ಟ್ರಸ್ಟ್ ಮಾಡುವ ನೆಪದಲ್ಲಿ ಮಠದ ಆಸ್ತಿ ಲೂಟಿ? ಪೀಠಾಧಿಪತಿ ಹುಟ್ಟುಹಬ್ಬದಂದೇ ಗಲಾಟೆ, ಹೈಡ್ರಾಮಾ – Kannada News | Chikkaballapur Matha Property Row: Swamiji Accused of Land Grab

ಚಿಕ್ಕಬಳ್ಳಾಪುರ, ಜನವರಿ 10: ಪ್ರತಿಷ್ಠಿತ ಮಠದ ಸಾದ್ವಿ ವೃದ್ಧೆಯ ಸೇವೆಗೆಂದು ಬಂದ ವ್ಯಕ್ತಿಯೋರ್ವ ಮಠ ಮುನ್ನಡೆಸಿಕೊಂಡು ಹೋಗುತ್ತೇನೆಂದು ಮಠದ ಪೀಠಾಧಿಪತಿಯಾಗಿದ್ದ. ಕೊನೆಗೆ ಮಠದ ಅಭಿವೃದ್ಧಿಗೆ ಟ್ರಸ್ಟ್ ಒಂದನ್ನು ಮಾಡುತ್ತೇನೆ ಅಂತೇಳಿ ಟ್ರಸ್ಟ್ ನೋಂದಣಿ ನೆಪದಲ್ಲಿ ಮಠಕ್ಕೆ ಸೇರಿದ ಆಸ್ತಿಗಳನ್ನು (Property) ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆಂದು ಆರೋಪಿಸಿ ಸಾದ್ವಿಯ ಸಂಬಂಧಿಕರು ಇಂದು ಮಠಕ್ಕೆ ನುಗ್ಗಿ, ಸ್ವಾಮೀಜಿಯನ್ನು ಹಿಡಿದು ಎಳೆದಾಡಿ ತಳ್ಳಾಡಿ, ನೂಕುನುಗ್ಗಲಾಗಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರದ ಬಳಿ ಇರುವ ಓಂಕಾರ ಜ್ಯೋತಿ ಮಠ. ಬೆಂಗಳೂರಿನ ಬಿಬಿಎಂಪಿಯ ಕ್ಲಾಸ್-1 ಗುತ್ತಿಗೆದಾರ ಮರಿಯಪ್ಪಸ್ವಾಮಿ ಅವರ ಪತ್ನಿ ಜಯಮ್ಮ ಚಿಕ್ಕಬಳ್ಳಾಪುರದ ಬಳಿ ಜಮೀನು ಖರೀದಿಸಿ ಆಶ್ರಮ ಹಾಗೂ ಮಠ ನಡೆಸುತ್ತಿದ್ದರು. ಮರಿಯಪ್ಪಸ್ವಾಮಿ ನಿಧನದ ನಂತರ ಅವರ ಪತ್ನಿ ಜಯಮ್ಮ ಸಾದ್ವಿಯಾಗಿ ಮಠ, ಆಸ್ತಿಯನ್ನು ಮುನ್ನಡೆಸುತ್ತಿದ್ದರು. ಅವರ ಸೇವೆಗೆಂದು ಬಂದ ಉಮೇಶ್ ವೆಂಕಟರಮಣಪ್ಪ ಆಚಾರ್, ಮಠದಲ್ಲಿ ದೀಕ್ಷೆ ಪಡೆದು ಪಾರ್ಥಸಾರಥಿ ಸ್ವಾಮೀಜಿಯಾಗಿ ಪೀಠಾಧಿಪತಿಯಾಗಿದ್ದ. ಮಠಕ್ಕೆ ಸಂಬಂಧಿಸಿದ ಟ್ರಸ್ಟ್ ನೋಂದಣಿ ಮಾಡಿಸುವ ನೆಪದಲ್ಲಿ ಮಠ ಹಾಗೂ ಮಠಕ್ಕೆ ಸೇರಿದ ಕೋಟ್ಯಂತರ ರೂ ಮೌಲ್ಯದ ಜಮೀನನ್ನು ತನ್ನ ಹೆಸರಿಗೆ ದಾನ ಪತ್ರ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.

ಸ್ವಾಮೀಜಿಯ ಹುಟ್ಟುಹಬ್ಬದಂದೇ ಗಲಾಟೆ

ಇನ್ನು ಓಂಕಾರ ಜ್ಯೋತಿ ಆಶ್ರಮ ಹಾಗೂ ಮಠದ ಸಾದ್ವಿ ಜಯಮ್ಮ ಹೆಸರಿನಲ್ಲಿ ಒಂದು ಎಕರೆ ಹತ್ತು ಗುಂಟೆ ಜಮೀನು, ಆಶ್ರಮ ಕಟ್ಟಡವಿದೆ. ಇದೆಲ್ಲವನ್ನು ಉಮೇಶ್ ಅಲಿಯಾಸ್ ಪಾರ್ಥಸಾರಥಿ ಜಯಮ್ಮ ಅವರಿಗೆ ಅರಿವಿಲ್ಲದ ಹಾಗೆ ತನ್ನ ಹೆಸರಿಗೆ ಗಿಫ್ಟ್ ಡೀಡ್ ಮಾಡಿಕೊಂಡಿದ್ದಾನೆಂದು ಜಯಮ್ಮ ಸಂಬಂಧಿಗಳು ಇಂದು ಮಠಕ್ಕೆ ನುಗ್ಗಿ ಪಾರ್ಥ ಸ್ವಾಮೀಜಿಯ ಹುಟ್ಟುಹಬ್ಬದ ದಿನವೇ ಕೆಲವು ಮಠಾಧೀಶರ ಸಮ್ಮುಖದಲ್ಲೇ ಸ್ವಾಮೀಜಿಯನ್ನು ಹಿಡಿದು ಎಳೆದಾಡಿ, ನೂಕುನುಗ್ಗಲು ಮಾಡಿದರು. ಇದರಿಂದ ಮಠದಲ್ಲಿ ಕೆಲಕಾಲ ಉದ್ವಿಘ್ನ ಪರಿಸ್ಥಿತಿ ಉಂಟಾಯಿತು.

ನಾನು ಯಾರಿಗೂ ಮೋಸ ಮಾಡಿಲ್ಲ: ಪಾರ್ಥಸಾರಥಿ ಸ್ವಾಮೀಜಿ

ಸಾದ್ವಿ ಜಯಮ್ಮ ಅವರಿಂದ ದೀಕ್ಷೆ ಸ್ವೀಕರಿಸಿದ್ದ ಉಮೇಶ್ ಅಲಿಯಾಸ್ ಪಾರ್ಥಸಾರಥಿ ಸ್ವಾಮೀಜಿ, ತಾನು ಯಾರಿಗೂ ಮೋಸ ಮಾಡಿಲ್ಲ, ಅನ್ಯಾಯ ಮಾಡಿಲ್ಲ. ಸ್ವತಃ ಜಯಮ್ಮ ಸೂಚನೆ ಮೇರೆಗೆ ಟ್ರಸ್ಟ್ ನೋಂದಣಿ ಹಾಗೂ ಟ್ರಸ್ಟ್​​ಗೆ ಆಸ್ತಿಯನ್ನು ಗಿಫ್ಟ್ ಡೀಡ್ ಮಾಡಿಕೊಂಡಿದ್ದೇನೆ. ಸ್ವತಃ ಸಾದ್ವಿ ಜಯಮ್ಮನವರೇ ಬಂದು ಮಾಡಿಕೊಟ್ಟಿದ್ದಾರೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗದಗ: ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ ನಿಧಿ ಪತ್ತೆ, ಎಷ್ಟು ಕೆಜಿ ಗೊತ್ತಾ?

ಒಟ್ಟಿನಲ್ಲಿ ಸಾದ್ವಿ ಸೇವೆಗೆಂದು ಬಂದ ಸಾಮಾನ್ಯ ವ್ಯಕ್ತಿಯೋರ್ವ ಮಠದ ಪೀಠಾಧಿಪತಿಯಾಗಿ ಕೊನೆಗೆ ಟ್ರಸ್ಟ್​​ನ ನೋಂದಣಿ ನೆಪದಲ್ಲಿ ಮಠದ ಸಾದ್ವಿಯ ಆಸ್ತಿಯನ್ನು ಟ್ರಸ್ಟ್​ಗೆ ಮಾಡಿಸಿಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದ ಸಿದ್ದರಾಮಯ್ಯ – Kannada News | Karnataka Political Rivalry Intensifies: DK Shivakumar and HD Kumaraswamy Exchange Barbs and Debate Challenges

ಬೆಂಗಳೂರು, ಜ.10: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಬಳ್ಳಾರಿ ಗಲಾಟೆ ವಿಚಾರದಿಂದ ಆರಂಭವಾದ ಈ ಸಮರ ಇದೀಗ ಅನುಭವದ ಕದನದ ಹಂತಕ್ಕೆ ತಲುಪಿದೆ. ಡಿಕೆ ಶಿವಕುಮಾರ್ ಅವರ ಅಧಿಕಾರದ ವ್ಯಾಪ್ತಿಯ ಬಗ್ಗೆ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಆಡಳಿತದಲ್ಲಿ ತಾನು ಕುಮಾರಸ್ವಾಮಿಗಿಂತ ಹೆಚ್ಚು ಅನುಭವಿ ಎಂದು ಹೇಳಿಕೊಂಡಿದ್ದಾರೆ ಮತ್ತು ಕುಮಾರಸ್ವಾಮಿಯವರಿಂದ ಕಲಿಯಲು ಏನೂ ಇಲ್ಲ ಎಂದಿದ್ದಾರೆ. ಅಲ್ಲದೆ, ವಿಧಾನಸಭೆಯಲ್ಲಿ ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ. ಈ ಸವಾಲನ್ನು ಕುಮಾರಸ್ವಾಮಿ ಸ್ವೀಕರಿಸಿದ್ದಾರೆ. ಈ ಮಧ್ಯೆ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೀಸ್ ಬೇಸ್ಡ್ ಸಿಎಂ ಎಂದು ಕರೆದಿದ್ದು, ಇದಕ್ಕೆ ಸಿದ್ದರಾಮಯ್ಯ ಕೌಂಟರ್ ನೀಡಿದ್ದಾರೆ. ಸಿಡಿ ಫ್ಯಾಕ್ಟರಿ ಕುರಿತಾದ ಆರೋಪ-ಪ್ರತ್ಯಾರೋಪಗಳು ಸಹ ರಾಜಕೀಯ ಸಂಘರ್ಷಕ್ಕೆ ಮತ್ತಷ್ಟು ತುಪ್ಪ ಸುರಿದಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

‘ರಾಜಾ ಸಾಬ್’ ಮೂಲಕ ಅಪರೂಪದ ದಾಖಲೆ ಬರೆದ ಪ್ರಭಾಸ್ – Kannada News | Prabhas’s six movies collects 100 crore rs on first of its release

ಪ್ಯಾನ್ ಇಂಡಿಯಾ (Pan India) ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು ಮೊದಲ ದಿನವೇ ವಿಶ್ವಾದ್ಯಂತ ₹100 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ‘ದಿ ರಾಜಾ ಸಾಬ್’ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ ಸಿನಿಮಾ. ‘ರಾಜಾ ಸಾಬ್’ ಸಿನಿಮಾದ ಮೂಲಕ ನಟ ಪ್ರಭಾಸ್ ಒಂದು ಅಪರೂಪದ ದಾಖಲೆಯನ್ನು ಬರೆದಿದ್ದಾರೆ. ತಾವು ಭಾರತದ ನಂಬರ್ 1 ಪ್ಯಾನ್ ಇಂಡಿಯಾ ಸ್ಟಾರ್ ಎಂಬುದನ್ನು ಖಾತ್ರಿ ಪಡಿಸಿದ್ದಾರೆ.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಮೊದಲ ದಿನ 100 ಕೋಟಿ ಗಳಿಕೆ ಮಾಡುವ ಮೂಲಕ ಪ್ರಭಾಸ್ ನಟನೆಯ ಸತತ ಆರು ಸಿನಿಮಾಗಳು ಮೊದಲ ದಿನವೇ 100 ಕೋಟಿ ಗಳಿಕೆ ಮಾಡಿದಂತಾಗಿದೆ. ಈ ಅಪರೂಪದ ದಾಖಲೆ ಪ್ರಭಾಸ್ ಹೊರತಾಗಿ ಭಾರತದ ಇನ್ಯಾವ ನಟರ ಬಳಿಯೂ ಇಲ್ಲ ಎಂಬುದು ವಿಶೇಷ. ಪ್ರಭಾಸ್ ನಟನೆಯ ‘ಬಾಹುಬಲಿ 2’ ಮೂಲಕ ಶುರುವಾದ ಈ 100 ಕೋಟಿ ಕಲೆಕ್ಷನ್ ಈದ ‘ದಿ ರಾಜಾ ಸಾಬ್’ ವರೆಗೆ ಬಂದಿದೆ. ಸಿನಿಮಾ ಹೇಗೇ ಇರಲಿ, ಪ್ರಭಾಸ್ ಸಿನಿಮಾ ಮೊದಲ ದಿನ 100 ಕೋಟಿ ಗಳಿಸುವುದು ಖಾತ್ರಿ ಎಂಬಂತಾಗಿದೆ.

ಪ್ರಭಾಸ್ ನಟನೆಯ ‘ಬಾಹುಬಲಿ 2’ ‘ಕಲ್ಕಿ 2898 AD’, ‘ಸಲಾರ್’, ‘ಸಾಹೋ’ ಮತ್ತು ‘ಆದಿಪುರುಷ್’ ಚಿತ್ರಗಳು ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿ ಇತಿಹಾಸ ನಿರ್ಮಿಸಿದ್ದವು. ಈಗ ‘ದಿ ರಾಜಾ ಸಾಬ್’ ಈ ಪಟ್ಟಿಗೆ ಸೇರ್ಪಡೆಗೊಳ್ಳುವ ಮೂಲಕ ಪ್ರಭಾಸ್ ಅವರ ಜನಪ್ರಿಯತೆ ಮತ್ತು ಮಾರುಕಟ್ಟೆ ಮೌಲ್ಯ ಎಷ್ಟು ಬೃಹತ್ ಆದುದು ಎಂಬುದು ಇಡೀ ಭಾರತೀಯ ಚಿತ್ರರಂಗಕ್ಕೆ ಮತ್ತೊಮ್ಮೆ ತಿಳಿದಂತಾಗಿದೆ.

ಇದನ್ನೂ ಓದಿ:‘ದಿ ರಾಜಾ ಸಾಬ್’ ಪ್ರೀಮಿಯರ್ ಶೋ: ಚಿತ್ರಮಂದಿರದಲ್ಲಿ ಪ್ರಭಾಸ್ ಫ್ಯಾನ್ಸ್ ಗಲಾಟೆ

ಅಸಲಿಗೆ ‘ಸಾಹೊ’, ‘ಆದಿಪುರುಷ್’ ಸಿನಿಮಾಗಳು ನಿರೀಕ್ಷಿತ ಮಟ್ಟಿಗೆ ಯಶಸ್ವಿ ಆಗಲಿಲ್ಲ. ಆದರೂ ಸಹ ಆ ಸಿನಿಮಾಗಳು ಸಹ ಪ್ರಭಾಸ್ ಇದ್ದರು ಎಂಬ ಏಕೈಕ ಕಾರಣಕ್ಕೆ ಭಾರಿ ಕಲೆಕ್ಷನ್ ಅನ್ನೇ ಮಾಡಿದ್ದವು. ಈಗ ‘ದಿ ರಾಜಾ ಸಾಬ್’ ಸಿನಿಮಾದ ಕತೆಯೂ ಹಾಗೆಯೇ ಆಗಿದೆ. ಕೇವಲ ಪ್ರಭಾಸ್ ಇದ್ದಾರೆಂಬ ಕಾರಣಕ್ಕೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮುನ್ನುಗ್ಗಿಕೊಂಡು ಸಾಗುತ್ತಿದೆ.

‘ದಿ ರಾಜಾ ಸಾಬ್’ನಲ್ಲಿ ಪ್ರಭಾಸ್ ಹಾರರ್-ಕಾಮಿಡಿ ಸಿನಿಮಾಕ್ಕೆ ಕೈ ಹಾಕಿದ್ದರು. ಬಹಳ ವರ್ಷಗಳ ಬಳಿಕ ಹಾಸ್ಯಕ್ಕೆ ಪ್ರಾಧಾನ್ಯತೆ ಇರುವ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರು. ಆದರೆ ಸಿನಿಮಾದ ಟ್ರೈಲರ್ ಬಿಡುಗಡೆ ಬಳಿಕ ಸಿನಿಮಾದ ವಿಎಫ್​​ಎಕ್ಸ್ ಸಾಧಾರಣವಾಗಿರುವುದು, ಕ್ಲೀಷೆ ಹಾರರ್​ ಸಿನಿಮಾದ ಟ್ರಿಕ್ಸ್​​ಗಳು ಇರುವ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಈಗಲೂ ಸಹ ‘ದಿ ರಾಜಾ ಸಾಬ್’ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಅಭಿಪ್ರಾಯಗಳಿಲ್ಲ. ಆದರೂ ಸಹ ಪ್ರಭಾಸ್ ಇದ್ದಾರೆಂಬ ಕಾರಣಕ್ಕೆ ಜನ ಸಿನಿಮಾ ವೀಕ್ಷಿಸುತ್ತಿದ್ದು, ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಆಗುತ್ತಲೇ ಇದೆ.

ಪ್ರಭಾಸ್​ ಲೈನಪ್​​ನಲ್ಲಿ ಇದ್ದ ತುಸು ಟೊಳ್ಳು ಸಿನಿಮಾ ಎಂದರೆ ‘ರಾಜಾ ಸಾಬ್’ ಆಗಿತ್ತು. ಆದರೆ ಅದು ಸಹ ಮೊದಲ ದಿನ 100 ಕೋಟಿ ಗಳಿಕೆ ಮಾಡಿದ ಬಳಿಕ ಪ್ರಭಾಸ್ ನಟಿಸಲಿರುವ ಮುಂದಿನ ನಾಲ್ಕು ಸಿನಿಮಾಗಳು ಪಕ್ಕಾ ಬ್ಲಾಕ್ ಬಸ್ಟರ್ ಎಂದು ಈಗಲೇ ಪ್ರಭಾಸ್ ಅಭಿಮಾನಿಗಳು ಲೆಕ್ಕ ಹಾಕಿಬಿಟ್ಟಿದ್ದಾರೆ. ಮುಂಬರುವ ಎರಡು ವರ್ಷಗಳಲ್ಲಿ ಪ್ರಭಾಸ್ ಅವರ ‘ಸ್ಪಿರಿಟ್’, ‘ಕಲ್ಕಿ 2’, ‘ಸಲಾರ್ 2’ ಮತ್ತು ‘ಫೌಜಿ’ ಚಿತ್ರಗಳು ಸಾಲಾಗಿ ಬರಲಿದ್ದು, ಈ ನಾಲ್ಕೂ ಸಿನಿಮಾಗಳು ಪಕ್ಕಾ ಬ್ಲಾಕ್ ಬಸ್ಟರ್ ಆಗುವ ಸಿನಿಮಾಗಳು ಎನ್ನಲಾಗುತ್ತಿವೆ. ಮೊದಲ ದಿನವೇ 100 ಕೋಟಿ ಗಳಿಸುವ ಹತ್ತು ಸಿನಿಮಾಗಳನ್ನು ಹೊಂದಿದ ಏಕೈಕ ಭಾರತೀಯ ನಟ ಎಂಬ ಕೀರ್ತಿಗೆ ಅವರು ಪಾತ್ರರಾಗಲಿರುವುದು ಖಾಯಂ ಎನ್ನುತ್ತಿದ್ದಾರೆ ಅಭಿಮಾನಿಗಳು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಮತ್ತೋರ್ವ ಹಿಂದೂಗೆ ಥಳಿಸಿ, ವಿಷ ಹಾಕಿ ಹತ್ಯೆ – Kannada News | Bangladesh Violence Another Hindu beaten and poisoned to death

ಢಾಕಾ, ಜನವರಿ 10: ನೆರೆಯ ದೇಶ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ಮುಂದುವರೆದಿದೆ. ಬಾಂಗ್ಲಾದೇಶದಲ್ಲಿ (Bangladesh) ಮತ್ತೊಬ್ಬ ಹಿಂದೂ ಯುವಕನನ್ನು ಕೊಲ್ಲಲಾಗಿದೆ. ಹತ್ಯೆಯಾದ ಯುವಕನನ್ನು ಜಾಯ್ ಮಹಾಪಾತ್ರೋ ಎಂದು ಗುರುತಿಸಲಾಗಿದೆ. ಆತ ಸುನಮ್‌ಗಂಜ್ ಜಿಲ್ಲೆಯ ಭಂಗದೋಹೋರ್ ಗ್ರಾಮದ ನಿವಾಸಿಯಾಗಿದ್ದ. ಈ ಘಟನೆ ಗುರುವಾರ ನಡೆದಿದ್ದು, ಆತನನ್ನು ಸ್ಥಳೀಯ ಅಂಗಡಿಯೊಂದಕ್ಕೆ ಕರೆಸಲಾಯಿತು. ಅಲ್ಲಿ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದರು.

ಬಳಿಕ ಆತನನ್ನು ಸಿಲ್ಹೆಟ್ ಎಂಎಜಿ ಉಸ್ಮಾನಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು. ಜಾಯ್‌ಗೆ ಅಮಿರುಲ್ ಇಸ್ಲಾಂ ಎಂಬ ವ್ಯಕ್ತಿ ವಿಷಪ್ರಾಶನ ಮಾಡಿಸಿದ್ದಾನೆ ಎಂದು ಆ ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಮರಕ್ಕೆ ಕಟ್ಟಿ ಹಾಕಿ, ಕೂದಲು ಕತ್ತರಿಸಿದ ದುರುಳರು

ಫೆಬ್ರವರಿ 12ರಂದು ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿದ್ದ ತೀವ್ರಗಾಮಿ ಭಾರತ ವಿರೋಧಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಸಾಮಾನ್ಯವಾಗಿದೆ. ಮೊದಲನೆಯದಾಗಿ, ಮೈಮೆನ್ಸಿಂಗ್ ಜಿಲ್ಲೆಯಲ್ಲಿ 27 ವರ್ಷದ ಯುವಕ ದೀಪು ಚಂದ್ರ ದಾಸ್ ಅವರನ್ನು ಥಳಿಸಿ ಕೊಲ್ಲಲಾಯಿತು. ಡಿಸೆಂಬರ್ 24ರಂದು ರಾಜ್ಬರಿಯ ಅಮೃತ್ ಮೊಂಡಲ್ ಅವರನ್ನು ಗುಂಪೊಂದು ಹೊಡೆದು ಕೊಂದಿತು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು

ನಂತರ, ಮೈಮೆನ್ಸಿಂಗ್‌ನಲ್ಲಿ 42 ವರ್ಷದ ಬಜೇಂದ್ರ ಬಿಸ್ವಾಸ್ ಎಂಬ ವ್ಯಕ್ತಿಯನ್ನು ಅವರ ಸಹೋದ್ಯೋಗಿ ಗುಂಡಿಕ್ಕಿ ಕೊಂದರು. ಬಳಿಕ ಶರಿಯತ್‌ಪುರ ಜಿಲ್ಲೆಯಲ್ಲಿ 50 ವರ್ಷದ ಖೋಕೋನ್ ದಾಸ್ ಅವರಿಗೆ ಬೆಂಕಿ ಹಚ್ಚಲಾಯಿತು. ಜನವರಿ 5ರಂದು ಜೆಸ್ಸೋರ್ ಜಿಲ್ಲೆಯಲ್ಲಿ ಪತ್ರಕರ್ತ ರಾಣಾ ಪ್ರತಾಪ್ ಬೈರಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅದಾದ ಒಂದು ದಿನದ ನಂತರ, ನರಸಿಂಗ್ಡಿ ಜಿಲ್ಲೆಯಲ್ಲಿ ಶರತ್ ಮಣಿ ಚಕ್ರವರ್ತಿ ಎಂಬ 40 ವರ್ಷದ ವ್ಯಕ್ತಿಯನ್ನು ಕೊಲ್ಲಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಯಿ ಕಡಿತದಿಂದ ಸ್ಪಲ್ಪದರಲ್ಲೇ ಪಾರಾದ ಶ್ರೇಯಸ್ ಅಯ್ಯರ್; ವಿಡಿಯೋ – Kannada News | Team India’s Shreyas Iyer Escapes Dog Attack at Airport: Injury Risk for NZ Tour

ಟೀಂ ಇಂಡಿಯಾ ಉಪನಾಯಕ ಶ್ರೇಯಸ್ ಅಯ್ಯರ್ ವಿಮಾನ ನಿಲ್ದಾಣದಲ್ಲಿ ನಾಯಿ ಕಡಿತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ವಡೋದರಾಗೆ ತೆರಳುವ ವೇಳೆ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇದೀಗ ಈ ಘಟನೆಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಅದೃಷ್ಟವಶಾತ್ ಅವಘಡ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡ ಶ್ರೇಯಸ್ ನಾಯಿ ಕಡಿತದಿಂದ ತಪ್ಪಿಸಿಕೊಂಡಿದ್ದಾರೆ.

ಶ್ರೇಯಸ್ ಅಯ್ಯರ್ ವಿಮಾನ ನಿಲ್ದಾಣದಿಂದ ಹೊರಬರುವಾಗ ಯುವ ಅಭಿಮಾನಿಯೊಬ್ಬರು ಆಟೋಗ್ರಾಫ್ ಕೇಳಿದ್ದಾರೆ. ಅದೇ ಸಮಯದಲ್ಲಿ, ಅಲ್ಲಿದ್ದ ಮಹಿಳೆಯೊಬ್ಬರು ತಮ್ಮ ಸಾಕು ನಾಯಿಯನ್ನು ಹಿಡಿದುಕೊಂಡು ಶ್ರೇಯಸ್ ಬಳಿಗೆ ಬಂದಿದ್ದಾರೆ. ಶ್ವಾನವನ್ನು ನೋಡಿದ ಕೂಡಲೇ ಶ್ರೇಯಸ್, ಅದನ್ನು ಮುದ್ದಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಕೆರಳಿದ ಶ್ವಾನ ಇದ್ದಕ್ಕಿದ್ದಂತೆ ಅಯ್ಯರ್ ಅವರ ಕೈಯನ್ನು ಕಚ್ಚಲು ಯತ್ನಿಸಿದೆ. ನಾಯಿಯ ದಾಳಿಯನ್ನು ಗಮನಿಸಿದ ಶ್ರೇಯಸ್ ಮಿಂಚಿನ ವೇಗದಲ್ಲಿ ತನ್ನ ಕೈಯನ್ನು ಹಿಂದಕ್ಕೆ ಎಳೆದುಕೊಂಡಿದ್ದಾರೆ. ಈ ಮೂಲಕ ನಾಯಿ ಕಡಿತದಿಂದ ಅಯ್ಯರ್ ಪಾರಾಗಿದ್ದಾರೆ.

ಒಂದು ವೇಳೆ ಶ್ರೇಯಸ್ ನಾಯಿ ಕಡಿತಕ್ಕೀಡಾಗಿದ್ದರೆ, ಮತ್ತೆ ಟೀಂ ಇಂಡಿಯಾದಿಂದ ಹೊರಬೀಳಬೇಕಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಶ್ರೇಯಸ್, ದೀರ್ಘ ವಿರಾಮದ ನಂತರ ಈಗ ತಂಡಕ್ಕೆ ಮರಳುತ್ತಿದ್ದಾರೆ. ಜನವರಿ 11 ರಂದು ವಡೋದರಾದಲ್ಲಿ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

ಶ್ರೇಯಸ್ ಅಯ್ಯರ್ ಅವರನ್ನು ಏಕದಿನ ತಂಡದಲ್ಲಿ ಮಾತ್ರವಲ್ಲದೆ ಟಿ20 ತಂಡದಲ್ಲಿಯೂ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಸ್ಟಾರ್ ಆಟಗಾರ ತಿಲಕ್ ವರ್ಮಾ ಗಾಯದಿಂದಾಗಿ ಮೊದಲ ಮೂರು ಟಿ20 ಪಂದ್ಯಗಳಿಗೆ ಹೊರಗುಳಿದಿರುವುದರಿಂದ, ಅವರ ಬದಲಿಗೆ ಶ್ರೇಯಸ್ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಯೋಜಿಸುತ್ತಿದೆ.

Source link

WPL 2026: 400 ಕ್ಕೂ ಅಧಿಕ ರನ್, 21 ಸಿಕ್ಸರ್; ಮೊದಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿ – Kannada News | WPL 2026: Gujarat Giants Set Record 207, Beat UP Warriorz by 10 Runs

ಮಹಿಳಾ ಪ್ರೀಮಿಯರ್ ಲೀಗ್ 2026 ರ ಎರಡನೇ ಪಂದ್ಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ದಾಖಲೆಯ 207 ರನ್ ಕಲೆಹಾಕಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ನಾಯಕಿ ಆಶ್ಲೇ ಗಾರ್ಡ್ನರ್ ಮತ್ತು ಅನುಷ್ಕಾ ಶರ್ಮಾ ಅವರ ಶತಕದ ಜೊತೆಯಾಟದ ಮೂಲಕ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 207 ರನ್ ಗಳಿಸಿತು. ಇದು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್‌ನ ಅತ್ಯಧಿಕ ಸ್ಕೋರ್ ಆಗಿದೆ. 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್‌ನ ಹಿಂದಿನ ಅತ್ಯಧಿಕ ಸ್ಕೋರ್ ಏಳು ವಿಕೆಟ್‌ಗೆ 201 ಆಗಿತ್ತು.

ಗುಜರಾತ್ ತಂಡಕ್ಕೆ ಬೆತ್ ಮೂನಿ ಮತ್ತು ಸೋಫಿ ಡಿವೈನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 41 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಮೂನಿ 13 ರನ್‌ ಗಳಿಸಿ ಔಟಾದರೆ, ಸೋಫಿ ಡಿವೈನ್ 55 ರನ್‌ಗಳಿಗೆ ಔಟಾದರು. ಆ ಬಳಿಕ ಜೊತೆಯಾದ ಅನುಷ್ಕಾ ಶರ್ಮಾ ಹಾಗೂ ನಾಯಕಿ ಆಶ್ಲೀ ಗಾರ್ಡ್ನರ್ ಜೋಡಿ ಮೂರನೇ ವಿಕೆಟ್‌ಗೆ 103 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ತಂಡದ ಸ್ಕೋರ್ ಅನ್ನು 150 ದಾಟಿಸಿತು.

ಅನುಷ್ಕಾ 30 ಎಸೆತಗಳಲ್ಲಿ 44 ರನ್ ಗಳಿಸಿದರೆ, ಗಾರ್ಡ್ನರ್ 41 ಎಸೆತಗಳಲ್ಲಿ 65 ರನ್ ಗಳಿಸಿದರು. ಮೂರನೇ ವಿಕೆಟ್‌ಗೆ 103 ರನ್‌ಗಳ ಪಾಲುದಾರಿಕೆಯು ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೂರನೇ ಅತ್ಯಧಿಕ ಜೊತೆಯಾಟವಾಗಿದೆ. 2023 ರಲ್ಲಿ ಹರ್ಮನ್ಪ್ರೀತ್ ಕೌರ್ ಮತ್ತು ನ್ಯಾಟ್ ಶೀವರ್ ಬ್ರಂಟ್ ನಡುವಿನ 106 ರನ್‌ಗಳ ಪಾಲುದಾರಿಕೆಯು ಇದುವರೆಗಿನ ಅತ್ಯಧಿಕ ಮೊತ್ತವಾಗಿತ್ತು.

ಈ ಗುರಿ ಬೆನ್ನಟ್ಟಿದ ಬೆನ್ನಟ್ಟಿದ ಯುಪಿ ವಾರಿಯರ್ಸ್‌ಗೆ ಉತ್ತಮ ಆರಂಭ ದೊರೆಯಲಿಲ್ಲ. ಕಿರಣ್ ನವ್‌ಗಿರೆ ಕೇವಲ 1 ರನ್‌ಗೆ ಔಟಾದರು. ನಂತರ ಮೆಗ್ ಲ್ಯಾನಿಂಗ್ ಮತ್ತು ಫೋಬೆ ಲಿಚ್‌ಫೀಲ್ಡ್ ತಂಡದ ಇನ್ನಿಂಗ್ಸ್​ಗೆ ಜೀವ ತುಂಬಿದರು. ಎರಡನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟವಾಡಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಎರಡು ವಿಕೆಟ್‌ಗಳು ಬ್ಯಾಕ್ ಟು ಬ್ಯಾಕ್ ಉರುಳಿದವು.

ಮೆಗ್ ಲ್ಯಾನಿಂಗ್ 30 ರನ್‌ಗಳಿಗೆ ಔಟಾದರೆ, ನಂತರ ಬ್ಯಾಟಿಂಗ್‌ಗೆ ಬಂದ ಹರ್ಲೀನ್ ಡಿಯೋಲ್ 0 ರನ್‌ಗೆ ಮತ್ತು ದೀಪ್ತಿ ಶರ್ಮಾ 1 ರನ್‌ಗೆ ಔಟಾದರು. ಇದು ತಂಡದ ಮೇಲೆ ಒತ್ತಡವನ್ನು ಹೆಚ್ಚಿಸಿತು ಮತ್ತು ಸೋಲಿನತ್ತ ಸಾಗಲು ಪ್ರಾರಂಭಿಸಿತು. ಕೊನೆಯ ಓವರ್‌ನಲ್ಲಿ ಗೆಲ್ಲಲು 27 ರನ್‌ಗಳು ಬೇಕಾಗಿದ್ದವು. ಆದರೆ 15 ರನ್‌ ಕಲೆಹಾಕಲಷ್ಟೇ ಶಕ್ತವಾದ ಯುಪಿ ತಂಡವು 10 ರನ್‌ಗಳಿಂದ ಸೋತಿತು.

ತಂಡದ ಪರ ಏಕಾಂಗಿ ಹೋರಾಟ ನೀಡಿದ ಫೋಬೆ ಲಿಚ್‌ಫೀಲ್ಡ್ 40 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 78 ರನ್ ಬಾರಿಸಿದರು. ಆದರೆ ಇನ್ನೊಂದು ತುದಿಯಲ್ಲಿ ಲಿಚ್‌ಫೀಲ್ಡ್​ಗೆ ಬೆಂಬಲ ಸಿಗಲಿಲ್ಲ. ಸಿಕ್ಕಿದ್ದರೆ, ಯುಪಿಗೆ ಗೆಲುವು ಸುಲಭವಾಗಿ ಧಕ್ಕುತ್ತಿತ್ತು. ಕೊನೆಯಲ್ಲಿ ಆಶಾ ಸೋಬನಾ ಕೂಡ 10 ಎಸೆತಗಳಲ್ಲಿ 27 ರನ್ ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

Published On – 6:46 pm, Sat, 10 January 26

Source link

ಈ ಚಳಿಗೆ ಗ್ರಾಹಕರಿಗೆ ಶಾಕ್​​​ ಕೊಟ್ಟ ಕೋಳಿ: ಗಗನಕ್ಕೇರಿದ ಮಾಂಸ, ಮೊಟ್ಟೆ ಬೆಲೆ – Kannada News | Kolar Winter: Why Chicken and Egg Prices are Hitting Record Highs

ಕೋಲಾರ, ಜ.10: ಕೋಲಾರ ಸೇರಿದಂತೆ ರಾಜ್ಯದಲ್ಲಿ ಚಳಿ ಹೆಚ್ಚಾಗಿದೆ. ಶೀತ ವಾತಾವರಣ ಇರುವ ಕಾರಣ ಚಳಿಗೆ ಹೊರಬರಲು ಆಗುತ್ತಿಲ್ಲ. ಕೋಲಾರದಲ್ಲಿ ಈ ಚಳಿ ವಾತಾವರಣಕ್ಕೆ ಮಾಂಸ ಹಾಗೂ ಮೊಟ್ಟೆಯ ಬೆಲೆ ಕೂಡ ಏರಿಕೆಯಾಗಿದೆ. ಚಳಿಯಿಂದ ಕೋಳಿಗಳು ಕೂಡ ಮೊಟ್ಟೆ (chicken egg prices) ಇಡುತ್ತಿಲ್ಲ, ಇದರಿಂದ ಮೊಟ್ಟೆ ಹಾಗೂ ಕೋಳಿ ಮಾಂಸಕ್ಕೆ ದರ ಏರಿಕೆಯಾಗಿದೆ. ಇದೀಗ ಈ ಬೆಲೆ ಏರಿಕೆಯ ಬಿಸಿ ಮಾಂಸ ಪ್ರಿಯರಿಗೆ ತಟ್ಟಿದೆ ಎಂದು ಹೇಳಲಾಗಿದೆ. ಕೋಳಿ ಫಾರಂಗಳಲ್ಲಿ ಈ ಚಳಿಗೆ ಕೋಳಿಗಳು ನಡುಗುತ್ತಿದೆ. ಕಳೆದ ನಾಲ್ಕೈದು ತಿಂಗಳಿಂದ ನಿರಂತರವಾಗಿ ಚಳಿ ವಾತಾವರಣದಿಂದ ಕೋಳಿಗಳು ಮೊಟ್ಟೆ ಇಡುತ್ತಿಲ್ಲ. ಒಂದು ಕೆಜಿ ಚಿಕನ್ ಬೆಲೆ 280 ರಿಂದ 300 ರೂಪಾಯಿಗೆ ಏರಿಕೆ ಕಂಡಿದೆ, 180 ರಿಂದ 200 ರೂಪಾಯಿ ಇದ್ದ ಚಿಕನ್ ಬೆಲೆ ಈಗ ಏಕಾಏಕಿ ಏರಿಕೆ ಕಂಡಿದೆ. ಸದ್ಯ ಈ ಬೆಲೆ ಏರಿಕೆಗೆ ಕಾರಣ ಶೀತ ವಾತಾವರಣ ಎಂದು ಹೇಳಲಾಗಿದೆ. ಈ ವಾತಾವರಣದಿಂದ ಕೋಳಿ ಫಾರಂಗಳಲ್ಲಿ ಕೋಳಿಯ ಬೆಳವಣಿಗೆ ಮೇಲೆ ಪರಿಣಾಮ ಬೀದಿದೆ.

2.2 ಕೆಜಿ ತೂಕ ಬರಬೇಕಿದ್ದ ಕೋಳಿ ಕೇವಲ 1.8 ಕೆಜಿ ತೂಕ ಬರುತ್ತಿದೆ, ಅಲ್ಲದೆ ಕೋಳಿಯ ಮೊಟ್ಟೆ  ಕೂಡಾ ದರ ಏರಿಕೆಯಾಗಿದೆ. ಒಂದು ತಿಂಗಳಲ್ಲಿ 28 ರಿಂದ 30 ಮೊಟ್ಟೆ ಇಡುತ್ತಿದ್ದ ಕೋಳಿಗಳು ಸದ್ಯ ವಾತಾವರಣದ ಎಫೆಕ್ಟ್ ನಿಂದಾಗಿ 22 ರಿಂದ 24 ಮೊಟ್ಟೆ ಇಡುತ್ತಿದೆ ಎಂದು ಹೇಳಲಾಗಿದೆ. ಇದು ಗ್ರಾಹಕರು ಹಾಗೂ ಮಾರಾಟಗಾರ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡಿದೆ. ಚಳಿಯ ವಾತಾವರಣದಿಂದಾಗಿ ಮಾಂಸ ಸೇವನ ಪ್ರಮಾಣ ಕೂಡಾ ಸಹಜವಾಗಿಯೇ ಹೆಚ್ಚಾಗಿದೆ ಹಾಗಾಗಿ ಬೇಡಿಕೆ ತಕ್ಕ ಉತ್ಪಾದನೆ ಸಿಗುತ್ತಿಲ್ಲ. ಈ ಕಾರಣಕ್ಕೆ ಬೆಲೆ ಏರಿಕೆಯಾಗಿದೆ.

ಕೋಳಿ ಬೆಳವಣಿಗೆಗೂ ಚಳಿಗೂ ಏನು ಸಂಬಂಧ:

ಕೋಳಿಯ ಬೆಳವಣಿಗೆ ಹಾಗೂ ಚಳಿಗೂ ಏನು ಸಂಬಂಧ ಎಂಬ ಪ್ರಶ್ನೆ ಮೂಡುವುದು ಸಹಜ, ಅದಕ್ಕೆ ಇಲ್ಲಿದೆ ನೋಡಿ ಕಾರಣ, ಕೋಳಿಗೆ ಫಾರಂಗಳಲ್ಲಿ ಸರಿಯಾದ ಸಮಯಕ್ಕೆ ಆಹಾರ ನೀರು, ಔಷದಿ ಎಲ್ಲವೂ ಸರಬರಾಜಾದರೂ ಕೂಡಾ ಚಳಿಗಾಲದಲ್ಲಿ  ಶೀತದ ವಾತಾವರಣ ಇರುವ ಕಾರಣ ಸೂರ್ಯನ ಬೆಳಕು ಇರುವುದಿಲ್ಲ. ಇದರಿಂದ ಬಿಸಿಲಿನ ಪ್ರಮಾಣದ ಕಡಿಮೆಯಾಗುತ್ತಿದೆ. ಇದರ ಜತೆಗೆ ಸಂಜೆ ಬೇಗ ಕತ್ತಲಾಗುತ್ತಿದೆ. ಬೆಳಿಗ್ಗೆ ತಡವಾಗಿ ಬೆಳಕಾಗೋದರಿಂದಾಗಿ ಸೂರ್ಯನ ಬಿಸಿಲಿಲ್ಲದೆ ಇರುವುದು ಕೋಳಿಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ.

ಇನ್ನು ಈ ಬೆಲೆ ಏರಿಕೆಯಿಂದ ಗ್ರಾಹಕರು ಮಾಂಸ ಹಾಗೂ ಮೊಟ್ಟೆಗಳನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಜನರ ಯೋಚನೆ ಬದಲಾಗಿದೆ. 300 ರೂ. ಕೊಟ್ಟ ಕೋಳಿ ಮಾಂಸ ತಿನ್ನುವ ಬದಲು. ಮಟನ್​​​ ತಿನ್ನಬಹುದಲ್ಲ ಎಂದು ಯೋಚನೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಈ ಬೆಲೆ ಏರಿಕೆಯಿಂದ ಮಾರುಕಟ್ಟೆಯಲ್ಲಿ ಚಿಕನ್ ಹಾಗೂ ಮೊಟ್ಟೆ ಬೇಡಿಕೆ ಕಡಿಮೆ ಆಗಿದೆ. ಆದರೆ ಕೆಲವೊಂದು ಕಡೆ ಇದರಿಂದ ಕೋಳಿ ಫಾರಂ ಮಾಲೀಕರಿಗೆ ಯಾವುದೇ ನಷ್ಟ ಇಲ್ಲ ಎಂದು ಹೇಳಲಾಗುತ್ತಿದೆ.

Published On – 7:21 pm, Sat, 10 January 26

Source link

ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ – Kannada News | Bigg Boss Kannada 12: Ashwini and Dhruvanth emotional

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss) ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಇಡೀಯ ಮನೆಯ ಆಟ ಈಗ ಅದಲು ಬದಲಾಗಿದೆ. ಮೊದಲೆಲ್ಲ ವೀಕ್ ಸ್ಪರ್ಧಿ ಎನಿಸಿಕೊಂಡಿದ್ದವರು ಈಗ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಮಾತಿನಿಂದ ಗಮನ ಸೆಳೆದಿದ್ದ ಗಿಲ್ಲಿ ಟಾಸ್ಕ್ ವಿಷಯದಲ್ಲಿ ಮಕಾಡೆ ಮಲಗಿದ್ದಾರೆ. ಮನೆ ಮಂದಿಯ ನಿಂದನೆ, ಅವಮಾನಕ್ಕೆ ಗುರಿಯಾಗಿದ್ದ ಅಶ್ವಿನಿ, ಧ್ರುವಂತ್ ಟಾಸ್ಕ್​​ಗಳಲ್ಲಿ ಭರ್ಜರಿಯಾಗಿ ಮಿಂಚಿ ಶಕ್ತಿ ಪ್ರದರ್ಶಿಸಿದ್ದಾರೆ. ಈ ವಾರಾಂತ್ಯದಲ್ಲಿ ಕಿಚ್ಚ ಬಂದಿದ್ದು, ಈ ಸೀಸನ್​​ನ ಕೊನೆಯ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ಈ ವೇಳೆ ಸುದೀಪ್ ಆಡಿದ ಮಾತುಗಳು, ಅಶ್ವಿನಿ ಮತ್ತು ಧ್ರುವಂತ್ ಅವರನ್ನು ಭಾವುಕಗೊಳಿಸಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

MI vs DC Live Score, WPL 2026: ಡೆಲ್ಲಿ ವಿರುದ್ಧ ಮತ್ತೆ ಟಾಸ್ ಸೋತ ಮುಂಬೈ

ಇಂದು ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಡಬಲ್ ಹೆಡರ್ ಪಂದ್ಯ. ದಿನದ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುತ್ತಿದೆ. ಆರ್‌ಸಿಬಿ ವಿರುದ್ಧದ ಆರಂಭಿಕ ಸೋಲಿನ ನಂತರ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ತಂಡವು ಮತ್ತೆ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸುತ್ತಿದೆ. ಏತನ್ಮಧ್ಯೆ, ಡೆಲ್ಲಿ ಕೂಡ ಗೆಲುವಿನೊಂದಿಗೆ ಲೀಗ್ ಆರಂಭಿಸಲು ನೋಡುತ್ತಿದೆ. ಟಾಸ್ ಗೆದ್ದ ಡೆಲ್ಲಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.

Source link

ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ಜನಾರ್ದನ ರೆಡ್ಡಿ – Kannada News | Ballari Violence: BJP to Hold Protest in Ballari on January 17; Janardhana Reddy said

ಬೆಂಗಳೂರು, ಜನವರಿ 10: ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿ ಜನವರಿ 17ರಂದು ಬಳ್ಳಾರಿಯಲ್ಲಿ ಬೃಹತ್ ಹೋರಾಟಕ್ಕೆ ಮುಂದಾಗಿದೆ. ಗಲಭೆ ಮತ್ತು ಅದರ ನಂತರದ ಬೆಳವಣಿಗೆಗಳನ್ನು ವಿರೋಧಿಸಿ ಬಿಜೆಪಿ ಪಾದಯಾತ್ರೆ ನಡೆಸಲು ನಿರ್ಧರಿಸಿದೆ ಎಂದು ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ ಘೋಷಿಸಿದ್ದಾರೆ. ಪಾದಯಾತ್ರೆ ಜೊತೆಗೆ ಸಮಾವೇಶ ಮಾಡುವ ಚಿಂತನೆ ನಡೆದಿದ್ದು, ಈ ಕುರಿತು ಪಕ್ಷದ ಅಧ್ಯಕ್ಷರ ಜೊತೆ ಚರ್ಚಿಸಿದ್ದೇನೆ. 2 ದಿನದಲ್ಲಿ ಹೋರಾಟದ ರೂಪರೇಷೆ ಅಂತಿಮವಾಗುತ್ತೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version