ದಿನ ಭವಿಷ್ಯ: ಇಂದು ಈ ರಾಶಿಯವರ ಮನೋಭಾವ ಎಲ್ಲದಕ್ಕೂ ನಕಾರಾತ್ಮಕವಾಗಿ ಇರಲಿದೆ – Kannada News | Horoscope April 17 Friday 2026; Dina Rashi Bhavishya Today, Checkout the details here

ಮೇಷ ರಾಶಿ :

ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ. ಒಳ್ಳೆಯ ವ್ಯಕ್ತಿಗಳ ಪರಿಚಯದಿಂದ ಲಾಭ ಸಿಗಬಹುದು. ಗೃಹದಲ್ಲಿ ಸಂಭ್ರಮ. ಸ್ತ್ರೀಯರ ಮೂಲಕ ಸಹಾಯ ಲಭಿಸುತ್ತದೆ. ಕುಟುಂಬದಲ್ಲಿ ಹೆಚ್ಚು ನೆಮ್ಮದಿ ಅನುಭವಿಸುತ್ತೀರಿ. ಶ್ರದ್ಧಾ, ನಂಬಿಕೆಯಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುತ್ತವೆ. ವಾಹನ ಚಾಲನೆಯಿಂದ ಆಯಾಸವಾದೀತು. ನಿಮ್ಮೆದುದು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗುವುದು.

ವೃಷಭ ರಾಶಿ:

ಸೋಮಾರಿತನದಿಂದ ಯಾವುದೇ ಅವಕಾಶ ತಪ್ಪುವಂತೆ ಮಾಡಿಕೊಳ್ಳಬೇಡಿ. ನಿಮ್ಮ ಶ್ರಮಕ್ಕೆ ಖಂಡಿತ ನೀವು ಫಲಿತಾಂಶ ಪಡೆಯುತ್ತೀರಿ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರದಲ್ಲಿ ಗೊಂದಲವಿರುವುದು. ನಿಮ್ಮವರನ್ನು ಕಂಡು ನೀವು ಅಸೂಯೆಪಡಬಹುದು. ಕಾರ್ಯದ ಆರಂಭದಲ್ಲಿ ಒತ್ತಡವು ಹೆಚ್ಚು ಇರುವುದು. ಉಪಕಾರದ ಕೃತಜ್ಞತೆ ಇರಲಿ. ನಿಮ್ಮ ಇಂದಿನ ಖರ್ಚಿಗೆ ಕಡಿವಾಣ ಹಾಕುವುದು ಅಸಾಧ್ಯವಾಗಬಹುದು. ದುರ್ಬಲರ ಮೇಲೆ ನೀವು ಸಿಟ್ಟಾಗುವಿರಿ.

ಮಿಥುನ ರಾಶಿ:

ಅಯಾಸವಿದ್ದರೂ ಇನ್ನೊಬ್ಬರ ಒತ್ತಾಯಕ್ಕೆ ಅವರೊಂದಿಗೆ ವಾಯುವಿಹಾರಕ್ಕೆಂದು ಹೋಗುವಿರಿ. ಸಾಮಾಜಿಕವಾಗಿ ನಿಮಗೆ ಗೌರವ ಸಿಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಪ್ರಾಯಾಣಿಸುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಮಿತ್ರರಿಂದ ಸಂತೋಷದ ಸುದ್ದಿ ಕೇಳಬಹುದು. ಏನಾದರೊಂದು ಕಾರ್ಯವನ್ನು ನೀವು ಮಾಡುತ್ತಲೇ ಇರುವುದು ನಿಮಗೆ ಇಷ್ಟವಾಗುವುದು. ಕಛೇರಿಯಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ನಿಮ್ಮ ತಪ್ಪುಗಳು ನಿಮಗೆ ಗೊತ್ತಾಗದೇ ಇನ್ನೊಬ್ಬರು ತಿಳಿಸಬೇಕಾಗುವುದು.

ಕರ್ಕಾಟಕ ರಾಶಿ:

ನಿಮ್ಮ ಸೋಮಾರಿತನದಿಂದ ಕೆಲವೊಂದು ಕೆಲಸಗಳು ಸ್ಥಗಿತಗೊಳ್ಳಬಹುದು. ಸೋಮಾರಿತನದಿಂದ ನಿಮ್ಮ ಸಮಯ ವ್ಯರ್ಥವಾಗಬಾರದು. ಮಕ್ಕಳ ವಿಚಾರದಲ್ಲಿ ಹೆಚ್ಚು ಸಮಯ ವಹಿಸುವ ಅವಶ್ಯಕತೆ ಇದೆ. ಹಣಕಾಸು ಸ್ಥಿತಿ ಸ್ಥಿರವಾಗಿರುತ್ತದೆ. ಇಷ್ಟಾರ್ಥವು ನಿನಗೆ ಸಿದ್ಧಿಯಾಗುವ ಬಗ್ಗೆ ನಿಮಗೆ ಅನುಮಾನವಿರಲಿದೆ. ಇನ್ನೊಬ್ಬರ ಬಗ್ಗೆ ಸದಾ ಅಸಮಾಧಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧಾನ ಮಾಡಬೇಕಾದೀತು. ಅತಿಯಾದ ಆತ್ಮವಿಶ್ವಾಸ ಕಾರ್ಯವನ್ನು ಹಾಳುಮಾಡಬಹುದು.

ಸಿಂಹ ರಾಶಿ:

ಈ ದಿನ ನಿಮಗೆ ಬದಲಾವಣೆಗಳ ಸಮಯ, ಹೊಸ ಜನರ ಪರಿಚಯದಿಂದ ಹೊಸ ವಿಚಾರಗಳು ಬರುತ್ತವೆ. ಈ ವೇಳೆ ಕುಟುಂಬದಲ್ಲಿ ಗೊಂದಲಗಳನ್ನು ದೂರ ಇಡಲು ಯತ್ನಿಸಿ. ದುರಭ್ಯಾಸದಿಂದ ಎಲ್ಲ ಬಳಿಯಿಂದ ನಿಂದನೆ. ಇಂದು ನಿಮಗೆ ದಾನ ಮಾಡುವ ಮನಸ್ಸಾಗುವುದು. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ಮೇಲೆ‌ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ.

ಕನ್ಯಾ ರಾಶಿ:

ಉತ್ಸಾಹ, ತಾಳ್ಮೆ ನಿಮಗೆ ಈ ದಿನ ಹೊಸ ಶಕ್ತಿ ನೀಡಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವ ಸಾಧ್ಯತೆ ಇದೆ. ಆರ್ಥಿಕ ಲಾಭ ಸಂಭವಿಸಬಹುದು. ಖರೀದಿ ಅಥವಾ ಅಲಂಕಾರಿಕ ವಸ್ತು ಖರೀದಿಸುವ ಸಾಧ್ಯತೆ ಇದೆ. ಎಲ್ಲದಕ್ಕೂ ತಂದೆ ತಾಯಿಗಳನ್ನು ದೂರುತ್ತ ಇರುವುದು ಬೇಡ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಕಾರ್ಯದ ಒತ್ತಡದಿಂದ ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು.

ತುಲಾ ರಾಶಿ:

ಹೂಡಿಕೆಗೆ ಬೇಕಾದ ಆಲೋಚನೆಗಳನ್ನು ಮಾಡಬಹುದು. ಮನೆಯನ್ನು ಕಟ್ಟಲು ಸಾಲಮಾಡಬೇಕಾದ ಸ್ಥಿತಿಯು ಬರಬಹುದು. ಆಸ್ತಿ ಸಂಬಂಧಿ ಸಮಸ್ಯೆ ಎದುರಾಗಬಹುದು. ಮೋಸ ಹೋಗಬಹುದಾದ ಸಾಧ್ಯತೆ ಹೆಚ್ಚಿದೆ, ಆದ್ದರಿಂದ ಅಪರಿಚಿತರಿಂದ ದೂರವಿರಿ. ಹೊಸ ಕಾರ್ಯ ಆರಂಭಿಸಲು ಇದು ಯೋಗ್ಯ ಕಾಲವಲ್ಲ. ಸಾಲ ಕೊಟ್ಟವರು ನಿಮ್ಮನ್ನು ಕೇಳುವುದು ಹಿಂಸೆಯಾದೀತು. ಕೆಲಸದ ಸುಲಭ ಮಾರ್ಗವು ನಿಮಗೆ ಸೂಚಿಸದೇ ಇರಬಹುದು.

ವೃಶ್ಚಿಕ ರಾಶಿ:

ಕಲಾವಿದರಿಗೆ ಗಲಿಬಿಲಿಯ ಸನ್ನಿವೇಶವು ಬರಲಿದೆ. ಕೋಪ ನಿಯಂತ್ರಣದಲ್ಲಿ ಇಡಬೇಕು. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಸಾಧ್ಯ. ಅಜಾಗರೂಕತೆ ನಿಮ್ಮ ಗುರಿಯಿಂದ ದೂರವಿರಿಸಬಹುದು. ಅತಿಯಾದ ಆಲೋಚನೆ ತಪ್ಪಿಸಿ ದೃಢ ನಿರ್ಧಾರ ತೆಗೆದುಕೊಳ್ಳಿ. ಹಿರಿಯರ ಸಲಹೆ ನಿಮಗೆ ಒಳಿತಾಗಿಸಬಹುದು. ಸಂಬಂಧದಲ್ಲಿ ಸಕಾರಾತ್ಮಕ ಮಾತುಗಳು ಅಗತ್ಯ. ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ.

ಧನು ರಾಶಿ:

ಮನೆಗೆ ಸಂಬಂಧಿಸಿದ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಮಯ ಬೇಕಾಗುತ್ತದೆ. ತುರ್ತಿಲ್ಲದ ಕೆಲವೊಂದು ಕಾರ್ಯಗಳನ್ನು ಮುಂದೂಡಬೇಕಾಗಬಹುದು. ಮನೆಯಲ್ಲಿನ ಸಮಸ್ಯೆಗಳು ಹೆಚ್ಚಾದಂತೆ ತೋರುವುದು. ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯ ಮಾಡುವವರಿಗೆ ಶುಭದಿನ ಇಂದು. ಆತ್ಮಪ್ರಶಂಸೆಗೆ ಸರಿಯಾಗಿ ಕಾರಣವಿರಲಿ. ಕೊಟ್ಟ ಹಣಕ್ಕೆ ಸರಿಯಾದ ಕೆಲಸವನ್ನು ಮಾಡಿಕೊಡುವಿರಿ.‌ ಗ್ರಾಹಕರಲ್ಲಿ ಸಂತುಷ್ಟಿ ಇರುವುದು. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು.

ಮಕರ ರಾಶಿ:

ಕುಟುಂಬದಲ್ಲಿ ಇಂದು ಸಂತಸದ ಸಮಯ ಇರಲಿದೆ. ನಿರ್ಣಯ ತೆಗೆದುಕೊಳ್ಳುವ ಮೊದಲು ಎಲ್ಲರ ಅಂಶಗಳನ್ನೂ ಪರಿಗಣಿಸಿ. ಹಣದ ಚಿಂತೆ ನಿಮ್ಮನ್ನು ಇಂದು ಕಾಡಲಿದೆ. ನಿಮ್ಮ ಕೆಲಸದಿಂದ ಮನೆಯ ಹಿರಿಯರು ಕೋಪಗೊಳ್ಳುವರು. ತಾಳ್ಮೆ ಹಾಗೂ ಏಕಾಗ್ರತೆಯಿಂದ ದಿನವನ್ನು ಮುನ್ನಡೆಸುವಿರಿ. ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ನಿಮ್ಮ‌ ಬಗ್ಗೆ ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವು ಆಗುವುದು. ಲಾಭದ ಮುಂದೆ ಆಯಾಸವು ನಗಣ್ಯವಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ.

ಕುಂಭ ರಾಶಿ:

ಇಂದು ಮನೆಗೆ ದೂರದ ಬಂಧುಗಳು ಅನಿರೀಕ್ಷಿತ ಭೇಟಿ ನೀಡಬಹುದು, ಈ ವೇಳೆ ಖರ್ಚು ಕೂಡ ಅಧಿಕವಾಗಬಹುದು. ಹಣದ ವ್ಯವಹಾರಗಳಲ್ಲಿ ಇತರರ ಸಲಹೆ ತೆಗೆದುಕೊಳ್ಳಿ. ಮನೋರಂಜನೆಯ ಅವಧಿಯಲ್ಲಿ ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ಸ್ನೇಹಿತರು ಕೊಟ್ಟ ಹಣವನ್ನು ಪುನಃ ಕೇಳಿದ್ದು ನಿಮಗೆ ಅಪಮಾನವಾಗುವುದು. ಅಪಘಾತಗಳು ಸಂಭವಿಸಬಹುದು. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು.

ಮೀನ ರಾಶಿ:

ಹಣವನ್ನು ಉಳಿಸಲು ಯತ್ನದಲ್ಲಿ ಸೋಲಾಗುವುದು. ಬಹುಕಾಲದಿಂದ ಬಾಕಿಯಾಗಿದ್ದ ಕೆಲಸಗಳು ಪೂರ್ತಿಯಾಗುವ ಸಾಧ್ಯತೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಕುಟುಂಬದಲ್ಲಿ ಹರ್ಷಮಯ ವಾತಾವರಣ ಉಂಟಾಗುತ್ತದೆ. ಒಂದು ಶುಭ ಸಂದೇಶ ನಿಮಗೆ ತಲುಪಬಹುದು. ಬಂಧುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದಂತೆ ಅನ್ನಿಸಬಹುದು. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಭರಣೀ, ಯೋಗ : ಐಂದ್ರ, ಕರಣ : ಚತುಷ್ಪಾತ್, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:51 – 12:24, ಯಮಗಂಡ ಕಾಲ 15:30 – 17:04, ಗುಳಿಕ ಕಾಲ 07:44 – 09:18

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಧ್ರುವ ಸರ್ಜಾ, ದರ್ಶನ್ ನಡುವಿನ ಮುನಿಸಿಗೆ ಕಾರಣ ಏನು? ಮಾಜಿ ಮ್ಯಾನೇಜರ್​ಗೆ ಪ್ರಶ್ನೆ – Kannada News | Darshan Ex Manager Mallikarjun talks about Dhruva Sarja in press meet

ಇಷ್ಟು ವರ್ಷಗಳ ಕಾಲ ಕಣ್ಮರೆ ಆಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ (Darshan Manager Mallikarjun) ಈಗ ಮಾಧ್ಯಮಗಳ ಎದುರು ಬಂದಿದ್ದಾರೆ. ಈ ವೇಳೆ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಕೆಲವು ವರ್ಷಗಳ ಹಿಂದೆ ದರ್ಶನ್ ಮತ್ತು ಧ್ರುವ ಸರ್ಜಾ (Dhruva Sarja) ಅವರ ನಡುವೆ ಬಾಂಧವ್ಯ ಇತ್ತು. ಆದರೆ ಅದು ಮುಂದುವರಿಯಲಿಲ್ಲ. ಅದಕ್ಕೆ ಕಾರಣ ಏನಿರಬಹುದು ಎಂದು ಮಲ್ಲಿಕಾರ್ಜುನ್ ಅವರಿಗೆ ಪ್ರಶ್ನೆ ಎದುರಾಗಿದೆ. ‘ಪ್ರೇಮ ಬರಹ’ ಸಿನಿಮಾ ವೇಳೆ ಧ್ರುವ ಸರ್ಜಾ ಮತ್ತು ದರ್ಶನ್ (Darshan) ಅವರು ಆಪ್ತವಾಗಿದ್ದರು. ಆ ಮೇಲೆ ಏನಾಯಿತು ಎಂಬುದು ತಮಗೆ ಗೊತ್ತಿಲ್ಲ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ. ಶೀಘ್ರದಲ್ಲೇ ಅವರು ಅರ್ಜುನ್ ಸರ್ಜಾ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

MI vs PBKS: ಡಿ ಕಾಕ್ ಶತಕ ವ್ಯರ್ಥ; ಮುಂಬೈಗೆ ಸತತ 4ನೇ ಸೋಲು – Kannada News | IPL 2026: Punjab Kings Stun Mumbai Indians at Wankhede, Top Points Table

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ 24ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆತಿಥೇಯ ಮುಂಬೈ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿದ ಪಂಜಾಬ್ ಕಿಂಗ್ಸ್ ಈ ಲೀಗ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಹಾಗೆಯೇ ತನ್ನ 4ನೇ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ತನ್ನ ತವರಿನಲ್ಲಿ ಸತತ ಎರಡನೇ ಪಂದ್ಯವನ್ನು ಸೋತ ಮುಂಬೈ ಆಡಿರುವ 5 ಪಂದ್ಯಗಳಲ್ಲಿ 4 ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 195 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಇನ್ನು 21 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆಬೀರಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಮುಂಬೈ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆದಾಗ್ಯೂ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ರಿಕಲ್ಟನ್ 2 ರನ್‌ಗಳಿಸಿ ಔಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕ್‌ಗೆ ಔಟಾದರು. ಅರ್ಶ್‌ದೀಪ್ ಸಿಂಗ್ ಈ ಎರಡೂ ವಿಕೆಟ್‌ಗಳನ್ನು ಪಡೆದರು. ಆದಾಗ್ಯೂ, ನಂತರ ಕ್ವಿಂಟನ್ ಡಿ ಕಾಕ್ ಮತ್ತು ನಮನ್ ಧೀರ್ ಪಂಜಾಬ್‌ಗೆ ಶತಕದ ಜೊತೆಯಾಟದೊಂದಿಗೆ ಉತ್ತರಿಸಿದರು.

ನಮನ್ ಧೀರ್ 31 ಎಸೆತಗಳಲ್ಲಿ 50 ರನ್ ಗಳಿಸಿದರೆ, ಕ್ವಿಂಟನ್ ಡಿ ಕಾಕ್ ಕೂಡ 60 ಎಸೆತಗಳಲ್ಲಿ 112 ರನ್ ಗಳಿಸಿ ಅದ್ಭುತ ಶತಕ ಗಳಿಸಿದರು. ಆದಾಗ್ಯೂ, ಮುಂಬೈ ಮಧ್ಯಮ ಕ್ರಮಾಂಕ ಸಂಪೂರ್ಣವಾಗಿ ವಿಫಲವಾಯಿತು. ನಾಯಕ ಪಾಂಡ್ಯ 12 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿದರೆ, ರುದರ್ಫೋರ್ಡ್ 1 ರನ್ ಗಳಿಸಿದರು. ತಿಲಕ್ ವರ್ಮಾ 8 ರನ್ ಗಳಿಸಿ ಔಟಾದರು. ಒಂದು ಹಂತದಲ್ಲಿ, ಮುಂಬೈ 215 ತಲುಪುತ್ತದೆ ಎಂದು ತೋರುತ್ತಿತ್ತು, ಆದರೆ ಅಂತಿಮವಾಗ 195 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

196 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಆರಂಭಿಕರಾದ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ತ್ವರಿತ ಆರಂಭ ನೀಡಿದರು. ಪ್ರಿಯಾಂಶ್ ಆರ್ಯ 9 ಎಸೆತಗಳಲ್ಲಿ 15 ರನ್‌ಗಳಿಗೆ ಔಟಾದರೂ, ನಂತರ ಪ್ರಭ್ಸಿಮ್ರಾನ್ 39 ಎಸೆತಗಳಲ್ಲಿ ಅಜೇಯ 80 ರನ್ ಗಳಿಸುವ ಮೂಲಕ ಮುಂಬೈ ತಂಡವನ್ನು ಪಂದ್ಯದಿಂದ ಹೊರದಬ್ಬಿದರು. ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ 35 ಎಸೆತಗಳಲ್ಲಿ 66 ರನ್ ಗಳಿಸಿ ಶತಕದ ಪಾಲುದಾರಿಕೆಯನ್ನು ರೂಪಿಸಿದರು. ಇತ್ತ ಮುಂಬೈ ಬೌಲರ್‌ಗಳು ಮತ್ತೊಮ್ಮೆ ಸಂಪೂರ್ಣ ವಿಫಲರಾದರು. ದೀಪಕ್ ಚಾಹರ್, ಬುಮ್ರಾ ಮತ್ತು ಪಾಂಡ್ಯ ವಿಕೆಟ್ ಪಡೆಯಲು ವಿಫಲರಾದರು. ಗಜನ್‌ಫರ್ 2 ವಿಕೆಟ್ ಪಡೆದರೆ, ಶಾರ್ದುಲ್ 1 ವಿಕೆಟ್ ಪಡೆದರು

Published On – 11:03 pm, Thu, 16 April 26

Source link

ಆಲ್ಕೋಹಾಲ್ ಸೇವಿಸುತ್ತಾ ಪ್ರಶ್ನೆ ಪತ್ರಿಕೆ ಪರಿಶೀಲಿಸುತ್ತಿರುವ ಶಿಕ್ಷಕ; ವಿಡಿಯೋಗೆ ಭಾರೀ ಆಕ್ರೋಶ – Kannada News | Alcohol on side teacher checking answer sheets in Latur video sparks outrage

ನವದೆಹಲಿ, ಏಪ್ರಿಲ್ 16: ಮಹಾರಾಷ್ಟ್ರದ ಲಾತೂರ್‌ನಲ್ಲಿ ಶಿಕ್ಷಕರೊಬ್ಬರು ಮದ್ಯ ಸೇವಿಸುತ್ತಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುತ್ತಿರುವ ವೀಡಿಯೊವೊಂದು ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಲಾತೂರ್​​ಗೆ ಸಮೀಪವಿರುವ ಪ್ರತಿಷ್ಠಿತ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕ ಅಜಯ್ ಕೊಕನೆ ಸ್ನೇಹಿತರೊಂದಿಗೆ ಕುಳಿತು, ಸಿಗರೇಟ್ ಸೇದುತ್ತಾ, ಆಲ್ಕೋಹಾಲ್ ಬಾಟಲಿ ಹಿಡಿದು ಪರೀಕ್ಷಾ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಸ್ರೇಲ್, ಲೆಬನಾನ್ 10 ದಿನಗಳ ಕದನವಿರಾಮಕ್ಕೆ ಒಪ್ಪಿಕೊಂಡಿವೆ; ಟ್ರಂಪ್ ಘೋಷಣೆ – Kannada News | Israel and Lebanon agreed to 10 day ceasefire Donald Trump Announces

ವಾಷಿಂಗ್ಟನ್, ಏಪ್ರಿಲ್ 16: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಸ್ರೇಲ್ ಮತ್ತು ಲೆಬನಾನ್ 10 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದ್ದಾರೆ. ಶಾಶ್ವತ ಶಾಂತಿಯತ್ತ ಸಾಗುವ ಪ್ರಯತ್ನದಲ್ಲಿ ಎರಡೂ ಕಡೆಯವರು ಯುದ್ಧವನ್ನು ನಿಲ್ಲಿಸಲು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರಪಂಚದಾದ್ಯಂತ 9 ಯುದ್ಧಗಳನ್ನು ಬಗೆಹರಿಸುವುದು ನನಗೆ ದೊರೆತ ದೊಡ್ಡ ಗೌರವವಾಗಿದೆ. ಇದು ನನ್ನ 10ನೇ ಯುದ್ಧ ನಿಲ್ಲಿಸುವ ಪ್ರಯತ್ನವಾಗಿದೆ!” ಎಂದು ಟ್ರಂಪ್ ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಟ್ರೂತ್​​ನ ಪೋಸ್ಟ್‌ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಅತ್ಯುತ್ತಮ ಮಾತುಕತೆ ನಡೆಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಶಾಂತಿಯತ್ತ ಸಾಗುವ ಪ್ರಯತ್ನದಲ್ಲಿ ಇಬ್ಬರೂ ನಾಯಕರು ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ 40 ನಿಮಿಷ ಫೋನ್ ಸಂಭಾಷಣೆ; ಹಾರ್ಮುಜ್ ಕುರಿತು ಚರ್ಚೆ

ಮೂರು ದಶಕಗಳಲ್ಲಿ ಮೊದಲ ಬಾರಿಗೆ ಎರಡೂ ದೇಶಗಳು ವಾಷಿಂಗ್ಟನ್ ಡಿಸಿಯಲ್ಲಿ ಮಾತುಕತೆ ನಡೆಸಿವೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸೇರಿದಂತೆ ಅಮೆರಿಕದ ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ದೀರ್ಘಕಾಲೀನ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಎರಡೂ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಮತ್ತು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

“ಲೆಬನಾನ್‌ನ ಅಧ್ಯಕ್ಷ ಜೋಸೆಫ್ ಔನ್ ಮತ್ತು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಾನು ಅತ್ಯುತ್ತಮ ಮಾತುಕತೆ ನಡೆಸಿದ್ದೇನೆ. ಈ ಇಬ್ಬರು ನಾಯಕರು ತಮ್ಮ ದೇಶಗಳ ನಡುವೆ ಶಾಂತಿಯನ್ನು ಸಾಧಿಸಲು ಸಂಜೆ 5 ಗಂಟೆಗೆ ಔಪಚಾರಿಕವಾಗಿ 10 ದಿನಗಳ ಕದನವಿರಾಮಕ್ಕೆ ಒಪ್ಪಿಕೊಂಡಿದ್ದಾರೆ. ಮಂಗಳವಾರ ಎರಡೂ ದೇಶಗಳು 34 ವರ್ಷಗಳಲ್ಲಿ ಮೊದಲ ಬಾರಿಗೆ ವಾಷಿಂಗ್ಟನ್ ಡಿಸಿಯಲ್ಲಿ ನಮ್ಮ ಗ್ರೇಟ್ ಸೆಕ್ರೆಟರಿ ಆಫ್ ಸ್ಟೇಟ್ ಮಾರ್ಕೊ ರುಬಿಯೊ ಅವರೊಂದಿಗೆ ಭೇಟಿಯಾದವು” ಎಂದು ಟ್ರಂಪ್ ಬರೆದಿದ್ದಾರೆ.

ಇದನ್ನೂ ಓದಿ: ಲೆಬನಾನ್‌ನೊಂದಿಗೆ ಶೀಘ್ರದಲ್ಲೇ ಇಸ್ರೇಲ್ ನೇರ ಮಾತುಕತೆ; ನೆತನ್ಯಾಹು ಘೋಷಣೆ

1983ರ ನಂತರ ಉಭಯ ದೇಶಗಳ ನಡುವಿನ ಮೊದಲ ಅರ್ಥಪೂರ್ಣ ಮಾತುಕತೆ ಎಂದು ಅವರು ವಿವರಿಸಿದ ಈ ಮಾತುಕತೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸುವುದಾಗಿ ಟ್ರಂಪ್ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎರಡೂ ಕಡೆಯವರು ಶಾಂತಿ ಸಾಧಿಸಲು ಉತ್ಸುಕರಾಗಿದ್ದಾರೆ ಎಂಬ ವಿಶ್ವಾಸವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಉಪಚುನಾವಣಾ ಫಲಿತಾಂಶದ ಬಗ್ಗೆ ಸಚಿವ ಜಮೀರ್​ ಎದುರು ಸಿಎಂ ಹೇಳಿದ್ದೇನು? – Kannada News | What did the CM Siddaramaiah say to Minister zameer ahmed about the by election results

ಬೆಂಗಳೂರು, ಏಪ್ರಿಲ್​ 16: ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ಗೊಂದಲದ ನಡುವೆ ದಾವಣಗೆರೆ ಉಪ ಚುನಾವಣೆಗೆ ಸಂಬಂಧ ರಾಜ್ಯ ಕಾಂಗ್ರೆಸ್​​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಸಚಿವ ಜಮೀರ್ ಕೂಡ ಪ್ರಚಾರದಲ್ಲಿ ಭಾಗಿಯಾಗದ ಕಾರಣ ಮುಂದಿನ ಟಾರ್ಗೆಟ್ ಜಮೀರ್ ಎನ್ನಲಾಗ್ತಿದೆ. ಸಚಿವ ಸಂಪುಟ ಪುನಾರಚನೆಯಾದ್ರೆ ಜಮೀರ್ ಕೈ ಬಿಡ್ತಾರೆಂಬ ಚರ್ಚೆ ಕಾಂಗ್ರೆಸ್ ಮನೆಯಲ್ಲಿ ಸದ್ದು ಮಾಡುತ್ತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸಚಿವ ಜಮೀರ್​ ಅಹ್ಮದ್​ಗೆ ಸಲಹೆ ನೀಡಿದ್ದಾರೆ. ಬಳಿಕ ವಿಧಾನಸೌಧದ ಕೆಂಗಲ್ ಗೇಟ್‌ನಲ್ಲಿ ಸಚಿವ ಜಮೀರ್​​ ನಿಲ್ಲಿಸಿಕೊಂಡ ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಗೆಲುವಿನ ಭವಿಷ್ಯ ನುಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

MI vs PBKS: ಈ ಸೀಸನ್​ನ ಬೆಸ್ಟ್ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್; ನೀವೇ ನೋಡಿ – Kannada News | Watch: Shreyas Iyer’s Gravity Defying Boundary Line Catch in IPL 2026 MI vs PBKS

ಐಪಿಎಲ್ 2026 ರ 24ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅಸಾಧಾರಣ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಲಾಂಗ್ ಆನ್ ಕಡೆಗೆ ಬಿಗ್ ಶಾಟ್ ಆಡಿದರು. ಈ ವೇಳೆ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಗಾಳಿಯಲ್ಲಿ ಹಾರಿ ಮೊದಲು ಚೆಂಡನ್ನು ಹಿಡಿದರು. ಆ ನಂತರ, ತಾನು ಬೌಂಡರಿ ಲೈನ್‌ ಅನ್ನು ದಾಡುತ್ತಿರುವುದನ್ನು ಗಮನಿಸಿದ ಶ್ರೇಯಸ್ ಗಾಳಿಯಲ್ಲಿ ಇರುವಾಗಲೇ ಚೆಂಡನ್ನು ಮೇಲಕ್ಕೆ ಎಸೆದರು. ಈ ವೇಳೆ ಅಲ್ಲಿಯೇ ಇದ್ದ ಕ್ಸೇವಿಯರ್ ಬಾರ್ಟ್ಲೆಟ್ ಕ್ಯಾಚ್ ಪೂರ್ಣಗೊಳಿಸಿದರು. ಶ್ರೇಯಸ್ ಅಯ್ಯರ್ ಹಿಡಿದ ಈ ಅದ್ಭುತ ಕ್ಯಾಚ್​ ಅನ್ನು ಡಗೌಟ್​ನಲ್ಲಿ ಕುಳಿತಿದ್ದ ಮುಂಬೈ ತಂಡದ ಎಲ್ಲಾ ಆಟಗಾರರು ದಿಗ್ಭ್ರಮೆಗೊಂಡರು.

Source link

ಐತಿಹಾಸಿಕ ದಾಖಲೆ ಬರೆದ ಕೊಬ್ಬರಿ ಬೆಲೆ: ಆದ್ರೂ ರೈತರಿಗಿಲ್ಲ ಖುಷಿ, ಆಗಿದ್ದೇನು? – Kannada News | Coconut Price Hits Record 38,000 Per Quintal: But farmers are not happy

ತುಮಕೂರು, ಏಪ್ರಿಲ್​ 16: ಪಾಶ್ಚಿಮಾತ್ಯ ದೇಶಗಳ ಯುದ್ಧದ ನಡುವೆ ಸದ್ಯ ಎಲ್ಲವೂ ದುಬಾರಿ ಎಂಬಂತಾಗಿದೆ. ಎಲ್​ಪಿಜಿ ಗ್ಯಾಸ್ ಅಭಾವದ ಜೊತೆಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ನಡುವೆ ಈಗ ಕಲ್ಪತರು ನಾಡು ತುಮಕೂರಿನ ಕೊಬ್ಬರಿಗೂ (Coconut) ಬಂಗಾರದ ಬೆಲ ಬಂದಿದ್ದು, ಐತಿಹಾಸಿಕ ದಾಖಲೆ ಮೊತ್ತ ತಲುಪಿದೆ. ಹೀಗಿದ್ದರೂ ತೆಂಗು ರೈತನ ಮುಖದಲ್ಲಿ ಮಂದಹಾಸ ಮೂಡಿಲ್ಲ.

ಕೊಬ್ಬರಿಗೆ ಡಿಮ್ಯಾಂಡ್ 

ಪಾಶ್ಚಿಪಾತ್ಯ ದೇಶಗಳಾದ ಇರಾನ್ ಹಾಗೂ ಇಸ್ರೇಲ್ ಯುದ್ಧದ ಕಾರ್ಮೋಡದ ನಡುವೆ ಇತರೆ ರಾಷ್ಟ್ರಗಳಲ್ಲಿ ಸಮಸ್ಯೆ ಎದುರಾಗಿವೆ. ಅದೇ ರೀತಿ ಭಾರತ ಹಾಗೂ ನಮ್ಮ ರಾಜ್ಯ ಕರ್ನಾಟಕ ಸಹ ಈ ಸಮಸ್ಯೆಗಳಿಗೆ ಹೊರತಾಗಿಲ್ಲ. ವಿವಿಧ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಜನ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ನಡುವೆ ಕಲ್ಪತರು ನಾಡು ಎಂದೇ ಖ್ಯಾತಿ ಪಡೆದ ತುಮಕೂರಿನಲ್ಲಿ ಕೊಬ್ಬರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಹೆಚ್ಚಾಗಿದ್ದು, ಬೆಲೆ 38 ಸಾವಿರ ರೂ ತಲುಪಿದೆ.

ಕ್ವಿಂಟಾಲ್ 38 ಸಾವಿರಕ್ಕೆ ಕೊಬ್ಬರಿ ಹರಾಜು

ಅಸಲಿಗೆ ಕ್ವಿಂಟಾಲ್ ಕೊಬ್ಬರಿಗೆ 38 ಸಾವಿರ ರೂ ಮೊತ್ತ ತಲುಪಿರುವುದು ಇತಿಹಾಸದಲ್ಲೇ ಇದೇ ಮೊದಲ ಬಾರಿ. ಈ ಹಿಂದೆ ಹಾವು ಏಣಿಯಂತೆ ಏರಿಳಿತ ಕಾಣುತಿದ್ದ ಕೊಬ್ಬರಿ ಬೆಲೆ ಅಬ್ಬಾಬ ಎಂದರೇ 32 ಸಾವಿರ ರೂ ತಲುಲಿದರೇ ಹೆಚ್ಚು ಎನ್ನುತಿದ್ದರು. ಆದರೆ ತಿಪಟೂರಿನಲ್ಲಿ ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕ್ವಿಂಟಾಲ್ 38 ಸಾವಿರಕ್ಕೆ ಕೊಬ್ಬರಿ ಹರಾಜಾಗಿದ್ದು, ಸರ್ವಕಾಲಿಕ ದಾಖಲೆ ಸರಿಗಟ್ಟಿದೆ.

ಭರ್ಜರಿ ಬೆಲೆ ಬಂದರೂ ರೈತರಿಗಿಲ್ಲ ಖುಷಿ

ಈ ಬೆಲೆ ಏರಿಕೆ ಮಾತ್ರ ಕೊಬ್ಬರಿ ಅವಲಂಬಿತ ತೆಂಗು ಬೆಳಗಾರರಲ್ಲಿ ಅಷ್ಟರ ಮಟ್ಟಿಗೆ ಸಂತಸ ಮೂಡಿಸಿಲ್ಲ. ಕಾರಣ ಇಳುವರಿ ಕಡಿಮೆ. ತೆಂಗು ಬೆಳೆಗಳಲ್ಲಿ ಕಾಣಿಸಿಕೊಳ್ಳುವ ನಾನಾ ರೀತಿಯ ರೋಗಗಳಿಗೆ ಪರಿಹಾರ ತಿಳಿಯದೇ ಬೆಳೆಗಾರರು ಕಂಗಾಲಾದರೆ, ಇತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆ ಆಲಿಸುತ್ತಿಲ್ಲ. ಹೀಗಾಗಿ ತೆಂಗು ಬೆಳೆಯ ಇಳುವರಿ ಕಡಿಮೆಯಾಗಿದ್ದು, ಬೆಲೆ ಹೆಚ್ಚಾದರೂ ಲಾಭವಿಲ್ಲ ಎನ್ನುತ್ತಾರೆ ರೈತರು. ಮತ್ತೊಂದೆಡೆ ವ್ಯಾಪಾರಿಗಳಿಗೂ ಸಹ ಬೆಲೆ ಏರಿಕೆ ಲಾಭ ಅಷ್ಟಕಷ್ಟೇ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೊಬ್ಬರಿಗೆ ಬಂಪರ್ ಬೆಲೆ: ರೈತರಿಗೆ ಸಿಗದ ಲಾಭ, ಭಾರೀ ನಿರೀಕ್ಷೆಯಲ್ಲಿದ್ದ ಅನ್ನದಾತ ನಿರಾಸೆ

ಒಟ್ಟಾರೆ, ಇತರೆ ವಸ್ತುಗಳ ಬೆಲೆ ಏರಿಕೆ ನಡುವೆ ಈಗ ಕಲ್ಪತರು ನಾಡು ತುಮಕೂರಿನಲ್ಲೂ ಸಹ ಕೊಬ್ಬರಿ ಬೆಲೆ ಗಗನಕ್ಕೇರಿದ್ದು, ಖರೀದಿ ಬಲು ದುಬಾರಿ ಎಂಬಂತಾಗಿದೆ. ಈ ಬೆಲೆಗೆ ನಷ್ಟ ಕಡಿಮೆಯಾಗುತ್ತದೇ ಹೊರತು ಲಾಭವಿಲ್ಲ ಎನ್ನುವುದು ರೈತರ ಮಾತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:14 pm, Thu, 16 April 26

Source link

ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ ವಿಸ್ತರಣೆ, ಎಷ್ಟು ವರ್ಷ? – Kannada News | karnataka government extends DG and IGP Dr MA saleem Working service Till 2027

ಬೆಂಗಳೂರು, (ಏಪ್ರಿಲ್ 16): ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥ(ಡಿಜಿ-ಐಜಿಪಿ) ಎಂ.ಎ.ಸಲೀಂ (DG and IGP Dr MA saleem) ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿದೆ. 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಎಂ.ಎ.ಸಲೀಂ ಅವರ ಸೇವಾವಧಿಯನ್ನು 2027ರ ಆ.29ರವರೆಗೆ ವಿಸ್ತರಣೆ ರಾಜ್ಯ ಸರ್ಕಾರ ಇಂದು ಏಪ್ರಿಲ್ 16) ಆದೇಶ ಹೊರಡಿಸಿದೆ. 1993ರ ಬ್ಯಾಚ್ IPS ಅಧಿಕಾರಿಯಾಗಿರುವ ಎಂ.ಎ.ಸಲೀಂ ಅವರು 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕರಾಗಿದ್ದು, ಈ ವರ್ಷದ ಜೂನ್​ನಲ್ಲಿ ನಿವೃತ್ತಿಯಾಗಬೇಕಿತ್ತು. ಆದ್ರೆ, 22.09.2006ರ ಸುಪ್ರೀಂಕೋರ್ಟ್​ ತೀರ್ಪಿನ ಅನುಸಾರ ಎಂ.ಎ.ಸಲೀಂ ಅವರ ಸೇವಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ.

Source link

ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಫೋನ್; ಮಧ್ಯ ಏಷ್ಯಾ, ಹಾರ್ಮುಜ್ ಜಲಸಂಧಿ ಬಗ್ಗೆ ಚರ್ಚೆ – Kannada News | PM Modi Spoke with French President Macron discusses West Asia crisis, Strait of Hormuz security

ನವದೆಹಲಿ, ಏಪ್ರಿಲ್ 16: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷತೆ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ತುರ್ತಾಗಿ ಮರುಸ್ಥಾಪಿಸಲು ಕರೆ ನೀಡಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮಧ್ಯ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಪ್ರಾದೇಶಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ.

“ನನ್ನ ಆತ್ಮೀಯ ಸ್ನೇಹಿತರಾದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ಫೋನ್ ಕರೆ ಸ್ವೀಕರಿಸಿದೆ. ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ನಾವು ಚರ್ಚಿಸಿದ್ದೇವೆ. ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷತೆ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ತುರ್ತಾಗಿ ಪುನಃಸ್ಥಾಪಿಸುವ ಅಗತ್ಯವನ್ನು ಒಪ್ಪಿಕೊಂಡಿದ್ದೇವೆ” ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗದು; ಪ್ರಧಾನಿ ಮೋದಿ ಭರವಸೆ

ಏಪ್ರಿಲ್ 14ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದಾರೆ. ಈ ವರ್ಷ ಇಬ್ಬರು ನಾಯಕರ ನಡುವಿನ ಮೂರನೇ ಕರೆ ಇದಾಗಿತ್ತು. 40 ನಿಮಿಷಗಳಿಗೂ ಹೆಚ್ಚು ಕಾಲ ಇಬ್ಬರೂ ದೂರವಾಣಿಯಲ್ಲಿ ಮಾತನಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version