Headlines

ಬಿರು ಬಿಸಿಲಿನ ನಡುವೆ ರಾಜ್ಯದಲ್ಲಿ ವಾರದವರೆಗೆ ಮಳೆ: ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ ತಜ್ಞ – Kannada News | Rain hailstorms expected to lash karnataka one week during heatwave says meteorologist cs patil

ಬೆಂಗಳೂರು, (ಏಪ್ರಿಲ್ 20): ಕರ್ನಾಟಕದಲ್ಲಿ (Karnataka) ಬಿಸಿಲನ ಆರ್ಭಟ ವಿಪರೀತವಾಗಿದೆ. ಕಲ್ಯಾಣ ಕರ್ನಾಟಕದ (Kalyana Karnataka) ಎಲ್ಲಾ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ದಾಟಿದ್ದು, ಬಿಸಿಲನ ಝಳಕ್ಕೆ ಜನ ಕಂಗಾಲಾಗಿದ್ದಾರೆ. ಇನ್ನು ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ನಾನಾ ಮಾರ್ಗ ಅನುಸರಿಸುತ್ತಿದ್ದಾರೆ. ಈ ಬಿಸಿಲಿನ ಬೇಗೆಯ ನಡುವೆಯೇ ವರುಣನ (Rain) ಆಗಮನದ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಉತ್ತರ ವಲಯಗಳಲ್ಲಿ ಸ್ವಲ್ಪ ಮಟ್ಟಿನ ಮಳೆ ಕಂಡು ಬಂದಿದ್ದು, ಮುಂದಿನ ಒಂದು ವಾರದವರೆಗೆ ರಾಜ್ಯದಲ್ಲಿ ಮಳೆ ಸೂಚನೆ ಹೆಚ್ಚಿದೆ ಎಂದು ಹವಾಮಾನ…

Read More

ಬಿಟ್ ಕಾಯಿನ್ ಹಗರಣಕ್ಕೂ ಶಾಸಕ ಹ್ಯಾರಿಸ್​ಗೂ ಏನು ಸಂಬಂಧ? ಕಾಂಗ್ರೆಸ್ ಶಾಸಕರ, ನಲಪಾಡ್ ಮನೆ ಮೇಲೆ ಇಡಿ ದಾಳಿ ಮಾಡಿದ್ದೇಕೆ? – Kannada News | Bitcoin Scam: ED Raids Congress MLA NA Haris and Mohammed Nalapad’s House in Bengaluru Over Money Laundering Links

ಮೊಹಮ್ಮದ್ ನಲಪಾಡ್, ಶಾಸಕ ಎನ್ಎ ಹ್ಯಾರಿಸ್ ಹಾಗೂ ಇಡಿ ದಾಳಿಯ ಚಿತ್ರImage Credit source: tv9 ಬೆಂಗಳೂರು, ಏಪ್ರಿಲ್ 20: ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣ (Bitcoin scam) ಮತ್ತೆ ಮುನ್ನೆಲೆಗೆ ಬಂದಿದೆ. ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಸೋಮವಾರ ಬೆಳ್ಳಂಬೆಳಗ್ಗೆ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ (NA Haris) ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ (Mohammed…

Read More

ಶಸ್ತ್ರ ಚಿಕಿತ್ಸೆ ಬಳಿಕ ಪವನ್ ಕಲ್ಯಾಣ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಚಿರಂಜೀವಿ – Kannada News | Pawan Kalyan health update Chiranjeevi confirms successful surgery recovery

ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಖ್ಯಾತ ನಟ ಪವನ್ ಕಲ್ಯಾಣ್ (Pawan Kalyan) ಅವರು ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅವರು ಅಪ್‌ಡೇಟ್ ನೀಡುವ ಮೂಲಕ ಸಮಾಧಾನ ಪಡಿಸಿದ್ದಾರೆ. ಪವನ್ ಕಲ್ಯಾಣ್ ಅವರ ಆರೋಗ್ಯದ ಬಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಚಿರಂಜೀವಿ, ‘ಕಲ್ಯಾಣ್ ಬಾಬು ಯಶಸ್ವಿಯಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಈಗ ಸುರಕ್ಷಿತವಾಗಿದ್ದಾರೆ. ಆರೋಗ್ಯ ಸ್ಥಿರವಾಗಿದೆ ಮತ್ತು ಉತ್ತಮವಾಗಿ…

Read More

ಛತ್ತೀಸ್‌ಗಢದಲ್ಲಿ ಬೆಟ್ಟಕ್ಕೆ ಡಿಕ್ಕಿಯಾಗಿ ವಿಮಾನ ಪತನ; ಇಬ್ಬರು ಪೈಲಟ್​ ಸಾವು – Kannada News | Private jet crashes into hillside in Chhattisgarh pilot and co pilot died

ಜಶ್​ಪುರ, ಏಪ್ರಿಲ್ 20: ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ಇಂದು ಖಾಸಗಿ ವಿಮಾನವೊಂದು ಪತನಗೊಂಡಿದ್ದು (Plane Crash), ಇಬ್ಬರು ಪೈಲಟ್ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜಶ್‌ಪುರ-ನಾರಾಯಣಪುರ ಪ್ರದೇಶದ ಅರಾ ಬೆಟ್ಟದ ಇಳಿಜಾರಿನಲ್ಲಿ ಪತನಗೊಂಡ ಜೆಟ್‌ನಿಂದ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡಿವೆ. ಈ ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ಖಚಿತವಾಗಿಲ್ಲ. ಜಶ್ಪುರ್-ನಾರಾಯಣಪುರ್ ಪ್ರದೇಶದ ಬೆಟ್ಟದ ಇಳಿಜಾರಿನಲ್ಲಿ ಅಪಘಾತಕ್ಕೀಡಾದ ಜೆಟ್‌ನಿಂದ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ…

Read More

ಶ್ರೀಲಂಕಾದಲ್ಲಿ ಚೀನಾಕ್ಕೆ ಟಕ್ಕರ್ ಕೊಡಲು ಭಾರತದ ಮಾಸ್ಟರ್ ಪ್ಲಾನ್: ಬರಲಿದೆ ಬೃಹತ್ ತೈಲ ಪೈಪ್‌ಲೈನ್ – Kannada News | India to accelerate trilateral energy architecture with Sri Lanka and UAE

ಕೊಲಂಬೊ/ನವದೆಹಲಿ, ಏಪ್ರಿಲ್ 20: ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ ಚೀನಾವನ್ನು ಕಟ್ಟಿಹಾಕಲು ಭಾರತವು ಶ್ರೀಲಂಕಾದಲ್ಲಿ ಚಾಣಾಕ್ಷ್ಯತನದ ಹೆಜ್ಜೆಯನ್ನಿಟ್ಟಿದೆ. ಶ್ರೀಲಂಕಾದ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ದ್ವೀಪ ರಾಷ್ಟ್ರವು ಭಾರತದ ಮೇಲೆ ಹೆಚ್ಚು ಅವಲಂಬಿತವಾಗುವಂತೆ ಮಾಡಲು ಭಾರತ-ಶ್ರೀಲಂಕಾ ಆಯಿಲ್ ಪೈಪ್‌ಲೈನ್ ಯೋಜನೆಯನ್ನು (India Sri Lanka Oil Pipeline) ಚುರುಕುಗೊಳಿಸಲಾಗಿದೆ. ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಮಹತ್ವದ ವಿಷಯ ಚರ್ಚೆಯಾಗಿದೆ. ಶ್ರೀಲಂಕಾದ…

Read More

ಲಿವರ್ ಸಂಬಂಧಿತ ಕಾಯಿಲೆಯ ಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿ ಭಿನ್ನವಾಗಿರುತ್ತದೆಯೇ? – Kannada News | How Hormones Affect Liver Health in Women: Signs to Watch

ಇತ್ತೀಚಿನ ವರ್ಷಗಳಲ್ಲಿ ಲಿವರ್ (Liver) ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಪುರುಷರಲ್ಲಿ ಮಾತ್ರವಲ್ಲ ಮಹಿಳೆಯರೂ ಇದರಿಂದ ಪ್ರಭಾವಿತರಾಗುತ್ತಿದ್ದಾರೆ. ಹಾಗಾಗಿ ಈ ರೀತಿಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಸಮಯಕ್ಕೆ ಸರಿಯಾಗಿ ಗುರುತಿಸುವುದು ಮುಂದಿನ ದೊಡ್ಡ ಅನಾಹುತವನ್ನು ತಡೆಯಬಹುದಾಗಿದೆ. ಅದರಲ್ಲಿಯೂ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚು ಕಂಡು ಬರುತ್ತಿದ್ದು ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ತಡೆಗಟ್ಟುವುದು ಮುಖ್ಯವಾಗಿದೆ. ತಜ್ಞರು ಹೇಳುವ ಪ್ರಕಾರ, ಪುರುಷರಿಗಿಂತ ಮಹಿಳೆಯರಲ್ಲಿ ಕೆಲವು ಕಾರಣಗಳಿಂದ ಲಿವರ್ ರೋಗದ ಅಪಾಯ ಹೆಚ್ಚಾಗಬಹುದು ಎನುತ್ತಾರೆ. ಹಾಗಾದರೆ ಈ…

Read More

ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ: ಕುಡಿದ ಮತ್ತಿನಲ್ಲಿ ಚಾಲಕ-ಕಂಡಕ್ಟರ್ ಜೊತೆ ಕಿರಿಕ್ – Kannada News | Ramanagara: Drunk Man stone pelted BMTC Bus in Bidadi Over Alleged Rash Driving

ರಾಮನಗರ, ಏಪ್ರಿಲ್​ 20: ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್​ಗೆ ಓರ್ವ ವ್ಯಕ್ತಿ ಕಲ್ಲು ತೂರಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ಬಸ್ ಚಾಲಕ ರ‍್ಯಾಶ್ ಡ್ರೈವಿಂಗ್ ಮಾಡಿದ ಎಂದು ಬಸ್ ಮುಂಭಾಗದ ಗ್ಲಾಸ್​​ಗೆ ಕಲ್ಲು ತೂರಿದ್ದಾನೆ. ಕುಡಿದ ಮತ್ತಿನಲ್ಲಿ ಬೆಂಗಳೂರಿನಿಂದ ಬಿಡದಿಗೆ ಬಿಎಂಟಿಸಿ ಬಸ್‌ನಲ್ಲಿ ಬಂದಿದ್ದ ವ್ಯಕ್ತಿ, ಬಸ್ ಚಾಲಕ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಗಾಡಿ ಓಡಿಸಿದ್ದರಿಂದ ಬಸ್ ಒಳಗಿದ್ದ ತನಗೆ ಪೆಟ್ಟಾಗಿ, ಮೂಗಿನಿಂದ ರಕ್ತ ಬಂದಿದೆ…

Read More

ಪ್ರಧಾನಿ ಮೋದಿಯಿಂದ ಉದ್ಘಾಟನೆಗೂ ಮೊದಲೇ ರಾಜಸ್ಥಾನದ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಅವಘಡ – Kannada News | Fire accident at refinery in Rajasthan day before inauguration by PM Narendra Modi

ನವದೆಹಲಿ, ಏಪ್ರಿಲ್ 20: ಪ್ರಧಾನಿ ಮೋದಿ (PM Modi) ಅವರು ರಾಜಸ್ಥಾನದ ಬಲೋತ್ರಾದಲ್ಲಿ ಭಾರತದ ಮೊದಲ ಸಮಗ್ರ ಸಂಸ್ಕರಣಾಗಾರ-ಪೆಟ್ರೋಕೆಮಿಕಲ್ ಸಂಕೀರ್ಣವನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಆದರೆ, ಅದಕ್ಕೂ ಒಂದು ದಿನ ಮೊದಲು ಅಂದರೆ ಇಂದು ಈ ಸಂಸ್ಕರಣಾಗಾರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಭಾರತದ ಮೊದಲ ಗ್ರೀನ್‌ಫೀಲ್ಡ್ ಇಂಟಿಗ್ರೇಟೆಡ್ ರಿಫೈನರಿ-ಕಮ್-ಪೆಟ್ರೋಕೆಮಿಕಲ್ ಸಂಕೀರ್ಣವನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಅನಾವರಣಗೊಳಿಸಲಿದ್ದಾರೆ. ಈ ಯೋಜನೆಯು 79,450 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯನ್ನು ಒಳಗೊಂಡಿದೆ. ಇದು ಈ ಪ್ರದೇಶದ ಅತಿದೊಡ್ಡ ಕೈಗಾರಿಕಾ ಅಭಿವೃದ್ಧಿಗಳಲ್ಲಿ…

Read More

ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ! – Kannada News | Ballari Heatwave: Mercury Hits 39 degree celsius Residents Flock to Buy Earthen Pots as Natural Coolers to Beat the Heat

ಬಳ್ಳಾರಿ, ಏಪ್ರಿಲ್ 20: ಬಳ್ಳಾರಿಯಲ್ಲಿ ಬಿಸಿಲಿನ ತಾಪ ದಿನೇ ದಿನೇ ಏರುತ್ತಿದ್ದು, 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಹೆಚ್ಚುತ್ತಿರುವ ತಾಪಮಾನದಿಂದ ರಕ್ಷಿಸಿಕೊಳ್ಳಲು, ಜನರು ತಂಪಾದ ನೀರು ಕುಡಿಯುವುದಕ್ಕಾಗಿ ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ. ನಗರದ ಸಂಗಂ ಸರ್ಕಲ್ ಬಳಿ ಮಣ್ಣಿನ ಮಡಿಕೆಗಳ ಮಾರಾಟ ಜೋರಾಗಿದ್ದು, ಜನರು ಇವುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಮಣ್ಣಿನ ಮಡಿಕೆಯಲ್ಲಿನ ನೀರು ನೈಸರ್ಗಿಕವಾಗಿ ತಂಪಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು ಎಂಬ ನಂಬಿಕೆ ಜನರಲ್ಲಿದೆ. ಪ್ರತಿ ಮಡಿಕೆಯ ಬೆಲೆ…

Read More

ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಬಸವ ಜಯಂತಿ ಆಚರಿಸಿದ್ದು ಏಲ್ಲಿ ಮತ್ತು ಯಾರು ಗೊತ್ತಾ? – Kannada News | Hardekar Manjappa was the first to initiate the celebration of Basava Jayanti in Karnataka

ದಾವಣಗೆರೆಯ ವಿರಕ್ತಮಠ, ಹರ್ಡೇಕರ ಮಂಜಪ್ಪImage Credit source: tv9 kannada ದಾವಣಗೆರೆ, ಏಪ್ರಿಲ್​ 20: ಜಗತ್ತಿನಾದ್ಯಂತ ಇಂದು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಜಗದ್ಗುರು ಬಸವಣ್ಣನವರ ಜಯಂತಿಯನ್ನು (Basava Jayanti) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಈ ‘ಬಸವ ಜಯಂತಿ’ ಎಂಬ ಜನೋತ್ಸವಕ್ಕೆ ನಾಂದಿ ಹಾಡಿದ್ದು ಎಲ್ಲಿ ಮತ್ತು ಯಾರು ಎಂಬುದು ಬಹುಶಃ ಇಂದಿನ ಪೀಳಿಗೆಗೆ ತಿಳಿದಿರಲಿಕ್ಕಿಲ್ಲ. ಮಹಾತ್ಮ ಗಾಂಧೀಜಿಯವರ ತತ್ವಗಳಿಗೂ ಮೊದಲೇ ಬಸವ ತತ್ವದ ಮೂಲಕ ಜನರನ್ನು ಸಂಘಟಿಸಿದ ‘ಕರ್ನಾಟಕದ ಗಾಂಧಿ’ ಹರ್ಡೇಕರ ಮಂಜಪ್ಪ ಅವರು…

Read More