ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ – Kannada News | Sudeep praised Raj B Shetty’s Rakkasapuradol movie trailer

ಸುದೀಪ್ (Sudeep) ಅವರು ಸ್ಟಾರ್ ನಟ ಆಗಿರುವ ಜೊತೆಗೆ ಹೊಸಬರ ಸಿನಿಮಾಗಳಿಗೆ, ತಮ್ಮ ಗೆಳೆಯರ ಸಿನಿಮಾಗಳಿಗೆ ಮುಖ್ಯವಾಗಿ ಒಳ್ಳೆಯ ಸಿನಿಮಾಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಇದೀಗ ಸುದೀಪ್ ಅವರು ರಾಜ್ ಬಿ ಶೆಟ್ಟಿ ನಟಿಸಿರುವ ‘ರಕ್ಕಸಪುರದೊಳ್’ ಸಿನಿಮಾಕ್ಕೆ ಬೆಂಬಲ ನೀಡಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ ಆಗಿದ್ದರು. ವೇದಿಕೆ ಮೇಲೆ ಮಾತನಾಡಿದ ಕಿಚ್ಚ ‘ಯಾವಾಗೆಲ್ಲ ರಾಜ್ ಬಿ ಶೆಟ್ಟಿ ಅವರು ಕ್ಲಿಷ್ಟಕರವಾದ ಹೆಸರಿನ ಸಿನಿಮಾನಲ್ಲಿ ಮಾಡಿದ್ದಾರೋ ಆಗೆಲ್ಲ ಹಿಟ್ ಕೊಟ್ಟಿದ್ದಾರೆ’ ಎಂದರು. ಮುಂದೆಯೂ ಇಂಥಹದ್ದೇ ಹೆಸರಿನ ಸಿನಿಮಾ ಮಾಡಿ ಎಂದು ಹಾರೈಸಿದರು ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

WPL 2026: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ; ತಂಡದಲ್ಲಿ 1 ಬದಲಾವಣೆ – Kannada News | WPL 2026 Match 18: RCB vs UP Warriors – Playoff Showdown for Direct Final Spot

ಮಹಿಳಾ ಪ್ರೀಮಿಯರ್ ಲೀಗ್ 2026 ರ 18 ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು UP ವಾರಿಯರ್ಸ್ ನಡುವೆ ನಡೆಯಲಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿರುವ ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಸುಲಭವಾಗಿ ಫೈನಲ್​ಗೇರಲಿದೆ, ಸೋತರೆ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಇತ್ತ ಯುಪಿ ತಂಡಕ್ಕೆ ಪ್ಲೇಆಫ್‌ಗೇರಲು ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಯುಪಿ ತಂಡ ಸೋತರೆ ಪ್ಲೇಆಫ್‌ ರೇಸ್​ನಿಂದ ಹೊರಬೀಳಲಿದೆ.

ಆರ್‌ಸಿಬಿ ತಂಡ ತನ್ನ ಮೊದಲ ಐದು ಪಂದ್ಯಗಳಲ್ಲಿ ಜಯಗಳಿಸಿದ್ದರೂ, ಕೊನೆಯ ಎರಡು ಪಂದ್ಯಗಳಲ್ಲಿ ಸೋತಿದೆ. ಪ್ರಸ್ತುತ, ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂದು ಯುಪಿ ವಾರಿಯರ್ಸ್ ವಿರುದ್ಧ ಜಯಗಳಿಸುವ ಮೂಲಕ ಫೈನಲ್‌ಗೆ ನೇರ ಸ್ಥಾನ ಪಡೆಯಬಹುದು. ಇತ್ತ ಯುಪಿ ವಾರಿಯರ್ಸ್ ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಹೆಣಗಾಡುತ್ತಿದ್ದು, ಐದನೇ ಸ್ಥಾನದೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದೆಲ್ಲದರ ನಡುವೆ ತಂಡದ ಬ್ಯಾಟಿಂಗ್‌ ಜೀವಾಳ ಎನಿಸಿಕೊಂಡಿದ್ದ ಫೋಬೆ ಲಿಚ್‌ಫೀಲ್ಡ್ ಪಂದ್ಯಾವಳಿಯಿಂದ ಹೊರಬಿದ್ದಿದ್ದು, ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.

ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಗೌತಮಿ ನಾಯಕ್ ಬದಲಿಗೆ ಪೂಜಾ ವಸ್ತ್ರಕರ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಯುಪಿ ವಾರಿಯರ್ಸ್‌ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದ್ದು ಲಿಚ್‌ಫೀಲ್ಡ್ ಬದಲಿಗೆ ಆಮಿ ಜೋನ್ಸ್ ಹಾಗೂ ಕಿರಣ್ ನವಗಿರೆ ಬದಲಿಗೆ ಸಿಮ್ರಾನ್ ಶೇಖ್‌ಗೆ ಅವಕಾಶ ನೀಡಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ರಾಧಾ ಯಾದವ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಕರ್ (ಗೌತಮಿ ನಾಯಕ್ ಬದಲಾಗಿ), ನಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್ ಮತ್ತು ಲಾರೆನ್ ಬೆಲ್.

ಯುಪಿ ವಾರಿಯರ್ಜ್ ಪ್ಲೇಯಿಂಗ್ XI: ಮೆಗ್ ಲ್ಯಾನಿಂಗ್ (ನಾಯಕಿ), ಆಮಿ ಜೋನ್ಸ್ (ಫೋಬೆ ಲಿಚ್‌ಫೀಲ್ಡ್‌ ಬದಲಿಗೆ), ಸಿಮ್ರಾನ್ ಶೇಖ್ (ಕಿರಣ್ ನವಗಿರ್ ಬದಲಿಗೆ), ಹರ್ಲೀನ್ ಡಿಯೋಲ್, ಕ್ಲೋಯ್ ಟ್ರಯಾನ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್ ಸೋಫಿ ಎಕ್ಲೆಸ್ಟೋನ್, ಶಿಖಾ ಪಾಂಡೆ, ಕ್ರಾಂತಿ ಗೌಡ್ ಮತ್ತು ಆಶಾ ಸೋಭಾನ.

Source link

ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ದಿಢೀರ್ ವಿಧಾನಸೌಧದಲ್ಲಿ ಪ್ರತ್ಯಕ್ಷ – Kannada News | Sidlaghatta Civic Official Threat Case: accused Rajeev Gowda Wife In Vidhana Soudha

ಬೆಂಗಳೂರು, (ಜನವರಿ 29): ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನ ಬಂಧನವಾಗಿದ್ದು, ಸದ್ಯ ಪೊಲೀಸರು, ರಾಜೀವ್ ಗೌಡನನ್ನು ವಶಕ್ಕೆ ಮಂಗಳೂರಿನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಆದ್ರೆ, ಇತ್ತ ರಾಜೀವ್ ಗೌಡನ ಪತ್ನಿ ಸಹನಾ ಅವರು ವಿಧಾನಸವಧದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಹೌದು..ಇಂದು (ಜನವರಿ 29) ವಿಧಾನಸಭೆ ಮೊಗಸಾಲೆಯಲ್ಲಿ ಕುಳಿತ್ತಿದ್ದಾರೆ. ರಾಜೀವ್ ಗೌಡ ಬಂಧನ ಬೆನ್ನಲ್ಲೇ ಪತ್ನಿ ಸಹನಾ ವಿಧಾನಸೌಧದಲ್ಲಿ ಪ್ರತ್ಯಕ್ಷರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

Source link

ಒತ್ತಡ, ಆಯಾಸವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ರಾತ್ರಿ ವೇಳೆ ಈ ಅಭ್ಯಾಸಗಳನ್ನು ಪಾಲಿಸಿ – Kannada News | These nighttime habits help you sleep better, relieve stress

ಇಂದಿನ ಕಾರ್ಯನಿರತ ಜೀವನದಲ್ಲಿ, ದೇಹಕ್ಕೆ ಸಾಕಷ್ಟು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ನಿದ್ರೆಯ (sleep) ಕೊರತೆಯು ಆಯಾಸಕ್ಕೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ, ಜೀವನಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡುವ ಮೂಲಕ ಮತ್ತು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ಒತ್ತಡ ಮತ್ತು ಆಯಾಸವನ್ನು ನಿವಾರಿಸಬಹುದು ಜೊತೆಗೆ ರಾತ್ರಿಯ ವೇಳೆ ಈ ಈ ಕೆಲವು ಅಭ್ಯಾಸಗಳನ್ನು ಪಾಲಿಸುವ ಮೂಲಕ ಉತ್ತಮ ನಿದ್ರೆಯನ್ನು ಪಡೆಯಬಹುದು. ಆ ಆರೋಗ್ಯಕರ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಉತ್ತಮ ನಿದ್ರೆಗಾಗಿ ರಾತ್ರಿ ವೇಳೆ  ನೀವು ಪಾಲಿಸಬೇಕಾದ ಅಭ್ಯಾಸಗಳಿವು:

ಸ್ನಾನ ಮಾಡಿ: ಆಯಾಸವನ್ನು ನಿವಾರಿಸಲು ಹಾಗೂ ಉತ್ತಮ ನಿದ್ರೆಯನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಸ್ನಾನ ಮಾಡಿ. ಸ್ನಾನವು ನಿಮ್ಮ ಹೊರ ಚರ್ಮದ ಮೇಲಿನ ರಂಧ್ರಗಳನ್ನು ಸ್ವಚ್ಛಗೊಳಿಸುವುದಲ್ಲದೆ ದೇಹವನ್ನು ರಿಫ್ರೆಶ್ ಮಾಡುತ್ತದೆ, ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.

ಸಾಕಷ್ಟು ನೀರು ಕುಡಿಯಿರಿ: ದೇಹದ ನೀರಿನ ಅಗತ್ಯಗಳನ್ನು ಪೂರೈಸದಿದ್ದರೆ, ಅದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದು ಆಯಾಸಕ್ಕೆ ಕಾರಣವಾಗಬಹುದು. ನಮ್ಮ ದೇಹಕ್ಕೆ ನೀರು ಅತ್ಯಗತ್ಯ. ಆದ್ದರಿಂದ, ನಿಮ್ಮ ಜಲಸಂಚಯನ ಅಗತ್ಯಗಳನ್ನು ಪೂರೈಸಲು ಸಾಕಷ್ಟು ನೀರು ಕುಡಿಯಿರಿ.

ಮಲಗುವ ಮುನ್ನ ಚಹಾ, ಕಾಫಿ ಕುಡಿಯುವುದನ್ನು ನಿಲ್ಲಿಸಿ: ಮಲಗುವ ಮುನ್ನ ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ. ಇದು ನಿದ್ರೆಗೆ ಅಡ್ಡಿಪಡಿಸಬಹುದು ಮತ್ತು ನಿಮ್ಮ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.

ವಾಕಿಂಗ್‌ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ: ವಾಕಿಂಗ್‌ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ರಾತ್ರಿ ಊಟದ ನಂತರ ಕನಿಷ್ಠ ಅರ್ಧ ಗಂಟೆಯಾದರೂ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಆಯಾಸವನ್ನು ನಿವಾರಿಸುತ್ತದೆ ಮತ್ತು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಪರದೆಯ ಸಮಯವನ್ನು ಕಡಿಮೆ ಮಾಡಿ: ಮಲಗುವ ಮುನ್ನ ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್‌ನಿಂದ ದೂರವಿರುವುದು ಬಹಳ ಮುಖ್ಯ. ಅವುಗಳ ಬಳಕೆಯು ನೀಲಿ ಬೆಳಕನ್ನು ಹೊರಸೂಸುತ್ತದೆ, ಇದರಿಂದಾಗಿ ನಿದ್ರೆಗೆ ಅಡ್ಡಿಪಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಲಗುವ ಮೊದಲು ಒಂದು ಗಂಟೆ ಮೊದಲು ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್‌ನಿಂದ ದೂರವಿರಿ. ಮತ್ತು ಉತ್ತಮ ನಿದ್ರೆಯನ್ನು ಪಡೆಯಲು ಮಲಗುವ ಮುನ್ನ ನೀವು ಪುಸ್ತಕ ಓದಬಹುದು ಅಥವಾ ಶಾಂತ ಸಂಗೀತವನ್ನು ಕೇಳಬಹುದು.

ಇದನ್ನೂ ಓದಿ: ರಾತ್ರಿ ವೇಳೆ ಅಭ್ಯಾಸಗಳನ್ನು ಪಾಲಿಸಿದರೆ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ

ಮಲಗುವ ಮುನ್ನ ಧ್ಯಾನ ಮಾಡಿ: ಮಲಗುವ ಮುನ್ನ ನೀವು ಯೋಗ ಅಥವಾ ಧ್ಯಾನವನ್ನು ಸಹ ಮಾಡಬಹುದು. ಇದು ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹವನ್ನು ವಿಶ್ರಾಂತಿ ಸ್ಥಿತಿಯಲ್ಲಿರಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ರಾತ್ರಿಯಲ್ಲಿ ಆಳವಾದ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಮಲಗುವ ಮುನ್ನ ನಿಮ್ಮ ಪಾದಗಳಿಗೆ ಮಸಾಜ್ ಮಾಡಿ: ಮಲಗುವ ಮುನ್ನ ನಿಮ್ಮ ಪಾದಗಳಿಗೆ ಮಸಾಜ್ ಮಾಡಿ. ಸೌಮ್ಯವಾದ ಫೂಟ್ ಮಸಾಜ್ ನರಗಳನ್ನು ಸಡಿಲಗೊಳಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ, ಇದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇತಿಹಾಸ ಬರೆದ ‘ಬ್ರಮಯುಗಂ’ ಆಸ್ಕರ್​​ನಿಂದ ವಿಶೇಷ ಗೌರವ – Kannada News | Mammootty starrer Bramayugam movie to premier in Oscars special screening

ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ಭಿನ್ನವಾದ ಚಿತ್ರರಂಗವೆಂದರೆ ಅದು ಮಲಯಾಳಂ (Malayalam) ಚಿತ್ರರಂಗ. ಇತರೆ ಕೆಲ ಜನಪ್ರಿಯ ಮತ್ತು ದೊಡ್ಡ ಚಿತ್ರರಂಗಗಳು ಕಮರ್ಶಿಯಲ್, ಮಾಸ್ ಸಿನಿಮಾಗಳು, ಪ್ಯಾನ್ ಇಂಡಿಯಾ ರೀಚ್, ಭರ್ಜರಿ ಮಾರ್ಕೆಟಿಂಗ್​​ಗಳ ಕಡೆ ಗಮನ ವಹಿಸಿದ್ದರೆ ಮಲಯಾಳಂ ಸಿನಿಮಾಗಳು ಇದೆಲ್ಲವನ್ನೂ ಬದಿಗೆ ಸರಿಸಿ ಕೇವಲ ಭಿನ್ನ ಕತೆ, ಮಾನವೀಯ ಮೌಲ್ಯಗಳು, ಸ್ವಚ್ಛ ಮನರಂಜನೆಗೆ ಒತ್ತು ನೀಡಿ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಹಲವು ಅತ್ಯದ್ಭುತ ಸಿನಿಮಾಗಳನ್ನು ಮಲಯಾಳಂ ಚಿತ್ರರಂಗ ನೀಡುತ್ತಾ ಬಂದಿದೆ. ಅವುಗಳಲ್ಲಿ ಇತ್ತೀಚೆಗಿನ ‘ಬ್ರಮಯುಗಂ’ ಸಹ ಒಂದು. ಇದೀಗ ಈ ಸಿನಿಮಾಕ್ಕೆ ಸ್ವತಃ ಆಸ್ಕರ್ ಗೌರವ ಸಲ್ಲಿಸುತ್ತಿದೆ.

ಮಮ್ಮುಟಿ ನಟನೆಯ ‘ಬ್ರಮಯುಗಂ’ ಸಿನಿಮಾವನ್ನು ಈಗಾಗಲೇ ವಿದೇಶದ ಕೆಲವು ಸಿನಿಮಾ ತರಗತಿಗಳಲ್ಲಿ ಪಠ್ಯವಾಗಿ ಬಳಸಾಗುತ್ತಿದೆ. ಇದೀಗ ಈ ಸಿನಿಮಾಕ್ಕೆ ಮತ್ತೊಂದು ವಿಶೇಷ ಗೌರವ ಲಭಿಸಿದೆ, ಅದೂ ಆಸ್ಕರ್​​ ಅಥವಾ ಅಕಾಡೆಮಿ ಆಫ್ ಮೋಷನ್ ಪಿಕ್ಚರ್​ ಆರ್ಟ್ಸ್ ಆಂಡ್ ಸೈನ್ಸ್ ಕಡೆಯಿಂದ.

ಇತ್ತೀಚೆಗಷ್ಟೆ ಆಸ್ಕರ್ಸ್ 2026ರ ನಾಮಿನೇಷನ್ ಘೋಷಣೆ ಆಯ್ತು. ಭಾರಿ ನಿರೀಕ್ಷೆ ಹುಟ್ಟಿಸಿದ್ದ ‘ಹೋಮ್​​ಬೌಂಡ್’ ಸಿನಿಮಾ ಆಸ್ಕರ್ ರೇಸಿನಿಂದ ಹೊರಬಿದ್ದಿದ್ದು ಭಾರತೀಯ ಸಿನಿಮಾ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿತ್ತು. ಆದರೆ ಭಾರತೀಯ ಸಿನಿಮಾ ಪ್ರೇಮಿಗಳು ಪೂರ್ಣವಾಗಿ ನಿರಾಶರಾಗಬೇಕಿಲ್ಲ. ಆಸ್ಕರ್ಸ್​​ನ ವಿಶೇಷ ಸಿನಿಮಾ ಸ್ಕ್ರೀನಿಂಗ್​​ಗೆ ಭಾರತದ ಅದರಲ್ಲೂ ಮಲಯಾಳಂನ ‘ಬ್ರಮಯುಗಂ’ ಆಯ್ಕೆ ಆಗಿದೆ. ಫೆಬ್ರವರಿ 12 ರಂದು ಲಾಸ್ ಏಂಜಲ್ಸ್​ನ ಆಸ್ಕರ್ಸ್​ ಮ್ಯೂಸಿಯಂನಲ್ಲಿ ವಿಶೇಷ ಪ್ರದರ್ಶನ ಕಾಣಲಿದೆ.

ಇದನ್ನೂ ಓದಿ:Eko: ಮಲಯಾಳಂ ಸಿನಿಮಾ ಮೂಲಕ ಮತ್ತೊಮ್ಮೆ ಯಶಸ್ಸು ಕಂಡ ರಾಜ್ ಬಿ. ಶೆಟ್ಟಿ

ಈ ವಿಶೇಷ ಪ್ರದರ್ಶನಕ್ಕೆ ಸಿನಿಮಾದ ನಿರ್ದೇಶಕ ರಾಹುಲ್ ಸದಾಶಿವನ್ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ‘ಬ್ರಮಯುಗಂ’ ಸಿನಿಮಾದ ತಂತ್ರಜ್ಞಾನ ನೈಪುಣ್ಯತೆ ಮತ್ತು ಸಿನಿಮಾದ ಮುಖ್ಯ ಪಾತ್ರಧಾರಿಯಾದ ಮಮ್ಮುಟಿ ಅವರ ಅದ್ಭುತ ನಟನೆಗಾಗಿ ಈಗಾಗಲೇ ಸಾಕಷ್ಟು ಪ್ರಶಂಸೆ ಮನ್ನಣೆಯನ್ನು ಸಿನಿಮಾ ಗಳಿಸಿಕೊಂಡಿದೆ. ಇದೀಗ ಆಸ್ಕರ್ಸ್ ಸಹ ಈ ಸಿನಿಮಾದ ಗುಣಮಟ್ಟವನ್ನು ಗುರುತಿಸಿ ವಿಶೇಷ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿದೆ.

ಆಸ್ಕರ್ಸ್​​ನ ವಿಶೇಷ ಪ್ರದರ್ಶನಕ್ಕೆ ಆಯ್ದುಕೊಂಡ ಮೊಟ್ಟ ಮೊದಲ ಭಾರತೀಯ ಸಿನಿಮಾ ‘ಬ್ರಹ್ಮಯುಗಂ’ ಎನ್ನಲಾಗುತ್ತಿದೆ. ಇದೊಂದು ಹಾರರ್ ಕಥಾನಕ ಹೊಂದಿದ ಸಿನಿಮಾ ಆಗಿದೆ. ಸಿನಿಮಾಕ್ಕೆ 2024ರ ಕೇರಳ ರಾಜ್ಯ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರೆತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಪೊಲೀಸರಿಗೆ ಭರ್ಜರಿ ಗಿಫ್ಟ್, ಕುಟುಂಬಸ್ಥರ ಜತೆ ಕಾಲ ಕಳೆಯಲು ರಜೆ ಭಾಗ್ಯ – Kannada News | Karnataka DG IGP Saleem Orders Leave to Police Staff for anniversary and birthday

ಬೆಂಗಳೂರು, (ಜನವರಿ 29)ಕರ್ನಾಟಕ ಪೊಲೀಸ್  (Police) ಸಿಬ್ಬಂದಿಯ ಹುಟ್ಟುಹಬ್ಬ (Birthday) ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ (Wedding Anniversary) ಸಾಂದರ್ಭಿಕ ರಜೆ ನೀಡುವಂತೆ ಆದೇಶ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದವರ ಜೊತೆ ಕಾಲ ಕಳೆಯಲು ಅನುಕೂಲವಾಗುವಂತೆ ಆ ದಿನ ಕಡ್ಡಾಯ ರಜೆ ನೀಡಿ. ಇದರಿಂದ ಒತ್ತಡದ ಕೆಲಸ ಹಾಗೂ ವ್ಯಯಕ್ತಿಕ ಜೀವನ ಸಮತೋಲನಗೆ ರಜೆ ಸಹಾಯಕವಾಗಲಿದೆ. ಹೀಗಾಗಿ ಸಾಂದರ್ಭಿಕ ರಜೆ ನೀಡುವಂತೆ ಆದೇಶಿಸಿದ್ದಾರೆ.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದವರ ಜೊತೆ ಕಾಲ ಕಳೆಯಲು ಅನುಕೂಲವಾಗುವಂತೆ ಆ ದಿನ ಕಡ್ಡಾಯ ರಜೆ ನೀಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಒಳಾಡಳಿತ ಇಲಾಖೆಯು ಪೊಲೀಸ್ ಮಹಾನಿರ್ದೇಶಕರಿಗೆ (DG & IGP) ಅಧಿಕೃತ ಪತ್ರ ಬರೆದಿತ್ತು. ಇದನ್ನು ಪರಿಶೀಲಿಸಿದ ಡಿಜಿ ಡಾ ಸಲೀಂ ಅವರು, ಕಡ್ಡಾಯ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಎಚ್ಚರ, ಟ್ರಾಫಿಕ್ ಚಲನ್ ಪಾವತಿಗೆಂದು ಸಿಕ್ಕಸಿಕ್ಕ ಲಿಂಕ್ ಕ್ಲಿಕ್ ಮಾಡ್ಬೇಡಿ: 2.32 ಲಕ್ಷ ರೂ. ಕಳಕೊಂಡ ಬೆಂಗಳೂರು ಟೆಕ್ಕಿ

ಯಾರಿಗೆಲ್ಲ ಈ ರಜೆ ಸಿಗಲಿದೆ?

ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ನೀಡಿದ ಸಲಹೆಯ ಮೇರೆಗೆ ಈ ನಿರ್ಧಾರಕ್ಕೆ ಚಾಲನೆ ಸಿಕ್ಕಿದೆ. ಪ್ರಮುಖವಾಗಿ ಕೆಳ ಹಂತದ ಸಿಬ್ಬಂದಿಗಳಾದ ಪೊಲೀಸ್ ಕಾನ್ಸ್‌ಟೇಬಲ್ (PC), ಹೆಡ್ ಕಾನ್ಸ್‌ಟೇಬಲ್ (HC) ಸಹಾಯಕ ಪೊಲೀಸ್ ಉಪನಿರೀಕ್ಷಕರು (ASI), ಈ ಶ್ರೇಣಿಯ ಅಧಿಕಾರಿಗಳಿಗೆ ರಜೆ ಸೌಲಭ್ಯ ಸಿಗಲಿದೆ.

ಡಿಜಿ-ಐಜಿಪಿ ಹೊರಡಿಸಿದ ಆದೇಶದಲ್ಲೇನಿದೆ?

ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಜಾರಿಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವಗಳಂತಹ ವೈಯಕ್ತಿಕ ಕಾರ್ಯಕ್ರಮಗಳನ್ನು ಆಚರಿಸುವುದು ಬಹಳ ಮಹತ್ವದ್ದಾಗಿದೆ. ಈ ವಿಶೇಷ ದಿನಗಳಲ್ಲಿ ರಜೆ ಪಡೆಯುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾವನಾತ್ಮಕವಾಗಿ ಪುನಶ್ಚತನಗೊಳ್ಳಲು, ಕುಟುಂಬದೊಂದಿಗೆ ಸಮಯ ಕಳೆಯಲು ಹಾಗೂ ಕರ್ತವ್ಯ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಮನೋಬಲ ವೃದ್ಧಿಯಾಗುತ್ತದೆ. ಒತ್ತಡ ಲಡಿಮೆಯಾಗುತ್ತದೆ ಮತ್ತು ಒಟ್ಟಾರೆ ಕೆಲಸದ ತೃಪ್ತಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಈ ಮಾನವೀಯ ಕಾರ್ಯವು ಅವರ ತ್ಯಾಗಗಳನ್ನು ಗುರುತಿಸುವುದರ ಜೊತೆಗೆ ನಿಷ್ಠೆಯನ್ನು ಬೆಳೆಸುತ್ತದೆ ಮತ್ತು ಪೊಲೀಸ್ ಪಡೆಯ ಬದ್ಧತೆಯನ್ನು ಬಲಪಡಿಸಿ, ಸೇವೆಯಲ್ಲಿ ಉತ್ತಮ ಶಿಸ್ತು ಮತ್ತು ಕಾರ್ಯಕ್ರಮತೆಗೆ ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಜೆ ಕೋರಿದಲ್ಲಿ, ತಪ್ಪದೆ ರಜೆ ಮಂಜೂರು ಮಾಡಲು ಎಲ್ಲಾ ಘಟಕಾಧಿಕಾರಿಗಳಿಗೆ ನಿರ್ದೇಶಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ರಜೆ ಬಗ್ಗೆ ಪತ್ರದ ಬರೆದಿದ್ದ ಒಳಾಡಳಿತ ಇಲಾಖೆ

ಪೊಲೀಸ್ ಸಿಬ್ಬಂದಿಗೆ ರಜೆ ನೀಡುವ ಕುರಿತಂತೆ ರಾಜ್ಯ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ರಾಜ್ಯದ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಅದರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ನಾಗರೀಕ ಸಮಾಜದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಎಂಬುವರು ಪತ್ರವನ್ನು ಬರೆದಿರುವುದನ್ನು ಉಲ್ಲೇಖಿಸಿದ್ದರು.

ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ ಟೇಬಲ್ ನಿಂದ ಎಎಸ್‌ಐ ದರ್ಜೆಯವರೆಗಿನ ಸಿಬ್ಬಂದಿಗಳ ಹುಟ್ಟು ಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕಡ್ಡಾಯ ರಜೆ ನೀಡುವಂತೆ ಕೋರಿರುವುದಾಗಿ ತಿಳಿಸಿದ್ದರು. ಈ ಪತ್ರದ ಬಗ್ಗೆ ನಿಯಮಾನುಸಾರ ಮುಂದಿನ ಕ್ರಮ ವಹಿಸುವಂತೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರಿಗೆ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಿರ್ದೇಶಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮ್ಯಾಚ್ ಫಿಕ್ಸಿಂಗ್: ಬಾಂಗ್ಲಾದೇಶದ ತಮೀಮ್ ರೆಹಮಾನ್​ಗೆ ಶ್ರೀಲಂಕಾದಲ್ಲಿ ಜೈಲು, ಭಾರಿ ದಂಡ – Kannada News | LPL Match Fixing Scandal: Tamim Rahman Jailed 4 Years, Banned 5. Sri Lanka’s tough stance

ಶ್ರೀಲಂಕಾದ ಟಿ20 ಲೀಗ್‌ನಲ್ಲಿ ( Sri Lanka cricket) ನಡೆದ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಲಂಕಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಕೊಲಂಬೊ ಹೈಕೋರ್ಟ್ ಬಾಂಗ್ಲಾದೇಶದ ತಮೀಮ್ ರೆಹಮಾನ್ (Tamim Rahman) ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ್ದು, ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಅವರನ್ನು ಐದು ವರ್ಷಗಳ ಕಾಲ ಅಮಾನತುಗೊಳಿಸಲಾಗಿದ್ದು, 24 ಮಿಲಿಯನ್ ಶ್ರೀಲಂಕಾ ರೂಪಾಯಿ (ಸುಮಾರು 80 ಸಾವಿರ ಅಮೆರಿಕನ್ ಡಾಲರ್) ದಂಡ ವಿಧಿಸಲಾಗಿದೆ. ತಮೀಮ್ ರೆಹಮಾನ್ ಒಂದೆಡೆ ಬಾಂಗ್ಲಾದೇಶ ಮೂಲದವರಾಗಿದ್ದರೆ, ಮತ್ತೊಂದೆಡೆ ಬ್ರಿಟಿಷ್ ಪ್ರಜೆ. ಪಂದ್ಯಾವಳಿಯ ಸಮಯದಲ್ಲಿ ಬೆಟ್ಟಿಂಗ್ ವ್ಯವಸ್ಥೆ ಮಾಡಿದ್ದಾಗಿ ಮತ್ತು ಆಟಗಾರನೊಂದಿಗೆ ಫಿಕ್ಸಿಂಗ್ ಬಗ್ಗೆ ಚರ್ಚಿಸಿದ್ದಾಗಿ ತಮೀಮ್ ರೆಹಮಾನ್ ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ.

2024 ರಲ್ಲಿ ತಮೀಮ್ ರೆಹಮಾನ್ ಬಂಧನ

ಶ್ರೀಲಂಕಾದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ತಮೀಮ್ ರೆಹಮಾನ್ ಅವರನ್ನು ದೋಷಿ ಎಂದು ಘೋಷಿಸಲಾಗಿದೆ. ಆಟಗಾರನ ಬಳಿ ತಮೀಮ್ ರೆಹಮಾನ್ ಮ್ಯಾಚ್ ಫಿಕ್ಸಿಂಗ್ ಆಮೀಷ ಒಡ್ಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಆಟಗಾರ ಈ ಮಾಹಿತಿಯನ್ನು ಅಧಿಕಾರಿ ಬಳಿ ಹೇಳಿದ್ದಾನೆ. ಕೂಡಲೇ ಈ ಬಗ್ಗೆ ದೂರು ದಾಖಲಿಸಿ 2024 ರಲ್ಲಿ ತಮೀಮ್ ರೆಹಮಾನ್ ಅವರನ್ನು ಬಂಧಿಸಲಾಗಿತ್ತು. ಕೊಲಂಬೊ ವಿಮಾನ ನಿಲ್ದಾಣದಲ್ಲಿ ದುಬೈಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ರೆಹಮಾನ್ ಅವರ ಬಂಧನವಾಗಿತ್ತು. ರೆಹಮಾನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಮೊದಲು ಹಲವಾರು ವಾರಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು.

ಶ್ರೀಲಂಕಾ ಪ್ರೀಮಿಯರ್ ಲೀಗ್ ಆರಂಭವಾದ ನಂತರ ಅಧಿಕಾರಿಯೊಬ್ಬರ ವಿರುದ್ಧ ಇದು ಮೊದಲ ಪ್ರಮುಖ ಕಾನೂನು ಕ್ರಮವಾಗಿದೆ. ದಂಬುಲ್ಲಾ ಥಂಡರ್ಸ್ ತಂಡದ ವ್ಯವಸ್ಥಾಪಕ ಮುಜಿಬುರ್ ರೆಹಮಾನ್ ಕೂಡ ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ. ಪಾಕಿಸ್ತಾನಿ ಪ್ರಜೆ ಮುಜಿಬುರ್ ರೆಹಮಾನ್ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ ಎಂದು ವರದಿಯಾಗಿದೆ. ಈ ತೀರ್ಪಿನೊಂದಿಗೆ, ಶ್ರೀಲಂಕಾ ಕ್ರೀಡೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರದ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

T20 World Cup 2026: ಟಿ20 ವಿಶ್ವಕಪ್​ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ

ಲಂಕಾ ಪ್ರೀಮಿಯರ್ ಲೀಗ್‌ ಇತಿಹಾಸ

ಲಂಕಾ ಪ್ರೀಮಿಯರ್ ಲೀಗ್ 2020 ರಲ್ಲಿ ಪ್ರಾರಂಭವಾಯಿತು. ಶ್ರೀಲಂಕಾದ ಐದು ನಗರಗಳ ಹೆಸರಿನ ಐದು ತಂಡಗಳು ಲೀಗ್‌ನಲ್ಲಿ ಸ್ಪರ್ಧಿಸುತ್ತವೆ. ಈವರೆಗೆ ಈ ಲೀಗ್​ನಲ್ಲಿ ಐದು ಸೀಸನ್ ನಡೆದಿದ್ದು, ಪ್ರಸ್ತುತ ಜಾಫ್ನಾ ಕಿಂಗ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ತಂಡ ಇದುವರೆಗೆ ನಾಲ್ಕು ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:23 pm, Thu, 29 January 26

Source link

ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ 2026: ಉಚಿತ ಪ್ರವೇಶಾವಕಾಶ – Kannada News | BISFF 2026 Free Submissions Open for Karnataka Short Films Oscar Qualifying Festival

ಸಿನಿಮಾ ನಿರ್ಮಾಣ, ನಿರ್ದೇಶನದಲ್ಲಿ ಆಸಕ್ತಿ ಇರುವವರಿಗೆ ಚಿತ್ರೋತ್ಸವಗಳು (Film Festival) ಅತ್ಯುತ್ತಮ ವೇದಿಕೆ. ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನಗೊಂಡರೆ ಅದರ ಹಿರಿಮೆಯೇ ಬೇರೆ. ಬರೀ ಪೂರ್ಣಾವಧಿ ಸಿನಿಮಾಗಳಿಗೆ ಮಾತ್ರವಲ್ಲ, ಕಿರುಚಿತ್ರಗಳಿಗೂ ಈ ಮಾತು ಅನ್ವಯ. ಎಷ್ಟೋ ನಿರ್ದೇಶಕರು ಮೊದಲ ಹೆಜ್ಜೆ ಇಡುವುದೇ ಕಿರುಚಿತ್ರಗಳ ಮೂಲಕ. ಕಿರುಚಿತ್ರಗಳ ಫೆಸ್ಟಿವಲ್ (Short Film Festival) ಕೂಡ ಸಿನಿಮಾಸಕ್ತರಿಗೆ ಹಲವು ಅವಕಾಶಗಳನ್ನು ಒದಗಿಸಿಕೊಡುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ, ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ (BISFF). ಈ ಚಿತ್ರೋತ್ಸವದ 2026ನೇ ವರ್ಷದ ಆವೃತ್ತಿಗೆ ಪ್ರವೇಶ ಆರಂಭ ಆಗುತ್ತಿದೆ.

ಈ ಬಾರಿ ರಾಜ್ಯದ ಚಲನಚಿತ್ರ ನಿರ್ಮಾತೃಗಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸುತ್ತಿರುವುದು ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದ ವಿಶೇಷವಾಗಿದೆ. ಅಂದಹಾಗೆ, ಇದು ಭಾರತದ ಏಕೈಕ ಆಸ್ಕರ್ ಅಕಾಡೆಮಿ ಅರ್ಹತೆ ಪಡೆದ ಕಿರುಚಿತ್ರೋತ್ಸವ ಎಂಬುದು ಗಮನಿಸಬೇಕಾದ ಅಂಶ. ಈ ಕಿರುಚಿತ್ರೋತ್ಸವ ತನ್ನ 2026ನೇ ಸಾಲಿನ ಆವೃತ್ತಿಗೆ ಅರ್ಜಿ ಆಹ್ವಾನಿಸಿದೆ.

ಫೆಬ್ರವರಿ 1ರಿಂದ ಕಿರುಚಿತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭ ಆಗಲಿದೆ ಎಂದು ‘ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ’ದ ಆಯೋಜಕರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಿರುಚಿತ್ರಗಳ ಸಲ್ಲಿಕೆಗೆ ಕೆಲವು ಮಾನದಂಡಗಳು ಇವೆ. ಸಲ್ಲಿಕೆ ದಿನಾಂಕ ಮತ್ತು ಮಾನದಂಡಗಳ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಕರ್ನಾಟಕದ ಪ್ರತಿಭೆಗಳಿಗೆ ಸುವರ್ಣಾವಕಾಶ: ಕನ್ನಡ ಹಾಗೂ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, BISFF ‘ಕರ್ನಾಟಕ ವಿಭಾಗ’ದ ಸ್ಪರ್ಧೆಗೆ ಫೆಬ್ರವರಿ 28ರವರೆಗೆ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಮಾರ್ಚ್ 1ರಿಂದ ಸಾಮಾನ್ಯ ಶುಲ್ಕ ಅನ್ವಯವಾಗಲಿದೆ. ಅಂತಿಮ ಸಲ್ಲಿಕೆಗೆ ಏಪ್ರಿಲ್ 30 ಕಡೆಯ ದಿನಾಂಕ ಆಗಿರಲಿದೆ.

ಇದನ್ನೂ ಓದಿ: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಈ ಬಾರಿ ಏನೆಲ್ಲ ಇರಲಿದೆ?

ಕಿರುಚಿತ್ರಗಳ ಸಲ್ಲಿಕೆಗೆ ಅರ್ಹತಾ ಮಾನದಂಡಗಳು ಹೀಗಿವೆ: ಕಿರುಚಿತ್ರಗಳು ಕನ್ನಡ ಅಥವಾ ಕರ್ನಾಟಕದ ಇತರೆ ಪ್ರಾದೇಶಿಕ ಭಾಷೆಗಳಲ್ಲಿರಬೇಕು. ಚಿತ್ರದ ಅವಧಿ 30 ನಿಮಿಷಗಳಿಗಿಂತ ಕಡಿಮೆ ಇರಬೇಕು. 2024ರ ಜನವರಿ 1ರ ನಂತರ ನಿರ್ಮಾಣವಾದ ಚಿತ್ರಗಳಾಗಿರಬೇಕು. ಕಡ್ಡಾಯವಾಗಿ ಇಂಗ್ಲಿಷ್ ಉಪಶೀರ್ಷಿಕೆಗಳನ್ನು ಹೊಂದಿರಬೇಕು. ಆಸಕ್ತರು ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗಾಗಿ ಅಧಿಕೃತ ವೆಬ್‌ಸೈಟ್ www.bisff.in ಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ. Email: bisffblr@gmail.com

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಿಮಪಾತದಿಂದ ಉತ್ತರಾಖಂಡದ 77 ಗ್ರಾಮಗಳಿಗೆ ಸಂಕಷ್ಟ, ರಸ್ತೆಗಳು ಬಂದ್, ಪ್ರವಾಸಿಗರು ಕಂಗಾಲು – Kannada News | Snowfall in Uttarakhand 77 villages affected roads blocked in Chamoli

ಡೆಹ್ರಾಡೂನ್, ಜನವರಿ 29: ಉತ್ತರಾಖಂಡದಲ್ಲಿ ಹಿಮಪಾತದ (Snowfall) ಪರಿಣಾಮದಿಂದ ಅನೇಕ ಪ್ರವಾಸಿಗರು ಮಧ್ಯದಲ್ಲೇ ಸಿಲುಕಿಕೊಂಡಿದ್ದಾರೆ. ಚಮೋಲಿಯಲ್ಲಿ 77 ಗ್ರಾಮಗಳು ಹಿಮಪಾತದಿಂದ ತೊಂದರೆಗೆ ಸಿಲುಕಿವೆ, ರಸ್ತೆಗಳ ಸಂಪರ್ಕ ಸ್ಥಗಿತಗೊಂಡಿದೆ, ಪ್ರವಾಸಿಗರು ತಮ್ಮ ಊರನ್ನು ತಲುಪಿದರೆ ಸಾಕಪ್ಪ ಎಂದು ಚಡಪಡಿಸುತ್ತಿದ್ದಾರೆ. ಭಾರೀ ಹಿಮಪಾತವಾಗುತ್ತಿರುವುದರಿಂದ ಪ್ರವಾಸಿಗರು ಹೆಚ್ಚು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಸೂಚಿಸಿದೆ.

ಕಳೆದ 4 ದಿನಗಳಿಂದ ಉತ್ತರಾಖಂಡದಲ್ಲಿ ಹವಾಮಾನ ಅಸ್ಥಿರವಾಗಿದ್ದು, ತಡರಾತ್ರಿಯ ಮಳೆ, ಆಲಿಕಲ್ಲು ಮಳೆ ಮತ್ತು ಭಾರೀ ಹಿಮಪಾತವು ಹಲವಾರು ಜಿಲ್ಲೆಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅವುಗಳಲ್ಲಿ ಚಮೋಲಿ ಅತ್ಯಂತ ಹೆಚ್ಚು ಪರಿಣಾಮ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಚಮೋಲಿಯ 77ಕ್ಕೂ ಹೆಚ್ಚು ಗ್ರಾಮಗಳು ಹಿಮದಿಂದ ಆವೃತವಾಗಿವೆ. ಜ್ಯೋತಿರ್ಮಠ-ಮಲಾರಿ ಹೆದ್ದಾರಿ ಸೇರಿದಂತೆ 7 ಪ್ರಮುಖ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಇದನ್ನೂ ಓದಿ: Video: ಜಮ್ಮು ಮತ್ತು ಕಾಶ್ಮೀರದ ರೆಸಾರ್ಟ್​ ಮೇಲೆ ಭಾರಿ ಹಿಮಪಾತ

ಉತ್ತರಕಾಶಿ ಜಿಲ್ಲೆಯಲ್ಲಿಯೂ ಹಿಮಪಾತವಾಗಿದೆ. ಯಮುನೋತ್ರಿ, ಗಂಗೋತ್ರಿ, ಹರ್ಸಿಲ್, ಮುಖ್ಬಾ, ಸುಖಿ ಟಾಪ್, ರಾಡಿ ಟಾಪ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗಿದೆ. ಇಲ್ಲಿ ಅಪಘಾತಗಳನ್ನು ತಪ್ಪಿಸಲು ಸಣ್ಣ ವಾಹನಗಳನ್ನು ನಿಷೇಧಿಸಲಾಗಿದೆ.

ಅನಗತ್ಯ ಪ್ರಯಾಣಗಳನ್ನು ಕೈಗೊಳ್ಳದಂತೆ ಅಧಿಕಾರಿಗಳು ಸ್ಥಳೀಯರು ಮತ್ತು ಪ್ರಯಾಣಿಕರನ್ನು ಒತ್ತಾಯಿಸಿದ್ದಾರೆ. ಪರಿಸ್ಥಿತಿಗಳಿಗೆ ಅನುಗುಣವಾಗಿ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಸಾಧ್ಯತೆ ಇರುವುದರಿಂದ ಅಗತ್ಯವಿದ್ದರೆ ಮಾತ್ರ ಪರ್ವತಗಳಿಗೆ ಪ್ರಯಾಣಿಸಲು ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಅದರಲ್ಲಿರುವುದು ಯಾವ ಮ್ಯಾಟರ್ ಗೊತ್ತಾ?

ಬೆಂಗಳೂರು, ಜನವರಿ 29: ವಿಧಾನಸಭೆಯಲ್ಲಿ ಬಳ್ಳಾರಿ ಬ್ಯಾನರ್​ ಗಲಾಟೆ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಶೋಕ್,​​ ಶಾಸಕರೊಬ್ಬರ ಗಂಭೀರ ಹೇಳಿಕೆಯನ್ನು ಉಲ್ಲೇಖಿಸಿದರು. ಅಷ್ಟೇ ಅಲ್ಲದೆ ಆ ಕುರಿತ ಆಡಿಯೋ, ವಿಡಿಯೋ ಸಾಕ್ಷಿಗಳಿರುವ ಪೆನ್​ ಡ್ರೈವ್​ ತೋರಿಸಿದರು. “ಕೊಲ್ಲಲು ಸಾವಿರಾರು ದಾರಿಗಳಿವೆ, ನಾನು ಅಂದುಕೊಂಡರೆ ಐದು ನಿಮಿಷದಲ್ಲಿ ಬಳ್ಳಾರಿಯನ್ನು ಭಸ್ಮ ಮಾಡಬಲ್ಲೆ” ಎಂದು ಆ ಶಾಸಕರು ಹೇಳಿರುವ ಹೇಳಿಕ ಉಲ್ಲೇಸಿದರು. ಈ ವಿಚಾರದಲ್ಲಿ ಗೃಹಸಚಿವರು ಸುಳ್ಳು ಎಂದು ಸಾಬೀತುಪಡಿಸಿದರೆ ಕ್ಷಮಾಪಣೆ ಕೇಳಲು ಸಿದ್ಧ ಎಂದು ಆರ್​​. ಅಶೋಕ್ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version