Horoscope Today 11 January : ಇಂದು ಈ ರಾಶಿಯವರಿಗೆ ಪ್ರತ್ಯಕ್ಷ ಜ್ಞಾನ ಸಿಗದೇ ಬಂಧುಗಳ ನಡುವೆಯೇ ವೈಮನಸ್ಯ ಬರಬಹುದು – Kannada News | Daily Horoscope: Zodiac Predictions Today Career, Love and Finance Insights
ಮೇಷ ರಾಶಿ: ನಿಮ್ಮ ಸಂಕಲ್ಪವನ್ನು ಬದಲಿಸಲಾರಿರಿ. ಪರೀಕ್ಷೆಯ ಫಲಿತಾಂಶದ ಮೇಲೆ ನಿಮ್ಮ ಮುಂದಿನ ಅಭ್ಯಾಸವು ನಿರ್ಣಯವಾಗಲಿದೆ. ವಿವಾಹಕ್ಕೆ ಬಂದಿರುವ ವಿಘ್ನಗಳನ್ನು ನೀವು ಪರಿಹರಿಸಿಕೊಳ್ಳುವುದು ಅನಿವಾರ್ಯವಾದೀತು. ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಅನ್ಯ ಚಟುವಟಿಕೆಯಲ್ಲಿ ತೊಡಗುವಿರಿ. ಸಹೋದರನಿಗೆ ನಿಮ್ಮಿಂದ ಅಲ್ಪವಾದರೂ ಸಹಾಯ ಮಾಡುವ ಮನಸ್ಸಾಗುವುದು. ಇಂದು ಆಗಬೇಕಾದ ಕೆಲಸಗಳನ್ನು ವೇಗವಾಗಿಯೂ ಹಾಗೂ ಬಹಳ ಎಚ್ಚರಿಕೆಯಿಂದ ಮಾಡುವಿರಿ. ಸಹೋದರನಿಂದ ಅನಿರೀಕ್ಷಿತ ಸಹಾಯವು ಸಿಗಬಹುದು. ಸಾಲವಾಗಿ ಪರಿಚಿತರಿಗೆ ಹಣವನ್ನು ಕೊಡಬೇಕಾದೀತು. ದಾಂಪತ್ಯದ ಕಲಹದಲ್ಲಿ ಮೌನವಹಿಸಿ ನೀವೇ ಶಾಂತಗೊಳಿಸಿ. ಆಗಾಗ ನಕಾರಾತ್ಮಕ ಅಂಶಗಳು ನಿಮ್ಮೊಳಗೆ…