ಸಿಗದ ವ್ಹೀಲ್ಚೇರ್, ಕೆಲಸದ ಒತ್ತಡ, ನ್ಯಾಯಾಲಯದಿಂದ ಹಾರಿ ಪ್ರಾಣ ಬಿಟ್ಟ ದಿವ್ಯಾಂಗ ಕ್ಲರ್ಕ್ – Kannada News | Disabled Clerk Suicide: Saket Court Work Pressure, Wheelchair Plea Ignored
ನವದೆಹಲಿ, ಜನವರಿ 09: ಕೆಲಸದ ಒತ್ತಡದಿಂದ ಬೇಸತ್ತು ದಿವ್ಯಾಂಗ ಗುಮಾಸ್ತರೊಬ್ಬರು ದೆಹಲಿಯ ಸಾಕೇತ್ ನ್ಯಾಯಾಲಯದ ಕಟ್ಟಡದಿಂದ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಉದ್ಯೋಗಿಯನ್ನು ನ್ಯಾಯಾಲಯದ ಆವರಣದಲ್ಲಿ ಗುಮಾಸ್ತರಾಗಿದ್ದ ಹರೀಶ್ ಸಿಂಗ್ ಮಹಾರ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆ ಪತ್ರವೂ ಪತ್ತೆಯಾಗಿದ್ದು, ಅದರಲ್ಲಿ ಅವರು ಈ ಕಠಿಣ ಕ್ರಮ ತೆಗೆದುಕೊಳ್ಳಲು ಕಾರಣಗಳನ್ನು ವಿವರಿಸಿದ್ದಾರೆ. ಹರೀಶ್ ಶೇ.60ರಷ್ಟು ಅಂಗವಿಕಲರಾಗಿದ್ದರು. ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಆತ್ಮಹತ್ಯೆಗೆ…