ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಆಗ್ರಾದಲ್ಲಿ ಶೂಟರ್ ಬಂಧನ – Kannada News | Rohit Shetty house firing case main accused Pradeep Kumar Arrested in Agra
ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಅವರ ಮುಂಬೈ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಮುಖ ಆರೋಪಿಯನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಮತ್ತು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಫೆಬ್ರವರಿ 1ರಂದು ಮುಂಬೈನ ಜುಹು ಉಪನಗರದಲ್ಲಿರುವ ರೋಹಿತ್ ಶೆಟ್ಟಿ ಅವರ ‘ಶೆಟ್ಟಿ ಟವರ್’ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ (Firing) ನಡೆಸಿದ್ದರು. ಈ ದಾಳಿಯಲ್ಲಿ ಅವರ ಮನೆಯ ಬಾಲ್ಕನಿಯ ಗಾಜಿಗೆ ಹಾನಿಯಾಗಿತ್ತು. ಚಿತ್ರರಂಗದಲ್ಲಿ ಭೀತಿ ಹುಟ್ಟಿಸಲು…