Optical Illusion: ಈ ಒಗಟಿನ ಚಿತ್ರದಲ್ಲಿರುವ ಹಲ್ಲಿಯನ್ನು ಹುಡುಕಿದ್ರೆ ನೀವೇ ಜಾಣರು – Kannada News | Optical illusion: If your eyes are sharp, find the lizard in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ದೃಷ್ಟಿ ಸಾಮರ್ಥ್ಯ ಹಾಗೂ ಮೆದುಳನ್ನು ಚುರುಕುಗೊಳಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಕೆಲವರು ಈ ಚಿತ್ರಗಳನ್ನು ಬಿಡಿಸಿ ತಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳುತ್ತಾರೆ. ಇದೀಗ ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸುವ ಸಮಯ. ಈ ಚಿತ್ರದಲ್ಲಿ ಹಲ್ಲಿ  (lizard) ಎಲ್ಲಿದೆ ಎಂದು ನೀವು ಕಂಡು ಹಿಡಿಯಬೇಕು. ನೀವು ಈ ಒಗಟನ್ನು ಬಿಡಿಸಲು ಸಾಧ್ಯವಾದರೆ ನಿಜ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಲೀಸಾಗಿ ನಿಭಾಯಿಸುತ್ತೀರಿ ಎಂದರ್ಥ. ಆದರೆ ಈ ಒಗಟನ್ನು ಹದಿನೈದು ಸೆಕೆಂಡುಗಳೊಳಗೆ ಬಿಡಿಸಲು ಸಾಧ್ಯವಾಗುತ್ತದೆಯೇ ಎಂದು ನೋಡಿ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸಹಜವಾಗಿ ಕಾಣಿಸುತ್ತದೆ. ಇದರಲ್ಲಿರುವ ಗುಪ್ತ ವಸ್ತುಗಳು ಅಷ್ಟು ಸುಲಭವಾಗಿ ಒಗಟು ಬಿಡಿಸುವವರ ಕಣ್ಣಿಗೆ ಬೀಳುವುದಿಲ್ಲ. ಈ ಇಲ್ಯೂಷನ್ ಚಿತ್ರದಲ್ಲಿ ನೀವು ಮನೆಯ ಹೊರಾಂಗಣ ನೋಟವನ್ನು ಕಾಣಬಹುದು. ಹೂ ಕುಂಡಗಳು, ಮರಗಳಿವೆ. ಇದೆಲ್ಲದರ ನಡುವೆ ಹಲ್ಲಿಯೊಂದು ಅಡಗಿ ಕುಳಿತಿದೆ. ಆದರೆ ನಿಮಗೆ ಈ ಜೀವಿಯನ್ನು ಕಂಡು ಹಿಡಿಯುವುದು ಕಷ್ಟವಾಗಬಹುದು. ಈ ಸವಾಲನ್ನು ನೀವು ಸ್ವೀಕರಿಸಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಿಷ್ಠಾವಂತ ಪ್ರಾಣಿ ಶ್ವಾನವನ್ನು ಕಂಡು ಹಿಡಿಯಬಲ್ಲಿರಾ

ಹಲ್ಲಿಯನ್ನು ಗುರುತಿಸಲು ಸಾಧ್ಯವಾಯಿತೇ?

ಅನುಭವಿ ಆಟಗಾರರಿಗೂ ಈ ಇಲ್ಯೂಷನ್ ಚಿತ್ರವನ್ನು ಬಿಡಿಸಲಾಗುವುದಿಲ್ಲ. ಈ ಮೇಲಿನ ಚಿತ್ರದಲ್ಲಿ ಮರೆಮಾಡಲಾಗಿರುವ ಹಲ್ಲಿಯನ್ನು ಗುರುತಿಸಲು ಸಾಧ್ಯವಾಗಿಲ್ಲವೇ. ಆದರೆ ಹಲ್ಲಿ ಎಲ್ಲಿದೆ ಎಂದು ನಾವು ನಿಮಗೆ ಹೇಳುತ್ತೇವೆ. ಈ ಚಿತ್ರದಲ್ಲಿ ಹಲ್ಲಿಯನ್ನು ಗುರುತಿಸಿದ್ದು, ನೀವು ಗಮನಿಸಿದ್ದೀರಿ ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ – Kannada News | Fresh CCTV Footage Shows Stray Dog Attack in Gurugram’s Vijay Vihar

ಗುರುಗ್ರಾಮ, ಜನವರಿ 30: ಗುರುಗ್ರಾಮದ ವಿಜಯ್ ವಿಹಾರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಅಲ್ಲಿ ಓಡಾಡುವವರ ಮೇಲೆ ನಾಯಿಗಳು ದಾಳಿ ನಡೆಸುತ್ತಿದ್ದು, ವಿಡಿಯೋ ವೈರಲ್ ಆಗಿದೆ. ಗುರುಗ್ರಾಮದ ವಿಜಯ್ ವಿಹಾರ್ ಸೆಕ್ಷನ್ 30ರಲ್ಲಿ ನಾಯಿಗಳು ಜನರ ಮೇಲೆ ದಾಳಿ ನಡೆಸುತ್ತಿವೆ. ಮನೆಯಿಂದ ಹೊರ ಬರಲು ಜನರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾದಚಾರಿ ಮಾರ್ಗಗಳಲ್ಲಿ ಈ ಬೀದಿ ನಾಯಿಗಳಿಗೆ ಆಹಾರ ನೀಡುವವರ ಮೇಲೆ ಆಕ್ರೋಶ ವ್ಯಕ್ತವಾಗಿದೆ.

Source link

ಹೋಂವರ್ಕ್​ ಮಾಡಿಲ್ಲ ಎಂದು ಬಾಲಕನ ಮೇಲೆ ಹಲ್ಲೆ! ‘ಪೋಷಕರಿಗೆ ಹೇಳಿದ್ರೆ ಕುತ್ತಿಗೆ ಹಿಸುಕುತ್ತೇನೆ’ ಎಂದ ಶಿಕ್ಷಕಿ – Kannada News | Bengaluru: Teacher Brutally Assaults 4th Grader for Homework, FIR Lodged

‘ಪೋಷಕರಿಗೆ ಹೇಳಿದ್ರೆ ಕುತ್ತಿಗೆ ಹಿಸುಕುತ್ತೇನೆ’ಎಂದ ಶಿಕ್ಷಕಿ

ಬೆಂಗಳೂರು, ಜನವರಿ 30: ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ 4ನೇ ತರಗತಿ ಬಾಲಕನ ಮೇಲೆ ಶಿಕ್ಷಕಿ ಕ್ರೂರವಾಗಿ ಹಲ್ಲೆ (Teacher assaulted student) ನಡೆಸಿದ ಘಟನೆ ಜನವರಿ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂದಿನಿ ಲೇಔಟ್‌ನಲ್ಲಿರುವ ವೀಣಾ ವಿದ್ಯಾ ಸಂಸ್ಥೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ಆಂಗ್ಲಿನ್ ಬಾಲಕನಿಗೆ ಬಾಸುಂಡೆ ಬರುವ ಮಟ್ಟಿಗೆ ಥಳಿಸಿದ್ದಾರೆ ಎಂದು ಬಾಲಕನ ತಾಯಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಾನು ಶಾಲೆಗೆ ಹೋಗಲ್ಲಮ್ಮ ಎಂದಿದ್ದ ಬಾಲಕ!

ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ತಮ್ಮ ಮಗನನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ಓದಿಸುತ್ತಿದ್ದರು. ಇತ್ತೀಚೆಗೆ ಮಗನನ್ನು ನೋಡಲು ಬಂದ ವೇಳೆ, ಆತನ ಕೈ ಮತ್ತು ದೇಹದ ಮೇಲೆ ಬಾಸುಂಡೆ ಗುರುತುಗಳನ್ನು ಕಂಡು ಶಾಕ್ ಆಗಿದ್ದರು. ಈ ವೇಳೆ ತಾಯಿಯನ್ನು ಕಂಡ ಮಗು ಅಳುತ್ತಾ ಹೋಂ ವರ್ಕ್​ ಮಾಡದ ಕಾರಣ ಶಿಕ್ಷಕಿ ಆಂಗ್ಲಿನ್ ತನಗೆ ಥಳಿಸಿರುವುದಾಗಿ ಹೇಳಿದ್ದ. ಹಲ್ಲೆ ವಿಚಾರವನ್ನು ಪೋಷಕರಿಗೆ ತಿಳಿಸಿದರೆ ಕುತ್ತಿಗೆ ಹಿಸುಕುವುದಾಗಿ ಬೆದರಿಕೆಯೂ ಹಾಕಿದ್ದರಿಂದ ತಾಯಿಯ ಬಳಿ ಏನೂ ಹೇಳಿಕೊಂಡಿಲ್ಲವೆಂದೂ ಬಾಲಕ ಕಣ್ಣೀರಿಟ್ಟಿದ್ದ.

ವಿಷಯ ತಿಳಿದ ಲಕ್ಷ್ಮೀ ಈ ಬಗ್ಗೆ ಶಾಲಾ ಮುಖ್ಯಸ್ಥರನ್ನು ಪ್ರಶ್ನಿಸಿದ್ದರು. ಪೊಲೀಸರನ್ನೂ ಕರೆಯಿಸಿ ಹಲ್ಲೆ ನಡೆಸಿದ ಶಿಕ್ಷಕಿಯನ್ನು ಅಮಾನತುಗೊಳಿಸುವಂತೆಯೂ ಹೇಳಿದ್ದರು. ಈ ಮಧ್ಯೆ ಬಾಲಕ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದ. ನಂತರ ಶಿಕ್ಷಕಿ ಸಸ್ಪೆಂಡ್ ಆಗಿರಬಹುದೆಂದು ಮಗನನ್ನು ಶಾಲೆಗೆ ಕಳುಹಿಸಲು ಹೋದಾಗ ಆಕೆಯನ್ನು ಅಮಾನತುಗೊಳಿಸಿಲ್ಲವೆಂದು ತಿಳಿದು ಮತ್ತೆ ಶಾಲೆಯ ಆಡಳಿತಕ್ಕೆ ಪ್ರಶ್ನಿಸಿದಾಗಲೂ ಅವರು ನಿರ್ಲಕ್ಷ್ಯ ತೋರಿದ್ದಾರೆ. ಇದೆಲ್ಲದರಿಂದ ಆಕ್ರೋಶಕ್ಕೊಳಗಾದ ತಾಯಿ ಗುರುವಾರ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ ಗರ್ಭಿಣಿ ಸೊಸೆಯನ್ನು ಮಾವ ಕೊಂದಿದ್ಯಾಕೆ ಗೊತ್ತಾ? ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ!

ಮಗುವಿನ ತಾಯಿ ಹೇಳಿದ್ದೇನು?

ಬೆಂಗಳೂರಿನ ನಂದಿನಿ ಲೇಔಟ್‌ನ ವೀಣಾ ವಿದ್ಯಾ ಸಂಸ್ಥೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕನ ಮೇಲೆ ಶಿಕ್ಷಕಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಕನ ತಾಯಿ ಲಕ್ಷ್ಮೀ ಟಿವಿ9ಗೆ ಹೇಳಿಕೆ ನೀಡಿದ್ದು, ಇತ್ತೀಚೆಗೆ ಮಗನನ್ನು ನೋಡಲು ಬಂದಾಗ ಆತನ ಕೈ ಮತ್ತು ದೇಹದ ಮೇಲೆ ಬಾಸುಂಡೆ ಗುರುತು ಕಂಡೆ. ವಿಚಾರಿಸಿದಾಗ ಕಳೆದ ಎರಡು ತಿಂಗಳಿಂದ ಇಂಗ್ಲಿಷ್ ಶಿಕ್ಷಕಿ ಆಂಗ್ಲಿನ್ ಮಗುವಿಗೆ ಹೊಡೆದು, ಪೋಷಕರಿಗೆ ಹೇಳಿದರೆ ಕುತ್ತಿಗೆ ಹಿಸುಕುವುದಾಗಿ ಬೆದರಿಸಿದ್ದಾಳೆ ಎಂಬುದು ತಿಳಿದುಬಂದಿದೆ. ಎಫ್‌ಐಆರ್ ದಾಖಲಾಗಿದ್ದರೂ ಶಿಕ್ಷಕಿಯ ವಿರುದ್ಧ ತಕ್ಷಣ ಕ್ರಮ ಕೈಗೊಂಡಿಲ್ಲ ಎಂದು ಶಾಲಾ ಆಡಳಿತ ಮಂಡಳಿಯ ವಿರುದ್ಧ ಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ BEOಗೆ ದೂರು ನೀಡಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 11:20 am, Fri, 30 January 26

Source link

ಮಗನಿಗೆ ಕ್ಯಾನ್ಸರ್; ಇಮ್ರಾನ್ ಜೀವನ ಬದಲಿಸಿದ 12 ಗಂಟೆ – Kannada News | Emraan Hashmi’s Son Cancer Battle: A Father’s Emotional Journey Revealed

ಸುಮಾರು ಎರಡು ದಶಕಗಳ ತಮ್ಮ ವೃತ್ತಿಜೀವನದಲ್ಲಿ, ನಟ ಇಮ್ರಾನ್ ಹಶ್ಮಿ (Emraan Hashmi) ಅವರು ಲವರ್ ಬಾಯ್ ನಿಂದ ಹಿಡಿದು ಖಳನಾಯಕನವರೆಗೆ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ದೊಡ್ಡ ಪರದೆಯ ಮೇಲೆ ಈ ಪಾತ್ರಗಳನ್ನು ನಿರ್ವಹಿಸಲು ಅವರು ಸಾಕಷ್ಟು ಸಿದ್ಧತೆ ಮಾಡಿಕೊಳ್ಳತ್ತಾರೆ. ಆದರೆ ಅವರ ನಿಜ ಜೀವನದಲ್ಲಿ ನಡೆದ ಘಟನೆಗೆ ಅವರು ಸ್ವಲ್ಪವೂ ಸಿದ್ಧರಾಗಿರಲಿಲ್ಲ. ಆ ಬಗ್ಗೆ ಅವರು ಮಾತನಾಡಿದ್ದಾರೆ.

2014ರಲ್ಲಿ ಒಂದು ದಿನ ಅವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು. ಇತ್ತೀಚಿನ ಸಂದರ್ಶನವೊಂದರಲ್ಲಿ, ಇಮ್ರಾನ್ ತಮ್ಮ ಜೀವನದ ಅತ್ಯಂತ ಕಷ್ಟದ ಸಮಯದ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ಈ ಕ್ಷಣ ಅವರ ಕಿರಿಯ ಮಗ ಅಯಾನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕ್ಷಣವಾಗಿತ್ತು. ಆ ಕ್ಷಣವನ್ನು ನೆನಪಿಸಿಕೊಳ್ಳುವಾಗ, ಇಮ್ರಾನ್ ಅವರ ಮನಸ್ಸು ದುಃಖಕ್ಕೆ ಒಳಗಾಯಿತು.

ಇಮ್ರಾನ್ ಹಶ್ಮಿ ತಮ್ಮ ಜೀವನದ ಅತ್ಯಂತ ಹೃದಯವಿದ್ರಾವಕ ಕ್ಷಣದ ಬಗ್ಗೆ ಮಾತನಾಡಿದರು. ಆ ಕ್ಷಣ ಅವರ ಜಗತ್ತನ್ನು ಶಾಶ್ವತವಾಗಿ ಬದಲಾಯಿಸಿತು. ಒಂದು ಸಾಮಾನ್ಯ ಮಧ್ಯಾಹ್ನ ಇದ್ದಕ್ಕಿದ್ದಂತೆ ಅವರ ಹೆತ್ತವರಿಗೆ ದುಃಸ್ವಪ್ನವಾಗಿ ಮಾರ್ಪಟ್ಟಿತು. ರಣವೀರ್ ಅಲಹಾಬಾದ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ, ಇಮ್ರಾನ್ ಮಾತನಾಡಿದ್ದಾರೆ. ‘ನನ್ನ ಮಗ 2014ರಲ್ಲಿ ಅನಾರೋಗ್ಯಕ್ಕೆ ಒಳಗಾದರು. ಅದು ನನ್ನ ಜೀವನದ ಅತ್ಯಂತ ಕಷ್ಟಕರ ಸಮಯವಾಗಿತ್ತು. ನಾನು ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಈ ಸಮಸ್ಯೆ ಸುಮಾರು ಐದು ವರ್ಷಗಳ ಕಾಲ ಇತ್ತು’ ಎಂದಿದ್ದಾರೆ ಅವರು.

‘2014ರಜನವರಿ 13 ರಂದು ನಾವು ಊಟಕ್ಕೆ ಹೋಗಿದ್ದೆವು. ನಾವು ನಮ್ಮ ಮಗನೊಂದಿಗೆ ಪಿಜ್ಜಾ ತಿನ್ನುತ್ತಿದ್ದೆವು. ಮೊದಲ ಲಕ್ಷಣ ಕಾಣಿಸಿಕೊಂಡಿತು. ಅವನ ಮೂತ್ರದಲ್ಲಿ ರಕ್ತ ಕಂಡುಬಂದಿತು. ಮುಂದಿನ ಮೂರು ಗಂಟೆಗಳಲ್ಲಿ, ನಾವು ವೈದ್ಯರ ಬಳಿ ಇದ್ದೆವು’ ಎಂದಿದ್ದಾರೆ ಅವರು.

‘ನಿಮ್ಮ ಮಗನಿಗೆ ಕ್ಯಾನ್ಸರ್ ಇದೆ ಎಂದು ವೈದ್ಯರು ಹೇಳಿದರು. ಮರುದಿನವೇ ನೀವು ಅವನನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ ಮತ್ತು ಅದರ ನಂತರ ಅವನಿಗೆ ಕೀಮೋಥೆರಪಿ ಮಾಡಲಾಗುತ್ತದೆ ಎಂದರು. ಇದೆಲ್ಲವನ್ನೂ ಕೇಳಿದ ನನ್ನ ಜೀವನವು 12 ಗಂಟೆಗಳ ಅಂತರದಲ್ಲಿ ಸಂಪೂರ್ಣವಾಗಿ ಬದಲಾಯಿತು. ಮೊದಲು ನನ್ನ ಜೀವನ ಸಾಮಾನ್ಯವಾಗಿತ್ತು ಮತ್ತು ಮುಂದಿನ ಕ್ಷಣ ಎಲ್ಲವೂ ಬದಲಾಯಿತು’ ಎಂದಿದ್ದಾರೆ ಇಮ್ರಾನ್.

ಮಗನಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಮುಂದಿನ ಐದು ವರ್ಷಗಳು ಇಮ್ರಾನ್ ಹಶ್ಮಿಗೆ ತುಂಬಾ ಸವಾಲಿನ ಮತ್ತು ಕಷ್ಟಕರವಾಗಿತ್ತು. ಅವರು ತಮ್ಮ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿಯೇ ಕಳೆದರು. ಮಗನಿಗೆ ಚಿಕಿತ್ಸೆ ಕೊಡಿಸುವಾಗಅವರು ನಿರಂತರವಾಗಿ ಒತ್ತಡದಲ್ಲಿದ್ದರು. ಈ ಸಮಯದಲ್ಲಿ, ಇಮ್ರಾನ್ ಅವರ ಸಂಪೂರ್ಣ ಜೀವನದ ಆದ್ಯತೆಗಳು ಬದಲಾದವು. ವೃತ್ತಿಜೀವನ ಮತ್ತು ಯಶಸ್ಸು ಹಿಂದೆ ಸರಿಯಿತು. ಅವರ ಮಗನ ಆರೋಗ್ಯವನ್ನು ನೋಡಿಕೊಳ್ಳುವುದು ಅವರಿಗೆ ಹೆಚ್ಚು ಮುಖ್ಯವಾಯಿತು.

ಇದನ್ನೂ ಓದಿ: ‘ಓಜಿ’ ಪವನ್ ಕಲ್ಯಾಣ್ ಹಾಗೂ ಬಾಲಿವುಡ್ ನಟ ಇಮ್ರಾನ್ ಹಶ್ಮಿ

ಈ ನೋವಿನ ಅನುಭವವು ನಂತರ ಇಮ್ರಾನ್ ಅವರಿಗೆ ಪುಸ್ತಕ ಬರೆಯಲು ಪ್ರೇರಣೆ ನೀಡಿತು. ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಇತರ ಪೋಷಕರಿಗೆ ಸಹಾಯ ಮಾಡುವ ಉದ್ದೇಶದಿಂದ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಸರಿಯಾದ ಚಿಕಿತ್ಸೆಯ ಸಹಾಯದಿಂದ, ಇಮ್ರಾನ್ ಅವರ ಮಗ ಕ್ಯಾನ್ಸರ್ ಸೋಲಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:00 am, Fri, 30 January 26

Source link

Toe Length Astrology: ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದ ಇದ್ರೆ ಏನರ್ಥ ಗೊತ್ತಾ? – Kannada News | Long Second Toe Meaning: Personality, Luck and Future in Samudrika Shastra

ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ, ಶಕುನ, ವಾಸ್ತು ಮೊದಲಾದ ಅನೇಕ ವಿಜ್ಞಾನಗಳು ಅಡಗಿವೆ. ಅವುಗಳಲ್ಲಿ ಒಂದು ಪ್ರಮುಖವಾದುದು ಸಾಮುದ್ರಿಕ ಶಾಸ್ತ್ರ. ಇದು ದೇಹದ ರಚನೆಯ ಆಧಾರದಲ್ಲಿ ವ್ಯಕ್ತಿಯ ಸ್ವಭಾವ ಮತ್ತು ಜೀವನವನ್ನು ಊಹಿಸುವ ಶಾಸ್ತ್ರ. ಈ ವಿಜ್ಞಾನದ ಪ್ರಕಾರ, ದೇಹದ ವಿವಿಧ ಭಾಗಗಳ ಆಕಾರ ಮತ್ತು ಉದ್ದವು ವ್ಯಕ್ತಿಯ ಗುಣಲಕ್ಷಣಗಳ ಬಗ್ಗೆ ಸುಳಿವು ನೀಡುತ್ತದೆ. ಸಾಮಾನ್ಯವಾಗಿ ಬಹುತೇಕ ಜನರಿಗೆ ಸಮಾನ ಉದ್ದದ ಕಾಲ್ಬೆರಳುಗಳು ಇರುತ್ತವೆ. ಆದರೆ ಕೆಲವರಲ್ಲಿ ಹೆಬ್ಬೆರಳಿನ ಪಕ್ಕದಲ್ಲಿರುವ ಎರಡನೇ ಕಾಲ್ಬೆರಳು(ತೋರುಬೆರಳು) ಹೆಚ್ಚು ಉದ್ದವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದಕ್ಕೆ ಒಂದು ವಿಶೇಷ ಅರ್ಥವಿದೆ.

ಅದೃಷ್ಟ ಮತ್ತು ಆಕರ್ಷಣೆಯ ಸಂಕೇತ:

ಮಹಿಳೆಯಾಗಲಿ ಅಥವಾ ಪುರುಷನಾಗಲಿ, ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿದ್ದರೆ, ಅವರನ್ನು ಸಾಮಾನ್ಯವಾಗಿ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇಂತಹ ವ್ಯಕ್ತಿಗಳಲ್ಲಿ ಸಹಜವಾದ ಆಕರ್ಷಣೆ ಇರುತ್ತದೆ. ಅವರ ಮಾತು, ನಡೆನುಡಿ ಮತ್ತು ಮುಖಭಾವಗಳು ಇತರರನ್ನು ಸುಲಭವಾಗಿ ಸೆಳೆಯುತ್ತವೆ.

ಮಹಿಳೆಯರ ಸ್ವಭಾವ:

ಮಹಿಳೆಯ ಎರಡನೇ ಕಾಲ್ಬೆರಳು ಉದ್ದವಾಗಿದ್ದರೆ, ಆಕೆ ತನ್ನ ಗಂಡನನ್ನು ಮನಸಾರೆ ಪ್ರೀತಿಸುವ ಸ್ವಭಾವ ಹೊಂದಿರುತ್ತಾಳೆ. ಆದರೆ ತನ್ನ ಪ್ರೀತಿಯನ್ನು ಬಹಿರಂಗವಾಗಿ ತೋರಿಸುವಲ್ಲಿ ಸ್ವಲ್ಪ ಹಿಂಜರಿಕೆ ಇರುತ್ತದೆ. ಇವರ ಕೋಪ ಹೊರಗಣವಾಗಿ ಕಾಣಿಸಬಹುದು, ಆದರೆ ಒಳಗೆ ದ್ವೇಷ ಅಥವಾ ದುರುದ್ದೇಶ ಇರುವುದಿಲ್ಲ. ಅವರು ಹೃದಯದಿಂದ ಮೃದುವಾಗಿರುತ್ತಾರೆ.

ಯಶಸ್ಸಿನ ದಾರಿ:

ಇಂತಹ ವ್ಯಕ್ತಿಗಳ ಜೀವನದ ಆರಂಭದಲ್ಲಿ ಸಾಕಷ್ಟು ಹೋರಾಟಗಳು ಎದುರಾಗಬಹುದು. ಆದರೆ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಆತ್ಮವಿಶ್ವಾಸದ ಮೂಲಕ ಅವರು ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತಾರೆ. ಯಾವುದೇ ಕೆಲಸ ಕೈಗೊಂಡರೂ, ಅದನ್ನು ಪೂರ್ಣಗೊಳಿಸಿದ ನಂತರವೇ ಅವರು ವಿಶ್ರಾಂತಿ ಪಡೆಯುವ ಸ್ವಭಾವ ಹೊಂದಿರುತ್ತಾರೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಇನ್ನಿತರ ಲಕ್ಷಣಗಳು:

ಕೆಲವೊಮ್ಮೆ ಈ ಬೆರಳು ತುಂಬಾ ಉದ್ದವಾಗಿದ್ದರೆ, ಅದು ಸೋಮಾರಿತನದ ಸೂಚನೆಯಾಗಿಯೂ ಹೇಳಲಾಗುತ್ತದೆ. ಆದರೆ ಇವರಲ್ಲಿ ನಾಯಕತ್ವ ಗುಣಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಯಾರಾದರೂ ಅವರ ಸ್ವಾತಂತ್ರ್ಯವನ್ನು ನಿರ್ಬಂಧಿಸಿದರೆ, ಅವರು ಅದನ್ನು ಸಹಿಸುವುದಿಲ್ಲ. ಆರ್ಥಿಕವಾಗಿ ಯಶಸ್ಸು ಸಾಧಿಸುವರು, ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅದು 35–40 ವರ್ಷದ ನಂತರ ದೊರೆಯುತ್ತದೆ. ಇವರು ಮೃದು ಹೃದಯಿಗಳು; ಕಟುವಾದ ಮಾತುಗಳನ್ನು ಸಹ ಶಾಂತವಾಗಿ ಸ್ವೀಕರಿಸುತ್ತಾರೆ. ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ, ಸ್ನೇಹಿತರ ವಲಯ ಕಡಿಮೆ ಇರಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ ಹೆಬ್ಬೆರಳಿನ ಪಕ್ಕದ ಕಾಲ್ಬೆರಳಿನ ಉದ್ದವು ವ್ಯಕ್ತಿಯ ಸ್ವಭಾವ, ಶ್ರಮ, ನಾಯಕತ್ವ ಮತ್ತು ಯಶಸ್ಸಿನ ಸೂಚಕವೆಂದು ಸಾಮುದ್ರಿಕ ಶಾಸ್ತ್ರ ಹೇಳುತ್ತದೆ. ಆದರೆ ಇವು ನಂಬಿಕೆಗಳ ಮೇಲೆ ಆಧಾರಿತವಾಗಿದ್ದು, ಜೀವನದಲ್ಲಿ ಪರಿಶ್ರಮ ಮತ್ತು ಸತ್ಕರ್ಮಗಳೇ ಅಂತಿಮ ಯಶಸ್ಸಿನ ಮೂಲ ಎಂಬುದನ್ನು ಮರೆಯಬಾರದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್​ಗಳ​ ಅಪಹರಣಕ್ಕೆ ಮುಸುಕುಧಾರಿಗಳ ಯತ್ನ – Kannada News | Masked Men Try to Abduct Congress Corporators in Maharashtra, One Arrested

ಮುಂಬೈ, ಜನವರಿ 30: ಮಹಾರಾಷ್ಟ್ರದಲ್ಲಿ ಫೆಬ್ರವರಿ 10ರಂದು ಮೇಯರ್ ಚುನಾವಣೆ(Election) ನಡೆಯಲಿದೆ. ಈ ಬೆನ್ನಲ್ಲೇ ಕಾರ್ಪೊರೇಟರ್​ಗಳನ್ನು ಅಪಹರಿಸಲು ಮುಸುಕುಧಾರಿಗಳು ಪ್ರಯತ್ನಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಕೆಲವು ಭಾಗಗಳಲ್ಲಿ ಗುರುವಾರ ಕಾಂಗ್ರೆಸ್ ಕಾರ್ಪೊರೇಟರ್‌ಗಳು ಚಂದ್ರಾಪುರದಿಂದ ನಾಗಪುರಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮುಸುಕುಧಾರಿಗಳ ಗುಂಪೊಂದು ಅವರನ್ನು ಅಪಹರಿಸಲು ಯತ್ನಿಸಿತ್ತು.

ಪಕ್ಷದ ಬೆಂಬಲಿಗರು ಮತ್ತು ಪೊಲೀಸರ ತ್ವರಿತ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣ ತಪ್ಪದಂತೆ ನೋಡಿಕೊಳ್ಳಲಾಯಿತು. ಆರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಅವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದ್ರಾಪುರ ಪುರಸಭೆಯ ಹೊಸದಾಗಿ ಆಯ್ಕೆಯಾದ ಕಾರ್ಪೊರೇಟರ್‌ಗಳು ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ತಮ್ಮ ಬಣದ ಅಧಿಕೃತ ನೋಂದಣಿಯನ್ನು ಪೂರ್ಣಗೊಳಿಸಲು ನಾಗ್ಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪಕ್ಷದ ಮೂಲಗಳ ಪ್ರಕಾರ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟಿವರ್ ಅವರಿಗೆ ನಿಷ್ಠರಾಗಿರುವ ಸುಮಾರು 17 ರಿಂದ 18 ಕಾರ್ಪೊರೇಟರ್‌ಗಳು ಬಸ್‌ನಲ್ಲಿದ್ದರು.

ಮತ್ತಷ್ಟು ಓದಿ: ಹೆಚ್ಚುತ್ತಲೇ ಇದೆ ಮೋದಿ ಅಲೆ; ಇಂದೇ ಲೋಕಸಭಾ ಚುನಾವಣೆ ನಡೆದರೂ ಎನ್​ಡಿಎಗೆ ಎಷ್ಟು ಸ್ಥಾನ ಸಿಗುತ್ತದೆ ಗೊತ್ತಾ?

ಸಂಜೆ 5.45 ರ ಸುಮಾರಿಗೆ ಬಸ್ ಯಲಕೇಲಿ ಟೋಲ್ ಪ್ಲಾಜಾ ಬಳಿ ಬರುತ್ತಿದ್ದಂತೆ, ಮುಖ ಮುಚ್ಚಿಕೊಂಡಿದ್ದ ಸುಮಾರು ಇಪ್ಪತ್ತು ಅಪರಿಚಿತ ವ್ಯಕ್ತಿಗಳು ನಾಲ್ಕರಿಂದ ಆರು ಕಾರುಗಳಲ್ಲಿ ವಾಹನವನ್ನು ಅಡ್ಡಗಟ್ಟಿದರು. ಕಾರ್ಪೊರೇಟರ್ ರಾಜೇಶ್ ಅಡೂರ್ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿರುವಂತೆ, ಹಲ್ಲೆಕೋರರು ಕಾಂಗ್ರೆಸ್ ಕಾರ್ಪೊರೇಟರ್‌ಗಳನ್ನು ಬಸ್‌ನಿಂದ ಬಲವಂತವಾಗಿ ಹೊರಗೆಳೆಯಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿಗರು ಬೇಗನೆ ಸ್ಥಳಕ್ಕೆ ತಲುಪಿದ್ದರು, ಇದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಸವಂಗಿ ಪೊಲೀಸ್ ಠಾಣೆಯ ತಂಡವು ಶೀಘ್ರದಲ್ಲೇ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು. ದಾಳಿಕೋರರಲ್ಲಿ ಒಬ್ಬನನ್ನು ನಾಗ್ಪುರದ ಕನೈನ್ ಸಿದ್ದಿಕಿ ಎಂದು ಗುರುತಿಸಲಾಗಿದೆ, ಆತನನ್ನು ಪಕ್ಷದ ಕಾರ್ಯಕರ್ತರು ಹಿಡಿದು ನಂತರ ಪೊಲೀಸರು ಬಂಧಿಸಿದರು.

ಜನವರಿ 15 ರಂದು ನಡೆದ ನಾಗರಿಕ ಚುನಾವಣೆಯ ನಂತರ ಚಂದ್ರಾಪುರ ಮೇಯರ್ ಹುದ್ದೆಗಾಗಿ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ನಡೆಯುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ವಡೆಟ್ಟಿವರ್ ಮತ್ತು ಕಾಂಗ್ರೆಸ್ ಸಂಸದೆ ಪ್ರತಿಭಾ ಧನೋರ್ಕರ್ ನೇತೃತ್ವದ ಬಣಗಳು ನಡುವೆ ಘರ್ಷಣೆ ಗಳು ನಡೆಯುತ್ತಿವೆ.
ಫೆಬ್ರವರಿ 10 ರಂದು ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಯಲಿದೆ. 66 ಸದಸ್ಯರ ವಿಧಾನಸಭೆಯಲ್ಲಿ, ಕಾಂಗ್ರೆಸ್ 27 ಸ್ಥಾನಗಳನ್ನು ಹೊಂದಿದ್ದು, ಬಹುಮತಕ್ಕೆ 34 ಸ್ಥಾನಗಳ ಕಡಿಮೆಯಿದೆ. ಬಿಜೆಪಿ 23 ಸ್ಥಾನಗಳೊಂದಿಗೆ ನಿಕಟವಾಗಿ ನಂತರದ ಸ್ಥಾನದಲ್ಲಿದ್ದರೆ, ಶಿವಸೇನೆ (ಯುಬಿಟಿ) ಆರು ಸ್ಥಾನಗಳನ್ನು ಹೊಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗರ್ಭಿಣಿ ಸೊಸೆಯನ್ನು ಮಾವ ಕೊಂದಿದ್ಯಾಕೆ ಗೊತ್ತಾ? ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ! – Kannada News | Raichur Murder: Father in Law Kills Pregnant Daughter in Law

ಗರ್ಭಿಣಿ ಸೊಸೆಯನ್ನು ಮಾವ ಕೊಂದಿದ್ಯಾಕೆ ಗೊತ್ತಾ?

ರಾಯಚೂರು, ಜನವರಿ 30: ಜಿಲ್ಲೆಯ ಸಿರವಾರ ತಾಲ್ಲೂಕಿನ ಚಿಕ್ಕ ಹಣಗಿ ಗ್ರಾಮದಲ್ಲಿ ಗರ್ಭಿಣಿ ಸೊಸೆಯನ್ನು ಕತ್ತು ಸೀಳಿ ಕೊಲೆಗೈದ (Pregnant Daughter-in-Law Murdered)  ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಘಟನೆ ನಿನ್ನೆ (ಜನವರಿ 29) ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಮಾವ ಸಿದ್ದಪ್ಪ ನಾಲ್ಕು ತಿಂಗಳ ಗರ್ಭಿಣಿ ಸೊಸೆ ರೇಖಾರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಖಾಕಿ ತನಿಖೆಯಲ್ಲಿ ಈ ಭೀಕರ ಕೃತ್ಯದ ಹಿಂದಿರುವ ನಿಜವಾದ ಉದ್ದೇಶ ಬಹಿರಂಗವಾಗಿದೆ.

ನಡೆದಿದ್ದೇನು?

ಗುರುವಾರ ಸೊಸೆ ರೇಖಾಳ (24) ಮನೆಗೆ ಬಂದಿದ್ದ ಮಾವ ಸಿದ್ದಪ್ಪ (50), 4 ತಿಂಗಳ ಗರ್ಭಿಣಿ ಸೊಸೆಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಬಂದ ರೇಖಾ, ನರಳಾಡಿ ಸಾವನ್ನಪ್ಪಿದ್ದಳು. ಪ್ರಾಥಮಿಕವಾಗಿ ಕೌಟುಂಬಿಕ ಕಲಹಕ್ಕೆ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಇತ್ತ ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿ ಸಿದ್ದಪ್ಪನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ ನಂತರ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ತನಿಖೆ ವೇಳೆ ಹೊರ ಬಂದ ಸತ್ಯವೇನು?

ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ ತಂದಿದ್ದ ಕವಿತಾಳ ಠಾಣೆ ಪೊಲೀಸರು ತನಿಖೆ ಮುಂದಿವರೆಸಿದ್ದರು. ಈ ವೇಳೆ ಮೃತ ರೇಖಾಳ ಆಸ್ತಿ ಮೇಲೆ ಕಣ್ಣು ಹಾಕಿದ್ದ ಮಾವ ಸಿದ್ದಪ್ಪ ನಿತ್ಯ ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದ ಎಂಬುದು ತಿಳಿದುಬಂದಿದೆ. ಸೊಸೆಯು ತನ್ನ ಪೋಷಕರ ಬಳಿ ಆಸ್ತಿಯನ್ನೂ ಕೇಳುತ್ತಿಲ್ಲ, ಮನೆಗೆಲಸ ಮತ್ತು ಹೊಲದ ಕೆಲಸ ಮಾಡುತ್ತಿಲ್ಲ ಎಂಬ ನೆಪದಲ್ಲಿ ರೇಖಾಳನ್ನು ನಿರಂತರವಾಗಿ ಹಿಂಸಿಸಲಾಗುತ್ತಿತ್ತು ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಎಸ್ಪಿ​

ರೇಖಾಳ ತಂದೆ ಏನಂದ್ರು?

ರೇಖಾ ತನ್ನ ಮಾತು ಕೇಳುವುದಿಲ್ಲ, ಆಕೆಗೆ ಹುಟ್ಟುವ ಮಗು ನಮಗೆ ಬೇಡ ಎಂಬ ಕ್ರೂರ ಮನೋಭಾವದಿಂದ ಈ ಕೊಲೆ ಮಾಡಿದ್ದಾನೆ ಎಂದು ಮೃತಳ ತಂದೆ ಬಸವರಾಜ್ ಗಂಭೀರ ಆರೋಪ ಮಾಡಿದ್ದಾರೆ. ಟಿವಿ9 ಸುದ್ದಿವಾಹಿನಿ ಎದುರು ಮಾತನಾಡಿದ ಬಸವರಾಜ್, ತಾನು ಹಿಂಸೆ ಅನುಭವಿಸುತ್ತಿದ್ದರೂ ಈ ನೋವನ್ನು ತಂದೆ-ತಾಯಿಗೆ ಹೇಳಬಾರದೆಂದು ಮಗಳು ಸಹಿಸಿಕೊಂಡಿದ್ದಳು. ರೇಖಾಳನ್ನು ಹೊಡೆದು, ಬಡಿದು, ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ತಂದೆ ಕಣ್ಣೀರಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೇವನಹಳ್ಳಿ ಸುತ್ತಮುತ್ತ ದಟ್ಟ ಮಂಜು: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ – Kannada News | Dense Fog Around Devanahalli Disrupts Flight Operations at Kempegowda International Airport

ಬೆಂಗಳೂರು, ಜನವರಿ 30: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸುತ್ತಮುತ್ತ ಬೆಳ್ಳಂಬೆಳಗ್ಗೆ ದಟ್ಟ ಮಂಜು ಆವರಿಸಿದ ಪರಿಣಾಮ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು. ದಟ್ಟ ಮಂಜಿನಿಂದಾಗಿ ವಿಸಿಬಿಲಿಟಿ ಕಡಿಮೆ ಆದ ಕಾರಣ, ಹತ್ತಾರು ವಿಮಾನಗಳ ಟೇಕಾಫ್ ನಿಗದಿತ ಸಮಯಕ್ಕಿಂತ ವಿಳಂಬಗೊಂಡಿತು. ಈ ಅನಿರೀಕ್ಷಿತ ವಿಳಂಬದಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಇಲಾಖೆಗಳೇ ಹೀಗೆ ಮಾಡೋದು ಸರೀನಾ? ತುಮಕೂರಿನ ಕಚೇರಿಗಳಲ್ಲಿ 44 ಕೋಟಿ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಬಾಕಿ – Kannada News | Tumakuru Govt Depts Owe Rs.44 Cr Electricity Bills: BESCOM Warns Power Disconnection

44 ಕೋಟಿ ರೂಪಾಯಿಗೂ ಹೆಚ್​ಚು ವಿದ್ಯುತ್ ಬಿಲ್ ಬಾಕಿ
Image Credit source: Tv9

ತುಮಕೂರು, ಜನವರಿ 30: ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ತುಮಕೂರಿನ (Tumakuru) ವಿವಿಧ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಪಾವತಿಸದೇ ಬರೋಬ್ಬರಿ 44 ಕೋಟಿ 05 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ವರ್ಷವೇ ಈ ಬಿಲ್​ಗಳನ್ನು ಪಾವತಿಸುವಂತೆ ಬೆಸ್ಕಾಂ ಹೇಳಿದ್ದರೂ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಕೇಳಿಬಂದಿದೆ. ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿ ಇನ್ನೂ ಹಲವು ಇಲಾಖೆಗಳು ಕೋಟ್ಯಂತರ ರೂ.ಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ಹೇಳಲಾಗುತ್ತಿದೆ.

ಬೆಸ್ಕಾಂನಿಂದ ಖಡಕ್ ವಾರ್ನಿಂಗ್

ಕಳೆದ ನವೆಂಬರ್ ಅಂತ್ಯದೊಳಗಾಗಿ ವಿದ್ಯುತ್ ಬಿಲ್ ಪಾವತಿಸುವಂತೆ ತುಮಕೂರಿನ ಹಲವು ಸರ್ಕಾರಿ ಇಲಾಖೆಗಳಿಗೆ ಬೆಸ್ಕಾಂ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬರುತ್ತಿದೆ. ತಿಂಗಳಗಟ್ಟಲೆ ಬಿಲ್ ಕಟ್ಟದೇ ಇರುವುದರಿಂದ ಬಾಕಿ ಹಣ ವಸೂಲಿಗೆ ಬೆಸ್ಕಾಂ ಅಧಿಕಾರಿಗಳು ಸುಸ್ತಾಗಿದ್ದು, ಇದೀಗ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಶಾಲಾ ಶಿಕ್ಷಣ, ಕಂದಾಯ, ಸಮಾಜ ಕಲ್ಯಾಣ, ತೋಟಗಾರಿಕೆ ಸೇರಿ ಹಲವು ಇಲಾಖೆಗಳು ಕೋಟಿಗಟ್ಟಲೆ ಹಣದ ವಿದ್ಯುತ್ ಬಿಲ್ ಭರಿಸದ ಹಿನ್ನೆಲೆ ಬೆಸ್ಕಾಂ ಖಡಕ್ ವಾರ್ನಿಂಗ್ ನೀಡಿದೆ. ಸರ್ಕಾರಿ ಕಚೇರಿಗಳೇ ನಿಯಮ ಉಲ್ಲಂಘಿಸುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡ ಜಿಲ್ಲೆಯ ಇಲಾಖೆಗಳು

  • ಜಲಸಂಪನ್ಮೂಲ ಇಲಾಖೆ – 17.73 ಕೋಟಿ ರೂ.
  • ಸಣ್ಣ ನೀರಾವರಿ ಇಲಾಖೆ- 12.72 ಕೋಟಿ ರೂ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- 3.63 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ- 2.65 ಕೋಟಿ ರೂ.
  • ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ- 1.85 ಕೋಟಿ ರೂ.
  • ಶಾಲಾ ಶಿಕ್ಷಣ ಇಲಾಖೆ – 1.10 ಕೋಟಿ ರೂ.
  • ಕಂದಾಯ ಮತ್ತು ಮುಜರಾಯಿ ಇಲಾಖೆ- 1.44 ಕೋಟಿ ರೂ.
  • ಸಮಾಜ ಕಲ್ಯಾಣ ಇಲಾಖೆ -1.09 ಕೋಟಿ ರೂ.
  • ತೋಟಗಾರಿಕೆ ಇಲಾಖೆ – 37 ಲಕ್ಷ ರೂ.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ- 34 ಲಕ್ಷ ರೂ.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ- 31 ಲಕ್ಷ ರೂ.
  • ಗೃಹ ಇಲಾಖೆ- 23 ಲಕ್ಷ ರೂ.
  • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ-11.97 ಲಕ್ಷ ರೂ.
  • ಕೃಷಿ ಇಲಾಖೆ- 2.69 ಲಕ್ಷ ರೂ.
  • ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ- 3.16 ಲಕ್ಷ ರೂ.
  • ಲೋಕೋಪಯೋಗಿ ಇಲಾಖೆ- 7.56 ಲಕ್ಷ ರೂ.
  • ಕಾನೂನು ಇಲಾಖೆ – 6.11 ಲಕ್ಷ ರೂ.
  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ- 2.98 ಲಕ್ಷ ರೂ.
  • ಅರಣ್ಯ ಇಲಾಖೆ- 8 ಲಕ್ಷ ರೂ.
  • ಸಾರಿಗೆ- 3.18 ಲಕ್ಷ ರೂ.

ಈ ಎಲ್ಲಾ ಇಲಾಖೆಗಳು ಸೇರಿ ಒಟ್ಟು 44.05 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೊಡ್ಡಬಳ್ಳಾಪುರದಲ್ಲೊಬ್ಬಳು ಖತರ್ನಾಕ್ ಮಹಿಳೆ: 3 ಮದುವೆಯಾಗಿ ಲಕ್ಷಾಂತರ ರೂ. ಲೂಟಿ, ಠಾಣೆ ಮೆಟ್ಟಿಲೇರಿದ ಗಂಡಂದಿರು! – Kannada News | Doddaballapura: Woman Marries Three Times, Accused of Looting Lakhs from Husbands

ವಂಚನೆ ಆರೋಪ ಎದುರಿಸುತ್ತಿರುವ ಮಹಿಳೆImage Credit source: tv9

ದೇವನಹಳ್ಳಿ, ಜನವರಿ 30: ಪ್ರೀತಿ, ಮದುವೆ ಎಂಬ ನಾಟಕವಾಡಿ ಪುರುಷರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ದೋಚುತ್ತಿದ್ದ ಕಿರಾತಕ ಮಹಿಳೆಯೊಬ್ಬಳ ಅಸಲಿ ಮುಖ ಇದೀಗ ದೊಡ್ಡಬಳ್ಳಾಪುರದಲ್ಲಿ ಬಯಲಾಗಿದೆ. ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ವಿರುದ್ಧ ಆರೋಪ ಕೇಳಿಬಂದಿದ್ದು, ಮೊದಲ ಹಾಗೂ ಎರಡನೇ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸುಧಾರಾಣಿ ಹಣವಿರುವವರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಳು ಎನ್ನಲಾಗಿದೆ.

ಈಗಾಗಲೇ ಮೂವರನ್ನು ಮದುವೆಯಾಗಿರುವ ಈಕೆ, ತನ್ನ ಇಬ್ಬರು ಪತಿಯರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ.

ಬುಲೆಟ್ ಓಡಿಸಲು ಬರಲ್ಲ ಎಂದು ಮೊದಲ ಪತಿಗೆ ಕೈಕೊಟ್ಟಿದ್ದ ಸುಧಾರಾಣಿ!

ಸುಧಾರಾಣಿ ಮೊದಲು ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. ಆದರೆ, ದಾಂಪತ್ಯ ಜೀವನದ ನಡುವೆಯೇ ಪತಿಗೆ ‘ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ’ ಎಂಬ ಕ್ಷುಲ್ಲಕ ಕಾರಣ ನೀಡಿ, ಮಕ್ಕಳನ್ನು ಹಾಗೂ ವೀರೆಗೌಡರನ್ನು ತೊರೆದು ಹೋಗಿದ್ದಳು.

ಎರಡನೇ ಪತಿಗೆ 20 ಲಕ್ಷ ರೂ. ಪಂಗನಾಮ!

ಮೊದಲ ಪತಿಯಿಂದ ದೂರಾದ ಸುಧಾರಾಣಿ, ನಂತರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ ಎಂಬುವವರನ್ನು ಸಂಪರ್ಕಿಸಿದ್ದಳು. ಗಂಡ ತೀರಿಹೋಗಿದ್ದಾರೆ ಎಂದು ಸುಳ್ಳು ಹೇಳಿ ಆತನನ್ನು ನಂಬಿಸಿ, ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಳು. ಸುಮಾರು ಒಂದೂಕಾಲು ವರ್ಷಗಳ ಕಾಲ ಅನಂತಮೂರ್ತಿ ಜೊತೆ ಸಂಸಾರ ಮಾಡಿದ್ದಳು. ಈ ಅವಧಿಯಲ್ಲಿ ವಿವಿಧ ಕಾರಣಗಳನ್ನು ನೀಡಿ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಳು ಎಂದು ಆರೋಪಿಸಲಾಗಿದೆ.

ಅನಂತಮೂರ್ತಿಗೆ ಪಂಗನಾಮ ಹಾಕಿದ ನಂತರ ಮೂರನೇ ಮದುವೆ!

ಅನಂತಮೂರ್ತಿಯಿಂದ ಹಣ ಪಡೆದ ನಂತರ ಆತನನ್ನೂ ತೊರೆದಿರುವ ಸುಧಾರಾಣಿ, ಇದೀಗ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮೊದಲ ಪತಿ ವೀರೆಗೌಡ ಮತ್ತು ಎರಡನೇ ಪತಿ ಅನಂತಮೂರ್ತಿ ಒಟ್ಟಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹಲವಾರು ಯುವತಿಯರ ಜತೆ ಯುವಕನ ಕಾಮಕೇಳಿ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಮೊಹಮ್ಮದ್ ಸವದ್ ಬಂಧನ

ಈಕೆ ಕೇವಲ ಹಣಕ್ಕಾಗಿ ಶ್ರೀಮಂತರನ್ನು ಮತ್ತು ಅಮಾಯಕರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ. ಇಂತಹ ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಪತಿಯರು ಒತ್ತಾಯಿಸಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version