Headlines

ಹೀಟ್ ವೇವ್​ಗೆ ತತ್ತರಿಸಿದ ರಾಯಚೂರು: ಹೈ ಅಲರ್ಟ್ ಘೋಷಣೆ, ರಿಮ್ಸ್‌ನಲ್ಲಿ ಹೈಟೆಕ್ ವಾರ್ಡ್ ಸಿದ್ಧ – Kannada News | Heatwave: 42°C High Alert for Heat Stroke and Health Risks

ರಾಯಚೂರು, ಏಪ್ರಿಲ್​ 20: ಬಿಸಿಲುನಾಡು ರಾಯಚೂರಿನಲ್ಲಿ (raichur) ಸೂರ್ಯನ ಪ್ರತಾಪ ದಿನೇದಿನೇ ಮಿತಿಮೀರುತ್ತಿದೆ. ತಾಪಮಾನ 42 ಡಿಗ್ರಿ ದಾಟುತ್ತಿರುವುದರ ನಡುವೆಯೇ ಈಗ ಬಿಸಿಗಾಳಿ ಅಂದರೆ ಹೀಟ್ ವೇವ್ (Heat Wave) ಜನರ ಜೀವಕ್ಕೆ ಆಪತ್ತನ್ನು ತಂದೊಡ್ಡುತ್ತಿದೆ. ಬಿಸಿಗಾಳಿಯ ಹೊಡೆತಕ್ಕೆ ಜನರು ‘ಹೀಟ್ ಸ್ಟ್ರೋಕ್’ಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವುದರಿಂದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಪರಿಸ್ಥಿತಿಯನ್ನು ಎದುರಿಸಲು ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಕೂಡ ತೆರೆಯಲಾಗಿದೆ. 42 ಡಿಗ್ರಿಯಷ್ಟು ತಾಪಮಾನ ದಾಖಲು: ಹೈ…

Read More

ದಳಪತಿ ವಿಜಯ್, ಸಂಗೀತಾ ವಿಚ್ಛೇದನ ಪ್ರಕರಣ: ಜೂನ್ 15ಕ್ಕೆ ವಿಚಾರಣೆ ಮುಂದೂಡಿಕೆ – Kannada News | Actor Thalapthy Vijay Sangeeta Sornalingam Divorce case hearing postponed to June 15

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ (Thalapthy Vijay) ಹಾಗೂ ಅವರ ಪತ್ನಿ ಸಂಗೀತಾ ಅವರ ವಿಚ್ಛೇದನ (Divorce) ಪ್ರಕರಣವು ಇಡೀ ದಕ್ಷಿಣ ಭಾರತದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯವು ವಿಚಾರಣೆಯನ್ನು ಎರಡನೇ ಬಾರಿಗೆ ಮುಂದೂಡಿದೆ. ವಿಜಯ್ ಮತ್ತು ಸಂಗೀತಾ (Sangeeta Sornalingam) ಅವರ ವಿಚ್ಛೇದನ ಪ್ರಕರಣದ ಮುಂದಿನ ವಿಚಾರಣೆ ಜೂನ್ ತಿಂಗಳ ಮಧ್ಯಭಾಗದಲ್ಲಿ ನಡೆಯಲಿದೆ. ಸೋಮವಾರ (ಏಪ್ರಿಲ್ 20) ನ್ಯಾಯಾಧೀಶರಾದ ಶಶಿಕಲಾ ಅವರ ಮುಂದೆ…

Read More

ತೀವ್ರ ಸ್ವರೂಪ ಪಡೆದ ದಾವಣಗೆರೆ ದಂಗಲ್: ಬಿಜೆಪಿಗೆ ಸಪೋರ್ಟ್‌, SDPIಗೆ ಹಣ ನೀಡಿದ ವಿಡಿಯೋ ಇದೆ ಎಂದ ಕೈ ನಾಯಕ – Kannada News | Muslim Leader Alleged On Abdul Jabbar And Zameer For Support BJP And SDPI In Davanagere South By Poll

ಬೆಂಗಳೂರು, (ಏಪ್ರಿಲ್ 20): ದಾವಣಗೆರೆ ದಕ್ಷಿಣ ಉಪಚುನಾವಣೆಯ (Davanagere South By Poll) ಟಿಕೆಟ್ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ತೀವ್ರ ಸ್ವರೂಪದ ಅಸಮಾಧಾನಕ್ಕೆ ಕಾರಣವಾಗಿದೆ. ಮುಖ್ಯವಾಗಿದೆ ಮುಸ್ಲಿಂ ನಾಯಕರ ನಡುವಿನ ಬಣ ರಾಜಕಾರಣ ಈಗ ಬೀದಿಗೆ ಬಂದಂತಿದೆ. ಇದಕ್ಕೆ ಪೂರಕವೆಂಬಂತೆ ಸಲೀಂ ಅಹ್ಮದ್ ಹಾಗೂ ರಿಜ್ವಾನ್ ಅರ್ಷದ್ ಜೊತೆಯಾಗಿ ಅಬ್ದುಲ್ ಜಬ್ಬಾರ್ ಹಾಗೂ ಸಚಿವ ಜಮೀರ ಅಹ್ಮದ್ ಖಾನ್ ವಿರುದ್ಧ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕೆಪಿಸಿಸಿ ಉಪಾಧ್ಯಕ್ಷ ಹುಸೇನ್ ಸಹ ಸುದ್ದಿಗೋಷ್ಠಿ ನಡೆಸಿ…

Read More

ಏಕಕಾಲದಲ್ಲಿ ಭಾರತದ 2 ಟಿ20 ತಂಡಗಳನ್ನು ಕಣಕ್ಕಿಳಿಸಲಿದೆ ಬಿಸಿಸಿಐ – Kannada News | BCCI Plans Dual T20 Teams for India: Boosts Player Development and Opportunities Post IPL 2026

ಭಾರತದಲ್ಲಿ ಐಪಿಎಲ್ (IPL) ಆರಂಭವಾದ ಬಳಿಕ ಕ್ರಿಕೆಟ್​ನಲ್ಲಿ ಕ್ರಾಂತಿ ಶುರುವಾಯಿತು. ಇದರ ಪರಿಣಾಮವಾಗಿ ದೇಶದಲ್ಲಿ ಸಾಕಷ್ಟು ಪ್ರತಿಭೆಗಳು ಹುಟ್ಟಿಕೊಂಡಿವೆ. ಹೀಗಾಗಿಯೇ ಟೀಂ ಇಂಡಿಯಾ, ಐಸಿಸಿ (ICC) ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್‌ ಪಟ್ಟವನ್ನು ಅಲಂಕರಿಸುತ್ತಿದೆ. ಟೀಂ ಇಂಡಿಯಾದಲ್ಲಿ (Team India) ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಸಾಕಷ್ಟು ಪ್ರತಿಭೆಗಳು ಬೆಂಚ್ ಮೇಲೆಯೇ ಕಾಲ ಕಳೆಯುತ್ತಿವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ (BCCI), ಎರಡು ಟಿ20 ತಂಡಗಳನ್ನು ಏಕಕಾಲದಲ್ಲಿ ಕಣಕ್ಕಿಳಿಸಲು ಸಜ್ಜಾಗುದೆ. ಬಿಸಿಸಿಐ ಇದಕ್ಕಾಗಿ…

Read More

ಪ್ರಧಾನಿ ಮೋದಿಯವರ ‘ಝಲ್ಮುರಿ’ ವಿಡಿಯೋ ವೈರಲ್: ಇನ್ಸ್​ಟಾಗ್ರಾಮ್‌ನಲ್ಲಿ 100 ಮಿಲಿಯನ್ ವೀಕ್ಷಣೆ – Kannada News | PM Modi’s Jhalmuri video sees 100 million views in just 24 hours

ನರೇಂದ್ರ ಮೋದಿ ಇನ್​ಸ್ಟಾ ವಿಡಿಯೋಗಳುImage Credit source: Narendra Modi’s Insta ಕೋಲ್ಕತಾ, ಏಪ್ರಿಲ್ 20: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ (West Bengal Assembly Elections) ಪ್ರಚಾರದ ಅಬ್ಬರದ ನಡುವೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಏಪ್ರಿಲ್ 19, 2026) ಝಾರ್‌ಗ್ರಾಮ್‌ನಲ್ಲಿ (Jhargram) ಸಾಮಾನ್ಯ ಜನರಂತೆ ರಸ್ತೆ ಬದಿಯ ಅಂಗಡಿಗೆ ಭೇಟಿ ನೀಡಿ ಝಲ್ಮುರಿ (Jhalmuri) ಸವಿದಿದ್ದಾರೆ. ಅವರು ಇನ್​​ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಕೇವಲ 24 ಗಂಟೆಗಳಲ್ಲಿ 100 ಮಿಲಿಯನ್​ಗೂ…

Read More

IPL 2026: ಗುಜರಾತ್ ವಿರುದ್ಧ ಕಣಕ್ಕಿಳಿಯುತ್ತಾರಾ ರೋಹಿತ್ ಶರ್ಮಾ? – Kannada News | Rohit Sharma Injury Update: MI vs GT IPL Return Status?

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ, ರೋಹಿತ್ ಶರ್ಮಾ ಆಡಲು ಸಾಧ್ಯವಾಗಲಿಲ್ಲ, ಅವರ ಅನುಪಸ್ಥಿತಿಯಲ್ಲಿ ಕ್ವಿಂಟನ್ ಡಿ ಕಾಕ್, ರಿಕಲ್ಟನ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು. ಇದು ಡಿ ಕಾಕ್ ಅವರ ಈ ಆವೃತ್ತಿಯ ಮೊದಲ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಅವರು 60 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 8 ಬೌಂಡರಿಗಳೊಂದಿಗೆ 112 ರನ್ ಬಾರಿಸಿದ್ದರು. ಆದಾಗ್ಯೂ, ಕ್ವಿಂಟನ್ ಡಿ ಕಾಕ್ ಅಜೇಯ ಶತಕ ಗಳಿಸಿದರೂ, ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 195 ರನ್‌ಗಳ ಗುರಿಯನ್ನು ತಲುಪಲು ವಿಫಲವಾಗಿ…

Read More

ಬೇಷರತ್ ಬೆಂಬಲ ನೀಡಿದ್ದೇ ಅಪರಾಧವೇ? ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಮುಸ್ಲಿಂ ಸಂಘ- ಸಂಸ್ಥೆಗಳು – Kannada News | Davanagere By Election Row: Karnataka Muslim organisations letter To Congress Leaders, here Details

ಬೆಂಗಳೂರು, (ಏಪ್ರಿಲ್ 20): ದಾವಣಗೆರೆ ಉಪ ಚುನಾವಣೆಯ (Davanagere By Election Row) ಟಿಕೆಟ್ ಅಸಮಾಧಾನ ಕರ್ನಾಟಕ ಕಾಂಗ್ರೆಸ್ ನಲ್ಲಿ (Karnataka Congress) ಒಂದು ರೀತಿಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಟಿಕೆಟ್ ಕೈತಪ್ಪಿದ್ದರಿಂದ ಕೆಲ ಮುಸ್ಲಿಂ ನಾಯಕರು ಅಸಮಾಧಾನಗೊಂಡಿದ್ದು, ಇದೀಗ ಅವರ ವಿರುದ್ಧ ಕಾಂಗ್ರೆಸ್ ಕ್ರಮಕೈಗೊಂಡಿದೆ. ಪರಿಷತ್ ಸದಸ್ಯ ಅಬ್ದುಲ್ ಜಬ್ಬರ್ ಅವರನ್ನ ಪಕ್ಷದಿಂದ ಅಮಾನತು ಮಾಡಲಾಗಿದೆ. ಇನ್ನು ನಸೀರ್ ಅಹ್ಮದ್ ಅವರನ್ನ ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ವಜಾ ಮಾಡಲಾಗಿದ್ದು, ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಮೇಲೂ…

Read More

ಯಾದಗಿರಿ-ಮೈಸೂರು ದುರ್ಘಟನೆ: ಪರಿಹಾರ ತಾರತಮ್ಯದ ಬಗ್ಗೆ ಸಿಎಂ ವಿರುದ್ಧ ಜೆಡಿಎಸ್ ಶಾಸಕ ಆಕ್ರೋಶ – Kannada News | Yadgir and Mysuru tragedy: JDS MLA Sharanagouda Kandakur sparks on CM over compensation discrimination

ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್​​, ಸಿಎಂ ಸಿದ್ದರಾಮಯ್ಯImage Credit source: google ಬೆಂಗಳೂರು, ಏಪ್ರಿಲ್​ 20: ರಾಜ್ಯದಲ್ಲಿ ಸಂಭವಿಸಿದ ದುರಂತಗಳ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್​ (Sharanagouda Kandakur) ಇಂತಹದೊಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯಗೆ (Siddaramaiah) ನೇರವಾಗಿ ಪತ್ರ ಬರೆದಿರುವ ಶಾಸಕ, ಮೈಸೂರಿನಲ್ಲಿ ಸಂಭವಿಸಿದ ದುರಂತಕ್ಕೆ ತಕ್ಷಣ ಸ್ಪಂದಿಸುವ ಸರ್ಕಾರ, ಕಲ್ಯಾಣ ಕರ್ನಾಟಕದ…

Read More

GT vs MI Playing XI: ಮುಂಬೈ ಪರ ಇಬ್ಬರು ಐಪಿಎಲ್​ಗೆ ಪಾದಾರ್ಪಣೆ; ರೋಹಿತ್ ಮತ್ತೆ ಅಲಭ್ಯ – Kannada News | GT vs MI Playing XI Gujarat Titans vs Mumbai Indians Today IPL 2026 match Confirmed playing 11 details with name in Kannada

ಐಪಿಎಲ್ 2026 ರ 30 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸುತ್ತಿದೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ ಆರನೇ ಪಂದ್ಯ ಇದಾಗಿದೆ. ಈ ಸೀಸನ್​ನಲ್ಲಿ ಸತತ 2 ಪಂದ್ಯಗಳನ್ನು ಸೋತಿದ್ದ ಗುಜರಾತ್ ಅದರ ನಂತರ ಬಲವಾದ ಪುನರಾಗಮನ ಮಾಡಿದೆ. ಮೊದಲ 2 ಸೋಲುಗಳ ನಂತರ ಗುಜರಾತ್ ಹ್ಯಾಟ್ರಿಕ್ ಜಯ ಸಾಧಿಸಿದೆ. ಮತ್ತೊಂದೆಡೆ, 2012 ರ ನಂತರ ಅಭಿಯಾನದ ಮೊದಲ ಪಂದ್ಯವನ್ನು ಗೆದ್ದ ಮುಂಬೈ, ಸತತ 4 ಪಂದ್ಯಗಳನ್ನು ಸೋತಿದೆ. ಆದ್ದರಿಂದ, ಈಗ…

Read More

ನಾಸಿಕ್ ಟಿಸಿಎಸ್ ಪ್ರಕರಣ; ಪರಾರಿಯಾಗಿದ್ದ ಗರ್ಭಿಣಿ ನಿದಾ ಖಾನ್‌ಗೆ ಜಾಮೀನು ನಿರಾಕರಣೆ – Kannada News | Nashik TCS case No interim relief for absconding pregnant Nida Khan next bail hearing on April 27

ನಾಸಿಕ್, ಏಪ್ರಿಲ್ 20: ನಾಸಿಕ್ ಟಿಸಿಎಸ್ ಪ್ರಕರಣದಲ್ಲಿ (TCS Case) ನಿದಾ ಖಾನ್‌ಗೆ ಮಧ್ಯಂತರ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಅವರ ಜಾಮೀನು ಅರ್ಜಿಯನ್ನು ಏಪ್ರಿಲ್ 27ಕ್ಕೆ ವಿಚಾರಣೆ ನಡೆಸಲಾಗುವುದು. ನಿದಾ ಖಾನ್ ಅವರ ವಕೀಲರು ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಬಾಕಿ ಇರುವವರೆಗೆ ಮಧ್ಯಂತರ ಜಾಮೀನು ಕೋರಿದ್ದರು. ಜಾಮೀನು ಅರ್ಜಿ ಮತ್ತು ಮಧ್ಯಂತರ ಪರಿಹಾರ ಅರ್ಜಿ ಎರಡರ ಮುಂದಿನ ವಿಚಾರಣೆ ಏಪ್ರಿಲ್ 27ಕ್ಕೆ ನಡೆಯಲಿದೆ. ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಚೇರಿಯಲ್ಲಿ ಧಾರ್ಮಿಕ…

Read More