ಬಾಗಲಕೋಟೆ, ಏಪ್ರಿಲ್ 17: ಜಿಲ್ಲೆಯ ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಅವರು ಭೇಟಿ ನೀಡಿದ್ದಾರೆ. ಗೌರವ ರಕ್ಷೆ ನೀಡಿ ಅವರನ್ನು ಸ್ವಾಗತಿಸಲಾಗಿದ್ದು, ಕಾರಾಗೃಹದ ಭದ್ರತಾ ವ್ಯವಸ್ಥೆ, ಕೈದಿಗಳಿಗೆ ಒದಗಿಸಲಾಗುವ ಸೌಲಭ್ಯಗಳು ಮತ್ತು ಸ್ವಚ್ಛತಾ ಕ್ರಮಗಳ ಕುರಿತು ಅಲೋಕ್ ಕುಮಾರ್ ಈ ವೇಳೆ ಕೂಲಂಕುಷ ಪರಿಶೀಲನೆ ನಡೆಸಿದ್ದಾರೆ. ಕೈದಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿರುವ ಅವರು, ಅಹವಾಲುಗಳನ್ನು ಆಲಿಸಿದ್ದಾರೆ. ಅಲ್ಲದೆ, ಕಾರಾಗೃಹದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಶಿಸ್ತುಬದ್ಧವಾಗಿ ಮತ್ತು ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
