Daily Devotional: ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಬೆಂಗಳೂರು, ಜನವರಿ 12: ಪ್ರತಿದಿನವೂ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಶುಕ್ರವಾರವನ್ನು ವಿಶೇಷವಾಗಿ ಮಹಾಲಕ್ಷ್ಮಿಗೆ ಮೀಸಲಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಮಹಾಲಕ್ಷ್ಮಿಯ ಅನುಗ್ರಹ ಪಡೆಯಲು ಹಲವು ಧಾರ್ಮಿಕ ಆಚರಣೆಗಳನ್ನು ಪಾಲಿಸಲಾಗುತ್ತದೆ. ಶುಕ್ರವಾರದಂದು ಹುಳಿ ಪದಾರ್ಥಗಳನ್ನು ಸೇವಿಸುವುದರಿಂದ ದೂರವಿರುವುದು ಹಿಂದೂ ಸಂಪ್ರದಾಯದಲ್ಲಿ ಮಹತ್ವ ಪಡೆದಿದೆ. ಮಹಾಲಕ್ಷ್ಮಿ ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆ. ಶುಕ್ರವಾರದಂದು ಈ ದೇವಿಗೆ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸುವುದು ಅತ್ಯಂತ ಶುಭಕರ. ಹುಣಸೆಹಣ್ಣು, ನಿಂಬೆಹಣ್ಣು, ಉಪ್ಪಿನಕಾಯಿ, ವಿನೆಗರ್, ಕಿತ್ತಳೆ ಹಣ್ಣಿನಂತಹ ಹುಳಿ ಪದಾರ್ಥಗಳನ್ನು ಸೇವಿಸದೆ…