Daily Devotional: ವಾರಕ್ಕೆ ಒಂದು ಸಲವಾದ್ರೂ ಮಕ್ಕಳಿಗೆ ಅಭ್ಯಂಗನ ಸ್ನಾನ ಮಾಡಿಸಬೇಕು ಯಾಕೆ? – Kannada News | Daily Devotional: The Ancient Wisdom of Castor Oil Baths for Children’s Well being

ಬೆಂಗಳೂರು, ಜನವರಿ 11: ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಅರಳೆಣ್ಣೆ (ಕ್ಯಾಸ್ಟರ್ ಆಯಿಲ್) ಮಹತ್ವಪೂರ್ಣ ಸ್ಥಾನ ಪಡೆದುಕೊಂಡಿದೆ. ಜ್ಯೋತಿಷ್ಯ, ಆಧ್ಯಾತ್ಮಿಕ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಇದು ಅನೇಕ ಶುಭ ಫಲಗಳನ್ನು ನೀಡುತ್ತದೆ. ವಿಶೇಷವಾಗಿ ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ಅರಳೆಣ್ಣೆ ಅಭ್ಯಂಜನ ಸ್ನಾನ ಮಾಡಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಗಂಡು ಮಕ್ಕಳಿಗೆ 21 ವರ್ಷದವರೆಗೆ ಮತ್ತು ಹೆಣ್ಣು ಮಕ್ಕಳಿಗೆ 18 ವರ್ಷದವರೆಗೆ ಇದನ್ನು ಪಾಲಿಸುವುದು ಪ್ರಯೋಜನಕಾರಿ.

ಅರಳೆಣ್ಣೆಯನ್ನು ತಲೆಗೆ, ಹೊಕ್ಕಳಿಗೆ, ಪಾದಗಳಿಗೆ ಮತ್ತು ಅಂಗೈಗಳಿಗೆ ಹಚ್ಚಿ ಸ್ವಲ್ಪ ಸಮಯ ಬಿಸಿಲಿನಲ್ಲಿ ಓಡಾಡಲು ಬಿಡುವುದರಿಂದ ದೇಹದ ಉಷ್ಣಾಂಶ ಸಮತೋಲನಗೊಳ್ಳುತ್ತದೆ. ಇದು ಆರೋಗ್ಯ ಸಮಸ್ಯೆಗಳು ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಮಕ್ಕಳನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಜ್ಯೋತಿಷ್ಯ ಪ್ರಕಾರ, ಈ ಅಭ್ಯಾಸವು ಕರ್ಮಫಲಗಳನ್ನು ಕಡಿಮೆ ಮಾಡಿ, ಬುದ್ಧಿಶಕ್ತಿಯನ್ನು ಚುರುಕುಗೊಳಿಸುತ್ತದೆ ಮತ್ತು ಗ್ರಹದೋಷಗಳನ್ನು ನಿವಾರಿಸುತ್ತದೆ. ಈ ಸಾಂಪ್ರದಾಯಿಕ ವಿಧಾನವು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮಹತ್ತರ ಕೊಡುಗೆ ನೀಡುತ್ತದೆ. ನಂತರ ಮಂದ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸುವುದು ಉತ್ತಮ. ದೊಡ್ಡವರೂ ಕೂಡ ಇದನ್ನು ಪಾಲಿಸಬಹುದು ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

Kalaburagi: ಕಳ್ಳತನ ಕೇಸ್​​ ತನಿಖೆ ವೇಳೆ ಖಾಕಿಗೇ ಶಾಕ್​: ಜೈಲಿನಲ್ಲಿ ಪತ್ತೆಯಾದ ಆರೋಪಿ! – Kannada News | More Than 40 Cases Against Bengaluru Thief Dadiya Shiva Exposed by Kalaburagi Police

ಕಲಬುರಗಿ, ಜನವರಿ 11: ಒಂಟಿ ಮನೆಗಳನ್ನೇ ಟಾರ್ಗೆಟ್​​ ಮಾಡಿ ಕದಿಯುತ್ತಿದ್ದ ಮತ್ತು ಮಹಿಳೆಯ ಮೈಮೇಲಿನ ಆಭರಣವನ್ನೂ ರಾಬರಿ ನಡೆಸಿದ್ದ ಕಳ್ಳನಿಗೆ ಬಲೆ ಬೀಸಿದ್ದ ಪೊಲೀಸರೇ ಆರೋಪಿಯ ಹಿಸ್ಟರಿ ಕಂಡು ದಂಗಾಗಿರುವ ಘಟನೆ ನಡೆದಿದೆ. ಕಳವು ಪ್ರಕರಣ ಸಂಬಂಧ ಆರೋಪಿ ಬೆಂಗಳೂರು ಮೂಲದ ಶಿವಕುಮಾರ್ ಅಲಿಯಾಸ್ ದಡಿಯಾ ಶಿವನಿಗಾಗಿ ಪೊಲೀಸರು ಎಲ್ಲೆಡೆ ಹುಡುಕಿದ್ದಾರೆ. ಆದ್ರೆ ಅದಾಗಲೇ ಆತ ಮತ್ತೊಂದು ಕಳ್ಳತನ ಪ್ರಕರಣ ನಡೆಸಿ ಜೈಲು ಸೇರಿರುವ ವಿಚಾರ ಬಯಲಾಗಿದೆ. ಸದ್ಯ ಬಾಡಿ ವಾರೆಂಟ್ ಮೇಲೆ ಆತನನ್ನ ಕರೆತಂದು ಕಲಬುರಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಮೇ ತಿಂಗಳನಲ್ಲಿ ಹೆಂಡತಿ ಊರಾದ ಕಲಬುರಗಿಗೆ ಬಂದಿದ್ದ ದಡಿಯಾ ಶಿವ ಇಲ್ಲೂ ತನ್ನ ಕೈಚಳಕ ತೋರಿಸಿದ್ದ. ಚಂದ್ರಶೇಖರ ನಾಗಲೀಕರ್ ಎಂಬವರ ಮನೆಯ ಸುಮಾರು 9 ಲಕ್ಷ ಮೌಲ್ಯದ ಚಿನ್ನಾಭರಣವ ದೋಚಿದ್ದ. ಹಾಗೆಯೇ ವೈದ್ಯ ಚಂದ್ರಶೇಖರ್​​ ಅವರ ತಾಯಿ ಮೈಮೇಲಿದ್ದ ಚಿನ್ನವನ್ನೂ ದರೋಡೆ ಮಾಡಿದ್ದ. ಚಂದ್ರಶೇಖರ್​​ ಪ್ರತಿನಿತ್ಯ ಕ್ಲಿನಿಕ್​​ಗೆ ಹೋಗೋದನ್ನು ಗಮನಿಸಿದ್ದ ಈತ ಮನೆಯಲ್ಲಿ ಅವರ ತಾಯಿ ಗುರುಬಾಯಿ ಇರೋದನ್ನು ವಾಚ್​​ ಮಾಡಿದ್ದ. ಅವರ ಕತ್ತಿನಲ್ಲಿದ್ದ ಚಿನ್ನದ ಸರ ಸೇರಿ ಬಂಗಾರ ದೋಚಿದ್ದ. ಸಣ್ಣ ಸುಳಿವನ್ನ ಕೂಡ ಬಿಡದೇ ಏಸ್ಕೇಪ್ ಆಗಿದ್ದ ಈತನನ್ನ ಹಿಡಿಯೋದೇ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಈ ನಡುವೆ ಆರೋಪಿಯ ಪತ್ತೆಗಿಳಿದ ಪೊಲೀಸರಿಗೇ ಶಾಕಿಂಗ್​​ ಸನ್ನಿವೇಶ ಎದುರಾಗಿದೆ. ಅವರು ಹುಡುಕುತ್ತಿದ್ದ ಆರೋಪಿ ದಡಿಯಾ ಶಿವ ಮತ್ತೊಂದು ಕೇಸ್​​ನಲ್ಲಿ ಅದಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿರೋದು ಗೊತ್ತಾಗಿದೆ.

ಇದನ್ನೂ ಓದಿ: ತನ್ನ 11 ತಿಂಗಳ ಮಗುವಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

ಸದ್ಯ ಬಾಡಿ ವಾರೆಂಟ್ ಮೇಲೆ ಆತನನ್ನ ವಶಕ್ಕೆ ಪಡೆದಿರೋ ಕಲಬುರಗಿ ಪೊಲೀಸರು, ದಡಿಯಾ ಶಿವನ ಇತಿಹಾಸ ಕಂಡು ದಂಗಾಗಿದ್ದಾರೆ. ಒಂದೆರಡಲ್ಲ ಈತನ ಮೇಲೆ 40ಕ್ಕೂ ಹೆಚ್ಚು ಕೇಸ್​​ಗಳಿರೋದು ಗೊತ್ತಾಗಿದೆ. ಈ ಹಿಂದೆ ಹೆಂಡತಿ ತವರಲ್ಲಿ ಕದ್ದ ಬಂಗಾರ ಇಡಲು ಹೋಗಿ ಈತ ಸಿಕ್ಕಿಬಿದ್ದಿದ್ದ ಎನ್ನಲಾಗಿದ್ದು, ಈ ಬಾರಿ ಅದೇ ಊರಲ್ಲಿ ಕದ್ದು ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿ ಮೇಲಿರುವ ಪ್ರಕರಣಗಳ ತನಿಖೆಗೆ ಪೊಲೀಸರು ಮುಂದಾಗಿದ್ದು, ಇತರ ಠಾಣೆಗಳಿಗೂ ಈತನ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಜೊತೆಗೇ ಕಣ್ಣಾಮುಚ್ಚಾಲೆ ಆಡ್ತಿದ್ದ ಆರೋಪಿ ಪತ್ತೆಯಿಂದ ಹಲವು ಪ್ರಕರಣಗಳು ಕೊನೆಗೂ ಬಯಲಾಗಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:58 am, Sun, 11 January 26

Source link

Horoscope Today 11 January: ಇಂದು ಈ ರಾಶಿಯವರಿಗೆ ಹಿತಶತ್ರುಗಳ ಕಾಟ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 11-01-2026 ರ ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಪುಷ್ಯ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ಅಷ್ಟಮಿ, ಚಿತ್ತಾ ನಕ್ಷತ್ರ, ಸುಕರ್ಮ ಯೋಗ ಮತ್ತು ಕೌಲವ ಕರಣಗಳೊಂದಿಗೆ ಕೂಡಿತ್ತು. ಸೂರ್ಯ ಧನುಸ್ಸು ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ದಿನ ಕಾಲಾಷ್ಟಮಿಯ ವಿಶೇಷ ದಿನವಾಗಿದ್ದು, ಶಿವ, ರುದ್ರ ಮತ್ತು ಕಾಲಭೈರವನ ಆರಾಧನೆಯು ಶುಭಕರವಾಗಿದೆ. ಸುಳ್ಯ ಚೆನ್ನಕೇಶವ ಸ್ವಾಮಿಗಳ ರಥೋತ್ಸವ ಮತ್ತು ರಾಣೆಬೆನ್ನೂರಿನಲ್ಲಿ ಸತ್ಯವಿಜಯ ತೀರ್ಥರ ಆರಾಧನಾ ಮಹೋತ್ಸವವು ಈ ದಿನ ನಡೆದಿವೆ. ಅಲ್ಲದೆ, ಇದು ಲಾಲ್ ಬಹದ್ದೂರ್ ಶಾಸ್ತ್ರಿಗಳ ಪುಣ್ಯ ತಿಥಿ ದಿನವೂ ಆಗಿದೆ.

ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೆ ಉದ್ಯೋಗ, ಹಣಕಾಸು, ಸಂಬಂಧಗಳು, ಆರೋಗ್ಯ ಮತ್ತು ಇತರೆ ಕ್ಷೇತ್ರಗಳಲ್ಲಿನ ದಿನದ ಫಲಗಳನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಗೂ ಅದೃಷ್ಟ ಬಣ್ಣ, ಶುಭ ಪ್ರಯಾಣದ ದಿಕ್ಕು, ಅದೃಷ್ಟ ಸಂಖ್ಯೆ ಮತ್ತು ವಿಶೇಷ ಮಂತ್ರ ಜಪದ ಬಗ್ಗೆಯೂ ಸಲಹೆ ನೀಡಲಾಗಿದೆ.

 

 

 

Source link

Horoscope Today 11 January : ಇಂದು ಈ ರಾಶಿಯವರಿಗೆ ಪ್ರತ್ಯಕ್ಷ ಜ್ಞಾನ ಸಿಗದೇ ಬಂಧುಗಳ‌ ನಡುವೆಯೇ ವೈಮನಸ್ಯ ಬರಬಹುದು – Kannada News | Daily Horoscope: Zodiac Predictions Today Career, Love and Finance Insights

ಮೇಷ ರಾಶಿ:

ನಿಮ್ಮ ಸಂಕಲ್ಪವನ್ನು ಬದಲಿಸಲಾರಿರಿ. ಪರೀಕ್ಷೆಯ ಫಲಿತಾಂಶದ ಮೇಲೆ ನಿಮ್ಮ ಮುಂದಿನ ಅಭ್ಯಾಸವು ನಿರ್ಣಯವಾಗಲಿದೆ. ವಿವಾಹಕ್ಕೆ ಬಂದಿರುವ ವಿಘ್ನಗಳನ್ನು ನೀವು ಪರಿಹರಿಸಿಕೊಳ್ಳುವುದು ಅನಿವಾರ್ಯವಾದೀತು. ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಅನ್ಯ ಚಟುವಟಿಕೆಯಲ್ಲಿ ತೊಡಗುವಿರಿ. ಸಹೋದರನಿಗೆ ನಿಮ್ಮಿಂದ ಅಲ್ಪವಾದರೂ ಸಹಾಯ ಮಾಡುವ ಮನಸ್ಸಾಗುವುದು. ಇಂದು ಆಗಬೇಕಾದ ಕೆಲಸಗಳನ್ನು ವೇಗವಾಗಿಯೂ ಹಾಗೂ ಬಹಳ ಎಚ್ಚರಿಕೆಯಿಂದ ಮಾಡುವಿರಿ. ಸಹೋದರನಿಂದ ಅನಿರೀಕ್ಷಿತ ಸಹಾಯವು ಸಿಗಬಹುದು. ಸಾಲವಾಗಿ ಪರಿಚಿತರಿಗೆ ಹಣವನ್ನು ಕೊಡಬೇಕಾದೀತು. ದಾಂಪತ್ಯದ ಕಲಹದಲ್ಲಿ ಮೌನವಹಿಸಿ ನೀವೇ ಶಾಂತಗೊಳಿಸಿ. ಆಗಾಗ ನಕಾರಾತ್ಮಕ ಅಂಶಗಳು ನಿಮ್ಮೊಳಗೆ ಏನನ್ನೋ ಮಾಡುತ್ತಾ ಇರುತ್ತದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು ಆಪ್ತತೆಯೂ ಬೆಳೆದು, ವಿನಾಕಾರಣ ದೂರವೂ ಆಗಬಹುದು. ಪ್ರತ್ಯಕ್ಷ ಜ್ಞಾನ ಸಿಗದೇ ಬಂಧುಗಳ‌ ನಡುವೆಯೇ ವೈಮನಸ್ಯ ಬೇಡ.

ವೃಷಭ ರಾಶಿ:

ಪ್ರತಿಭೆಗೆ ಸೂಕ್ತ ಸ್ಥಳವನ್ನು ಪಡೆಯುವಿರಿ. ನಿಮ್ಮಲ್ಲಿ ಧಾರ್ಮಿಕ ಆಸಕ್ತಿಯ ಕೊರತೆ ಕಾಣಿಸುವುದು. ಉದ್ಯಮ ಕ್ಷೇತ್ರದಲ್ಲಿ ಹೊಸ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ನಿಮ್ಮದನ್ನಾಗಿ ಮಾಡಿಕೊಂಡಿದ್ದು ಸ್ವಲ್ಪ ಭೂಮಿಯು ಪರರ ಪಾಲಾಗಬಹುದು. ನೀವು ಇಂದು ಬೇಸರದಿಂದ ಯಾರ ಸಹಾಯವನ್ನೂ ಇಚ್ಛಿಸುವುದಿಲ್ಲ. ಪುಣ್ಯ ಸ್ಥಳಗಳ ದರ್ಶನವು ಅನಿರೀಕ್ಷಿತವಾಗಿ ಮಾಡುವಿರಿ. ಮಾನಸಿಕ ದುರ್ಬಲತೆಯಿಂದ ಇಂದು ಕಾರ್ಯವನ್ನು ಮಾಡುವಿರಿ. ಆಲಸ್ಯವು ಇಂದಿನ ಕಛೇರಿಯ ಕೆಲಸವನ್ನು ನಿಧಾನ ಮಾಡಿಸುವುದು. ಮನೋನಿಗ್ರಹದ ಬಗ್ಗೆ ಗಮನವನ್ನು ಕೊಡುವುದು ಮುಖ್ಯವಾಗಿರಲಿ. ನಿಮ್ಮ ಸ್ವಭಾವವು ಇದ್ದಕಿದ್ದಂತೆ ಬದಲಾಗಿ ಪ್ರೀತಿಸುವವರಿಗೆ ಇದು ಕಷ್ಟವಾಗಬಹುದು. ಹಿತಶತ್ರುಗಳನ್ನು ದೂರವಿಟ್ಟು ಕೆಲಸವನ್ನು ಸಾಧಿಸಿಕೊಳ್ಳಬೇಕಾಗಿದೆ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ಜಿಜ್ಞಾಸೆಗೆ ಸೂಕ್ತ ಜನರಿಂದ ಪರಿಹಾರ ಸಿಗಲಿದೆ. ನಿಮ್ಮ ಮಾತುಗಳು ದುರುಪಯೋಗ ಆಗಬಹುದು.

ಮಿಥುನ ರಾಶಿ:

ನಿಮ್ಮ ಪ್ರಮುಖ ಅಂಶಗಳು ಬದಲಾಗುವುದು. ರಾಜಕಾರಣಿಗಳಿಗೆ ಅಧಿಕಾರಿಗಳಿಂದ ಸಂಕಟ ಕಾಣಿಸುವುದು. ಸಹೋದ್ಯೋಗಿಗಳ ಜೊತೆ ವಿರೋಧ ಕಟ್ಟಿಕೊಂಡ ಕಾರಣ ಇಂದಿನ ಕಛೇರಿಯ ಕೆಲಸವು ಅಸ್ತವ್ಯಸ್ತವಾಗುವುದು. ದೊಡ್ಡ ನಗರಗಳಲ್ಲಿ ಸುತ್ತಾಡುವ ಇಚ್ಛೆಯನ್ನು ಸ್ನೇಹಿತರಲ್ಲಿ ಹೇಳುವಿರಿ. ಯಾಂತ್ರಿಕ ಕಾರ್ಯದಲ್ಲಿ ಹೆಚ್ಚು ಸಫಲತೆ ಸಿಗಲಿದೆ. ವೃತ್ತಿಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ಸಿಗಬಹುದು. ಸ್ವಂತ ಉದ್ಯಮಕ್ಕೆ ವೇಗವನ್ನು ಕೊಡುವ ಕಾರ್ಯವು ಆಗಬೇಕಿದೆ. ತಂದೆಯಿಂದ ಸಂಪತ್ತನ್ನು ಪಡೆಯುವಿರಿ. ಸಹೋದ್ಯೋಗಿಯ ಕಾರಣದಿಂದ ನಿಮಗೆ ಬೈಗುಳ ಸಿಗುವುದು. ಭಯವನ್ನು ಬಿಟ್ಟು ಸಣ್ಣ ಅವಕಾಶವನ್ನಾದರೂ ಪಡೆಯಿರಿ. ಇಂದು ಅಸಾಧ್ಯ ಕಾರ್ಯದಲ್ಲಿ ದುಸ್ಸಾಹಸ ಮಾಡುವುದು ಬೇಡ. ಸಕಾರಾತ್ಮಕ ಚಿಂತನೆಯ ಬಗ್ಗೆ ಹೆಚ್ಚು ಗಮನವಿರಲಿ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕೆಲಸಗಳು ಗೌರವವನ್ನು ಕೊಡುವುವು.

ಕರ್ಕಾಟಕ ರಾಶಿ:

ಕೃಷಿ ವ್ಯಾಪಾರದಲ್ಲಿ ಲಾಭವು ಸಿಗಲಿದ್ದು, ಇಂದು ತೊಡಗಿಕೊಳ್ಳಲು ಸಾಧ್ಯವಾಗಸು. ಇಂದು ನಿರುದ್ಯೋಗಿಗಳಿಗೆ ಒಂದೊಂದೆ ಚಿಂತೆ ಕಾಡುವುದು. ಶತ್ರುಗಳ ತೊಂದರೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ಬೇರೆ ಕೆಲಸಗಳನ್ನು ಪಕ್ಕಕ್ಕಿರಿಸುವಿರಿ. ಅನಿರೀಕ್ಷಿತ ಸಹಾಯವು ನಿಮಗೆ ಸಿಕ್ಕಲಿದೆ. ನಿಮ್ಮ ಆತ್ಮವಿಶ್ವಾಸವು ಒಂದು ಮಿತಿಯಲ್ಲಿ ಇರಲಿ. ನಿಮಗೆ ಅಧಿಕಾರವನ್ನು ಕೊಡುವ ಬಗ್ಗೆ ಮಾತುಕತೆಗಳು ನಡೆಯಬಹುದು. ವ್ಯಕ್ತಿಗಳ ಮೇಲೆ ವಿರಕ್ತಿ ಉಂಟಾಗಬಹುದು. ಒಡಂಬಡಿಕೆಗೆ ಸರಿಯಾಗಿ ವ್ಯವಹಾರವಿದ್ದರೆ ಚೆಂದ ಬಲವಂತವಾಗಿ ನೆಮ್ಮದಿಯನ್ನು ತಂದುಕೊಳ್ಳುವಿರಿ. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಸಾಮಾಜಿಕ ಚಟುವಟಿಕೆಯಲ್ಲಿ ಬಹಳ ದಿನಗಳ ಅನಂತರ ಭಾಗವಹಿಸುವಿರಿ. ಪ್ರಣಯದಲ್ಲಿ ಆಸಕ್ತಿಯು ಹೆಚ್ಚು ಇರುವುದು. ಮನಸ್ಸು ಉದ್ವೇಗದಿಂದ ಹೊರಬರಲು ಮನಸ್ಸು ಮಾರ್ಗವನ್ನು ಹುಡುಕುವುದು.‌ ಸಮಾಜದಲ್ಲಿ ಗೌರವ, ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವಿರಿ. ನೂತನ ಉದ್ಯೋಗಕ್ಕೆ ಪ್ರವೇಶಿಸಲು ಮುಜುಗರವಾಗಲಿದೆ.

ಸಿಂಹ ರಾಶಿ:

ಮನೆಯ ನಿರ್ಮಾಣಕ್ಕೆ ಆಪ್ತರ ಸಲಹೆಯನ್ನು ಪಡೆಯಬಹುದು. ಇಂದು ಕಾರ್ಯದ ಸ್ಥಳದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಎಲ್ಲ ವ್ಯಕ್ತಿ, ವಸ್ತು, ಹುದ್ದೆಗಳ ಮೇಲೆ ವಿರಕ್ತಿ ಉಂಟಾಗಬಹುದು. ನಿಮ್ಮವರ ಇಂಗಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುವಿರಿ. ನೆರೆಹೊರೆಯರಿಂದ ತೊಂದರೆ ಬರಬಹುದು. ಕೋಪದಿಂದ ಸಿಗುವ ಸ್ಥಾನ ತಪ್ಪಬಹುದು. ಸಾಹಿತ್ಯಾಸಕ್ತರಿಗೆ ಅನುಕೂಲಕರವಾದ ಸನ್ನಿವೇಶಗಳು ಬರಬಹುದು. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಆಪ್ತರನ್ನು ಕಳೆದುಕೊಳ್ಳುವ ಭಯವು ಉಂಟಾಗಬಹುದು. ಧನಲಾಭದಿಂದ ಆರ್ಥಿಕತೆಯೂ ಸುಸ್ಥಿರವಾಗುವುದು. ಬಹಳ ದಿನಗಳಿಂದ ಸಾಗುತ್ತಿದ್ದ ಕೆಲಸವನ್ನು ಇಂದೇ ಮುಗಿಸಬೇಕೆಂದು ನಿರ್ಧರಿಸುವಿರಿ. ಸಂದರ್ಭವನ್ನು ನೋಡಿ ಮಾತನಾಡುವುದು ಉತ್ತಮ. ಸುಲಭದ ಕೆಲಸಗಳನ್ನು ಮೊದಲು ಮಾಡಿಕೊಳ್ಳಿ. ಇಲ್ಲವಾದರೆ ನಕಾರಾತ್ಮಕ ಸಂದೇಶ ನಿಮ್ಮಿಂದ ಹೋಗಬಹುದು.

ಕನ್ಯಾ ರಾಶಿ:

ಆದಾಯ ಮೂಲದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಅದೃಷ್ಟವನ್ನು ನಂಬುವುದಕ್ಕಿಂತ ಸಾಮರ್ಥ್ಯವನ್ನು ನಂಬುವುದು ಒಳ್ಳೆಯದು. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ‌ ಕೆಲಸಗಳನ್ನು ಮರೆಸುವುದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ದಿಕ್ಕನ್ನು ಇನ್ನೊಂದು‌ಕಡೆಗೆ ತಿರುಗಿಸಲು ಪ್ರಯತ್ನ ಮಾಡಬಹುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ಅನುಕರಿಸುವ ಸ್ವಭಾವವು ಹೆಚ್ಚು ಇರುವುದು. ಮೇಲಧಿಕಾರಿಗಳ ಜೊತೆ ಕಲಹ ಮಾಡಿಕೊಳ್ಳುವಿರಿ. ಮಿತ್ರರ ನಡುವೆ ಪ್ರೇಮವ ವಿವಾರಕ್ಕೆ ದ್ವೇಷವು ಬೆಳೆಯಬಹುದು. ವೃತ್ತಿಯಲ್ಲಿ ಒತ್ತಡವು ಹೆಚ್ಚಾಗಿರುವುದು. ಸಂಗಾತಿಯ ಜೊತೆ ಸಮಾರಂಭಗಳಲ್ಲಿ ಭಾಗವಹಿಸುವಿರಿ‌. ತಾಯಿಯ ಜೊತೆ ಕಲಹವಾಡಿ ಅವರನ್ನು ಬೇಸರಿಸುವಿರಿ. ಉದ್ಯಮದಲ್ಲಿ ಸಹವರ್ತಿಗಳು ರೂಪುಗೊಳ್ಳುವರು. ಅವಧಿಗೆ ಮೊದಲೇ ಕಾರ್ಯವನ್ನು ಮುಗಿಸಿ, ಇನ್ನಷ್ಟು ಮಾಡಬೇಕಾಗುವುದು.

ತುಲಾ ರಾಶಿ:

ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ಸೋಲುವಿರಿ. ನಿಮ್ಮ ವ್ಯಾಪಾರ ಯೋಜನೆಗೆ ಸರಿಯಾದ ರೂಪ ಸಿಗಲಿದೆ‌ ಯಶಸ್ಸು. ಮಾತಿನಲ್ಲಿ ಉದ್ವೇಗವು ಹೆಚ್ಚಿರಲಿದೆ. ನಿಮ್ಮೊಳಗೇ ನಾನಾ ದ್ವಂದ್ವಗಳು ಕಾಣಿಸಿಕೊಳ್ಳಲಿವೆ. ನಕಾರಾತ್ಮಕ ಭಾವನೆಗಳಿಂದ ನಿಮಗೆ ಕಿರಿಕಿರಿಯಾಗಿ ಬಿಡಲೂ ಸಾಧ್ಯವಾಗದು. ಸಾಲ ಹೆಚ್ಚಾಗುವ ಭೀತಿಯು ಇರುವುದು. ಸಂಗಾತಿಯ ಪರವಾಗಿ ನೀವು ಮಾತನಾಡುವುದು ಅಚ್ಚರಿಯಾದೀತು. ಎಲ್ಲದಕ್ಕೂ ಲೆಕ್ಕಾಚಾರವನ್ನು ಹಾಕಿ ಮಾಡಿದರೂ ಅನಂತರ ಅದು ಕೈ ತಪ್ಪಬಹುದು. ನಿಮ್ಮ ಔದಾರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಒರಟು ಸ್ವಭಾವವನ್ನು ಬಿಡುವುದು ಉತ್ತಮ. ಅಧ್ಯಾತ್ಮ ಬಲದಿಂದ ದ ಅತ್ಮಬಲವನ್ನು ತಂದುಕೊಳ್ಳುವಿರಿ. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ‌ ಕೆಲಸಗಳನ್ನು ಮರೆಸುವುದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ನಿಮ್ಮ‌ ಮೇಲೆ ಯಾರಾದರೂ ಆರೋಪವನ್ನು ಮಾಡಬಹುದು.

ವೃಶ್ಚಿಕ ರಾಶಿ:

ಸಹನೆಯು ಬೇಕಾದಲ್ಲಿ ಉದ್ವಿಗ್ನವಾಗುವಿರಿ. ಔದ್ಯೋಗಿಕ ನಿರ್ಣಯವನ್ನು ತೆಗೆದುಕೊಳ್ಳಲು ಸಮಯವನ್ನು ಪಡೆಯಿರಿ. ಸದಾ ಕಾಲ ಹೊಸತನ್ನು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದು ಅನಿವಾರ್ಯವಾದೀತು. ಒತ್ತಾಯದಿಂದ ಯಾರನ್ನೂ ಬಳಸಿಕೊಳ್ಳವುದು ಬೇಡ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ. ನೀವು ಅಂದುಕೊಂಡ ಕಾರ್ಯವು ಪ್ರಶಾಂತವಾಗಿ ಕೊನೆಗೊಳ್ಳುವುದು. ಆರ್ಥಿಕ ವ್ಯವಹಾರದಲ್ಲಿ ನೀವು ಇಂದು ದುರ್ಬಲರಾಗುವಿರಿ. ಹೊಸ ಕಾರ್ಯದಲ್ಲಿ ಹುಮ್ಮಸ್ಸು ಅತಿಯಾಗುವುದು. ಕೆಲವು ಸ್ವಭಾವವನ್ನು ತೋರಿಸುವುದು ಉಚಿತವಾಗದು. ಸ್ವಾವಲಂವನೆಯಿಂದ ಜೀವನವನ್ನು ನಡೆಸುವಿರಿ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ. ಇಂದಿನ ಅಶುಭವಾರ್ತೆ ನಿಮ್ಮನ್ನು ಅಲ್ಪ ಕುಗ್ಗಿಸಬಹುದು. ವ್ಯರ್ಥ ಕಾಲಹರಣವನ್ನು‌ ಮಾಡಿ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುವುದು.

ಧನು ರಾಶಿ:

ಹಣಕ್ಕಾಗಿ ಮಕ್ಕಳು ಪೀಡಿಸಬಹುದು. ಪ್ರೇಮವನ್ನು ಪೂರ್ಣವಾಗಿ ನಂಬಲಾಗದು. ಇಂದು ಅನಗತ್ಯ ಓಡಾಟದಿಂದ ಆರಂಭ. ನೀವು ಕೆಲವು ಅಹಿತಕರ ಸುದ್ದಿಗಳು ನಿಮ್ಮನ್ನು ಕುಗ್ಗಿಸಬಹುದು. ಸ್ನೇಹಿತರು ನಿಮ್ಮ ಸಮಯವನ್ನು ವ್ಯರ್ಥ ಮಾಡಬಹುದು. ಸ್ವಾಭಿಮಾನವನ್ನು ಬಿಟ್ಟು ಇರುವುದು ಕಷ್ಟವಾದೀತು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೋಪದಲ್ಲಿ ಏನನ್ನಾದರೂ ಹೇಳುವಿರಿ. ಕಠಿಣ ಕೆಲಸವನ್ನು ಸರಳ ಮಾಡಿಕೊಳ್ಳುವ ವಿಧಾನವು ಗೊತ್ತಿರಲಿ. ಹಳೆಯ ಸ್ನೇಹಿತರ ಭೇಟಿಯನ್ನು ಮಾಡುವ ಮನಸ್ಸಾಗುವುದು. ಇಂದು ಶಾರೀರಿಕ ಪೀಡೆ ಅತಿಯಾಗಬಹುದು. ಇಂದಿನ ಖರ್ಚು ನಿಮ್ಮನ್ನು ಕುಗ್ಗಿಸಬಹುದು. ಅಶಿಸ್ತಿನ ಕಾರಣ ಹಿರಿಯರಿಂದ ಬೈಸಿಕೊಳ್ಳಬೇಕಾಗುವುದು. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ. ಹಳೆಯ ವಸ್ತುಗಳನ್ನು ದುರಸ್ತಿ ಮಾಡಿಕೊಂಡು ಬಳಸುವಿರಿ. ಇಂದು ಸ್ವಂತ ಉದ್ಯಮವು ಹೆಚ್ಚು ಸವಾಲಿನಿಂದ ಇರುವುದು. ಭೂಮಿಯ ಉತ್ಪನ್ನದಿಂದ ಲಾಭವಾಗಲಿದೆ.

ಮಕರ ರಾಶಿ:

ಆತ್ಮಪ್ರಶಂಸೆಯು ಇತರರಿಗೆ ಕೇಳಲಾಗದು. ನೀವು ವಿವಿಧ ಕಡೆಯಿಂದ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಸಿಕ್ಕ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಂಬಿಕೆಯಲ್ಲಿ ದ್ರೋಹವಾಗಿದೆ ಎಂದು ಅನ್ನಿಸಬಹುದು. ಕಛೇರಿಯ ನಿಯಮಗಳನ್ನು ನೀವೇ ಉಲ್ಲಂಘಿಸುವಿರಿ. ಮೇಲಧಿಕಾರಿಗಳ ಜೊತೆ ನಿಮಗೆ ಆಪ್ತತೆ ಬೇಡ. ಪರರ ದ್ರವ್ಯವನ್ನು ಕೊಟ್ಟು ನಿಶ್ಚಿಂತರಾಗಿ. ಸಂಗಾತಿಯ ಮನಃಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುವಿರಿ. ನಿಮಗೆ ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಬರಬಹುದು. ಹಳೆಯ ಪ್ರೇಮವನ್ನು ಸಂಗಾತಿಯಲ್ಲಿ ಹೇಳಿಕೊಳ್ಳುವಿರಿ. ನೀವು ಇದರಿಂದ ನಿರಾಳರಾಗುವಿರಿ. ಕಛೇರಿಯಲ್ಲಿ ನಿಮ್ಮ ಮಾತನ್ನು ಪಾಲಿಸುವರು. ವಿದೇಶೀ ವಿನಿಮಯದಿಂದ ಲಾಭವಾಗಲಿದೆ. ನಿಮ್ಮ ಅನುಪಸ್ಥಿತಿಯಲ್ಲಿ ಕೆಲಸವನ್ನು ಬೇರೆಯವರು ಮಾಡುವರು. ಅನಾರೋಗ್ಯವು ಬೆನ್ನು‌ ಬಿಡದ ಬೇತಾಳದಂತೆ ಕಾಡಬಹುದು. ಯಾರ ನಕಾರಾತ್ಮಕ ಮಾತುಗಳೂ ನಿಮ್ಮ ಲೆಕ್ಕಕ್ಕೆ ಬಾರದು. ನಿರುದ್ಯೋಗಿಗಳಿಗೆ ಉದ್ಯೋಗದಲ್ಲಿ ಅವಕಾಶ ಪ್ರಾಪ್ತಿ.

ಕುಂಭ ರಾಶಿ:

ತಪ್ಪುಗ್ರಹಿಕೆಯಿಂದ ಸುಮ್ಮನೇ ಇರಬೇಕಾದೀತು. ವೃತ್ತಿಯ ಕಾರಣಕ್ಕೆ ಮಾಡುವ ಪ್ರಯಾಣದಲ್ಲಿ ಇಷ್ಟವಿರದು. ಸಂಕುಚಿತ ಮನಃಸ್ಥಿತಿಯು ಎಲ್ಲದರಿಂದ ನಿಮ್ಮನ್ನು ದೂರವಿಡುವುದು. ಪಕ್ಷಪಾತವು ನಿಮ್ಮ ಎಲ್ಲ ಸದ್ಭಾವವನ್ನು ನುಂಗಿ ಹಾಕುವುದು. ದಾಂಪತ್ಯದಲ್ಲಿ ಬೇಸರವಿರಲಿದೆ. ಯಾರ ಮೇಲೂ ದೂರನ್ನು ಹೇಳುವುದು ಬೇಡ. ಸಮಯ ಬಂದಾಗ ಎಲ್ಲವೂ ಸ್ಪಷ್ಟವಾಗಿ ಗೋಚರಿಸುವುದು. ಸಮಾರಂಭಗಳಲ್ಲಿ ನೀವು ಹೇಳಿದ ಮಾತು ವಿವಾದವಾಗಬಹುದು. ಸ್ನೇಹಿತರನ್ನು ಕಳೆದುಕೊಂಡಿರುವುದರ ಪರಿಣಾಮವು ಕೂಡಲೇ ಗೊತ್ತಾಗದು. ಅಮೂಲ್ಯ ವಸ್ತುವನ್ನು ಕೊಟ್ಟು ಆರ್ಥಿಕ ಸಂಕಷ್ಟವನ್ನು ತಂದುಕೊಳ್ಳುವಿರಿ. ಕೆಲವು ಸೂಚನೆಗಳು ನಿಮಗೆ ಭವಿಷ್ಯವನ್ನು ತಿಳಿಸಬಹುದು. ಕುಟುಂಬದಲ್ಲಿ ಶಾಂತಿಯು ಕದಡಲು ನಿಮ್ಮ ಪಾತ್ರವೇ ಇರುವುದು. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯುವಿರಿ. ನಿಮ್ಮ ಬಗ್ಗೆ ಇತರರಿಗೆ ತಿಳಿವಳಿಕೆ ಕೊಡುವಿರಿ. ಉನ್ನತ ಅಧಿಕಾರಿಗಳ ಮೇಲೆ ಸಿಟ್ಟನ್ನು ಬೇರೆ ಕಡೆಯಲ್ಲಿ ಹೊರಹಾಕುವಿರಿ.

ಮೀನ ರಾಶಿ:

ನೀವು ಮಾಡುವ ಆಸ್ತಿಯ ಹಂಚಿಕೆಯಲ್ಲಿ ಹಳೆಯ ವಿಚಾರಗಳು ಮರುಕಳಿಸುವುದು. ಅನಿರೀಕ್ಷಿತ ಪ್ರಯಾಣದಲ್ಲಿ ಕೆಲವು ಲಾಭವಾಗುವುದು. ಆದರೆ ಅಲ್ಲಿನ ಸಣ್ಣ ವಿಚಾರಕ್ಕೂ ಸಿಟ್ಟಗುವಿರಿ. ರಕ್ಷಣೆಯ ಕಾರ್ಯಗಳಿಗೆ ಸ್ವಲ್ಪ ಅನನುಕೂಲ ಸನ್ನಿವೇಶವು ಇರಲಿದೆ. ಪರಸ್ಪರ ನೆರವಿನಿಂದ ಇಂದಿನ ಕೆಲಸವು ಸಾಧ್ಯವಾಗುವುದು. ಸ್ನೇಹಿತರು ದೂರವಾದ್ದರಿಂದ ನಿಮಗೂ ನೆಮ್ಮದಿ ಸಿಗುವುದು. ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಸ್ಥಿರಾಸ್ತಿಯನ್ನು ಅಲಕ್ಷ್ಯ ಮಾಡುವಿರಿ‌ ಕಾರಣಾಂತರಗಳಿಂದ ನಿಮ್ಮ‌ ಯಾತ್ರೆಯು ಸ್ಥಗಿತವಾಗುವುದು. ಮನೆಯವರನ್ನು ಕಾಣದೇ ನಿಮಗೆ ಬೇಸರವಾದೀತು. ಅಧ್ಯಾತ್ಮದ ಚಿಂತನೆಯನ್ನು ಇಂದು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ನಿಮ್ಮ ಬಗ್ಗೆ ಕೀಳರಿಮೆ ಉಂಟಾಗಬಹುದು. ಸಂತೋಷದ ವಾತಾವರಣವು ಮನೆಯಲ್ಲಿ ಇರುವುದು. ನಿರಾಸೆಯಿಂದ ನೀವು ಹೊರಬರುವಿರಿ.

ಜನವರಿ 11,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೭
ಕ್ರೋಧೀ ಸಂವತ್ಸರ
ದಕ್ಷಿಣಾಯನ
ಹೇಮಂತ ಋತು
ಧನು ಮಾಸ
ಮಹಾನಕ್ಷತ್ರ : ಪೂರ್ವಾಷಾಢ
ಮಾಸ : ಪೌಷ
ಪಕ್ಷ : ಶುಕ್ಲ
ವಾರ : ಶನಿ
ತಿಥಿ : ದ್ವಾದಶೀ / ತ್ರಯೋದಶೀ
ನಿತ್ಯನಕ್ಷತ್ರ : ಮೃಗಶಿರಾ
ಯೋಗ : ಬ್ರಹ್ಮ
ಕರಣ : ಬಾಲವ
ಸೂರ್ಯೋದಯ – 07 – 01 am
ಸೂರ್ಯಾಸ್ತ – 06 – 19 pm

ಶುಭಾಶುಭಕಾಲ :
ರಾಹು ಕಾಲ 09:51 – 11:16
ಯಮಘಂಡ ಕಾಲ 14:05 – 15:30
ಗುಳಿಕ ಕಾಲ 07:02 – 08:27

-ಲೋಹಿತ ಹೆಬ್ಬಾರ್-8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 11ರ ದಿನಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಮನೆಯಿಂದ ದೂರ ಇದ್ದು, ವ್ಯಾಸಂಗ- ಉದ್ಯೋಗ ಮಾಡುತ್ತಾ ಇರುವವರು ಏಕಾಂತವನ್ನು ಬಯಸುವಿರಿ ಮತ್ತು ಆರ್ಥಿಕ ವಿಚಾರಗಳಲ್ಲಿ ನಿಮ್ಮ ಹಳೆಯ ತಪ್ಪುಗಳಿಂದ ಪಾಠ ಕಲಿಯುವಿರಿ. ಸಂಶೋಧನಾತ್ಮಕ ಕೆಲಸಗಳಿಗೆ ಇಂದಿನ ಶಕ್ತಿ ಪೂರಕವಾಗಿದೆ. ಆಧ್ಯಾತ್ಮಿಕ ಗುರುವಿನ ಭೇಟಿ ಅಥವಾ ದರ್ಶನ ಪಡೆಯುವ ಸಾಧ್ಯತೆ ಇದೆ. ಸಂಬಂಧಗಳಲ್ಲಿ ಸಾಧಾರಣ ಫಲಿತಾಂಶಗಳಿದ್ದರೂ ನಿಮ್ಮ ಉಳಿತಾಯದ ಯೋಜನೆಗಳು ಫಲ ನೀಡಲಿವೆ. ರಹಸ್ಯ ವಿಚಾರಗಳನ್ನು ಯಾರಿಗೂ ತಿಳಿಸಬೇಡಿ. ಅನಿರೀಕ್ಷಿತವಾಗಿ ಪ್ರಯಾಣ ಮಾಡುವ ಸಂದರ್ಭ ಬರಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಕೆಲಸದ ಒತ್ತಡವನ್ನು ನೀಗಿಸಲು ಇಂದೇ ಸಿದ್ಧತೆ ಮಾಡಿಕೊಳ್ಳುವಿರಿ. ಕಬ್ಬಿಣ, ತೈಲ ಅಥವಾ ಸಿಮೆಂಟ್ ವ್ಯಾಪಾರಸ್ಥರಿಗೆ ದೊಡ್ಡ ಲಾಭ ಸಿಗಲಿದೆ. ಆಸ್ತಿ ವಿವಾದಗಳು ಸುಲಭವಾಗಿ ಬಗೆಹರಿಯಲಿವೆ. ಕಠಿಣ ಶ್ರಮಕ್ಕೆ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ನಿಮ್ಮ ಮೇಲೆ ಅಪವಾದ ಬರದಂತೆ ಎಚ್ಚರ ವಹಿಸಿ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಹಾದಿ ಗೋಚರಿಸಲಿದೆ. ಅಜೀರ್ಣ ಸಮಸ್ಯೆಯಾಗದಂತೆ ಆಹಾರದ ಮಿತಿಯಿರಲಿ. ಇಷ್ಟದೇವತೆಯ ಪ್ರಾರ್ಥನೆ ಶುಭ ನೀಡಲಿದೆ. ಮನೆಯಲ್ಲಿ ಇರುವಂಥ ಕೆಲವು ಹಳೇ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರುತ್ತದೆ, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವನಾತ್ಮಕತೆ ಬದಲು ತರ್ಕಕ್ಕೆ ಆದ್ಯತೆ ನೀಡಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಭೂಮಿಗೆ ಸಂಬಂಧಿಸಿದ ಹಳೆಯ ವ್ಯವಹಾರಗಳು ಲಾಭದಾಯಕವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಶಾಂತವಾಗಿ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿ. ದೂರದ ಪ್ರಯಾಣದ ಯೋಜನೆಗಳಿದ್ದರೆ ಸದ್ಯಕ್ಕೆ ಮುಂದೂಡುವುದು ಒಳಿತು.

ಲೇಖನ- ಎನ್‌.ಕೆ.ಸ್ವಾತಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 11ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನೀವು ಅಂದುಕೊಂಡ ಕೆಲಸಗಳಲ್ಲಿ ಹಠಾತ್ ಬದಲಾವಣೆಗಳು ಮಾಡಿಕೊಳ್ಳಬೇಕಾಗಬಹುದು. ಗೊಂದಲಗಳಿಗೆ ಒಳಗಾಗದೆ ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ವಿಜ್ಞಾನ ಮತ್ತು ತಂತ್ರಜ್ಞಾನ ವಿಚಾರದಲ್ಲಿ ಆಸಕ್ತರಿಗೆ ಇದು ಲಾಭದಾಯಕ ದಿನ. ಮನೆ ರಿಪೇರಿ ಅಥವಾ ವಾಹನಗಳ ನಿರ್ವಹಣೆಗೆ ಹಣ ವ್ಯಯವಾಗಲಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯಬೇಡಿ, ಅದು ನಿಮ್ಮ ನೆಮ್ಮದಿ ಕೆಡಿಸಬಹುದು. ಹಿರಿಯರ ಆರೋಗ್ಯದಲ್ಲಿ ಹಠಾತ್ ಏರುಪೇರು ಕಾಣಿಸಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಸಂವಹನ ಕಲೆ ಈ ದಿನ ಕೈ ಹಿಡಿಯಲಿದೆ. ಮಾರ್ಕೆಟಿಂಗ್ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಬರಲಿವೆ. ಆಕಸ್ಮಿಕವಾಗಿ ದೂರದ ಸಂಬಂಧಿಗಳಿಂದ ಉಡುಗೊರೆಗಳು ಸಿಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಉದ್ದೇಶ ಇರುವವರು ತಜ್ಞರ ಸಲಹೆ ಪಡೆಯಿರಿ. ಹೊಸ ಗೆಳೆತನವು ಲಾಭದಾಯಕವಾಗಿರಲಿದೆ. ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ಇದು ಶುಭ ದಿನ. ಗಂಟಲು ಅಥವಾ ಎದೆಯ ಭಾಗದಲ್ಲಿ ಸಣ್ಣ ಮಟ್ಟದ ಸೋಂಕು ಕಾಣಿಸಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕುಟುಂಬ ಮತ್ತು ಸಂಬಂಧಗಳಿಗೆ ನೀವು ಅತಿ ಹೆಚ್ಚು ಆದ್ಯತೆ ನೀಡುವ ದಿನವಿದು. ವಿವಾಹ ಆಕಾಂಕ್ಷಿಗಳಿಗೆ ಶುಭ ಫಲಗಳು ಸಿಗಲಿವೆ. ಸಿನಿಮಾ, ಸಂಗೀತ ಅಥವಾ ಹವ್ಯಾಸಿ ಕಲೆಗಳಲ್ಲಿ ಆಸಕ್ತಿ ಇರುವವರಿಗೆ ವೇದಿಕೆ ಸಿಗಲಿದೆ. ಮನೆಯ ಹೆಣ್ಣು ಮಕ್ಕಳ ಬೇಡಿಕೆಗಳನ್ನು ಪೂರೈಸುವಿರಿ. ಆರ್ಥಿಕವಾಗಿ ಪರಿಸ್ಥಿತಿ ಉತ್ತಮವಾಗಿದ್ದಲ್ಲಿ ಸಾಲ ನೀಡುವ ಮುನ್ನ ಯೋಚಿಸಿ. ನಿಮ್ಮ ಆಕರ್ಷಕ ವ್ಯಕ್ತಿತ್ವವು ಗೌರವ ಮೂಡಿಸಲಿದೆ. ಮಧ್ಯಾಹ್ನ ಭರ್ಜರಿ ಭೋಜನದ ಯೋಗವಿದೆ. ದ್ವಿಚಕ್ರ ವಾಹನ ಚಾಲನೆ ಮಾಡುವವರ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.

ಲೇಖನ- ಎನ್‌.ಕೆ.ಸ್ವಾತಿ

 

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 11ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ವೃತ್ತಿ ಕ್ಷೇತ್ರದಲ್ಲಿ ಮುಂದಿನ ಯೋಜನೆಗಳ ಬಗ್ಗೆ ಗಂಭೀರ ಚಿಂತನೆ ನಡೆಸುವಿರಿ. ಉದ್ಯೋಗದ ನಿಮಿತ್ತ ಪ್ರಯಾಣದ ಯೋಗವಿದೆ. ನಿಮ್ಮ ಮಾತಿನ ಪ್ರಭಾವದಿಂದ ಅಧಿಕಾರಿ ವರ್ಗದವರ ಮನಸ್ಸು ಗೆಲ್ಲುವಿರಿ. ಸರ್ಕಾರಿ ಕೆಲಸಗಳಲ್ಲಿ ಇದ್ದ ಅಡೆತಡೆಗಳು ದೂರವಾಗಲಿವೆ. ಇದಕ್ಕೆ ಪ್ರಭಾವಿಗಳ ಬೆಂಬಲ ನಿಮಗೆ ದೊರೆಯಲಿದೆ. ಸಂಗಾತಿಯ ಜೊತೆಗೂಡಿ ಭವಿಷ್ಯದ ಆರ್ಥಿಕ ಹೂಡಿಕೆಗಳ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯ. ನಾಯಕತ್ವದ ಗುಣಕ್ಕೆ ಮನ್ನಣೆ ಸಿಗಲಿದೆ. ತಲೆನೋವು ಬಾಧಿಸಬಹುದು, ಸಾಕಷ್ಟು ನೀರು ಕುಡಿಯಿರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಭಾವನಾತ್ಮಕವಾಗಿ ನೀವು ಸ್ವಲ್ಪ ಮೃದುವಾಗಿರುವಿರಿ. ಹಣಕಾಸಿನ ವಿಚಾರಕ್ಕೆ ಈ ಹಿಂದಿನ ನಿಮ್ಮ ತೀರ್ಮಾನಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದ್ದು, ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಮುದ ನೀಡಲಿದೆ. ವ್ಯಾಪಾರಸ್ಥರಿಗೆ ಬಾಕಿ ಇದ್ದ ಹಣ ವಸೂಲಿಯಾಗುವ ಲಕ್ಷಣಗಳಿವೆ. ಜಲಮೂಲಗಳ ಹತ್ತಿರ ಪ್ರವಾಸ ಹೋಗುವ ಪ್ಲಾನ್ ಮಾಡಬೇಡಿ. ತಾಯಿಯ ಆರೋಗ್ಯದ ಕಡೆಗೆ ವಿಶೇಷ ಗಮನವಿರಲಿ. ನಿಮ್ಮ ಕ್ರಿಯಾಶೀಲತೆಗೆ ಮನೆಯವರಿಂದ ಉತ್ತಮ ಪ್ರೋತ್ಸಾಹ ಸಿಗಲಿದೆ. ಮಾನಸಿಕ ಶಾಂತಿಗಾಗಿ ಧ್ಯಾನ ಮಾಡುವುದು ಉತ್ತಮ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಮನೆಯಲ್ಲಿ ಹಿರಿಯರ ಆಶೀರ್ವಾದ ನಿಮ್ಮ ಮೇಲಿರಲಿದೆ. ಆರ್ಥಿಕವಾಗಿ ಖರ್ಚು ಹೆಚ್ಚಾಗಲಿದ್ದರೂ, ಅದು ಶುಭ ಕಾರ್ಯಗಳಿಗಾಗಿ ಇರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಕಲಿಕೆಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಬರವಣಿಗೆ ಅಥವಾ ಸಂಶೋಧನೆಯಲ್ಲಿ ತೊಡಗಿರುವವರಿಗೆ ಮನ್ನಣೆ ಸಿಗಲಿದೆ. ಮಕ್ಕಳ ಪ್ರಗತಿಯ ಬಗ್ಗೆ ಶುಭ ವಾರ್ತೆ ಕೇಳುವಿರಿ. ಸಂಜೆಯ ವೇಳೆಗೆ ಆಧ್ಯಾತ್ಮಿಕ ಚಿಂತನೆಗಳು ಸಮಾಧಾನ ನೀಡಲಿವೆ.

ಲೇಖನ- ಎನ್‌.ಕೆ.ಸ್ವಾತಿ

Source link

ಮತ್ತೊಬ್ಬರಿಗೆ ಛತ್ರಿ ಆಗಬೇಡಿ’: ಕಿಚ್ಚ ಖಾರವಾಗಿ ಹೇಳಿದ್ದು ಯಾರಿಗೆ? – Kannada News | Bigg Boss Kannada: Sudeep gave game advice to Kavya and others

ಬಿಗ್​​ಬಾಸ್ (Bigg Boss) ಮನೆಯಲ್ಲಿ ಎಂಟು ಜನ ಸ್ಪರ್ಧಿಗಳಿದ್ದಾರೆ. ಭಾನುವಾರಕ್ಕೆ ಆ ಸಂಖ್ಯೆ 7ಕ್ಕೆ ಇಳಿಯಲಿದೆ. ಮುಂದಿನ ವಾರ ಫಿನಾಲೆ ವಾರವಾಗಿದ್ದು ಫಿನಾಲೆ ವಾರದ ಮಧ್ಯದಲ್ಲೊಬ್ಬರು ಮಿಡ್ ವೀಕ್ ಎಲಿಮಿನೇಷನ್ ಸಹ ಆಗಲಿದ್ದಾರೆ. ಹೀಗಿರುವಾಗ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳಿಗೆ ಪ್ರತಿ ಕ್ಷಣವೂ ಮುಖ್ಯವಾಗಿರುತ್ತದೆ. ತಮ್ಮ ತನ ತೋರಿಸಲು, ತಮ್ಮ ಆಟ ಆಡಲು. ತಮ್ಮ ವ್ಯಕ್ತಿತ್ವದ ಪ್ರದರ್ಶನ ಮಾಡಲು. ಆದರೆ ಸ್ಪರ್ಧಿಗಳು ಬೇರೆಯವರಿಗಾಗಿ ಆಡಲು ಶುರು ಮಾಡಿದರೆ ಅಥವಾ ಬೇರೆಯವರ ನೆರಳಿನಲ್ಲಿ ಇರಲು ಶುರು ಮಾಡಿದರೆ. ಇದನ್ನು ‘ಮತ್ತೊಬ್ಬರಿಗೆ ಛತ್ರಿ ಆಗುವುದು’ ಎಂದು ಕರೆದಿದ್ದಾರೆ ಕಿಚ್ಚ ಸುದೀಪ್.

ಶನಿವಾರದ ಎಪಿಸೋಡ್​​ ನಡೆಸಿಕೊಟ್ಟ ಸುದೀಪ್, ಬಿಗ್​ವಾಸ್​​ನಲ್ಲಿ ಸ್ಪರ್ಧಿಗಳು ಇಲ್ಲಿಯವರೆಗೆ ಆಡಿಕೊಂಡು ಬಂದಿರುವುದು, ಈ ವಾರ ಕೆಲವರು ಆಡಿದ ರೀತಿ, ಮುಂದಿನ ವಾರ ಆಡಬೇಕಿರುವ ರೀತಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೆಲವು ಸ್ಪರ್ಧಿಗಳಿಗೆ ಸೂಕ್ಷ್ಮವಾಗಿ ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡಿದರು. ಈ ವೇಳೆ ‘ಮತ್ತೊಬ್ಬರಿಗೆ ಛತ್ರಿ ಆಗುವುದು’ ಎಂಬ ಸಲಹೆಯನ್ನು ಮುಖ್ಯವಾಗಿ ಒಬ್ಬ ಸ್ಪರ್ಧಿಗೆ ನೀಡಿದರು ಅದುವೇ ಕಾವ್ಯಾ.

ಕಾವ್ಯಾ ಅವರು ಬಿಗ್​​ಬಾಸ್ ಫಿನಾಲೆಯ ವಾರದ ವರೆಗೆ ಬಂದಿದ್ದಾರೆ ಆದರೆ ಈಗಲೂ ಸಹ ಅವರನ್ನು ಪ್ರೇಕ್ಷಕರು ಮಾತ್ರವಲ್ಲ ಮನೆಯ ಸದಸ್ಯರು ಸಹ ಗುರುತಿಸುವುದು ಗಿಲ್ಲಿಯ ಕಾರಣಕ್ಕೆ. ಗಿಲ್ಲಿ ಇಂದಾಗಿಯೇ ಕಾವ್ಯಾ ಅವರು ಇಷ್ಟು ದೂರ ಬಂದಿದ್ದಾರೆ. ಯಾರದ್ದಾದರೂ ನೆರವು ಇಲ್ಲದಿದ್ದರೆ ಅವರಿಗೆ ಸ್ವಂತವಾಗಿ ಆಡಲು ಬಾರದು ಎಂಬ ಅಭಿಪ್ರಾಯ ಮೂಡಿದೆ. ಈ ವಾರ ಅಶ್ವಿನಿ ಜೊತೆ ಟಾಸ್ಕ್ ಆಡುವಾಗ ಇಡೀ ಮನೆಯ ಮಂದಿ ಕಾವ್ಯಾಗೆ ಬೆಂಬಲ ನೀಡುತ್ತಿದ್ದರು. ಕಾವ್ಯಾ ಅದನ್ನು ಎಂಜಾಯ್ ಸಹ ಮಾಡಿದರು. ಈ ಬಗ್ಗೆ ಅಶ್ವಿನಿ ಅವರು ಸುದೀಪ್ ಎದುರು ಹೇಳಿದರು. ಆದರೆ ಕಾವ್ಯಾ ಅದನ್ನು ಅಲ್ಲಗಳೆದರು.

ಇದನ್ನೂ ಓದಿ:ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್​ಬಾಸ್ ರ್ಯಾಪ್ ಸಾಂಗ್

ಆಗ ಮಾತನಾಡಿದ ಕಿಚ್ಚ, ‘ಕಾವ್ಯಾ ನೀವು ಒಳ್ಳೆಯ ಆಟಗಾರ್ತಿ. ಆಡದೆ ಇಲ್ಲಿಯವರೆಗೆ ಬರಲು ಸಾಧ್ಯವಿಲ್ಲ. ಆದರೆ ನೀವು ಕಾಣಿಸಿಕೊಂಡಿಲ್ಲ ಅಥವಾ ನಿಮ್ಮನ್ನು ಕಾಣಿಸಿಕೊಳ್ಳಲು ಬಿಟ್ಟಿಲ್ಲ. ‘ಮತ್ತೊಬ್ಬರಿಗೆ ಛತ್ರಿ ಆಗೋದು ಬೇಡ’. ಎಲ್ಲವೂ ಸುಲಭವಾಗಿ ಇದ್ದಾಗ ನಿಮ್ಮತನ ಅದರಲ್ಲಿ ವ್ಯಕ್ತ ಆಗುವುದಿಲ್ಲ. ಅಸಲಿಗೆ ನೀವು ಅಶ್ವಿನಿ ಅವರಿಗೆ ಥ್ಯಾಂಕ್ಸ್ ಹೇಳಬೇಕು. ಏಕೆಂದರೆ ಅವರು ನಿಮಗೆ ಸವಾಲು ಹಾಕಿದರು. ನಿಮ್ಮತನ ಹೊರಗೆ ಬರುವಂತೆ ಮಾಡಿದರು. ಸವಾಲು ಸ್ವೀಕಾರ ಮಾಡುವಂತೆ ಮಾಡಿದರು. ನಿಮಗೆ ಚಾಲೆಂಜ್ ಕೊಟ್ಟರು’ ಎಂದರು ಸುದೀಪ್. ಧನುಶ್ ಅವರಿಗೂ ಇದೇ ಮಾತು ಅನ್ವಯ ಆಗುತ್ತದೆ ಎಂದರು ಕಿಚ್ಚ.

ರಕ್ಷಿತಾಗೂ ಸಹ ತುಸು ಕ್ಲಾಸ್ ತೆಗೆದ ಸುದೀಪ್, ‘ಬೇರೆಯವರ ಆಟವನ್ನು ನೀವು ಆಡುವುದು ಬೇಡ. ಅವರ ಆಟವನ್ನು ಅವರು ಆಡಲು ಬಲ್ಲರು’ ಎಂದರು. ರಕ್ಷಿತಾ, ಗಿಲ್ಲಿ ಮತ್ತು ರಘು ಬಗ್ಗೆ ಅತೀವ ಆತ್ಮೀಯತೆ ಬೆಳೆಸಿಕೊಂಡು, ಅದರಿಂದ ಬೇರೆಯವರನ್ನು ಅವರಿಂದ ದೂರ ಇಡಲು ಪ್ರಯತ್ನ ಮಾಡುತ್ತಿರುವ ಬಗ್ಗೆಯೂ ಸುದೀಪ್ ಟೀಕೆ ಮಾಡಿದರು. ತುಸು ಖಾರವಾಗಿಯೇ ರಕ್ಷಿತಾಗೆ ಬುದ್ಧಿ ಹೇಳಿದರು ಕಿಚ್ಚ. ಇನ್ನು ನಾಳೆ ಭಾನುವಾರ ಒಬ್ಬರು ಸದಸ್ಯರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಮುಂದಿನ ಭಾನುವಾರ ಫಿನಾಲೆ ನಡೆಯಲಿದೆ.

Source link

ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸಾವು – Kannada News | Chitradurga Road Accident: 4 Dead in Hindasagatte Car Lorry Crash on Highway

ಚಿತ್ರದುರ್ಗ, ಜನವರಿ 10: ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತವೊಂದು (Accident) ಸಂಭವಿಸಿದ್ದು, ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವಂತಹ (death) ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದಲ್ಲಿ ನಡೆದಿದೆ. ವಿಶ್ವನಾಥ್(22), ನಂಜುಂಡಿ(23), ರಾಹುಲ್(23) ಮತ್ತು ಯಶ್ವಂತ್(22) ಮೃತರು. ಮೃತರು ಹಿರಿಯೂರು ತಾಲೂಕಿನ ನಂಜಯ್ಯನಕೊಟ್ಟಿಗೆ ಗ್ರಾಮದವರು. ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಆನಂದ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ವಾಹನ ಪಲ್ಟಿ: 12 ಜನರ ಪೈಕಿ ಏಳು ಜನರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿ ಹೊಡೆದಿದ್ದು, ಹನ್ನೆರಡು ಜನರ ಪೈಕಿ 7 ಜನರಿಗೆ ಗಾಯಗಳಾಗಿರುವಂತಹ ಘಟನೆ  ಬೆಳಗಾವಿ ತಾಲೂಕಿನ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಸವದತ್ತಿ ಯಲ್ಲಮ್ಮ ದೇಗುಲದಿಂದ ಬೆಳಗಾವಿ ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ತುಮಕೂರು: ಭೀಕರ ಅಪಘಾತ, ಶಬರಿಮಲೆಗೆ ಹೋಗಿ ಬರುತ್ತಿದ್ದ ಯಲಬುರ್ಗಾ ಮೂಲದ ನಾಲ್ವರು ಸ್ಥಳದಲ್ಲೇ ಸಾವು

ಸದ್ಯ ಗಾಯಾಳುಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡಿಗೆ ಬಿದ್ದ ಕಾರು: ವ್ಯಕ್ತಿ ಸಾವು, ನಾಲ್ವರಿಗೆ ಗಂಭೀರ ಗಾಯ

ಚಾಲಕನ ನಿಯಂತ್ರಣ ತಪ್ಪಿ ಹೊಂಡಾ ಸಿಟಿ ಕಾರು ಗುಂಡಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಪ್ಪಲ್ಲಿ ಗ್ರಾಮದ ಬಳಿ ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಕುಶಾಲ್ (25) ಮೃತ ಯುವಕ.

ಓರ್ವ ಯುವತಿ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಇನ್ನು ಚಿಂತಾಮಣಿಯಿಂದ ಲಕ್ಷ್ಮೀಪುರ ಕ್ರಾಸ್ ಬಳಿ ರೆಸ್ಟೋರೆಂಟ್‌ಗೆ ತೆರಳಿ ಬಳಿಕ ವಾಪಸ್​ ಆಗುವ ವೇಳೆ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:58 pm, Sat, 10 January 26

Source link

WPL 2026: ಹರ್ಮನ್- ಬ್ರಂಟ್ ಬ್ಯಾಟಿಂಗ್‌ ಸುನಾಮಿಗೆ ತತ್ತಿರಿಸಿದ ಡೆಲ್ಲಿ ಕ್ಯಾಪಿಟಲ್ಸ್ – Kannada News | Mumbai Indians Secure First WPL 2026 Win: Dominant 50 Run Victory Over Delhi Capitals

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2026 ರ ಮೂರನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ಕ್ರಿಕೆಟ್ ತಂಡವನ್ನು 50 ರನ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 195 ರನ್ ಗಳಿಸಿ, ದೆಹಲಿಗೆ ಗೆಲ್ಲಲು 196 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ದೆಹಲಿ 19 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಗಿ ಪಂದ್ಯವನ್ನು ಸೋತಿತು.

ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಜೆಮಿಮಾ ರೊಡ್ರಿಗಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಎರಡನೇ ಓವರ್‌ನಲ್ಲಿ ಖಾತೆ ತೆರೆಯದೆಯೇ ಆರಂಭಿಕ ಆಟಗಾರ್ತಿ ಅಮೆಲಿಯಾ ಕೆರ್ ಔಟ್ ಆದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ಜಿ. ಕಮಲಿನಿ ಕೂಡ 16 ರನ್‌ಗಳಿಗೆ ಔಟಾದರು, ಇದರಿಂದಾಗಿ ಮುಂಬೈ ಸಂಕಷ್ಟಕ್ಕೆ ಸಿಲುಕಿತು. ಪವರ್‌ಪ್ಲೇ ಅಂತ್ಯದ ವೇಳೆಗೆ ಮುಂಬೈ ಒಂದು ವಿಕೆಟ್ ನಷ್ಟಕ್ಕೆ ಕೇವಲ 43 ರನ್ ಗಳಿಸಿತ್ತು. ಆ ಬಳಿಕ ಜೊತೆಯಾದ ನೇಟ್ ಸೀವರ್ ಬ್ರಂಟ್ ಮತ್ತು ನಾಯಕಿ ಹರ್ಮನ್‌ಪ್ರೀತ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು.

ನೇಟ್ ಸೀವರ್ ಬ್ರಂಟ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಒಟ್ಟು 46 ಎಸೆತಗಳಲ್ಲಿ 70 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ಔಟಾದ ನಂತರ, ನಾಯಕಿ ಹರ್ಮನ್ಪ್ರೀತ್ ಕೌರ್ ಇನ್ನಷ್ಟು ಆಕ್ರಮಣಕಾರಿಯಾಗಿ ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಹರ್ಮನ್ 74 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿಗಳು ಮತ್ತು 3 ಬೃಹತ್ ಸಿಕ್ಸರ್‌ಗಳು ಸೇರಿದ್ದವು. ಇದು ಹರ್ಮನ್ ಪ್ರೀತ್ ಕೌರ್ ಅವರ 9ನೇ ಟಿ20 ಅರ್ಧಶತಕವಾಗಿದೆ. ಉಳಿದಂತೆ ನಿಕೋಲಾ ಕ್ಯಾರಿ 21 ರನ್ ಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ಪರ ನಂದಿನಿ ಶರ್ಮಾ 2 ವಿಕೆಟ್ ಪಡೆದರು.

196 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸಂಪೂರ್ಣ ವಿಫಲವಾಯಿತು. ಆರಂಭಿಕರಾದ ಶಫಾಲಿ ವರ್ಮಾ (8) ಮತ್ತು ಲಿಜೆಲ್ಲೆ ಲೀ (10) ಸಂಪೂರ್ಣ ನಿರಾಶೆ ಮೂಡಿಸಿದರು. ನಾಯಕಿ ಜೆಮಿಮಾ ರೊಡ್ರಿಗಸ್ (1) ಕೂಡ ವಿಫಲರಾದರು. ಸ್ಟಾರ್ ಆಟಗಾರ್ತಿಯರಾದ ಲಾರಾ ವೋಲ್ವಾರ್ಡ್ (9) ಮತ್ತು ಮರಿಯನ್ ಕಪ್ (10) ಕೂಡ ಕಡಿಮೆ ಸ್ಕೋರ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು. ಇದು ಡೆಲ್ಲಿಯ ಸೋಲನ್ನು ದೃಢಪಡಿಸಿತು. ಒಂದು ಹಂತದಲ್ಲಿ, ಡೆಲ್ಲಿ 74 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು.

ಸತತವಾಗಿ ವಿಕೆಟ್ ಕಳೆದುಕೊಂಡರೂ, ಚಿನೆಲ್ಲೆ ಹೆನ್ರಿ ಅದ್ಭುತ ಹೋರಾಟ ನೀಡಿದರು. ಕೇವಲ 33 ಎಸೆತಗಳಲ್ಲಿ 56 ರನ್ ಗಳಿಸುವ ಮೂಲಕ ತಂಡದ ಭರವಸೆಯನ್ನು ಜೀವಂತವಾಗಿಡಲು ಪ್ರಯತ್ನಿಸಿದರು. ಅವರ ಈ ಇನ್ನಿಂಗ್ಸ್​ನಲ್ಲಿ 5 ಬೌಂಡರಿಗಳು ಮತ್ತು 3 ಬೃಹತ್ ಸಿಕ್ಸರ್‌ಗಳು ಸೇರಿದ್ದವು. ಆದಾಗ್ಯೂ, ಉಳಿದವರಿಂದ ಅವರಿಗೆ ಯಾವುದೇ ಬೆಂಬಲ ಸಿಗಲಿಲ್ಲ. ಕೊನೆಯಲ್ಲಿ, ಮಿನ್ನು ಮಣಿ (7) ವಿಕೆಟ್ ಪತನದೊಂದಿಗೆ ದೆಹಲಿ 145 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಮುಂಬೈ ಬೌಲರ್‌ಗಳಲ್ಲಿ, ಶಬ್ನಿಮ್ ಇಸ್ಮಾಯಿಲ್, ಅಮೆಲಿಯಾ ಕೆರ್ ಮತ್ತು ಸೀವರ್ ಬ್ರಂಟ್ ಉತ್ತಮವಾಗಿ ಬೌಲಿಂಗ್ ಮಾಡಿ ದೆಹಲಿ ತಂಡವನ್ನು ಕಟ್ಟಿಹಾಕಿದರು.

Published On – 11:06 pm, Sat, 10 January 26

Source link

Exit mobile version