Japan Earthquake: ಜಪಾನ್​ನಲ್ಲಿ 7.4 ತೀವ್ರತೆಯ ಭೂಕಂಪ; ಅಧಿಕಾರಿಗಳಿಂದ ಸುನಾಮಿಯ ಎಚ್ಚರಿಕೆ – Kannada News | Japan Earthquake; powerful 7.4 magnitude earthquake hits Japan tsunami warning issued

ಟೋಕಿಯೋ, ಏಪ್ರಿಲ್ 20: ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ ಇಂದು 7.4 ತೀವ್ರತೆಯ ಪ್ರಬಲ ಭೂಕಂಪ (Japan Earthquake) ಸಂಭವಿಸಿದೆ. ಇದರಿಂದ ದೇಶಾದ್ಯಂತ ಆತಂಕ ಉಂಟಾಗಿದ್ದು, ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿದೆ. ಅಧಿಕಾರಿಗಳು ಕರಾವಳಿ ಪ್ರದೇಶಗಳಿಂದ ದೂರ ಹೋಗುವಂತೆ ನಿವಾಸಿಗಳನ್ನು ಒತ್ತಾಯಿಸಿದ್ದಾರೆ. ಅಲೆಗಳು ದಡವನ್ನು ತಲುಪುವ ನಿರೀಕ್ಷೆಯಿರುವುದರಿಂದ ಕರಾವಳಿ ವಲಯಗಳಿಂದ ದೂರವಿರಲು ಅಧಿಕಾರಿಗಳು ನಿವಾಸಿಗಳಿಗೆ ಎಚ್ಚರಿಕೆ ನೀಡಿದರು.

3 ಮೀಟರ್ (ಸುಮಾರು 10 ಅಡಿ)ವರೆಗಿನ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಕರಾವಳಿ ವಲಯದ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಸಮುದ್ರದೊಳಗಿನ ಭೂಕಂಪನವು ಸ್ಥಳೀಯ ಸಮಯ ಸಂಜೆ 4.53ಕ್ಕೆ ಇವಾಟೆ ಕರಾವಳಿಯಿಂದ ಕೇವಲ 10 ಕಿಲೋಮೀಟರ್ (ಸುಮಾರು 6 ಮೈಲುಗಳು) ಆಳದಲ್ಲಿ ಸಂಭವಿಸಿದೆ.

ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 114 ಭಾರಿ ಭೂಕಂಪ: ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು; ಕಾರಣ ಏನು?

ಈ ಭೂಕಂಪ ಸಂಭವಿಸಿದ ಕೂಡಲೆ ಜಪಾನ್ ಪ್ರಧಾನಿ ಸನೇ ತಕೈಚಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ, ತುರ್ತು ಕಾರ್ಯಪಡೆಯ ನಿಯೋಜನೆಯನ್ನು ದೃಢಪಡಿಸಿದರು. ಭೂಕಂಪಪೀಡಿತ ಪ್ರದೇಶಗಳಲ್ಲಿ ತಕ್ಷಣದ ಸ್ಥಳಾಂತರಿಸುವಿಕೆಯ ನಿರ್ಣಾಯಕ ಅಗತ್ಯವನ್ನು ಅವರು ಪುನರುಚ್ಚರಿಸಿದರು. ಸುನಾಮಿಯ ಸಾಧ್ಯತೆಯಿದೆ. ತಕ್ಷಣ ಕರಾವಳಿ ತೀರದಿಂದ ಜನರು ಸ್ಥಳಾಂತರಗೊಳ್ಳಿರಿ. ಮುಂದಿನ ಸೂಚನೆ ಬರುವವರೆಗೂ ವಾಪಾಸ್ ಬರಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಭೂಕಂಪನದ ನಂತರ ಟೋಕಿಯೊ ಮತ್ತು ಅಮೋರಿ ನಡುವಿನ ಬುಲೆಟ್ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು! – Kannada News | ED raids on former union minister rehman khan grandson house In bitcoin Case

ಬೆಂಗಳೂರು, (ಏಪ್ರಿಲ್ 20): ಬಿಟ್‌ಕಾಯಿನ್ ಪ್ರಕರಣಕ್ಕೆ (bitcoin Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬೆಂಗಳೂರಿನಲ್ಲಿ ದಾಳಿ ನಡೆಸಿದೆ. ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಕಾಂಗ್ರೆಸ್ ಶಾಸಕ ಎನ್​​ಎ ಹ್ಯಾರಿಸ್ ಹಾಗೂ ಪುತ್ರ ಮೊಹಮ್ಮದ್ ನಲಪಾಡ್ ಮಾತ್ರವಲ್ಲದೇ ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಅವರ ಮೊಮ್ಮಗ ಮಹಮ್ಮದ್ ಹಕೀಬ್ ಖಾನ್ ಅವರ ನಿವಾಸಗಳ ಮೇಲೆ ಶೋಧ ಕಾರ್ಯಾಚರಣೆ ನಡೆದಿದೆ.

ಬೆಂಗಳೂರಿನ ಜಯನಗರದಲ್ಲಿರುವ ಕೆ.ರೆಹಮಾನ್ ಖಾನ್ ನಿವಾಸಕ್ಕೆ 2 ಇನೋವಾ ಕಾರುಗಳಲ್ಲಿ ಆಗಮಿಸಿರುವ ಇಡಿ ಅಧಿಕಾರಿಗಳ ತಂಡ, ಕಳೆದ ಆರು ಗಂಟೆಗಳಿಂದ ಪರಿಶೀಲನೆ ನಡೆಸಿದೆ. ಹಾಗೇ ಕೆ.ರೆಹಮಾನ್ ಖಾನ್ ಮೊಮ್ಮಗ ಮೊಹಮ್ಮದ್ ಹಕೀಬ್ ನನ್ನು ಸಹ ವಿಚಾರಣೆ ನಡೆಸಿದ್ದಾರೆ.

ಇದನ್ನೂ ನೋಡಿ: ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!

Source link

Meta Layoffs: ಮೇ 20ಕ್ಕೆ ತಯಾರಾಗಿ, ಮೇಟಾದಿಂದ 8 ಸಾವಿರ ಉದ್ಯೋಗಿಗಳು ಔಟ್ – Kannada News | Tech Layoffs Continue: Meta’s AI Push Triggers 16,000 Job Cuts and Workforce Restructuring

ಕ್ಯಾಲಿಫೋರ್ನಿಯಾ, ಏ.20: ಮೆಟಾ ಪ್ಲಾಟ್‌ಫಾರ್ಮ್ಸ್ ತನ್ನ ವ್ಯವಹಾರದಲ್ಲಿ ಮಹತ್ತರ ಬದಲಾವಣೆ ತರಲು ಮುಂದಾಗಿದ್ದು, ಈ ಪ್ರಕ್ರಿಯೆಯಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ಕಂಪನಿಯು ಕೃತಕ ಬುದ್ಧಿಮತ್ತೆ (AI) ಮೇಲೆ ತನ್ನ ಹೂಡಿಕೆಯನ್ನು ದ್ವಿಗುಣಗೊಳಿಸುತ್ತಿದ್ದು, ಈ ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ತನ್ನ ಮಾನವ ಸಂಪನ್ಮೂಲವನ್ನು ಪುನಾರಚಿಸುತ್ತಿದೆ. ವರದಿಗಳ ಪ್ರಕಾರ, ಬರುವ ಮೇ 20ರಿಂದ ಮೆಟಾ ತನ್ನ ಮೊದಲ ಹಂತದ ಲೇ-ಆಫ್ ಆರಂಭಿಸಲಿದ್ದು, ಸುಮಾರು 8,000 ಉದ್ಯೋಗಿಗಳನ್ನು (ಜಾಗತಿಕ ಮಟ್ಟದ 10% ನೌಕರರು) ವಜಾಗೊಳಿಸುವ ಸಾಧ್ಯತೆಯಿದೆ.

ಈ ವರ್ಷದ ಅಂತ್ಯದ ವೇಳೆಗೆ ಒಟ್ಟು ಕಡಿತವು ಕಂಪನಿಯ 20% ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು (ಸುಮಾರು 16,000 ಜನರು) ತಲುಪಬಹುದು ಎಂದು ಅಂದಾಜಿಸಲಾಗಿದೆ. ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಕಂಪನಿಯನ್ನು ಸಂಪೂರ್ಣವಾಗಿ ಎಐ-ಚಾಲಿತ ವ್ಯವಸ್ಥೆಯಾಗಿ ಬದಲಿಸಲು ನಿರ್ಧರಿಸಿದ್ದಾರೆ. ಹೀಗಾಗಿ, ಮ್ಯಾನೇಜ್‌ಮೆಂಟ್ ಹಂತಗಳನ್ನು ಕಡಿಮೆ ಮಾಡಿ, ಹೆಚ್ಚಿನ ಕೆಲಸಗಳನ್ನು ಆಟೊಮೇಷನ್ ಮೂಲಕ ಮಾಡಲು ಯೋಜಿಸಲಾಗಿದೆ.

 ಇದನ್ನೂ ಓದಿ: Tech Tips: ವಾಟ್ಸ್ಆ್ಯಪ್​ನಲ್ಲಿ ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದ್ದಾರಾ? ಈಗ ಸುಲಭವಾಗಿ ಕಂಡುಹಿಡಿಯಿರಿ

ಕಂಪನಿ ಉದ್ಯೋಗ ಕಡಿತದ ಪ್ರಮಾಣ ಪ್ರಮುಖ ಕಾರಣ
ಒರಾಕಲ್ (Oracle) ಸುಮಾರು 30,000 ನೌಕರರು ಎಐ ಡೇಟಾ ಸೆಂಟರ್ ನಿರ್ಮಾಣಕ್ಕೆ ಹಣ ಉಳಿಸಲು.
ಡಿಸ್ನಿ (Disney) ಸುಮಾರು 1,000 ನೌಕರರು ಮಾರ್ವೆಲ್ ಸ್ಟುಡಿಯೋಸ್ ಮತ್ತು ಇಎಸ್‌ಪಿಎನ್ ವಿಭಾಗಗಳ ಪುನಾರಚನೆ.
ಅಮೆಜಾನ್ (Amazon) ಸುಮಾರು 16,000 ನೌಕರರು ಎಐ ಆಧಾರಿತ ಕಾರ್ಯನಿರ್ವಹಣೆಗೆ ಒತ್ತು ನೀಡಲು.
ಸ್ನ್ಯಾಪ್ (Snap Inc) ಸುಮಾರು 1,000 ನೌಕರರು ವೆಚ್ಚ ಕಡಿತ ಮತ್ತು ಬೆಳವಣಿಗೆಯ ವೇಗ ಹೆಚ್ಚಿಸಲು.

ಮೆಟಾ ಮಾತ್ರವಲ್ಲದೆ, ಇಡೀ ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಕಡಿತದ ಅಲೆ ಮುಂದುವರಿದಿದೆ. Layoffs.fyi ಮಾಹಿತಿಯ ಪ್ರಕಾರ, 2026ರ ಆರಂಭದ ನಾಲ್ಕೇ ತಿಂಗಳಲ್ಲಿ ಈಗಾಗಲೇ 73,212ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಒರಾಕಲ್ ಕಂಪನಿಯು ಕೈಗೊಂಡಿರುವ ಭಾರಿ ಉದ್ಯೋಗ ಕಡಿತದ ಪ್ರಭಾವ ಭಾರತದ ಮೇಲೂ ಬೀರಲಿದ್ದು, ಸುಮಾರು 12,000 ಭಾರತೀಯ ನೌಕರರು ಸಂಕಷ್ಟಕ್ಕೆ ಸಿಲುಕಬಹುದು ಎಂದು ವರದಿಗಳು ತಿಳಿಸಿವೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 3’ ಸಿನಿಮಾ ಬರಲಿದೆಯೇ? ಕುತೂಹಲದ ಪ್ರಶ್ನೆಗೆ ಉತ್ತರ ನೀಡಿದ ನಟ ರಾಕೇಶ್ ಬೇಡಿ – Kannada News | Rakesh Bedi talks about possibility of making Dhurandhar 3 with Ranveer Singh

ಆದಿತ್ಯ ಧರ್ ನಿರ್ದೇಶನದ ಹಾಗೂ ರಣವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಹಾಗೂ ‘ಧುರಂಧರ್ 2’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿವೆ. ಎರಡು ಭಾಗಗಳ ಭರ್ಜರಿ ಯಶಸ್ಸಿನ ನಂತರ, ‘ಧುರಂಧರ್ 3’ (Dhurandhar 3) ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಈ ಬೆನ್ನಲ್ಲೇ ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರ ಮಾಡಿ ಗಮನ ಸೆಳೆದಿದ್ದ ಹಿರಿಯ ನಟ ರಾಕೇಶ್ ಬೇಡಿ (Rakesh Bedi) ಅವರು ಮೂರನೇ ಭಾಗದ ಸಾಧ್ಯತೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ‘ಜೂಮ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಕೇಶ್ ಬೇಡಿ, ‘ಮೂರನೇ ಭಾಗ ಬರುತ್ತದೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ, ಕಥೆಯ ಅಂತ್ಯದಲ್ಲಿ ಗೂಢಚಾರಿ ತನ್ನ ದೇಶಕ್ಕೆ ಮರಳುತ್ತಾನೆ. ಕಥೆ ಅಲ್ಲಿಗೆ ಪೂರ್ಣಗೊಂಡಿದೆ’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದ್ದಾರೆ.

ಆದರೆ, ರಾಕೇಶ್ ಬೇಡಿ ಅವರು ಒಂದು ಆಶಾದಾಯಕ ಮಾತು ಕೂಡ ಆಡಿದ್ದಾರೆ. ‘ಧುರಂಧರ್ ಎಂಬುದು ಒಂದು ದೊಡ್ಡ ಫ್ರಾಂಚೈಸಿ. ಹಾಗಾಗಿ ಮುಂದಿನ ದಿನಗಳಲ್ಲಿ ಬೇರೆ ನಟರನ್ನು ಬಳಸಿಕೊಂಡು ಹೊಸ ಕಥೆಯೊಂದಿಗೆ ಈ ಫ್ರಾಂಚೈಸಿಯನ್ನು ಮುಂದುವರಿಸುವ ಸಾಧ್ಯತೆ ಯಾವಾಗಲೂ ಇರುತ್ತದೆ’ ಎಂದಿದ್ದಾರೆ. ಈ ಬಗ್ಗೆ ನಿರ್ದೇಶಕ ಆದಿತ್ಯ ಧರ್ ಏನು ಹೇಳುತ್ತಾರೆ ಎಂಬುದನ್ನು ಕಾದುನೋಡಬೇಕು.

ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರವು ಪಾಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಗೂಢಚಾರಿ ಎಂಬ ಟ್ವಿಸ್ಟ್ ಪ್ರೇಕ್ಷಕರಿಗೆ ದೊಡ್ಡ ಸರ್ಪ್ರೈಸ್ ನೀಡಿತ್ತು. ಈ ಬಗ್ಗೆ ಮಾತನಾಡಿದ ರಾಕೇಶ್ ಬೇಡಿ ಅವರು, ‘ನಾವು ಆ ದೃಶ್ಯವನ್ನು ಚಿತ್ರೀಕರಿಸುವಾಗ ಅದು ಸಾಮಾನ್ಯ ಎನಿಸಿತ್ತು. ಆದರೆ ಪ್ರೇಕ್ಷಕರ ದೃಷ್ಟಿಕೋನವೇ ಬೇರೆಯಾಗಿತ್ತು. ಮೊದಲ ಭಾಗ ಹಿಟ್ ಆದ ಕಾರಣ, ಎರಡನೇ ಭಾಗದ ಮೇಲೆ ಅತೀವ ನಿರೀಕ್ಷೆ ಇತ್ತು. ಈಗ ಜನರು ಮೂರನೇ ಭಾಗಕ್ಕಾಗಿ ಕಾಯುತ್ತಿರುವುದು ಸಹಜ’ ಎಂದಿದಾರೆ.

ಇದನ್ನೂ ಓದಿ: ರಣವೀರ್ ಸಿಂಗ್ ಕೆನ್ನೆ ಮುಟ್ಟಿ ಮಾತಾಡಿಸಿದ ಶಾರುಖ್ ಖಾನ್; ವಿಡಿಯೋ ವೈರಲ್

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳನ್ನು ಸೇರಿಸಿ ಜಾಗತಿಕವಾಗಿ 3,000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. 2025ರ ಡಿಸೆಂಬರ್​ನಲ್ಲಿ ತೆರೆಕಂಡ ‘ಧುರಂಧರ್’ ಚಿತ್ರ 1,300 ಕೋಟಿ ರೂಪಾಯಿ ಗಳಿಸಿತು. ಈ ವರ್ಷ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆದ ‘ಧುರಂಧರ್ 2’ ಸಿನಿಮಾ ಜಾಗತಿಕವಾಗಿ ಇದು 1,700 ಕೋಟಿ ರೂಪಾಯಿಗೂ ಅಧಿಕ ಹಣ ಬಾಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸ್ಕೀಮ್​ನ ಪ್ರಮುಖ ಮಾಹಿತಿ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2019ರಲ್ಲಿ ಆರಂಭವಾಗಿದ್ದು, ರೈತರ ವ್ಯವಸಾಯಕ್ಕೆ ಧನಸಹಾಯ ಮಾಡುವ ಉದ್ದೇಶ ಹೊಂದಿದೆ. ಸ್ವಂತ ಕೃಷಿ ಭೂಮಿ ಹೊಂದಿರುವ ರೈತರು ಈ ಯೋಜನೆ ಅಡಿ ವರ್ಷಕ್ಕೆ 6,000 ರೂ ಅನ್ನು ಪಡೆಯಬಹುದು. ಇದನ್ನು ವರ್ಷಕ್ಕೆ ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರ ನೀಡುತ್ತದೆ. ಇಲ್ಲಿಯವರೆಗೆ ಒಟ್ಟು 22 ಕಂತುಗಳ ಹಣವನ್ನು ಬಿಡುಗಡೆ ಮಾಡಲಾಗಿದೆ. ಒಟ್ಟಾರೆ 4.25 ಲಕ್ಷ ಕೋಟಿ ರೂ ಅನ್ನು ಸರ್ಕಾರವು ರೈತರಿಗೆ ನೀಡಿದೆ.

ಪಿಎಂ ಕಿಸಾನ್ ಯೋಜನೆಯಲ್ಲಿ ಫಲಾನುಭವಿ ರೈತರಿಗೆ ಸರ್ಕಾರ ನೇರ ಹಣ ವರ್ಗಾವಣೆ ಸಿಸ್ಟಂ (ಡಿಬಿಟಿ) ಮೂಲಕ ಹಣ ನೀಡುತ್ತದೆ. ರೈತರ ನೊಂದಾಯಿತ ಬ್ಯಾಂಕ್ ಖಾತೆಗೆ ಹಣ ನೇರವಾಗಿ ಜಮೆ ಆಗುತ್ತದೆ. ಇದು ವಿಶ್ವದ ಅತಿದೊಡ್ಡ ಡಿಬಿಟಿ ಸ್ಕೀಮ್ ಎಂದು ದಾಖಲೆ ಸ್ಥಾಪಿಸಿದೆ.

ಇದನ್ನೂ ಓದಿ: ಹೂಡಿಕೆದಾರರನ್ನು ಸೆಳೆಯುತ್ತಿವೆ ವ್ಯಾಲ್ಯೂ ಮ್ಯೂಚುವಲ್ ಫಂಡ್​ಗಳು; ಏನಿವುಗಳ ವಿಶೇಷತೆ?

ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು, ಯಾರು ಅರ್ಹರಲ್ಲ?

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವವರು ಭಾರತೀಯ ಪ್ರಜೆಯಾಗಿರಬೇಕು; ಸ್ವಂತ ಕೃಷಿ ಭೂಮಿ ಹೊಂದಿರಬೇಕು. ಇವು ಮೂಲಭೂತ ಅರ್ಹತೆ ಅಂಶಗಳು. ಹಾಗೆಯೇ, ರೈತರಾಗಿದ್ದಾಗ್ಯೂ ಕೆಲವೊಂದಿಷ್ಟು ಅಂಶಗಳು ಯೋಜನೆಗೆ ಅನರ್ಹಗೊಳಿಸುತ್ತವೆ. ಅವುಗಳೇನು ಎನ್ನುವ ವಿವರ ಇಲ್ಲಿದೆ.

ರೈತರಾದರೂ ಈ ಕೆಳಗಿನವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಯೋಜನೆ ಅಲಭ್ಯ

  • ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ಜಿಪಂ ಸದಸ್ಯರು
  • ವಕೀಲರು, ವೈದ್ಯರು, ಆರ್ಟಿಟೆಕ್ಟ್ ಇತ್ಯಾದಿ ವೃತ್ತಿಪರರು
  • ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು
  • ನಿವೃತ್ತಗೊಂಡು ಮಾಸಿಕ 10,000 ರೂಗೂ ಅಧಿಕ ಪಿಂಚಣಿ ಪಡೆಯುತ್ತಿರುವವರು
  • ಐಟಿ ರಿಟರ್ನ್ಸ್ ಕಟ್ಟುತ್ತಿರುವವರು
  • 2019ರ ನಂತರ ಜಮೀನು ಖರೀದಿ ಮಾಡಿರುವವರು.

ಮತ್ತೊಂದು ಸಂಗತಿ ಎಂದರೆ, ಒಂದೇ ಕುಟುಂಬದಲ್ಲಿ ಇಬ್ಬರಿಗೆ ಈ ಯೋಜನೆ ಫಲಾನುಭವಿಯಾಗಲು ಅವಕಾಶ ಇರುವುದಿಲ್ಲ. ಒಬ್ಬರಿಗೆ ಮಾತ್ರವೇ ಅವಕಾಶ ಇರುತ್ತದೆ.

ಇದನ್ನೂ ಓದಿ: ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ?

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವುದು ಹೇಗೆ?

  • ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋಗಿ. ಅದರ ವಿಳಾಸ: pmkisan.gov.in/
  • ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಇರುತ್ತದೆ. ಅಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ನಂಬರ್ ಹಾಕಿ, ಕ್ಯಾಪ್ಚಾ ನಮೂದಿಸಿ.
  • ಅಲ್ಲಿ ಕೇಳಲಾಗುವ ವಿವರಗಳನ್ನು ಭರ್ತಿ ಮಾಡಿ, ‘ಯೆಸ್’ ಕ್ಲಿಕ್ ಮಾಡಿ.
  • ಪಿಎಂ ಕಿಸಾನ್ ಅಪ್ಲಿಕೇಶನ್ ಫಾರ್ಮ್ ತೆರೆಯುತ್ತದೆ. ಅಲ್ಲಿ ಮಾಹಿತಿ ತುಂಬಿಸಿ, ಸೇವ್ ಮಾಡಿ.
  • ರೆಫರೆನ್ಸ್​ಗೆಂದು ಒಂದು ಪ್ರಿಂಟೌಟ್ ಬೇಕಾದರೆ ತೆಗೆದುಕೊಳ್ಳಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಇದು ಬೇಸಿಗೆ ರಜೆಯ ಎಫೆಕ್ಟ್; ಆಟದ ನಡುವೆ ಜಗಳಕ್ಕಿಳಿದ ಮಕ್ಕಳು – Kannada News | Big fight between kids during summer vacation, video goes viral

ಬೇಸಿಗೆ ರಜೆ (summer holiday) ಶುರುವಾಯಿತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಈಗಾಗಲೇ ರಜೆ ಶುರುವಾಗಿದೆ, ಮಕ್ಕಳಂತೂ (children) ಈ ರಜೆಯನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಹೆತ್ತವರಿಗೆ ಯಾಕಾದ್ರೂ ಮಕ್ಕಳಿಗೆ ರಜೆ ಶುರುವಾಯಿತು, ಈ ಮಕ್ಕಳ ಕಾಟ ಹೇಗಪ್ಪಾ ತಡೆದುಕೊಳ್ಳೊಕೆ ಆಗ್ತಾ ಇಲ್ಲ ಎನ್ನುತ್ತಿದ್ದಾರೆ. ಈ ವಿಡಿಯೋ ನೋಡಿದ್ರೆ ಈ ಮಕ್ಕಳನ್ನು ಹೆತ್ತವರು ಹೇಗೆ ಸಹಿಸಿಕೊಳ್ತಾರೆ ಎಂದು ನಿಮಗೆ ಅನಿಸಬಹುದು. ಈ ಪುಟಾಣಿಗಳ ನಡುವೆ ಜಗಳ ಶುರುವಾಗಿದ್ದು, ನಾನಾ ನೀನಾ ನೋಡೇ ಬಿಡೋಣ ಎನ್ನುವಂತೆ ಕಿತ್ತಾಡಿಕೊಂಡಿದ್ದಾರೆ. ಈ ಮಕ್ಕಳ ಜಗಳದ ವಿಡಿಯೋ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ramya93kumar ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಗಳು ರಜಾ ಮಜಾದಲ್ಲಿದ್ದಾರೆ. ಪುಟಾಣಿಗಳು ಒಂದೆಡೆ ಸೇರಿ ಆಟ ಆಡುತ್ತಿದ್ದು, ಈ ನಡುವೆ ಈ ಮಕ್ಕಳ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ತನ್ನ ಸ್ನೇಹಿತರಿಬ್ಬರೂ ಜಗಳವಾಡುತ್ತಿದ್ದನ್ನು ನೋಡಿ ಮತ್ತೊಬ್ಬನು ಈ ಜಗಳವನ್ನು ಬಿಡಿಸಲು ಮುಂದೆ ಬಂದಿರುವುದನ್ನು ಕಾಣಬಹುದು. ಕೊನೆಗೆ ಮಹಿಳೆಯೊಬ್ಬಳು ಮಕ್ಕಳಿಗೆ ಗದರಿ ಸುಮ್ಮನೆ ಕುಳಿತುಕೊಳ್ಳುವಂತೆ ಹೇಳಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕಲಾವಿದ ಕುಣಿಯುತ್ತಿದ್ದಂತೆ ಕೈ ನೋವಿದ್ರೂ ಪುಟ್ಟ ಹೆಜ್ಜೆಯಿಟ್ಟು ಹೆಜ್ಜೆ ಹಾಕಿದ ಪುಟಾಣಿ

ಈ ವಿಡಿಯೋ ಮೂವತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಏನಾದರೂ ಆಗಲಿ ಸಾಂಗ್ ಸೆಲೆಕ್ಷನ್ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಮ್ಮ ಮನೆಲ್ಲೂ ಇದೇ ಪರಿಸ್ಥಿತಿ, ಏನು ಮಾಡೋಕು ಆಗಲ್ಲ ಎಂದು ಕಾಮೆಂಟ್ ಮಾಡಿ ಹೇಳಿದ್ದಾರೆ. ಮತ್ತೊಬ್ಬರು, ಪ್ರೈವೇಟ್ ಸ್ಕೂಲ್ ಅವರು ಯಾಕೆ ಅಷ್ಟೊಂದು ಫೀಸ್ ತಕೊಳ್ತಾರೆ ಅಂತ ಈವಾಗ ಗೊತ್ತಾಯಿತು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:19 pm, Mon, 20 April 26

Source link

IPL 2026: ಮೊದಲ ಗೆಲುವಿನ ಬಳಿಕ ಕಣ್ಣೀರಿಟ್ಟ ಕೆಕೆಆರ್​ ತಂಡದ ಆಟಗಾರರು – Kannada News | KKR IPL First Win: Varun Chakravarthy Reveals Emotional Dressing Room Tears

ಐಪಿಎಲ್ (IPL) ಟ್ರೋಫಿಯನ್ನು 3 ಬಾರಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR), 19 ನೇ ಸೀಸನ್‌ನಲ್ಲಿ ತಮ್ಮ ಮೊದಲ ಗೆಲುವಿಗಾಗಿ ಏಳನೇ ಪಂದ್ಯಕ್ಕಾಗಿ ಕಾಯಬೇಕಾಯಿತು. ತಂಡದಲ್ಲಿ ಪ್ರತಿಭಾವಂತ ಬ್ಯಾಟ್ಸ್‌ಮನ್ ಮತ್ತು ಬೌಲರ್ ಇದ್ದರೂ, ಕೆಕೆಆರ್ ಮೊದಲ 6 ಪಂದ್ಯಗಳಲ್ಲಿ 5 ರಲ್ಲಿ ಸೋಲಬೇಕಾಯಿತು. ಮಳೆಯಿಂದಾಗಿ 1 ಪಂದ್ಯ ರದ್ದಾಯಿತು. ಆದಾಗ್ಯೂ ಕೆಕೆಆರ್ ತನ್ನ ಅಭಿಯಾನದ ಏಳನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಸತತ ಸೋಲುಗಳ ಸರಣಿಯನ್ನು ಮುರಿಯಿತು. ಅದರಲ್ಲೂ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ್ದು ಕೆಕೆಆರ್ ತಂಡಕ್ಕೆ ಆನೆಬಲ ತಂದುಕೊಟ್ಟಿದೆ. ಮಾತ್ರವಲ್ಲದೆ ಸತತ ಸೋಲುಗಳಿಂದ ಎಲ್ಲರ ಟೀಕೆಗೆ ಗುರಿಯಾಗಿದ್ದ ಕೆಕೆಆರ್ ತಂಡದ ಆಟಗಾರರು ಈ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್​​ನಲ್ಲಿ ಕುಳಿತು ಪುಟ್ಟ ಮಕ್ಕಳಂತೆ ಕಣ್ಣೀರಿಟ್ಟಿದ್ದಾರೆ. ಈ ವಿಚಾರವನ್ನು ತಂಡದ ಸ್ಟಾರ್ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ಬಹಿರಂಗಪಡಿಸಿದ್ದಾರೆ.

ಆಟಗಾರರ ಕಣ್ಣಂಚಲ್ಲಿ ನೀರು ತುಂಬಿತ್ತು

ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಮ್​ನಲ್ಲಿ ಯಾವ ರೀತಿಯ ವಾತಾವರಣವಿತ್ತು ಎಂಬುದನ್ನು ಬಹಿರಂಗಪಡಿಸಿರುವ ವರುಣ್ ಚಕ್ರವರ್ತಿ, ತಂಡದ ಮೊದಲ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್​ನಲ್ಲಿ ಹಲವು ಆಟಗಾರರ ಕಣ್ಣಂಚಲ್ಲಿ ನೀರು ತುಂಬಿತ್ತು. ಎಲ್ಲರೂ ಭಾವುಕರಾಗಿ ಕಾಣಿಸುತ್ತಿದ್ದರು. ಸತತ ಸೋಲುಗಳಿಂದ ನಮ್ಮ ತಂಡ ಹೊರಗಿನಿಂದ ಸಾಕಷ್ಟು ಟೀಕೆಗಳನ್ನು ಕೇಳಬೇಕಾಯಿತು. ಅಂತಿಮವಾಗಿ ಮೊದಲ ಗೆಲುವು ತಂಡದ ಆಟಗಾರರನ್ನು ಭಾವುಕರಾಗಿಸಿತು. ಹೇಳಬೇಕೆಂದರೆ 2024 ರಲ್ಲಿ ನಾವು ಐಪಿಎಲ್ ಟ್ರೋಫಿ ಗೆದ್ದಾಗಲೂ ಇಷ್ಟು ಭಾವುಕರಾಗಿಲ್ಲ ಎಂದಿದ್ದಾರೆ.

ಈ ಗೆಲುವಿನ ಕ್ರೆಡಿಟ್ ನೀಡಬೇಕು

ಮುಂದುವರೆದು ಮಾತನಾಡಿರುವ ವರುಣ್, ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನವೇ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆ ತಂಡವನ್ನು ಸಂಕಷ್ಟಕ್ಕೆ ತಳ್ಳಿತ್ತು. ಅಲ್ಲದೆ ಅವರ ಬದಲಿಯಾಗಿ ಬೇರೆಯವರನ್ನು ಹುಡುಕುವುದು ಮತ್ತು ಗೆಲುವಿನ ಲಯ ಕಂಡುಕೊಳ್ಳುವುದು ಕಷ್ಟಕರವಾಗಿತ್ತು. ಹೌದು ನಾವು ಇನ್ನು ಕೆಲವು ಕ್ಷೇತ್ರಗಳಲ್ಲಿ ಸುಧಾರಿಸಬೇಕಾಗಿದೆ. ಆದರೆ ನಮ್ಮ ಸಾಂಘಿಕ ಪ್ರದರ್ಶನ ಇಂದು ನಮಗೆ ಗೆಲುವು ತಂದುಕೊಟ್ಟಿದೆ. ಇದಕ್ಕೆ ನಾವು ತಂಡದ ತರಬೇತುದಾರರು, ಮುಖ್ಯವಾಗಿ ಹೆಡ್ ಕೋಚ್ ಅಭಿಷೇಕ್ ಶರ್ಮಾ ಅವರಿಗೆ ಈ ಗೆಲುವಿನ ಕ್ರೆಡಿಟ್ ನೀಡಬೇಕು. ಅವರು ತಂಡವನ್ನು ಬಹಳ ಕಠಿಣ ಪರಿಸ್ಥಿತಿಯಿಂದ ಹೊರತಂದಿದ್ದಾರೆ. ನಿಧಾನವಾಗಿ, ಹಂತ ಹಂತವಾಗಿ, ಸಣ್ಣ ಗೆಲುವುಗಳೊಂದಿಗೆ, ನಾವು ಮತ್ತೆ ಹಳಿಗೆ ಬರುತ್ತೇವೆ ಎಂದಿದ್ದಾರೆ.

KKR vs RR: ರಿಂಕುಗೆ ಜೀವದಾನ ನೀಡಿ ಸೋತ ರಾಜಸ್ಥಾನ್; ಕೆಕೆಆರ್​ಗೆ ಮೊದಲ ಜಯ

ಪಂದ್ಯ ಹೀಗಿತ್ತು

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 155 ರನ್‌ಗಳಿಸಿತು. ಕೆಕೆಆರ್ ಪರ, ವರುಣ್ ಚಕ್ರವರ್ತಿ ಮತ್ತು ಕಾರ್ತಿಕ್ ತ್ಯಾಗಿ ಇಬ್ಬರೂ ತಲಾ 3 ವಿಕೆಟ್ ಪಡೆದರು. ನಂತರ, 156 ರನ್‌ಗಳನ್ನು ಬೆನ್ನಟ್ಟಿದ ಕೆಕೆಆರ್ 14 ಓವರ್‌ಗಳಲ್ಲಿ 85 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದಾಗ್ಯೂ, ಏಕಾಂಗಿ ಹೋರಾಟ ನೀಡಿದ ರಿಂಕು ಸಿಂಗ್ ಮತ್ತು ಅನುಕುಲ್ ರಾಯ್ ತಂಡಕ್ಕೆ ಗೆಲುವು ತಂದುಕೊಟ್ಟರು. ರಿಂಕು ಅಜೇಯ 53 ಮತ್ತು ಅನುಕುಲ್ 29 ರನ್ ಗಳಿಸಿ ಕೆಕೆಆರ್‌ಗೆ ಮೊದಲ ಗೆಲುವು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:00 pm, Mon, 20 April 26

Source link

ಬೆಂಗಳೂರಿನ ಪ್ರಮುಖ ಕೆರೆಗೆ ಕಲುಷಿತ ನೀರು! ಪೈಪ್ ಮೂಲಕ ಕೊಳಚೆ ನೀರು ಹರಿಯಬಿಟ್ಟ ಅಪಾರ್ಟ್​ಮೆಂಟ್ – Kannada News | Bengaluru Lake Pollution: Trinity Acres Apartment Accused of Releasing Sewage Water into Ambalipura Lake

ಬೆಂಗಳೂರು, ಏಪ್ರಿಲ್ 20: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಕೆರೆಗಳ ಉಳಿವಿಗಾಗಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ ಲೋವರ್ ಅಂಬಲಿಪುರ ಕೆರೆಗೆ (Lower Ambalipura Lake) ದೊಡ್ಡ ಕಂಟಕ ಎದುರಾಗಿದೆ. ಕೆರೆಗೆ ಹೊಂದಿಕೊಂಡೇ ಇರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಸಮುಚ್ಚಯವೊಂದು ಪೈಪ್‌ಗಳ ಮೂಲಕ ನೇರವಾಗಿ ಕೊಳಚೆ ನೀರನ್ನು ಕೆರೆಯ ಒಡಲಿಗೆ ಹರಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ಟ್ರಿನಿಟಿ ಏಕರ್ಸ್ ಅಪಾರ್ಟ್‌ಮೆಂಟ್ ವಿರುದ್ಧ ಆರೋಪ

ಇಬ್ಬಲೂರು ಬಳಿಯ ಅಂಬಲಿಪುರ ಕೆರೆಗೆ ಪಕ್ಕದಲ್ಲೇ ಇರುವ ‘ಟ್ರಿನಿಟಿ ಏಕರ್ಸ್ ಅಂಡ್ ವುಡ್’ ಅಪಾರ್ಟ್‌ಮೆಂಟ್‌ನಿಂದ ಕಲುಷಿತ ನೀರು ಹರಿಯುತ್ತಿದೆ. ಸುಮಾರು 300 ಕುಟುಂಬಗಳು ವಾಸವಾಗಿರುವ ಈ ಸಮುಚ್ಚಯದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಶುದ್ಧೀಕರಿಸದೆ (STP ಬಳಸದೆ), ಎರಡು ಪೈಪ್‌ಗಳ ಮೂಲಕ ನೇರವಾಗಿ ಕೆರೆಗೆ ಬಿಡಲಾಗುತ್ತಿದೆ. ಇದು ಕೆರೆಯ ಜೀವವೈವಿಧ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.

ನಿವಾಸಿಗಳಿಂದಲೇ ದೂರು

ವಿಶೇಷವೆಂದರೆ, ಇದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಕೆಲವು ಮಂದಿ ನಿವಾಸಿಗಳೇ ಅಸೋಸಿಯೇಷನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಹಲವು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈ ಕೆರೆಯನ್ನು ಪುನರುಜ್ಜೀವನಗೊಳಿಸಲಾಗಿತ್ತು. ಆದರೆ ಈಗ ಕಲುಷಿತ ನೀರು ಸೇರುತ್ತಿರುವುದರಿಂದ ಕೆರೆ ಮತ್ತೆ ಹಾಳಾಗುತ್ತಿದೆ. ಈ ಬಗ್ಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ಅಕ್ಷತಾ ದೂರಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ನದಿಗಳು ಖಾಲಿ ಖಾಲಿ, ಕುಸಿಯುತ್ತಿರುವ ಅಂತರ್ಜಲ: 114 ಗ್ರಾಮಗಳಲ್ಲಿ ಜಲಕ್ಷಾಮದ ಭೀತಿ

ಪ್ರಸ್ತುತ ಅಂಬಲಿಪುರ ಕೆರೆಗೆ ಈ ಅಪಾರ್ಟ್‌ಮೆಂಟ್‌ನ ಪೈಪ್‌ಗಳ ಹೊರತಾಗಿ ಬೇರೆ ಯಾವುದೇ ಕಲುಷಿತ ನೀರಿನ ಸಂಪರ್ಕವಿಲ್ಲ. ಕೆರೆಗೆ ಪೈಪ್ ಸಂಪರ್ಕ ಕಲ್ಪಿಸಿರುವುದೇ ಕಾನೂನುಬಾಹಿರವಾಗಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಮತ್ತು ಬಿಬಿಎಂಪಿ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕೆರೆಗೆ ವಿಷಕಾರಕ ನೀರು ಹರಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಣ್ಣು ಮಗುವಿಗೆ ಜನ್ಮ ನೀಡಿದ ಅಟ್ಲಿ ಪತ್ನಿ ಪ್ರಿಯಾ; ಸಂಭ್ರಮದಲ್ಲಿ ‘ರಾಕಾ’ ಸಿನಿಮಾ ನಿರ್ದೇಶಕ – Kannada News | Raaka director Atlee wife Priya welcomed second child Baby Girl

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ ಹಾಗೂ ಅವರ ಪತ್ನಿ ಪ್ರಿಯಾ (Priya Atlee) ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಈ ದಂಪತಿ ಎರಡನೇ ಬಾರಿಗೆ ಪೋಷಕರಾಗಿದ್ದು, ಮುದ್ದಾದ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ವಿಶೇಷವೆಂದರೆ, ಅಟ್ಲಿ (Raaka) ನಿರ್ದೇಶನದ ‘ರಾಕಾ’ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಅವರು ತಮ್ಮ ಎರಡನೇ ಪ್ರೆಗ್ನೆನ್ಸಿ ಸುದ್ದಿಯನ್ನು ಹಂಚಿಕೊಂಡ ಮರುದಿನವೇ ಅಟ್ಲೀ ಕೂಡ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪ್ರಿಯಾ ಅಟ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸೋಮವಾರ (ಏಪ್ರಿಲ್ 20) ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಪೋಸ್ಟ್ ಹಂಚಿಕೊಂಡಿರುವ ಅಟ್ಲಿ ಮತ್ತು ಪ್ರಿಯಾ, ತಮಗೆ ಹೆಣ್ಣು ಮಗು ಜನಿಸಿರುವುದನ್ನು ಖಚಿತಪಡಿಸಿದ್ದಾರೆ. ‘ಧನ್ಯತೆಯ ಭಾವ ಮೂಡಿದೆ’ ಎಂದು ಈ ಪೋಸ್ಟ್‌ಗೆ ಅಟ್ಲಿ ಕ್ಯಾಪ್ಷನ್ ನೀಡಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಮೊದಲ ಪುತ್ರ ಮೀರ್ ಈಗ ದೊಡ್ಡ ಅಣ್ಣನ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿರುವ ಮುದ್ದಾದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ.

ಅಟ್ಲಿ ದಂಪತಿಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಚಿತ್ರರಂಗದ ಸ್ನೇಹಿತರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸಮಂತಾ ರುತ್ ಪ್ರಭು ಅವರು ‘ಅಭಿನಂದನೆಗಳು’ ಎಂದು ಕಮೆಂಟ್ ಮಾಡಿದ್ದಾರೆ. ‘ತುಂಬಾ ತುಂಬಾ ಅಭಿನಂದನೆಗಳು’ ಎಂದು ಅನನ್ಯ ಪಾಂಡೆ ಶುಭ ಹಾರೈಸಿದ್ದಾರೆ. ‘ಅಭಿನಂದನೆಗಳು. ಮಗುವಿಗೆ, ತಂದೆ-ತಾಯಿ ಹಾಗೂ ಅಣ್ಣ ಮೀರ್‌ಗೆ ಪ್ರೀತಿಯ ಶುಭಾಶಯಗಳು’ ಕಾಜಲ್ ಅಗರ್ವಾಲ್ ಎಂದು ಬರೆದುಕೊಂಡಿದ್ದಾರೆ.

ಪ್ರಿಯಾ ಮತ್ತು ಅಟ್ಲಿ ಅವರು ಹಲವು ವರ್ಷಗಳ ಕಾಲ ಪ್ರೀತಿಸಿ 2014ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಎಂಟು ವರ್ಷಗಳ ನಂತರ ಅಂದರೆ, 2023ರ ಜನವರಿ 31ರಂದು ದಂಪತಿಗೆ ಮೊದಲ ಪುತ್ರ ಮೀರ್ ಜನಿಸಿದ್ದನು. ಈಗ ಎರಡನೇ ಮಗುವಿನ ಆಗಮನದಿಂದ ಅಟ್ಲಿ ಕುಟುಂಬದಲ್ಲಿ ಸಂಭ್ರಮ ಇಮ್ಮಡಿಯಾಗಿದೆ. ಚಿತ್ರರಂಗದಲ್ಲಿ ಅಟ್ಲಿ ಅವರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: ಅಲ್ಲು ಅರ್ಜುನ್-ಅಟ್ಲಿ ಸಿನಿಮಾಕ್ಕೆ 100 ದಿನ ಮೀಸಲಿಟ್ಟ ದೀಪಿಕಾ ಪಡುಕೋಣೆ

ಈಗ ‘ರಾಕಾ’ ಚಿತ್ರದ ಕೆಲಸಗಳಲ್ಲಿ ಅಟ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಭಾರಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರ್ಕಾರಿ ಅಧಿಕಾರಿಗಳಿಗೆ ಶೇ. 30ರಷ್ಟು ಸಂಬಳ ಕಡಿತ; ಹಿಮಾಚಲ ಪ್ರದೇಶದಲ್ಲಿ ಹೊಸ ನಿಯಮ ಜಾರಿ – Kannada News | Himachal Pradesh Government Imposes 30 percent Salary Cut on senior officers amid Financial crisis

ನವದೆಹಲಿ, ಏಪ್ರಿಲ್ 20: ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದನ್ನು ಸರಿದೂಗಿಸಲು ಸರ್ಕಾರದ ಹಿರಿಯ ಅಧಿಕಾರಿಗಳ ಸಂಬಳದ ಶೇ. 30ರಷ್ಟನ್ನು ಕಡಿತ ಮಾಡಲು ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ. ಏಪ್ರಿಲ್ ತಿಂಗಳಿಂದ 6 ತಿಂಗಳವರೆಗೆ ಕೇವಲ ಶೇ. 70ರಷ್ಟು ಸಂಬಳವನ್ನು ಮಾತ್ರ ಹಿರಿಯ ಅಧಿಕಾರಿಗಳಿಗೆ ನೀಡಲಾಗುತ್ತದೆ. ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ಸುಖು ಸರ್ಕಾರವು ರಾಜ್ಯದ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ತಡೆಹಿಡಿಯಲಾದ ಸಂಬಳವನ್ನು ಹಿಂತಿರುಗಿಸಲಾಗುತ್ತದೆ. ಆರ್ಥಿಕ ಒತ್ತಡದ ಮಧ್ಯೆ ರಾಜ್ಯ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಸರ್ಕಾರದ ಅಧಿಸೂಚನೆಯ ಪ್ರಕಾರ, ಹಿಮಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತು ಹಿರಿಯ ಅರಣ್ಯ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳು ಶೇ. 30ರಷ್ಟು ವೇತನ ಮುಂದೂಡಿಕೆಯನ್ನು ಎದುರಿಸಬೇಕಾಗುತ್ತದೆ. ಕಾರ್ಯದರ್ಶಿಗಳು, ಇಲಾಖೆಗಳ ಮುಖ್ಯಸ್ಥರು, ಪೊಲೀಸ್ ಮಹಾನಿರ್ದೇಶಕರು ಮತ್ತು ವಿಭಾಗೀಯ ಅರಣ್ಯ ಅಧಿಕಾರಿ ಶ್ರೇಣಿಯವರೆಗಿನ ಅರಣ್ಯ ಅಧಿಕಾರಿಗಳ ಮಟ್ಟದ ಅಧಿಕಾರಿಗಳು ಶೇ. 20ರಷ್ಟು ಸಂಬಳ ಕಡಿತವನ್ನು ಹೊಂದಲಿದ್ದಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶ: ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯ ಶಿರಚ್ಛೇದ ಮಾಡಿದ ಕ್ರೂರಿಗಳು

ಈ ಸಂಬಳ ಕಡಿತವು ಶಾಶ್ವತವಲ್ಲ, ಬದಲಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ತಡೆಹಿಡಿಯಲಾದ ಸಂಬಳವನ್ನು ನೌಕರರಿಗೆ ಹಿಂತಿರುಗಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದಲ್ಲದೆ, ಈ ಮೊತ್ತವನ್ನು ಪಿಂಚಣಿ, ರಜೆ ನಗದು ಮತ್ತು ಇತರ ಸೇವಾ ಪ್ರಯೋಜನಗಳಲ್ಲಿ ಸೇರಿಸಲಾಗುವುದು. ಆದ್ದರಿಂದ ಇದು ನೌಕರರ ಪಿಎಫ್ ಇತ್ಯಾದಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: DA Hike: ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್; ಶೇ. 2ರಷ್ಟು ತುಟ್ಟಿ ಭತ್ಯೆ ಹೆಚ್ಚಳ

ಈ ನಿರ್ಧಾರದ ವ್ಯಾಪ್ತಿಯು ಉನ್ನತ ಅಧಿಕಾರಿಗಳಿಗೆ ಸೀಮಿತವಾಗಿಲ್ಲ, ವಿವಿಧ ಹಂತಗಳಲ್ಲಿರುವ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸಹ ಅನ್ವಯಿಸುತ್ತದೆ. ಸರ್ಕಾರವು ಈಗಾಗಲೇ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರಿಗೆ ತಾತ್ಕಾಲಿಕ ವೇತನ ಕಡಿತವನ್ನು ಜಾರಿಗೆ ತಂದಿದೆ. ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:22 pm, Mon, 20 April 26

Source link

Exit mobile version