IPL 2026: ಹೀಗೊಂದು ‘ಅವಮಾನಕರ’ ದಾಖಲೆ ಬರೆದ RCB

Source link

‘ರಾಮಾಯಣ’ ಚಿತ್ರಕ್ಕೆ ಪಾಶ್ಚಿಮಾತ್ಯ ಶೈಲಿಯ ಸ್ಪರ್ಶ: ಸಮರ್ಥನೆ ಮಾಡಿಕೊಂಡ ಯಶ್ – Kannada News | Yash and Namit Malhotra defend Ramayana international look at Cinemacon Las Vegas

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ (Ramayana) ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಪ್ರಚಾರ ಕಾರ್ಯಕ್ರಮಗಳು ಅದ್ದೂರಿಯಾಗಿ ಆರಂಭವಾಗಿವೆ. ಇತ್ತೀಚೆಗೆ ಲಾಸ್ ವೇಗಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಸಿನಿಮಾಕಾನ್’ (CinemaCon) ಕಾರ್ಯಕ್ರಮದಲ್ಲಿ ನಟ ಯಶ್ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಚಿತ್ರದ ಬಗ್ಗೆ ಮಾತನಾಡಿದರು. ಈ ವೇಳೆ ಸಿನಿಮಾದಲ್ಲಿನ ಪಾಶ್ಚಿಮಾತ್ಯ ಶೈಲಿಯ ಬಗ್ಗೆ ಯಶ್ (Yash) ಸ್ಪಷ್ಟನೆ ನೀಡಿದರು.

‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ಇತ್ತೀಚೆಗೆ ಬಿಡುಗಡೆ ಆಯಿತು. ಆ ವಿಡಿಯೋದಲ್ಲಿ ಅಸುರರ ವಿನ್ಯಾಸವು ಹಾಲಿಯುಡ್ ಶೈಲಿಯಲ್ಲಿದೆ ಎಂಬ ಟೀಕೆಗಳು ಕೇಳಿಬಂದಿದ್ದವು. ಇದಕ್ಕೆ ಉತ್ತರಿಸಿದ ಯಶ್, ‘ನಮ್ಮ ಗುರಿ ಜಾಗತಿಕ ಮಾರುಕಟ್ಟೆಯಾಗಿದೆ. ವಿಶ್ವದಾದ್ಯಂತ ಇರುವ ಪ್ರೇಕ್ಷಕರಿಗೆ ನಮ್ಮ ಕಥೆ ತಲುಪಬೇಕಾದರೆ, ಅವರಿಗೆ ಪರಿಚಿತವಿರುವ ಶೈಲಿಯಲ್ಲಿಯೂ ಸಿನಿಮಾ ಇರಬೇಕಾಗುತ್ತದೆ’ ಎಂದು ಚಿತ್ರದ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಸಮರ್ಥಿಸಿಕೊಂಡರು.

ಈ ಚಿತ್ರದಲ್ಲಿ ಲಂಕೇಶ್ವರ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್, ತಮ್ಮ ಪಾತ್ರದ ಬಗ್ಗೆ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾವಣನನ್ನು ಕೇವಲ ಅಸುರನನ್ನಾಗಿ ನೋಡದೆ, ಅವನಲ್ಲಿದ್ದ ಮಾನವೀಯ ಗುಣಗಳನ್ನು ತೆರೆಯ ಮೇಲೆ ತರಲು ಪ್ರಯತ್ನಿಸಿರುವುದಾಗಿ ಅವರು ತಿಳಿಸಿದ್ದಾರೆ.

‘ನಾನು ರಾವಣನ ಮೂಲ ಸತ್ವವನ್ನು ಅರಿತುಕೊಳ್ಳಲು ಪ್ರಯತ್ನಿಸಿದ್ದೇನೆ. ಜನರಿಗೆ ಆ ಪಾತ್ರದ ಭಾವನೆಗಳು ಅರ್ಥವಾಗಬೇಕು ಮತ್ತು ಕನೆಕ್ಟ್ ಆಗಬೇಕು ಎನ್ನುವ ಉದ್ದೇಶದಿಂದ ರಾವಣನನ್ನು ಸಾಧ್ಯವಾದಷ್ಟು ಮಾನವೀಯವಾಗಿ ಚಿತ್ರಿಸಲು ಪ್ರಯತ್ನಿಸಿದ್ದೇನೆ’ ಎಂದು ಯಶ್ ಅವರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಕಥೆ ಏನು ಎಂಬುದನ್ನು ಓಪನ್ ಆಗಿ ಹೇಳಿದ ಯಶ್; ವಿಡಿಯೋ ವೈರಲ್

‘ರಾಮಾಯಣ’ ಚಿತ್ರವು ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಇದರ ಒಟ್ಟು ಬಜೆಟ್ ಸುಮಾರು 500 ಮಿಲಿಯನ್ ಡಾಲರ್ (ಅಂದಾಜು 4,100 ಕೋಟಿಗೂ ರೂಪಾಯಿ ಹೆಚ್ಚು) ಎನ್ನಲಾಗಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಸಿನಿಮಾ ಮಾತ್ರವಲ್ಲದೆ, ವಿಶ್ವದ ಗಮನಾರ್ಹ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಬಿಸಿಲ ಬೇಗೆಯ ಜೊತೆಗೆ ವರುಣಾರ್ಭಟ! ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಸಾಧ್ಯತೆ – Kannada News | Karnataka Weather Forecast: Heat wave alert in coastal area, Hailstorm in south Karnataka

ರಾಜ್ಯದಲ್ಲಿ ಬಿಸಿಲ ಬೇಗೆಯ ಜೊತೆಗೆ ವರುಣಾರ್ಭಟ! ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಸಾಧ್ಯತೆ

Image Credit source: google Gemini

ಬೆಂಗಳೂರು, ಏಪ್ರಿಲ್ 19: ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ (Karnataka Weather)  ಹೆಚ್ಚಾಗಿದ್ದು, ಮುಂದಿನ 2 ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಉಷ್ಣ ಅಲೆ ಜೊತೆಗೆ ಆಲಿಕಲ್ಲು ಮಳೆ!

ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದೂ ಉಷ್ಣ ಅಲೆ ಇರಲಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದೆ. ಅಲರ್ಟ್​ ನೀಡಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ ಮತ್ತು ವಿಜಯಪುರದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಇದನ್ನೂ ಓದಿ ಕರಾವಳಿಗೆ ಅಪ್ಪಳಿಸಿದ ಉಷ್ಣ ಅಲೆ; ಮನೆಯಿಂದ ಹೊರ ಬರುವ ಮುನ್ನ ಎಚ್ಚರ!

ಇನ್ನೂ 5 ದಿನ ಇದೇ ವಾತಾವರಣ

ಏಪ್ರಿಲ್ 22 ರವರೆಗೆ ಕರ್ನಾಟಕದ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಅಂತೆಯೇ ದಕ್ಷಿಣ ಒಳನಾಡಿನಲ್ಲಿಯೂ ಗುಡುಗು ಸಹಿತ ಮಳೆಯೊಂದಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನಗಳವರೆಗೆ ಕರಾವಳಿ ಪ್ರದೇಶಗಳಲ್ಲಿ ಉಷ್ಣ ಅಲೆ ಇರಲಿದ್ದು, ಮುನ್ನೆಚ್ಚರಿಕಾ ಕ್ರಮವಹಿಸುವಂತೆ ಇಲಾಖೆ ತಿಳಿಸಿದೆ. ಜೊತೆಗೆ ಏಪ್ರಿಲ್ 21ರ ವರೆಗೆ ಉತ್ತರ ಒಳನಾಡಿನಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಗ್ಗೆರೆ ಬಸ್ ನಿಲ್ದಾಣದಲ್ಲಿ ಅಗ್ನಿಗೆ ಆಹುತಿಯಾದ ಬಿಎಂಟಿಸಿ ಬಸ್​​: ಕ್ಷಣ ಮಾತ್ರದಲ್ಲಿ ತಪ್ಪಿದ ದುರಂತ – Kannada News | BMTC Bus Engulfed in Flames at Laggere Bus Stand, Bengaluru

ಬೆಂಗಳೂರು, ಏಪ್ರಿಲ್​ 19: ಲಗ್ಗೆರೆ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಒಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ನಿನ್ನೆ ಸಂಜೆ ಸುಮಾರು 4:50ಕ್ಕೆ ಮೆಜೆಸ್ಟಿಕ್‌ನಿಂದ ಲಗ್ಗೆರೆ ಬಸ್ ನಿಲ್ದಾಣಕ್ಕೆ ಬಂದಿದ್ದ ಬಿಎಂಟಿಸಿ ಬಸ್‌ ನಿಲ್ಲಿಸಿದ ನಂತರ ಚಾಲಕ ಮತ್ತು ನಿರ್ವಾಹಕರು ಬಸ್ ನಿಲ್ದಾಣದೊಳಗೆ ತೆರಳಿದ್ದರು. ಅದಾಗಿ ಐದೇ ನಿಮಿಷದೊಳಗೆ ಬಸ್‌ನ ಇಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ, ಅಧಿಕಾರಿಗಳು, ಚಾಲಕ-ನಿರ್ವಾಹಕರು ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸಲು ಫೋಮ್ ಮತ್ತು ನೀರನ್ನು ಬಳಸಿ ಪ್ರಯತ್ನಿಸಿದ್ದಾರೆ. ಆದರೆ, ಬೆಂಕಿ ಆರಿಸಲು ಸಾಧ್ಯವಾಗಲಿಲ್ಲ. ಕೇವಲ 15ರಿಂದ 20 ನಿಮಿಷಗಳಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಘಟನೆ ನಡೆದ ಸಮಯದಲ್ಲಿ ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇರದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾಡುಕೋಣದ ದಾಳಿಗೆ ಪ್ರಾಣಬಿಟ್ಟ ಕಾಫಿ ತೋಟದ ಕೆಲಸಗಾರ: 30 ವರ್ಷದ ಯುವಕನ ದಾರುಣ ಸಾವು – Kannada News | Chikkamagaluru: Wild Bison Attack Kills Coffee Worker, Escalates Human Animal Conflict

ಕಾಡುಕೋಣದ ದಾಳಿಗೆ ಬಲಿಯಾದ ಯುವಕImage Credit source: Tv9 Kannada

ಚಿಕ್ಕಮಗಳೂರು, ಏಪ್ರಿಲ್​​ 19: ರಾಜ್ಯದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಮುಂದುವರಿದಿದೆ. ಕಾಡಾನೆಗಳ ಉಪಟಳದಿಂದ ಮೊದಲೇ ಕಂಗೆಟ್ಟಿದ್ದ ಕಾಫಿ ನಾಡು ಚಿಕ್ಕಮಗಳೂರಲ್ಲಿ (Chikkamagaluru) ಇದೀಗ ಕಾಡುಕೋಣಗಳ ಹಾವಳಿಯೂ ಶುರುವಾಗಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡುಕೋಣ ದಾಳಿ ನಡೆಸಿದ ಪರಿಣಾಮ 30 ವರ್ಷದ ಯುವಕ ಚೇತನ್​​ ಎಂಬಾತ ದಾರುಣವಾಗಿ ಮೃತಪಟ್ಟಿದ್ದಾನೆ. ಎದೆಯ ಭಾಗಕ್ಕೆ ಕಾಡುಕೋಣ ಇರಿದ ಕಾರಣ ಆತ ಉಸಿರು ಚೆಲ್ಲಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಸಮೀಪದ ಮೈದಾಡಿ ಯಮಗೊಂಡ ಎಸ್ಟೇಟ್​​ನಲ್ಲಿ ನಡೆದಿದೆ.

ಘಟನೆಯ ಬೆನ್ನಲ್ಲೇ ಕಳಸ ತಾಲೂಕಿನಲ್ಲಿ ಬೀಡುಬಿಟ್ಟಿರುವ ಕಾಡುಕೋಣಗಳು ಜನರಲ್ಲಿ ಆತಂಕ ಸೃಷ್ಟಿ ಮಾಡಿವೆ. ಕಾಫಿ ತೋಟಗಳಲ್ಲಿ ಕಾಡುಕೋಣಗಳು‌ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದು, ಮಾನವರ ಮೇಲೆ ದಾಳಿಗೆ ಮುಂದಾಗುತ್ತಿವೆ. ಈ ಹಿನ್ನೆಲೆ ಇವುಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಕಾಡುಕೋಣಗಳ ಸೆರೆ ಹಿಡಿದು ಸ್ಥಳಾಂತರ ಮಾಡುವುದಾಗಿ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ. ಮಾನವರ ಮೇಲೆ‌ದಾಳಿಗೆ ಮುಂದಾಗುವ ಕಾಡುಕೋಣ ಸೇರಿದಂತೆ ಕಾಡಾನೆ, ಚಿರತೆಗಳ ಮೇಲೆ ದಿನದ 24 ಗಂಟೆಗಳ ಕಾಲ ನಿಗಾ ಇಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವ ಅವರು, ಕಾಡು ಪ್ರಾಣಿಗಳ ಉಪಟಳ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನ ನೇಮಕ ಮಾಡುವುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಂಡು ಹಿಂಡಾಗಿ ನಾಡಿಗೆ ಲಗ್ಗೆ ಇಟ್ಟ ‘ಬೀಟಮ್ಮ’ ಗ್ಯಾಂಗ್! ಚಿಕ್ಕಮಗಳೂರು–ಬೇಲೂರು ಗಡಿ ಭಾಗದಲ್ಲಿ ಹೆಚ್ಚಾಯ್ತು ಕಾಡಾನೆಗಳ ಆತಂಕ

ಒಟ್ಟಿನಲ್ಲಿ ಕಾಡು ಪ್ರಾಣಿಗಳ ಉಪಟಳ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಾಡಾನೆಗಳ ಕಾಟದ ಒಂದೆಡೆಯಾದರೆ, ಮತ್ತೊಂದು ಕಡೆ ಕಾಡುಕೋಣಳೂ ದಾಳಿ ನಡೆಸುತ್ತಿರುವ ಕಾರಣ ರೈತರು, ಕಾರ್ಮಿಕರು ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಸ್ಥಿತಿ ಉದ್ಭವಿಸಿದೆ. ಕಾಫಿ ತೋಟಗಳಿಗೆ ನುಗ್ಗುವ ಹಿಂಡು ಹಿಂಡು ಕಾಡುಕೋಣಗಳು ದಾಳಿ ನಡೆಸುವುದು ಮಾತ್ರವಲ್ಲದೆ ಬೆಳೆಯ ನಾಶವನ್ನೂ ಮಾಡ್ತಿರೋದು ಅನ್ನದಾತರ ನಿದ್ದೆಗೆಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Daily Devotional: ಜೀವನ ಪೂರ್ತಿ ಮನುಷ್ಯನಿಗೆ ಗುರುವಿನ ಅನುಗ್ರಹ ಬೇಕೇ ಬೇಕು, ಯಾಕೆ ಗೊತ್ತಾ? – Kannada News | Why a Gurus Guidance is Essential for Human Existence

ಜೀವನ ಪೂರ್ತಿ ಮನುಷ್ಯನಿಗೆಗುರುವಿನ ಅನುಗ್ರಹ ಬೇಕಾ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ನಾವು ಹುಟ್ಟಿದ ಕ್ಷಣದಿಂದ ಸಾವಿನವರೆಗೂ ದೇವರ ಅನುಗ್ರಹ, ತಂದೆ-ತಾಯಿಗಳ ಆಶೀರ್ವಾದದ ಜೊತೆಗೆ, ಗುರುವಿನ ಅನುಗ್ರಹವು ಅತ್ಯಂತ ಮಹತ್ವದ್ದಾಗಿದೆ. “ಹರ ಮುನಿದರೂ ಗುರು ಕಾಯುವನು” ಎಂಬ ನುಡಿಯು ಗುರುವಿನ ಸರ್ವೋಚ್ಚ ಸ್ಥಾನವನ್ನು ಸಾರುತ್ತದೆ.

ತಂದೆ-ತಾಯಿಗಳು ಮೊದಲ ಗುರುಗಳಾದರೆ, ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗದಲ್ಲಿ ಮಾರ್ಗದರ್ಶನ ನೀಡುವವರು ಸಹ ಗುರುಗಳೇ. ಪರಿಪೂರ್ಣ ಜೀವನ ಮತ್ತು ಮಾನಸಿಕ ನೆಮ್ಮದಿಗಾಗಿ ಗುರುವಿನ ಆಶ್ರಯ ಅಗತ್ಯ. ಗುರುವು ಅಂಧಕಾರವನ್ನು (ಗು) ಹೋಗಲಾಡಿಸಿ (ಋ) ಜ್ಞಾನದ ದಾರಿಯನ್ನು ತೋರಿಸುವವನು. ಗುರುವಿನ ಕೃಪೆ ಇದ್ದರೆ ನವಗ್ರಹ ದೋಷಗಳು ನಿವಾರಣೆಯಾಗುತ್ತವೆ ಮತ್ತು ಜೀವನದ ಕಷ್ಟಗಳು ದೂರವಾಗುತ್ತವೆ. ಗುರು ಪೂರ್ಣಿಮೆಯಂದು ಮಾತ್ರವಲ್ಲದೆ, ಪ್ರತಿನಿತ್ಯವೂ ಗುರುವಿನ ಸ್ಮರಣೆ ಮತ್ತು ಮಾರ್ಗದರ್ಶನ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತದೆ. ಹೀಗಾಗಿ ಮನುಷ್ಯನ ಜೀವನದುದ್ದಕ್ಕೂ ಗುರುವಿನ ಅನುಗ್ರಹ ಬೇಕೇ ಬೇಕು ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

 

 

 

Source link

Horoscope Today: ಇಂದು ಈ ರಾಶಿಯವರಿಗೆ ಖರ್ಚು ವೆಚ್ಚಗಳು ಹೆಚ್ಚಾಗಲಿವೆ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 19, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಬಿದಿಗೆ ತಿಥಿ, ಅಶ್ವಿನಿ ನಕ್ಷತ್ರ, ಆಯುಷ್ಮಾನ್ ಯೋಗ ಮತ್ತು ಕೌಲವ ಕರಣ ಒಳಗೊಂಡಿರುವ ವಿಶೇಷ ದಿನವಾಗಿದೆ. ರವಿ ಮತ್ತು ಚಂದ್ರ ಇಬ್ಬರೂ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದು, ರವಿ ಉಚ್ಚ ಸ್ಥಾನದಲ್ಲಿದ್ದಾನೆ ಎಂದು ಗುರೂಜಿ ವಿವರಿಸಿದ್ದಾರೆ. ಗುರೂಜಿ ಅವರು ಪ್ರತಿ ರಾಶಿಯವರಿಗೂ ವೃತ್ತಿ, ಆರ್ಥಿಕತೆ, ಆರೋಗ್ಯ, ಕುಟುಂಬ, ವೈವಾಹಿಕ ಜೀವನ, ಪ್ರಯಾಣ, ಶುಭ ಬಣ್ಣ, ಅದೃಷ್ಟ ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳ ಬಗ್ಗೆ ವಿವರವಾದ ಭವಿಷ್ಯವನ್ನು ನೀಡಿದ್ದಾರೆ.

 

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಸ್ವಾರ್ಥದ ಪರವಾಗಿ ಯೋಚಿಸಿ, ದುಃಖ – Kannada News | Horoscope April 19 Sunday 2026; Dina Rashi Bhavishya Today, Checkout the details here

ಮೇಷ ರಾಶಿ:

ಬಾಂಧವ್ಯದಲ್ಲಿ ಅಭಿಪ್ರಾಯ ಭೇದದಿಂದ ಕಲಹವಾಗಬಹುದು. ಹಣದ ನಷ್ಟದ ಸಂಭವವಿದೆ. ದೂರದ ಬಂಧುಗಳಿಂದ‌ ಕಾರ್ಯ ಮಾಡಬಹುದು. ವಿದ್ಯಾರ್ಥಿಗಳ ಸಾಧನೆಯ ಹಾದಿಯು ಸುಗಮವಾಗುವುದು. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ವಿಚಾರವೊರುವುದು. ದೂರಪ್ರಯಾಣದಿಂದ ಆತಂಕ ಸೃಷ್ಟಯಾಗಬಹುದು. ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಅತಿಯಾದ ನಿದ್ರೆಯಿಂದ ಮನಸ್ಸು ಕುಗ್ಗುವುದು.

ವೃಷಭ ರಾಶಿ:

ಹೊಸ ಪರಿಚಯಗಳಿಂದ ದೂರವಿರಲು ಪ್ರಯತ್ನಿಸಿ. ತಮ್ಮಂದಿರು ಮತ್ತು ಅಣ್ಣಂದಿರೊಡನೆ ಜಗಳ ಆಗದಂತೆ ನೋಡಿಕೊಳ್ಳಿ. ಕೆಲ ಕೆಲಸಗಳು ವಿಳಂಬವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ದೊರೆತು ವಿದೇಶಕ್ಕೆ ತೆರಳಬಹುದು. ಆಸ್ತಿಯ ವಿಚಾರದಲ್ಲಿ ನೀವು ಆಸಕ್ತಿಯನ್ನು ಕಳೆದುಕೊಳ್ಳುವಿರಿ. ಯಾರಾದರೂ ನಿಮ್ಮ ಕಿವಿಚುಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಲಾರಿರಿ. ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಅಹಂಕಾರವಾದೀತು.

ಮಿಥುನ ರಾಶಿ:

ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಯೋಜನೆಗಳು ನೆರವೇರಲಿವೆ. ಮನೆಯಲ್ಲಿನ ಬದಲಾವಣೆಗಳು ಸಂತೋಷ ತಂದಿಡುತ್ತವೆ. ಸ್ನೇಹಿತರೊಂದಿಗೆ ಭೆಟ್ಟಿಯಾಗುವ ಅವಕಾಶ ಸಿಗುತ್ತದೆ. ನಿಮ್ಮ ಶ್ರಮ ಯಶಸ್ಸಿನ ಮಾರ್ಗವನ್ನೇ ತೋರಿಸುತ್ತದೆ. ಲ ಎಲ್ಲವೂ ನಿಮಗೆ ತಿಳಿದೇ ಆಗಬೇಕು ಎನ್ನುವ ಹಠವಿರುವುದು. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು.

ಕರ್ಕಾಟಕ ರಾಶಿ:

ಇಂದು ಅನೇಕ ಸ್ನೇಹಿತರೊಂದಿಗೆ ಆಹ್ಲಾದಕರ ಕ್ಷಣಗಳನ್ನು ಕಳೆಯುವಿರಿ. ಹಣದ ಲಾಭವೂ ಲಭ್ಯವಾಗಬಹುದು. ಇಂದು ಖರ್ಚು ಮಾಡುತ್ತಿದ್ದರೂ ಸಂತೋಷದಲ್ಲಿ ಅದರ ಅರಿವೇ ಆಗದು. ಸಂತಾನದ ಲಾಭವು ನಿಮ್ಮ ಸಂತೋಷವನ್ನು ಅಧಿಕ ಮಾಡುವುದು. ಕುಟುಂಬ ಹಿರಿಯರಿಗೆ ಸೇರಿದ ಆಸ್ತಿಯಲ್ಲಿನ ಪಾಲು ಪಡೆಯುವಿರಿ. ಯಾರದೋ ತಪ್ಪಿನ ಕಾರಣ ವಾಹನದಿಂದ ಬೀಳುವ ಸಾಧ್ಯತೆ. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ.

ಸಿಂಹ ರಾಶಿ:

ನಿಮ್ಮ ಮಕ್ಕಳ ಸಂತೋಷಕ್ಕಾಗಿ ಕೆಲಸಮಾಡುವಿರಿ. ಉದ್ಯೋಗ ಅಥವಾ ವ್ಯವಹಾರದಲ್ಲಿ ಉತ್ತೇಜನಕಾರಿ ಬೆಳವಣಿಗೆ ಕಂಡುಬರುತ್ತದೆ. ಹಣದ ಸುಲಭ ಲಾಭ ಸಿಗಲಿದೆ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ. ಇಂದು ಅನಾಯಾಸವಾಗಿ ಆದಾಯ ದೊರೆಯುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ಕಳೆದ ಸಮಯವನ್ನು ಮೆಲುಕು ಹಾಕುವಿರಿ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ. ನೀವು ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಬಯಸುವಿರಿ.

ಕನ್ಯಾ ರಾಶಿ:

ನೀವು ಕುಟುಂಬದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿ ಗೊತ್ತಾಗುವುದು. ಸಾಲದ ವಿಷಯದಲ್ಲಿ ಯಶಸ್ಸು ದೊರಕುತ್ತದೆ. ಮನೆಯವರ ಆರೋಗ್ಯದತ್ತ ಎಚ್ಚರಿಕೆಯಿಂದ ಗಮನ ಹರಿಸಿ. ಸ್ನೇಹಿತರೊಂದಿಗೆ ವಿರೋಧ ಉಂಟಾಗದಂತೆ ಮಾತನಾಡುವುದು ಅಗತ್ಯ. ಕೆಲಸಗಳಲ್ಲಿ ವಿಘ್ನಗಳ ಸಾಧ್ಯತೆ ಇದೆ. ಅಶಿಸ್ತಿನಿಂದ ನಿಮಗೆ ಕೆಟ್ಟ ಹೆಸರು ಬರಬಹುದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ.

ತುಲಾ ರಾಶಿ:

ಅನ್ಯರ ಮೂಲಕ ಲೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಶಿಷ್ಟ ನಡವಳಿಕೆ ಇತರರಿಗೆ ಪ್ರೇರಣೆ ಆಗುತ್ತದೆ. ಎಲ್ಲ ಕಾರ್ಯಗಳಲ್ಲಿ ಯಶಸ್ಸು ದೊರಕುವ ಸಂಭವ. ಸ್ವತಂತ್ರವಾಗಿ ಇಂದಿನ ಕಾರ್ಯವನ್ನು ನೀವು ನಿರ್ವಹಿಸುವಿರಿ. ನೂತನ ವಾಹನವನ್ನು ಖರೀದಿಸುವಿರಿ. ಕುಟುಂಬದಲ್ಲಿ ಸಾಮರಸ್ಯವು ಕಾಣಿಸುವುದು. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ.

ವೃಶ್ಚಿಕ ರಾಶಿ:

ಶುಭಕಾರ್ಯಕ್ಕಾಗಿ ಮಾಡುವ ಯತ್ನಗಳು ಯಶಸ್ವಿಯಾಗುತ್ತವೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಇಂದು ನಿಮ್ಮ ಆತ್ಮವಿಶ್ವಾಸ ಇನ್ನಷ್ಟು ಬೆಳೆಯುತ್ತದೆ. ಅಗಲವು ದಿನಗಳ ಭೂವಿವಾದಕ್ಕೆ ಅಂತ್ಯ ಸಿಗಲಿದೆ. ನೌಕರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು.

ಧನು ರಾಶಿ:

ಅನಿರೀಕ್ಷಿತ ವಾಗ್ವಾದಗಳಿಗೆ ಸಾಧ್ಯತೆ ಇದೆ. ಹಣದ ಕೊರತೆ ನಿವಾರಣೆಗೆ ಸಾಲದ ಪ್ರಯತ್ನ ಮಾಡಬಹುದು. ಕುಟುಂಬದಲ್ಲಿ ಹೊಸ ಬದಲಾವಣೆಗಳು ಕಾಣಿಸಬಹುದು. ಯೋಜಿತ ಕಾರ್ಯಗಳಲ್ಲಿ ವಿಳಂಬ ಉಂಟಾಗಬಹುದು. ನಿಮ್ಮ ನಿಶ್ಯಬ್ದತೆ ಹಲವಾರು ಬಿಕ್ಕಟ್ಟಿಗೆ ಪರಿಹಾರವಾಗಬಹುದು. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ನಿಮ್ಮ ಶ್ರಮವು ನಿಷ್ಪ್ರಯೋಜಕ ಎನಿಸುವುದು.

ಮಕರ ರಾಶಿ:

ತಾತ್ಕಾಲಿಕ ಕೋಪದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಮನೆಯಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಬಹುದು. ಸಂಬಂಧಗಳ ಎಚ್ಚರಿಕೆಯಿಂದ ಮುನ್ನಡೆಯಿರಿ. ತಾಳ್ಮೆಯ ನಡವಳಿಕೆ ಇಂದಿನ ದಿನ ಸುಗಮವಾಗಿಸುತ್ತದೆ. ಯಾರಿಂದಲೂ ಕೂಡಲೇ ಬದಲಾವಣೆಯನ್ನು ಬಯಸುವುದು ಬೇಡ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ ಬರಬಹುದು.

ಕುಂಭ ರಾಶಿ:

ಕೆಲವು ಪ್ರಮುಖ ಯೋಜನೆಗಳನ್ನು ಮುಂದೂಡಬೇಕಾಗಬಹುದು. ಸಣ್ಣ ಮಟ್ಟದ ಆರೋಗ್ಯ ಸಮಸ್ಯೆ ತೊಂದರೆ ನೀಡಬಹುದು. ಪ್ರಯಾಣಗಳಲ್ಲಿ ಅಸಹಜ ತೊಂದರೆಗಳು ಎದುರಾಗಬಹುದು. ಸ್ವಭಾವದ ಕಾರಣ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ. ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ.

ಮೀನ ರಾಶಿ:

ಉದ್ಯೋಗಸ್ಥರಿಗೆ ಬಡ್ತಿಯ ಸಾಧ್ಯತೆ ಇದೆ. ಇಂದು ಮನಸ್ಸು ಅಸ್ಥಿರವಾಗಿರುವ ಸಾಧ್ಯತೆ ಇದೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಂಘರ್ಷ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಮಾತಿನಿಂದಲೂ ಕಲಹಗಳು ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಈ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳುಬೇಕು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ರೋಹಿಣೀ, ಯೋಗ : ವಿಷ್ಕಂಭ, ಕರಣ : ಬಾಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:04 – 18:37, ಯಮಗಂಡ ಕಾಲ 12:24 – 13:57, ಗುಳಿಕ ಕಾಲ 15:31- 17:04

-ಲೋಹಿತ ಹೆಬ್ಬಾರ್ – 8762924271 (what’s app only)

Source link

SRH vs CSK: ಸನ್‌ರೈಸರ್ಸ್ ವಿರುದ್ಧ 10 ರನ್​ಗಳಿಂದ ಸೋತ ಸಿಎಸ್​ಕೆ

ಐಪಿಎಲ್ 2026 ರ 27 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಮಣಿಸಿದ ಸನ್‌ರೈಸರ್ಸ್ ಲೀಗ್​ನಲ್ಲಿ ಮೂರನೇ ಗೆಲುವು ದಾಖಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇತ್ತ ಕಳೆದೆರಡು ಪಂದ್ಯಗಳಲ್ಲಿ ಗೆದ್ದು ಗೆಲುವಿನ ಹಾದಿಗೆ ಮರಳಿದ್ದ ಸಿಎಸ್​ಕೆ ಮತ್ತೆ ಸೋಲಿನ ಸುಳಿಗೆ ಸಿಲುಕಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ತಂಡ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ 184 ರನ್ ಕಲೆಹಾಕಲಷ್ಟೇ ಶಕ್ತವಾಗಿ 10 ರನ್​​ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ಸಿಎಸ್​ಕೆ ಪಾಯಿಂಟ್​ ಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಉಳಿದಿದೆ.

Source link

ದಳಪತಿ ವಿಜಯ್​​ ಬೆಂಬಲಕ್ಕೆ ಮೈಸೂರಿನಿಂದ ಯುವಕನ ಸೈಕಲ್ ಯಾತ್ರೆ – Kannada News | Arul Selvam cycle tour to Tamil Nadu supporting Thalapathy Vijay

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಅವರು ರಾಜಕೀಯಕ್ಕೆ ಧುಮುಕಿದ್ದು ಟಿವಿಕೆ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿ, ತಮಿಳುನಾಡು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಭರ್ಜರಿಯಾಗಿ ರಾಜ್ಯದಾದ್ಯಂತ ಪ್ರಚಾರ ಮಾಡುತ್ತಿರುವ ದಳಪತಿ ವಿಜಯ್ ಅವರು ಖುದ್ದಾಗಿ ಎರಡು ಕ್ಷೇತ್ರಗಳಿಂದ ಚುನಾವಣೆಗೂ ಸಹ ಸ್ಪರ್ಧೆ ಮಾಡಿದ್ದಾರೆ. ದಳಪತಿ ವಿಜಯ್ ಅವರಿಗೆ ಉತ್ತಮ ಬೆಂಬಲ ತಮಿಳುನಾಡಿನಲ್ಲಿ ವ್ಯಕ್ತವಾಗುತ್ತಿದೆ. ಇದೀಗ ಮೈಸೂರಿನಿಂದ ಅರುಳ್ ಸೆಲ್ವಂ ಹೆಸರಿನ ಯುವಕ ಸೈಕಲ್ ಯಾತ್ರೆ ಮಾಡಿಕೊಂಡು ತಮಿಳುನಾಡಿಗೆ ಹೋಗಿ ವಿಜಯ್​ಗೆ ಬೆಂಬಲ ಸೂಚಿಸಲಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version