞರು ಹೇಳುವುದೇನು?

ಭಾರತೀಯ ಸಂಸ್ಕೃತಿಯಲ್ಲಿ ಅಡುಗೆಮನೆಯನ್ನು ಕೇವಲ ಆಹಾರ ತಯಾರಿಸುವ ಸ್ಥಳವೆಂದು ಪರಿಗಣಿಸದೆ, ಅದನ್ನು ‘ಲಕ್ಷ್ಮಿಯ ನಿವಾಸ’ ಮತ್ತು ‘ಅನ್ನಪೂರ್ಣೇಶ್ವರಿಯ ಸನ್ನಿಧಿ’ ಎಂದು ಪೂಜಿಸಲಾಗುತ್ತದೆ. ಆದರೆ ಆಧುನಿಕ ಜೀವನಶೈಲಿಯ ಧಾವಂತದಲ್ಲಿ, ನಾವು ತಿಳಿಯದೆಯೇ ಹೊರಗಿನ ಧೂಳು ತುಂಬಿದ ಪಾದರಕ್ಷೆಗಳನ್ನು ಅಥವಾ ಮನೆಯೊಳಗಿನ ಚಪ್ಪಲಿಗಳನ್ನು ಧರಿಸಿ ಅಡುಗೆಮನೆ ಪ್ರವೇಶಿಸುತ್ತೇವೆ. ವಾಸ್ತು ಶಾಸ್ತ್ರ ಮತ್ತು ವಿಜ್ಞಾನದ ಪ್ರಕಾರ, ಈ ಒಂದು ಸಣ್ಣ ಅಭ್ಯಾಸವು ನಿಮ್ಮ ಮನೆಯ ನೆಮ್ಮದಿಯನ್ನೇ ಕಸಿದುಕೊಳ್ಳಬಲ್ಲದು. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯು ಧನಾತ್ಮಕ ಶಕ್ತಿಯ ಕೇಂದ್ರ. ಚಪ್ಪಲಿಗಳು ಹೊರಗಿನ ನಕಾರಾತ್ಮಕ…

Read More

ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅಬ್ಬರ: ಕಾಶ್ಮೀರದಂತಾದ ಮಲೆನಾಡು; ರೈತರಿಗೆ ತಪ್ಪದ ಬೆಳೆ ಹಾನಿ ಸಂಕಷ್ಟ!

ಬೆಂಗಳೂರು, ಮಾ.19: ರಾಜ್ಯದಲ್ಲಿ ಸುಡುತ್ತಿದ್ದ ಬಿಸಿಲ ಬೇಗೆಯ ನಡುವೆಯೇ ವರುಣದೇವ ಅನಿರೀಕ್ಷಿತ ಎಂಟ್ರಿ ಕೊಟ್ಟಿದ್ದಾನೆ. ನೆನ್ನೆ (ಮಾ.18) ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದು, ಭೂಮಿ ತಂಪಾಗಿದೆಯಾದರೂ ರೈತರ ಬದುಕು ಮಾತ್ರ ಬೀದಿಗೆ ಬಿದ್ದಿದೆ. ನಗರದ ಕೆ.ಆರ್. ಪುರಂ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 3 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ 20ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು,…

Read More

ಅಬ್ಬಬ್ಬಾ, ಪೇಯ್ಡ್​ ಪ್ರೀಮೀಯರ್​ನಿಂದ ‘ಧುರಂಧರ್ 2’ ಸಿನಿಮಾ ಗಳಿಸಿದ್ದು ಇಷ್ಟೊಂದಾ?

‘ಧುರಂಧರ್ 2’ ಸಿನಿಮಾ (Dhurandha 2) ಮಾರ್ಚ್ 19ರಂದು ರಿಲೀಸ್ ಆಗಲಿದೆ. ಅದಕ್ಕೂ ಒಂದು ದಿನ ಮೊದಲ ಎಲ್ಲ ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್​​ಗಳನ್ನು ಆಯೋಜನೆ ಮಾಡಲಾಗಿತ್ತು. ಹೀಗಾಗಿ, ಒಂದು ದಿನ ಮೊದಲೇ ಅನೇಕರು ಸಿನಿಮಾನ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಚಿತ್ರ ನೋಡಿದ ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಚಿತ್ರ ಪೇಯ್ಡ್ ಪ್ರೀಮಿಯರ್​ನಿಂದಲೇ ಸಿನಿಮಾಗೆ ಭರ್ಜರಿ ಗಳಿಕೆ ಮಾಡಿದೆ. ಇದು ನಿರ್ಮಾಪಕರ ಖುಷಿ ಹೆಚ್ಚಿಸಿದೆ. ‘ಧುರಂಧರ್ 2’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಲು ಕಾರಣ ಮೊದಲ ಭಾಗ….

Read More

ಕತಾರ್​​ನಲ್ಲಿ ಭಾರತಕ್ಕೆ ಅನಿಲ ಸರಬರಾಜು ಮಾಡುವ ರಾಸ್ ಲಫಾನ್ ಘಟಕದ ಮೇಲೆ ಇರಾನ್ ಕ್ಷಿಪಣಿ ದಾಳಿ

ಕತಾರ್, ಮಾರ್ಚ್​ 19: ಇರಾನ್(Iran) ನಡೆಸುತ್ತಿರುವ ದಾಳಿಯು ಭಾರತಕ್ಕೆ ನೇರವಾಗಿ ಪರಿಣಾಮ ಬೀರದಿದ್ದರೂ ಕೂಡ ಪರೋಕ್ಷವಾಗಿ ಅದರ ಪರಿಣಾಮವನ್ನು ಅನುಭವಿಸುತ್ತಿದೆ. ಪಶ್ಚಿಮ ಏಷ್ಯಾ ಅಥವಾ ಮಧ್ಯಪ್ರಾಚ್ಯವು ಪೂರ್ಣ ಪ್ರಮಾಣದ ಯುದ್ಧಭೂಮಿಯಾಗಿದೆ. ಯುದ್ಧವು ಇರಾನ್ ಮತ್ತು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ನೇರವಾಗಿ ನಡೆದರೂ, ಅದರ ಪರಿಣಾಮವು ಇಡೀ ವಿಶ್ವ ಅನುಭವಿಸುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಇರಾನ್ ಕೊಲ್ಲಿಯಲ್ಲಿರುವ ಯುಎಸ್ ವಾಯುನೆಲೆಗಳು ಮತ್ತು ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿತ್ತು. ಈಗ, ಇರಾನ್ ಒಂದು ಹೆಜ್ಜೆ ಮುಂದೆ ಹೋಗಿದೆ….

Read More

ಹಬ್ಬಕ್ಕೆ ಊರಿಗೆ ಹೊರಟ ಜನ: ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಟ್ರಾಫಿಕ್ ಜಾಮ್, ಮೆಜೆಸ್ಟಿಕ್​ನಲ್ಲಿ ಜನವೋ ಜನ

ಬೆಂಗಳೂರು, ಮಾರ್ಚ್ 19: ಯುಗಾದಿ, ರಂಜಾನ್ ಹಬ್ಬ ಮತ್ತು ಸುದೀರ್ಘ ವಾರಾಂತ್ಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರಿನತ್ತ ತೆರಳುವ ಪ್ರಯಾಣಿಕರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ ಭಾರಿ ಜನಸಂದಣಿ ಕಂಡುಬಂದಿದೆ. ಬಸ್ಸುಗಳು ಕೂಡ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವುದು ಕಂಡುಬಂದಿದೆ. ಸೀಟು ಸಿಗದೆ ಪರದಾಡುತ್ತಿರುವ ಜನರು, ಲಗೇಜ್ ಸಮೇತವಾಗಿ ರಾತ್ರಿಯಿಡೀ ನಿಲ್ದಾಣದಲ್ಲೇ ಜಾಗರಣೆ ಮಾಡುವಂತಾಯಿತು. ಜನರು ಊರಿಗೆ ಹೋಗಲು ಮೆಜೆಸ್ಟಿಕ್​ನತ್ತ ಧಾವಿಸಿದ್ದರಿಂದ ಕಾರ್ಪೊರೇಷನ್ ರಸ್ತೆ, ಮೈಸೂರು ಬ್ಯಾಂಕ್ ರಸ್ತೆ ಮತ್ತು ಕೆ.ಆರ್. ಮಾರ್ಕೆಟ್ ರಸ್ತೆ ಸೇರಿದಂತೆ ಹಲವೆಡೆ ಟ್ರಾಫಿಕ್…

Read More