Gold Rates: ಹತ್ತು ಗ್ರಾಮ್ ಚಿನ್ನದ ಬೆಲೆ 10 ದಿನದಲ್ಲಿ 6,100 ರೂ ಏರಿಕೆ – Kannada News | Gold Price Today on 19th April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold Rates) ತೂಗುಯ್ಯಾಲೆಯಂತೆ ಆಡುತ್ತಿವೆ. ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 145 ರೂ ಏರಿಕೆಯಾಗಿದೆ. ಬೆಳ್ಳಿ ಬೆಲೆ 10 ರೂ ಹಿಗ್ಗಿದೆ. ಕಳೆದ ಎರಡು ವಾರಗಳಿಂದ ಕಣ್ಣಾಮುಚ್ಚಾಳೆ ಆಡುತ್ತಿದ್ದರೂ ಹತ್ತು ದಿನದಲ್ಲಿ ಇವೆರಡರ ಬೆಲೆಗಳು ಸಖತ್ತಾಗಿ ಏರಿವೆ. ಚಿನ್ನದ ಬೆಲೆ ಭಾರತದಲ್ಲಿ 10 ದಿನದಲ್ಲಿ ಸುಮಾರು 600ಕ್ಕೂ ಅಧಿಕ ಮೊತ್ತದಷ್ಟು ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆ 25 ರೂಗಳಷ್ಟು ದುಬಾರಿಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,780 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 19ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,578 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,280 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,684 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,578 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,280 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,280 ರೂ
  • ಚೆನ್ನೈ: 14,360 ರೂ
  • ಮುಂಬೈ: 14,280 ರೂ
  • ದೆಹಲಿ: 14,295 ರೂ
  • ಕೋಲ್ಕತಾ: 14,280 ರೂ
  • ಕೇರಳ: 14,280 ರೂ
  • ಅಹ್ಮದಾಬಾದ್: 14,285 ರೂ
  • ಜೈಪುರ್: 14,295 ರೂ
  • ಲಕ್ನೋ: 14,295 ರೂ
  • ಭುವನೇಶ್ವರ್: 14,280 ರೂ

ಇದನ್ನೂ ಓದಿ: ಕಳೆದ 5 ವರ್ಷದಿಂದ ಅಕ್ಷಯ ತೃತೀಯದಂದು ಚಿನ್ನ ಖರೀದಿಸುತ್ತಿದ್ದರೆ ಇವತ್ತಿನ ಮೌಲ್ಯವೆಷ್ಟಿರುತ್ತಿತ್ತು ಗೊತ್ತಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 593 ರಿಂಗಿಟ್ (13,896 ರುಪಾಯಿ)
  • ದುಬೈ: 544.50 ಡಿರಾಮ್ (13,728 ರುಪಾಯಿ)
  • ಅಮೆರಿಕ: 152 ಡಾಲರ್ (14,076 ರುಪಾಯಿ)
  • ಸಿಂಗಾಪುರ: 190.40 ಸಿಂಗಾಪುರ್ ಡಾಲರ್ (13,848 ರುಪಾಯಿ)
  • ಕತಾರ್: 540.50 ಕತಾರಿ ರಿಯಾಲ್ (13,730 ರೂ)
  • ಸೌದಿ ಅರೇಬಿಯಾ: 552 ಸೌದಿ ರಿಯಾಲ್ (13,627 ರುಪಾಯಿ)
  • ಓಮನ್: 57.75 ಒಮಾನಿ ರಿಯಾಲ್ (13,891 ರುಪಾಯಿ)
  • ಕುವೇತ್: 44.86 ಕುವೇತಿ ದಿನಾರ್ (13,567 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 275 ರೂ
  • ಚೆನ್ನೈ: 280 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 280 ರೂ
  • ಅಹ್ಮದಾಬಾದ್: 275 ರೂ
  • ಜೈಪುರ್: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 280 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಮತೆಯ ಮುಂದೆ ಮಣಿದ ವೈಕಲ್ಯ, ಬಾಯಿಯಿಂದ ಬಟ್ಟೆ ಹೊಲಿಯುತ್ತಾ ಮಕ್ಕಳ ಬಾಳು ಬೆಳಗಿದ ಮಹಿಳೆಯ ಅಪೂರ್ವ ಸಾಹಸ – Kannada News | Defying Limits: 81 Year Old Woman Without Limbs Raises Three Children

ಬೈಯಿಮ್, ಏಪ್ರಿಲ್ 19: ಜೀವನದಲ್ಲಿ ಸಣ್ಣಪುಟ್ಟ ಕಷ್ಟ ಬಂದಾಗ ನಾವು ಕುಗ್ಗಿಹೋಗುತ್ತೇವೆ. ಆದರೆ ಚೀನಾದ ಗನ್ಸು ಪ್ರಾಂತ್ಯದ ವಾಂಗ್ ಯುಶಿ ಎಂಬ 81 ವರ್ಷದ ವೃದ್ಧೆಯ ಕಥೆ ಕೇಳಿದರೆ, ನಮ್ಮ ಸಮಸ್ಯೆಗಳೆಲ್ಲವೂ ಅತ್ಯಂತ ಚಿಕ್ಕವು ಎನಿಸುತ್ತವೆ. ಹುಟ್ಟುತ್ತಲೇ ಕೈಕಾಲುಗಳಿಲ್ಲದಿದ್ದರೂ, ಶೂನ್ಯದಿಂದ ಬದುಕು ಕಟ್ಟಿಕೊಂಡ ಈಕೆ ಇಂದು ಚೀನಾದಲ್ಲಿ “ಅತ್ಯಂತ ಬಲಿಷ್ಠ ತಾಯಿ” ಎಂದು ಕರೆಸಿಕೊಳ್ಳುತ್ತಿದ್ದಾರೆ.

ಹೆಸರಿಲ್ಲದ 27 ವರ್ಷಗಳು ಮತ್ತು ಅತಂತ್ರ ಬಾಲ್ಯ
ವಾಂಗ್ ಅವರ ಬದುಕು ಹೋರಾಟದಿಂದಲೇ ಆರಂಭವಾಯಿತು. ಜನ್ಮಜಾತ ವೈಕಲ್ಯದಿಂದ ಹುಟ್ಟಿದ ಈಕೆಗೆ ಇಪ್ಪತ್ತರ ದಶಕದವರೆಗೂ ಸ್ವಂತ ಹೆಸರೂ ಇರಲಿಲ್ಲ, ಎಲ್ಲರೂ ಆಕೆಯನ್ನು ಗುರುತಿಸುತ್ತಿದ್ದದ್ದು ಅವಳ ವೈಕಲ್ಯದಿಂದಲೇ. ಕೊನೆಗೆ 27ನೇ ವಯಸ್ಸಿನಲ್ಲಿ ಅಧಿಕಾರಿಯೊಬ್ಬರು ‘ವಾಂಗ್ ಯುಶಿ’ ಎಂದು ಹೆಸರಿಟ್ಟಾಗ ಆಕೆಗೆ ಒಂದು ಅಧಿಕೃತ ಗುರುತು ಸಿಕ್ಕಿತು.

ಒಬ್ಬಂಟಿಯಾಗಿ ಮೂವರು ಮಕ್ಕಳನ್ನು ಸಾಕಿ ಸಲಹಿದ ತಾಯಿ
ಮದುವೆಯ ನಂತರ ವಾಂಗ್ ಅವರಿಗೆ ಒಬ್ಬ ಮಗಳು ಮತ್ತು ಇಬ್ಬರು ಗಂಡು ಮಕ್ಕಳಾದರು. ಬಡತನದ ಕಾರಣ ಅವರ ಪತಿ ಕೆಲಸಕ್ಕಾಗಿ ಸದಾ ಊರು ಬಿಟ್ಟಿರಬೇಕಿತ್ತು. ಇಂತಹ ಸ್ಥಿತಿಯಲ್ಲಿ, ಕೈಕಾಲುಗಳಿಲ್ಲದ ವಾಂಗ್ ಅವರ ಮೇಲೆ ಇಡೀ ಮನೆಯ ಜವಾಬ್ದಾರಿ ಬಿತ್ತು. ಆದರೆ ಅವರು ಎದೆಗುಂದಲಿಲ್ಲ. ಕೃಷಿ ಪ್ರಧಾನವಾದ ಆ ಹಳ್ಳಿಯಲ್ಲಿ ಮನೆಯ ಕೆಲಸಗಳನ್ನು ಅವರು ಮಾಡತೊಡಗಿದ ರೀತಿ ಕಂಡರೆ ಇಂದಿಗೂ ಯಾರಿಗಾದರೂ ಅಚ್ಚರಿಯಾಗುತ್ತದೆ.

ಬಾಯಲ್ಲೇ ಹೊಲಿಗೆ, ಮೊಣಕೈಯಲ್ಲಿ ಚಾಪ್‌ಸ್ಟಿಕ್
ವಾಂಗ್ ಅವರು ತಮ್ಮ ದೈನಂದಿನ ಕೆಲಸಗಳಿಗಾಗಿ ಸ್ವತಃ ಹೊಸ ವಿಧಾನಗಳನ್ನು ಕಂಡುಕೊಂಡರು, ಸ್ಟೂಲ್ ಮೇಲೆ ಕುಳಿತುಕೊಂಡು ತನ್ನ ದೇಹದ ಬಲದಿಂದ ಹಿಟ್ಟನ್ನು ಬೆರೆಸುತ್ತಿದ್ದರು ಮತ್ತು ತರಕಾರಿಗಳನ್ನು ಕತ್ತರಿಸುತ್ತಿದ್ದರು. ತನ್ನ ಬಾಯಿಯ ಮೂಲಕವೇ ಸೂಜಿ-ದಾರ ಹಿಡಿದು ಬಟ್ಟೆಗಳನ್ನು ಹೊಲಿಯುತ್ತಿದ್ದರು.

ಮೊಣಕೈಗಳ ನಡುವೆ ಚಾಪ್‌ಸ್ಟಿಕ್‌ಗಳನ್ನು ಹಿಡಿದು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರು. ಕೈಗಳಿಲ್ಲದಿದ್ದರೂ ಮಕ್ಕಳ ಬಟ್ಟೆಗಳನ್ನು ತಾವೇ ಸ್ವತಃ ಶುಚಿಗೊಳಿಸುತ್ತಿದ್ದರು.

ಮತ್ತಷ್ಟು ಓದಿ: Video: ದೇವರು ಕೈಗಳನ್ನು ಕೊಟ್ಟಿಲ್ಲ ಎಂಬ ವಿಷಾದವಿಲ್ಲ, ಆಡಲು ಜತೆಗಾರರಿಲ್ಲ ಎಂಬ ಬೇಸರವಿಲ್ಲ, ಮುಖದಲ್ಲೊಂದು ಮಂದಹಾಸ

ನನ್ನ ಕುಟುಂಬ ಹಸಿವಿನಿಂದ ಮಲಗಲಿಲ್ಲ
ತನ್ನ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವ ವಾಂಗ್, ಜೀವನ ತುಂಬ ಕಷ್ಟವಾಗಿತ್ತು. ಆದರೆ ನನ್ನ ಮಕ್ಕಳು ಯಾವತ್ತೂ ಹಸಿವಿನಿಂದ ಮಲಗಲಿಲ್ಲ ಎಂಬ ತೃಪ್ತಿ ನನಗಿದೆ, ಎನ್ನುತ್ತಾರೆ. ಅವರ ಹೋರಾಟದ ಫಲವಾಗಿ ಇಂದು ಅವರ ಮೂವರೂ ಮಕ್ಕಳು ಸುಖವಾಗಿ ನೆಲೆಸಿದ್ದಾರೆ.

ಸುಮಾರು ಹತ್ತು ವರ್ಷಗಳ ಹಿಂದೆ ಪತಿ ನಿಧನರಾದ ನಂತರ, ವಾಂಗ್ ಈಗ ತಮ್ಮ ಕಿರಿಯ ಮಗನ ಮನೆಯಲ್ಲಿ ವಾಸಿಸುತ್ತಿದ್ದಾರೆ. 81 ವರ್ಷದ ಪ್ರಾಯದಲ್ಲಿ ಸ್ವಲ್ಪ ರಕ್ತದೊತ್ತಡದ ಸಮಸ್ಯೆ ಇದ್ದರೂ, ಅವರ ಮುಖದಲ್ಲಿರುವ ನಗು ಮತ್ತು ಜೀವನದ ಮೇಲಿರುವ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ.

ದೈಹಿಕ ವೈಕಲ್ಯವು ಸಾಧನೆಗೆ ಅಡ್ಡಿಯಲ್ಲ ಎಂಬ ಮಾತನ್ನು ವಾಂಗ್ ಯುಶಿ ಅಕ್ಷರಶಃ ಸಾಬೀತುಪಡಿಸಿದ್ದಾರೆ. ಕೈಕಾಲುಗಳಿಲ್ಲದಿದ್ದರೂ ಅವರು ಕಟ್ಟಿದ ಸುಂದರ ಸಂಸಾರ ಮತ್ತು ಅವರು ತೋರಿದ ತಾಯ್ತನದ ಶಕ್ತಿ ಇಂದು ಕೋಟ್ಯಂತರ ಜನರಿಗೆ ಭರವಸೆಯ ಬೆಳಕಾಗಿದೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ – Kannada News | CM Siddaramaiah released Sarkari Nyaya Bele Angadi Kannada movie title song ft Ragini Dwivedi

ಶೀರ್ಷಿಕೆಯ ಕಾರಣದಿಂದಲೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ (Sarkari Nyaya Bele Angadi) ಸಿನಿಮಾ ಕೌತುಕ ಸೃಷ್ಟಿ ಮಾಡಿದೆ. ಈ ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಸಾಮಾಜಿಕ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗಿರುವ ಈ ಚಿತ್ರ ಈಗ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿವೆ. ಇತ್ತೀಚೆಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶೀರ್ಷಿಕೆ ಗೀತೆ ಬಿಡುಗಡೆ ಮಾಡಿ ವಿಶ್ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಸಿನಿಮಾ ಬಹಳ ಪ್ರಭಾವಶಾಲಿ ಮಾಧ್ಯಮ. ಸಿನಿಮಾಗಳ ಮೂಲಕ ವಾಸ್ತವ ವಿಷಯಗಳನ್ನು ಬಹಳ ಬೇಗ ಜನರಿಗೆ ತಲುಪಿಸಬಹುದು. ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ ವಾಸ್ತವ ಸ್ಥಿತಿಯನ್ನು ಕಥಾಹಂದರವಾಗಿ ಇಟ್ಟುಕೊಂಡು ತಯಾರಾಗಿರುವುದು ಶ್ಲಾಘನೀಯ’ ಎಂದು ಅವರು ಹೇಳಿದರು.

‘ಜನ ಸಾಮಾನ್ಯರು, ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ದಿನಸಿ ಮತ್ತು ಆಹಾರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ ಈ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳಿಂದ ಇದರ ಉದ್ದೇಶ ಪರಿಣಾಮಕಾರಿಯಾಗಿ ಈಡೇರುತ್ತಿಲ್ಲ. ಈಗ ಇದೇ ವಿಷಯವನ್ನು ಸಿನಿಮಾವಾಗಿಸಿದ ಚಿತ್ರತಂಡದಿಂದ ಜನ ಜಾಗೃತಿ ಮೂಡಲಿ’ ಎಂದು ಸಿದ್ದರಾಮಯ್ಯ ಹೇಳಿದರು.

ಕುಮಾರ್ ಬಂಗಾರಪ್ಪ, ರಾಗಿಣಿ ದ್ವಿವೇದಿ, ದೊಡ್ಡಣ್ಣ ಮುಂತಾದವರು ನಟಿಸಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ‘ಜಯಶಂಕರ ಟಾಕೀಸ್‌’ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿದೆ. ತೇಜು ಮೂರ್ತಿ ಹಾಗೂ ಪದ್ಮಾವತಿ ಚಂದ್ರಶೇಖರ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅನಂತ್‌ ಆರ್ಯನ್‌ ಅವರು ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ರಾಗಿಣಿ ದ್ವಿವೇದಿ, ವರಲಕ್ಷ್ಮೀ ‘ಪೊಲೀಸ್ ಕಂಪ್ಲೈಂಟ್’: ಸಾಕ್ಷಿಯಾದ ಹಿರಿಯ ನಟಿ ಪ್ರೇಮಾ

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾಗೆ ಬಿ. ರಾಮಮೂರ್ತಿ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸಾತ್ವಿಕ್‌ ಪವನ್‌ ಕುಮಾರ್‌ ಅವರು ಛಾಯಾಗ್ರಹಣ ಹಾಗೂ ನಿರ್ದೇಶನ ಮಾಡುತ್ತಿದ್ದಾರೆ. ಸುಮಾರು 52 ದಿನಗಳ ಕಾಲ ಮಂಡ್ಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಶೀಘ್ರದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Kumkumarchan: ಮನೆಯಲ್ಲಿ ಕುಂಕುಮಾರ್ಚನೆ ಮಾಡಬಹುದೇ? ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | Kumkumarchana at Home: Understanding the Ritual and Its Benefits

ಮನೆಯಲ್ಲಿ ಕುಂಕುಮಾರ್ಚನೆImage Credit source: Pinterest

ಸಾಮಾನ್ಯವಾಗಿ ಕುಂಕುಮಾರ್ಚನೆ ಎಂದರೆ ದೇವಾಲಯಗಳಲ್ಲಿ ಅರ್ಚಕರು ದೇವಿಯ ಪಾದಗಳಿಗೆ, ಮೇರು ಚಕ್ರಕ್ಕೆ ಅಥವಾ ವೀಳೆದೆಲೆಯ ಮೇಲೆ ಕುಂಕುಮವನ್ನು ಅರ್ಪಿಸುವುದನ್ನು ನಾವು ನೋಡುತ್ತೇವೆ. ಈ ಸಂದರ್ಭದಲ್ಲಿ, ಮನೆಯಲ್ಲಿ ಕುಂಕುಮಾರ್ಚನೆಯನ್ನು ಮಾಡಬಹುದೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಮನೆಯಲ್ಲಿ ಕುಂಕುಮಾರ್ಚನೆಯನ್ನು ಖಂಡಿತವಾಗಿಯೂ ಮಾಡಬಹುದು. ಇದಕ್ಕಾಗಿ ಅರಿಶಿನದಿಂದ ತಯಾರಿಸಿದ ಶುದ್ಧ ಕುಂಕುಮವನ್ನು ಬಳಸುವುದು ಉತ್ತಮ. ಕುಂಕುಮವು ಆಕರ್ಷಣ ಶಕ್ತಿಯನ್ನು ಬೇಗನೆ ಸೆಳೆಯುವ ಗುಣವನ್ನು ಹೊಂದಿದೆ. ಪುನುಗು, ಜವಾದ್, ಅರಗಜದಂತಹ ದ್ರವ್ಯಗಳಿಗೆ ಇರುವ ಶಕ್ತಿಯಂತೆ, ಕುಂಕುಮಕ್ಕೂ ಅಧ್ಬುತ ಶಕ್ತಿಯಿದೆ. ನಾವು ಹಣೆಗೆ ಇಟ್ಟುಕೊಳ್ಳುವ ಕುಂಕುಮ, ವಿಭೂತಿ, ಗಂಧ ಇವೆಲ್ಲವೂ ಆಯಾ ಬಲಕ್ಕೆ ತಕ್ಕ ಫಲವನ್ನು ನೀಡುತ್ತವೆ. ಅರ್ಚನೆಯಲ್ಲಿ ಬಳಸುವ ಕುಂಕುಮವು ವಿಶೇಷ ಶಕ್ತಿಯನ್ನು ಹೊಂದಿರುತ್ತದೆ.

ಮನೆಯಲ್ಲಿ ಕುಂಕುಮಾರ್ಚನೆ ಮಾಡುವ ವಿಧಾನ ಹೀಗಿದೆ:

ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತುಕೊಳ್ಳಬೇಕು. ದೇವಿಯ ಅಷ್ಟೋತ್ತರ ನಾಮಾವಳಿಗಳನ್ನು ಪಠಿಸಬೇಕು. ಕುಂಕುಮವನ್ನು ಹಿಡಿಯಲು ತೋರುಬೆರಳನ್ನು ಬಳಸಬಾರದು. ಉಳಿದ ಮೂರು ಬೆರಳುಗಳಿಂದ ಕುಂಕುಮವನ್ನು ತೆಗೆದುಕೊಂಡು, ಪ್ರತಿ ನಾಮಕ್ಕೂ ಒಂದೊಂದು ಬಾರಿ ವೀಳೆದೆಲೆಯ ಮೇಲೆ ಅಥವಾ ಶುದ್ಧವಾದ ಬೆಳ್ಳಿ ತಟ್ಟೆಯ ಮೇಲೆ ಇರುವ ದೇವಿಯ ಚಿತ್ರಕ್ಕೆ ಅರ್ಪಿಸಬೇಕು. ನಿಮ್ಮ ಶಕ್ತಿಗನುಸಾರವಾಗಿ ಈ ತಟ್ಟೆಯನ್ನು ಬಳಸಬಹುದು. ಅರ್ಚನೆ ಮಾಡಿದ ಈ ಕುಂಕುಮವನ್ನು ಪ್ರತಿನಿತ್ಯ ಹಣೆಗೆ ಹಚ್ಚಿಕೊಂಡು ಪ್ರಯಾಣ, ಉದ್ಯೋಗಕ್ಕೆ ಹೋಗುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಕುಂಕುಮಾರ್ಚನೆ ಮಾಡಲು ಮಂಗಳವಾರ ಮತ್ತು ಶುಕ್ರವಾರಗಳು ಅತಿ ಶ್ರೇಷ್ಠ. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವುದು ಇನ್ನೂ ಉತ್ತಮ. ಮದುವೆಗೆ ತಡೆಯಾಗುತ್ತಿದ್ದರೆ, ಒಂದು ಸಂಕಲ್ಪ ಮಾಡಿಕೊಂಡು ಕುಂಕುಮಾರ್ಚನೆ ಮಾಡಿಕೊಳ್ಳಬಹುದು. ದೇವಾಲಯಗಳಲ್ಲಿ ಅಮ್ಮನವರ ಸನ್ನಿಧಿಯಲ್ಲಿ ಕುಳಿತು ವೀಳೆದೆಲೆಯನ್ನಿಟ್ಟು ಅರ್ಚನೆ ಮಾಡಿಕೊಳ್ಳಬಹುದು. ವಿದ್ಯಾಭ್ಯಾಸ ಪ್ರಾರಂಭಿಸುವ ಮುನ್ನ, ಮನೆ ಕಟ್ಟುವ ಮುನ್ನ ಫೌಂಡೇಶನ್‌ನಲ್ಲಿ ಹಾಕಿಸಲು, ಮಕ್ಕಳು ಶಾಲೆಗೆ ಹೋಗುವ ಮುನ್ನ ಕುಂಕುಮ ಹಚ್ಚಿ ಕಳುಹಿಸುವುದು ಶುಭ. ಸಂತಾನ, ಉದ್ಯೋಗ, ಕಲ್ಯಾಣ ಹೀಗೆ ಸಕಲ ವಿಜಯಗಳಿಗೂ ಕುಂಕುಮಾರ್ಚನೆಯು ಒಂದು ಅಸ್ತ್ರವಿದ್ದಂತೆ.

ಮನೆಯಲ್ಲಿ ಕುಂಕುಮಾರ್ಚನೆ ಮಾಡುವುದರಿಂದ ದೇವಿಯ ಪ್ರಸನ್ನತೆ ಮತ್ತು ಸರ್ವಶಕ್ತಿಯ ಅನುಗ್ರಹ ಸಿಗುತ್ತದೆ. ಹುಣ್ಣಿಮೆಯ ಸಮಯದಲ್ಲಿ ಕುಂಕುಮಾರ್ಚನೆಗೆ ಹೆಚ್ಚಿನ ಫಲವಿರುತ್ತದೆ. ಈ ಶಕ್ತಿಶಾಲಿ ಕುಂಕುಮಾರ್ಚನೆಯನ್ನು ಮನೆಯಲ್ಲಿ ಮಾಡುವುದರಿಂದ ಜೀವನದಲ್ಲಿ ಬಹಳಷ್ಟು ಶುಭವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:08 am, Sun, 19 April 26

Source link

ಸಿಲಿಂಡರ್ ಸ್ಫೋಟಕ್ಕೆ ಹೊತ್ತಿ ಉರಿದ ಮನೆ; 3 ಲಕ್ಷ ನಗದು ಸೇರಿ ಚಿನ್ನಾಭರಣ ಭಸ್ಮ! – Kannada News | Chitradurga: Cylinder blast burns down house, Rs 3 Lakh cash, Gold jewellery gone

ಚಿತ್ರದುರ್ಗ, ಏಪ್ರಿಲ್ 19: ಜಿಲ್ಲೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಗುಡಿಸಲು ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ ಚಿತ್ರಲಿಂಗಪ್ಪ ಅವರಿಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದೆ. ಸಿಲಿಂಡರ್ ಸ್ಫೋಟದಿಂದ ಉಂಟಾದ ಬೆಂಕಿಯಲ್ಲಿ ಮನೆಯಲ್ಲಿದ್ದ ಸುಮಾರು 3 ಲಕ್ಷ ರೂಪಾಯಿ ನಗದು, ಚಿನ್ನಾಭರಣ ಹಾಗೂ ದವಸ ಧಾನ್ಯಗಳು ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ದಳವು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದು, ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಹಶೀಲ್ದಾರ್ ರೇಹಾನ್ ಪಾಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಹೊಸಪೇಟೆಯ ಡಾಣಾಪುರ ಬಳಿ ಸರಣಿ ಅಪಘಾತ: ಬೈಕ್, ಕಾರು, ಬಸ್​ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ; ನಾಲ್ವರು ಸಾವು? – Kannada News | 4 Feared Dead in Serial Accident Near Hosapete in Vijayanagara District

ಪಲ್ಟಿಯಾಗಿರುವ ಲಾರಿImage Credit source: Tv9 Kannada

ವಿಜಯನಗರ, ಏಪ್ರಿಲ್​​ 19: ಹೊಸಪೇಟೆ ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸರಣಿ ಅಪಘಾತ ಸಂಭವಿಸಿದೆ. ಬೈಕ್, ಕಾರು, ಬಸ್​ಗೆ ಲಾರಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಶಂಕೆ ಇದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮೇಲೆ ಲಾರಿ ಪಲ್ಟಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್​​ ಜಾಮ್​​ ಉಂಟಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ.)

Source link

ಸೂರ್ಯನಿಗೆ ಗೇಟ್ ಪಾಸ್ ಖಚಿತ: ಇವರಂತೆ ಟೀಮ್ ಇಂಡಿಯಾದ ಮುಂದಿನ ನಾಯಕ..! – Kannada News | Shreyas Iyer: The Frontrunner for India’s T20I Captaincy?

ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗುವುದು ಖಚಿತವಾಗಿದೆ. ಅದು ಕೂಡ ಪ್ರಸ್ತುತ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ತಲೆದಂಡದೊಂದಿಗೆ. ಅಂದರೆ ಟೀಮ್ ಇಂಡಿಯಾದ ನಾಯಕನ ಸ್ಥಾನದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೆಳಗಿಳಿಸುವುದು ಬಹುತೇಕ ಖಚಿತವಾಗಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೈ ಬಿಡಲಿದ್ದಾರೆ. ಅವರ ಬದಲಿಗೆ ಮಧ್ಯಮ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಚಿಂತಿಸಿದೆ. ಅಲ್ಲದೆ ಅಯ್ಯರ್​ ಅವರಿಗೆನೇ ನಾಯಕತ್ವವನ್ನೂ ನೀಡುವ ಬಗ್ಗೆ ಕೂಡ ಚರ್ಚಿಸಲಾಗಿದೆ.

ಅಂದರೆ ಭಾರತ ಟಿ20 ತಂಡದ ಮುಂದಿನ ನಾಯಕನ ರೇಸ್​ನಲ್ಲಿ ಶ್ರೇಯಸ್ ಅಯ್ಯರ್ ಮುಂಚೂಣಿಯಲ್ಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಹೀಗಾಗಿ ಟಿ20 ತಂಡಕ್ಕೆ ಕಂಬ್ಯಾಕ್​ನೊಂದಿಗೆ ಅಯ್ಯರ್​ಗೆ ನಾಯಕತ್ವ ಕೂಡ ಒಲಿಯುವ ಸಾಧ್ಯತೆ ಹೆಚ್ಚಿದೆ.

ನಾಲ್ಕನೇ ಕ್ರಮಾಂಕಕ್ಕೆ ಅಯ್ಯರ್ ಫಿಕ್ಸ್‌?

ವಿರಾಟ್ ಕೊಹ್ಲಿ ಅವರ ನಿವೃತ್ತಿಯ ಆಯ್ಕೆ ಸಮಿತಿಯು ಸ್ಥಿರ ಪ್ರದರ್ಶನ ನೀಡಬಲ್ಲ ಮಧ್ಯಮ ಕ್ರಮಾಂಕದ ಬ್ಯಾಟರ್​ನ ಹುಡುಕಾಟದಲ್ಲಿದೆ. ಇದೀಗ ಈ ಸ್ಥಾನಕ್ಕಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ.

ಏಕೆಂದರೆ ಐಪಿಎಲ್​ 2025  ರಲ್ಲಿ ಪಂಜಾಬ್ ಕಿಂಗ್ಸ್ ಪರ ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಈ ಬಾರಿ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿರುವ ಅಯ್ಯರ್ 200 ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಹೀಗಾಗಿ ಅಯ್ಯರ್ ಭಾರತದ ಟಿ20 ತಂಡದ ನಂ. 4 ಸ್ಥಾನಕ್ಕೆ ಅತ್ಯಂತ ಸಮರ್ಥ ಆಟಗಾರ ಎಂದು ಆಯ್ಕೆದಾರರು ಭಾವಿಸಿದ್ದಾರೆ.

ನಾಯಕತ್ವದ ರೇಸ್‌ನಲ್ಲೂ ಮುಂಚೂಣಿ

ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕಳೆದ ಟಿ20 ವಿಶ್ವಕಪ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಇದಾಗ್ಯೂ ನಾಯಕನಾಗಿದ್ದ ಕಾರಣ ಅವರನ್ನು ತಂಡದಲ್ಲಿ ಉಳಿಸಕೊಳ್ಳಲಾಗಿತ್ತು.

ಇದೀಗ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಸೂರ್ಯಕುಮಾರ್ ಯಾದವ್​​ಗೆ ಗೇಟ್ ಪಾಸ್ ನೀಡಲು ಬಿಸಿಸಿಐ ನಿರ್ಧರಿಸಿದೆ. ಅಲ್ಲದೆ ಭವಿಷ್ಯದ ದೃಷ್ಟಿಯಿಂದ ಬಿಸಿಸಿಐ (BCCI) ಹೊಸ ನಾಯಕನ ಹುಡುಕಾಟದಲ್ಲಿದೆ. ಈ ಹುಡಕಾಟದ ನಡುವೆ ಶ್ರೇಯಸ್ ಅಯ್ಯರ್ ಹೆಸರು ಕೇಳಿ ಬಂದಿರುವುದು ವಿಶೇಷ.

  • ಐಪಿಎಲ್ ಯಶಸ್ಸು: ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 2024ರಲ್ಲಿ ಟ್ರೋಫಿ ಗೆದ್ದುಕೊಟ್ಟಿದ್ದು ಮತ್ತು 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ತಲುಪಿಸಿದ್ದು ಅಯ್ಯರ್ ಅವರ ನಾಯಕತ್ವದ ಗುಣಕ್ಕೆ ಸಾಕ್ಷಿಯಾಗಿದೆ.
  • ಸ್ಥಿರತೆ: ಅಯ್ಯರ್ ಕೇವಲ ಆಟಗಾರನಾಗಿ ಮಾತ್ರವಲ್ಲದೆ, ಮೈದಾನದಲ್ಲಿ ತಂಡವನ್ನು ಸಂಘಟಿಸುವಲ್ಲಿ ತೋರುತ್ತಿರುವ ಪ್ರಬುದ್ಧತೆ ಆಯ್ಕೆದಾರರ ಗಮನ ಸೆಳೆದಿದೆ.

ಕಂಬ್ಯಾಕ್​ಗೆ ಸಜ್ಜು:

ಕಳೆದ ಕೆಲವು ಸಮಯದಿಂದ ಸೆಂಟ್ರಲ್ ಕಾಂಟ್ರಾಕ್ಟ್ ಮತ್ತು ಫಿಟ್ನೆಸ್ ಕಾರಣದಿಂದ ತಂಡದಿಂದ ಹೊರಗುಳಿದಿದ್ದ ಅಯ್ಯರ್, ಈಗ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಮುಂದಿನ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಯ್ಯರ್ ಅವರಿಗೆ ತಂಡದ ಜವಾಬ್ದಾರಿ ನೀಡುವ ಸಾಧ್ಯತೆ ದಟ್ಟವಾಗಿದೆ.

ಆಯ್ಕೆದಾರರ ಮುಂದಿರುವ ಸವಾಲುಗಳು:

ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಭಾರತ 2026ರ ಟಿ20 ವಿಶ್ವಕಪ್ ಗೆದ್ದಿರುವುದು ಅವರ ಪರವಾಗಿರುವ ದೊಡ್ಡ ಪ್ಲಸ್ ಪಾಯಿಂಟ್. ಹೀಗಾಗಿ, ಸೂರ್ಯಕುಮಾರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವುದು ಆಯ್ಕೆದಾರರಿಗೆ ಅಷ್ಟು ಸುಲಭದ ನಿರ್ಧಾರವಲ್ಲ. ಆದರೂ, 2028ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಅಯ್ಯರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲು ಬಿಸಿಸಿಐ ಯೋಚಿಸುತ್ತಿದೆ.

ಇದನ್ನೂ ಓದಿ: CSK ಫ್ಯಾನ್ಸ್​ನ ಸೈಲೆಂಟ್ ಮಾಡಿದ್ದೇವೆ… ಕಾವ್ಯ ಮಾರನ್ ವಿಡಿಯೋ ವೈರಲ್

ಒಟ್ಟಾರೆಯಾಗಿ, ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಫಾರ್ಮ್ ಮತ್ತು ನಾಯಕತ್ವದ ಅನುಭವ ಅವರನ್ನು ಭಾರತ ಟಿ20 ತಂಡದ ಪ್ರಬಲ ದಾವೇದಾರನನ್ನಾಗಿ ಮಾಡಿದೆ. ಶೀಘ್ರದಲ್ಲೇ ಅಯ್ಯರ್​ ಭಾರತ ಟಿ20 ತಂಡದ ನಾಯಕನ ಪಟ್ಟಕ್ಕೇರಿದರೂ ಆಶ್ಚರ್ಯವಿಲ್ಲ.

Source link

ಪತ್ನಿಯಿಂದ ತಪ್ಪಿಸಿಕೊಂಡು ಗಂಡ ಓಡಿದ್ದು, ನಾಯಿಯಿಂದ ತಪ್ಪಿಸಿಕೊಂಡು ಬೆಕ್ಕು , ಪೊಲೀಸರಿಂದ ತಪ್ಪಿಸಿಕೊಂಡು ಕಳ್ಳ ಓಡಿದ್ದು ಒಂದೇ ಟೈಂ, ಒಂದೇ ಜಾಗ – Kannada News | Triple Chase Chaos: Husband, Cat, and Thief All Flee at Once in Viral Clip

ಬ್ರೆಜಿಲ್, ಏಪ್ರಿಲ್ 19: ಸಾಮಾನ್ಯವಾಗಿ ಸಿಸಿಟಿವಿ (CCTV) ಕ್ಯಾಮೆರಾಗಳು ಅಪರಾಧ ಅಥವಾ ಅಪಘಾತಗಳನ್ನು ಸೆರೆಹಿಡಿಯುತ್ತವೆ. ಆದರೆ ಬ್ರೆಜಿಲ್‌ನ ಈ ಸಿಸಿಟಿವಿ ಕ್ಯಾಮೆರಾ ಮಾತ್ರ ಇಡೀ ಜಗತ್ತು ನಗುವಂತಹ ಒಂದು ವಿಚಿತ್ರ ಮತ್ತು ಹಾಸ್ಯಮಯ ಕ್ಷಣವನ್ನು ಸೆರೆಹಿಡಿದಿದೆ.ಬೀದಿಯು ಶಾಂತವಾಗಿತ್ತು, ಆದರೆ ಅಚಾನಕ್ಕಾಗಿ ಅಲ್ಲಿ ಮೂರು ಗುಂಪುಗಳು ಓಡಲು ಆರಂಭಿಸಿದವು. ವಿಶೇಷವೆಂದರೆ ಇವರಾರೂ ಒಬ್ಬರಿಗೊಬ್ಬರು ಸಂಬಂಧಪಟ್ಟವರಲ್ಲ. ಒಬ್ಬ ಪತಿ ತನ್ನ ಹೆಂಡತಿಯಿಂದ ತಪ್ಪಿಸಿಕೊಳ್ಳಲು ಪ್ರಾಣಭಯದಿಂದ ಓಡುತ್ತಿದ್ದಾನೆ. ಅವಳು ಏನೋ ಕಾರಣಕ್ಕೆ ಸಿಟ್ಟಾಗಿ ಆತನನ್ನು ಬೆನ್ನಟ್ಟುತ್ತಿದ್ದಾಳೆ.

ಅದೇ ಕ್ಷಣದಲ್ಲಿ ಪಕ್ಕದ ಗಲ್ಲಿಯಿಂದ ಒಂದು ಬೆಕ್ಕು ಮಿಂಚಿನ ವೇಗದಲ್ಲಿ ಓಡುತ್ತಿದೆ. ಅದರ ಹಿಂದೆ ಒಂದು ನಾಯಿ ಬೊಗಳುತ್ತಾ ಅಟ್ಟಿಸಿಕೊಂಡು ಬರುತ್ತಿದೆ. ಇವೆಲ್ಲದರ ನಡುವೆ ಒಬ್ಬ ಕಳ್ಳ ಪೊಲೀಸರಿಂದ ತಪ್ಪಿಸಿಕೊಳ್ಳಲು ಅದೇ ಹಾದಿಯಲ್ಲಿ ಓಡುತ್ತಿದ್ದಾನೆ.ಕ್ಯಾಮೆರಾದ ಫ್ರೇಮ್‌ನಲ್ಲಿ ಮೊದಲು ಕಳ್ಳ ಕಾಣಿಸಿಕೊಂಡರೆ, ಅವನ ಪಕ್ಕದಲ್ಲೇ ಬೆಕ್ಕಿನ ಓಟ, ಇವರಿಬ್ಬರನ್ನೂ ಮೀರಿಸುವಂತೆ ಪತ್ನಿಯಿಂದ ಓಡಿಹೋಗುತ್ತಿರುವ ಪತಿ, ನೋಡುವವರಿಗೆ ಯಾರು ಯಾರನ್ನು ಬೆನ್ನಟ್ಟುತ್ತಿದ್ದಾರೆ ಎಂಬುದು ಒಂದು ಕ್ಷಣ ಗೊಂದಲ ಮೂಡಿಸುವಂತಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಗುಲಾಬಿ ಈರುಳ್ಳಿಯನ್ನು ಕೇಳೋರೆ ಇಲ್ಲ! – Kannada News | Rose Onion Crisis: Karnataka Farmers Suffer Huge Losses Amidst Export Halt

ಚಿಕ್ಕಬಳ್ಳಾಪುರ, ಏಪ್ರಿಲ್ 19: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಲ್ಲಿ ರೋಸ್ ಆನಿಯನ್ (ಗುಲಾಬಿ ಈರುಳ್ಳಿ) ಎಂಬ ವಿಶೇಷ ಈರುಳ್ಳಿ ತಳಿಯನ್ನು ಬೆಳೆಯಲಾಗುತ್ತದೆ. ತನ್ನ ವಿಶಿಷ್ಟವಾದ ಗಾಢ ಕೆಂಪು ಬಣ್ಣ, ತೀಕ್ಷ್ಣವಾದ ಖಾರ ಹಾಗೂ ದೀರ್ಘಕಾಲದ ಬಾಳಿಕೆಗೆ (Shelf life) ಇದು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಹೀಗೆ ಬೆಳೆದ ಗುಲಾಬಿ ಈರುಳ್ಳಿಯನ್ನು ಹೆಚ್ಚಾಗಿ ಮಲೇಶಿಯಾ, ಥೈಲ್ಯಾಂಡ್, ಸಿಂಗಾಪೂರ್ ಸೇರಿ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲೆಯ ರೋಸ್ ಆನಿಯನ್ ಬೆಳೆಗಾರರು ಕಂಗಾಲಾಗಿದ್ದಾರೆ.

ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ತಾಲೂಕುಗಳಲ್ಲಿ ರೈತರು ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಗುಲಾಬಿ ಈರುಳ್ಳಿಯನ್ನು ವಿದೇಶಗಳಿಗೆ ರಫ್ತು ಮಾಡುವ ವರ್ತಕರು ಖರೀದಿಸುತ್ತಿಲ್ಲ. ಯುದ್ಧದ ನೆಪ ಹೇಳಿ ಖರೀದಿ ನಿಲ್ಲಿಸಿರುವುದರಿಂದ ಸಾವಿರಾರು ಟನ್ ರೋಸ್ ಆನಿಯನ್ ಹೊಲಗಳಲ್ಲೇ ಕೊಳೆಯುತ್ತಿದ್ದು, ರೈತರು ಅತಂತ್ರರಾಗಿದ್ದಾರೆ. ಶಿಡ್ಲಘಟ್ಟ ತಾಲೂಕಿನ ನಲ್ಲೋಜಿನಹಳ್ಳಿ ಗ್ರಾಮದ ಅನಿತಮ್ಮ ಎಂಬ ರೈತ ಮಹಿಳೆ ಮೂರು ಎಕರೆ ಪ್ರದೇಶದಲ್ಲಿ ರೋಸ್ ಆನಿಯನ್ ಬೆಳೆಯಲು 1.20 ಲಕ್ಷ ರೂಪಾಯಿ ಬಂಡವಾಳ ಹೂಡಿದ್ದಾರೆ. ಸಾಮಾನ್ಯವಾಗಿ ಒಂದು 60-70 ಕೆ.ಜಿ ತೂಕದ ಈರುಳ್ಳಿ ಮೂಟೆಗೆ 1200 ರಿಂದ 1500 ರೂಪಾಯಿ ದೊರೆಯುತ್ತಿತ್ತು. ಆದರೆ, ಪ್ರಸ್ತುತ 100 ರೂಪಾಯಿಗೆ ಸಹ ಖರೀದಿದಾರರಿಲ್ಲದೆ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಮಕ್ಕಳ ಶಿಕ್ಷಣ, ಕೃಷಿ ಖರ್ಚು ನಿರ್ವಹಿಸಲು ಅಸಾಧ್ಯವಾಗಿದೆ. ಕೇಂದ್ರ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸುವಂತೆ ರೈತ ಸಮುದಾಯ ಆಗ್ರಹಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪರಲೋಕಕ್ಕೆ ಕಳುಹಿಸಿದ ಪತ್ನಿ! – Kannada News | Mysuru Murder: Wife, Lover Arrested for Javarappa’s Death Over Illicit Affair in Kurneegala

ಮೃತ ವ್ಯಕ್ತಿ ಮತ್ತು ಆರೋಪಿಗಳುImage Credit source: Tv9 Kannada

ಮೈಸೂರು, ಏಪ್ರಿಲ್​​ 19: ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ವ್ಯಕ್ತಿ ಅನುಮಾನಾಸ್ಪಾದ ಸಾವು ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ವಿಚಾರ ಪೊಲೀಸ್​​ ತನಿಖೆ ವೇಳೆ ಬಯಲಾಗಿದೆ. ಜವರಪ್ಪ ಕೊಲೆಯಾದ ದುರ್ದೈವಿಯಾಗಿದ್ದು, ಪ್ರಕರಣ ಸಂಬಂಧ ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32) ಮತ್ತು ಕುರ್ಣೆಗಾಲ ಗ್ರಾಮದ ಅಮೃತಾ(26)ಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗ್ತಿದೆ.

ಕುರ್ಣೇಗಾಲದಲ್ಲಿ ಮೊನ್ನೆಯಷ್ಟೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಜವರಪ್ಪ ಶವ ರಸ್ತೆಬದಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆ ಜವರಪ್ಪ ಸಹೋದರ ರವಿ ನೀಡಿದ್ದ ದೂರಿನ ಅನ್ವಯ ತನಿಖೆಗಿಳಿದ ಪೊಲೀಸರು ಸಾವಿನ ಹಿಂದಿನ ಸತ್ಯವನ್ನು ರಿವೀಲ್​​ ಮಾಡಿದ್ದಾರೆ. ಆರೋಪಿ ಸಿದ್ದೇಶ್​​ಗೆ ಜವರಪ್ಪ ಪತ್ನಿ ಅಮೃತಾ ಜೊತೆಗೆ ಅಕ್ರಮ ಸಂಬಂಧ ಇತ್ತು. ಹೀಗಾಗಿ ಆತ ಇದ್ದರೆ ತಮ್ಮ ಸಂಬಂಧಕ್ಕೆ ತೊಂದರೆ ಆಗುತ್ತೆ ಎಂದು ಆರೋಪಿಗಳು ಜವರಪ್ಪನ ಕೊಲೆಗೆ ಪ್ಲ್ಯಾನ್​​ ಮಾಡಿದ್ದರು. ಅದರಂತೆ ಅಮೃತಾ ಕುಮ್ಮಕ್ಕಿನಿಂದ ಆಕೆಯ ಪ್ರಿಯಕರ ಸಿದ್ದೇಶ್​​ನೇ ಕೊಲೆ ಮಾಡಿರೋದು ಗೊತ್ತಾಗಿದೆ.

ಇದನ್ನೂ ಓದಿ: ಅನಿಲ್‌ನನ್ನು ‘ಅಕ್ಷತಾ’ ಮಾಡಿದ್ದ ಮಂಗಳಮುಖಿಯರು; ಮಂಗಳೂರು-ಕೇರಳದಲ್ಲಿ ಅನೈತಿಕ ಚಟುವಟಿಕೆಗೆ ಬಳಕೆ, ಲಿಂಗ ಬದಲಾವಣೆಗೂ ಸ್ಕೆಚ್

ಕುರ್ಣೇಗಾಲ ಗ್ರಾಮದ ಜವರಪ್ಪ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಅಮೃತಾಳನ್ನ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಸಣ್ಣಪುಟ್ಟ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, 12 ದಿನಗಳ ಹಿಂದೆ ಮಕ್ಕಳೊಂದಿಗೆ ಹಬ್ಬಕ್ಕೆಂದು ಅಮೃತಾ ತವರಿಗೆ ಹೋಗಿದ್ದಳು.ಏ.16ರಂದು ಹೆಂಡತಿ ಮನೆಗೆ ಹೋಗಿ ಬರುತ್ತೇನೆಂದು ಹೋಗಿದ್ದ ಜವರಪ್ಪ, ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಬದಲಾಗಿ ಮರುದಿನ ಬೆಳಗ್ಗೆ 6.30ಕ್ಕೆ ಗ್ರಾಮದ ಸಮೀಪದ ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ತನಿಖೆಗಾಗಿ ಎಸ್. ಪಿ. ಮಲ್ಲಿಕಾರ್ಜುನ ಬಾಲದಂಡಿ ಮೂರು ತಂಡಗಳನ್ನು ರಚನೆ ಮಾಡಿದ್ದರು. ಅಂತಿಮವಾಗಿ ಜವರಪ್ಪ ಸಾವಿನ ಸತ್ಯ ಹೊರಬಂದಿದ್ದು, ಪ್ರಿಯಕರನ ಜೊತೆ ಸೇರಿ ಪತ್ನಿಯೇ ಆತನ ಸಾವಿಗೆ ಕಾರಣವಾಗಿರೋದು ನಿಜಕ್ಕೂ ದುರ್ದೈವವೇ ಸರಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:39 am, Sun, 19 April 26

Source link

Exit mobile version