ಸಂಸ್ಕೃತ ಕೇವಲ ಭಾಷೆಯಲ್ಲ ಅದು ಸಂಸ್ಕಾರ, ಭಾರತದ ಆತ್ಮ: ಮೋಹನ್ ಭಾಗವತ್ – Kannada News | Mohan Bhagwat: Sanskrit is India’s Soul, Not Just a Language Pranav Inaugurated
ನವದೆಹಲಿ, ಏಪ್ರಿಲ್ 20: ಸಂಸ್ಕೃತ(Sanskrit) ಒಂದು ಭಾಷೆಯಲ್ಲ ಅದು ಸಂಸ್ಕಾರ, ಭಾರತದ ಆತ್ಮ ಎಂದು ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ. ಅಕ್ಷಯ ತೃತೀಯದಂದು ಆರಂಭವಾಗುವ ಕಾರ್ಯಕ್ಕೆ ಎಂದೂ ಅಂತ್ಯವಿಲ್ಲ. ಭಾರತ ಎಂದರೆ ಕೇವಲ ಭೂಪಟವಲ್ಲ ಅಥವಾ ರಾಜಕೀಯ ಭೌಗೋಳಿಕ ಘಟಕವಲ್ಲ. ಭಾರತವನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಸ್ಕೃತವನ್ನು ತಿಳಿಯುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಅಂಗಸಂಸ್ಥೆ ಸಂಸ್ಕೃತ ಭಾರತಿಯ ನೂತನ ಕಾರ್ಯಾಲಯ ಮತ್ತು ಅಂತಾರಾಷ್ಟ್ರೀಯ ತರಬೇತಿ ಕೇಂದ್ರವಾದ ‘ಪ್ರಣವಃ’ ಅನ್ನು…