ಉಪ ಚುನಾವಣೆ: ಕಾಂಗ್ರೆಸ್ನಲ್ಲಿ ಬಗೆಹರಿಯದ ಟಿಕೆಟ್ ಕಗ್ಗಂಟು; ಮುಂದುವರಿದ ಗೊಂದಲ
ಬೆಂಗಳೂರು, ಮಾರ್ಚ್ 19: ದಾವಣೆಗೆರೆ ದಕ್ಷಿನ ಮತ್ತು ಬಾಗಲಕೋಟೆ ಉಪ ಚುನಾವಣೆಗಳಿಗೆ ವಿಪಕ್ಷ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಆದರೆ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಈ ಬಗ್ಗೆ ಗೊಂದಲ ಮುಂದುವರಿದಿದ್ದು ಅಭ್ಯರ್ಥಿಗಳ ಆಯ್ಕೆಯೇ ಕಗ್ಗಂಟಾಗಿ ಮಾರ್ಪಟ್ಟಿದೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬಸ್ಥರಿಗೇ ಟಿಕೆಟ್ ಪಕ್ಕಾ ಎನ್ನಲಾಗಿದ್ದರೂ ನಾಲ್ವರು ಮಕ್ಕಳ ಪೈಕಿ ಯಾರಿಗೆ ಪಕ್ಷ ಮಣೆ ಹಾಕಲಿದೆ ಎಂಬ ಪ್ರಶ್ನೆ ಸದ್ಯ ಉದ್ಭವಿಸಿದೆ. ಮತ್ತೊಂದೆಡೆ ದಾವಣಗೆರೆ ದಕ್ಷಿಣ ಕ್ಕ್ಷೆತ್ರದಲ್ಲಿ ಟಿಕೆಟ್ಗಾಗಿ ಕೈಮನೆಯ ಒಳಗೆಯೇ ಭಾರಿ ಗುದ್ದಾಟ ನಡೆಯುತ್ತಿರುವ…