ಸೇನಾ ಮುಖ್ಯಸ್ಥರಿಗೆ ಮುಹಮ್ಮದ್ ಯೂನಸ್ ನೇಮಕ ಇಷ್ಟವಿರಲಿಲ್ಲ: ಬಾಂಗ್ಲಾದೇಶದ ಮಾಜಿ ಕಾನೂನು ಸಲಹೆಗಾರ ಹೇಳಿದ್ದೇನು? – Kannada News | Bangladesh Army Chief Opposed Yunus Appointment: Ex Advisor Reveals Political Turmoil

ಢಾಕಾ, ಆಗಸ್ಟ್​ 06: ಬಾಂಗ್ಲಾದೇಶದಲ್ಲಿ 2024 ರಲ್ಲಿ ಶೇಖ್ ಹಸೀನಾ(Sheikh Hasina) ಸರ್ಕಾರ ಪತನಗೊಂಡ ನಂತರ, ಮುಹಮ್ಮದ್ ಯೂನಸ್ (Muhammad Yunus) ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸುವುದನ್ನು ದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ ಆರಂಭದಲ್ಲಿ ತೀವ್ರವಾಗಿ ವಿರೋಧಿಸಿದ್ದರು ಎಂಬ ಅಪರೂಪದ ರಹಸ್ಯ ತೆರೆಮರೆಯ ರಾಜಕೀಯ ಸತ್ಯ ಬೆಳಕಿಗೆ ಬಂದಿದೆ.

ಬಾಂಗ್ಲಾದೇಶದ ಮಾಜಿ ಕಾನೂನು ಸಲಹೆಗಾರ ಹಾಗೂ ಢಾಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆಸಿಫ್ ನಜ್ರುಲ್ ಅವರು ಪತ್ರಿಕೆ ‘ಪ್ರೋಥೋಮ್ ಅಲೋ’ಗೆ (Prothom Alo) ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.

ನಜ್ರುಲ್ ಅವರ ಪ್ರಕಾರ, ವಿದ್ಯಾರ್ಥಿ ನಾಯಕರು ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಚುಕ್ಕಾಣಿ ಹಿಡಿಯಲು ಆಯ್ಕೆ ಮಾಡಿದ್ದರು. ಆದರೆ ಸೇನಾ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜನರಲ್ ವಾಕರ್ ಎರಡು ಪ್ರಮುಖ ಕಾರಣಗಳನ್ನು ನೀಡಿ ಯೂನಸ್ ನೇಮಕವನ್ನು ನಿರಾಕರಿಸಿದ್ದರು.

ಜನವರಿ 2024 ರಲ್ಲಿ ಯೂನಸ್ ಅವರ ‘ಗ್ರಾಮೀಣ ಟೆಲಿಕಾಂ’ ಸಂಸ್ಥೆಯಲ್ಲಿ ಕಾರ್ಮಿಕರ ಕಲ್ಯಾಣ ನಿಧಿ ನೀಡದ ಆರೋಪದ ಮೇಲೆ ಅವರಿಗೆ 6 ತಿಂಗಳ ಜೈಲು ಶಿಕ್ಷೆಯಾಗಿತ್ತು. ಜೂನ್ 2024 ರಲ್ಲಿ ಯೂನಸ್ ಹಾಗೂ ಇತರ 13 ಜನರ ವಿರುದ್ಧ 3 ಮಿಲಿಯನ್‌ ಡಾಲರ್​ಗಿಂತ ಅಧಿಕ ಹಣ ದುರುಪಯೋಗಪಡಿಸಿಕೊಂಡ ಆರೋಪ ಹೊರಿಸಲಾಗಿತ್ತು. ಈ ಪ್ರಕರಣಗಳು ಶೇಖ್ ಹಸೀನಾ ಸರ್ಕಾರದ ರಾಜಕೀಯ ದ್ವೇಷದ ಪಿತೂರಿಯಿಂದ ಕೂಡಿದ್ದವು ಎಂದು ಆಸಿಫ್ ನಜ್ರುಲ್ ಸೇನಾ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟರು.

ಮತ್ತಷ್ಟು ಓದಿ: ಶೇಖ್ ಹಸೀನಾರ ಕಾರ್ಯಕ್ರಮದಲ್ಲಿ ಭಾಗಿ: ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ವಿದ್ಯಾರ್ಥಿ ನಾಯಕರ ಸಂಪೂರ್ಣ ಬೆಂಬಲ ಯೂನಸ್ ಅವರಿಗೇ ಇದೆ ಎಂಬುದನ್ನು ಮನಗಂಡ ನಂತರವೇ ಜನರಲ್ ವಾಕರ್-ಉಜ್-ಜಮಾನ್ ಅವರು ಯೂನಸ್ ಅವರ ಹೆಸರನ್ನು ಉನ್ನತ ಹುದ್ದೆಗೆ ಬೆಂಬಲಿಸಲು ಒಪ್ಪಿಕೊಂಡರು. ನಂತರ ಯೂನಸ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅವರ ಮೇಲಿದ್ದ ಶಿಕ್ಷೆಯನ್ನು ನ್ಯಾಯಾಲಯ ರದ್ದುಗೊಳಿಸಿತು.

2024 ರ ಹಸೀನಾ ವಿರೋಧಿ ಬೃಹತ್ ಪ್ರತಿಭಟನೆಯಲ್ಲಿ ನಜ್ರುಲ್ ಪ್ರಮುಖ ಮಾರ್ಗದರ್ಶಕರಾಗಿದ್ದರು. ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ ನಂತರ ಮಿಲಿಟರಿ ಮತ್ತು ನಾಗರಿಕ ನಾಯಕರ ನಡುವೆ ಸಂಧಾನಕಾರರಾಗಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಪ್ರಸ್ತುತ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವು ಅಧಿಕಾರದಲ್ಲಿದ್ದು, ಚುನಾವಣೆಗೆ ಹಾಗೂ ಮೂಲಭೂತ ಪ್ರಜಾಸತ್ತಾತ್ಮಕ ಸುಧಾರಣೆಗಳಿಗೆ ಮಿಲಿಟರಿ ಮತ್ತು ಯೂನಸ್ ಆಡಳಿತದ ನಡುವೆ ಹಲವು ವಿಷಯಗಳಲ್ಲಿ ಇನ್ನೂ ಚರ್ಚೆಗಳು ಮುಂದುವರೆದಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜನಪ್ರಿಯ ನಟಿ ಪ್ರಗತಿ ಈಗ ವೇಟ್​​ಲಿಫ್ಟಿಂಗ್ ಚಾಂಪಿಯನ್ – Kannada News | Actress Pragathi became weightlifting champion in her 50s

ಸಾಧನೆಗೆ ವಯಸ್ಸು, ಹೆಣ್ಣು-ಗಂಡು ಭೇದವಿಲ್ಲ ಎಂಬುದಕ್ಕೆ ಭಾರತದಲ್ಲಿ ಹಲವಾರು ಉದಾಹರಣೆಗಳಿವೆ. ಇದೀಗ ಇದಕ್ಕೆ ತಾಜಾ ಸೇರ್ಪಡೆ ಖ್ಯಾತ ತೆಲುಗು ನಟಿ ಪ್ರಗತಿ. ತೆಲುಗು ಚಿತ್ರರಂಗದಲ್ಲಿ ದಶಕಗಳಿಂದಲೂ ನಾಯಕಿಯಾಗಿ, ಪೋಷಕ ನಟಿಯಾಗಿ ತೊಡಗಿಸಿಕೊಂಡಿರುವ ಪ್ರಗತಿ ತಮ್ಮ 50ನೇ ವಯಸ್ಸಿನಲ್ಲಿ, ಅಪೂರಪವಾದ ಕನಸೊಂದನ್ನು ಕಂಡು ಅದನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಬಹುತೇಕ ಮಹಿಳೆಯರು 50ರ ವಯಸ್ಸಿಗೆ ಮನೆ-ಮಕ್ಕಳು, ಮೊಮ್ಮಕ್ಕಳ ಸಾಧನೆಗಳನ್ನು ಸಂಭ್ರಮಿಸುತ್ತಾ, ಧಾರಾವಾಹಿಗಳನ್ನು ನೋಡುತ್ತಾ ‘ಆರಾಮ’ವಾಗಿ ಕಾಲ ಕಳೆಯುವ ಹೊತ್ತಿನಲ್ಲಿ ಪ್ರಗತಿ ಚಾಂಪಿಯನ್ ಎನಿಸಿಕೊಂಡಿದ್ದಾರೆ.

ಪ್ರಗತಿ ಅವರು ವೇಟ್​​ಲಿಫ್ಟಿಂಗ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದಿದ್ದಾರೆ. 2025ರ ಆರಂಭದಲ್ಲಿ, ಪ್ರಗತಿಯವರು ಕೇರಳದಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 115 ಕೆ.ಜಿ ಸ್ಕ್ವಾಟ್, 50 ಕೆ.ಜಿ ಬೆಂಚ್ ಪ್ರೆಸ್ ಮತ್ತು 122.5 ಕೆ.ಜಿ ಡೆಡ್‌ಲಿಫ್ಟ್ ಮಾಡುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡರು. ಆ ಬಳಿಕ ಅವರು ಏಷ್ಯನ್ ಓಪನ್ ಮತ್ತು ಮಾಸ್ಟರ್ಸ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರು ಡೆಡ್‌ಲಿಫ್ಟ್‌ನಲ್ಲಿ ಚಿನ್ನದ ಪದಕವನ್ನು ಪಡೆದರು ಮತ್ತು ಸ್ಕ್ವಾಟ್, ಬೆಂಚ್ ಪ್ರೆಸ್ ಹಾಗೂ ಸಮಗ್ರ ಪ್ರದರ್ಶನದಲ್ಲಿ ಮೂರು ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡರು. ಈ ಎಲ್ಲ ಸಾಧನೆಯನ್ನು ಪ್ರಗತಿ ಮಾಡಿರುವುದು ತಮ್ಮ 50ನೇ ವಯಸ್ಸಿನಲ್ಲಿ ಎಂಬುದು ವಿಶೇಷ.

ತೆಲುಗು ಚಿತ್ರರಂಗದ ಬಲು ಬೇಡಿಕೆಯ ಪೋಷಕ ನಟಿ ಆಗಿರುವ ಪ್ರಗತಿ ಅವರು ಬಹುತೇಕ ಎಲ್ಲ ಸ್ಟಾರ್ ನಟರುಗಳ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ, ಈಗಲೂ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಾ ಆರಾಮವಾಗಿ ಕಾಲ ಕಳೆಯುವ ಎಲ್ಲ ಅವಕಾಶವೂ ಪ್ರಗತಿ ಅವರಿಗಿತ್ತು. ಆದರೆ ಅದನ್ನು ನಿರಾಕರಿಸಿ ಅವರು ತಮ್ಮ ದೇಹದ ಆರೋಗ್ಯ ಮತ್ತು ಸಾಧಿಸುವ ಛಲದಿಂದ ವೇಟ್​​ಲಿಫ್ಟಿಂಗ್ ಕಡೆ ಗಮನ ಹರಿಸಿದರು. ಈಗ ಅವರ ಸಾಧನೆಯನ್ನು ಜನ ಕೊಂಡಾಡುತ್ತಿದ್ದಾರೆ. ನಟನೆಗಿಂತಲೂ ಹೆಚ್ಚಿನ ಆತ್ಮತೃಪ್ತಿಯನ್ನು ತಮಗೆ ವೇಟ್​ಲಿಫ್ಟಿಂಗ್ ನೀಡಿದೆ ಎನ್ನುತ್ತಾರೆ ಪ್ರಗತಿ.

ಇದನ್ನೂ ಓದಿ:‘ವಾರಣಾಸಿ’ ಸಿನಿಮಾಕ್ಕೆ ಮೊದಲಿದ್ದ ಹೆಸರೇನು? ವಿಲನ್ ಪಾತ್ರದ ಹಿನ್ನೆಲೆ ಗೊತ್ತೆ?

1993 ರಿಂದಲೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಪ್ರಗತಿ, ಇತ್ತೀಚೆಗೆ ಕಾಲವಾದ ಭಾಗ್ಯರಾಜ್ ಅವರ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆರಂಭದ ಕೆಲ ವರ್ಷ ನಾಯಕಿಯಾಗಿ ನಟಿಸಿದರಾದರೂ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರಾಗಿದ್ದರು. ಆದರೆ ಕೇವಲ ಮೂರೇ ವರ್ಷಕ್ಕೆ ಚಿತ್ರರಂಗಕ್ಕೆ ಮರಳಿ, ಹಲವಾರು ಧಾರಾವಾಹಿ, 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 2002 ರಲ್ಲಿ ಬಿಡುಗಡೆ ಆದ ‘ಪ್ರೇಮಖೈದಿ’, 2003 ರಲ್ಲಿ ಬಿಡುಗಡೆ ಆದ ‘ಹೃದಯವಂತ’, 2011 ರ ‘ವಿನಾಯಕ ಗೆಳೆಯರ ಬಳಗ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗಲೂ ಅವರು ಸಿನಿಮಾ ಮತ್ತು ಟಿವಿಗಳಲ್ಲಿ ಸಕ್ರಿಯರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಓಲಾ, ಊಬರ್, ರಾಪಿಡೋ ಬೈಕ್ ಟ್ಯಾಕ್ಸಿಗಳಿಗೆ ಆರ್‌ಟಿಒ ಶಾಕ್: 11 ವಿಶೇಷ ಪಡೆಗಳಿಂದ ದಾಳಿ, 85ಕ್ಕೂ ಹೆಚ್ಚು ವಾಹನಗಳು ಸೀಜ್

ಬೆಂಗಳೂರು, ಆ.6: ರಾಜಧಾನಿಯಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆಯ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್.ಟಿ.ಓ) ಅಧಿಕಾರಿಗಳು ಓಲಾ, ಊಬರ್ ಹಾಗೂ ರಾಪಿಡೋ ಸೇರಿದಂತೆ ಹಲವು ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಪ್ರಮುಖವಾಗಿ, ಕೆ.ಎ.-01 ಕೋರಮಂಗಲ ಆರ್.ಟಿ.ಓ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ತೀವ್ರಗೊಂಡಿದೆ. ಅಧಿಕಾರಿಗಳು ಈಗಾಗಲೇ 85 ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಿ ವಶಪಡಿಸಿಕೊಂಡಿದ್ದಾರೆ. ಅನಧಿಕೃತ ಬೈಕ್ ಟ್ಯಾಕ್ಸಿಗಳ ನಿಯಂತ್ರಣಕ್ಕಾಗಿ ಸಾರಿಗೆ ಇಲಾಖೆಯು ಒಟ್ಟು 11 ತಂಡಗಳನ್ನು ರಚನೆ ಮಾಡಿದೆ. ಬೆಳ್ಳಂದೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಬೈಕ್ ಟ್ಯಾಕ್ಸಿ ಚಾಲಕರೊಬ್ಬರನ್ನು ತಡೆದು, ಹೆಲ್ಮೆಟ್ ತೆಗೆಯುವಂತೆ ಸೂಚಿಸಿ, ಅವರ ವಾಹನವನ್ನು ಸೀಜ್ ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯು ಬೆಂಗಳೂರಿನಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಉಡುಪಿ: ಕಾರ್ಕಳದ ರೇಂಜಾಳದಲ್ಲಿ ಭಾರೀ ಭೂಕುಸಿತದ ಆತಂಕ, ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ – Kannada News | Udupi Landslide Alert: Hill Slope Threatens Three Houses in Karkala’s Renjala

ಭೂ ಕುಸಿತ ಸಾಧ್ಯತೆ ಹಿನ್ನಲೆ ರೇಂಜಾಳ ಗ್ರಾಮಕ್ಕೆ ದೌಡಾಯಿಸಿದ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿಕೆImage Credit source: tv9

ಉಡುಪಿ, ಆಗಸ್ಟ್ 6: ಕಳೆದ ಒಂದು ವಾರದಿಂದ ಉಡುಪಿ (Udupi) ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಇದೀಗ ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮದ ಹೆಡ್ಮೆ ಪರಿಸರದಲ್ಲಿ ಆತಂಕಕಾರಿ ಪರಿಸ್ಥಿತಿ ಸೃಷ್ಟಿಸಿದೆ. ಪ್ರಕೃತಿಯ ರೌದ್ರಾವತಾರಕ್ಕೆ ಸಾಕ್ಷಿಯಾಗಿರುವ ಈ ಪ್ರದೇಶದಲ್ಲಿ ಭೂಮಿ ನಿಧಾನವಾಗಿ ಬಿರುಕು ಬಿಡುತ್ತಿದ್ದು, ಮೇಲ್ಭಾಗದಿಂದ ಮಣ್ಣು, ಬಂಡೆಗಳು ಹಾಗೂ ಮರಮಟ್ಟು ಜಾರಿಬೀಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮದ ಹೆಡ್ಮೆ ಹರಿಪ್ರಸಾದ್ ಅವರ ಮನೆಯ ಸಮೀಪ ಆರಂಭವಾದ ಭೂಕುಸಿತ ಇದೀಗ ಭಾರಿ ಅಪಾಯದ ಮುನ್ಸೂಚನೆಯಾಗಿ ಪರಿಣಮಿಸಿದೆ. ಸುಮಾರು ಎರಡು ಎಕರೆ ವ್ಯಾಪ್ತಿಯ ಗುಡ್ಡದ ಭಾಗ ಯಾವುದೇ ಕ್ಷಣದಲ್ಲಿ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದ್ದು, ಅದರ ಅಡಿಭಾಗದಲ್ಲಿರುವ ಮೂರು ಮನೆಗಳ ನಿವಾಸಿಗಳು ಜೀವವನ್ನು ಕೈಯಲ್ಲಿ ಹಿಡಿದು ದಿನ ಕಳೆಯುವಂತಾಗಿದೆ.

ರಾತ್ರಿಯಿಡೀ ಸುರಿದ ಮಳೆಯ ಬಳಿಕ ಬೆಳಗಾಗುವಷ್ಟರಲ್ಲಿ ಬೃಹತ್ ಬಂಡೆಯೊಂದು ಜಾರಿಬಂದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಗುಡ್ಡದ ಮೇಲ್ಭಾಗದಿಂದ ನಿರಂತರವಾಗಿ ಜರಿದು ಬರುತ್ತಿರುವ ಮಣ್ಣು ಮತ್ತು ಕಲ್ಲುಗಳ ಸದ್ದು ಕೇಳಿದಾಗಲೆಲ್ಲ ಮನೆಗಳಿಂದ ಹೊರಗೆ ಓಡಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವರು ತಮ್ಮ ಮನೆಯಲ್ಲಿದ್ದ ಅಗತ್ಯ ದಾಖಲೆಗಳು, ವಸ್ತುಗಳು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪರಿಸ್ಥಿತಿಯ ಮಾಹಿತಿ ಪಡೆದ ತಹಶೀಲ್ದಾರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಾಂತರಕ್ಕೆ ಸೂಚನೆ; ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯ

ಅಧಿಕಾರಿಗಳ ಭೇಟಿ ಬಳಿಕ ಅಪಾಯದ ಪ್ರಮಾಣ ಮತ್ತಷ್ಟು ಸ್ಪಷ್ಟವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲವು ಕುಟುಂಬಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆದರೆ, ಸ್ಥಳಾಂತರಕ್ಕೆ ಸೂಚನೆ ನೀಡಿದರೂ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರ್ಯಾಯ ವಸತಿ, ಮೂಲಭೂತ ಸೌಲಭ್ಯ ಅಥವಾ ಪುನರ್ವಸತಿ ವ್ಯವಸ್ಥೆ ಕಲ್ಪಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

‘ಮನೆ ಬಿಟ್ಟು ಹೊರಡಲು ಹೇಳುತ್ತಿದ್ದಾರೆ. ಆದರೆ ಎಲ್ಲಿಗೆ ಹೋಗಬೇಕು? ಮಕ್ಕಳೊಂದಿಗೆ ಎಲ್ಲಿ ಆಶ್ರಯ ಪಡೆಯಬೇಕು?’ ಎಂದು ಸಂತ್ರಸ್ತ ಕುಟುಂಬಗಳು ಪ್ರಶ್ನಿಸುತ್ತಿವೆ.

ಭಯ, ಅನಿಶ್ಚಿತತೆ ಮತ್ತು ಆತಂಕದ ನಡುವೆ ಗ್ರಾಮಸ್ಥರು ದಿನ ಕಳೆಯುತ್ತಿದ್ದು, ಮಳೆ ಇನ್ನೂ ಮುಂದುವರಿದರೆ ಇಡೀ ಗುಡ್ಡವೇ ಕುಸಿಯುವ ಭೀತಿ ಆವರಿಸಿದೆ. ಸ್ಥಳೀಯರ ಪ್ರಕಾರ, ಮಳೆ ಇದೇ ರೀತಿ ಮುಂದುವರಿದರೆ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಂತಹ ದುರಂತ ಇಲ್ಲಿಯೂ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಹೀಗಾಗಿ ಜಿಲ್ಲಾಡಳಿತ ತುರ್ತು ತಾಂತ್ರಿಕ ಸಮೀಕ್ಷೆ ನಡೆಸಿ, ಅಪಾಯದ ಪ್ರದೇಶವನ್ನು ಸಂಪೂರ್ಣವಾಗಿ ಗುರುತಿಸಬೇಕು. ಸಂತ್ರಸ್ತರಿಗೆ ಸುರಕ್ಷಿತ ಪುನರ್ವಸತಿ ಕಲ್ಪಿಸುವ ಜೊತೆಗೆ ಅಗತ್ಯ ಪರಿಹಾರ ಮತ್ತು ನೆರವು ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೇರಳದ ಮಲಪ್ಪುರಂನಲ್ಲಿ ಭೀಕರ ಭೂಕುಸಿತ; ರಸ್ತೆ ಸಂಚಾರ ಸ್ಥಗಿತ

ಒಟ್ಟಾರೆಯಾಗಿ, ಸದ್ಯ ಹೆಡ್ಮೆ ಪ್ರದೇಶದಲ್ಲಿ ಪ್ರತಿಯೊಂದು ಮಳೆಯ ಹನಿಯೂ ಆತಂಕವನ್ನು ಹೆಚ್ಚಿಸುತ್ತಿದ್ದು, ಪ್ರತಿಯೊಂದು ಗುಡ್ಡ ಜಾರುವ ಶಬ್ದವೂ ಗ್ರಾಮಸ್ಥರ ಹೃದಯಬಡಿತ ಹೆಚ್ಚಿಸುತ್ತಿದೆ. ಪ್ರಕೃತಿಯ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂಬ ಸ್ಥಳೀಯರ ಕೂಗಿಗೆ ಜಿಲ್ಲಾಡಳಿತ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಭಾರತೀಯ ಬ್ಯಾಟರ್ ನನ್ನ ವಿಶ್ವ ದಾಖಲೆ ಮುರೀತಾನೆ: ಬಟ್ಲರ್ ಭವಿಷ್ಯ – Kannada News | Vaibhav Will Break My World Record: Jos Buttler’s Big Prediction

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಯಾರು? ಈ ಪ್ರಶ್ನೆಗೆ ಸದ್ಯ ಉತ್ತರ ಜೋಸ್ ಬಟ್ಲರ್. ಇಂಗ್ಲೆಂಡ್​ನಲ್ಲಿ ನಡೆದಯುತ್ತಿರುವ ದಿ ಹಂಡ್ರೆಡ್ ಲೀಗ್ ಟೂರ್ನಿಯ 21ನೇ ಪಂದ್ಯದಲ್ಲಿ 20 ಎಸೆತಗಳಲ್ಲಿ 51 ರನ್ ಸಿಡಿಸುವ ಮೂಲಕ ಬಟ್ಲರ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಕೀರನ್ ಪೊಲಾರ್ಡ್ ಹೆಸರಿನಲ್ಲಿದ್ದ  14,803 ರನ್‌ಗಳ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

  • ಟಿ20 ಕ್ರಿಕೆಟ್​ನಲ್ಲಿ ಈವರೆಗೆ  492 ಇನಿಂಗ್ಸ್ ಆಡಿರುವ ಜೋಸ್ ಬಟ್ಲರ್ 10074 ಎಸೆತಗಳಲ್ಲಿ 14833 ರನ್ ಕಲೆಹಾಕಿದ್ದಾರೆ.
  • ಟಿ20 ಕ್ರಿಕೆಟ್​ನಲ್ಲಿ ಈವರೆಗೆ 663 ಇನಿಂಗ್ಸ್ ಆಡಿರುವ ಕೀರನ್ ಪೊಲಾರ್ಡ್ 9802 ಎಸೆತಗಳಲ್ಲಿ 14803 ರನ್ ರನ್ ಗಳಿಸಿದ್ದಾರೆ.

ಸದ್ಯ ಟಿ20 ರನ್ ಸರದಾರರ ಪಟ್ಟಿಯಲ್ಲಿ ಜೋಸ್ ಬಟ್ಲರ್ ಅಗ್ರಸ್ಥಾನದಲ್ಲಿದ್ದು, ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ದಾಖಲೆ ಮುರಿಯುವವರು ಯಾರು?

ಈ ಐತಿಹಾಸಿಕ ದಾಖಲೆ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಜೋಸ್ ಬಟ್ಲರ್​ಗೆ ಭವಿಷ್ಯದಲ್ಲಿ ನಿಮ್ಮ ದಾಖಲೆ ಯಾರು ಮುರಿಯಬಹುದು? ಎಂಬ ಪ್ರಶ್ನೆ ಮುಂದಿಡಲಾಗಿತ್ತು. ಈ ಪ್ರಶ್ನೆಗೆ ಬಟ್ಲರ್ ಕಡೆಯಿಂದ ಮೂಡಿಬಂದ ಉತ್ತರ ವೈಭವ್ ಸೂರ್ಯವಂಶಿ.

“ನನ್ನ ಈ ದಾಖಲೆಯನ್ನು ಭವಿಷ್ಯದಲ್ಲಿ ಯಾರಾದರೂ ಮುರಿಯುತ್ತಾರೆ ಎಂದರೆ ಅದು ಬಹುಶಃ ಭಾರತದ ವೈಭವ್ ಸೂರ್ಯವಂಶಿ” ಎಂದು ಸ್ಕೈ ಸ್ಪೋರ್ಟ್ಸ್ ಸಂದರ್ಶನದಲ್ಲಿ ಬಟ್ಲರ್ ಹೇಳಿದ್ದಾರೆ. ಈ ಮೂಲಕ ವೈಭವ್ ಕೂಡ ಟಿ20 ಕ್ರಿಕೆಟ್​ನಲ್ಲಿ ರನ್ ರಾಶಿ ಪೇರಿಸಲಿದ್ದಾರೆ ಎಂದು ಬಟ್ಲರ್ ಭವಿಷ್ಯ ನುಡಿದಿದ್ದಾರೆ.

ಬಟ್ಲರ್ ಮನಗೆದ್ದ ವೈಭವ್!

ಕೇವಲ 15 ವರ್ಷದ ಬಿಹಾರದ ಎಡಗೈ ಓಪನರ್ ವೈಭವ್ ಸೂರ್ಯವಂಶಿ ಪ್ರಸ್ತುತ ಕ್ರಿಕೆಟ್ ಜಗತ್ತಿನ ಅತ್ಯಂತ ಚರ್ಚಿತ ಆಟಗಾರ. ಬಟ್ಲರ್ ತಮ್ಮ ಮಾಜಿ ಐಪಿಎಲ್ ಸಹ ಆಟಗಾರನ ಬಗ್ಗೆ ಇಷ್ಟೊಂದು ದೊಡ್ಡ ಭವಿಷ್ಯ ನುಡಿಯಲು ಬಲವಾದ ಕಾರಣಗಳಿವೆ…

  • ಅತಿ ಕಿರಿಯ ವಯಸ್ಸಿನಲ್ಲೇ ಅಬ್ಬರ: ವೈಭವ್ ಸೂರ್ಯವಂಶಿ ಕೇವಲ 23 ಐಪಿಎಲ್​ ಇನ್ನಿಂಗ್ಸ್‌ಗಳಲ್ಲಿ 2 ಶತಕ ಹಾಗೂ 6 ಅರ್ಧಶತಕಗಳೊಂದಿಗೆ 1,028 ರನ್ ಚಚ್ಚಿದ್ದಾರೆ.
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಭಟ: ಇತ್ತೀಚೆಗೆ ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಪರ ಕೇವಲ 3 ಪಂದ್ಯಗಳಲ್ಲಿ 151 ರನ್ ಗಳಿಸಿ ‘ಪ್ಲೇಯರ್ ಆಫ್ ದಿ ಸೀರಿಸ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇನ್ನು ಮೊದಲ 40 ಇನ್ನಿಂಗ್ಸ್‌ಗಳ ಅಂಕಿ-ಅಂಶಗಳ ಹೋಲಿಕೆಯಲ್ಲೂ ವೈಭವ್ ಸೂರ್ಯವಂಶಿ ಜೋಸ್ ಬಟ್ಲರ್ ಅವರಿಗಿಂತ ಮುಂದಿದ್ದಾರೆ. ಇಬ್ಬರ ಮೊದಲ 40 ಇನಿಂಗ್ಸ್​ಗಳ ಹೋಲಿಕೆ ಈ ಕೆಳಗಿನಂತಿದೆ…

ಮೊದಲ 40 ಇನ್ನಿಂಗ್ಸ್ ಒಟ್ಟು ರನ್ ಸ್ಟ್ರೈಕ್ ರೇಟ್ ಶತಕಗಳು
ವೈಭವ್ ಸೂರ್ಯವಂಶಿ 1,670 216.32 4
ಜೋಸ್ ಬಟ್ಲರ್ 1,590 152.44 0

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಂಡಿಗರು:

ಸ್ಥಾನ ಆಟಗಾರ ದೇಶ ಒಟ್ಟು ಟಿ20 ರನ್‌ಗಳು
1 ಜೋಸ್ ಬಟ್ಲರ್ ಇಂಗ್ಲೆಂಡ್ 14,833
2 ಕೀರನ್ ಪೊಲಾರ್ಡ್ ವೆಸ್ಟ್ ಇಂಡೀಸ್ 14,803
3 ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ 14,562

“ಇಷ್ಟು ದೊಡ್ಡ ದಾಖಲೆ ನಿರ್ಮಿಸಿರುವುದು ಹೆಮ್ಮೆಯ ವಿಷಯ. ಆದರೆ ಯಾರಾದರೂ ಒಬ್ಬರು ಇದನ್ನು ದಾಟಿ ಹೋಗಲೇಬೇಕು. ವೈಭವ್ ಸೂರ್ಯವಂಶಿ ಬೌಲರ್‌ಗಳನ್ನು ಧ್ವಂಸ ಮಾಡುವ ಸಂಪೂರ್ಣ ‘ಬಾಕ್ಸ್ ಆಫೀಸ್’ ಆಟಗಾರ” ಎಂದು ಬಟ್ಲರ್ ಹೊಗಳಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ವೈಭವ್ ಸೂರ್ಯವಂಶಿ ಟಿ20 ಕ್ರಿಕೆಟ್​ನಲ್ಲಿ 15 ಸಾವಿರ ರನ್​ಗಳನ್ನು ಪೇರಿಸಿದರೂ ಅಚ್ಚರಿಪಡಬೇಕಿಲ್ಲ.

Source link

ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ RTO ಕಾರ್ಯಾಚರಣೆ ಮುಂದುವರಿಕೆ, 85 ವಾಹನಗಳು ಸೀಜ್ – Kannada News | Bengaluru RTO Continues Crackdown on Unauthorised Bike Taxis, Seizes 85 Vehicles

ಬೆಂಗಳೂರು, ಆಗಸ್ಟ್​​ 06: ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆಯ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದೆ. ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಓಲಾ, ಊಬರ್ ಹಾಗೂ ರಾಪಿಡೋ ಸೇರಿದಂತೆ ಹಲವು ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಪ್ರಮುಖವಾಗಿ, ಕೋರಮಂಗಲ RTO ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ತೀವ್ರಗೊಂಡಿದೆ. ಅಧಿಕಾರಿಗಳು ಈಗಾಗಲೇ 85 ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ. ಅನಧಿಕೃತ ಬೈಕ್ ಟ್ಯಾಕ್ಸಿಗಳ ನಿಯಂತ್ರಣಕ್ಕಾಗಿ ಸಾರಿಗೆ ಇಲಾಖೆಯು ಒಟ್ಟು 11 ತಂಡಗಳನ್ನು ರಚನೆ ಮಾಡಿದೆ. ನಿನ್ನೆ ಒಂದೇ ದಿನ 256 ಬೈಕ್ ಟ್ಯಾಕ್ಸಿಗಳನ್ನು ಅಧಿಕಾರಿಗಳು ಸೀಜ್​​ ಮಾಡಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಭಾಪತಿ ಹುದ್ದೆ ತೊರೆಯಲು ಮುಂದಾದ ಬಸವರಾಜ ಹೊರಟ್ಟಿ: ಆಗಸ್ಟ್ 14ರಂದು ರಾಜೀನಾಮೆಗೆ ನಿರ್ಧಾರ – Kannada News | Basavaraj Horatti to Resign as Legislative Council Chairman on August 14 Amidst Congress Pressure; BJP JDS Term Move Unfortunate

ಸಭಾಪತಿ ಹುದ್ದೆ ತೊರೆಯಲು ಮುಂದಾದ ಹೊರಟ್ಟಿImage Credit source: PTI

ಬೆಂಗಳೂರು, ಆಗಸ್ಟ್​​ 06: ವಿಧಾನ ಪರಿಷತ್​​ಗೆ ಹಾಲಿ ಸಭಾಪತಿಗಳು ಇರುವ ನಡುವೆಯೇ ಸಲೀಂ ಅಹ್ಮದ್​​ ಅವರ ಹೆಸರನ್ನು ಕಾಂಗ್ರೆಸ್​​ ಹೈಕಮಾಂಡ್​​ ಆ ಸ್ಥಾನಕ್ಕೆ ಶಿಫಾರಸ್ಸು ಮಾಡಿದ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳು ಕ್ಲೈಮ್ಯಾಕ್ಸ್​​ ಹಂತಕ್ಕೆ ತಲುಪಿದೆ. ಆಗಸ್ಟ್ 14ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿರೋದಾಗಿ ಬೆಂಗಳೂರಿನಲ್ಲಿ ಟಿವಿ9ಗೆ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್​ ರಾಜೀನಾಮೆ ನೀಡಲು ಹೇಳಿದ್ದಾರೆ. ರಾಜೀನಾಮೆ ನೀಡದಿದ್ದರೆ ಅವಿಶ್ವಾಸ ಮಂಡಿಸುವುದಾಗಿ ತಿಳಿಸಿದ್ದು, ನನಗೆ ಗೌರವ ಕಳೆದುಕೊಳ್ಳಲು ಇಷ್ಟವಿಲ್ಲ. ಹೀಗಾಗಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದವರು ತಿಳಿಸಿದ್ದಾರೆ.

ಕಾಂಗ್ರೆಸಿಗರ ನಡೆಗೆ ಹೊರಟ್ಟಿ ಬೇಸರ


ಪ್ರಸಕ್ತ ರಾಜಕೀಯ ಬೆಳವಣಿಗೆಗಳ ನಡುವೆ ಸಿಎಂ ಡಿಕೆಶಿ ಅವರನ್ನು ನಿನ್ನೆಯಷ್ಟೇ ಬಸವರಾಜ ಹೊರಟ್ಟಿ ಭೇಟಿಯಾಗಿದ್ದರು. ಈ ವೇಳೆ ಸಭಾಪತಿ ಹುದ್ದೆಗೆ ರಾಜೀನಾಮೆ ನೀಡಲು ಮುಖ್ಯಮಂತ್ರಿಗಳು ಸೂಚಿಸಿದ್ದರು. ಇಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​​ ಕೂಡ ಹೊರಟ್ಟಿ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇನ್ನು ಕಾಂಗ್ರೆಸಿಗರ ನಡೆಗೆ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದು, ಸಭಾಪತಿ ಆಯ್ಕೆ ಬಗ್ಗೆ ಪಕ್ಷ ಪತ್ರ ಕಳಿಸಿ ನಿರ್ಧಾರ ತೆಗೆದುಕೊಂಡಿಲ್ಲ. ನ್ನ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲ. ಆದರೂ ಈ ರೀತಿಯಾಗಿ ನಡೆಸಿಕೊಳ್ತಿರುವುದು ನೋವು ತಂದಿದೆ ಎಂದಿದ್ದಾರೆ.

ಇದನ್ನೂ ಓದಿ:  ಅಧಿವೇಶನ ಆರಂಭಕ್ಕೂ ಮುನ್ನವೇ ಜಟಾಪಟಿ: ಸಭಾಪತಿ ಹೊರಟ್ಟಿಗೆ ಶಾಕ್​​ ಕೊಡುತ್ತಾ ಕಾಂಗ್ರೆಸ್​​?

ವಿಪಕ್ಷಗಳಾದ ಬಿಜೆಪಿ, ಜೆಡಿಎಸ್​​ ಕೂಡ ಗರಂ

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೊರಟ್ಟಿಯವರಿಗೆ ಈ ರೀತಿ ಹೇರುತ್ತಿರುವುದು ಸರಿಯಲ್ಲ ಎಂದು ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಸಭಾಪತಿಗೆ ಎರಡು ಬಾರಿ ಫೋನ್ ಕರೆ ಮಾಡಿ ಒತ್ತಡ ಹಾಕಿದ್ದಾರೆ. ಸಲೀಂ ಅಹ್ಮದ್​ರನ್ನು ಈಗಾಗಲೇ ಎಐಸಿಸಿ ನೇಮಕ ಮಾಡಿದೆಯಂತೆ. ಆ ಮೂಲಕ ಮೇಲ್ಮನೆಗೆ ಕಳಂಕ ಬರುವ ರೀತಿ ಕಾಂಗ್ರೆಸ್ ಪಕ್ಷ ನಡೆದುಕೊಂಡಿದೆ. ಸಂಖ್ಯಾಬಲ ಇದೆ ಎಂಬ ಕಾರಣಕ್ಕೆ ರಾಜೀನಾಮೆ ಕೇಳುವುದು ಸರಿಯಲ್ಲ. ಇದರ ತೀರ್ಮಾನವನ್ನು ಸಭಾಪತಿಗಳೇ ತೆಗೆದುಕೊಳ್ಳಬೇಕು. ಹೊರಟ್ಟಿ ಗಟ್ಟಿಯಾಗಿ ನಿಂತರೆ ಅವರಿಗೆ ಸಂಪೂರ್ಣ ಬೆಂಬಲ ನಿಲ್ಲುತ್ತೇವೆ. ಅವರು ಗಟ್ಟಿಯಾಗಿ ನಿಲ್ಲಲಿಲ್ಲ ಅಂದರೆ ನಾವೇನೂ ಮಾಡುವುದಕ್ಕೆ ಆಗಲ್ಲ ಎಂದಿದ್ದಾರೆ. ಹೊರಟ್ಟಿ ಅವರಂತಹ ಹಿರಿಯ ಮುತ್ಸದ್ಧಿಗೆ ಈ ರೀತಿ ಆಗಬಾರದು. ಅವರು 8 ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಉತ್ತಮ ಕೆಲಸ ಮಾಡ್ತಿದ್ರು, ಇಂತಹ ಪರಿಸ್ಥಿತಿಗೆ ತರಬಾರದಿತ್ತು ಎಂದು ಜೆಡಿಎಲ್​ಪಿ ನಾಯಕ ಸುರೇಶ್​ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:14 pm, Thu, 6 August 26

Source link

KEA Recruitment 2026: ಕೆಇಎ ನೇಮಕಾತಿ; ತೋಟಗಾರಿಕೆ ಇಲಾಖೆಯಲ್ಲಿ 80 ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | KEA Horticulture Recruitment 2026: 80 Group B Officer Vacancies – Apply Online

ತೋಟಗಾರಿಕೆ ಇಲಾಖೆಯಲ್ಲಿ ನೇಮಕಾತಿImage Credit source: Getty Images

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಬಿ ವೃಂದದ ಅಧಿಕಾರಿ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಸಂಬಂಧ ಅಧಿಸೂಚನೆ ಸಂಖ್ಯೆ: ಇಡಿ/ಕೆಇಎ/32/ನೇ.ವಿ/2026 (ಆರ್ ಪಿಸಿ) ಅನ್ನು ಆಯಕ್ತರು ಆಗಸ್ಟ್​​ 04 ರಂದು ಹೊರಡಿಸಿದ್ದಾರೆ. ಅರ್ಹ ಅಭ್ಯರ್ಥಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲು ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಿದೆ.

ಖಾಲಿ ಇರುವ ಹುದ್ದೆಗಳು ಮತ್ತು ವೇತನ ಶ್ರೇಣಿ:

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 80 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಹುದ್ದೆಗೆ 75 ಖಾಲಿ ಸ್ಥಾನಗಳಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ 65,950 ರಿಂದ 1,24,900 ರೂ. ಗಳ ಮಾಸಿಕ ವೇತನ ಶ್ರೇಣಿ ಇರಲಿದೆ. ಹಾಗೆಯೇ ಸಹಾಯಕ ತೋಟಗಾರಿಕೆ ನಿರ್ದೇಶಕರು (ADH) ಹುದ್ದೆಗೆ 05 ಖಾಲಿ ಸ್ಥಾನಗಳಿದ್ದು, ಇವುಗಳಿಗೆ 69,250 ರಿಂದ 1,34,200 ರೂ. ಗಳ ಮಾಸಿಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಹುದ್ದೆವಾರು ಮತ್ತು ಪ್ರವರ್ಗವಾರು ವಿವರಗಳನ್ನು ತೋಟಗಾರಿಕೆ ಇಲಾಖೆಯು ಶೀಘ್ರದಲ್ಲೇ ಪ್ರತ್ಯೇಕವಾಗಿ ಪ್ರಕಟಿಸಲಿದೆ.

ಅಗತ್ಯ ಶೈಕ್ಷಣಿಕ ವಿದ್ಯಾರ್ಹತೆ:

ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐ.ಸಿ.ಎ.ಆರ್ (ICAR) ನಿಂದ ಮಾನ್ಯತೆ ಪಡೆದ ಭಾರತದ ಯಾವುದೇ ವಿಶ್ವವಿದ್ಯಾಲಯದಿಂದ ತೋಟಗಾರಿಕೆಯಲ್ಲಿ ಪದವಿ (B.Sc. Horticulture) ಹೊಂದಿರಬೇಕು. ಇನ್ನು ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಲು ಬಿ.ಎಸ್ಸಿ. ತೋಟಗಾರಿಕೆ ಪದವಿಯ ಜೊತೆಗೆ ಐ.ಸಿ.ಎ.ಆರ್ ಮಾನ್ಯತೆ ಪಡೆದ ಸಂಸ್ಥೆಯಿಂದ ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿ (M.Sc. Horticulture) ಪಡೆದಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅಭ್ಯರ್ಥಿಗಳಿಗೆ ಪ್ರಮುಖ ನಿಯಮಗಳು ಹಾಗೂ ಸೂಚನೆಗಳು:

ನಿಗದಿತ ವಿದ್ಯಾರ್ಹತೆ ಹೊಂದಿಲ್ಲದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ, ಅಂತಹ ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಾದರೂ ಮುನ್ಸೂಚನೆ ನೀಡದೆ ತಿರಸ್ಕರಿಸಲಾಗುತ್ತದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ವೇಳೆಗೆ ಫಲಿತಾಂಶಕ್ಕಾಗಿ ಕಾಯುತ್ತಿರುವ (Awaiting Results) ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ಅರ್ಜಿ ಸಲ್ಲಿಕೆ ಮತ್ತು ದಾಖಲೆ ಪರಿಶೀಲನೆ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ cetonline.karnataka.gov.in/kea/ ಮೂಲಕವೇ ಆನ್‌ಲೈನ್ ಅರ್ಜಿ ಸಲ್ಲಿಸಬೇಕಿರುತ್ತದೆ. ಮೂಲ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಎಲ್ಲಾ ಶೈಕ್ಷಣಿಕ ದಾಖಲೆಗಳು ಹಾಗೂ ಅಂಕಪಟ್ಟಿಗಳ ಮೂಲ ಪ್ರತಿಯನ್ನು ತಪ್ಪದೇ ಹಾಜರುಪಡಿಸಬೇಕಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 1:22 pm, Thu, 6 August 26

Source link

ಹಳೆಯ ಪಿಎಫ್ ಖಾತೆಗಳನ್ನು ಪಡೆಯಲು ಈ ತಿಂಗಳಲ್ಲೇ ಬರಲಿದೆ E-PRAAPTI ಪೋರ್ಟಲ್ – Kannada News | EPFO updates, tracing old pf accounts new easy with e praapti portal launching by August end

ನವದೆಹಲಿ, ಆಗಸ್ಟ್ 6: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಚಂದಾದಾರರು ತಮ್ಮ ಹಳೆಯ ಅಥವಾ ನಿಷ್ಕ್ರಿಯಗೊಂಡ (Inactive) ಪಿಎಫ್ ಖಾತೆಗಳಲ್ಲಿ ಉಳಿದುಕೊಂಡಿರುವ ಹಣವನ್ನು ಸುಲಭವಾಗಿ ಪತ್ತೆಹಚ್ಚಿ ಕ್ಲೈಮ್ ಮಾಡಲು ನೆರವಾಗುವ ‘ಇ-ಪ್ರಾಪ್ತಿ’ (E-PRAAPTI) ಡಿಜಿಟಲ್ ಪೋರ್ಟಲ್ ಅನ್ನು ಈ ತಿಂಗಳಲ್ಲೇ ಜಾರಿಗೆ ತರಲು ಇಪಿಎಫ್‌ಒ ಸಿದ್ಧತೆ ನಡೆಸಿದೆ. ಈ ನೂತನ ವ್ಯವಸ್ಥೆಯು ಕೋಟಿಗಟ್ಟಲೆ ಉದ್ಯೋಗಿಗಳಿಗೆ ತಮ್ಮ ಹಳೆಯ ಪಿಎಫ್ ಹಣವನ್ನು ಪಡೆಯಲು ಎದುರಾಗುತ್ತಿದ್ದ ತೊಡಕುಗಳನ್ನು ನಿವಾರಿಸಲಿದೆ.

‘ಇ-ಪ್ರಾಪ್ತಿ’ ಎಂದರೇನು?

‘ಇ-ಪ್ರಾಪ್ತಿ’ (E-PRAAPTI – EPF Aadhaar-Based Access Portal for Tracking Inoperative Accounts) ಎಂಬುದು ಆಧಾರ್ ಆಧಾರಿತ ಡಿಜಿಟಲ್ ವೇದಿಕೆಯಾಗಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಯೋಜನೆ ಬಗ್ಗೆ ಮಾಹಿತಿ ನೀಡಿದ್ದು, ಯುಎಎನ್ (UAN) ಸಂಖ್ಯೆಗೆ ಲಿಂಕ್ ಆಗದಿರುವ ಅಥವಾ ನಿಷ್ಕ್ರಿಯಗೊಂಡಿರುವ ಹಳೆಯ ಇಪಿಎಫ್ ಖಾತೆಗಳನ್ನು ಪತ್ತೆಹಚ್ಚಲು, ಲಿಂಕ್ ಮಾಡಲು ಮತ್ತು ಸಕ್ರಿಯಗೊಳಿಸಲು ಈ ಪೋರ್ಟಲ್ ನೆರವಾಗಲಿದೆ.

ಇದನ್ನೂ ಓದಿ: ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್-ಡೀಸಲ್ ಸಿಗಲ್ಲ: ಸುಪ್ರೀಂಕೋರ್ಟ್ ನಿರ್ದೇಶನದಲ್ಲಿ ಬರಲಿದೆ ಹೊಸ ಕಾನೂನು

ಹೊಸ ಪೋರ್ಟಲ್​ನ ಮುಖ್ಯಾಂಶಗಳು ಮತ್ತು ಪ್ರಯೋಜನಗಳು

  • ಪ್ರಸ್ತುತ ಇಪಿಎಫ್‌ಒನಲ್ಲಿ 30.91 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯ ಖಾತೆಗಳಿದ್ದು, ಇವುಗಳಲ್ಲಿ ಸುಮಾರು ₹9,330 ಕೋಟಿ ಹಣ ಕ್ಲೇಮ್ ಆಗದೆ (Unclaimed) ಉಳಿದಿದೆ.
  • ಯಾವುದೇ ಪಿಎಫ್ ಖಾತೆಗೆ ಸತತ 3 ವರ್ಷಗಳ ಕಾಲ (36 ತಿಂಗಳು) ಯಾವುದೇ ವಂತಿಗೆ (Contribution) ಜಮೆಯಾಗದಿದ್ದರೆ ಅದನ್ನು ‘ನಿಷ್ಕ್ರಿಯ ಖಾತೆ’ ಎಂದು ಪರಿಗಣಿಸಲಾಗುತ್ತದೆ.
  • ಹಳೆಯ ಕಾಗದಪತ್ರಗಳ ಆಧಾರಿತ ಸುದೀರ್ಘ ಪ್ರಕ್ರಿಯೆಯನ್ನು ತಪ್ಪಿಸಿ, ಆಧಾರ್ ದೃಢೀಕರಣ (Aadhaar Authentication) ಮೂಲಕ ಸುರಕ್ಷಿತವಾಗಿ ಹಳೆಯ ಖಾತೆಗಳನ್ನು ಯುಎಎನ್ (UAN) ಗೆ ಲಿಂಕ್ ಮಾಡಬಹುದು.
  • ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ಡಿಜಿಟಲ್ ರೂಪದಲ್ಲೇ ಪ್ರೊಫೈಲ್ ಅಪ್‌ಡೇಟ್ ಮಾಡಿ ಹಣವನ್ನು ಕ್ಲೈಮ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಯುಎಎನ್​ಗಿಂತಲೂ ಮೊದಲು ಇದ್ದ ಹಳೆಯ ಪಿಎಫ್ ಖಾತೆ ಲಿಂಕ್ ಆಗಿಲ್ಲವಾ? ಇಲ್ಲಿದೆ ಮಾರ್ಗೋಪಾಯ

ಇ-ಪ್ರಾಪ್ತಿ ಪೋರ್ಟಲ್ ಹೇಗೆ ಕೆಲಸ ಮಾಡುತ್ತದೆ?

  • ಯುಎಎನ್ ಜಾರಿಗೆ ಬರುವ ಮುನ್ನ ಇದ್ದ ಹಳೆಯ ಪಿಎಫ್ ಖಾತೆಗಳನ್ನು ಆಧಾರ್ ವಿವರಗಳ ಮೂಲಕ ಪತ್ತೆ ಮಾಡುತ್ತದೆ.
  • ಕಂಡುಕೊಂಡ ಹಳೆಯ ಖಾತೆಯನ್ನು ಹಾಲಿ ಇರುವ ಸಕ್ರಿಯ ಯುಎಎನ್‌ಗೆ ಡಿಜಿಟಲ್ ಆಗಿ ಲಿಂಕ್ ಮಾಡುತ್ತದೆ.
  • ಹಳೆಯ ಖಾತೆಯ ಹಣವನ್ನು ಹೊಸ ಖಾತೆಗೆ ವರ್ಗಾಯಿಸಲು ಅಥವಾ ನೇರವಾಗಿ ಹಿಂಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಝಾನ್ಸಿಯಲ್ಲಿ ಕಾರು ಅಪಘಾತ: ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಿರಿಯ ಮಗ ಅಬಾನ್ ಸೇರಿ ಇಬ್ಬರು ಸಾವು – Kannada News | Jhansi Car Accident: Gangster Ateeq Ahmed’s Son Aban Dies in Tragic Crash

ಝಾನ್ಸಿ, ಆಗಸ್ಟ್ 06: ಗ್ಯಾಂಗ್​ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ ಕಿರಿಯ ಮಗ ಅಬಾನ್ ಅಪಘಾತ(Accident)ದಲ್ಲಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಝಾನ್ಸಿ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಝಾನ್ಸಿ ಜೈಲಿನಲ್ಲಿರುವ ತಮ್ಮ ಸಹೋದರ ಅಲಿ ಅಹ್ಮದ್ ಅವರನ್ನು ಭೇಟಿಯಾಗಿ ವಾಪಸ್ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದಾಗ ಝಾನ್ಸಿ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯ ಪೂಂಚ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.

ಅಬಾನ್ ಹಾಗೂ ಅವರ ಸಹಚರರು ಪ್ರಯಾಣಿಸುತ್ತಿದ್ದ ಬಿಳಿ ಬಣ್ಣದ ಹುಂಡೈ ಕ್ರೆಟಾ ಕಾರು ಅತಿ ವೇಗದಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ (Divider) ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅಬಾನ್ ಹಾಗೂ ಅವರ ಸ್ನೇಹಿತ ಸೋನು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರ ಮೂವರು ಯುವಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಮಾತ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಝಾನ್ಸಿ ಜೈಲಿನಲ್ಲಿ ಬಂಧಿಯಾಗಿರುವ ಅತೀಕ್ ಅಹ್ಮದ್ ಅವರ ಹಿರಿಯ ಮಗ ಅಲಿ ಅಹ್ಮದ್ ಅವರನ್ನು ಭೇಟಿ ಮಾಡಲು ಅಬಾನ್ ಪ್ರಯಾಗ್‌ರಾಜ್‌ನಿಂದ ಬಂದಿದ್ದರು.

ಮತ್ತಷ್ಟು ಓದಿ: ಪ್ರತ್ಯೇಕ ರಸ್ತೆ ಅಪಘಾತ: ಮೂವರ ದಾರುಣ ಸಾವು, ಓರ್ವನ ಸ್ಥಿತಿ ಗಂಭೀರ

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಹಾಗೂ ಝಾನ್ಸಿ ಜೈಲಿನ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಪೊಲೀಸರು ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಾಫಿಯಾ ನಾಯಕ ಹಾಗೂ ಮಾಜಿ ಸಂಸದ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು 2023 ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಕ್ಯಾಮೆರಾಗಳ ಎದುರಲ್ಲೇ ಗುಂಡಿಕ್ಕಿ ಕೊಲ್ಲಲಾಗಿತ್ತು.

ಅತೀಕ್ ಅವರ ಮತ್ತೊಬ್ಬ ಮಗ ಅಸದ್ 2023 ರ ಏಪ್ರಿಲ್‌ನಲ್ಲಿ ಝಾನ್ಸಿಯಲ್ಲೇ ನಡೆದ ಯುಪಿ ಎಸ್‌ಟಿಎಫ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದ. ಅಲಿ ಮತ್ತು ಉಮರ್ ಜೈಲಿನಲ್ಲಿದ್ದರೆ, ಕಿರಿಯ ಮಗ ಅಬಾನ್ ಈಗ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version