ಒಸಡುಗಳಲ್ಲಿ ರಕ್ತ ಬರುವುದು ಡಯಾಬಿಟಿಸ್ ಬರುವ ಮುನ್ಸೂಚನೆಯೇ? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ – Kannada News | Diabetes & Heart Disease: Gum Connection
ಸಾಮಾನ್ಯವಾಗಿ ಕೆಲವರಿಗೆ ಹಲ್ಲುಜ್ಜುವಾಗ ಅಥವಾ ಗಟ್ಟಿಯಾದ ಆಹಾರ ಸೇವನೆ ಮಾಡಿದಾಗ ಒಸಡುಗಳಿಂದ ರಕ್ತಸ್ರಾವವಾಗುತ್ತದೆ. ಇದು ಕೆಲವರ ಅನುಭವಕ್ಕೆ ಬಂದಿರಬಹುದು. ಅಪರೂಪಕ್ಕೆ ಈ ರೀತಿಯಾಗುವುದು ಬಹಳ ಸಾಮಾನ್ಯ. ಆದರೆ ಪದೇ ಪದೇ ಈ ರೀತಿಯಾಗುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಕೆಲವರು ಒಸಡುಗಳಿಂದ ರಕ್ತಸ್ರಾವವಾಗುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಬಹುದು, ಆದರೆ ಈ ರೀತಿ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಬಾರದು. ಏಕೆಂದರೆ ಇದು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಹಾಗಾದರೆ ಒಸಡುಗಳಲ್ಲಿ ರಕ್ತಸ್ರಾವವಾಗುವುದಕ್ಕೆ ಕಾರಣವೇನು,…